  : ಶರತ್‌ ಋತುವಿನ ಆಹಾರದ ಷರತ್ತುಗಳು
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾ.ಸಾಧನಶ್ರೀ
ಈ ಕಾಲದಲ್ಲಿ ಜೀರ್ಣಿಸಲು ಸುಲಭವಾದ ಆಹಾರವು ಉತ್ತಮ. ಏಕ ದಳಗಳಲ್ಲಿ ಹಿಂದಿನ ವರ್ಷದ ಧಾನ್ಯ ಗಳು ಹಿತಕರ. ಅಕ್ಕಿ ಗೋಧಿ, ಜವೆ ಗೋಧಿ, ಜೋಳ ಮತ್ತು ರಾಗಿಗಳನ್ನು ಆಯಾ ಪ್ರಾಂತ್ಯದ ಅಭ್ಯಾಸಕ್ಕೆ ತಕ್ಕಂತೆ ಬಳಸಬೇಕು. ಇವುಗಳನ್ನು ಅನ್ನ/ ರವೆ/ ನುಚ್ಚು/ ಹಿಟ್ಟಿನ ರೂಪದಲ್ಲಿ ಬಳಸಬಹುದು. ನೆನಪಿರಲಿ- ಅವಲಕ್ಕಿಯ ಉಪಯೋಗ ಶರತ್ ಋತುವಿನಲ್ಲಿ ಹೆಚ್ಚಾಗಿ ಬೇಡ.
ವಿನಾಯಕ ಚತುರ್ಥಿ ಈಗ ತಾನೇ ಮುಗಿಯಿತು ಅನ್ನುವಷ್ಟರಲ್ಲಿ ದಸರಾ ಹಬ್ಬಇನ್ನೇನು ಬಂದೇಬಿಡ್ತು. ನವರಾತ್ರಿಅಂದರೆ ಎಡೆ ಸಂಭ್ರಮ. ಸ್ಕೂಲ್ – ಕಾಲೇಜುಗಳಿಗೆ, ಆಫೀಸು- ಕಚೇರಿಗಳಿಗೆ ರಜಾ ಮಜಾ. ಆದರೆ, ಈ ರಜೆ ದಿನ ಗಳಲ್ಲಿಯೂ ವೈದ್ಯರು ಮಾತ್ರ ಬಿಜಿ. ಯಾಕಂದರೆ, ಖಾಯಿಲೆಗಳಿಗೆ ರಜೆ ಇಲ್ಲ ನೋಡಿ! ಬೇರೆ ಬೇರೆ ಹಬ್ಬಗಳ ಸಮಯದಲ್ಲಿ ಕಾಯಿಲೆಗಳ ಸ್ವರೂಪವೂ ಸಹ ಬೇರೆ ಬೇರೆಯೇ ಆಗಿರುತ್ತದೆ ಹೊರತು ಕಾಯಿಲೆಗಳಿಗೆ ವಿರಾಮ ಮಾತ್ರ ಇಲ್ಲ. ಇತ್ತೀಚೆಗೆ ವೈದ್ಯರಿಗೆ ಸಾಮಾನ್ಯವಾಗಿ ಕಂಡು ಬರುತ್ತಿರುವ ಕಾಯಿಲೆಗಳು ಯಾವುದಪ್ಪ ಅಂದರೆ-ತೀವ್ರ ಉಷ್ಣಾಂಶ ಇರುವಂತಹ ಜ್ವರ, ಉರಿಶೀತ, ಒಣ ಕೆಮ್ಮು, ಎದೆ ಉರಿ, ಹುಳಿತೇಗು, ಅಜೀರ್ಣ, ವಾಂತಿ, ಭೇದಿ, ಚರ್ಮದಲ್ಲಿ ಗಂಧೆಗಳು, ತಲೆನೋವು, ನಿದ್ದೆ ಕಡಿಮೆಯಾಗುವುದು, ಕೈಕಾಲು ಉರಿ, ಒಂದು ರೀತಿಯ ಸಂಕಟ, ತಲೆಸುತ್ತು ಇತ್ಯಾದಿ.
ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಈ ಕಾಯಿಲೆಗಳು ಕೆಲವು ತಿಂಗಳ ಹಿಂದೆ ಇಷ್ಟು ಸಾಮಾನ್ಯವಾಗಿ ಕಾಣು ವಂತಹದ್ದಾಗಿರಲಿಲ್ಲ. ಆಗ ಮಳೆಗಾಲವಿತ್ತು. ಮಳೆಗಾಲದ ಕಾಯಿಲೆಗಳ ಸ್ವರೂಪವೇ ಬೇರೆ. ಮಳೆಗಾಲಮುಗಿದು, ಆಕಾಶ ತಿಳಿಯಾಗಿ, ಸೂರ್ಯನ ತಾಪ ಹೆಚ್ಚಾದಾಗ ಕಾಣಿಸಿಕೊಳ್ಳುವ ಕಾಯಿಲೆಗಳ ಸ್ವರೂಪವೇಬೇರೆ. ಹಾಗಾದರೆ, ಈ ರೀತಿಯ ವ್ಯತ್ಯಾಸಗಳು ಯಾಕೆ ಆಗುತ್ತದೆ? ಹೊರಗಿನ ವಾತಾವರಣಕ್ಕೂ ನಮ್ಮ ದೇಹದಸ್ಥಿತಿಗೂ ಮತ್ತು ಆರೋಗ್ಯಕ್ಕೂ ಏನಾದರೂ ಸಂಬಂಧವಿದೆಯಾ? ಪ್ರತಿ ಋತುವಿನಲ್ಲಿಯೂ ಹೊರಗಿನವಾತಾವರಣದಲ್ಲಿ ಎಷ್ಟೇ ಏರುಪೇರು ಆದರೂ ಸಹ ಅದನ್ನು ಗಮನಿಸದೆ ವರ್ಷವಿಡಿ ಒಂದೇ ರೀತಿಯಜೀವನ ಶೈಲಿಯನ್ನು ನಡೆಸಿಕೊಂಡು ಹೋಗುವುದು ಸರಿಯೇ? ಇದು ವೈಜ್ಞಾನಿಕವೇ? ವರ್ಷ ಪೂರ್ತಿಕಾಯಿಲೆ ತಪ್ಪದೆ ಇರುವುದಕ್ಕೆ ಸಾಧ್ಯವಿದೆಯಾ? ಋತುವಿಗೆ ತಕ್ಕಂತೆ ನಮ್ಮ ಆಹಾರ-ವಿಹಾರಗಳನ್ನುಬದಲಾಯಿಸಿಕೊಳ್ಳಬೇಕಾ? ವೈಜ್ಞಾನಿಕವಾಗಿ ಅದನ್ನು ಹೇಗೆ ಅರ್ಥೈಸಿಕೊಳ್ಳಬೇಕು?… ಹೀಗೆ ಹಲವಾರುಪ್ರಶ್ನೆಗಳು ಈಗಾಗಲೇ ನಿಮ್ಮೆಲ್ಲರ ಮನಸ್ಸಿನಲ್ಲಿ ಬಂದಿರಬಹುದು, ಅಲ್ಲವೇ? ಹಾಗಾದರೆ ಈ ಎಲ್ಲ ಪ್ರಶ್ನೆಗಳಿಗೆ ಆಯುರ್ವೇದ ಶಾಸದಲ್ಲಿ ಉತ್ತರಗಳನ್ನು ಹುಡುಕೋಣ.
ಸ್ನೇಹಿತರೆ, ಒಂದು ವರ್ಷದಲ್ಲಿ ಆರು ಋತುಗಳನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಹೇಮಂತಮತ್ತು ಶಿಶಿರ ಋತುಗಳು ಚಳಿಗಾಲವಾದರೆ, ವಸಂತ ಮತ್ತು ಗ್ರೀಷ್ಮ ಋತುಗಳು ಬೇಸಿಗೆಕಾಲ. ವರ್ಷ ಋತುವು ಮಳೆಗಾಲವಾದರೆ, ಶರತ್ ಋತುವು ಮಳೆಗಾಲದ ನಂತರದ ಬಿಸಿಲು ಕಾಲ. ಪ್ರತಿಯೊಂದು ಋತುವಿಗೂ ಅದರದ್ದೇ ಆದ ಋತುಚರ್ಯವಿದೆ. ಆ ಋತುವಿನಲ್ಲಿ ಶರೀರದಲ್ಲಿ ಆಗುವ ಏರುಪೇರುಗಳನ್ನು ಸರಿ ಮಾಡುವಂತಹ, ದೇಹದಲ್ಲಿ ಹೆಚ್ಚು ಕಡಿಮೆಯಾಗಿರುವ ದೋಷಗಳನ್ನು ಸಮ ಅವಸ್ಥೆಗೆ ತರುವ, ಶಾರೀರಿಕ ಮತ್ತು ಅಗ್ನಿಯ ಬಲಗಳನ್ನು ಸರಿದೂಗಿಸುವಂತಹ ಆಹಾರ-ವಿಹಾರಗಳನ್ನು ಈ ಋತುಚರ್ಯೆಗಳಲ್ಲಿ ನೋಡಬಹುದು. ಪ್ರಸ್ತುತ ನಡೆಯು ತ್ತಿರುವುದು ಮಳೆಗಾಲ ನಿಂತ ಮೇಲೆ ಬರುವ ಬಿಸಿಲು ಕಾಲ. ಹಾಗಾದರೆ, ಆಯುರ್ವೇದದ ‘ಶರದ ಋತು’ ವಿನ ಚರ್ಯೆಯನ್ನು ಸಂಕ್ಷಿಪ್ತವಾಗಿ ಅರ್ಥೈಸಿಕೊಳ್ಳೋಣ.
ಶರತ್ ಋತುವಿನಲ್ಲಿ ಎರಡು ಮಾಸಗಳು
ಇದನ್ನೂ ಓದಿ:  : ಇಲ್ಲಿದೆ ನೋಡಿ ಪರಸ್ಪರ ಹೊಂದಿಕೆಯಾಗದ ಆಹಾರಗಳ ಪಟ್ಟಿ