ಏಷ್ಯಾ ಕಪ್ 2021ಕ್ಕೆ ಅಂಡರ್ 19 ತಂಡ ಪ್ರಕಟ: ಯಶ್ ಧುಲ್ ನಾಯಕ
ವಿನೂ ಮಂಕಡ್ ಟ್ರೋಫಿಯಲ್ಲಿ ನಾಗಾಲೆಂಡ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಿತ್ತು ಮಿಂಚಿದ ವಾಸು ಸತ್ಸ್ ಕೂಡ ಸ್ಥಾನಪಡೆದುಕೊಂಡಿದ್ದಾರೆ.
ವೆಸ್ಟ್​ ಇಂಡೀಸ್​ನಲ್ಲಿ ಐಸಿಸಿ ಪುರುಷರ ಅಂಡರ್ 19 ವಿಶ್ವಕಪ್ ಟೂರ್ನಿ ಆರಂಭವಾಗ ಲಿದೆ. ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ವಿಶ್ವಕಪ್​ನಲ್ಲಿ ಸ್ಥಾನ ಪಡೆಯುವುದು ಖಚಿತ. ಕಳೆದ ಸೀಸನ್​ನಲ್ಲಿ ಪ್ರಿಯಾಂ ಗರ್ಗ್ ನಾಯಕತ್ವದ ಭಾರತ ಫೈನಲ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿತ್ತು.
ಏಷ್ಯಾ ಕಪ್​ಗೆ ಭಾರತ ಅಂಡರ್ 19 ತಂಡ:ಹರ್ನೂರ್ ಸಿಂಗ್ ಪನ್ನು, ಅಂಗ್ಕ್ರಿಶ್ ರಘುವನ್ಶಿ, ಅನ್ಶ್ ಗೊಸಾಯ್, ಎಸ್​ ಕೆ ರಶೀದ್, ಯಶ್ ಧುಲ್ (ನಾಯಕ), ಅನೇಶ್ವರ್ ಗೌತಮ್, ಸಿದ್ಧಾರ್ಥ್ ಯಾದವ್, ಕೌಶಲ್ ತಂಬೆ, ನಿಶಾಂತ್ ಸಿಧು, ದಿನೇಶ್ ಬನಾ (ವಿಕೆಟ್ ಕೀಪರ್), ಆರಾಧ್ಯ ಯಾದವ್ (ವಿಕೆಟ್ ಕೀಪರ್), ರಜಂಗಡ್ ಬವಾ, ರಾಜವರ್ಧನ್ ಹಂಗರ್ಗೇಕರ್, ಗರ್ವ್ ಸಾಂಗ್ವಾನ್, ರವಿ ಕುಮಾರ್, ರಿತಿಶ್ ರೆಡ್ಡಿ, ಮನವ್ ಪರಕ್, ಅಮ್ರಿತ್ ರಾಜ್ ಉಪಧ್ಯಾಯ್, ವಿಕ್ಕಿ ಒಸ್ಟ್​ವಾಲ್, ವಾಸು ವತ್ಸ್.
