ಒಂದೊಂದು ತುತ್ತು ಆಹಾರವೂ ಆರೋಗ್ಯಕರವಾಗಿರಲಿ
ಪ್ರಸ್ತುತಡಾ.ನಾ.ಸೋಮೇಶ್ವರ
ಪ್ರತಿವರ್ಷ ವಿಶ್ವದಾದ್ಯಂತ ಸೆಪ್ಟೆೆಂಬರ್ 1 ರಿಂದ 7 ರವರೆಗೆ ‘ರಾಷ್ಟ್ರೀಯ ಪೋಷಣಾ ಸಪ್ತಾಹ’ (ನ್ಯಾಶನಲ್ ನ್ಯೂಟ್ರಿಶನ್ ವೀಕ್)ಆಚರಿಸುತ್ತೇವೆ. ಈ ಆಚರಣೆಯನ್ನು ಜಾರಿಗೆ ತಂದವರು ವಿಶ್ವಸಂಸ್ಥೆೆಯ ಒಂದು ಅಂಗ ಸಂಸ್ಥೆೆಯಾದ ಆಹಾರ ಮತ್ತು ಕೃಷಿ ಸಂಘಟನೆ (ಎಫ್.ಎ.ಒ=ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗನೈೇಶನ್)ಯವರು.
ಪ್ರತಿ ವರ್ಷವೂ ಒಂದು ಘೋಷವಾಕ್ಯವನ್ನು ಹೊರಡಿಸಿ, ಅದಕ್ಕೆ ಸಂಬಂಧಿಸಿದ ಹಾಗೆ ಚಿಂತನ – ಮಂಥನಗಳನ್ನು ನಡೆಸಿ, ನಮ್ಮ ದೈನಂದಿನ ಆಹಾರ ಸೇವನೆಯಲ್ಲಿ ಸೂಕ್ತ ಬದಲಾವಣೆಗಳನ್ನು ತಂದು, ನಮ್ಮ ಆರೋಗ್ಯವನ್ನು ಹಾಗೂ ಜೀವನಶೈಲಿಯನ್ನು ಸುಧಾರಿಸಿಕೊಳ್ಳಲು ಜನಜಾಗೃತಿಯನ್ನು ಉಂಟು ಮಾಡುವುದು ಅವರ ಮೂಲ ಉದ್ದೇಶ. 2020ನೆಯ ಸಾಲಿಗೆ ‘ನೀವು ಸೇವಿಸುವ ಒಂದೊಂದು ತುತ್ತು ಆಹಾರವು ಸೂಕ್ತ ವಾಗಿರಲಿ’ (ಈಟ್ ರೈಟ್; ಬೈಟ್ ಬೈ ಬೈಟ್) ಎನ್ನುವುದು ಘೋಷವಾಕ್ಯವನ್ನು ಹೊರಡಿಸಿ ರುವರು. ಈ ಸಪ್ತಾಹವು ವಿಶ್ವದ ಎಲ್ಲ ದೇಶಗಳಿಗೂ ಮುಖ್ಯವಾದದ್ದು.
ಅದರಲ್ಲಿಯೂ ನಮ್ಮ ದೇಶಕ್ಕೆ ತೀರಾ ಅಗತ್ಯವಾಗಿ ಬೇಕಾಗಿರುವಂತಹದ್ದು. ನಮ್ಮ ದೇಶದಲ್ಲಿ ಹೇಗೆ ವೈವಿಧ್ಯಮಯ, ಧರ್ಮ, ಭಾಷೆ, ಆಚರಣೆಗಳು ಇವೆಯೋ, ಹಾಗೆಯೇ ನಮ್ಮ ಆಹಾರ ಪದ್ಧತಿ ಹಾಗೂ ಜೀವನಶೈಲಿಯೂ ಸಹ ಭಿನ್ನವಾಗಿದೆ. ಇದರಲ್ಲಿಏಕತೆಯನ್ನು ಕಾಣುವುದು ಪ್ರಸ್ತುತ ನಮ್ಮ ಮುಂದಿರುವ ಸವಾಲು.
