   : ಸಿದ್ದು ಅಲ್ಲಾಡ್ತಿಲ್ಲ, ಗವರ್ನರ್‌ ಬಿಡ್ತಿಲ್ಲ
ಮೂರ್ತಿ ಪೂಜೆ
ಆರ್‌.ಟಿ.ವಿಠ್ಠಲಮೂರ್ತಿ
ಕಳೆದ ಶನಿವಾರ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಬಿಜೆಪಿಯ ಸದಸ್ಯತ್ವ ಅಭಿಯಾನ ಸಭೆ ನಡೆದಿದೆ. ಈ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಥೇಟು ಬಬ್ರುವಾ ಹನನಂತೆ ಅಬ್ಬರಿಸಿದರಂತೆ. ‘ಪಕ್ಷ ಕಟ್ಟೋದು ಅಂದ್ರೆ ಸುಮ್ಮನೆ ಅಲ್ಲ. ಇವತ್ತು ಕರ್ನಾಟಕದಲ್ಲಿ ಪಕ್ಷ ಈ ಮಟ್ಟಕ್ಕೆ ಬೆಳೆಯಲು ಯಡಿಯೂರಪ್ಪ ಅವರು ಕಾರಣ. ಅಂದ ಹಾಗೆ, ಯಡಿಯೂರಪ್ಪ ಅವರಿಗೆ ಒಂದಲ್ಲ, ಎರಡು ಸಲ ಸೆಂಟ್ರಲ್ ಮಿನಿಸ್ಟರ್ ಆಗುವ ಆಫರ್ ಬಂತು.
ದೆಹಲಿ ನಾಯಕರ ಈ ಆಫರ್ ಅನ್ನು ಒಪ್ಪಿಕೊಂಡಿದ್ದರೆ ಕೇಂದ್ರದಲ್ಲಿ ಮಂತ್ರಿಯಾಗಿ ಯಡಿಯೂರಪ್ಪನವರು ಅರಾಮವಾಗಿರಬಹುದಿತ್ತು. ಆದರೆ ಅವರು ಆಫರ್ ಅನ್ನು ತಿರಸ್ಕರಿಸಿದರು. ಅಷ್ಟೇ ಅಲ್ಲ, ಕರ್ನಾಟಕದಲ್ಲಿ ಶ್ರಮ ವಹಿಸಿ ಪಕ್ಷ ಸಂಘಟನೆ ಮಾಡಿದರು. ಒಂದಲ್ಲ, ಎರಡು ಸಲ ಬಿಜೆಪಿ ಅಧಿಕಾರ ಹಿಡಿಯಲು ಕಾರಣರಾದರು. ಇವತ್ತು ಅವರ ಬಗ್ಗೆ, ನನ್ನ ಬಗ್ಗೆ ಯಾರು ಅಪಸ್ವರ ಎತ್ತುತ್ತಿದ್ದಾರೋ ಅವರಿಗೆ ಗೊತ್ತಿರಲಿ- ಪಕ್ಷ ಸಂಘಟನೆ ಮಾಡೋದು ಸುಲಭದ ಕೆಲಸ ಅಲ್ಲ.
ಮಾತನಾಡುವುದು ಸುಲಭ, ಆದರೆ ಪಕ್ಷ ಕಟ್ಟೋದು ಕಷ್ಟ. ಹೀಗಾಗಿ ಇವತ್ತು ಯಾರು ಅಪಸ್ವರ ಎತ್ತುತ್ತಿzರೋ,ಅವರ ಬಗ್ಗೆ ನನಗೆ ಮರುಕವಿದೆ’ ಅಂತ ಅವರು ವ್ಯಂಗ್ಯವಾಡಿದರಂತೆ ಹೀಗೆ ವಿಜಯೇಂದ್ರ ಅವರು ಯಾರಬಗ್ಗೆ ವ್ಯಂಗ್ಯ ವಾಡಿದರು ಎಂಬುದು ರಹಸ್ಯವೇನಲ್ಲ. ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ ಸೇರಿದಂತೆಪಕ್ಷದ ಹಲವು ನಾಯಕರು ಯಡಿಯೂರಪ್ಪ ಕ್ಯಾಂಪಿನ ವಿರುದ್ಧ ಗುಡುಗುತ್ತಲೇ ಇದ್ದಾರೆ.
ಕುತೂಹಲದ ಸಂಗತಿ ಎಂದರೆ ಹಿಂದೆಲ್ಲ ಭಿನ್ನಮತೀಯ ನಾಯಕರು ತಮ್ಮನ್ನು ಟೀಕಿಸಿದರೆ ವಿಜಯೇಂದ್ರ ಸಹಿಸಿಕೊಂಡು ಸುಮ್ಮನಿರುತ್ತಿದ್ದರು. ಆದರೆ ಈ ಸಲ ಅಗ್ರೆಸಿವ್ ಆಗಿ ತಿರುಗಿ ಬಿದ್ದಿರುವುದಲ್ಲದೆ, ತಮ್ಮನ್ನು ಯಾರೇನೂ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಯಾವಾಗ ಅವರು ಇಂಥ ಮೆಸೇಜು ರವಾನಿಸಿದರೋ, ಅವರ ವಿರೋಧಿ ಪಡೆ ಎಚ್ಚೆತ್ತಿದೆ. ಅಷ್ಟೇ ಅಲ್ಲ, ವಿಜಯೇಂದ್ರ ಇಷ್ಟು ಬಿಡುಬೀಸಾಗಿ ಮಾತನಾಡುವುದರ ಹಿಂದೆ ಯಾವ ಶಕ್ತಿ ಇದೆ ಅಂತ ಚೆಕ್ ಮಾಡಿದೆ.
ಅದಕ್ಕೆ ಬಂದಿರುವ ಸದ್ಯದ ಮಾಹಿತಿಯ ಪ್ರಕಾರ ವಿಜಯೇಂದ್ರ ಹೀಗೆ ಬಬ್ರುವಾಹನನ-ಜುಧರಿಸಲು ಪಕ್ಷದರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಕೊಟ್ಟ ಟಾನಿಕ್ಕೇ ಕಾರಣ. ಇತ್ತೀಚೆಗೆ ದಿಲ್ಲಿಗೆ ಬಂದು ತಮ್ಮನ್ನು ಭೇಟಿಯಾದ ವಿಜಯೇಂದ್ರ ಅವರಿಗೆ, ‘ನೀವು ಯಾವುದಕ್ಕೂ ಯೋಚನೆ ಮಾಡಬೇಡಿ. ಪಕ್ಷ ಕಟ್ಟಲು ಏನು ಮಾಡಬೇಕು ಅನ್ನಿಸುತ್ತದೋ ಅದನ್ನು ಮಾಡಿ. ಬಿಬಿಎಂಪಿ ಎಲೆಕ್ಷನ್ ಸದ್ಯಕ್ಕೆ ನಿಮ್ಮ ಟಾರ್ಗೆಟ್ ಆಗಿರಲಿ.
ಮೊದಲು ಕರ್ನಾಟಕದ ರಾಜಧಾನಿಯನ್ನು ವಶಪಡಿಸಿಕೊಂಡರೆ ನಂತರ ರಾಜ್ಯವನ್ನು ವಶಪಡಿಸಿಕೊಳ್ಳುವುದು ಸುಲಭ’ ಅಂತ ನಡ್ಡಾ ಹೇಳಿದರಂತೆ. ಅಂದ ಹಾಗೆ, ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ ಹೆಜ್ಜೆ ಹೆಜ್ಜೆಗೂ ನಡ್ಡಾ ಬ್ರೇಕ್ ಹಾಕುತ್ತಿದ್ದರು. ಆದರೆ ಇತ್ತೀಚೆಗೆ ಕರ್ನಾಟಕದಿಂದ ಅವರಿಗೆ ಬರುತ್ತಿರುವ ವರದಿ ವಿಜಯೇಂದ್ರ ಅವರನ್ನು ತಾರೀಪು ಮಾಡುತ್ತಿದೆ. ವಿಜಯೇಂದ್ರ ಅವರಂತೆ ಪಕ್ಷ ಸಂಘಟಿಸುವ ಶಕ್ತಿ ಯಾರಿಗೂ ಇಲ್ಲ ಎಂದು ಹೇಳುತ್ತಿದೆ. ಪರಿಣಾಮ? ನಡ್ಡಾ ಅವರೀಗ ವಿಜಯೇಂದ್ರ ಅವರ ಬೆನ್ನಿಗೆ ನಿಂತಿದ್ದಾರೆ. ಫುಲ್ ಫ್ರೀಡಮ್ಮೂ ಕೊಟ್ಟಿ ದ್ದಾರೆ. ಹೀಗಾಗಿಯೇ ವಿಜಯೇಂದ್ರ ತಮ್ಮನ್ನು ಲೆಕ್ಕಿಸದೆ ಆಟ ಮುಂದುವರಿಸುತ್ತಿದ್ದಾರೆ ಎಂಬುದು ಬಿಜೆಪಿ ಭಿನ್ನರಿಗಿರುವ ಮಾಹಿತಿ.
