ಆಳುಗರ ಕೈಗೆ ಸಿಲುಕಿ ನಲುಗಿದೆ ಇತಿಹಾಸ !
ಡ್ಯಾನಿ ಪಿರೇರಾ, ಅಧ್ಯಾಪಕ, ಮೈಸೂರು
ಇತಿಹಾಸಕಾರ ಸರಕಾರದ ಮರ್ಜಿಗೆ ಸಿಲುಕಿ ಅಥವಾ ಇತಿಹಾಸಕಾರನ ಪೂರ್ವಗ್ರಹ ಚಿಂತನೆಗಳ ಕರಿನೆರಳು ಐತಿಹಾಸಿಕ ವ್ಯಕ್ತಿಿಗಳ ಮೇಲೂ ಬಿದ್ದಿದೆ ಎನ್ನುವುದು ರುಜುವಾತ್ತಾಾಗಿದೆ ಎಂದಾಯಿತು. ತಿರುಚಲ್ಪಟ್ಟ ಇತಿಹಾಸದ ವಿವಾದಿತ ಅಂಶಗಳು ಸಂಘರ್ಷದ ಹಾದಿ ಹಿಡಿದಿವೆ.
ಒಳ್ಳೆೆಯ ಕಾರಣಕ್ಕೆೆ ಕೆಲವು ಬಾರಿ ಕೆಟ್ಟ ಕಾರಣಕ್ಕಾಾಗಿ ಇತಿಹಾಸದಲ್ಲಿ ಗತಿಸಿ ಹೋದ ವ್ಯಕ್ತಿಿಗಳು ಆಗಾಗ ಮುನ್ನೆೆಲೆಗೆ ಬರುವುದುಂಟು. ಕೆಲವರಿಗಷ್ಟೇ ಆದರಣಿಯನಾಗಿದ್ದ ವಿವಾದಿತ ವ್ಯಕ್ತಿಿ ಟಿಪ್ಪುು ಕಳೆದ ಮೂರುನಾಲ್ಕು ವರ್ಷದಿಂದ ಅಂದಿನ ಕಾಂಗ್ರೆೆಸ್ಸಿಿನ ಸಿದ್ದರಾಮಯ್ಯರ ನೇತೃತ್ವ ಸರಕಾರದ ಟಿಪ್ಪುು ಜಯಂತಿಯನ್ನು ಸರಕಾರಿ ಜಯಂತಿ ಎಂದು ಘೋಷಿಸಿದೊಡನೆ ಚರ್ಚೆ ಹಾಗೂ ಸಂಘರ್ಷದ ವ್ಯಕ್ತಿಿಯಾದ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಟಿಪ್ಪುು ಜಯಂತಿ ನಿಷೇಧ ಮಾಡಿದಾಗ ಮತ್ತೆೆ ಸದ್ದು ಮಾಡಿದ್ದ ಟಿಪ್ಪುು ಸುಲ್ತಾಾನ್ ಈಗ ಆತನ ಬಗ್ಗೆೆ ಇರುವ ಪಠ್ಯ ವಿಷಯವನ್ನು ತೆಗೆದು ಹಾಕುವ ಬಗ್ಗೆೆ ಯೋಚಿಸುತ್ತಿಿರುವಾಗ ಮತ್ತೊೊಮ್ಮೆೆ ಟಿಪ್ಪುು ಕಾಂಗ್ರೆೆಸ್, ಬಿಜೆಪಿ ಪಕ್ಷಗಳ ಅಂಗಳದಲ್ಲಿ ಅವತರಿಸಿ ಬಿಟ್ಟಿಿದ್ದಾನೆ. ಟಿಪ್ಪುು ಕೆಲವರಿಗೆ ಲಾಭ ತರುವ ದೇಶಭಕ್ತನಾಗಿ ಕಂಡರೆ, ಮತ್ತೊೊಂದು ಗುಂಪಿಗೆ ಆತ ಮತಾಂಧ ತನ್ನ ಮತ ಪಂಥವನ್ನು ಅವಮಾನಿಸಿದ್ದಾನೆ ಎನ್ನುವ ಕಾರಣಕ್ಕೇ ವಿರೋಧ. ಈ ಎರಡೂ ಗುಂಪುಗಳಲ್ಲೂ ಅರ್ಧ ಸತ್ಯವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಾಗೆಯೇ ಇತಿಹಾಸದಲ್ಲಿಯೂ ಟಿಪ್ಪುುವಿನ ಪಾತ್ರ ಅಲ್ಲಗಳೆಯುವಂತಿಲ್ಲ. ಇತಿಹಾಸಕಾರರು ಆಳುವ ಸರಕಾರಗಳ ಮರ್ಜಿಗೆ ಸಿಲುಕಿ ಇತಿಹಾಸ ಬರೆದರೆ ದೇಶದಲ್ಲಿ ಇಂಥ ಸಂಘರ್ಷ ನಿರಂತರವಾಗಿರುತ್ತದೆ ಎಂಬುದಕ್ಕೇ ಟಿಪ್ಪುು ವಿವಾದ ಸಾಕ್ಷಿಯಾಗುತ್ತದೆ. ಸ್ವಾಾತಂತ್ರ್ಯ ಭಾರತದಲ್ಲಿ ಕೆಲ ಐತಿಹಾಸಿಕ ಮತ್ತು ಪೌರಾಣಿಕ ವ್ಯಕ್ತಿಿಗಳು ಹೇಗೆ ಅಪಹಾಸ್ಯಕ್ಕೆೆ ಮತ್ತೆೆ ಕೆಲವರು ವೈಭವೀಕರಣಕ್ಕೆೆ ಒಳಗಾಗಿದ್ದಾರೆ ಎನ್ನುವುದಕ್ಕೆೆ ಅನೇಕ ಉದಾಹರಣೆಗಳು ನಮಗೆ ಸಿಗುತ್ತವೆ.
ಮಹಮ್ಮದ್ ಘಜ್ನಿಿಯ ಆಟಾಟೋಪಕ್ಕೆೆ ಬಲಿಯಾದ ಸೋಮನಾಥ ಮಂದಿರ ಸರ್ದಾರ ಪಟೇಲರ ಸ್ವಧರ್ಮನಿಷ್ಠೆೆ, ಪರಂಪರೆಯ ಬಗೆಗಿನ ನಂಬಿಕೆಯ ಕಾರಣಕ್ಕೆೆ ಸೌರಾಷ್ಟ್ರದ ಸೋಮನಾಥ ಏಕತೆಯ ಸಂಕೇತವಾಗಿ ರೂಪುಗೊಂಡು ಅಲ್ಲಿ ಯಾವುದೇ ರಕ್ತಪಾತವಾಗದೇ ಸೋಮನಾಥ ಮಂದಿರ ಪುನರ್ ಪ್ರತಿಷ್ಠಾಾಪನೆಗಳ್ಳುತ್ತದೆ. ಅದೇ ಬಾಬರನ ಆಕ್ರಮಣಕ್ಕೆೆ ಒಳಗಾದ ಅಯೋಧ್ಯೆೆಯ ಶ್ರೀರಾಮ ತನ್ನ ಜನ್ಮ ಸ್ಥಾಾನದಲ್ಲೇ ಪರಕೀಯನಾಗಿದ್ದ. ನೆಹರೂ ಅವರ ಸೆಕ್ಯುಲರ್ ಆಘಾತಕ್ಕೆೆ ಆ ಮರ್ಯಾದಾ ಪುರುಷೋತ್ತಮನೂ ತತ್ತರಿಸುವಂತಾಗಿದ್ದು ಇತಿಹಾಸದಲ್ಲಿ ವಿಕೃತ ಚಿಂತನೆಯ ಪ್ರಭಾವದ ಪರಿಣಾಮದ ಫಲದಿಂದ. ಇಷ್ಟಕ್ಕೂ ಘಜ್ನಿಿ ಹಾಗೂ ಬಾಬರನ ನಡುವೆ ಅಂತ ವ್ಯತ್ಯಾಾಸವೇನೂ ಇರಲಿಲ್ಲ. ಇತಿಹಾಸದಲ್ಲಿ ಇಬ್ಬರೂ ಮತಾಂಧ ಅತಿಕ್ರಮಣಕಾರರೆಂದೇ ಕುಖ್ಯಾಾತಿ ಪಡೆದವರು. ಆದರೆ ಆಯಾ ಪ್ರದೇಶದ ಸಮಕಾಲಿನ ನಾಯಕರು ಬೇರೆ ಬೇರೆ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಪರಿಣಾಮ ಇಂದಿಗೂ ಭಾರತೀಯ ಸಮಾಜ ಅನೇಕ ಸಂಕಟಗಳನ್ನು ಎದುರಿಸುತ್ತಿಿದೆ. ಇತಿಹಾಸದ ಕಥನವನ್ನು ಪರಂಪರೆಗೆ ಹೊಂದಿಸಲು ಸೋತಾಗ ಇತಿಹಾಸ ವ್ಯಗ್ರರೂಪ ತಾಳುತ್ತದೆ ಮಾತ್ರವಲ್ಲ, ಅದು ಶತ ಶತಮಾನ ಕಾಲ ದೇಶವನ್ನು ಪೀಡನೆಗೆ ದೂಡುತ್ತದೆ. ನೆಹರೂರವರ ಅವಗಣನೆಗೆ ಒಳಗಾದ ಅಯೋಧ್ಯೆೆಯಲ್ಲಿ ರಾಮ ಅನಾಥನಾಗಿದ್ದು ಇತಿಹಾಸ ಪರಂಪರೆಯನ್ನು ಅರ್ಥೈಸುವಲ್ಲಿ ಮಾಡಿಕೊಂಡ ಪ್ರಮಾದದ ಫಲ. ಇದು ನೇತಾರನ ದೃಷ್ಟಿಿ, ನಂಬಿಕೆ ಆಚಾರ ವಿಚಾರಗಳು ಹೇಗೆ ಉಳಿದ ಸಾಮಾನ್ಯ ವ್ಯವಸ್ಥೆೆಯಲ್ಲಿ ಇತಿಹಾಸದ ಮೇಲೆ ಪ್ರಭಾವ ಬೀರುತ್ತದೆ ಎಂಬುದಕ್ಕೆೆ ಸಾಕ್ಷಿ. ಟಿಪ್ಪುುವಿನ ಕತೆಯೂ ಇದೇ ದಿಕ್ಕಿಿನಲ್ಲಿ ಸಾಗಿಸಲಾಗಿದೆ.
ಕಾಲಬಾಹ್ಯ ವಿಚಾರಗಳಿಗೆ ಜೋತು ಬಿದ್ದು, ಸ್ವಲಾಭಕ್ಕೆೆ ಅಧಿಕಾರದ ಚುಕ್ಕಾಾಣಿ ಹಿಡಿದವನ ಸ್ವಾಾರ್ಥಕ್ಕೆೆ ಇತಿಹಾಸ ಬರೆಯುವವ ತನ್ನನ್ನು ಮಾರಾಟವಸ್ತುವನ್ನಾಾಗಿರಿಸಿಕೊಂಡದ್ದು ಇಂದು ಇತಿಹಾಸವನ್ನು ಒಂದೊಂದು ದೃಷ್ಟಿಿಕೋನದಿಂದ ಹೇಳುತ್ತಿಿರುವುದನ್ನು ಕಾಣುತ್ತಿಿದ್ದೇವೆ. ಹಾಗಾಗಿ ಇತಿಹಾಸ ಆಳುಗರ ಕೈಗೆ ಸಿಲುಕಿ ನಲುಗಿ ಹೋಗಿದೆ. ಈ ದೇಶದ ಯಾವುದೇ ಮಹಾಪುರುಷನ ಬಗ್ಗೆೆ ಸಕರಾತ್ಮಕ ಏಕಾಭಿಪ್ರಾಾಯವನ್ನು ಮೂಡಿಸುವಲ್ಲಿ ನಮ್ಮನ್ನು ಆಳುವವರು, ಇತಿಹಾಸ ತಜ್ಞರು, ವಿಚಾರವಂತರು, ಬುದ್ಧಿಿಜೀವಿಗಳು ಸೋತಿದ್ದಾರೆ. ಆಯಾ ಕಾಲದ ತಕ್ಷಣದ ಲಾಭಕ್ಕೆೆ ಐತಿಹಾಸಿಕ ಪುರುಷರು ದಾಳವಾಗುತ್ತಾಾರೆ ಎನ್ನುವದನ್ನು ಇಂದು ನಾವು ಕಾಣುತ್ತಿಿದ್ದೇವೆ. ಇತಿಹಾಸವನ್ನು ಇದ್ದಂತೆ ಹೇಳುವುದನ್ನು ನಾವು ಕಲಿತಿಲ್ಲ. ಸತ್ಯ ಹೇಳಿದರೂ ಅದನ್ನು ಒಪ್ಪುುವ ಜಾಯಮಾನ ನಮ್ಮದಾಗಿಲ್ಲ . ಐತಿಹಾಸಿಕ ವ್ಯಕ್ತಿಿ ಯಾವ ಜಾತಿಗೆ ಸೇರಿದವನು ಎಂಬ ಕಾರಣಕ್ಕಾಾಗಿ ಆತ ಬೇಕೋ ಬೇಡವೋ ಎನ್ನುವ ಪರಿಪಾಠ ನಮ್ಮ ಸ್ವಾಾತಂತ್ರೋೋತ್ತರ ಕಾಲದಿಂದ ಬೆಳೆಸಿಕೊಂಡ ಬರಲಾಗಿದೆ. ಆತನ ಓಲೈಕೆಯಿಂದ ನಮಗೊಂದಷ್ಟು ಮತ ತಂದು ಕೊಡಬಲ್ಲನಾದರೆ ಆತ ಸೆಕ್ಯುಲರ್ ವಲಯದ ಡಾರ್ಲಿಂಗ್ ಆಗುತ್ತಾಾನೆ. ಸಾವರ್ಕರ ಯಾರೂ ಅನುಭವಿಸದ ಕೆಟ್ಟ ಕರಿನೀರಿನ ಶಿಕ್ಷೆ ಅನುಭವಿಸಿ ತನ್ನ ಜೀವಮಾನವನ್ನೇ ತ್ಯಾಾಗ ಮಾಡಿದರೂ ‘ಹಿಂದುವಾದಿ’ ಎನ್ನುವ ಕಾರಣಕ್ಕೆೆ ಸೆಕ್ಯುಲರ್ ವಲಯದಲ್ಲಿ ಅವರು ಸ್ವಾಾತಂತ್ರ್ಯ ಹೋರಾಟಗಾರರಲ್ಲ! ಸ್ವಾಾತಂತ್ರ್ಯ ಹೋರಾಟದ ಕಲ್ಪನೆಯೇ ಇಲ್ಲದ ಕಾಲಘಟ್ಟದಲ್ಲಿ ಅಂದರೆ 1857ಕ್ಕೂ ಮೊದಲು ರಾಜನೋರ್ವ ರಾಜ್ಯದ ಅಸ್ತಿಿತ್ವಕ್ಕಾಾಗಿ ನಡೆದ ಯುದ್ಧ ಆತ ಬ್ರಿಿಟೀಷರ ವಿರುದ್ಧ ಹೋರಾಡಿದ್ದಾನೆ ಎನ್ನುವ ಕಾರಣಕ್ಕೆೆ ಅದು ಸ್ವಾಾತಂತ್ರ್ಯ ಹೋರಾಟದ ರೂಪ ಪಡೆಯುತ್ತದೆ! ಇನ್ನು ಬಿಜೆಪಿಯ ಕೆಲ ದ್ವಂದ್ವಗಳೂ ಈ ವಿಚಾರದಲ್ಲಿ ಎದ್ದು ಕಾಣುತ್ತದೆ. ಟಿಪ್ಪುು ಸುಲ್ತಾಾನನ ಜಯಂತಿಯ ಘೋಷಣೆಗೂ ಮೊದಲು ಬಿಜೆಪಿಯ ಕೆಲ ಮುಂಚೂಣಿ ನಾಯಕರು ಟಿಪ್ಪುುವೇಷ ತೊಡಿಸಿಕೊಂಡು, ಖಡ್ಗ ಹಿಡಿದು ‘ಛದ್ಮವೇಶ’ ದ ಟಿಪ್ಪುುಗಳಾಗಿದ್ದೂ ಇದೆ.
