ಅನರ್ಹರಿಗೆ ನಡುಮನೆಲ್ ಕೂರಿಸಿ ನಡ ಮುರಿದಂಗಾಗ್ಯದೆ!
ವೆಂಕಟೇಶ ಆರ್.ದಾಸ್
ಲೇ ಸೀನಾ, ಎಲ್ಲೋೋಗಿದ್ಯೋೋ ಎರಡ್ ದಿನದಿಂದ ಕಾಣ್ತಿಿತ್ತಿಿಲ್ಲ, ಮೂರ್ ದಿನಾ ಇರ್ತಿಯಾ, ಮೂರ್ ದಿನಾ ಇರೋದಿಲ್ಲ ಏನ್ಲಾಾ ನಿನ್ ಗೋಳು ಅಂತ ಅರಳೀಕಟ್ಟೆೆ ಮ್ಯಾಾಲ್ ಕುಂತಿದ್ದ ಸೀನನ್ ಹತ್ರಕ್ಕೆೆ ಬಂದ ಪಟೇಲಪ್ಪ.ಬಾ ದೊಡ್ಡಪ್ಪೋೋ, ನಮ್ ಜಂಪಿಂಗ್ ಎಮ್ಮೆೆಲ್ಲೆೆಗಳಿದ್ರಲ್ಲಾಾ ಅವ್ರುದು ಇರಂಗ್ ಐತೆ, ಅದೇನಾಯ್ತದೆ ನೋಡ್ಕೊೊಂಡು ಇವ್ರ ಪರ ಬಂದ್ರೆೆ ಜೈ ಅನ್ನಕ್ ಬೇಕು. ಆಗ್ನಿಿಲ್ಲ ಅಂದ್ರೆೆ ಅನ್ಯಾಾಯ, ಅನ್ಯಾಾಯ ಅಂತ ಕೂಗಾಕಕ್ ಬೇಕು ಬಾರ್ಲಾಾ ಅಂತ ನಮ್ ನಡ್ಲು ಮನೆ ನಂಜ ಕರ್ಕೊೊಂಡ್ ಹೋಗಿದ್ದ, ಹಿಂಗಾಗಿ, ಇರ್ನಿಿಲ್ಲ, ಈಗ್ ತಾನೆ ಬಂದು ಲ್ಯಾಾಂಡ್ ಆಗಿದ್ದೀನಿ ಕಣ್ ಬಾ ಅಂದ ಗುಡ್ದಳ್ಳಿಿ ಸೀನ.
ನೀನ್ ಬುಡ್ಲು ಅತ್ತೇ ಆಸ್ತಿಿ ಅಳಿಯ ದಾನ ಮಾಡ್ದ ಅನ್ನೋೋ ಹಂಗೆ ಯಾರ್ದೋೋ ದುಡ್ಡಲ್ಲಿ ಏನಾರ ಮಾಡದು ಅಂದ್ರೆೆ ಜೋರಾಗೆ ಮಾಡ್ತೀಯಾ, ಅಷ್ಟಕ್ಕೂ ಏನಂತಪ್ಪ ಸುಪ್ರೀಂ ಕೋರ್ಟ್ ಈ ರನ್ನಿಿಂಗ್ ಸ್ಟಾಾರ್‌ಗೋಳಿಗೆ. ಎಲೆಕ್ಸನ್‌ಗೆ ನಿಲ್ಲಕ್ ಆಗುತ್ತೆೆ ಅಂತೋ ಇಲ್ಲ ನೀವ್ ಮನೆ ಕಡಿಕ್ ನಡೀರಿ ಅಂತೋ ಅಂದ ಪಟೇಲಪ್ಪ.
ಇಲ್ ಕಣ್ ದೊಡ್ಡಪ್ಪೋೋ, ಸುಪ್ರೀಂ ಕೋರ್ಟ್ ಅಡ್ಡಗೋಡೆ ಮ್ಯಾಾಲೆ ದೀಪ ಇಟ್ಟೈತೆ. ಅನರ್ಹ ಮಾಡಿದ್ ಸ್ಪೀಕರ್ ತೀರ್ಮಾನವೆ ಸರಿ, ಆದ್ರೆೆ, ಎಷ್ಟು ದಿನ ಅನರ್ಹತೆ ಅನ್ನೋೋದನ್ನ ನೀವ್ ತೀರ್ಮಾನ ಮಾಡಂಗಿಲ್ಲ. ಜನ ಅವ್ರು ಅರ್ಹರೋ, ಅನರ್ಹರೋ ಅಂತ ತೀರ್ಮಾನ ಮಾಡ್ಕತ್ತಾಾರೆ ಬುಟ್ಬುಡಿ ಅಂತ ಹೇಳ್ಯದೆ ಅಂದ ಸೀನ.
