ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ರಾಡ್ನಿ ಮಾರ್ಷ್ ಇನ್ನಿಲ್ಲ
ಮೇಲ್ಬರ್ನ್‌:ಆಸ್ಟ್ರೇಲಿಯಾ ಕ್ರಿಕೆಟ್ ನ ವಿಕೆಟ್ ಕೀಪರ್ ಗ್ರೇಟ್ ರಾಡ್ನಿ ಮಾರ್ಷ್ ( 74 ) ಹೃದಯಾಘಾತ ದಿಂದ ನಿಧನರಾಗಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಒಂದು ಕಾಲದ ಅತ್ಯುತ್ತಮ ವಿಕೆಟ್ ಕೀಪರ್ ಎಂದೆಲ್ಲಾ ಕರೆಸಿ ಕೊಂಡಿದ್ದವರು ಗ್ರೇಟ್ ರಾಡ್ನಿ ಮಾರ್ಷ್ ಆಗಿದ್ದರು.
ಕೋಮಾ ಸ್ಥಿತಿ ತಲುಪಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಡ್ರಿಲೇಡ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಿಸದೇ ನಿಧನ ರಾಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಮಾರ್ಷ್ 1984 ರಲ್ಲಿ ನಿವೃತ್ತರಾಗಿದ್ದ ಅವರು, ಮೊದಲು 1970ರಲ್ಲಿ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು. 96 ಟೆಸ್ಟ್ ಮ್ಯಾಚ್ ಗಳನ್ನು ಆಡಿದ್ದ ಅವರು, ಟೆಸ್ಟ್ ಶತಕ ಗಳಿಸಿದ ಮೊದಲ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಎಂದು ಕರೆಸಿಕೊಂಡಿದ್ದರು.