ಎರಡು ಸಮಸ್ಯೆೆಗಳು:ನಮ್ಮ ದೇಶದಲ್ಲಿ ಪ್ರಧಾನವಾಗಿ ಎರಡು ಸಮಸ್ಯೆೆಗಳಿವೆ. ನ್ಯೂನ ಪೋಷಣೆ (ಮ್ಯಾಲ್ ನ್ಯೂಟ್ರಿಶನ್) ಹಾಗೂ ಅತಿಪೋಷಣೆ (ಓವರ್ ನ್ಯೂಟ್ರಿಶನ್). ಈ ವರ್ಷ ಎಫ್.ಎ.ಒ ಒಂದು ಜಾಗತಿಕ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಶೀರ್ಷಿಕೆ ‘ವಿಶ್ವದ ಆಹಾರ ಮತ್ತು ಪೋಷಕಾಂಶ ಗಳ ಸುಭದ್ರತೆ’ ಎಂದು. ಈ ವರದಿಯ ಅನ್ವಯ ಭಾರತದಲ್ಲಿ ಸುಮಾರು189.2 ದಶಲಕ್ಷ ಜನರು, ಅಂದರೆ ಭಾರತದ ಶೇ.14ರಷ್ಟು ಜನತೆಯು ಪೌಷ್ಠಿಕಾಂಶಗಳ ಕೊರತೆಯಿಂದ ನರಳುತ್ತಿದ್ದಾರಂತೆ. 5 ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನ ಶೇ.34.7ರಷ್ಟು ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಶಾರೀರಿಕ ಬೆಳವಣಿಗೆಯನ್ನುಪಡೆದಿಲ್ಲವಂತೆ. ಶೇ.20ರಷ್ಟು ಮಕ್ಕಳು ತಮ್ಮ ಶರೀರದ  ಎತ್ತರಕ್ಕೆೆ ಸರಿಯಾದ ತೂಕವನ್ನು ಗಳಿಸಿಕೊಳ್ಳಲು  ಫಲರಾಗಿದ್ದಾರಂತೆ. ಇವರ ಬೆಳವಣಿಗೆಗೆ ಅಗತ್ಯವಾದ ಪ್ರೋಟೀನ್ ಇವರ ದೈನಂದಿನ ಆಹಾರ ದಲ್ಲಿಲ್ಲ. ಇದರ ಜೊತೆಗೆ ಕಬ್ಬಿಣಾಂಶದ ಕೊರತೆಯ ಕಾರಣ ಬರುವ ರಕ್ತಹೀನತೆ, ಕ್ಯಾಲ್ಷಿಯಂ ಕೊರತೆಯ ಕಾರಣ ಮೂಳೆಗಳ ಅಪಕ್ವ ಬೆಳವಣಿಗೆ, ವಿಟಮಿನ್-ಎ ಕೊರತೆಯ ಕಾರಣಬರುವ ಅಂಧತ್ವ, ಅಯೋಡಿನ್ ಕೊರತೆಯಿಂದ ಶಾರೀರಿಕ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗಳ ವೈಪರೀತ್ಯ – ಹೀಗೆ ಪೋಷಕಾಂಶಗಳ ಸಮಸ್ಯೆಗಳು ಒಂದು ಕಡೆ ಕಾಡುತ್ತಿದೆ.
