  : ಹೆಂಗಸರು ವಟವಟ ಅನ್ನೋ ಜಾಗ -ವಠಾರ
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡಸಾವು ಅಂದ್ರೆ ಅದು ಜೀವನದ‌ ಅಂತ್ಯ ಮತ್ತು ತುಂಬಾ ಗಂಭೀರವಾದ ವಿಷಯ. ಆದರೆ ಕೆಲವರಿಗೆ ಮಾತ್ರ ಅದು, ‘ಇದು ನನಗೇ ಮೊದಲು ಗೊತ್ತಾಯಿತು’ ಅಂತ ಹೇಳಿಕೊಳ್ಳುವ ನ್ಯೂಸ್ ಐಟಂ. ಇದು ಸೆಲೆಬ್ರಿಟಿಗಳನ್ನಂತೂ ಇನ್ನಿಲ್ಲದಂತೆ ಕಾಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಹಲವಾರು ಸೆಲೆಬ್ರಿಟಿಗಳು ಅದರಲ್ಲೂ ಸಿನಿಮಾ ನಟ-ನಟಿಯರು, ಕ್ರೀಡಾಪಟುಗಳು ಸಾಯೋಕೆ ಮುಂಚೆಯೇ ಅದೆಷ್ಟು ಬಾರಿ ಸತ್ತಿರುತ್ತಾರೋ ಗೊತ್ತಿಲ್ಲ. ಕಳೆದ ವರ್ಷ ನಟ ಶರತ್ ಬಾಬು, ಜಿಂಬಾಬ್ವೆ ಕ್ರಿಕೆಟ್ ಆಟಗಾರ ಹೀತ್ ಸ್ಟ್ರೀಕ್ ಕೂಡಾ ಸಾಯುವ ೨ ವಾರ ಮುಂಚೆಯೇ ಸತ್ತು ಹೋಗಿದ್ದರು. ನಮ್ಮ ಕನ್ನಡದ ನಟ ಅಂಬರೀಷ್, ದೊಡ್ಡಣ್ಣ ಅವರನ್ನು ಈ ಸುಡುಗಾಡು ಟ್ರೆಂಡ್ ಹಲವಾರು ಬಾರಿ ಕಾಡಿದ್ದಿದೆ. ಹಾಗಂತ ಇದನ್ನು ನ್ಯೂಸ್ ಚಾನೆಲ್‌ಗಳು ಮಾಡುತ್ತಿವೆ ಎಂದುಕೊಳ್ಳಬೇಡಿ; ಇದು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವ ಕೆಲವರು ಮಾಡುವ ಕೆಲಸ ಮತ್ತು ಇದಕ್ಕೆ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಗಳೂ ಹೊರತಾಗಿಲ್ಲ ಅನ್ನೋದು ವಿಷಾದ.
ಎಲ್ಲರಿಗೂ ನಾವೇ ಮೊದಲು ಸಾವಿನ ಸುದ್ದಿ ಕೊಟ್ಟೆವು ಎನ್ನುವ ಸಂಭ್ರಮದಲ್ಲಿ ‘ಆರ್‌ಐಪಿ’ ಅಂತ ಪೋ ಹಾಕಿ ನಿಟ್ಟುಸಿರುಬಿಡುವ ಈಮಹಾನುಭಾವರು ಒಮ್ಮೆ, ‘ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಹೃದಯಾಘಾತದಿಂದ ನಿಧನ’ ಅಂತ ಪೋಸ್ಟ್‌ಗಳನ್ನು ಹಾಕಿಕೊಂಡಿದ್ದರು.ಹೃದಯಾಘಾತ ಕಾಮನ್ ಆಗಿರುವ ಈ ಸಂದರ್ಭದಲ್ಲಿ ಎಷ್ಟೋ ಜನ ಅದನ್ನು ನಂಬಿಯೂಬಿಟ್ಟಿದ್ದರು. ಆದರೆ ಅಸಲಿಗೆ ಸತ್ತಿದ್ದು ಚಿಕ್ಕಪುಟ್ಟ ಪಾತ್ರ ಮಾಡುತ್ತಿದ್ದ ರಮ್ಯಾ ಎಂಬ ಇನ್ನೊಬ್ಬ ನಟಿ. ಇದು ಇನ್ನೊಂಥರ ಚೀಪ್ ಗಿಮಿಕ್. ಒಟ್ಟಿನಲ್ಲಿ, ಇನ್ನೊಬ್ಬರ ಸಾವು ಕೂಡಾ ನಮ್ಮ ಸಾವಿನಷ್ಟೇ ಗಂಭೀರ ವಿಷಯ ಅನ್ನೋದು ಅರಿವಾಗುವವರೆಗೂ ಇಂಥ ಅವಘಡಗಳು ನಡೆಯುತ್ತಲೇ ಇರುತ್ತವೆ ಅನ್ನೋದು ವಿಷಾದಕರ.
