ಈಗ ರಾಜರು ಇಲ್ಲ, ಆದರೆ ಪ್ರಜೆಸತ್ತೆೆ ಇದೆ ಎನ್ನುವುದು ಅನುಮಾನ
ಬೇಳೂರು ರಾಘವ ಶೆಟ್ಟಿ, ಉಡುಪಿ
ಈ ಎಪ್ಪತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಹಿಂದುಳಿದರನ್ನು ಮುಖ್ಯವಾಹಿನಿಗೆ ತರಲು ಸರಕಾರ ಸಶಕ್ತವಾಗಿಲ್ಲವಾದರೆ ಇನ್ನು ಎಷ್ಟು ಕಾಲ ಬೇಕಾದೀತು? ಈ ಅವಧಿಯಲ್ಲಿ ನಿರೀಕ್ಷಿತ ಅಭಿವೃದ್ಧಿಿಯನ್ನು ಸಾಧಿಸಲು ಅಸಾಧ್ಯವಾದುದಕ್ಕೆೆ ತೃಪ್ತಿಿಕರ ವಿವರಣೆ
ಕೊಡಬಲ್ಲವರಿದ್ದಾಾರೆಯೇ? ಸಾರ್ವಜನಿಕರು ಯಾರನ್ನು ಕೇಳಬೇಕು?
ಭಾರತ ಪ್ರಜಾಸತ್ತಾಾತ್ಮಕ ಆಡಳಿತವನ್ನು ಒಪ್ಪಿಿಕೊಂಡ ರಾಷ್ಟ್ರ. ಪ್ರಜಾಸತ್ತೆೆ ಎಂದರೆ, ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂದರ್ಥ. ಹೀಗೆ ವ್ಯಾಾಖ್ಯಾಾನಿಸಲಾದ ಪ್ರಜೆಸತ್ತೆೆಯಲ್ಲಿ ಎಲ್ಲ ಪ್ರಜೆಗಳನ್ನು ಒಂದಾಗಿ, ಒಂದು ಗುಂಪಾಗಿ ಕಾಣಲಾಗಿದೆ. ಜಾತಿ, ಮತಗಳ ಭೇದವಿಲ್ಲ. ಸಮಾನತೆಯೇ ಮೂಲ ತತ್ವ. ಆರ್ಥಿಕ, ಶೈಕ್ಷಣಿಕ, ಹಾಗೂ ಸಾಮಾಜಿಕ ಭಿನ್ನತೆಯ ನಡುವೆಯೂ ಆಡಳಿತಾತ್ಮಕವಾಗಿ ಸಮಾನತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾದ ಸಂವಿಧಾನವನ್ನು ಹೊಂದಿನ ದೇಶ ನಮ್ಮದು. ಪರಂತು ಜಾತಿ, ಮತ ಹಾಗೂ ಧರ್ಮ ಇತ್ಯಾಾದಿಗಳಿಗೆ ಅವಕಾಶವಿಲ್ಲವೆಂತಲ್ಲ, ನಮ್ಮ ಸಂವಿಧಾನದ ಪ್ರಸ್ತಾಾವನೆಯಲ್ಲಿಯೇ ಸ್ವತಂತ್ರ ಚಿಂತನೆ, ಅಭಿವ್ಯಕ್ತಿಿ, ನಂಬಿಕೆ, ನಿಷ್ಠೆೆ ಮತ್ತು ಪೂಜಾದಿ ವ್ರತಾಚರಣೆಗೆ ಮುಕ್ತ ಅವಕಾಶ ಕಲ್ಪಿಿಸುವ ಸಂಹಿತೆಯನ್ನು ಅರ್ಪಿಸಿಕೊಂಡಿದ್ದೇವೆ ಎಂಬ ಉಲ್ಲೇಖವಿದೆ. ಇದು ಪ್ರಜೆಗಳಿಗೆ ಸಂವಿಧಾನ ಕೊಡಮಾಡಿದ ಅಧಿಕಾರ ಅಥವಾ ಅವಕಾಶ. ಅಂದರೆ ಪ್ರಜೆಗಳು ಅವರವರ ಜಾತಿ, ಮತ ಹಾಗೂ ಧರ್ಮಗಳನ್ನು ಪಾಲಿಸಬಹುದಾಗಿದೆ. ಆದರೆ ಸರಕಾರ ಮಾತ್ರ ನಿರಪೇಕ್ಷ. ತಟಸ್ಥ. ಪ್ರಜಾಸತ್ತೆೆಯಲ್ಲಿ ಸರಕಾರ ಧರ್ಮ ನಿರಪೇಕ್ಷ. ಅನುಸರಣಿಯಲ್ಲಿ ಇತರರಿಗೆ ಆತಂಕವಾಗುವಲ್ಲಿ ಮಾತ್ರ ಸರಕಾರದ ಹಸ್ತಕ್ಷೇಪ. ಇದು ನಮ್ಮ ಸಂವಿಧಾನದ ಮೂಲಾಶಯ.
