ಸೋತ ನ್ಯೂಜಿಲೆಂಡ್‌: ಹೀದರ್ ನೈಟ್ ಮಿಂಚಿನ ಫೀಲ್ಡಿಂಗ್‌
ಈ ವಿಶ್ವಕಪ್​ ಅತ್ಯದ್ಭುತ ಫೀಲ್ಡಿಂಗ್​ಗೆ ಸಾಕ್ಷಿಯಾಗುತ್ತಿದೆ. ವೆಸ್ಟ್ ಇಂಡೀಸ್ ಆಟಗಾರ್ತಿ ಡೊಟಿನ್ ಅದ್ಭುತ ಡೈವಿಂಗ್ ಕ್ಯಾಚ್ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಇದೀಗ ಇಂಗ್ಲೆಂಡ್ ತಂಡದ ನಾಯಕಿ ಹೀದರ್ ನೈಟ್ ಕೂಡ ರಾಕೆಟ್ ವೇಗದಲ್ಲಿ ಕ್ಯಾಚ್ ಹಿಡಿಯುವ ಮೂಲಕ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದ್ದಾರೆ.
ಪಂದ್ಯದ 39ನೇ ಓವರ್​ನ ಎರಡನೇ ಎಸೆತದಲ್ಲಿ ನ್ಯೂಜಿಲೆಂಡ್ ಆಟಗಾರ್ತಿ ಲೀ ತಾಹುಹು ಸ್ಟ್ರೈಟ್ ಹೊಡೆತಕ್ಕೆ ಮುಂದಾಗಿದ್ದರು. ಚೆಂಡು ಗಾಳಿಯಲ್ಲಿ ಚಿಮ್ಮುತ್ತಿದ್ದಂತೆ ಅಲ್ಲೇ ಫೀಲ್ಡಿಂಗ್​ನಲ್ಲಿದ್ದ ಇಂಗ್ಲೆಂಡ್ ನಾಯಕಿ ಹೀದರ್ ನೈಟ್ ಗಾಳಿಯಲ್ಲಿ ಜಿಗಿದು ಒಂದೇ ಕೈಯಿಂದ ಚೆಂಡನ್ನು ಹಿಡಿದು ಕ್ಯಾಚ್ ತಮ್ಮದಾಗಿಸಿಕೊಂಡರು.
ಈ ಅದ್ಭುತ ಕ್ಯಾಚ್ ನೋಡಿ ಎಲ್ಲರೂ ನಿಬ್ಬೆಮಿರಗಾದರು. ಇದೀಗ ಹೀದರ್ ನೈಟ್​ ಹಿಡಿದಿರುವ ಅತ್ಯದ್ಭುತ ಕ್ಯಾಚ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.