ಭಣಗುಟ್ಟುತ್ತಿರುವ ಶಾಲೆಗಳನ್ನು ತೆರೆಯುವುದೆಂದು…?
ಅಭಿಮತಟಿ.ದೇವದಾಸ್
ಛೆ …ಇದೆಂಥಾ ದುರಂತವೋ ಗೊತ್ತಿಲ್ಲ. ನಾಕು ತಿಂಗಳುಗಳಾದವು. ಶಾಲೆಗಳು ಭಣಗುಟ್ಟುತ್ತಿವೆ. ದೇವಸ್ಥಾನಗಳು ಮುಚ್ಚಿವೆ. ಈಗ ತೆರೆದರೂ ಭಕ್ತರಿಲ್ಲದೆ ಖಾಲಿಗುಟ್ಟುತ್ತಿವೆ. ಹೋಟೆಲ್ಲುಗಳು ನೊಣ ಹೊಡೆಯುತ್ತಿವೆ. ಇಂಥ ಪರಿಸ್ಥಿತಿ ಯಾವತ್ತೂ ಯಾರಿಗೂ ಬರಬಾರದು. ಮೊಟ್ಟಮೊದಲ ಬಾರಿಗೆ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಸ್ವಾತಂತ್ರ್ಯ ದಿನಾಚರಣೆ, ಶಿಕ್ಷಕರ ದಿನಾಚರಣೆಯನ್ನುಆಚರಿಸಿದವು. ಗಣೇಶನ ಹಬ್ಬ ಯಾವ ಸಂಭ್ರಮವೂ ಇಲ್ಲದೆ ಮುಗಿದೇ ಹೋಯಿತು. ಇತರ ಧಾರ್ಮಿಕ ಹಬ್ಬಗಳೂ ಮಂಕಾದವು.
ಈಗೀಗ ಬಸ್ಸುಗಳು ಓಡಾಡುತ್ತಿವೆ. ಆದರೆ ಯಾರೂ ಪ್ರಯಾಣಿಸುತ್ತಿಲ್ಲ. ಎದುರಿಗೆ ಸಿಕ್ಕರೂ ಮಾತನಾಡಲಾಗದ ಪರಿಸ್ಥಿತಿ. ಎಲ್ಲರ ಮೇಲೂ ಸಂದೇಹ, ಅನುಮಾನದ ವಾಸನೆ. ಹಾಗಾದರೆ ಏನಾಗಿದೆ ನಮಗೆಲ್ಲ? ಕೇವಲ ಆರು ತಿಂಗಳಿಗೆ ಈ ಪರಿಯಲ್ಲಿ ಬದಲಾವಣೆಗಳು ಸಂಭವಿಸಲು ಆದದ್ದಾದರೂ ಏನು? ಅದೊಂದು ವೈರಸ್ಸು ಇಷ್ಟೊೊಂದು ಹೈರಾಣಾಗಿಸಿಬಿಟ್ಟಿತೇ? ಎಲ್ಲವೂಅಚ್ಚರಿ, ನಿಗೂಢ, ಅನುಮಾನ, ಕೊನೆಯಲ್ಲಿ ಸಸ್ಪೆೆನ್‌ಸ್‌…!
ಶಾಲೆಗಳು ಬರಿದಾಗಿವೆ ಮಕ್ಕಳಿಲ್ಲದೆ. ಸ್ಮಶಾನವಾಗಿದೆ ಊರು – ಕೇರಿಗಳು ತನ್ನ ಸಹಜ ಸೌಂದರ್ಯವನ್ನು ಕಳೆದುಕೊಂಡಿವೆ. ಶಾಲೆಗಳು, ದೇವಾಲಯಗಳು ಕಳಾಹೀನವಾಗಿರುವುದನ್ನು ನೋಡಿದರೆ ನೋವಾಗುತ್ತದೆ. ಇಂಥ ದುಸ್ಥಿತಿ ಯಾವ ಕಾಲಕ್ಕೂ ಬರಬಾರದು ಎನ್ನುತ್ತಲೇ ಇನ್ನೂ ನಾವು ತಲೆಯ ಮೇಲೆ ಕೈಹೊತ್ತು ಕುಳಿತುಕೊಂಡರೆ ಯಾವ ಸಾಧನೆಯೂ ಸಾಧ್ಯವಾಗುವು ದಿಲ್ಲ! ಹೆಚ್ಚು ಕಡಿಮೆ ಮಕ್ಕಳಿಗೆ ಶಾಲೆ ಮರೆತೇ ಹೋಗುತ್ತಿದೆ.
