ಬೈಜೂಸ್‌ – ಜಾಗತಿಕ ಬ್ರಾಂಡ್‌ ಅಂಬಾಸಿಡರ್‌ ಆಗಿ ಲಿಯೊನೆಲ್‌ ಮೆಸ್ಸಿ ನೇಮಕ
ನವದೆಹಲಿ:ಬೈಜೂಸ್‌ ಆನ್‌ಲೈನ್‌ ಶಿಕ್ಷಣ ಸಂಸ್ಥೆಯ ʼಎಜುಕೇಶನ್‌ ಫಾರ್‌ ಆಲ್‌ʼ ಸಾಮಾಜಿಕ ಉಪಕ್ರಮದ ಜಾಗತಿಕ ಬ್ರಾಂಡ್‌ ಅಂಬಾಸಿಡರ್‌ ಆಗಿ ಫುಟ್ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿಯನ್ನು ನೇಮಿಸಲಾಗಿದೆ.
ಅರ್ಜೆಂಟೈನಾ ಫುಟ್ಬಾಲ್‌ ತಂಡದ ಕ್ಯಾಪ್ಟನ್‌ ಮೆಸ್ಸಿ, ಬೈಜೂಸ್‌ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
‘ನಾನು ’ ಜೊತೆ ಪಾಲುದಾರಿಕೆ ಆರಿಸಿಕೊಂಡಿದ್ದೇನೆ. ಪ್ರತಿಯೊಬ್ಬರೂ ಕಲಿಕೆ ಯಲ್ಲಿ ಪ್ರೀತಿ ಬೆಳೆಸಿಕೊಳ್ಳುವಂತೆ ಮಾಡು ವುದು ಸಂಸ್ಥೆಯ ಉದ್ದೇಶ. ಉತ್ತಮ ಗುಣ ಮಟ್ಟದ ಶಿಕ್ಷಣವು ಜೀವನವನ್ನು ಬದಲಾಯಿಸುತ್ತದೆ. ’ ಲಕ್ಷಾಂತರ ವಿದ್ಯಾರ್ಥಿ ಗಳ ವೃತ್ತಿ ಜೀವನವನ್ನು ಮಾರ್ಪಡಿಸಿದೆ. ವಿಶ್ವಾದ್ಯಂತ ಯುವ ಕಲಿಕಾಸಕ್ತರಿಗೆ ಉನ್ನತ ಸ್ಥಾನ ತಲುಪಲು ಪ್ರೇರೇಪಿಸುತ್ತಿದೆʼʼ ಎಂದು ಮೆಸ್ಸಿ ಹೇಳಿದ್ದಾರೆ.
’    ಇದು ಎಡ್‌ಟೆಕ್ ಕಂಪನಿಯ ಲಾಭರಹಿತ, ಸಾಮಾಜಿಕ ಸೇವಾ ವಿಭಾಗ. ಪ್ರಸ್ತುತ ಭಾರತದಲ್ಲಿ 55 ಲಕ್ಷ ಮಕ್ಕಳು ಬೈಜೂಸ್‌ನಲ್ಲಿ ಕಲಿಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಕತಾರ್‌ನಲ್ಲಿ ನಡೆದ  ವಿಶ್ವಕಪ್ 2022ರ ಅಧಿಕೃತ ಪ್ರಾಯೋಜಕತ್ವವನ್ನು ’ ಪಡೆದಿತ್ತು.
ಫುಟ್‌ಬಾಲ್ ಪ್ರಪಂಚದಾದ್ಯಂತ ಸುಮಾರು 350 ಕೋಟಿ ಅಭಿಮಾನಿಗಳನ್ನು ಹೊಂದಿದೆ. ಲಿಯೋನೆಲ್ ಮೆಸ್ಸಿ ಸೋಶಿಯಲ್‌ ಮೀಡಿಯಾದಲ್ಲಿ ಸುಮಾರು 45 ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ. ಅರ್ಜೆಂಟೀನಾದ ರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕರಾಗಿ ಲಯೋನೆಲ್ ಮೆಸ್ಸಿ 2022ರ  ವಿಶ್ವಕಪ್ ಪಂದ್ಯಾಟದಲ್ಲಿ ತಮ್ಮ ಆಟ ಪ್ರದರ್ಶಿಸಲಿದ್ದಾರೆ.