ಸರಿ ಕಣ್ಲಾಾ ಸೀನ, ಜನ ಬುದ್ಧಿಿ ಕಲಿಸೋದೇನ್ ಕಲಿಸ್ತಾಾರೆ. ಆದ್ರೆೆ, ಇವ್ರೇಳಿದ್ನೆೆ ನಂಬ್ಕೊೊಂಡು ಮುಂದೆ ಹಿಂಗೆ ಗ್ವಾಾಡೆ ಹಾರೋ ಜನ ಜಾಸ್ತಿಿ ಆಗಲ್ವೇ, ರಾಜೀನಾಮೆ ಕೊಟ್ರು ಆಗದು ಅದೇಯಾ, ಅನರ್ಹ ಆದ್ರೂ ಆಗದ್ ಅದೆಯಾ ಅಂದ್ಮೇಲೆ ಯಾವ್ದಾಾದ್ರೇನು ಹಿಂಗೆಲ್ಲ ಮಾಡಿ ಆಮೇಲೆ ಎಲೆಕ್ಷನ್ ನಿಂತ್ಕೊೊಂಡು ಇರೋ ಬರೋ ಬಲ ಎಲ್ಲ ಬಳಸ್ಕೊೊಂಡು ಗೆದ್ದು ಬಂದ್ರಾಾಯ್ತು ಅಂದ್ಕೊೊಳ್ಳಲ್ವೇ ಅಂದ ಪಟೇಲಪ್ಪ.
ಹೌದು, ದೊಡ್ಡಪ್ಪ, ಸ್ಪೀಕರ್ ಅನರ್ಹ ಮಾಡಿದ್ರ ಅಂದ ಮಾತ್ರಕ್ಕೆೆ ಇವ್ರು ಎಲೆಕ್ಸನ್‌ಗೆ ನಿಲ್ಲೋೋಂಗೆ ಇಲ್ಲ ಅಂತ ಹೇಳಕ್ಕಾಾಯ್ತದಾ, ಇವ್ರು ಬೇಕೋ ಬ್ಯಾಾಡ್ವೋೋ ಅನ್ನೋೋದನ್ನಾಾ ಜನರೇ ತೀರ್ಮಾನ ಮಾಡ್ಲಿಿ ಅನ್ನೋೋದು ನಮ್ಮ ಕೋರ್ಟ್ ವಾದ. ಜನನೇ ಅವ್ರು ಬ್ಯಾಾಡ್ವೋೋ ಬೇಕೋ ಅಂತ ತೀರ್ಮಾನ ಮಾಡ್ತಾಾರೆ ಬುಡು ಅಂದ ಸೀನ.
ಅದ್ಸರಿ ಕಣ್ಲಾಾ, ಬಿಜೆಪಿನಲ್ಲಿ ಇಷ್‌ಟ್‌ ದಿನ ಕಷ್ಟಪಟ್ಟಿಿದ್ದೋೋರು ಜಾಗ ಬುಟ್ಕೊೊಡ್ಬೇಕಲ್ಲಾಾ ಹೊಟ್ಟೆೆ ಉರಿಯಲ್ವೇ ಅವ್ರಿಿಗೆ, ಹೀಗೇನ್ ಕಥೆ ಮಾಡ್ತಾಾರಂತೇಳು ಅವ್ರಿಿಗೆಲ್ಲ. ಕೊಟ್ಟಿಿರೋ ಕುದ್ರೇನೋ ಬ್ಯಾಾಡ ನಂಗೆ ಎಲೆಕ್ಷನ್ನೇ ಬೇಕು ಅಂತಾ ಮರೀ ಬಚ್ಚೇಗೌಡ್ರು. ಅಂತಾವ್ರನ್ನೆೆಲ್ಲ ಏನ್ ಮಾಡ್ತಾಾರೆ ಅಂದ ಪಟೇಲಪ್ಪ.
ಅಂತ ಕತೇನೆಲ್ಲ ಕೇಳ್ಕೊೊಂಡು ಕುತ್ಕಳ್ಳೋೋ ಸ್ಥಿಿತಿಲಿಲ್ಲ ಬಿಜೆಪಿ, ಯಡ್ಯೂರ್‌ನೆ ಕ್ಯಾಾರೆ ಅನ್ದೇನೆ ಡಿಸಿಎಂ ಮಾಡಿದೋರ್ರು, ಈ ಚಿಲ್ರೇ ಪುಢಾರಿಗಳಿಗೆಲ್ಲ ಹೆದ್ರಿಿಕತ್ತಾಾರಾ. ಹೈಕಮಾಂಡ್ ಹೇಳಿದ್ನಾಾ ಕೇಳ್ಲೇ ಬೇಕು. ದೊಡ್ಡ ದೊಡ್ಡ ಲೀಡ್ರುಗಳೆಲ್ಲ ಎಷ್ಟೇ ಸಿಟ್ಟಿಿದ್ರು, ಮರೇಲ್ ಬೈಕೊಂಡು ಮೆತ್ತಾಾಗಾಗ್ಲಿಿಲ್ವೇ, ಹಂಗೆ ಸುಮ್ನಾಾಯ್ತಾಾರೆ ಕಣ್ ತಗೋ ಅಂದ ಸೀನ.
ಅದ್ಸರಿ ಕಣ್ಲಾಾ, ಆದ್ರೆೆ, ನಾಯಿ ಊರ್ ಮುಂದೆ ಸುಮ್ನಿಿದ್ರೂ ಸಾಕಿದ್ ಮನೆ ಮುಂದೆ ಸಖತ್ ಸೌಂಡ್ ಪಾರ್ಟಿನೇ. ಹಂಗೆ ಪಾರ್ಟಿಗೆ ಎಲ್ರೂ ಚಿಕ್ಕೋೋರಾದ್ರೂ, ಅವ್ರವ್ರ ಕ್ಷೇತ್ರದಾಗೆ ಹವಾ ಇಟ್ಟಿಿರ್ತಾಾರೆ. ಗೆಲ್ಲೋೋ ಮಟ್ಟಿಿಗ್ ಇಲ್ದೆೆ ಇದ್ರೂ, ಹೆದ್ರಾಾಕೊಂಡೋರ್ನಾಾ ಸೋಲ್ಸೋೋ ಲೆವೆಲ್ಲಿಗೆ ಇರುತ್ತೆೆ ವಸಿ ಹುಸಾರು ಅಂತೇಳಪ್ಪ ಬಿಜೆಪಿಯೋರ್ಗೆೆ ಅಂದ ಪಟೇಲಪ್ಪ.ಜಾಸ್ತಿಿ ಕಡೆ ಏನಿಲ್ಲ ಕಣ್ ದೊಡ್ಡಪ್ಪ, ಹೊಸಕೋಟೆನಲ್ಲಿ ಸಣ್ಣ ಬಚ್ಚೇಗೌಡ್ರು, ಶಿವಾಜಿನಗ್ರದಲ್ಲಿ ಕಟ್ಟಾಾ ನಾಯ್ಡು ಕಿತ್ತಾಾಟ ಮಾಡ್ತಾಾವ್ರೆೆ. ಕಾಗೆ ಈಗಾಗ್ಲೇ ಕಾಂಗ್ರೆೆಸ್‌ಗೆ ಹಾರಿ ಹೋಗಿ ಆಗಿದೆ. ಯಶವಂತಪುರದಲ್ಲಿ ಜಗ್ಗೇಶಣ್ಣ ಮೊದ್ಲು ಸುಮ್ನೆೆ ಕಾಗೆ ಹಾರ್ಸಿಿತ್ತು. ವರ್ಕೌಟ್ ಆಗಾಕುಲ್ಲ ಅಂತ ಗೊತ್ತಾಾಯ್ತಿಿದ್ದಂಗೆ ಸೈಲೆಂಟ್ ಆಗೋಯ್ತು. ಅದ್ಬುಟ್ರೆೆ ಇನ್ಯಾಾರು ಅಂತಾವ್ರಿಿಲ್ಲ ಕಣ್ ಬುಡು ಅಂದ ಸೀನ.
