ನೆದರ್ಲೆಂಡ್ಸ್ ಬ್ಯಾಟ್ಸ್‌ಮನ್‌ ಬೆನ್ ಕೂಪರ್ ನಿವೃತ್ತಿ
ನೆದರ್ಲೆಂಡ್ಸ್: ನೆದರ್ಲೆಂಡ್ಸ್ ಕ್ರಿಕೆಟ್ ತಂಡದ ಬ್ಯಾಟರ್ ಬೆನ್ ಕೂಪರ್(29) ಶನಿವಾರ ಅಂತಾರಾ ಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಟಿ20ಯಲ್ಲಿ ನೆದರ್ಲೆಂಡ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದ ಕೂಪರ್ ಎಂಟು ವರ್ಷಗಳ ಕಾಲ ತಮ್ಮ ದೇಶಕ್ಕಾಗಿ ಕ್ರಿಕೆಟ್ ಆಡಿದರು. 58 ಪಂದ್ಯಗಳಲ್ಲಿ 28ರ ಸರಾಸರಿ ಯಲ್ಲಿ 1,239 ರನ್ ಗಳಿಸಿದ್ದಾರೆ.
ಕೂಪರ್ ನೆದರ್ಲ್ಯಾಂಡ್ಸ್ ಪರ 13 ODIಗಳನ್ನು ಆಡಿ 187 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರು ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. ಜೊತೆಗೆ ಟಿ20ಯಲ್ಲಿ ತಮ್ಮ ದೇಶಕ್ಕಾಗಿ 9 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಆಟಗಾರ 2013ರಲ್ಲಿ ಕೆನಡಾ ವಿರುದ್ಧ ಪದಾರ್ಪಣೆ ಮಾಡಿದ್ದರು. 15 ನವೆಂಬರ್ 2013 ರಂದು ಶಾರ್ಜಾದಲ್ಲಿ ಅಫ್ಘಾನಿಸ್ತಾನದ ವಿರುದ್ಧ T20 ಚೊಚ್ಚಲ ಪಂದ್ಯವನ್ನು ಆಡಲಾಯಿತು.
ಈ ಎಡಗೈ ಬ್ಯಾಟ್ಸ್‌ಮನ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಪ್ರಥಮ ದರ್ಜೆಯಲ್ಲಿ ಸದ್ದು ಮಾಡಿದ್ದರು. ನಾಲ್ಕು ಪಂದ್ಯಗಳಲ್ಲಿ 75.16 ಸರಾಸರಿಯಲ್ಲಿ 451 ರನ್ ಗಳಿಸಿದರು. ಅವರ ಗರಿಷ್ಠ ಸ್ಕೋರ್ ಅಜೇಯ 173 ರನ್ ಆಗಿತ್ತು.
ಇಂದು ನಾನು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ಎಂಟು ವರ್ಷಗಳ ಕಾಲ ಕಿತ್ತಳೆ ಜರ್ಸಿಯನ್ನು ಧರಿಸಿ ನೆದರ್ಲ್ಯಾಂಡ್ಸ್ ಅನ್ನು ಪ್ರತಿನಿಧಿಸು ವುದು ಹೆಮ್ಮೆಯ ವಿಷಯವಾಗಿದೆ. ನಾನು ನನ್ನ ಸಮಯವನ್ನು ಅತ್ಯುತ್ತಮ ನೆನಪುಗಳಾಗಿ ಹಿಂತಿರುಗಿ ನೋಡುತ್ತೇನೆ ಎಂದು ಬರೆದುಕೊಂಡಿದ್ದಾರೆ.