ದೀರ್ಘಾವಧಿಯ ಬಿಡುವು ಒಂದು ರೀತಿಯ ಏಕತಾನತೆಯನ್ನು ಹುಟ್ಟಿಸಿ ಬಿಡುತ್ತದೆ. ಈ ಮಧ್ಯೆ ಮಕ್ಕಳಲ್ಲಿ ವ್ಯತಿರಿಕ್ತವೆನಿಸುವ ವರ್ತನೆಗಳು ಕಾಣತೊಡಗಿವೆ. ಪೋಷಕರು ಏನೇ ಹೇಳಿದರೂ ಸಿಡುಕುವ ಪ್ರವೃತ್ತಿ ಅವರಲ್ಲಿ ಹೆಚ್ಚುತ್ತಿದೆ. ಅದರಲ್ಲೂ ಸ್ಟಡಿಯ ಬಗ್ಗೆಯಂತೂ ಮಾತನಾಡುವ ಪ್ರಶ್ನೆಯೇ ಇಲ್ಲ. ಆನ್ ಲೈನ್ ಟೀಚಿಂಗ್ ಎಂಬುದು ಮಕ್ಕಳ ಸಹಜ ಆಸಕ್ತಿ – ಅಭಿರುಚಿಗಳ ಲೈನನ್ನೇ ತಪ್ಪಿಸಿದೆ.
ಆನ್ ಲೈನ್ ಪಾಠ ಅಂತ ಮೊಬೈಲ್ ತಗೊಂಡು ರೂಮಿಗೆ ಸೇರಿದ ಹುಡುಗ ಇಡೀ ದಿನ ಪಬ್ಜಿ ಆಡಿದ್ದಾನೆಂದರೆ ತಪ್ಪು ಯಾರದ್ದೆಂದು ಅರ್ಥವಾಗುತ್ತಿಲ್ಲ. ಮುಖ್ಯವಾಗಿ, ಆರಂಭದಲ್ಲಿ ಕರೋನಾ ಸೋಂಕಿನ ಬಗ್ಗೆ ಜನರಲ್ಲಿದ್ದ ಭಯ ಮತ್ತು ಆತಂಕ ಈಗ ಇದ್ದಂತಿಲ್ಲ. ಕರೋನಾಕ್ಕೆ ವ್ಯಾಕ್ಸಿನ್ ಕಂಡುಹಿಡಿದಿಲ್ಲ. ಮುನ್ಸೂಚನೆಯೇನೋ ಹತ್ತಿರದಲ್ಲಿದೆ. ಸೋಂಕಿಗೆ ತಕ್ಷಣಕ್ಕೆ ಒದಗಬಹುದಾದ ನಿರ್ದಿಷ್ಟ ಮೆಡಿಸಿನ್ ಇಲ್ಲ. ಇದ್ದ ಮೆಡಿಸಿನ್ನುಗಳಲ್ಲೇ ಯಾವುದು ನಿಧಾನವಾಗಿ ಕ್ಯೂರ್ ಮಾಡಲು ಅನುಕೂಲವೋ ಅದನ್ನೇ ಕೊಡುತ್ತಿರುವ ಸಂಗತಿ ಎಲ್ಲರಿಗೂ ಗೊತ್ತಿರುವಂಥದ್ದೇ! ಮತ್ತು ಇಮ್ಯುನಿಟಿ ಶಕ್ತಿಯನ್ನು  ಹೆಚ್ಚಿಸುವುದಕ್ಕಾಗಿ ಇತರ ಆದ್ದರಿಂದ ಒಂದು ಮಾರಣಾಂತಿಕ ಎನಿಸಿದ ವೈರಸ್ ಮೆಡಿಸಿನ್ ಇಲ್ಲದೆಯೂ ವಾಸಿಯಾಗುತ್ತದೆಎಂಬಲ್ಲಿಗೆ ಹೈಸ್ಕೂಲ್, ಪಿಯು ಮತ್ತು ಮೇಲಿನ ತರಗತಿಯನ್ನು ಆರಂಭಿಸಲು ಯಾವ ಆತಂಕವೂ ಇಲ್ಲವೆನಿಸುತ್ತದೆ. ಮಾರ್ಚ್ 15 ರಿಂದ ಈ ಹೊತ್ತಿನವರೆಗೂ ಇಷ್ಟು ದೀರ್ಘಕಾಲದ ರಜೆ ಕಲಿಕೆಯ ಆಸಕ್ತಿಯನ್ನೇ ಕೊಂದುಬಿಡುತ್ತದೆ.
ಸೈಕಲಾಜಿಕಲಿ ಇದು ಮಕ್ಕಳ ಒಳ್ಳೆಯ ಪರಿಣಾಮವನ್ನಂತೂ ಬೀರಲಾರದು. ಕಡಿಮೆ ಮಕ್ಕಳಿರುವ ಶಾಲೆಗಳನ್ನು ಆರಂಭಿಸಲು ಯಾವ ಅಡ್ಡಿಯೂ ಇಲ್ಲ. ಹೆಚ್ಚು ಮಕ್ಕಳಿದ್ದು ಸೆಕ್ಷನ್ನುಗಳಲ್ಲಿ ತರಗತಿಗಳನ್ನು ನಡೆಸುವ ಶಾಲೆಗಳು ವಾರದಲ್ಲಿ ಎರಡು ದಿನಗಳಿಗೆ ಮಾತ್ರ ಪ್ರತಿ ಸೆಕ್ಷನ್ನುಗಳಿಗೂ ತರಗತಿಯನ್ನು ನಡೆಸಬಹುದು. ಮುಖ್ಯವಾಗಿ ಮನೆಯಿಂದ ಶಾಲೆಗೆ ಬರುವ ಮಕ್ಕಳ ಆರೋಗ್ಯದಲ್ಲಿ ಏನೇ ವ್ಯತ್ಯಾಸವಾದರೂ ಪೇರೆಂಟ್‌ಸ್‌‌ಗಳು ಜವಾಬ್ದಾರಿಯನ್ನು ವಹಿಸಬೇಕಾಗುತ್ತದೆ.