ಸಮಾನತೆಯ ಸಂವಿಧಾನ ಹೊಂದಿದ ಮಾತ್ರಕ್ಕೆೆ ಎಲ್ಲರೂ ಸಮಾನರಾಗಿದ್ದಾಾರೆ ಎಂದರ್ಥವಲ್ಲ. ಅದು ಉದ್ದೇಶ. ವಾಸ್ತವದಲ್ಲಿ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಸಮಾನತೆಯನ್ನು ಕಾಣುತ್ತಿಿದ್ದೇವೆ. ಕೆಲವರು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಕೊರತೆಯುಳ್ಳವರಾಗಿದ್ದಾಾರೆ. ಅವರುಗಳನ್ನು ಹಿಂದುಳಿದವರು ಎಂದು ಪರಿಗಣಿಸಲಾಗಿದೆ. ಈ ಹಿಂದುಳಿದವರನ್ನು ಮುಖ್ಯವಾಹಿನಿಗೆ ತಂದಾಗ ಮಾತ್ರ ಸಮಾನತೆ ಪ್ರಾಾಪ್ತವಾಗುತ್ತದೆ. ಈ ಬಗ್ಗೆೆ ಕ್ರಾಾಂತಿಕಾರಿ ಯೋಜನೆಗಳನ್ನು ರೂಪಿಸಬೇಕಾದ ಜವಾಬ್ದಾಾರಿ ಸರಕಾರದ್ದು. ಈ ಅವಸರದಲ್ಲಿ ಹಿಂದುಳಿದಿರುವಿಕೆಯನ್ನು ಗುರುತಿಸಲು ಜಾತಿಯನ್ನು ಬಳಸಲಾಯಿತು. ಇದೊಂದು ಪ್ರಮಾದ. ಯಾಕೆಂದರೆ, ಎಲ್ಲ ತರದ ಹಿಂದುಳಿದಿರುವಿಕೆಗೂ ಆರ್ಥಿಕ ದೌರ್ಬಲ್ಯವೇ ಮೂಲ ಕಾರಣ. ಉಳ್ಳವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರು. ಒಳ್ಳೆೆ ಶಿಕ್ಷಣ ಸಿಕ್ಕಿಿದವರು ಸಮಾಜದಲ್ಲಿ ಗಣ್ಯ ವ್ಯಕ್ತಿಿ ಎಂದೆನಿಸಿದರು. ಆದರೆ ಆ ಭಾಗ್ಯ ಅಥವಾ ಅವಕಾಶ ಆ ವರ್ಗದ ಬಹುತೇಕರಿಗೆ ಇರಲಿಲ್ಲ. ಅವರು ಆರ್ಥಿಕವಾಗಿ ಕಡು ಬಡವರಾಗಿದ್ದರು. ಹಾಗಾಗಿ ಹಿಂದುಳಿದವರಾಗಿದ್ದರು. ಈ ಹಿಂದುಳಿದವರನ್ನು ಸಮಾನತೆಗೆ ಅಥವಾ ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ಆ ವರ್ಗಕ್ಕೆೆ ಹೆಚ್ಚು ಆರ್ಥಿಕ ಸಬಲೀಕರಣದ ಕಾರ್ಯಕ್ರಮ ರೂಪಿಸಿದ್ದರೆ ಸಾಕಿತ್ತು. ಜಾತಿಯನ್ನು ಮುನ್ನೆೆಲೆಗೆ ತರಲೇಬೇಕಾದ ಅಗತ್ಯವಿರಲಿಲ್ಲ. ಆದರೆ ಸ್ವಾಾತಂತ್ರ್ಯಾಾನಂತರದ ಮೊದಲ ಸರಕಾರ ಜಾತಿ ಆಧರಿಸಿ ಹಿಂದುಳಿದವರ ಬಲವರ್ಧನೆಗೆ ಯೋಜನೆ ರೂಪಿಸಿತು.
