ಆರ್‌ಆರ್‌ ಅಜೇಯ ಆಟಕ್ಕೆ ಆರ್‌ಸಿಬಿ ಬ್ರೇಕ್‌
ಶಹಬಾಜ್​ ಅಹಮದ್​ 26 ಬಾಲ್​ಗಳಲ್ಲಿ 46 ರನ್​ಗಳಿಸಿ ಔಟ್​ ಆದರು. ದಿನೇಶ್​ ಕಾರ್ತಿಕ್​ 23 ಬಾಲ್​ಗಳಲ್ಲಿ 44 ರನ್​​ಗಳಿಸಿ ಆರ್​ಸಿಬಿಗೆ ಗೆಲುವು ತಂದುಕೊಟ್ಟಿದ್ದಾರೆ.
170 ರನ್​ಗಳ ಚೇಸಿಂಗ್ ಆರಂಭಿಸಿದ ಆರ್​ಸಿಬಿ ತಂಡಕ್ಕೆ ಮೊದಲ ವಿಕೆಟ್​​ಗೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಅನುಜ್ ರಾವತ್ ಅರ್ಧ ಶತಕದ ಜೊತೆಯಾಟವಾಡಿದ್ದರು. ಡು ಪ್ಲೆಸಿಸ್​​ 25 ಬಾಲ್​ಗಳಲ್ಲಿ 26 ರನ್​ಗಳಿಸಿ ಔಟ್​ ಆದರು. ಇನ್ನೂ 20 ಎಸೆತಗಳಲ್ಲಿ 26ರನ್​ಗಳಿಸಿದ್ದ ಅನುಜ್​ ಕೂಡ ಕ್ಯಾಚ್​ ನೀಡಿ ಔಟ್​ ಆದರು. ಚಾಹಲ್ ಎಸೆತದಲ್ಲಿ ಫಾಫ್ ಡು ಪ್ಲೆಸಿಸ್, ಬೌಲ್ಟ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದಾಗ ಆರ್ ಸಿಬಿ ಮೊದಲ ಆಘಾತ ಕಂಡಿತು.
ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ವೈಫಲ್ಯ ಎದುರಿಸಿದರು. ವಿರಾಟ್ ಕೊಹ್ಲಿ, ಯಜುವೇಂದ್ರ ಚಾಹಲ್ ಮಾಡಿದ ಆಕರ್ಷಕ ರನೌಟ್​ಗೆ ಬಲಿಯಾದರು. ಡೇವಿಡ್ ವಿಲ್ಲಿ ಕೇವಲ 2 ಎಸೆತಗಳಿಗೆ ತಮ್ಮ ಆಟ ಮುಗಿಸಿದಾಗ ಆರ್ ಸಿಬಿ 62 ರನ್ ಗೆ 4 ವಿಕೆಟ್ ಕಳೆದು ಕೊಂಡು ಆಘಾತ ಕಂಡಿತು.
ಶಹಬಾಜ್​ ಅಹಮದ್​ ಹಾಗೂ ದಿನೇಶ್ ಕಾರ್ತಿಕ್​ ಸೂಪರ್​ ಜೊತೆಯಾಟ ನೀಡಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಇನ್ನೂ ಶಹಬಾಜ್​ ಔಟ್​ ಆದ ಬಳಿಕ ಹರ್ಷಲ್​ ಪಟೇಲ್​ ಸಿಕ್ಸ್ ಭಾರಿಸುವ ಮೂಲಕ ಆರ್​ಸಿಬಿಗೆ ಗೆಲುವಯ ತಂದು ಕೊಟ್ಟರು.