ವನಿತಾ ಹಾಕಿ: ಕಂಚಿನ ಪದಕ ಗೆದ್ದುಕೊಂಡ ಭಾರತ
ಬರ್ಮಿಂಗಂ: ಕಾಮನ್ವೆಲ್ತ್ ಗೇಮ್ಸ್ ಕೂಟದ ವನಿತಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡ ತೃತೀಯ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಜಯ ಗಳಿಸಿ, ಕಂಚಿನ ಪದಕ ಗೆದ್ದುಕೊಂಡಿದೆ.
ಸೆಮಿ ಫೈನಲ್ ನಲ್ಲಿ ಆಸೀಸ್ ವಿರುದ್ಧ ಸೋಲನುಭವಿಸಿದ್ದ ಭಾರತ ತಂಡ ಭಾನುವಾರ ಕಂಚಿನ ಪದಕಕ್ಕೆ ಹೋರಾಟ ನಡೆಸಿತು. ಕೊನೆಯ ಕ್ಷಣದವರೆಗೂ ಭಾರತ 1-0 ಅಂತರದ ಮುನ್ನಡೆಯಲ್ಲಿತ್ತು.
ಆದರೆ ಅಂತಿಮ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಅವಕಾಶ ಪಡೆದ ನ್ಯೂಜಿ ಲ್ಯಾಂಡ್ ಗೋಲು ಗಳಿಸಿತು. 1-1 ರಿಂದ ಸಮಬಲವಾದ ಕಾರಣ ಪಂದ್ಯದ ವಿಜೇತರನ್ನು ನಿರ್ಣಯ ಮಾಡಲು ಪೆನಾಲ್ಟಿ ಶೂಟೌಟ್ ಮೊರೆ ಹೋಗ ಬೇಕಾಯಿತು.
ಆದರೆ ಪೆನಾಲ್ಟಿಯಲ್ಲಿ ಭಾರತದ ಗೋಲ್ ಕೀಪರ್ ಸವಿತಾ ಉತ್ತಮ ರಕ್ಷಣೆಯಿಂದ ನ್ಯೂಜಿಲ್ಯಾಂಡ್ ಕೇವಲ ಒಂದು ಗೋಲು ಮಾತ್ರ ಬಾರಿಸಿತು. ಭಾರತ ಎರಡು ಗೋಲು ಬಾರಿಸಿ ಜಯ ಸಾಧಿಸಿತು.