ಹಿಂದುಳಿದವರ ಅಭ್ಯುದಯಕ್ಕೆೆ ಜಾತಿ ಆಧರಿಸಿ ರೂಪಿಸಿದ ಯೋಜನೆಗಳು ನಮ್ಮ ರಾಜಕೀಯ ಪಕ್ಷಗಳಿಗೆ ವರವಾಯ್ತು. ಮೊದಲ ವರ್ಗೀಕರಣದಂತೆ ಎಸ್.ಸಿ. ಮತ್ತು ಎಸ್.ಟಿ. ಗಳು ಮಾತ್ರ ಹಿಂದುಳಿದವರು. ಮಂಡಲ ಆಯೋಗದ ವರದಿಯ ಬಳಿಕ ಓಬಿಸಿ ಎಂಬ ಜಾತಿ ಸಮುಚ್ಚಯದ ವರ್ಗವೊಂದು ಹಿಂದುಳಿದಿರುವಿಕೆಗೆ ಸೇರಿಕೊಂಡಿತು. ಹಿಂದುಳಿದವರ ಅಭ್ಯುದಯಕ್ಕಾಾಗಿ ರೂಪಿಸಿದ ಯೋಜನೆಯ ಪ್ರಯೋಜನ ಸಾರ್ವಜನಿಕ ನೇಮಕಾತಿಯ ರೂಪದಲ್ಲಿದ್ದುದು, ಕ್ರಮೇಣ ಎಲ್ಲ ಕ್ಷೇತ್ರಗಳಿಗೂ ಉದಾ: ಲೋಕೋಪಯೋಗಿ ಕಾಮಗಾರಿ ವಿತರಣೆಯ ತನಕ ವಿಸ್ತರಿಸಿತು. ಬೇಸರದ ವಿಷಯವೆಂದರೆ ಎಪ್ಪತ್ತು ವರ್ಷಗಳಾದರೂ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲಿಕ್ಕಾಾಗಲಿಲ್ಲ. ಹಿಂದುಳಿದವರೆನ್ನಿಿಸಿಕೊಂಡವರು ಇನ್ನೂ ಹಿಂದುಳಿದವರಾಗಿದ್ದಾಾರೆ. ಇನ್ನೂ ಖೇದದ ವಿಚಾರವೆಂದರೆ ಅವರ ಸಂಖ್ಯೆೆಯನ್ನು ಹೆಚ್ಚಿಿಸಲು ನಮ್ಮ ರಾಜಕಾರಣಿಗಳು ಪಣ ತೊಟ್ಟಿಿದ್ದಾಾರೆ. ಜಾತಿ ಸಮೀಕ್ಷೆ ಜಾರಿಗೊಳಿಸಬೇಕು ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿಿ ಮಾನ್ಯ ಸಿದ್ಧರಾಮಯ್ಯನವರು ಆಗ್ರಹಿಸಿದ್ದಾಾರೆ. ಅಲ್ಲದೆ ಮೀಸಲಾತಿ ಪ್ರಮಾಣ ಶೇ. 50ನ್ನು ಹೆಚ್ಚಿಿಸಬೇಕು ಎಂದು ಪ್ರತಿಪಾದಿಸಿದ್ದಾಾರೆ. ಮುಂದುವರಿದು ವಾಲ್ಮೀಕಿ ಜಯಂತಿಯಂದು ಸಂದರ್ಭೋಚಿತ ಭಾಷಣ ಮಾಡಿದ ರಾಯರು ಎಸ್.ಟಿ. ಮೀಸಲು ಪ್ರಮಾಣವನ್ನು ಅವರ ಜನಸಂಖ್ಯೆೆಗನುಗುಣವಾಗಿ ಶೇ. 7.5ಕ್ಕೆೆ ಹೆಚ್ಚಿಿಸಬೇಕು ಎಂದು ಬಲವಾಗಿ ಬ್ಯಾಾಟ್ ಬೀಸಿದ್ದಾಾರೆ.
