ಫಿಫಾ ವಿಶ್ವಕಪ್ ಗೆದ್ದ ಅರ್ಜೆಂಟೀನಾ: ಪ್ರಧಾನಿ ಮೋದಿ ಅಭಿನಂದನೆ
ನವದೆಹಲಿ:ಕತಾರ್‌ನಲ್ಲಿ ಫಿಫಾ ವಿಶ್ವಕಪ್ 2022 ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ತಂಡ ಅರ್ಜೆಂಟೀನಾ 4-2 ಗೋಲುಗಳ ಅಂತರದಿಂದ ಫ್ರಾನ್ಸ್ ಅನ್ನು ಸೋಲಿಸಿ ಗೆದ್ದು ಬೀಗಿದೆ.
ಈ ಹಿನ್ನೆಲೆ, ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅರ್ಜೆಂಟೀನಾ ವಿಶ್ವಕಪ್ ಗೆದ್ದಿದ್ದಕ್ಕಾಗಿ ಅಭಿನಂದಿಸಿದ್ದಾರೆ ಮತ್ತು ಫೈನಲ್ ಪಂದ್ಯವು ಅತ್ಯಂತ ರೋಮಾಂಚಕ ಫುಟ್ಬಾಲ್ ಪಂದ್ಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.
ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ಗೆಲುವಿನಲ್ಲಿ ಸಂತೋಷಪಡುತ್ತಾರೆ ಎಂದು ಹೇಳಿದರು.
ಟ್ವೀಟ್ ಮಾಡಿರುವ ಮೋದಿ, ‘ಇದು ಅತ್ಯಂತ ರೋಮಾಂಚಕ ಫುಟ್ಬಾಲ್ ಪಂದ್ಯಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ!  ವಿಶ್ವ ಕಪ್ ಚಾಂಪಿಯನ್ ಆಗಿದ್ದಕ್ಕಾಗಿ ಅರ್ಜೆಂಟೀನಾಗೆ ಅಭಿನಂದನೆಗಳು! ಅವರು ಪಂದ್ಯಾವಳಿಯ ಮೂಲಕ ಅದ್ಭುತ ವಾಗಿ ಆಡಿದ್ದಾರೆ. ಅರ್ಜೆಂಟೀನಾ ಮತ್ತು ಮೆಸ್ಸಿಯ ಲಕ್ಷಾಂತರ ಭಾರತೀಯ ಅಭಿಮಾನಿಗಳು ಭವ್ಯವಾದ ವಿಜಯವನ್ನು ಸಂತೋಷಪಡುತ್ತಾರೆ! ‘ ಎಂದಿದ್ದಾರೆ.
 - 