ಜಿಡಿಪಿ ಕುಸಿತ ಭವಿಷ್ಯ ಭಾರತದ ಅಭಿವೃದ್ದಿಗೆ ಹೊಡೆತವೇ ?
ವಿಶ್ಲೇಷಣೆ
ಶಶಿಕುಮಾರ್‌ ಕೆ.
೨೦೨೦-೨೧ರ ಮೊದಲ ತ್ರೈಮಾಸಿಕದಲ್ಲಿ ಒಟ್ಟಾರೆ ದೇಶೀಯ ಉತ್ಪನ್ನ(ಜಿಡಿಪಿ) ಋಣಾತ್ಮಕ ಬೆಳವಣಿಗೆ-೨೩.೯%ಕ್ಕೆ ಕುಸಿತ ಕಂಡಾಗ ದೇಶದಲ್ಲಿ ಅನೇಕರು ಭಾರತವನ್ನು ನಿಷ್ಪ್ರಯೋಜಕ ರಾಷ್ಟ್ರಗಳಿಗೆ ಹೋಲಿಸಿ ಆರ್ಥಿಕತೆ ಹಳ್ಳ ಹಿಡಿಯಿತು ಎಂದು ವಾದಿಸತೊಡಗಿದ್ದಾರೆ.
ಪ್ರಸ್ತುತ ಜಿಡಿಪಿಯ ಬಗ್ಗೆ ಚರ್ಚೆ ನಡೆಸುವುದಕ್ಕೆ ಮುನ್ನ ಹತ್ತು ವರ್ಷಗಳ ಹಿಂದಿನ ಭಾರತದ ಬೆಳವಣಿಗೆಯನ್ನು ಪರಿಶೀಲಿಸುವುದು ಉತ್ತಮ.೨೦೧೦ರಲ್ಲಿ ಜಿಡಿಪಿಯ ಬೆಳವಣಿಗೆ ದರ ಶೇ.೧೧.೪೦ರಷ್ಟಿದ್ದು ಸ್ವತಂತ್ರ ಭಾರತದ ಇತಿಹಾಸದ ಸುವರ್ಣ ಯುಗದ ಅವಧಿ ಎಂದು ಬಿಂಬಿಸಲಾಗಿತ್ತು. ಆದರೆ ಈ ಅವಽಯಲ್ಲಿ ಜಿಡಿಪಿ ಬೆಳವಣಿಗೆ ದಾಖಲಿಸಿದ್ದು ಹೆಚ್ಚಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ.
ಭೂಮಿಯ ಖರೀದಿ, ಕಟ್ಟಡಗಳ ನಿರ್ಮಾಣ, ಸೋಫಾ ಮುಂತಾದ ಪೀಠೋಪಕರಣಗಳ ಖರೀದಿಯೇ ಇಲ್ಲಿ ಹೆಚ್ಚಾಗಿ ಜಿಡಿಪಿಯ ಬೆಳವಣಿಗೆ ದರ ವಿಲಾಸಿ ಮನೆಯಲ್ಲಿ, ವಿಲಾಸಿ ವಸ್ತುಗಳಲ್ಲಿ ಹೂಡಿಕೆಯಾಗುತ್ತಿತ್ತು. ಅಲ್ಲದೆ ಈ ಅವಧಿಯಲ್ಲಿ ಬ್ಯಾಂಕುಗಳಲ್ಲಿನ ಅನುತ್ಪಾದಕ ಸಾಲದ ಪ್ರಮಾಣ೭ಲಕ್ಷ ಕೋಟಿಗೆ ತಲುಪಿ ದೇಶದ ಬ್ಯಾಂಕುಗಳು ಯಾವಾಗ ಬೇಕಾದರೂ ದಿವಾಳಿಯಾಗುವ ಸ್ಥಿತಿಗೆ ತಲುಪಿದವು.
ಇದರ ಪರಿಣಾಮ೨೦೧೩ರ ವೇಳೆಗೆ ಫ್ರೆಜಿಲ್-೫ಆರ್ಥಿಕತೆಯ ರಾಷ್ಟ್ರಗಳ ಗುಂಪಿಗೆ ( ಬ್ರೆಜಿಲ್‌, ಭಾರತ, ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ, ಟರ್ಕಿ) ಭಾರತ ಸೇರ್ಪಡೆಯಾಯಿತು. ಇದರ ಅರ್ಥ ರಾಷ್ಟ್ರಗಳ ಆರ್ಥಿಕತೆ ಯಾವಾಗ ಬೇಕಾದರೂ ಹಳ್ಳ ಹಿಡಿಯ ಬಹುದು ಎಂದರ್ಥ. ಆದರೆ೨೦೧೪-೧೫ಮತ್ತು೨೦೧೫-೧೬ರ ಸಾಲಿನಲ್ಲಿ ಭಾರತದ ಬೆಳವಣಿಗೆ ದರ ಕ್ರಮವಾಗಿ೭.೫ಮತ್ತು೮.೦ಗೆ ಏರುವ ಮೂಲಕ ಏಷ್ಯಾದ ಮುಂಚೂಣಿ ರಾಷ್ಟ್ರಗಳ ಸಾಲಿಗೆ ಭಾರತ ಸೇರಿತು. ಈ ಅವಧಿಯಲ್ಲಿ ಚೀನಾದ ಜಿಡಿಪಿ ಬೆಳವಣಿಗೆ ದರ ಶೇ.೬.೯ಮಾತ್ರ ಇತ್ತು. ಭಾರತದ ಇಂತಹ ಬೆಳವಣಿಗೆ ದರವನ್ನು ಗಮನಿಸಿ ೨೦೧೭ರ ನವೆಂಬರ್‌ನಲ್ಲಿ ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡಿಸ್ ಇನ್ವೆಸ್ಟರ್ ಸರ್ವಿಸಸ್ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ’Baa3 ನಿಂದ Baa2’ಏರಿಸಿತು. ಅಲ್ಲದೆ ಭಾರತದ ದೀರ್ಘಾವಧಿಯ ವಿದೇಶಿ ಕರೆನ್ಸಿ ಬಾಂಡ್ ಸೀಲಿಂಗ್ ಅನ್ನು ’’Baa2ನಿಂದ Baa1’’ ಗೆ ಏರಿಸಿತು.
ಭಾರತ೨.೯ಟ್ರಿಲಿಯನ್ ಡಾಲರ್ ಆರ್ಥಿಕತೆ ಯೊಂದಿಗೆ ಫ್ರಾನ್ಸನ್ನು ಹಿಂದಿಕ್ಕಿ ವಿಶ್ವದ೬ನೇ ಅತಿದೊಡ್ಡ ಆರ್ಥಿಕತೆಯರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಆರ್ಥಿಕತೆ ಸುಧಾರಣೆ ತರುವ ವೇಳೆಗೆ ಭಾರತದ ಆರ್ಥಿಕತೆಗೆ ಹೊಡೆತ ನೀಡಿದ್ದು ಕರೋನಾ ಎಂಬ ಕಣ್ಣಿಗೆ ಕಾಣದ ವೈರಸ್. ಕರೋನಾ ಜಗತ್ತಿನ ಆರ್ಥಿಕತೆಯಲ್ಲಿ ಎಂತಹ ದುಷ್ಪರಿಣಾಮ ಬೀರಿದೆ ಎಂದರೆ ಕಳೆದ೧೫೦ವರ್ಷಗಳಲ್ಲಿ ಈ ಮಟ್ಟಿಗಿನ ಜಿಡಿಪಿಯ ಕುಸಿತವನ್ನು ಯಾರೂ ಕಂಡಿರಲಿಲ್ಲ. ಈ ವರ್ಷದ ಕರೋನಾ ಸಂದರ್ಭದಲ್ಲಿ ಸಿಂಗಾಪುರ ಶೇ.೪೧.೨ಆರ್ಥಿಕತೆ ಕುಸಿತ, ಕೆನಡಾ ಶೇ.೩೮.೭ಕುಸಿತ, ಜಪಾನ್ ಶೇ.೨೭.೮ಕುಸಿತ, ಬ್ರಿಟನ್ ಶೇ.೨೦.೪ಕುಸಿತವಾಗಿದ್ದರೆ ಭಾರತದ ಜಿಡಿಪಿ೨೩%ಕುಸಿತ ಕಂಡಿದೆ. ಈ ಬಿಕ್ಕಟ್ಟಿನಿಂದ ದೇಶದ ಆರ್ಥಿಕತೆಗೆ೩೦ಲಕ್ಷ ಕೋಟಿ ನಷ್ಟವಾಗಿದೆಎಂದು’ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಂದು ಇಕೋರಾಪ್ ’ ಅಧ್ಯಯನದ ವರದಿ ತಿಳಿಸಿದೆ.
ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಶೇ.೩೨.೯ಜಿಡಿಪಿ ಕುಸಿತ ಕಂಡಿದೆ. ಇಂತಹ ಮಹಾ ಆರ್ಥಿಕ ಕುಸಿತಕ್ಕೆ ಕಾರಣ ಕಣ್ಣಿಗೆ ಕಾಣದ ಕೋವಿಡ್-೧೯ವೈರಸ್. ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಪುಟಿದೇಳುವ ಮೂಲಕ ಧನಾತ್ಮಕ ಪ್ರಗತಿ ಸಾಧಿಸುತ್ತ ದೆಯೇ? ಎಂದರೆ ಖಂಡಿತವಾಗಿಯೂ ಸಾಧ್ಯವಿಲ್ಲ. ಬಹುಶಃ ಒಂದಂಕಿಯ ಜಿಡಿಪಿಯ ಕುಸಿತವನ್ನು ನಾವು ನೋಡಬಹುದು.
೨೦೨೧ರ ಜನವರಿಯಿಂದ ಭಾರತ ಜಿಡಿಪಿ ಧನಾತ್ಮಕವಾಗಿ ಇರುವುದಲ್ಲದೆ ಆರ್ಥಿಕತೆಗೆ ಒಳ್ಳೆಯ ದಿನಗಳು ಆರಂಭವಾಗಲಿವೆ.ಇದಕ್ಕೆ ಪೂರಕ ಎಂಬಂತೆ ದೇಶದ ಎಲ್ಲಾ ವಲಯಗಳು ಹಿನ್ನಡೆ ಅನುಭವಿಸಿದರು ಕೃಷಿವಲಯ ಮಾತ್ರ ಪ್ರಗತಿಯನ್ನು ಸಾಧಿಸು ತ್ತಿದೆ. ಈ ಬಾರಿಯ ಮುಂಗಾರಿನಲ್ಲಿ೧೦೮೨ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಈ ವರ್ಷ ಮಾನ್ಸೂನ್ ಮಳೆ ಉತ್ತಮವಾಗಿದ್ದು ಕಳೆದ ಹತ್ತು ವರ್ಷಗಳಿಗಿಂತ ಈ ವರ್ಷ ದೇಶದ ಜಲಾಶಯಗಳಲ್ಲಿ ನೀರು ಸಂಗ್ರಹ ಹೆಚ್ಚಾಗಿದೆ.
