ಗ್ರೀನ್, ವೇಡ್‌ ಸ್ಫೋಟಕ ಬ್ಯಾಟಿಂಗ್: ಆಸೀಸ್‌ ಶುಭಾರಂಭ
ಅಬ್ಬರಿಸಿದ ಪಾಂಡ್ಯ-ರಾಹುಲ್​:ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡದ ಪರ ಇಂದು ಕೆಎಲ್ ರಾಹುಲ್​ ಮತ್ತು ಆಲ್​ ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡಿದರು. ರಾಹುಲ್​ 35 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಫೋರ್​ ನೆರವಿ ನಿಂದ 55 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ 7 ಫೋರ್​ ಮತ್ತು 5 ಸಿಕ್ಸ್ ನೆರವಿನಿಂದ ಬರೋಬ್ಬರಿ 71 ರನ್ ಗಳಿಸಿ ಅಜೇಯರಾಗಿ ಉಳಿದರು.
ಉಳಿದಂತೆ ನಾಯಕ ರೋಹಿತ್​ ಶರ್ಮಾ 1 ಸಿಕ್ಸ್ 1 ಫೋರ್​ ನೆರವಿನಿಂದ ಕೇವಲ 11 ರನ್, ವಿರಾಟ್​ ಕೊಹ್ಲಿ 7 ಬೌಲ್​ ಆಡಿ ಕೇವಲ 2 ರನ್, ಸೂರ್ಯ ಕುಮಾರ್ ಯಾದವ್ 4 ಸಿಕ್ಸ್ ಮತ್ತು 2 ಬೌಂಡರಿ ನೆರವಿನಿಂದ 46 ರನ್. ಉಳಿದಂತೆ ಅಕ್ಷರ್ ಪಟೇಲ್​ 6 ರನ್, ದಿನೇಶ್​ ಕಾರ್ತಿಕ್​ 6 ರನ್, ಹರ್ಷಲ್ ಪಟೇಲ್​ 7 ರನ್ ಗಳಿಸಿದರು.
ಭಾರತ ಮತ್ತು ಆಸೀಸ್​ ನಡುವಿನ ಮುಂದಿನ ಪಂದ್ಯ 2ನೇ ಟಿ20 ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಸೆ.23ರಂದು ಶುಕ್ರವಾರ ನಡೆಯಲಿದೆ.