ಅದ್ಸರಿ ಬುಡ್ಲಾಾ, ಹೆಂಗೋ ಅವ್ರ ಮನೆ ಬಂಗ ಅವ್ರು ಮಾಡ್ಕೋೋತ್ತಾಾರೆ. ನಿಮ್ ಡಿಕೆಗ್ಯಾಾಕ್ಲಾಾ ಎಲೆಕ್ಸನ್ ಟೈಮಲ್ಲೇ ಎದೆನೋವು ಜಾಸ್ತಿಿಯಾಗ್ಯದಂತೆ. ಆಸ್ಪತ್ರೆೆ ಬ್ಯಾಾರೆ ಸೇರ್ಕೊೊಂಡಾವ್ರಂತೆ. ಜತ್ಗೆೆ ಮನೋರು ಯಾರೂ ನೋಡಕ್ ಬರಂಗಿಲ್ಲ ಅಂತೇಳವ್ರೆೆ ಯಾಕ್ಲಾಾ ಇದೆಲ್ಲ, ಹಿಂದೆ ಗೌರ್ಮೆಂಟ್ ಉಳ್ಸೋೋಕ್ ಹೋಗಿ ಹಿಂಗೆಲ್ಲಾಾ ಆಗ್ಯದೆ. ಈಗ್ಯಾಾಕೆ ಮತ್ತೇ ನಮ್ಮನೆಯೋರ್ಗೆೆ ಉಸಾಬರಿ ಅಂತೇನಾದ್ರೂ ಡಿಕೆಶಿನ ಎಲೆಕ್ಸನ್ನಿಿಂದ ದೂರ ಮಾಡ್ತಾಾವ್ರ ಹೆಂಗ್ಲಾಾ ಅಂದ ಪಟೇಲಪ್ಪ.
ದೊಡ್ಡಪ್ಪೋೋ, ಹಂಗೆಲ್ಲ ನಮ್ಮಣ್ಣ ಎಲೆಕ್ಸನ್ನಿಿಗೆ ಹೆದ್ರಲ್ಲ ಕಣ್ ದೊಡ್ಡಪ್ಪೋೋ, ನಿಜ್ವಾಾಗ್ಲೂ ಉಸಾರಿಲ್ಲ, ಮೊನ್ನೆೆ ಡಾಕ್ಟ್ರು ಹೇಳಿದ್ರೂ ಕೇಳ್ದಂಗೆ ಎಲ್ಲೆೆಲ್ಲೋೋ ಓಡಾಡ್ತು ನೋಡು ಸ್ವಲ್ಪ ಯಡ್ವಟ್ಟಾಾಗ್ಯದೆ. ಅದಕೆ ಆಸ್ಪತ್ರೆೆಗೆ ಹೋಗ್ಯದೆ. ಬತ್ತದಿರು ಎಲೆಕ್ಷನ್‌ಗೆ ಇನ್ನೂ ಟೇಮಿಲ್ವೇ? ಅಷ್ಟಕ್ಕೂ ಮನೇಲಿ ಅಣ್ಣನ್ನ ಕಟ್ಟಾಾಕೋಂತ ಗುಂಡ್ಗೆೆ ಯಾರಿಗದೆ ಅಂದ ಸೀನ.
ಮನೇಲ್ ಯಾರಿಗೂ ಇಲ್ಲ, ಮೇಲಿಂದ ಐಟಿ ಪೈಟಿ ಬಾಣ ಏನಾರ ಬಂದು ನಾಟಾಕೊಂಡ್ ಬುಟ್ಟದಾ ಅನ್ನೋೋ ಅನ್ಮಾಾನ ಅದೆ. ಜತ್ಗೆೆ ಸಿಬಿಐ ನೋಟೀಸ್ ಬ್ಯಾಾರೆ ಇತ್ತಲ್ಲಾಾ, ಈಗ್ಲೂ ಸುಮ್ನಿಿರ್ನಿಿಲ್ಲಾಾ ಅಂದ್ರೆೆ ನೋಡ್ಲಪ್ಪಯ್ಯಾಾ ನಿಂಗೆ ಮುಂದದೆ ಮಾರಿಹಬ್ಬ ಅಂತ ಯಾರಾರ ಹೆದ್ರಿಿಸ್ವ್ರಾಾ ಹೆಂಗೋ ಅಂತ ನಂಗೆಯಾ ಅನ್ಮಾಾನ ಬಂತು ಅಷ್ಟೇಯಾ ಅಂದ ಪಟೇಲಪ್ಪ.