ಮತ್ತೊೊಂದು ಕಡೆ ಪೋಷಕಾಂಶಗಳ ಅತಿ ಸೇವನೆಯಿಂದ, ಜಂಕ್ ಪದಾರ್ಥಗಳ ಮಿತಿಮೀರಿದ ಬಳಕೆಯಿಂದ ಬೊಜ್ಜು ಅಧಿಕವಾಗುತ್ತಿದೆ. ಕನ್ನಡದಲ್ಲಿ ಎರಡು ಶಬ್ದಗಳಿವೆ. ಸ್ಥೂಲಕಾಯ (ಓವರ್ ವೇಯ್‌ಟ್‌) ಮತ್ತು ಬೊಜ್ಜು (ಒಬೀಸಿಟಿ). ಸ್ಥೂಲಕಾಯ ಮತ್ತು ಬೊಜ್ಜು ಗಳೆರಡೂ ಪೋಷಕಾಂಶಗಳ ಅತಿಸೇವನೆಯ ಫಲ. ಸ್ಥೂಲಕಾಯವು ಸಮಸ್ಯೆಯ ಆರಂಭದ ಘಟ್ಟವನ್ನು ಸೂಚಿಸಿದರೆ, ಬೊಜ್ಜು ಸಮಸ್ಯೆಯು ತೀವ್ರ ಘಟ್ಟವನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿಯು ನಿಜಕ್ಕೂ ದಪ್ಪಇದ್ದಾನೆಯೆ ಎನ್ನುವುದನ್ನು ತಿಳಿಯಲು, ಅವನು ತನ್ನ ಬಿಎಂಐ (ಬಾಡಿ ಮಾಸ್ ಇಂಡೆಕ್‌ಸ್‌) ತಿಳಿಯಬೇಕಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಎತ್ತರಕ್ಕೆ ಸೂಕ್ತವಾದ ತೂಕವನ್ನು ಗಳಿಸಿದ್ದಾನೆಯೇ ಎನ್ನುವುದು ಈ ಸೂಚ್ಯಂಕದ ಸಾರಾಂಶ. ಇದನ್ನು ಲೆಕ್ಕಹಾಕಲು ಒಂದು ಸೂತ್ರವಿದೆ. ಬಿಎಂಐ = ಶರೀರ ತೂಕ (ಕೆಜಿ) /ಶರೀರದ ಎತ್ತರ2 (ಮೀಟರುಗಳಲ್ಲಿ). ಇದು 18.8 ಕ್ಕಿಿಂತಲೂ ಕಡಿಮೆಯಿದ್ದರೆ ಅದು ನ್ಯೂನಪೋಷಣಾ ಸ್ಥಿತಿಯನ್ನು ಸೂಚಿಸುತ್ತದೆ. ಹಾಗಾಗಿ 18.5 ರಿಂದ 24.9ರವರೆಗೆ ಆರೋಗ್ಯಕರ ಸ್ಥಿತಿಯನ್ನು ಸೂಚಿಸುತ್ತದೆ.
25-29.9 ಸ್ಥೂಲಕಾಯವನ್ನು ಸೂಚಿಸಿದರೆ, 30 ಅಥವ ಅದಕ್ಕಿಿಂತ ಹೆಚ್ಚಿನದು ಬೊಜ್ಜನ್ನು ಸೂಚಿಸುತ್ತದೆ. ಬೊಜ್ಜನ್ನು  ‘ರೋಗಗಳ ರಾಜ’ ಎಂದು ಕರೆಯುವುದುಂಟು. ಒಂದು ಸಲ ಬೊಜ್ಜು ಬಂದಿತೆಂದರೆ, ರಕ್ತದ ಏರೊತ್ತಡ, ಮಧುಮೇಹ,ಹೃದ್ರೋಗ, ಕ್ಯಾನ್ಸರ್, ಕೀಲು ಸವೆತ, ಪಿತ್ತಕೋಶ ಕಲ್ಲುಗಳು ಮುಂತಾದ ಹತ್ತು ಹಲವು ರೋಗಗಳು, ಆಹ್ವಾನವಿಲ್ಲದೆಯೇ ಶರೀರದೊಳಗೆ ಪ್ರವೇಶಿಸುತ್ತವೆ. ಈ ನ್ಯೂನಪೋಷಣೆ ಹಾಗೂ ಅತಿಪೋಷಣೆ ಗಳೆರಡೂ ನಮ್ಮ ದೇಶಕ್ಕೆ ಅಂಟಿರುವ ಶಾಪ. ಈ ಹಿನ್ನೆಲೆಯಲ್ಲಿ ಈ ವರ್ಷದ ಘೋಷವಾಕ್ಯವು ಹೆಚ್ಚು ಅರ್ಥವಾಗಿದೆ. ನಾವು ತಿನ್ನುವ ಒಂದೊಂದು ತುತ್ತು, ನಿಜಕ್ಕೂ ನಮಗೆ ಅಗತ್ಯವೆ, ನಮ್ಮ ಆರೋಗ್ಯವನ್ನು ಕಾಪಾಡುತ್ತದೆಯೇ ಎನ್ನುವುದನ್ನು ಯೋಚಿಸಬೇಕಾಗುತ್ತದೆ. ಹೊಟ್ಟೆ ತುಂಬುವುದಕ್ಕಿಿಂತಲೂ ನಾಲಿಗೆಯ ರುಚಿಗೇ ಹೆಚ್ಚು ಆದ್ಯತೆಯನ್ನು ಕೊಡುವುದರಿಂದ ಬೊಜ್ಜು ಒಂದು ಸಮಸ್ಯೆಯಾಗಿ ಯುವಜನತೆ ಯಲ್ಲೂ ಹೃದಯಾಘಾತಗಳು ಅಧಿಕವಾಗುತ್ತಿವೆ. ಈ ಹಿನ್ನೆಲೆಯಲ್ಲಿ, ನಾವು ಪ್ರತಿದಿನ ಸೇವಿಸುವ ನಮ್ಮ ಆಹಾರದ ಬಗ್ಗೆೆ ಮತ್ತೊಮ್ಮೆ ಯೋಚಿಸಬೇಕಾಗಿದೆ. ರಾಷ್ಟ್ರೀಯ ಪೋಷಕಾಂಶಗಳ ಸಪ್ತಾಹದ ಹಿನ್ನೆೆಲೆಯಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ದಶಮ ಸೂತ್ರಗಳನ್ನು ಪರಿಪಾಲಿಸುವುದು ಒಳ್ಳೆಯದು.