ಜನಸಂಖ್ಯೆೆ ಹೆಚ್ಚಾಾಗಿರುವುದು ಸಹಜ. ಹಾಗೆ ಆಯಾ ವರ್ಗಗಳ ಜನಸಂಖ್ಯೆೆಯೂ ಹೆಚ್ಚಾಾಗಿದೆ ಎನ್ನುವುದು ಅಷ್ಟೇ ಸಹಜ. ಹಾಗಾದರೆ ಅಭಿವೃದ್ಧಿಿ ಏನೂ ಆಗಿಲ್ಲವೇ? ಪರಿಣಾಮಕಾರಿ ಜನಸಂಖ್ಯಾಾ ನಿಯಂತ್ರಣ ಯೋಜನೆ ಮೂಲಕ ಏರಿಕೆಯ ಪ್ರಮಾಣ ಕಡಿಮೆಯಾಗುತ್ತಿಿದೆಯಾದರೂ ಒಟ್ಟು ಜನಸಂಖ್ಯೆೆ ಅಧಿಕಗೊಳ್ಳುತ್ತಿಿದೆ ಎನ್ನುವುದು ಕಣ್ಣಿಿಗೆ ಕಾಣುವ ಸತ್ಯ. ಹಾಗಾದರೆ ಈ ಅವಧಿಯಲ್ಲಿ ಏನೂ ಅಭಿವೃದ್ಧಿಿ ಸಾಧಿಸಲಾಗಲಿಲ್ಲವೇ? ಅದರ ಪ್ರಮಾಣ ಎಷ್ಟು? ಕಿಂಚಿತ್ತಾಾದರೂ ಇರುವುದಾದರೆ ಮೀಸಲಾತಿಯ ಪ್ರಮಾಣ ಹೆಚ್ಚಿಿಸಬೇಕಾದ ಅಗತ್ಯ ಉಂಟೇ? ಮೀಸಲಾತಿಯ ಪ್ರಮಾಣ ಕಡಿಮೆಯಾಗುತ್ತಲೇ ಇರಬೇಕಲ್ಲವೇ! ಈ ಎಪ್ಪತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಹಿಂದುಳಿದರನ್ನು ಮುಖ್ಯವಾಹಿನಿಗೆ ತರಲು ಸರಕಾರ ಸಶಕ್ತವಾಗಿಲ್ಲವಾದರೆ ಇನ್ನು ಎಷ್ಟು ಕಾಲ ಬೇಕಾದೀತು? ಈ ಅವಧಿಯಲ್ಲಿ ನಿರೀಕ್ಷಿತ ಅಭಿವೃದ್ಧಿಿಯನ್ನು ಸಾಧಿಸಲು ಅಸಾಧ್ಯವಾದುದಕ್ಕೆೆ ತೃಪ್ತಿಿಕರ ವಿವರಣೆ ಕೊಡಬಲ್ಲವರಿದ್ದಾಾರೆಯೇ? ಸಾರ್ವಜನಿಕರು ಯಾರನ್ನು ಕೇಳಬೇಕು? ಯಾರನ್ನು ನಂಬಬೇಕು. ಜಾತಿ ಆಧರಿತ ಮೀಸಲಾತಿಯನ್ನು ವಿಸ್ತರಿಸಬೇಕು ಎಂದು ಪ್ರತಿಪಾದಿಸುವ. ಕಳೆದ ಕೆಲವು ದಶಕಗಳಿಂದ ರಾಜಕೀಯದಲ್ಲಿದ್ದ ಮಾನ್ಯ ಸಿದ್ಧರಾಮಯ್ಯನವರು ಕಳೆದ ಎಪ್ಪತ್ತು ವರ್ಷಗಳ ಸತತ ಪ್ರಯತ್ನದಿಂದಲೂ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವಲ್ಲಿ ವಿಫಲವಾದ ಸರಕಾರದ ಭಾಗವಾಗಿದ್ದುದಕ್ಕೆೆ ಆತ್ಮಾಾವಲೋಕನ ಮಾಡಿಕೊಳ್ಳುವುದು ವಿಹಿತ.