ಇಂದು ಆ ಎಲ್ಲ ಚಿತ್ರಗಳ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಗೊಂಡು ಈ ನಾಯಕರ ಮುಖವಾಡಗಳನ್ನೂ ಕಳಚುತ್ತಿಿವೆ. ಹಾಗಾಗಿ ಬಿಜೆಪಿಗರು ಕಾಂಗ್ರೆೆಸ್ ಪಕ್ಷಕ್ಕೆೆ ಸೇರ್ಪಡೆಗೊಂಡರೆ ಟಿಪ್ಪುು ಹೀರೋ ಆಗಿ ಕಾಂಗ್ರೆೆಸ್ಸಿಿಗರು ಬಿಜೆಪಿಗೆ ಬಂದರೆ ಟಿಪ್ಪುು ವಿಲನ್ ಎನ್ನುವ ಅಘೋಷಿತ ತೀರ್ಮಾನವಾಗಿರುವಂತೆ ಕೆಲ ವರ್ಷಗಳಿಂದ ನಾವು ನೋಡಿಕೊಂಡೇ ಬಂದಿದ್ದೇವೆ. ಸದ್ಯಕ್ಕೆೆ ಟಿಪ್ಪುು ವಿಲನ್ ಏಕೆಂದರೆ ಈಗಿರುವುದು ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಮಾಡುತ್ತಿಿದೆ. ಸರಕಾರ ಯಾವುದಾದರೂ ಇತಿಹಾಸದಲ್ಲಿ ಈ ರೀತಿಯ ಗೊಂದಲವೇಕೆ ಎನ್ನುವುದು ಸಹಜ ಪ್ರಶ್ನೆೆ. ಸತ್ಯ ಯಾವತ್ತೂ ಒಂದೇ ಇರುತ್ತದೆಯಲ್ಲವೇ, ಸತ್ಯ ಎರಡಿರಲು ಸಾಧ್ಯವೇ? ಎನ್ನುವ ಪ್ರಶ್ನೆೆಗಳು ಕಾಡುವುದುಂಟು. ಹೀಗಿರುವಾಗ ಯಾವ ಇತಿಹಾಸ ಸರಿ ಯಾವುದು ತಪ್ಪುು ಎಂದು ನಿಷ್ಕರ್ಶೆಗೆ ಬರುವುದು ಕಷ್ಟವೇ. ಅದಾಗ್ಯೂ ಇತಿಹಾಸದೊಳಗಿನ ಈ ಬೇಗುದಿ ಹೊರಗೆ ಬರುತ್ತಿಿರುವುದು ಗಮನಕ್ಕೆೆ ಬರುತ್ತಿಿದೆ. ನಿನ್ನೆೆಯ ಸುಳ್ಳು ಇಂದಿನ ಸತ್ಯವಾಗಿದ್ದೇಗೆ? ಇಂದಿನ ಸತ್ಯ ನಾಳೆ ಸುಳ್ಳಾಾಗುತ್ತಿಿರುವುದೇಕೆ ಎನ್ನುವುದು ಸದ್ಯಕ್ಕೆೆ ಕಾಡುತ್ತಿಿರುವ ಪ್ರಶ್ನೆೆ. ಇತಿಹಾಸದ ರಚನೆಯಲ್ಲಿ ಇತಿಹಾಸಕಾರ ನಂಬಿರುವ ಸತ್ಯ ಆತನ ಒಪ್ಪಿಿತ ಸಿದ್ಧಾಾಂತ ಅದಕ್ಕಿಿಂತ ಹೆಚ್ಚಾಾಗಿ ಆಳುವ ನಾಯಕನನ್ನು ಸಂಪ್ರೀತಗೊಳಿಸಲು ಇತಿಹಾಸಕಾರ ಆಮಿಷಕ್ಕೊೊಳಗಾಗಿದ್ದಾನೆ ಎಂಬ ಅನುಮಾನವಂತೂ ಕಾಡುತ್ತದೆ.