ಅದ್ಸರಿ, ದೊಡ್ಡಪ್ಪೋೋ, ಇನ್ನೇನ್ ನಡೀತೈತೆ ಸಮಾಚಾರ. ಉಳ್ದೋೋರೆಲ್ಲ ಏನ್ ಮಾಡ್ತಾಾವ್ರೆೆ ನಾಯುಕ್ರುಗೋಳು. ಕುಮಾರಣ್ಣ ವಾಪಸ್ ಬಂತಾ ಲಂಡನ್ನಿಿಂದ? ಇನ್ನು ಸಿದ್ರಾಾಮಣ್ಣ ಏನೋ ಕಿತ್ತೂರ್ ಚೆನ್ನಮ್ಮನ್ ತಗೊಂಡೋಗಿ ಜಯಮ್ಮನ್ ಮಾಡ್ಬುಟ್ಟದಂತೆ ಏನ್ ಸಮಾಚಾರ ಅದು. ಇದ್ಕಿಿದ್ದಂಗೆಯಾ ಯಾಕೆ ಹಿಂಗೆ ಆಗ್ಬುಟ್ತು ನಮ್ ಟಗ್ರು ಅಂದ ಪಟೇಲಪ್ಪ.
ದೊಡ್ಡಪ್ಪೋೋ, ಸಿದ್ರಾಾಮಣ್ಣಂಗೆ ಇಸ್ಟ್ರೀ ಓದ್ಕೊೊಂಡಿರೋ ಮಗಾ ಯಾರವ್ನೇಳು. ಆದ್ರೂ ಏನ್ ನಾಲ್ಗೆೆ ಯಡ್ವಟ್ಟಾಾಗ್ಬುಟ್ಟದೆ. ಅಧಿಕಾರದಲ್ಲಿದ್ದಾಾಗ ಮಾತ್ ಮಾತಿಗೂ ಬಂದ್ ಕಾಟ ಕೊಟ್ತಿಿದ್ದ ಮಾಗಡಿ ಜಯಮ್ಮ ಇದ್ಕಿಿದ್ದಂಗೆ ನೆನ್ಪಾಾಗ್ಬುಟ್ಟು, ಚೆನ್ನಮ್ಮ ಹೋಗಿ ಜಯಮ್ಮ ಆಗ್ಬುಟ್ಟದೆ. ಅದ್ಬುಟ್ರೆೆ ಇತಿಹಾಸ ಎಲ್ಲ ನಂಗೊತ್ತಿಿಲ್ವಾಾ ಓದ್ಕೊೊಂಡ್ ಬಂದ್ ಮಾತಾಡು ಸಿಟಿ ರವಿ ಅಂತೇಳಿರ್ನಿಿಲ್ವಾಾ ನಮ್ ಸಿದ್ರಾಾಮಣ್ಣ ಅಂದ ಸೀನ.
ಅದ್ಸರಿ ಗೌಡ್ರು ಪಾರ್ಟಿದೇನಪ್ಪಾಾ ಕಥೆ, 15 ಕ್ಷೇತ್ರಕ್ಕೂ ಅಭ್ಯರ್ಥಿ ಹಾಕೋವಷ್‌ಟ್‌ ಜನ ಉಳ್ಕಂಡಾವ್ರಾಾ ಪಾರ್ಟಿಲೀ..ಇಲ್ಲ ಅವ್ರೂನುವೆ ಬಿಜೆಪಿ, ಕಾಂಗ್ರೆೆಸ್‌ನೋರಂಗೆ ಆಪರೇಷನ್ ಸುರು ಮಾಡ್ಕೊೊಂಡಾವ್ರೋೋ ಹೆಂಗೆ, ಏನಂತೈತೆ ಕುಮಾರಣ್ಣ ಅಂದ ಪಟೇಲಪ್ಪ.
ದೊಡ್ಡಪ್ಪೋೋ ಗೌಡ್ರು ಪಾರ್ಟಿನಾಗೆ ಕ್ಯಾಾಂಡಿಯೇಟ್ ಇಲ್ಲ, ಅದ್ಕೆೆ 14 ಕಡೆ ಮಾತ್ರ ನಿಂತ್ಕತ್ತೀವಿ. ಉಳಿದ್ ಹೊಸಕೋಟೆಲಿ ನಾವು ಮರಿ ಬಚ್ಚೇಗೌಡ್ರುನ್ನಾಾ ಸಪೋರ್ಟ್ ಮಾಡ್ತೀವಿ. ಯಾಕಂದ್ರೆೆ ಅದು ನಮ್ ಪಾರ್ಟಿಲಿದ್ದ ಬಚ್ಚೇಗೌಡ್ರು ಮಗಾ ಅಲ್ವೇ, ಹಿಂಗಾಗಿ ನಾವು ಕಳ್ಕೊೊಳ್ಳದ್ ಏನಿಲ್ಲ ನಮ್ ಸಪೋರ್ಟ್ ಅವ್ರಿಿಗೆಯಾ ಅಂತೇಳದಂತೆ ಕುಮಾರಣ್ಣ ಅಂದ ಸೀನ.