ಸಿದ್ದು ವಿರುದ್ಧ ಪುನಃ ದಾಳಈ ಮಧ್ಯೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧದ ವಿಚಾರಣೆಗೆ ಅನುಮತಿ ನೀಡಿದ್ದ ಗವರ್ನರ್ ಗೆಹ್ಲೋಟ್ ಪುನಃ ಸಿದ್ದು ವಿರುದ್ಧ ದಾಳ ಉರುಳಿಸತೊಡಗಿದ್ದಾರೆ. ಅದು ಅರ್ಕಾವತಿ ಬಡಾ ವಣೆಗೆ ಸಂಬಂಧಿಸಿದ ‘ರೀ ಡೂ’ ಪ್ರಕರಣ ಇರಬಹುದು, ಮುಡಾದಲ್ಲಿ ಸಿಎಂ ಮೌಖಿಕ ಆದೇಶದ ಮೇಲೆ ಆದ ಕೆಲಸಗಳೇನು ಎಂಬುದೇ ಇರಬಹುದು. ಒಟ್ಟಿನಲ್ಲಿ ಈ ಕುರಿತು ಮಾಹಿತಿ ಕೇಳಿ ಸರಕಾರದ ಮುಖ್ಯ ಕಾರ್ಯದರ್ಶಿ  ಗಳಿಗೆ ಗೆಹ್ಲೋಟ್ ಪತ್ರ ಬರೆದಿದ್ದಾರೆ.
ಇದೇ ರೀತಿ, ಸರಕಾರಕ್ಕೆ ತಾವು ಬರೆದ ಪತ್ರಗಳು ಯಾಕೆ ಸೋರಿಕೆಯಾಗುತ್ತಿವೆ ಎಂಬುದರಿಂದ ಹಿಡಿದು ಸರಕಾರಕ್ಕೆಮುಜುಗರ ಉಂಟುಮಾಡುವ ಯಾವ ಅವಕಾಶಗಳನ್ನೂ ಗೆಹ್ಲೋಟ್ ಬಿಡುತ್ತಿಲ್ಲ. ಅರ್ಥಾತ್, ಮುಡಾ ಪ್ರಕರಣಕ್ಕೆಸಂಬಂಽಸಿದಂತೆ ಸಿಎಂ ವಿರುದ್ಧದ ವಿಚಾರಣೆಗೆ ಅವರು ಅನುಮತಿ ನೀಡಿದ ಬಗ್ಗೆ ಹೈಕೋರ್ಟ್ ಏನೇ ತೀರ್ಪುನೀಡಲಿ, ಆದರೆ ಸಿದ್ದರಾಮಯ್ಯ ಅವರಿಗೆ ಮುಜುಗರವಾಗುವ ಇನ್ನಷ್ಟು ಬೆಳವಣಿಗೆಗಳು ನಡೆಯುತ್ತಾ ಹೋಗುವುದುಸ್ಪಷ್ಟವಾಗಿದೆ. ಹೀಗಾಗಿಯೇ ಕಾಂಗ್ರೆಸ್ ಪಾಳಯದಲ್ಲಿ ‘ಸಿದ್ದು ಅಲುಗಾಡ್ತಿಲ್ಲ, ಗವರ್ನರ್ ಬಿಡ್ತಿಲ್ಲ’ ಎಂಬಮಾತು ಗಳು ಕೇಳಿಬರುತ್ತಿವೆ.
