ಗ್ರಾಮ ಪಂಚಾಯತ್ ಚುನಾವಣೆ ಎಂದು ?
ಅಭಿಮತ
ಸಂದೀಪ್ ಶರ್ಮಾ
ನವೆಂಬರ್೩ರಂದು ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ಆದರೆ ನಿರೀಕ್ಷೆಯಂತೆ ಕೋವಿಡ್ ಸಂದರ್ಭದ ನೆಪವೊಡ್ಡಿ ಗ್ರಾಮ ಪಂಚಾಯತ್ ಚುನಾವಣೆಗಳನ್ನು ಮುಂದೂಡುವಂತೆ ಕೋರಿ ರಾಜ್ಯ ಸರಕಾರ ಚುನಾವಣ ಆಯೋಗಕ್ಕೆ ಪತ್ರ ಬರೆದಿದೆ. ವಿರೋಧ ಪಕ್ಷಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸಹ ಚುನಾವಣೆ ಮುಂದೂಡಿ ಕೆಗೆ ದನಿಗೂಡಿಸಿವೆ.
ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ, ಕರೋನಾ ಮಹಾಮಾರಿಯ ನೆಪದಿಂದಾಗಿ ಯೋಜನೆ ಗಳೆಲ್ಲವೂ ಹಳ್ಳಹಿಡಿದಿವೆ. ಕೆಲತಿಂಗಳುಗಳ ಹಿಂದೆ ಕಾಂಗ್ರೆಸ್ ಪಕ್ಷದವರು ಚುನಾವಣೆ ನಡೆಸಬೇಕು ಎಂದು ಸಾರ್ವಜನಿಕ ಹಿತಾ ಸಕ್ತಿ ಅರ್ಜಿ ಮೂಲಕ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ತಮ್ಮ ವರಸೆಯನ್ನು ಮತ್ತೊಂದು ದಿಕ್ಕಿನತ್ತ ಒಯ್ಯುತ್ತಿzರೆ ಹಾಗೂ ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಲು ಆಯೋಗಕ್ಕೆ ಮನವಿ ಮಾಡಿದೆ.
ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಎಲ್ಲ ರೀತಿಯ ಸಿದ್ಧತೆ ನಡೆಸಿ ಸಜ್ಜಾಗಿದ್ದ ಚುನಾವಣ ಆಯೋಗವೂ ಮುಂದೂಡಿಕೆ ಸಾಧ್ಯವಿಲ್ಲ ಎಂದು ಹೈಕೋರ್ಟ್‌ಗೆ ಸ್ಪಷ್ಟವಾಗಿ ತಿಳಿಸಿದೆ. ಕೇಂದ್ರ ಸರಕಾರ ಚುನಾವಣೆ ನಡೆಸುವ ಸಂಬಂಧ ನೀಡಲಾಗಿರುವ ಮಾರ್ಗದರ್ಶಿಗಳನ್ನೂ ಸೂಕ್ತವಾಗಿ ಪಾಲಿಸಲು ಸಿದ್ಧರಿದ್ದೇವೆ ಎಂದು ಈ ಹಿಂದೆಯೇ ಆಯೋಗ ಸ್ಪಷ್ಟವಾಗಿ ಹೇಳಿದೆಯಾದರೂ ರಾಜ್ಯ ಸರಕಾರ ಮನಸ್ಸು ಮಾಡುತ್ತಿಲ್ಲ. ಗ್ರಾಮ ಪಂಚಾಯತ್‌ಗಳ ವಿಕೇಂದ್ರೀಕರಣವಾಗಿ, ಅದರ ಅವಧಿ ಮುಗಿದು ಐದಾರು ತಿಂಗಳು ಕಳೆದರೂ ಚುನಾವಣೆ ನಡೆದಿಲ್ಲ. ಕರೋನಾ ಹಿನ್ನೆಲೆಯಲ್ಲಿ ಚುನಾವಣೆ ಬೇಡ ಎಂಬುದು ಸರಕಾರ ಹಾಗೂ ರಾಜಕೀಯಪಕ್ಷಗಳು ತಮ್ಮ ವಾದಗಳನ್ನು ಮಂಡಿಸುತ್ತಲೇ ಇವೆ.
ಆದರೆ ರಾಜ್ಯದಲ್ಲಿ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ, ವಿಧಾನ ಪರಿಷತ್ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯು ತ್ತಿದೆ. ಇದಕ್ಕೆ ಅವಕಾಶ ಕೊಟ್ಟಿರುವಾಗ ಗ್ರಾಮ ಪಂಚಾಯತ್ ಚುನಾವಣೆ ಯಾಕೆ ಬೇಡ ಎಂಬುದು ಗ್ರಾಮೀಣ ಭಾಗದ ಜನರಅಳಲು. ರಾಜ್ಯವ್ಯಾಪಿ ಚುನಾವಣೆ ನಡೆಸುವಾಗ ಗ್ರಾಮಗಳ ಚುನಾವಣೆ ನಡೆಸುವುದು ಕಷ್ಟವೇನಲ್ಲ ಎಂಬ ಅಭಿಪ್ರಾಯವೂ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೆ ದೇಶದ ಉತ್ತರ ಭಾರತದಲ್ಲಿನ ಬಿಹಾರದಲ್ಲಿ ವಿಧಾನಸಭೆ ಚುನಾವಣೆಯನ್ನೇ ನಡೆಸಲಾಗುತ್ತಿದೆ.