ಪೋಷಕರು ಮುತುವರ್ಜಿಯನ್ನು ವಹಿಸಿದರೆ ಸೋಂಕಿನ ಕುರಿತಾದ ಭಯವಿರಲು ಸಾಧ್ಯವಿಲ್ಲ. ಪೋಷಕರೇ ತಮ್ಮ ಮಕ್ಕಳನ್ನು ನಿತ್ಯವೂ ಶಾಲೆಗೆ ಕರೆದುಕೊಂಡು ಬರುವ ಹೋಗುವ ಕಾರ್ಯವನ್ನು ಮಾಡಲೇ ಬೇಕಾಗುತ್ತದೆ. ಶಾಲೆಯಲ್ಲಿ ಮಕ್ಕಳು ಒಟ್ಟಿಗೆಬೆರೆಯುವುದನ್ನು ಆದಷ್ಟು ನಿಯಂತ್ರಣ ಮಾಡುವಲ್ಲಿ ಶಿಕ್ಷಕರು, ಶಿಕ್ಷಕಕೇತರ ಸಿಬ್ಬಂದಿಗಳು ಜವಾಬ್ದಾರಿ ವಹಿಸಬೇಕು. ಶಾಲಾ ವಾಹನಗಳಿಗೆ, ಖಾಸಗಿ ಶಾಲಾ ವಾಹನಗಳಿಗೆ ಇಂತಿಷ್ಟು ಮಕ್ಕಳು ಅಂತ ನಿರ್ದಿಷ್ಟಪಡಿಸಬೇಕು. ಮನೆ ಮತ್ತು ಶಾಲೆಯಲ್ಲಿಸೋಂಕು ಹರಡದಂತೆ ಮುನ್ನೆೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವುದು ಅತೀಮುಖ್ಯ. ಮಾಸ್‌ಕ್‌, ಸಾಮಾಜಿಕ ಅಂತರ, ಉಗಿಯದಿರುವುದು ಇಂಥ ನಿಯಮಗಳನ್ನು ಪಾಲಿಸುವುದು ಮುಖ್ಯ. ಬೆಳಗ್ಗೆ ಮತ್ತು ಶಾಲಾವಧಿಯ ಅನಂತರ ಪ್ರತಿ ವಿದ್ಯಾರ್ಥಿಯ ದೇಹದ ಉಷ್ಣತೆಯನ್ನು ಪರೀಕ್ಷಿಸುವ ಕಾರ್ಯವನ್ನು, ಕಾಲಾವಧಿಯಲ್ಲಿ ಮಕ್ಕಳ ಓಡಾಟ ಗಳ ಬಗ್ಗೆೆ ದೈಹಿಕಅಧ್ಯಾಪಕರು ಇತರ ಶಿಕ್ಷಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ನಿರ್ವಹಿಸಬೇಕು.
ಮುಖ್ಯ ಶಿಕ್ಷಕರು, ಶಿಕ್ಷಕರು ಪೋಷಕರೊಂದಿಗೆ ಶಾಲಾರಂಭವಾಗಿ ಸ್ವಲ್ಪ ದಿನಗಳವರೆಗೆ ಮಕ್ಕಳ ಸ್ಟಡಿ ಮತ್ತು ಆರೋಗ್ಯಕ್ಕೆೆಸಂಬಂಧಿಸಿದ ವಿಚಾರಣೆಗೆ ಫೋನ್ ಸಂಪರ್ಕವನ್ನು ಇಟ್ಟುಕೊಳ್ಳುವುದೊಳಿತು. ಸ್ಥಳೀಯವಾಗಿ ಲಭ್ಯವಾಗುವ ಒಬ್ಬ ಡಾಕ್ಟರನ್ನು ಈ ಶೈಕ್ಷಣಿಕ ವರ್ಷ ಪೂರ್ತಿ ನಿಯೋಜಿಸಿಕೊಳ್ಳುವುದು. ಸರಕಾರಿ ಶಾಲೆಗಳಿಗೆ ಸರಕಾರಿ ವೈದ್ಯರನ್ನು ನೇಮಿಸ ಬೇಕು. ದಿನಕ್ಕೆೆ ಇಂತಿಷ್ಟು ಅವಧಿಯೆಂದು ನಿರ್ಧರಿಸಿ ಕಲಿಕಾ ಪಠ್ಯಾಾಂಶಗಳ ಕಡೆಗೆ ಗಮನವಿರುವಂತೆ ಪಠ್ಯ, ಪಠ್ಯೇತರ ಚಟುವಟಿಕೆಗಳನ್ನು ನಡೆಸುವುದು ಅಂಥಾ ಪರಿಯ ಸಮಸ್ಯೆೆಯೇ ಅಲ್ಲ. ಪಾಳಿ ಪ್ರಕಾರ ಶಾಲೆಯನ್ನು ಬೆಳಗ್ಗೆೆ ಮತ್ತು ಮಧ್ಯಾಾಹ್ನ ನಡೆಸುವುದುಅನುಕೂಲಕರ. ವಸತಿ ವಿದ್ಯಾಲಯಗಳಿಗಂತೂ ಇನ್ನೂ ಸುಲಭ. ಶಾಲಾರಂಭದ ಹತ್ತು ದಿನಗಳ ಮುಂಚೆಯೇ ಮಕ್ಕಳನ್ನು ಹಾಸ್ಟೆೆಲಿಗೆ ಕರೆಸಿ ಕ್ವಾರಂಟೈನ್ ಮಾಡಬೇಕು. ಆಮೇಲೆ ತರಗತಿ ಆರಂಭಿಸಬೇಕು. ಒಬ್ಬ ವಿದ್ಯಾರ್ಥಿಯ ದೇಹಾರೋಗ್ಯದಲ್ಲಿ ಸ್ವಲ್ಪಮಟ್ಟಿಗಿನ ವ್ಯತ್ಯಾಸ ಕಂಡುಬಂದರೂ ಉಳಿದವರಿಂದ ಅವನನ್ನು ಪ್ರತ್ಯೇಕಿಸಬೇಕು.