ಅಂದ ಹಾಗೆ, ಇತ್ತೀಚೆಗೆ ಕಲಬುರ್ಗಿಗೆ ಹೋದ ಸಿದ್ದರಾಮಯ್ಯ ಅವರು, ‘ನನ್ನನ್ನು ಅಲುಗಾಡಿಸುವುದು ಅಷ್ಟು ಸುಲಭವಲ್ಲ’ ಅಂತ ವಿರೋಧಿಗಳಿಗೆ ಸವಾಲು ಹಾಕಿದ್ದರು. ಸಿದ್ದರಾಮಯ್ಯ ಅವರು ಇಷ್ಟು ಗಟ್ಟಿ ಧ್ವನಿಯಲ್ಲಿಸವಾಲು ಹಾಕುತ್ತಿzರೆ ಎಂದರೆ ಏನರ್ಥ? ನಾಳೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ದ ರಾಜ್ಯ ಪಾಲರು ನೀಡಿದ ಅನುಮತಿಗೆ ಹೈಕೋರ್ಟ್ ಅಸ್ತು ಎಂದರೂ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ ಅಂತ ತಾನೇ? ಹೀಗಾಗಿಯೇ ಗವರ್ನರ್ ಗೆಹ್ಲೋಟ್ ಹೊಸ ಹೊಸ ಅಸ್ತ್ರಗಳನ್ನು ಹುಡುಕಿಯೋ, ಇಲ್ಲವೇ ತುಕ್ಕು ಹಿಡಿದು ಮೂಲೆ ಸೇರಿದ್ದ ಅಸಗಳನ್ನೋ ಹೆಕ್ಕಿ ಹೆಕ್ಕಿ ಬಿಸಾಡುತ್ತಿದ್ದಾರೆ.
ಹೀಗಾಗಿ ಮುಡಾ ಪ್ರಕರಣದ ವಿಷಯದಲ್ಲಿ ಹೈಕೋರ್ಟ್ ಸಿದ್ದರಾಮಯ್ಯ ಅವರಿಗೆ ರಿಲೀಫ್ ನೀಡಿದರೂ ಗವರ್ನರ್ ಗೆಹ್ಲೋಟ್ ಸುಮ್ಮನಿರುವುದಿಲ್ಲ‌ ಎಂಬುದು ಕೈ ಪಾಳಯದ ಅನುಮಾನ. ಇಂಥ ಅನುಮಾನಗಳ ಬೆನ್ನ ಕೈ ಪಾಳಯಕ್ಕೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಎದ್ದೆದ್ದು ಕಾಣುತ್ತಿರುವುದು ಮಾತ್ರ ಸುಳ್ಳಲ್ಲ.
ಆರ್‌ಸಿಬಿಗೆ ಈಶ್ವರಪ್ಪ ಕ್ಯಾಪ್ಟನ್
ಇನ್ನು ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮುನಿಸಿಕೊಂಡು ಬಿಜೆಪಿ ಪಾಳಯ ತೊರೆದಿರುವ ಹಿರಿಯನಾಯಕ ಕೆ.ಎಸ್.ಈಶ್ವರಪ್ಪ ಆರ್‌ಸಿಬಿ ಕ್ಯಾಪ್ಟನ್ ಆಗಲಿದ್ದಾರೆ. ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟುವಮೂಲಕ ಯಡಿಯೂರಪ್ಪ ಪಾಳಯವನ್ನು ನಡುಗಿಸಿದ್ದ ಈಶ್ವರಪ್ಪ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾಮಾತು ಕೇಳಿ ಅದನ್ನು ಬರ್ಖಾಸ್ತು ಮಾಡಿದ್ದರು. ಆದರೆ ಈಗ ಬಿಜೆಪಿಯಿಂದ ಹೊರಗಿರುವ ಈಶ್ವರಪ್ಪ ಹೊಸ ಸಂಘಟನೆ ಕಟ್ಟುವ ತಯಾರಿಯಲ್ಲಿದ್ದಾರೆ. ಅಂದುಕೊಂಡಂತೆ ನಡೆದರೆ ನವೆಂಬರ್ ೨೦ರಂದು ಬಾಗಲಕೋಟೆಯಲ್ಲಿ ಈಶ್ವರಪ್ಪ ಆರ್‌ಸಿಬಿ ಕ್ಯಾಪ್ಟನ್ ಆಗುವುದು ನಿಶ್ಚಿತ. ಅಂದ ಹಾಗೆ ಆರ್ ಸಿಬಿ ಎಂದರೆ ‘ರಾಯಣ್ಣ-ಚನ್ನಮ್ಮ ಬ್ರಿಗೇಡ್’ ಎಂದರ್ಥ. ಹೀಗೆ ರಾಯಣ್ಣ ಚನ್ನಮ್ಮ ಬ್ರಿಗೇಡ್ ಕಟ್ಟಲು ಈಶ್ವರಪ್ಪ ಅವರಿಗೆ ಪ್ರೇರಣೆ ನೀಡಿದವರು ಪಂಚಮಸಾಲಿಮಠಾಽಶರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ. ಅವರ ಪ್ರಕಾರ, ಬಡವರು ಎಲ್ಲ ಸಮುದಾಯಗಳಲ್ಲೂಇzರೆ. ಹಿಂದುಳಿದವರು, ದಲಿತರು ಮಾತ್ರವಲ್ಲ, ಬ್ರಾಹ್ಮಣರು, ಲಿಂಗಾಯತರಲ್ಲೂ ಇದ್ದಾರೆ.
ಹೀಗಾಗಿ ಎಲ್ಲ ಜಾತಿಗಳ ಬಡವರಿಗಾಗಿ ಆರ್‌ಸಿಬಿ ಕಟ್ಟಿ ಅಂತ ಸ್ವಾಮೀಜಿಗಳು ಹೇಳಿದ್ದಾರೆ. ಅವರು ಈ ಮಾತು ಹೇಳುವಾಗ ಈಶ್ವರಪ್ಪ ಅವರ ಜತೆಯಲ್ಲಿ ಬಿಜೆಪಿಯ ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ಇದ್ದುದು ವಿಶೇಷ. ಅರ್ಥಾತ್, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ವಿರೋಽಸುವ ಶಕ್ತಿಗಳು ಒಂದು ದೊಡ್ಡ ವೇದಿಕೆಯನ್ನು ಸೃಷ್ಟಿಸಿಕೊಳ್ಳುತ್ತಿವೆ.
ಈ ವೇದಿಕೆಗೆ ದೊಡ್ಡ ಮಟ್ಟದ ಪವರ್ ಸಿಗಲಿದೆ ಅಂತ ಹೇಳಲು ಮತ್ತೊಂದು ಕಾರಣವೂ ಇದೆ. ಅದೆಂದರೆ ರಾಜ್ಯಬಿಜೆಪಿಯಲ್ಲಿ ನಡೆದ ಇತ್ತೀಚಿನ ಬೆಳವಣಿಗೆ. ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ಬಿಜೆಪಿ ವರಿಷ್ಠರು ವಿಜಯೇಂದ್ರಅವರ ಬೆನ್ನಿಗೆ ನಿಂತಿzರೆ. ತಮ್ಮ ಸುತ್ತ ಆಪ್ತರನ್ನಷ್ಟೇ ಇಟ್ಟುಕೊಂಡು ವಿಜಯೇಂದ್ರ ಆಟವಾಡುತ್ತಿದ್ದಾರೆ ಅಂತಭಿನ್ನರು ಅದೆಷ್ಟೇ ಕಂಪ್ಲೇಂಟ್ ಕೊಡಲಿ, ಪಕ್ಷದ ವರಿಷ್ಠರು ಕ್ಯಾರೇ ಅನ್ನುತ್ತಿಲ್ಲ.