ಇತಿಹಾಸದಲ್ಲಿ ಹುಚ್ಚು ದೊರೆ ಅಥವಾ ಐಲು ದೊರೆ ಎಂದು ಕರೆಸಿಕೊಂಡ ತುಘಲಕ್ ಕಾಲಾಂತರದಲ್ಲಿ ಆತ ದೂರದೃಷ್ಟಿಿಯ ರಾಜನಾಗಿದ್ದು ಹೇಗೆ ಎನ್ನುವ ಅನುಮಾನ ಇದಕ್ಕೆೆ ಪುಷ್ಟಿಿ ನೀಡುತ್ತದೆ. ಒಂದು ಕಾಲಕ್ಕೆೆ ಖಳನಾಗಿದ್ದ ರಾಜ ಮತ್ತೊೊಂದು ಕಾಲಕ್ಕೆೆ ಅದೇಗೆ ಜನಾನುರಾಗಿಯಾಗಿ ರೂಪುಗೊಂಡ ಎನ್ನುವ ಸಂಗತಿಗಳನ್ನು ಗಮನಿಸುತ್ತಾಾ ಹೋದರೆ, ವ್ಯಕ್ತಿಿಯ ಮತ, ಧರ್ಮ, ಸಿದ್ಧಾಾಂತಗಳ ಮೇಲೆ ಆಳುವವನ ವಿಚಾರಧಾರೆ ಆತನ ನಂಬಿಕೊಂಡ ಬಂದ ತಥ್ಯಗಳು ಆತನ ಮೇಲೆ ಪ್ರಭಾವ ಬೀರಿರುವುದು ಗಮನಕ್ಕೆೆ ಬರುತ್ತದೆ. ಆಳುವ ನಾಯಕನ ಪ್ರಭಾವ ಅಥವಾ ಆಮಿಷಗಳು ಇತಿಹಾಸ ಬರೆಯುವವನ ಮೇಲೂ ಇರುವುದು ಗೋಚರವಾಗುತ್ತದೆ. ಆ ಕಾರಣಕ್ಕೆೆ ಇಂದು ಇತಿಹಾಸದ ಘಟನಾವಳಿಗಳು ಕವಲೊಡೆಯುತ್ತಿಿರುವುದು ಗಮನಕ್ಕೆೆ ಬರುತ್ತಿಿದೆ. ಅಂದರೆ ಇತಿಹಾಸಕಾರ ಸರಕಾರದ ಮರ್ಜಿಗೆ ಸಿಲುಕಿ ಅಥವಾ ಇತಿಹಾಸಕಾರನ ಪೂರ್ವಗ್ರಹ ಚಿಂತನೆಗಳ ಕರಿನೆರಳು ಐತಿಹಾಸಿಕ ಪುರುಷರ ಮೇಲೂ ಬಿದ್ದಿದೆ ಎನ್ನುವುದು ರುಜುವಾತ್ತಾಾಗಿದೆ ಎಂದಾಯಿತು. ತಿರುಚಲ್ಪಟ್ಟ ಇತಿಹಾಸದ ವಿವಾದಿತ ಅಂಶಗಳು ಸಂಘರ್ಷದ ಹಾದಿ ಹಿಡಿದಿವೆ.
ಈಗಿನ ಬಿಜೆಪಿ ಸರಕಾರ ಟಿಪ್ಪುುವಿನ ಬಗ್ಗೆೆ ಇರುವ ಪಾಠವನ್ನು ತೆಗೆಯುವ ಪ್ರಯತ್ನದಲ್ಲಿದೆ. ವಾಸ್ತವಾಗಿ ಇದು ಸೂಕ್ತ ನಿಲುವಲ್ಲ ಎಂಬುದು ಸಾಮಾನ್ಯರ ಅಭಿಪ್ರಾಾಯ. ಏಕೆಂದರೆ ಸರಕಾರಗಳು ಬರುತ್ತವೆ ಹೋಗುತ್ತವೆ. ಇತಿಹಾಸದ ಘಟನೆಗಳು ಬದಲಾಗವು. ಇಂದು ಆ ಪಾಠ ತೆಗೆದರೆ ನಾಳೆ ಬಂದ ಸರಕಾರ ಟಿಪ್ಪುುವಿನ ಗುಣಗಾನ ಮಾಡುವ ಪಾಠವನ್ನು ಸೇರಿಸಬಹುದು. ಇಷ್ಟಕ್ಕೂ ಟಿಪ್ಪುುವಿನ ವಿಚಾರ ಕೇವಲ ಆತನ ನಡುವೆಯಷ್ಟೇ ಸುತ್ತದೇ ಅಂದಿನ ಸಮಕಾಲಿನ ರಾಜರೊಂದಿಗೆ ಪರ ವಿರೋಧದ ಸಂಬಂಧಗಳು ಜೋಡಿಸಿಕೊಂಡಿವೆ. ಟಿಪ್ಪುುವನ್ನು ಇಷ್ಟಪಡಲು ಕಾರಣವಾದ ಈ ವೈಭವೀಕರಿಸಿ ಹೇಳಿದ ರಂಗು ರಂಗಿನ ಕತೆಗಳನ್ನು ಸ್ವಾಾತಂತ್ರ್ಯೋೋತ್ತರ ಭಾರತದ ನಾಲ್ಕಾಾರು ತಲೆಮಾರಿನ ಜನರು ಓದಿ ಪ್ರೇರಣೆಗೊಳಗಾದ ರಾಜಕೀಯೇತರ ಸಾಮಾನ್ಯ ವ್ಯಕ್ತಿಿಗಳೂ ಇದ್ದಾರೆ.