ಸಾಂಪ್ರದಾಯಿಕ ಅಡುಗೆಗಳು: ಸನಾತನ ಭಾರತೀಯ ಪರಿಕಲ್ಪನೆಯಲ್ಲಿ ನಮ್ಮ ಶರೀರದ ಸಮಗ್ರ ಬೆಳವಣಿಗೆಗೆ ಷಡ್ರಸಯುಕ್ತ ಭೋಜನ ಅಗತ್ಯ. ಆರು ರಸಗಳು ಎಂದರೆ ಮಧುರ, ಆಮ್ಲ, ಲವಣ, ಕಟು, ತಿಕ್ತ ಮತ್ತು ಒಗರು (ಕಶಾಯ). ಮಧುರ ರಸವನ್ನು ನೀಡುವ ಆಹಾರ ಪದಾರ್ಥಗಳೆಂದರೆ ಪ್ರಧಾನವಾಗಿ ಕಾರ್ಬೋಹೈಡ್ರೇಟ್ ಪೋಷಕಾಂಶವಿರುವಂತಹ ಅಕ್ಕಿ, ಗೋಧಿ, ರಾಗಿ, ಜೋಳ ಮುಂತಾದ ಧಾನ್ಯಗಳು. ಬೇಳೆಯನ್ನೂ ಇಲ್ಲಿ ಸೇರಿಸಿಕೊಳ್ಳಬಹುದು. ಸಕ್ಕರೆ, ಬೆಲ್ಲ, ಜೇನುತುಪ್ಪ, ಹಾಲು ಮತ್ತು ಹಾಲಿನ ಉತ್ಪನ್ನಗಳು ಇದರಲ್ಲಿ ಸೇರುತ್ತವೆ.
ಆಮ್ಲರಸವೆಂದರೆ ಹುಳಿಯಾಗಿರುವ ಆಹಾರ ಪದಾರ್ಥ ಗಳು. ಭಾರತೀಯ ಅಡುಗೆಗಳಲ್ಲಿ ಹುಣಸೆಹಣ್ಣು ಮುಖ್ಯವಾದದ್ದು. ಹುಣಸೆ ದೊರೆಯ ದಂಥ ಪ್ರದೇಶಗಳಲ್ಲಿ ವಾಟೆಕಾಯಿಯ ಪುಡಿಯನ್ನೋ, ಹುಳಿಸೊಪ್ಪನ್ನೋ ಇಲ್ಲವೇ ನಿಂಬೇರಸವನ್ನೋ ಬಳಸುವುದುಂಟು.