ಲೂಸ್‌ ಟಾಕ್‌ – ಮುನಿರತ್ನಏನ್ರೀ, ನಿಮ್ ಆಡಿಯೋ ಕೇಳ್ದೆ, ಭಾರಿ ಒಳ್ಳೊಳ್ಳೆ ಮಾತಾಡಿದ್ದೀರ ಬಿಡ್ರೀ…
ಬಲ್ವಿಂದರ್ ಸಿಂಗ್ ಖೇಮು ಯಾವತ್ತೂ ಫೈವ್ ಸ್ಟಾರ್ ಹೋಟೆಲ್‌ಗಳ ಮುಖ ನೋಡಿದವನಲ್ಲ. ಒಂದು ಲಕ್ಕಿ ಡ್ರಾನಲ್ಲಿ ಅವನಿಗೆ ನಗರದ ಅತಿ ಪ್ರತಿಷ್ಠಿತ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಒಂದು ದಿನ ಕಳೆಯುವ ಉಚಿತ ಬಹುಮಾನ ಸಿಕ್ಕಿತು. ಫುಲ್ ಖುಷಿಯಾದ ಬಲ್ವಿಂದರ್ ಸಿಂಗ್ ಖೇಮು, ತನ್ನ ಹೆಂಡತಿ ಊರಿಗೆ ಹೋದ ದಿನ ಆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಳ್ಳೋದು ಅಂತ ತೀರ್ಮಾನ ಮಾಡಿದ.
ಅವತ್ತು ಬೆಳಗ್ಗೆ ಹೋಟೆಲಿಗೆ ಹೋಗಿ ಚೆಕ್ ಇನ್ ಆಗಿ, ರೂಮ್‌ನಲ್ಲಿ ಸ್ನಾನ, ಊಟ ಮಾಡಿ ಕಿಟಕಿಯಿಂದ ಹೊರಗೆ ನೋಡಿದವನಿಗೆ ಸ್ವಿಮ್ಮಿಂಗ್ ಪೂಲ್ ಕಾಣಿಸಿತು. ಸರಿ ಅಂತ ಅಲ್ಲಿಂದ ಸೀದಾ ಪೂಲ್ ಬಳಿಗೆ ಬಂದು ಅಲ್ಲಿ ಪೂಲ್ ಪಕ್ಕದಲ್ಲಿ ಹಾಕಿದ್ದ ಉದ್ದನೆಯ ಬೆಂಚ್ ಮೇಲೆ ಮೇಲೆ ಮಲಗಿಕೊಂಡ. ಆಗ ಅಲ್ಲಿಗೆ ಬಂದ ಒಬ್ಬ ಫಾರಿನರ್ ಇವನನ್ನು ನೋಡಿ, ‘ಹಾಯ, ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ.
ಇಂಗ್ಲಿಷ್ ಸರಿಯಾಗಿ ಬರದ ಬಲ್ವಿಂದರ್ ಸಿಂಗ್ ಖೇಮು, ‘ನೋ ಐ ಆಮ್ ಬಲ್ವಿಂದರ್ ಸಿಂಗ್’ ಅಂದ. ಅದಕ್ಕೆ ಆ ವಿದೇಶಿಗ ‘ಫನ್ನಿ ಗೈ’ ಅಂತ ನಕ್ಕು ಹೊರಟ. ಆದ್ರೆ ಬಲ್ವಿಂದರ್ ಸಿಂಗ್ ಖೇಮುಗೆ ಅವನು ಯಾಕೆ ನಕ್ಕ ಅನ್ನೋದು ಅರ್ಥ ಆಗಲಿಲ್ಲ. ಅದೇ ಗೊಂದಲದಲ್ಲಿ ಅಲ್ಲಿಂದ ಎದ್ದುಹೊರಟ. ಅಲ್ಲಿ ಸ್ವಲ್ಪ ಮುಂದೆ ಇನ್ನೊಬ್ಬ ಫಾರಿನರ್ ಅವನಂತೆಯೇ ಪೂಲ್ ಪಕ್ಕದ ಬೆಂಚ್‌ನಲ್ಲಿ ಮಲಗಿದ್ದ. ಅವನನ್ನು ನೋಡಿದ ಖೇಮು ‘ಆರ್ ಯೂ ರಿಲ್ಯಾಕ್ಸಿಂಗ್?’ ಅಂತ ಕೇಳಿದ. ಅದಕ್ಕೆ ಆತ ‘ಎಸ್’ ಅಂದ. ಇದ್ದಕ್ಕಿದ್ದಂತೆ ರಾಂಗ್ ಆದ ಖೇಮು ಹೇಳಿದ ‘ಅಯ್ಯೋ ಮಂಗ್ ನನ್ಮಗನೇ, ನೀನ್ ಇಲ್ ಮಲ್ಕೊಂಡಿದ್ದೀಯಾ, ಅಲ್ಲಿ ನಿನ್ ಹುಡುಕ್ಕೊಂಡ್ ಯಾರೋ ಬಂದಿದ್ರು’.
ಲೈನ್‌ ಮ್ಯಾನ್
ಸೋಡಾ ಕುಡಿಯೋಕೆ ಕಂಪನಿ‌ ಕೊಡೋ ‘ಗೆಳೆಯ’
ಇದನ್ನೂ ಓದಿ:  : ರಿಯಾನ್‌ ಪರಾಗ್‌   