ಈಗ ಇದ್ದಕ್ಕಿಿದ್ದಂತೆ ಟಿಪ್ಪುುವಿನ ಪಠ್ಯವಸ್ತು ತೆಗೆದರೆ ಅದೊಂದು ಸೈದ್ಧಾಾಂತಿಕ ವಿರೋಧ ಅಥವಾ ಟಿಪ್ಪುು ಮುಸಲ್ಮಾಾನ ಎನ್ನುವ ಕಾರಣಕ್ಕೆೆ ವಿರೋಧಿಸುತ್ತಿಿದ್ದಾರೆ ಎನ್ನುವ ಅಭಿಪ್ರಾಾಯವೇ ಬರುತ್ತದೆ. ಪಟ್ಟಭದ್ರ ಇತಿಹಾಸಕಾರರು ಟಿಪ್ಪುುವಿನ ವೈಭವೀಕರಿಸಿದ್ದಾರೆ ಎನ್ನುವುದು ಗೊತ್ತಾಾಗಬೇಕೆಂದರೆ ಆತನ ಮತ್ತೊೊಂದು ಮುಖದ ಪರಿಚಯವನ್ನು ಮಾಡಿಕೊಟ್ಟರೆ ಮಾತ್ರ ಅದು ಸತ್ಯ ತಿಳಿಸುವ ಪ್ರಯತ್ನವಾಗಬಹದಷ್ಟೇ. ಟಿಪ್ಪುು ಸುಲ್ತಾಾನ ಸ್ವಾಾತಂತ್ರ್ಯ ಪ್ರೇಮಿ, ಕನ್ನಡಪ್ರೇಮಿ ಎನ್ನುವ ಕಾರಣಕ್ಕಿಿಂತ ಆತ ಕರ್ಮಠ ಮುಸಲ್ಮಾಾನನಾಗಿದ್ದ, ಕರ್ಮಠರು ಸಹಜವಾಗಿ ಟಿಪ್ಪುುವಿನ ಬದಲಿಗೆ ಅದೇ ಧರ್ಮದ ಮತಾನುಯಾಯಿಗಳಾಗಿರುವ ಕಬೀರ, ಶಿಶುನಾಳ ಶರೀಪ, ಇತ್ತೀಚೆಗಿನ ಮಿರ್ಜಾ ಇಸ್ಮಾಾಯಿಲ್, ನಮ್ಮ ನಡುವೇ ಒಬ್ಬರಾಗಿದ್ದ ಸರ್ವಧರ್ಮ ಸಮನ್ವಯದ ಮೈವೆತ್ತಂತಿದ್ದ ಎಪಿಜೆ ಅಬ್ದುಲ್ ಕಲಾಂರಂಥವರನ್ನು ಒಪ್ಪುುವುದಿಲ್ಲ ಎನ್ನುವುದು ಸೆಕ್ಯುಲರ್ ವಲಯದ ಜನಜನಿತ ನಂಬಿಕೆಯಾಗಿರುವಾಗ ಈಗಿನ ಸರಕಾರ ಹೋಗಿ ನಾಳೆ ಕಾಂಗ್ರೆೆಸ್ ಸರಕಾರ ಬಂದರೆ ಟಿಪ್ಪುುವನ್ನು ಪ್ರತಿಷ್ಠಾಾಪನೆ ಮಾಡದಿರುತ್ತಾಾರೆಯೇ?