ಹುಳಿ ಎಂದಕೂಡಲೆ ಬಾಯಿಯಲ್ಲಿ ನೀರೂರುತ್ತದೆ. ಜಠರದಲ್ಲಿ ಆಮ್ಲದ ಉತ್ಪಾದನೆಯು ಅಧಿಕ ವಾಗುತ್ತದೆ. ಹುಳಿಯು ಹಸಿವನ್ನು ಹಾಗೂ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುತ್ತವೆ. ಎಲ್ಲ ಹುಳಿಹಣ್ಣುಗಳು ಆಮ್ಲರಸದ ವ್ಯಾಪ್ತಿಯಲ್ಲಿ ಬರುತ್ತವೆ. ಲವಣ ಎಂದರೆ ಉಪ್ಪು. ಉಪ್ಪನ್ನು ಬಳಸದೇ ಭಾರತೀಯ ಅಡುಗೆ ಪದಾರ್ಥಗಳನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಹುಳಿ, ಸಾರು, ಪಲ್ಯ, ಚಟ್ನಿಗಳ ಜೊತೆಯಲ್ಲಿ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಹುರಿಗಾಳು, ಚಿಪ್‌ಸ್‌… ಮುಂತಾದ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಉಪ್ಪು ಬೇಕು. ಉಪ್ಪಿಲ್ಲದ ಪದಾರ್ಥಗಳನ್ನು ಸೇವಿಸಲೇ ಬೇಕಾದರೆ, ಬಾಯಿ ಕೆಟ್ಟುಹೋಗುವುದರ ಜೊತೆಯಲ್ಲಿ ನಾಲಿಗೆಯೂ ಕೆಟ್ಟೂ ಹೋಗುತ್ತದೆ. ಅಡುಗೆಗೆ ಸಮುದ್ರದ ಉಪ್ಪಿನಜೊತೆಯಲ್ಲಿ ಸೈಂಧವ ಲವಣ ವನ್ನೂ ಬಳಸುವ ಪದ್ಧತಿಯು ನಮ್ಮಲ್ಲಿದೆ. ಇತ್ತೀಚಿನ ದಿನಗಳಲ್ಲಿ ಚಟ ಹತ್ತಿಸುವ ಚೀನೀ ಉಪ್ಪಿನ ಬಳಕೆ (ವೈಜ್ಞಾನಿಕವಾಗಿ ಇದು ಉಪ್ಪಲ್ಲ.
ಮಾನೊಸೋಡಿಯಂ ಗ್ಲುಟಾಮೇಟ್ ಎಂಬ ರಾಸಾಯನಿಕ) ಅಧಿಕವಾಗುತ್ತಿದೆ. ಕಟು ಎಂದರೆ ಖಾರ. ಅನಾದಿಕಾಲದಿಂದಲೂ ಭಾರತೀಯರು ಮೆಣಸು ಮತ್ತು ಶುಂಠಿಯನ್ನು ಖಾರಕ್ಕಾಗಿ ಬಳಸುತ್ತಿದ್ದರು. ದಕ್ಷಿಣ ಅಮೆರಿಕದಿಂದ ಬಂದ ಮೆಣಸಿನಕಾಯಿ,ಜನಪ್ರಿಯತೆಯಲ್ಲಿ ಇವೆರಡನ್ನು ಹಿಂದಕ್ಕೆ ಹಾಕಿದೆ. ಬೆಳ್ಳುಳ್ಳಿ, ಈರುಳ್ಳಿ, ಸಾಸಿವೆಗಳೂ ಕಟುರಸದ ವ್ಯಾಪ್ತಿಯಲ್ಲಿ ಬರುತ್ತವೆ. ತಿಕ್ತ ಎಂದರೆ ಕ. ಕಯಂಶವೂ  ಸಹ ಪ್ರತಿದಿನ ನಿಗದಿತ ಪ್ರಮಾಣದಲ್ಲಿ ನಮ್ಮ ಶರೀರವನ್ನು ಸೇರಲೇಬೇಕು. ನಮಗೆಲ್ಲ ಹಾಗಲಕಾಯಿಯ ಕ ಪರಿಚಯದ್ದೇ ಇದೆ.. ಅರಸಿನವಂತೂ ನಮ್ಮ ಹುಳಿ/ಸಾರಿನ ಅವಿಭಾಜ್ಯ ಅಂಗವಾಗಿದೆ. ಹೇರಳೆಕಾಯಿಯಸಮೀಪದ ಹಣ್ಣುಗಳೆಲ್ಲ ಕಹಿಯಾಗಿರುತ್ತವೆ.