ಕೇಂದ್ರ ಸರಕಾರ ಎಪಿಎಂಸಿ ಮತ್ತು ಇತರೆ ಕೃಷಿ ಕಾಯಿದೆಗಳಲ್ಲಿ ಸಾಕಷ್ಟು ತಿದ್ದುಪಡಿಗಳನ್ನು ತಂದು ರೈತರ ಆದಾಯ ಹೆಚ್ಚಿಸಲು ಅನುಕೂಲ ಒದಗಿಸುತ್ತಿದೆ. ಚೀನಾ ಎನ್ನುವಂಥದ್ದು ಜಾಗತಿಕ ಕಾರ್ಖಾನೆ. ಜಗತ್ತಿನ ಶೇ.೮೦ಲ್ಯಾಪ್ ಟಾಪ್, ಶೇ೭೦ಮೊಬೈಲ್,ಶೇ.೮೦ರಷ್ಟು ಎಸಿ ಇವೆಲ್ಲವೂ ಉತ್ಪಾದನೆಯಾಗುತ್ತಿರುವುದು ಚೀನಾದಲ್ಲಿ. ಈಗ ಇಡೀ ಜಗತ್ತಿಗೆ ಚೀನಾದ ಅಸಲಿ ಮುಖ ಗೊತ್ತಾಗಿದೆ. ಏಕೆಂದರೆ ಭೂಮಿಯ ಮೇಲಿನ ಕೊನೆಯ ವ್ಯಕ್ತಿಗೂ ಕರೋನಾ ಪರಿಣಾಮ ತಟ್ಟಿದ್ದು ಚೀನಾದ ಬಣ್ಣ ಬಯಲಾಗಿದೆ. ಜಗತ್ತಿನ ಎಲ್ಲ ಉತ್ಪಾದನೆ ಒಂದೇ ಬುಟ್ಟಿಯಲ್ಲಿ ಆಗುವುದು ಅಪಾಯದ ಸಂಕೇತ.
ಈಗ ಆಗಿರುವುದೂ ಅದೇ, ಅಮೆರಿಕ ತನ್ನ ಸಾಕಷ್ಟು ಉತ್ಪಾದನೆ ಚೀನಾದಲ್ಲಿ ಮಾಡಿಕೊಂಡಿದ್ದಾರೆ. ಈಗ ತಾನು ಮಾಡಿದ ತಪ್ಪು ಅರಿವಿಗೆ ಬಂದಿದೆ ಈ ಹಿನ್ನಲೆಯಲ್ಲಿ ದಕ್ಷಿಣ ಕೊರಿಯಾ, ಜಪಾನ್, ಬ್ರಿಟನ್, ವಿಶೇಷವಾಗಿ ಅಮೆರಿಕ, ಅಮೆರಿಕದ೨೦೦ಕಂಪನಿ ಗಳು ಚೀನಾದಿಂದ ಬರುತ್ತಿವೆ. ಇನ್ನೂ ಭಾರತದ ವಿಚಾರಕ್ಕೆ ಬಂದರೆ ಏಪ್ರಿಲ್೧ರಂದು ಪ್ರಧಾನಿ ಮೋದಿಯವರು ’ಪ್ರೊಡಕ್ಷನ್ಲಿಂಕ್ ಇನ್ಸೆಂಟಿವ್’(ಪಿ ಎಲ್ ಐ ) ಎಂಬ ಯೋಜನೆ ಘೋಷಿಸಿದ್ದಾರೆ ಇದರಿಂದ ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಎಲೆಕ್ಟ್ರಾನಿಕ್ಸ್ ಮೊಬೈಲ್ ಘಟಕಗಳು ಆಗಿರಬಹುದು, ಅರೆವಾಹಕಗಳ ವಸ್ತುಗಳ ಉತ್ಪಾದನೆ ಮೇಲೆ ಪ್ರೋತ್ಸಾಹ ಕೊಡುತ್ತಿದ್ಧಾರೆ.
