ದೆಹಲಿ ಕ್ಯಾಪಿಟಲ್ಸ್‌ನ ಮಾಜಿ ಸ್ಪಿನ್ನರ್‌ ಸಂದೀಪ್ ಲಾಮಿಚ್ಚಾನೆ ಬಂಧನ
ಕಠ್ಮಂಡು:ನೇಪಾಳ ರಾಷ್ಟ್ರೀಯ ಕ್ರಿಕೆಟ್ ತಂಡ ಮತ್ತು ದೆಹಲಿ ಕ್ಯಾಪಿಟಲ್ಸ್‌ನ ಮಾಜಿ ಲೆಗ್ ಸ್ಪಿನ್ನರ್‌ ಸಂದೀಪ್ ಲಾಮಿಚ್ಚಾನೆಅವರನ್ನು ನೇಪಾಳ ಪೊಲೀಸರು ಗುರುವಾರ ಬಂಧಿಸಿದೆ
ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೇಶಕ್ಕೆ ಮರಳಿದ ನಂತರ ಕಸ್ಟಡಿಗೆ ತೆಗೆದುಕೊಂಡರು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಲಾಮಿಚ್ಚಾನೆ ಮೇಲಿದೆ.
ಕಠ್ಮಂಡು ಜಿಲ್ಲಾ ನ್ಯಾಯಾಲಯವು 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ನೇಪಾಳದ ಇಮಿಗ್ರೇಷನ್ ಡಿಪಾರ್ಟ್‌ಮೆಂಟ್ ಲಾಮಿಚ್ಚಾನೆ ಅವರನ್ನು ಕಪ್ಪುಪಟ್ಟಿಗೆ ಸೇರಿಸಿದ್ದಕ್ಕಾಗಿ ಆತನ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.