ಪ್ರತಿದಿನ ಒಂದು ಹೋಳು ಹೇರಳೆ ಉಪ್ಪಿನಕಾಯಿಯನ್ನು ತಿನ್ನುವುದು ಒಳ್ಳೆಯದು. ಒಗರಾಗಿರುವ ಆಹಾರ ಪದಾರ್ಥಗಳೆಂದರೆ ಹಸಿಬಾಳೆ, ಸುವರ್ಣಗಡ್ಡೆೆ, ಬೆಂಡೇ, ಹಸಿ ಕಡಲೆಯಂತಹವು. ಇಂತಹ ಪದಾರ್ಥಗಳನ್ನೂ ನಿತ್ಯ ಅಲ್ಪ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.
ದಿನಕ್ಕೊೊಂದು ಧಾನ್ಯ:ನಮ್ಮ ಕರ್ನಾಟಕದಲ್ಲಿರುವ ಜನರು ಯಾವುದಾದರೊಂದು ಧಾನ್ಯಕ್ಕೆ ಕಟ್ಟು ಬೀಳುವುದು ಅಧಿಕ. ಹಳೇ ಮೈಸೂರಿನ ಕಡೆಯವರು ಪ್ರಧಾನವಾಗಿ ರಾಗಿಯನ್ನು ಬಳಸಿದರೆ, ಶಿವಮೊಗ್ಗದವರು ಅಕ್ಕಿಯನ್ನು ಬಳಸಿದರೆ, ಉತ್ತರ ಕರ್ನಾಟಕದವರು ಜೋಳವನ್ನು ಬಳಸುತ್ತಾರೆ. ಈ ರೀತಿ ಏಕಧಾನ್ಯ ಸೇವನೆಯು ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ.ನಾವು ಎಲ್ಲ ರೀತಿಯ ಧಾನ್ಯಗಳನ್ನು ಬಳಸಬೇಕು.
ಏಕೆಂದರೆ ಅಗತ್ಯವಾದ ಎಲ್ಲ ಪೋಷಕಾಂಶಗಳು ಒಂದೇ ಧಾನ್ಯದಲ್ಲಿ ದೊರೆಯುವುದಿಲ್ಲ. ಹಾಗಾಗಿ ಎಲ್ಲ ಧಾನ್ಯಗಳನ್ನು ಹಿತ – ಮಿತ ಪ್ರಮಾಣದಲ್ಲಿ ಬಳಸುವುದರಲ್ಲಿ ನಮಗೆ ಲಾಭವಿದೆ. ಉದಾಹರಣೆಗೆ ಸೋಮವಾರ ರಾಗಿರೊಟ್ಟಿ, ಮಂಗಳವಾರ ಗೋಧಿ ಚಪಾತಿ, ಬುಧವಾರ ಜೋಳದ ರೊಟ್ಟಿ, ಗುರುವಾರ ಸಜ್ಜೆರೊಟ್ಟಿ, ಶುಕ್ರವಾರ ಅಕ್ಕಿರೊಟ್ಟಿ, ಶನಿವಾರ ಸೋಯಾರೊಟ್ಟಿ ಹಾಗೂಭಾನುವಾರ ಎಲ್ಲ ಧಾನ್ಯಗಳ ರೊಟ್ಟಿಯನ್ನು ಬಳಸುವುದು ಒಳ್ಳೆಯದು. ಹಾಗೆಯೇ ಸೋಮವಾರ ತೊಗರಿಬೇಳೆ, ಮಂಗಳವಾರ ಕಡಲೆಬೇಳೆ, ಬುಧವಾರ ಹೆಸರುಬೇಳೆ, ಗುರುವಾರ ಹುರಳಿ, ಶುಕ್ರವಾರ ಅಲಸಂದಿ, ಶನಿವಾರ ಬಟಾಣಿ, ಭಾನುವಾರ ರಾಜಮ – ಹೀಗೆ ದಿನಕ್ಕೊೊಂದು ಬೇಳೆಯನ್ನು/ಕಾಳನ್ನು ಅಡುಗೆಗೆ ಬಳಸಬೇಕು.
