ಹೃದಯಾಘಾತ: ಯುವ ಬಾಕ್ಸರ್ ಮೂಸಾ ಯಮಕ್​​​​​ ನಿಧನ
ಬರ್ಲಿನ್​​:ಎದುರಾಳಿ ಜೊತೆ ಬಾಕ್ಸಿಂಗ್​ ಆಡುತ್ತಿದ್ದಾಗಲೇ ರಿಂಗ್​​ನಲ್ಲೇ ಹೃದಯಾಘಾತಕ್ಕೊಳಗಾಗಿ ಯುವ ಬಾಕ್ಸರ್ ಮೂಸಾ ಯಮಕ್​​​​​  (38) ಮೃತಪಟ್ಟಿದ್ದಾರೆ.
ವೃತ್ತಿಪರ ಬಾಕ್ಸಿಂಗ್​ನಲ್ಲಿ ಸೋಲಿಲ್ಲದ ಸರದಾರನಾಗಿದ್ದ ಯಂಗ್​ ಬಾಕ್ಸರ್​, ತಾವು ಆಡಿರುವ 75 ಪಂದ್ಯಗಳಲ್ಲಿ ಎದುರಾಳಿಗಳನ್ನು ಮಣಿಸಿ ಗೆಲುವು ದಾಖಲಿಸಿದ್ದರು.
ಜರ್ಮನಿಯಲ್ಲಿ ವಾಸವಾಗಿದ್ದ ಬಾಕ್ಸರ್ ಮೂಸಾ ಯಮಕ್​​, ಕೇವಲ 12ನೇ ವಯಸ್ಸಿನಲ್ಲಿದ್ದಾಗಲೇ ಬಾಕ್ಸಿಂಗ್​ ವೃತ್ತಿ ಬದುಕು ಆರಂಭಿಸಿದ್ದರು. ಹೆವಿವೇಯ್ಟ್ ಬಾಕ್ಸಿಂಗ್‌ನಲ್ಲಿ ಯುರೋಪಿಯನ್-ಏಷ್ಯನ್ ಚಾಂಪಿಯನ್ ಸಹ ಆಗಿದ್ದರು.
ಜರ್ಮನಿಯ ಮ್ಯೂನಿಚ್​​ನಲ್ಲಿ ಬುಧವಾರ ನಡೆದ 84+ ಕೆಜಿ ಬಾಕ್ಸಿಂಗ್​ ಪಂದ್ಯದ ಮೂರನೇ ಸುತ್ತಿನಲ್ಲಿ ಅವರು ಎದುರಾಳಿ ವಿರುದ್ಧ ಸೆಣಸಾಟ ನಡೆಸಿದ್ದ ಸಂದರ್ಭ ದಿಢೀರ್ ಹೃದಯಾಘಾತಕ್ಕೊಳಗಾಗಿ, ಕುಸಿದುಬಿದ್ದಿದ್ದರು. ಈ ವೇಳೆ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.