ಎಐಎಫ್‌ಎಫ್‌ ನೂತನ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್
ನವದೆಹಲಿ:ದೆಹಲಿ ಫುಟ್ ಬಾಲ್ ಅಧ್ಯಕ್ಷ ಮತ್ತು ಧೀರ್ಘ ಕಾಲದಿಂದ ಆಡಳಿತಾಧಿಕಾರಿ ಶಾಜಿ ಪ್ರಭಾಕರನ್ ಅಖಿಲ ಭಾರತ ಫುಟ್ ಬಾಲ್ ಫೆಡರೇಶನ್ ನ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಶನಿವಾರ ನೇಮಕಗೊಂಡಿದ್ದಾರೆ.
ಎಐಎಫ್ ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ನೇತೃತ್ವದಲ್ಲಿ ನಡೆದ ಅಖಿಲ ಭಾರತ ಪುಟ್ ಬಾಲ್ ಫೆಡರೇಶನ್ ನ ನೂತನ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳ ಲಾಗಿದೆ. ಫೆಡರೇಶನ್ ನ ನೂತನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರಭಾಕರನ್ ಅವರ ಹೆಸರನ್ನು ಚೌಬೆ ಸೂಚಿಸಿದರು.
ಕೋರ್ಟ್ ನಿರ್ದೇಶನದಿಂದ ಇದೇ ಮೊದಲ ಬಾರಿಗೆ ಆರು ಮಂದಿ ಮಾಜಿ ಆಟಗಾರರು ಸಮಿತಿಯ ಭಾಗವಾಗಿದ್ದಾರೆ. ನಾವು ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಭಾರತೀಯ ಫುಟ್ ಬಾಲ್ ನ್ನು ಎಲ್ಲರೂ ಒಟ್ಟಾಗಿ ತೆಗೆದುಕೊಂಡು ಹೋಗಲು ಯಾವುದೇ ವೈಯಕ್ತಿಕ ಪ್ರತಿಷ್ಠೆ ಅಡ್ಡಿಯಾಗಬಾರದು ಎಂದು ಎಐಎಫ್ ಎಫ್ ಅಧ್ಯಕ್ಷರು ಹೇಳಿದ್ದಾರೆ.