ಸಸ್ಯಾಹಾರಿಗಳಿಗೆ ಪ್ರೋಟೀನ್ ಕಾಳುಗಳಿಂದ ಮಾತ್ರ ದೊರೆಯುತ್ತದೆ ಎನ್ನುವುದನ್ನು ನೆನಪಿನಲ್ಲಿಡಬೇಕು. ಒಂದೊಂದು ದಿನ ಒಂದೊಂದು ರೀತಿಯ ರೋಟಿ ಅಥವ ಕಾಳಿನ ಪದಾರ್ಥವನ್ನು ಮಾಡಬೇಕಾದರೆ ಗೃಣಿಗೆ ಸ್ವಲ್ಪ ಕಷ್ಟವಾಗುತ್ತದೆ ಎನ್ನುವುದು ನಿಜ. ಆದರೆ ಅದು ಅಸಾಧ್ಯವಲ್ಲ. ಕುಟುಂಬದ ಸಮಗ್ರ ಹಿತಕ್ಕಾಗಿ ಗೃಹಿಣಿಯು ಸ್ವಲ್ಪ ಶ್ರಮವನ್ನು ತೆಗೆದುಕೊಳ್ಳಲೇ ಬೇಕಾಗುತ್ತದೆ.
ಮೂರು ತರಕಾರಿ-ಐದು ಹಣ್ಣು:ಪ್ರತಿದಿನ ಮೂರು ತರಕಾರಿಗಳನ್ನು ಸೇವಿಸಬೇಕು. ಈ ಮೂರು ತರಕಾರಿಗಳಲ್ಲಿ ಒಂದು ಸೊಪ್ಪು ಆಗಿರಬೇಕು. ಸೊಪ್ಪಿನಲ್ಲಿ ಕಬ್ಬಿಣಾಂಶ ಅಧಿಕವಿರುತ್ತದೆ (ಭಾರತೀಯರು ರಕ್ತಕೊರತೆಯಿಂದ- ಅನೀಮಿಯ – ನರಳುವುದು ಸಾಮಾನ್ಯ) ಮತ್ತೊೊಂದು ತರಕಾರಿಯು ಬಣ್ಣದ ತರಕಾರಿಯಾಗಿರಬೇಕು. ಇವುಗಳಲ್ಲಿ ವಿಟಮಿನ್ – ಎ ಮತ್ತು ಸಿಹೆಚ್ಚಿರುತ್ತವೆ. ಮೂರನೆಯದು ನೆಲದೊಳಗೆ ಬಿಡುವ ತರಕಾರಿ ಅಥವ ಮನೆಮಂದಿ ಇಷ್ಟಪಡುವ ಯಾವುದೇ ತರಕಾರಿಯಾಗಬಹುದು. ಪ್ರತಿದಿನವೂ ಐದು ನಮೂನೆಯ ಹಣ್ಣುಗಳನ್ನು ಸೇವಿಸಬೇಕು. ಐದು ಹಣ್ಣು ಎಂದರೆ, ಐದು ಬಾಳೆಹಣ್ಣಲ್ಲ. ಐದೂ ಬೇರೆ ಬೇರೆ ಹಣ್ಣುಗಳು. ಹಣ್ಣುಗಳು ದುಬಾರಿ ಯಾದವು, ಮನೆಯಲ್ಲಿರುವ ಒಬ್ಬೊೊಬ್ಬರಿಗೆ ಒಂದೊಂದು ಹಣ್ಣನ್ನು ಕೊಡುವುದು ಖರ್ಚಿನ ಬಾಬ್ತು ಎನ್ನಬಹುದು.
ಮನೆಯಲ್ಲಿ ಇರುವವ ರೆಲ್ಲರೂ ಇಡೀ ಹಣ್ಣನ್ನು ಸೇವಿಸಬೇಕಾಗಿಲ್ಲ. ಹಣ್ಣಿನ ಒಂದಷ್ಟು ಹೋಳನ್ನೋ ಇಲ್ಲವೇ ತೊಳೆಯನ್ನೋ  ತಿಂದರೆ ಸಾಕಾದೀತು. ಸಾಧ್ಯವಾದಷ್ಟು ಆಯಾ ಋತುಮಾನದಲ್ಲಿ ದೊರೆಯುವ ಹಣ್ಣನ್ನು ಹಾಗೂ ಸ್ಥಳೀಯವಾಗಿ ಬೆಳೆಯುವ ಹಣ್ಣು ಗಳನ್ನು ಸೇವಿಸುವುದು ಒಳ್ಳೆಯದು. ನಮ್ಮ ಆಹಾರದಲ್ಲಿ ಹಣ್ಣು – ತರಕಾರಿ ಗಳು ಪ್ರಧಾನವಾಗಿರಬೇಕು. ಪ್ರತಿ ತಿಂಗಳ ಮನೆಯ ಖರ್ಚನ್ನು ಲೆಕ್ಕ ಹಾಕಿದರೆ, ಹಣ್ಣು ಮತ್ತು ತರಕಾರಿಗಳನ್ನು ಕೊಳ್ಳಲು ಹೆಚ್ಚು ಹಣವನ್ನು ಖರ್ಚು ಮಾಡಿರುವುದು ಎದ್ದು ಕಾಣಬೇಕು.
