ವಿಶ್ವಕೌಶಲ್ಯ ಸ್ಪರ್ಧೆ 2022: 11ನೆ ಸ್ಥಾನಕ್ಕೆ ಏರಿದ ಭಾರತ
ಬೆಂಗಳೂರು:ವಿಶ್ವದ ಅತಿದೊಡ್ಡ ಕೌಶಲ್ಯಗಳ ಸ್ಪರ್ಧೆಯಾದ ವರ್ಲ್ಡ್ ಸ್ಕಿಲ್ಸ್ ಕಾಂಪಿಟಿಶನ್, ಕೌಶಲ್ಯದ ಅತ್ಯುತ್ಕೃಷ್ಟತೆಗಾಗಿ ಸ್ವರ್ಣ ಮಾನದಂಡವಾಗಿದ್ದು ಕೌಶಲ್ಯಗಳ ಮೌಲ್ಯವನ್ನು ಪ್ರದರ್ಶಿಸುವುದರ ಜೊತೆಗೆ ವಿಶ್ವದಾದ್ಯಂತ ಕುಶಲ ವೃತ್ತಿಪರರ ಗುರುತನ್ನು ವರ್ಧಿಸಿದೆ.
ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಸ್ಪರ್ಧೆಯನ್ನು ಈ ವರ್ಷ ಯೂರೋಪ್, ಉತ್ತರ ಅಮೆರಿಕ ಮತ್ತು ಪೂರ್ವ ಏಶ್ಯಾ ದ್ಯಂತ ಸೆಪ್ಟೆಂಬರ್ 3, 2022ರಿಂದ ನವಂಬರ್ 28, 2022ರವರೆಗೆ ವಿಕೇಂದ್ರೀಕೃತ ಮಾದರಿಯಲ್ಲಿ ನಡೆಸಲಾಗಿತ್ತು. ಭಾರತೀಯ ತಂಡಗಳು 12 ದೇಶಗಳು/20 ನಗರಗಳಲ್ಲಿ ಭಾಗ ವಹಿಸಿದ್ದವು.
ನಾವು ಜೀವಿಸುವ ಮನೆಗಳಿಂದ ಹಿಡಿದು ನಾವು ಸೃಷ್ಟಿ ಮಾಡುವ ಸಮಾಜಗಳವರೆಗೆ, ಕೌಶಲ್ಯವು ಆಧುನಿಕ ಜೀವನದ ಅಡಿಪಾಯವಾಗಿದ್ದು, ಅದರ ಫಲಿತಾಂಶವಾಗಿದೆ. ಯಶಸ್ವೀ ಕೆರಿಯರ್‌ಗಳು ಮತ್ತು ಸಂಸ್ಥೆಗಳು, ಬೆಳೆಯುತ್ತಿರುವ ಕೈಗಾರಿಕೆಗಳು ಮತ್ತು ಆರ್ಥಿಕತೆಗಳ ಹಿಂದಿರುವ ಚಾಲನಾ ಶಕ್ತಿ ಅದೇ.
ಕೌಶಲ್ಯವು ಜಗತ್ತನ್ನು ಕಾರ್ಯನಿರತವನ್ನಾಗಿ ಮಾಡುತ್ತದೆ ಮತ್ತು ವಿಶ್ವದ ವೃತ್ತಿಪರ ಶಿಕ್ಷಣ ಮತ್ತು ತರಬೇತಿ () ನಾಯಕರು,ತಮ್ಮ ಸ್ವಂತ  ದೇಶ ಮತ್ತು ಪ್ರದೇಶಗಳೊಳಗೆ ಹಾಗೂ ಜಗತ್ತಿನೆಲ್ಲೆಡೆ ಕೌಶಲ್ಯ ವರ್ಧನೆಯನ್ನು ಮುನ್ನಡೆಸಲು, ವರ್ಲ್ಡ್‌ಸ್ಕಿಲ್ಸ್‌ನ ಸದಸ್ಯರು ಹಾಗೂ ಭಾಗೀ ದಾರರಾಗಿ ಒಂದಾಗುತ್ತಾರೆ.
ಭಾರತದಲ್ಲಿ, ಈ ಜಾಗತಿಕ ಮಂಚವನ್ನು ಪ್ರತಿನಿಧಿಸುವ ಅಭ್ಯರ್ಥಿಗಳ ಆಯ್ಕೆಯನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಮಂಡಳಿಯು(), ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ () ಸಚಿವಾಲಯದ ಮಾರ್ಗದರ್ಶನದಲ್ಲಿ, ದೇಶದ ಅತಿದೊಡ್ಡ ಕೌಶಲ್ಯ ಸ್ಪರ್ಧೆಯಾದ ಇಂಡಿಯಾ ಸ್ಕಿಲ್ಸ್ ಸ್ಪರ್ಧೆಗಳ ಮೂಲಕ ಮಾಡುತ್ತದೆ.