70 ವರ್ಷಗಳಿಂದ ಟಿಪ್ಪುುವನ್ನು ಓದಿಕೊಂಡ ಮಕ್ಕಳು ಇಂದು ಮುದುಕರಾಗಿದ್ದಾರೆ. ಅಪ್ಪನ ಕಾಲದ ಕಹಿ ಘಟನೆಗಳೇ ಮಕ್ಕಳು ಮರೆತು ಹೋಗುವಾಗ 1782-99ರ ನಡುವೆ ನಡೆದ ಇತಿಹಾಸವನ್ನು ಮರೆಸುವುದು ಕಷ್ಟವೇನಲ್ಲ! ಹಾಗಾಗಿ ಆತನ ವೈಭವೀಕರಣವಾಗಿದೆ ಎನ್ನುವುದಾದರೇ ಆತನ ಕ್ರೌೌರ್ಯದ ಇನ್ನೊೊಂದು ಮುಖದ ಪರಿಚಯವೂ ಹೊಸ ತಲೆಮಾರಿನವರಿಗೆ ಆಗಲಿ. ಇಷ್ಟುಕ್ಕೂ ಜಾತಿ, ಮತ ನೋಡಿ ಒಳ್ಳೆೆಯವ ಕೆಟ್ಟವ ಎಂದು ನಿರ್ಧರಿಸುವ ಕೊಳಕು ಪರಂಪರೆ ಇತಿಹಾಸವನ್ನು ಅಣಕಿಸಲಷ್ಟೇ ಶಕ್ತವಾಗುತ್ತದೆ ಹೊರತು ಪಾಠವಾಗುವುದಿಲ್ಲ. ಒಬ್ಬ ದುಷ್ಟ, ಭ್ರಷ್ಟ, ಮತಾಂಧ ತಮ್ಮ ಕುಲಕ್ಕೆೆ ಸೇರಿದವನು ಎನ್ನುವ ಕಾರಣಕ್ಕೆೆ ಅಭಿಮಾನ ತಾಳುವುದು ಒಳ್ಳೆೆಯ ಸಂದೇಶವಾಗಲು ಸಾಧ್ಯವೇ ಇಲ್ಲ. ನಮ್ಮ ರಾಜಕೀಯ ನೇತಾರರು ಈ ಕೆಟ್ಟ ಪರಂಪರೆಯನ್ನು ಹಾಕಿ ಬಿಟ್ಟಿಿದ್ದಾರೆ. ಇಂದಲ್ಲ ನಾಳೆ ಇಂಥ ಅಪಸವ್ಯಕ್ಕೆೆ ಇತಿಶ್ರೀ ಹಾಡಲೇಬೇಕು. ಹಾಗಾಗಿ ಇತಿಹಾಸವನ್ನು ಇದ್ದಂತೆ ಹೇಳುವ ಇದ್ದಂತೆ ಬರೆಯುವ ಕೆಲಸವಾಗಬೇಕೇ ವಿನಃ ಅದನ್ನು ಯಾರೋ ಒಂದಷ್ಟು ಜನ ಬೇಸರಿಸುತ್ತಾಾರೆ ಎನ್ನುವುದಕ್ಕೋೋಸ್ಕರ ಮುಚ್ಚಿಿಡುವುದು ಸೂಕ್ತವಲ್ಲ. ಪಾಪಿಯೋರ್ವನ ಪಾಪದ ಕೆಲಸವನ್ನು ಸ್ವಜಾತಿ ಅಥವಾ ಸ್ವಲಾಭದ ಲೆಕ್ಕದಲ್ಲಿ ಸಮರ್ಥಿಸುವುದಾದರೇ ಆತನ ಪಾಪದ ಕಾರ್ಯದ ಪಾಲೂ ಅವರದ್ದೇ ಆಗುತ್ತದೆ. ಇತಿಹಾಸ ಇದನ್ನು ಖಂಡಿತವಾಗಿ ಒಪ್ಪುುವುದಿಲ್ಲ. ಒಂದೊಮ್ಮೆೆ ಒಪ್ಪಿಿದರೆ ಅದು ಇತಿಹಾಸವೆನಿಸುವುದಿಲ್ಲ.