ಬದಲಿಗೆ ‘ವಿಜಯೇಂದ್ರ ವಿರುದ್ಧ ಧ್ವನಿ ಎತ್ತಬೇಡಿ’ ಅಂತ ಫರ್ಮಾನು ಹೊರಡಿಸುತ್ತಿದ್ದಾರೆ. ಪರಿಣಾಮ? ವಿಜಯೇಂದ್ರ ವಿರುದ್ಧ ಹೋರಾಡಲು ಬಿಜೆಪಿಯ ಅತೃಪ್ತರಿಗೆ ಒಂದು ದೊಡ್ಡ ವೇದಿಕೆ ಬೇಕಾಗಿದೆ. ರಾಯಣ್ಣ-ಚನ್ನಮ್ಮ ಬ್ರಿಗೇಡ್ ಯಾಕೆ ಬಲಿಷ್ಠವಾಗಲಿದೆ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿ. ಹೀಗಾಗಿ ಈ ನಾಯಕರ ಬೆಂಬಲ ದೊಂದಿಗೆ ನವೆಂಬರ್ 20ರಂದು ತಲೆ ಎತ್ತಲಿರುವ ಆರ್‌ಸಿಬಿಯು ಬಿಜೆಪಿ ವರಿಷ್ಠರ ಪಾಲಿಗೆ ತಲೆನೋವುತರುವು ದಂತೂ ಗ್ಯಾರಂಟಿ.
ಮಿತ್ರಕೂಟದ ವಿರುದ್ಧ ನಾಲ್ಕನೇ ಶಕ್ತಿ?ಇನ್ನು ಸೆಪ್ಟೆಂಬರ್ ೨೨ರ ಭಾನುವಾರ ಬೆಂಗಳೂರಿನ ಏಟ್ರಿಯಾ ಹೋಟೆಲಿನಲ್ಲಿ ವಿವಿಧ ಪಕ್ಷ ಮತ್ತು ಸಂಘಟನೆಗಳಮುಖಂಡರು ಮಹತ್ವದ ಸಭೆ ನಡೆಸಿದ್ದಾರೆ. ಜೆಡಿಎಸ್‌ನ ಮಾಜಿ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಕನ್ನಡ ಚಳವಳಿನಾಯಕ ನಾರಾಯಣಗೌಡ, ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್, ಬಹುಜನ ಸಮಾಜ ಪಕ್ಷದ ಗೋಪಿ ಸೇರಿದಂತೆ ಹಲ ಪ್ರಮುಖರು ಭಾಗವಹಿಸಿದ್ದ ಈ ಸಭೆಯಲ್ಲಿ ಹೊಸ ರಾಜಕೀಯ ಪಕ್ಷದ ಸ್ಥಾಪನೆ ಬಗ್ಗೆ ಒಲವು ವ್ಯಕ್ತವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಲ ಕ್ಷೀಣಿಸುತ್ತಿದ್ದು ಬಿಜೆಪಿ-ಜೆಡಿಎಸ್ ಮಿತ್ರಕೂಟದ ಶಕ್ತಿ ಹೆಚ್ಚಾಗುತ್ತಿದೆ. ಅದನ್ನು ತಡೆಯಲು ಕಾಂಗ್ರೆಸ್ ಪಕ್ಷವೊಂದರಿಂದ ಸಾಧ್ಯವಿಲ್ಲ. ಹೇಗಿದ್ದರೂ ಕನ್ನಡ ಪರ ಸಂಘಟನೆ, ರೈತ ಸಂಘಟನೆಗಳ ಒಂದು ಕೋಟಿಯಷ್ಟು ಸದಸ್ಯರಿದ್ದಾರೆ.
ಉಳಿದಂತೆ ಎಲ್ಲರೂ ಸೇರಿದರೆ ರಾಜ್ಯದ 70 ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು. ಹೀಗಾಗಿ ಹೊಸ ಪಕ್ಷ ಕಟ್ಟೋಣ ಅಂತ ಸಭೆಯಲ್ಲಿದ್ದ ನಾಯಕರು ಹೇಳಿದ್ದಾರೆ. ಮೂಲಗಳ ಪ್ರಕಾರ, ಈ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಅಕ್ಟೋ ಬರ್ ತಿಂಗಳಲ್ಲಿ ಮತ್ತೊಂದು ಸಭೆ ನಡೆಸಲಿದ್ದಾರೆ. ಈ ಸಭೆಯ ನಂತರ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ಮಿತ್ರಕೂಟದ ಶಕ್ತಿ ಕುಗ್ಗಿಸಲು ನಾಲ್ಕನೇ ಶಕ್ತಿ ತಲೆ ಎತ್ತಲಿದೆ.