ಈ ವಷ, ವರ್ಲ್ಡ್‌ಸ್ಕಿಲ್ಸ್ ಸ್ಪರ್ಧೆಯಲ್ಲಿ ಭಾರತದಿಂದ ಅಭೂತಪೂರ್ವ ಭಾಗವಹಿಸುವಿಕೆ ಇತ್ತು. ಹೋಟಲ್ ರಿಸೆಪ್ಶನಿಸ್ಟ್,  ಮೆಕಟ್ರಾನಿಕ್ಸ್, ಬೇಕರಿ, ವೆಬ್ ಟೆಕ್ನಾಲಜೀಸ್ ಹಾಗೂ ಇನ್ನೂ ಅನೇಕ ಹಲವಾರು ಉದ್ಯೋಗ ಪಾತ್ರಗಳಾದ್ಯಂತ ವಿವಿಧ ಉದ್ದಿಮೆ ಗಳ ಪ್ರತಿಭೆಗಳು ತಮ್ಮ ಪ್ರತಿಭೆ ಪ್ರದರ್ಶಿಸಿದವು.
ವರ್ಲ್ಡ್‌ಸ್ಕಿಲ್ಸ್ ಇಂಡಿಯಾ ದ ಉಪಾಧ್ಯಕ್ಷ ಕರ್ನಲ್ ಅರುಣ್ ಚಂದೇಲ್ ಅವರ ನೇತೃತ್ವದಲ್ಲಿ 56 ಸ್ಪರ್ಧೆಗಳು 50 ಕೌಶಲ್ಯಗಳಲ್ಲಿ, 50 ತಜ್ಞರು ಹಾಗೂ 11 ಅನುವಾದಕರು ಮತ್ತು ಏಳು ತಂಡ ವ್ಯವಸ್ಥಾಪಕರು ಇದರಲ್ಲಿ ಭಾಗವಹಿಸಿದ್ದರು. 50 ಕೌಶಲ್ಯಗಳಾದ್ಯಂತ ಹರಡಿದ್ದ ಭಾಗವಹಿಸುವಿಕೆಯಲ್ಲಿ ಆರು ಕೌಶಲ್ಯಗಳಲ್ಲಿ ಇಬ್ಬರು ಸ್ಪರ್ಧಿಗಳ ಒಂದು ತಂಡವಿತ್ತು.
56 ಸ್ಪರ್ಧಿಗಳ ಐಕಿ 19%(11 ಸ್ಪರ್ಧಿಗಳು) ಮಹಿಳೆಯರಿದ್ದು, ಹೆಚ್ಚು ಮಹಿಳೆಯರು ಮುಂದೆ ಬಂದು, ಜಾಗತಿಕ ತರಬೇತಿ ಮಾನದಂಡಗಳ ಮೂಲಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಿರುವುದನ್ನು ಇದು ಸೂಚಿಸುತ್ತದೆ. 20%(12 ಅಭ್ಯರ್ಥಿಗಳು) ಕೈಗಾರಿಕಾ ತರಬೇತಿ ಸಂಸ್ಥೆಗಳಿಂದ () ಅರ್ಹತೆ ಪಡೆದುಕೊಂಡು ಬಂದವರಾಗಿದ್ದರು.
2019ರ13ನೆ ಸ್ಥಾನಕ್ಕೆ ಹೋಲಿಸಿದರೆ,ವಿಶ್ವಕೌಶಲ್ಯ ಸ್ಪರ್ಧೆ2022( 2022)ದಲ್ಲಿಭಾರತ ಅತ್ಯುತ್ಕೃಷ್ಟತೆಗಾಗಿ2ಬೆಳ್ಳಿಯ ಪದಕಗಳು, 3ಕಂಚಿನ ಪದಕಗಳು ಹಾಗೂ13ಪದಕಗಳನ್ನು ಗೆಲ್ಲುವಮೂಲಕ11ನೆ ಸ್ಥಾನಕ್ಕೆ ಏರಿದೆ. ಈ ವಿಜಯವು,ಯುವ ಜನತೆ,ತರಬೇತುದಾರರು ಹಾಗೂ ಕೌಶಲ್ಯ ಪರಿಸರ ವ್ಯವಸ್ಥೆಯಭಾಗೀದಾರರಲ್ಲಿ,ಸ್ಪರ್ಧೆಗಳಲ್ಲಿ ಭಾಗವಹಿಸುವ ಜಾಗೃತಿ ಹೆಚ್ಚಾಗುತ್ತಿರುವುದನ್ನು ಸೂಚಿಸಿ ಕೌಶಲ್ಯಗಳೆಡೆಗೆಉತ್ಕಂಟತೆ ಬೆಳೆಸಿಕೊಂಡುಸ್ಪರ್ಧೆಗಳ ಮೂಲಕ ಅತ್ಯುತ್ಕೃಷ್ಟತೆ ಯನ್ನುಗಳಿಸಿಕೊಳ್ಳಲು ಅವರಿಗೆ ಪ್ರೇರಣೆ ಒದಗಿಸುತ್ತದೆ.
