ಇಂಟರ್‌ನ್ಯಾಶನಲ್‌ ಲೀಗ್‌ ಟಿ20: ಅಬುಧಾಬಿ ನೈಟ್‌ರೈಡರ್ ತಂಡ ಪ್ರಕಟ
ಅಬುಧಾಬಿ:ಚೊಚ್ಚಲ ಇಂಟರ್‌ನ್ಯಾಶನಲ್‌ ಲೀಗ್‌ ಟಿ20 ಪಂದ್ಯಾವಳಿಗೆ ಅಬು ಧಾಬಿ ನೈಟ್‌ರೈಡರ್ ತಂಡ ಪ್ರಕಟ ಗೊಂಡಿದೆ.
ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರಾದ ಆಯಂಡ್ರೆ ರಸೆಲ್‌ ಮತ್ತು ಸುನೀಲ್‌ ನಾರಾಯಣ್‌ ಒಟ್ಟಿಗೆ ಆಡುವುದು ಈ ತಂಡದ ವಿಶೇಷ.
ರಸೆಲ್‌ ಮತ್ತು ನಾರಾಯಣ್‌ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್‌ರೈಡರ್, ಕೆರಿಬಿಯನ್‌ ಕ್ರಿಕೆಟ್‌ ಲೀಗ್‌ನಲ್ಲಿ ಟ್ರಿನ್‌ಬಾಗೊ ನೈಟ್‌ರೈಡರ್ ತಂಡವನ್ನು ಪ್ರತಿನಿಧಿಸುತ್ತಿದ್ದರು. ಇಂಗ್ಲೆಂಡ್‌ನ‌ ಜಾನಿ ಬೇರ್‌ಸ್ಟೊ, ಐರ್ಲೆಂಡ್‌ನ‌ ರನ್‌ಯಂತ್ರ ಪಾಲ್‌ ಸ್ಟರ್ಲಿಂಗ್‌ ಕೂಡ ಅಬುಧಾಬಿ ತಂಡದಲ್ಲಿದ್ದಾರೆ.
ಅಬುಧಾಬಿ ನೈಟ್‌ರೈಡರ್ ತಂಡ:ಸುನೀಲ್‌ ನಾರಾಯಣ್‌, ಆಯಂಡ್ರೆ ರಸೆಲ್‌, ಜಾನಿ ಬೇರ್‌ಸ್ಟೊ, ಪಾಲ್‌ ಸ್ಟರ್ಲಿಂಗ್‌, ಲಹಿರು ಕುಮಾರ, ಚರಿತ ಅಸಲಂಕ, ಕಾಲಿನ್‌ ಇನ್‌ಗ್ರಾಮ್ , ಅಖೀಲ್‌ ಹುಸೇನ್‌, ಸಿಕ್ಕುಗೆ ಪ್ರಸನ್ನ, ರವಿ ರಾಮ್‌ಪಾಲ್‌, ರೇಮನ್‌ ರೀಫ‌ರ್‌, ಕೆನ್ನರ್‌ ಲೂಯಿಸ್‌, ಅಲಿ ಖಾನ್‌, ಬ್ರ್ಯಾಂಡನ್‌ ಗ್ಲೋವರ್‌.