ಯುಕೆ ಜೈಲಿನಿಂದ ಬೋರಿಸ್ ಬೆಕರ್ ಬಿಡುಗಡೆ
ಬರ್ಲಿನ್‌:ಮೂರು ಬಾರಿಯ ವಿಂಬಲ್ಡನ್ ಚಾಂಪಿಯನ್ ಆಗಿರುವ ಬೋರಿಸ್ ಬೆಕರ್ ಅವರನ್ನು ಯುಕೆ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಆರು ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಬೋರಿಸ್ ಬೆಕರ್ 2.5 ಮಿಲಿಯನ್‌ಗಿಂತಲೂ ಹೆಚ್ಚು ನಗದು, ಷೇರುಗಳು ಮತ್ತು ಆಸ್ತಿಯನ್ನು ಮರೆಮಾಚುವ ಮೂಲಕ ದಿವಾಳಿತನದ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಅವರಿಗೆ ಎರಡೂ ವರೆ ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು.
ಬೋರಿಸ್ ಬೆಕರ್ ಅವರನ್ನು ಯುಕೆಯಿಂದ ಜರ್ಮನಿಗೆ ಗಡಿಪಾರು ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.