ಪೇರೆಂಟ್‌ಸ್‌‌ಗಳಿಗೆ ತಿಳಿಸಬೇಕು. ಪ್ರತಿ ವಿದ್ಯಾರ್ಥಿಗೂ ಇಮ್ಯುನಿಟಿ ಹೆಚ್ಚಿಸುವಂಥ ಆಹಾರಗಳನ್ನು ನಿತ್ಯವೂ ನೀಡಬೇಕು. ಶೀತ, ಕೆಮ್ಮು, ಗಂಟಲು ಕೆರೆತ, ಉಸಿರಾಟದಲ್ಲಿ ತೊಂದರೆ, ತಲೆನೋವು, ತಲೆಭಾರ ಇತ್ಯಾಾದಿಯೆಲ್ಲವೂ ಸಾಮಾನ್ಯವಾಗಿ ಮಕ್ಕಳಿಗೂ ದೊಡ್ಡವರಿಗೂ ಬರುವಂಥದ್ದೇ ಆಗಿದ್ದರೂ ತ್ವರಿತವಾಗಿ ಚಿಕಿತ್ಸೆಗೊಳಗಾಗಬೇಕು ಪೋಷಕರ ಜವಾಬ್ದಾರಿ ಮಕ್ಕಳಅಧ್ಯಯನದ ಕಡೆಗೂ, ಆರೋಗ್ಯದ ಕಡೆಗೂ ಇರಬೇಕಾದುದು ಈ ಸಂದರ್ಭದಲ್ಲಿ ಅತೀ ಮಹತ್ವವಾದುದು.
ಸೆಪ್ಟೆೆಂಬರ್ 21ಕ್ಕೆೆ 9-12ರವರೆಗಿನ ತರಗತಿಗಳನ್ನು ಆರಂಭಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಭಾಗಶಃ ತೆರೆಯಲು ಅನುಮತಿಯನ್ನು ಮಾರ್ಗಸೂಚಿಯೊಂದಿಗೆ ನೀಡಿದೆ. 21ಕ್ಕೆೆ ಸಾಧ್ಯವಾಗದಿದ್ದರೆ ಕೊನೆಯಪಕ್ಷ ಅಕ್ಟೋಬರ್  1ರಿಂದಾದರೂ ಭಣಗುಟ್ಟುತ್ತಿರುವ ಶಾಲೆಗಳನ್ನು ತೆರೆಯುವುದೊಳಿತು. ಆಗಮಾತ್ರ ಆನ್ ಲೈನ್, ಆಫ್ ಲೈನ್, ಫೀಸು, ಅರ್ಧ ಫೀಸು, ಅರ್ಧ ಸಂಬಳ- ಇವೆಲ್ಲ ಸಮಸ್ಯೆಗಳಿಗೆ ಮುಕ್ತಿ ದೊರಕುತ್ತದೆ.