ಪ್ಯಾಟಿಸ್ಸರಿ ಮತ್ತು ಕನ್ಫೆಕ್ಷನರಿ ಕೌಶಲ್ಯದಲ್ಲಿ ಬೆಳ್ಳಿ ಪದಕ, ಹೋಟಲ್ ರಿಸೆಪ್ಷನ್ ಕೌಶಲ್ಯದಲ್ಲಿ 1 ಕಂಚಿನ ಪದಕ, ಹೇರ್‌ಡ್ರೆಸ್ಸಿಂಗ್  ಮತ್ತು ಆರೋಗ್ಯ ಹಾಗೂ ಸಾಮಾಜಿಕ ಕಾಳಜಿ ಕೌಶಲ್ಯದಲ್ಲಿ ಅತ್ಯುತ್ಕೃಷ್ಟೆಗಾಗಿ 2 ಪದಕಗಳನ್ನು ಗೆಲ್ಲುವ ಮೂಲಕ ಮಹಿಳಾ ಸ್ಪರ್ಧಿಗಳ ಅದ್ವಿತೀಯ ಪ್ರದರ್ಶನ ನೀಡಿದರು.
ವಿಜೇತರುಗಳ ಪೈಕಿ, ನಂದಿತಾ ಸಕ್ಸೇನಾ ಪ್ಯಾಟಿಸ್ಸರಿ ಮತ್ತು ಕನ್ಫೆಕ್ಷನರಿ ವ್ಯಾಪಾರದಲ್ಲಿ ಬೆಳ್ಳಿ ಪದಕ ಗೆದ್ದರೆ, ಅನುಶ್ರೀ ಶ್ರೀನಿ ವಾಸನ್ ಹೋಟಲ್ ರಿಸಪ್ಷನ್ ಕೌಶಲ್ಯದಲ್ಲಿ ಕಂಚಿನ ಪದಕ ಗೆದ್ದರು. ಐಟಿಐ ಅರ್ಹತೆ ಪಡೆದ ಸ್ಪರ್ಧಿಗಳು ಕೂಡ 2 ಪದಕಗಳನ್ನು ಪ್ರೋಟೋಟೈಪ್ ಮಾಡಲಿಂಗ್ ಮತ್ತು ಮೆಕಟ್ರಾನಿಕ್ಸ್‌ನಲ್ಲಿ ತಲಾ ಒಂದೊಂದು ಕಂಚಿನ ಪದಕಗಳನ್ನು ಗೆದ್ದುದಲ್ಲದೆ, ಆಟೋ ಬಾಡಿ ರಿಪೇರ್ ಮತ್ತು ಆಟೋಮೊಬೈಲ್ ತಂತ್ರಜ್ಞಾನ ಕೌಶಲ್ಯದಲ್ಲಿ 2 ಪದಕಗಳನ್ನು ಗೆದ್ದರು. ವಾಟರ್ ಟೆಕ್ನಾಲಜಿ ಕೌಶಲ್ಯದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತ ತನ್ನ ಅಧಿಪತ್ಯವನ್ನು ಮುಂದುವರೆಸಿತ್ತು.
ವರ್ಲ್ಡ್‌ಸ್ಕಿಲ್ಸ್ ಇಂಟರ್‌ನ್ಯಾಷನಲ್, ಪ್ರೊಟೋಟೈಪ್ ಮಾಡಲಿಂಗ್, ಹೇರ್‌ಡ್ರೆಸಿಂಗ್, ಬ್ರಿಕ್‌ಲೇಯಿಂಗ್, ಆಟೋಬಾಡಿ ರಿಪೇರ್, ಬ್ಯೂಟಿ  ಥೆರಪಿ, ಪ್ಲಾಸ್ಟಿಕ್ ಡೈ ಇಂಜಿನಿಯರಿಂಗ್ ಹಾಗೂ ಗ್ರಾಫಿಕ್ ಡಿಸೈನ್ ಟೆಕ್ನಾಲಜಿ ಮುಂತಾದ ಕೌಶಲ್ಯಗಳಲ್ಲಿ ವರ್ಲ್ಡ್‌ಸ್ಕಿಲ್ಸ್ ಸ್ಪರ್ಧೆಯಲ್ಲಿ ತಮ್ಮ ಪ್ರತಿಷ್ಠಿತ ಕೊಡುಗೆಗಾಗಿ ನಮ್ಮ 7 ವಿಷಯತಜ್ಞರಿಗೆ “ಸರ್ಟಿಫಿಕೇಟ್ ಆಫ್ ಮೆರಿಟ್” ಅನ್ನು ಕೂಡ ಪ್ರದಾನ ಮಾಡಿತು.