ಅವ್ರು ಹಂಗೆಯಾ ಬುಡಪ್ಪಾಾ, ಎಲ್ಲಿ ಯಾರಿಗೆ ಹೊಡೀಬೇಕು ಅಂದ್ಕೊೊಳ್ತಾಾರೆ ಅಲ್ಲಿ ಬ್ಯಾಾರೆ ಏನಾರ ಕಿತಾಪತಿ ಮಾಡ್ತಾಾರೆ. ವೀಕಿರೋ ಕಡೇಲೆಲ್ಲ ಸಾಧ್ಯವಾದ ಪಕ್ಷಕ್ಕೆೆ ಸಫೋರ್ಟ್ ಮಾಡಿ ವಷ್ಟು ಗಿಟ್ಟಿಿಸ್ಕೊೊಳ್ಳೊೊದೆ ಕುಮಾರ‌್ಣನ್ ಪ್ಲ್ಯಾಾನು. ಒಟ್ಟಿಿಗೆ ಎಲೆಕ್ಷನ್ ಸಂದ್ರೆೆ ಒಂಥರಾ ಹಬ್ಬ ಆಗೋಯ್ತದೆ. ನಿನ್ನಂತ ಕುಡುಕ್ ನನ್ಮಕ್ಳಿಿಗೆಲ್ಲ ಹಬ್ಬ ಬುಡು ಅಂದ ಪಟೇಲಪ್ಪ.
ನೀತಿ ಹೇಳೋನೆ ನಿಂತ್ಕಂಡ್ ಉಚ್ಚೆೆ ಉಯ್ತಿಿದ್ನಂತೆ ಅನ್ನಂಗೆ ನೀನೇನ್ ಒಂದ್ ಹನಿನೂ ಕುಡಿಯೋಕೆ ಇಲ್ಲ ನೋಡು, ಹೀಗ್ ದೊಡ್ಡಪ್ಪೋೋ ಕೇಮೆ ನೋಡು, ಎಲೆಕ್ಷನ್ ಬಂದಾಗ ಎಲ್ಲರೂ ಕುಡಿಯೋದೆ, ಬಿಟ್ಟಿಿ ಸಿಕ್ಕಿಿದ್ರೆೆ ಬ್ಯಾಾಡ ಅನ್ನೋೋರ್ ಯಾರವ್ರೆೆ ಹೇಳು. ಐದ್ ವರ್ಷಕ್ಕೆೆ ಒಂದ್ ಕಿತಾ ಬತ್ತಿಿದ್ದಾಾ ಎಲೆಕ್ಷನ್ನು ಅಪರೂಪಕ್ಕೆೆ ಮೊದ್ಲೆೆ ಬಂದೈತೆ ಬುಟ್ಟೋೋರ್ ಉಂಟಾ ನಡೀ ಅಂತ ಮನೇಕಡಿಕ್ ಹೊಂಟ ಸೀನ.
ಒಟ್ಟಿಿಗೆ ಅನರ್ಹರ ಪಾಟು ನಾಲ್ಕು ಕಡೀಂದ್ ಬಗ್ನಿಿ ಗೂಟ ಅನ್ನೋೋ ಹಂಗಾಗ್ಯದೆ ಅನ್ನು, ಇತ್ಲಾಾಗ್ ಬಿಜೆಪಿ ಭಿನ್ನಮತ, ಜೆಡಿಎಸ್‌ನೋರ ಒಳಾಟ, ಕಾಂಗ್ರೆೆಸ್‌ನ ಸೇಡು, ಒಟ್ನಲ್ಲಿ ಸುಪ್ರೀಂ ತೀರ್ಪು ನಡುಮನೇಗ್ ಕರ್ದು ನಡ ಮುರದಂಗ್ ಆಗ್ಯದೆ ಅನ್ನು ಅನ್ಕೊೊಂಡ್ ಹಟ್ಟಿಿ ಕಡಿಕ್ ಹೊಂಟ ಪಟೇಲಪ್ಪ.