ಈ ಮೊದಲು ಚುನಾವಣೆ ನಡೆಸಲು ನಾವು ತಯಾರಿದ್ದೇವೆ ಎಂದು ಹೇಳುತ್ತಲೇ ಚುನಾವಣೆ ಮುಂದೂಡಿಕೆಗೆ ಆಯೋಗಕ್ಕೆ ಪತ್ರ ಬರೆದಿರುವ ಸರಕಾರದ ನಿಲುವು ಅನುಮಾನಕ್ಕೆ ಕಾರಣವಾಗಿದೆ. ಹಾಗೂ ಕಾರ್ಯವೈಖರಿಯು ಹಾಸ್ಯಾಸ್ಪದವಾಗಿದೆ. ಗ್ರಾಮ ಪಂಚಾಯತ್ ಚುನಾವಣೆ ಯಾಕೆ ನಡೆಸುತ್ತಿಲ್ಲ ಎಂದು ಗ್ರಾಮೀಣ ಭಾಗದ ಜನರು ಜನಪ್ರತಿನಿಧಿಗಳನ್ನು ಪ್ರಶ್ನಿಸುತ್ತಿದ್ದಾರೆ. ಗ್ರಾಮ ಪಂಚಾಯತ್‌ಗೆ ಚುನಾವಣೆ ನಡೆದರೆ ಅಭಿವೃದ್ಧಿ ಯೋಜನೆಗಳಿಗೂ ವೇಗ ಸಿಗುತ್ತದೆ ಮತ್ತು ಜನರ ಮನೋಬಲವು ಹೆಚ್ಚುತ್ತದೆ.ರಾಜಕೀಯ ಧುರೀಣರು ಇಲ್ಲದಿದ್ದರೆ ಸ್ಥಳೀಯ ಆಡಳಿತ ವ್ಯವಸ್ಥೆ ಇಲ್ಲದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಷ್ಟ ವಾಗುತ್ತದೆ ಎಂದು ಸರಕಾರ ತಿಳಿದುಕೊಳ್ಳಬೇಕಿದೆ.
ಪ್ರತಿ ಗ್ರಾಮಕ್ಕೂ ಹಾಗೂ ಹಳ್ಳಿ ಹಳ್ಳಿಗಳಿಗೆ ಕರೋನಾ ವೈರಸ್ ಸೋಂಕು ಹರಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಕರೋನಾ ನಿಯಂತ್ರಣ ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಅಽಕಾರಿಗಳು ಮತ್ತು ಜನಪ್ರತಿನಿಧಿಗಳಿದ್ದರೆ ಕೊಂಚ ನೆಮ್ಮದಿ ಇರುತ್ತಿತ್ತು ಎಂಬುದು ಜನರ ಅಭಿಪ್ರಾಯ. ಈ ನಿಟ್ಟಿನದರೂ ಸರಕಾರ ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಸಬಹುದಿತ್ತು. ಈ ನಡುವೆ, ಆಡಳಿತಾಧಿಕಾರಿಗಳ ಅವಧಿಯಲ್ಲಿ ಬಹುತೇಕ ಕಡೆಗಳಲ್ಲಿ ಗ್ರಾಮ ಸಭೆಗಳೇ ನಡೆದಿಲ್ಲ. ಗ್ರಾಮಸಭೆಗಳು ನಡೆಯದಿದ್ದರೆ ಸರಕಾರದ ಯೋಜನೆಗಳಿಗೆ -ಲಾನುಭವಿಗಳ ಆಯ್ಕೆಯೂ ಕಷ್ಟವಾಗುತ್ತಿದೆ.
ಇಷ್ಟೆಲ್ಲ ವಾಸ್ತವ ಸಂಗತಿಗಳು ಇದ್ದರೂ ಸರಕಾರ ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಗಮನ ಹರಿಸದಿರಲು ವಿಷಾದ ನೀಯ. ಚುನಾವಣಾ ಆಯೋಗವು ರಾಜ್ಯ ಸರಕಾರವನ್ನು ಗ್ರಾಮ ಪಂಚಾಯತ್ ಚುನಾವಣೆಯನ್ನು ನಡೆಸಲು ಮತ್ತಷ್ಟುಒತ್ತಡವನ್ನು ಹೇರಿ ಕೇಂದ್ರದ ಗಮನಕ್ಕೆ ತರಬೇಕು ಹಾಗೂ ಚುನಾವಣೆಯನ್ನು ನಡೆಸಬೇಕು, ಗ್ರಾಮೀಣ ಭಾಗವು ಅಭಿವೃದ್ಧಿ ಹೊಂದಬೇಕು.