ಇನ್ನೂ ಬೇಸರದ ಸಂಗತಿ ಎಂದರೆ ಪ್ರಸಕ್ತ ಕರ್ನಾಟಕದ ಬಿಜೆಪಿ ನೇತೃತ್ವದ ಸರಕಾರ ತನ್ನದಲ್ಲದ ವಿಚಾರಕ್ಕೆೆ ಕೈ ಹಾಕುತ್ತಿಿರುವುದು. ಸಾಮಾನ್ಯರಿಗೆ ಸರಕಾರದಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಭರವಸೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಘೋಷಿಸಿದ್ದಾಾರೆ. ಜಾತಿ ಭೇದವಿಲ್ಲದೆ ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರು, ಸಾಮಾನ್ಯರು ಆರ್ಥಿಕ ಹೊರೆಯಿಲ್ಲದೆ ಹಿಂದು ಸಂಪ್ರದಾಯದಂತೆ ಸರಳವಾಗಿ ವಿವಾಹವಾಗಲು ಅನುಕೂಲವಾಗುವಂತೆ ಇಲಾಖೆಯಿಂದಲೇ ಸಾಮೂಹಿಕ ವಿವಾಹ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ ವಿಚಾರ ಪತ್ರಿಿಕೆಯಲ್ಲಿ ಪ್ರಕಟವಾಗಿದೆ. ಮದುವೆ ಒಂದು ಧಾರ್ಮಿಕ ವಿಧಿ. ಈ ವಿಚಾರದಲ್ಲಿ ಪ್ರಜಾಸತ್ತಾಾತ್ಮಕವಾಗಿ ಆಡಳಿತದಲ್ಲಿರುವ ಸರಕಾರ ತಟಸ್ಥವಾಗಿರಬೇಕೆಂಬ ಸಂವಿಧಾನದ ಆಶಯವನ್ನು ಲೇಖನದ ಮೊದಲ ಭಾಗದಲ್ಲಿ ಹೇಳಲಾಗಿದೆ. ಸರಕಾರ ಆರ್ಥಿಕ ನೆರವನ್ನು ನೀಡುವುದೂ ಸಂವಿಧಾನದ ಆಶಯಕ್ಕೆೆ ವಿರೋಧವಾದ ನಡೆ. ಇನ್ನು ಇಲಾಖೆಯ ಮೂಲಕ ಸಾಮೂಹಿಕ ವಿವಾಹವನ್ನು ಏರ್ಪಡಿಸುವುದು. ಮುಂದುವರಿದು ‘ಹಿಂದುಗಳಿಗೆ’ ಎಂದಿರುವುದು ಜಾತ್ಯಾಾತೀತ ಸ್ವರೂಪದ ನಮ್ಮ ಆಡಳಿತ ವ್ಯವಸ್ಥೆೆಗೆ ತದ್ವಿಿರುದ್ಧವಾಗಿದ್ದು, ಅಂಥ ಹೇಳಿಕೆಯನ್ನು ಹಿರಿಯ ರಾಜಕಾರಣಿ ಹಾಗೂ ಹಾಲಿ ಸಚಿವರಾಗಿದ್ದವರು ನೀಡಿರುವುದು ಆಶ್ಚರ್ಯ.
ಈ ಎಲ್ಲ ವಿದ್ಯಮಾನಗಳನ್ನು ಗಮನಿಸುವಾಗ ಹಿಂದುಳಿದಿರುವವರ ಅಭಿವೃದ್ಧಿಿಯನ್ನು ಸಾಧಿಸಿ ಮುಖ್ಯವಾಹಿನಿಗೆ ಅವರನ್ನು ತಂದು ಸಂವಿಧಾನದ ಆಶಯವಾದ ಸಮಾನತೆಯನ್ನು ಸ್ಥಿಿರಗೊಳಿಸುವ ಉದ್ದೇಶ ಸರಕಾರಕ್ಕಿಿಲ್ಲ ಎಂದು ವ್ಯಕ್ತವಾಗುತ್ತದೆ. ಬದಲಾಗಿ ಜಾತಿ, ಮತ, ಧರ್ಮ ಇತ್ಯಾಾದಿಗಳ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸುವ ಹಾಗೂ ಅಸಮಾನತೆಯನ್ನು ಸ್ಥಿಿರಗೊಳಿಸುವ ಹುನ್ನಾಾರದಲ್ಲಿ ರಾಜಕಾರಣಿಗಳಿದ್ದಾಾರೆ ಎಂದೆನಿಸುತ್ತದೆ. ಹಾಗಾಗಿ ನಮ್ಮಲ್ಲಿ ನಿರಂಕುಶ ಪ್ರಭುತ್ವವಿಲ್ಲವೆಂಬುದೇನೋ ನಿಜವಾದರೂ ಪ್ರಜಾಪ್ರಭುತ್ವ ಇದೆ ಎಂದು ಎದೆ ತಟ್ಟಿಿ ಹೇಳುವುದು ಕಷ್ಟ. ಸಾರ್ವಜನಿಕರು ಈಗ ಗಂಭೀರವಾಗಿ ಚಿಂತಿಸುವ ಕಾಲ ಸನ್ನಿಿಹಿತವಾಗಿದೆ.