ಮಹಿಳಾ ವಿಶ್ವಕಪ್’ನಲ್ಲಿ ಭಾರತದ ಭರ್ಜರಿ ಆರಂಭ
ಮೌಂಟ್‌ ಮ್ಯಾಗನುಯಿ:ಭಾರತೀಯ ಮಹಿಳಾ ತಂಡ 2022ರ ಮಹಿಳಾ ವಿಶ್ವಕಪ್(’   2022)ನಲ್ಲಿ ಬದ್ಧ ವೈರಿ ಪಾಕಿಸ್ತಾನವನ್ನ 107ರನ್ʼಗಳಿಂದ ಮಣಿಸುವ ಮೂಲಕ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 244/7 ರನ್ ಗಳಿಸಿತು. ಬಳಿಕ ಪಾಕಿಸ್ತಾನವನ್ನ ಕೇವಲ 137 ರನ್ʼಗಳಿಗೆ ಆಲೌಟ್ ಮಾಡಿತು. ಈ ಮೂಲಕ 107 ರನ್‌ಗಳಿಂದ ಭರ್ಜರಿ ಜಯ ಗಳಿಸಿತು.
ಗಾಯಕ್ವಾಡ್ ತನ್ನ ಸ್ಪೆಲ್ʼನಲ್ಲಿ 4/31ರ ಅಂಕಿ-ಅಂಶಗಳನ್ನು ದಾಖಲಿಸಿದರೆ, ಜುಲನ್ ಗೋಸ್ವಾಮಿ ಎರಡು ವಿಕೆಟ್ ಪಡೆದರು. ಪಾಕಿಸ್ತಾನ ಮೊದಲ 10 ಓವರ್ʼಗಳಲ್ಲಿ 24 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. 11ನೇ ಓವರ್ʼನಲ್ಲಿ ಆರಂಭಿಕ ಆಟಗಾರ ಜವೇರಿಯಾ ಖಾನ್ ಅವರನ್ನ ಔಟ್ ಮಾಡಿ ಗಾಯಕ್ವಾಡ್ ಮೊದಲ ವಿಕೆಟ್ ಪಡೆದರು. ಇನ್ನಿಂಗ್ಸ್ʼನಲ್ಲಿ ಯಾವುದೇ ವೇಗ ಪಡೆಯದ ಪಾಕಿಸ್ತಾನ, 18 ಮತ್ತು 24ನೇ ಓವರ್ʼಗಳ ನಡುವೆ ನಾಲ್ಕು ವಿಕೆಟ್ʼಗಳನ್ನು ಕಳೆದುಕೊಂಡಿತು. 70/5 ವಿಕೆಟ್‌ ಕಳೆದುಕೊಳ್ಳಬೇಕಾಯಿತು.
ಅಂತಿಮವಾಗಿ ಅವರು 114 ರನ್ʼಗಳಿಗೆ ತಮ್ಮ ಕೊನೆಯ ವಿಕೆಟ್ ಒಪ್ಪಿಸಿತು.