ಲಾಸ್ಟ್ ಸಿಪ್:ಈ ಮಧ್ಯೆ ರಾಜ್ಯ ಕಾಂಗ್ರೆಸ್‌ನ ಹಿರಿಯ‌ ನಾಯಕರೊಬ್ಬರು ಪಕ್ಷದ ಉಸ್ತುವಾರಿ ಹೊಣೆ ಹೊತ್ತಿರುವರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದರಂತೆ. ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕದ ಬೆಳವಣಿಗೆಗಳ ಬಗ್ಗೆ ಚರ್ಚಿಸುತ್ತಾ, ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಈ ನಾಯಕರು ಕೇಳಿದ್ದಾರೆ, ‘ಸರ್,ವರಿಷ್ಠರು ಹೇಳಿದ ಪ್ರಕಾರ ಈಗಾಗಲೇ ಸಂಪುಟ ಪುನರ್ ರಚನೆ ಪ್ರಕ್ರಿಯೆ ಮುಗಿಯಬೇಕಿತ್ತು.
ಇನ್ ಫ್ಯಾಕ್ಟ್‌ ಸಿದ್ದರಾಮಯ್ಯ ಅವರ ಸಂಪುಟದಲ್ಲಿರಬೇಕಿದ್ದ ಮಿನಿಮಮ್ ಎರಡು ಡಜನ್‌ನಷ್ಟು ನಾಯಕರು ಹೊರಗಿದ್ದಾರೆ. ಈಗ ಸಂಪುಟದಲ್ಲಿರುವ ಹಲವರು ನಿಷ್ಕ್ರಿಯರಾಗಿದ್ದಾರೆ. ಹೀಗಾಗಿ ಸರಕಾರಕ್ಕೆ ಇಮೇಜು ಬರಬೇಕೆಂದರೆ ಅರ್ಹರಿಗೆ ಮಂತ್ರಿಗಿರಿ ಸಿಗಬೇಕು ಸರ್’ ಎಂದಿದ್ದಾರೆ. ಈ ನಾಯಕರಾಡಿದ ಮಾತನ್ನು ಮೌನವಾಗಿಕೇಳಿಸಿಕೊಂಡ ಸುರ್ಜೇವಾಲ, ‘ನೀವು ಹೇಳಿದ್ದು ನಿಜ.
ಆದರೆ ಮುಖ್ಯಮಂತ್ರಿಗಳ ವಿರುದ್ಧ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ ಪ್ರಕರಣ ಜೀವಂತವಾಗಿದೆ.ಅದು ಇತ್ಯರ್ಥವಾಗದೆ ಸಂಪುಟ ಪುನರ್‌ರಚನೆಯಂಥ ಕೆಲಸಕ್ಕೆ ಕೈ ಹಾಕುವುದು ಹೇಗೆ?’ ಎಂದಿದ್ದಾರೆ. ಹಾಗೆಯೇಮುಂದುವರಿದು, ‘ಹೇಗಿದ್ದರೂ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಬರುತ್ತಿದೆ. ಕರ್ನಾಟಕದಲ್ಲೂ 3 ಕ್ಷೇತ್ರಗಳ ಉಪಚುನಾವಣೆ ಇದೆ. ಅಲ್ಲಿಯವರೆಗೆ ಏನು ಮಾಡಲು ಸಾಧ್ಯ? ಹೀಗಾಗಿ ಡಿಸೆಂಬರ್ ತನಕ ಸಂಪುಟ ಪುನರ್‌ರಚನೆಕಷ್ಟ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಯಾವಾಗ ಸುರ್ಜೇವಾಲಾ ಹೀಗೆ ಹೇಳಿದರೋ, ಈ ನಾಯಕರು,‘ಸಿದ್ದರಾಮಯ್ಯ ಪ್ರಕರಣ ಇತ್ಯರ್ಥವಾದರೂ ಅಷ್ಟೇ, ಆಗದಿದ್ದರೂ ಅಷ್ಟೇ. ಸಂಪುಟ ಪುನರ್‌ರಚನೆ ಮಾತ್ರಗಗನಕುಸುಮವೇ ಸೈ’ ಅಂತ ಹೇಳತೊಡಗಿದ್ದಾರೆ.
ಇದನ್ನೂ ಓದಿ:   : ಮೌನವಾಗಿರಲು ನಿರ್ಧರಿಸಿದ ಯತ್ನಾಳ್‌