ಸಂಭಾರ ಪದಾರ್ಥಗಳು:ವಿಶ್ವ ಮಟ್ಟದಲ್ಲಿ ಭಾರತೀಯರ ಹೆಗ್ಗುರುತು ಎಂದರೆ ಸಂಭಾರ ಪದಾರ್ಥಗಳು. ಜೀರಿಗೆ, ಮೆಣಸು, ಚಕ್ಕೆೆ, ಲವಂಗ, ಏಲಕ್ಕಿ, ಸಾಸಿವೆ, ಮೆಂತ್ಯ, ಧನಿಯ, ಶುಂಠಿ, ಅರಸಿನ, ಇಂಗು, ಚಕ್ರಮೊಗ್ಗು, ಸೋಂಪು, ಓಮ, ಜಾಕಾಯಿ, ಜಾಪತ್ರೆ, ಹುಣಸೆ, ಕೊತ್ತಂಬರಿ, ಪುದಿನ – ಹೀಗೆ ಪಟ್ಟಿಯು ಬೆಳೆಯುತ್ತಲೇ ಹೋಗುತ್ತದೆ. ಇಂಗು ಗಿಡದ ಹಾಲನ್ನು ಸಂಗ್ರಹಿಸಿ ಒಣಗಿಸಿದರೆ ಇಂಗು ಸಿದ್ಧ. ಇಂಗು ಗಿಡವು ಈ ಹಾಲನ್ನು ಏಕೆ ಉತ್ಪಾದಿಸುತ್ತದೆ? ಈ ಹಾಲು ಇಂಗು ಗಿಡಕ್ಕೆೆ ರೋಗಗಳನ್ನು ಉಂಟು ಮಾಡಬಲ್ಲ,ಬ್ಯಾಕ್ಟೀರಿಯ, ವೈರಸ್, ಕೀಟಗಳನ್ನು ದೂರವಿಡುತ್ತದೆ. ಇಂಗು ಗಿಡವು ಹಾಲನ್ನು ತನ್ನ ರಕ್ಷಣೆಗಾಗಿ ಉತ್ಪಾದಿಸುತ್ತದೆ. ಶತ್ರುವಿನ ಶತ್ರು ನಮ್ಮ ಮಿತ್ರನಲ್ಲವೆ!
ಹಾಗಾಗಿ, ಸಸ್ಯಗಳ ಇಂತಹ ರಕ್ಷಣಾತ್ಮಕ ಭಾಗಗಳನ್ನು ಹುಡುಕಿ ತಂದು ಅವನ್ನು ದೈನಂದಿನ ಅಡುಗೆಯಲ್ಲಿ ಬಳಸಲಾರಂಭಿಸಿದರು ನಮ್ಮ ಹಿರಿಯರು. ಹೀಗೆ ಗಿಡಗಳ ರಕ್ಷಣಾತ್ಮಕ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ರಸಂ – ನಿಜಕ್ಕೂ ಉತ್ತಮ ಟಾನಿಕ್. ಕರೋನಾ ಕಾಲದಲ್ಲಿ ನಿತ್ಯ ರಸಂ ಸೇವನೆಯು ಅಥವ ಕಷಾಯ ಪಾನವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಿನ್ನೆೆಲೆಯಲ್ಲಿ ಪ್ರತಿದಿನವು ಸಂಭಾರ ಪದಾರ್ಥಗಳನ್ನು ಹಿತ-ಮಿತವಾಗಿ ಬಳಸುವುದರಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿದೆ.
(ಮುಂದುವರಿಯಲಿದೆ)