ಈಗಾಗಲೇ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧವಾಗಿರುವ ೨೪ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುತ್ತೇವೆಂದು ಘೋಷಿಸಿದ್ಧಾರೆ. ಇದರಲ್ಲಿ ಸ್ಯಾಮ್ ಸಾಂಗ್, ಪಾಕಾನ್, ಹಾನ್ ಹಾ, ಪೆಗೆ ಟ್ರಾನ್ ಸಹ ಒಳಗೊಂಡಿವೆ. ಸ್ಯಾಮ್‌ಸಾಂಗ್ ಈಗಾಗಲೇ ಕೇಂದ್ರಸರಕಾರಕ್ಕೆ ವರದಿ ನೀಡಿದ್ದು ಅದರ ಪ್ರಕಾರ ಮುಂದಿನ೫ವರ್ಷಗಳಲ್ಲಿ ಭಾರತದಲ್ಲಿ೫೦ಬಿಲಿಯನ್ ಡಾಲರ್ ಅಂದರೆ೩,೭೦,೦೦೦ಕೋಟಿ ಬೆಲೆ ಬಾಳುವ ಮೊಬೈಲ್‌ಗಳನ್ನು ಉತ್ಪಾದಿಸುತ್ತೇವೆ ಎಂದಿದೆ.
ಈಗಾಗಲೇ ಭಾರತ ಪ್ರತಿವರ್ಷ೨ಲಕ್ಷ ಬೆಲೆಬಾಳುವ ಮೊಬೈಲ್‌ಗಳನ್ನು ಉತ್ಪಾದಿಸುತ್ತಿದೆ.೨೦೨೫ರ ಒಳಗೆ೧೧-೧೨ಲಕ್ಷ ಕೋಟಿ ಬೆಲೆಯ ಮೊಬೈಲ್‌ಗಳು ಭಾರತದಲ್ಲಿ ಉತ್ಪಾದನೆಯಾಗುತ್ತವೆ. ಇಲ್ಲಿನ ಔಷಧ ವಲಯಕ್ಕೆ೭೦%ಕಚ್ಚಾವಸ್ತುಗಳನ್ನು ಚೀನಾ ದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಕೇಂದ್ರ ಸರಕಾರ ಪಿಎಲ್‌ಐಗಳನ್ನು ಔಷಧ ವಲಯಕ್ಕೂ ವಿಸ್ತರಿಸಿದೆ. ಇದೊಂದೇ ಅಲ್ಲ ಇನ್ನು ಮುಂದೆ ಆಟೋಮೊಬೈಲ್ಸ, ಟೆಕ್ಸ್‌ಟೈಲ್ಸ್ ಒಳಗೊಂಡಂತೆ ಎಲ್ಲಾ ಕ್ಷೇತ್ರಗಳಿಗೂ ಪಿ.ಎಲ.ಐ ಅನ್ವಯವಾಗುತ್ತದೆ.
ಜಪಾನ್ ಚೀನಾದಲ್ಲಿರುವ ತನ್ನ ಕಂಪನಿಗಳನ್ನು ಕೂಡಲೇ ಅಲ್ಲಿಂದ ಸ್ಥಳಾಂತರವಾಗುವಂತೆ ಸೂಚಿಸಿದೆ. ಸ್ಥಳಾಂತರವಾಗುವ ಕಂಪನಿಗಳಿಗೆ೨೦೦ಬಿಲಿಯನ್ ಡಾಲರ್ ಪ್ಯಾಕೇಜ್ ಘೋಷಿಸಿದೆ. ಅಲ್ಲದೆ ಭಾರತವು ಚೀನಾದ ವಿರುದ್ಧ ಆರ್ಥಿಕ ಸಮರ ಸಾರಿದ್ದು ಚೀನಾದ೧೧೪ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಿದೆ. ಅಲ್ಲದೆ ಚೀನಾದ ಹವಾ ನಿಯಂತ್ರಕಗಳು, ಬೊಂಬೆಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಒಳಗೊಂಡಂತೆ ಹಲವು ಉತ್ಪನ್ನಗಳ ಮೇಲೆ ಕಠಿಣ ನಿರ್ಬಂಧ ಗಳನ್ನು ವಿಧಿಸಿದೆ. ಅಲ್ಲದೆ ಸ್ವದೇಶಿ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರಕಾರ ಆತ್ಮನಿರ್ಭರ ಭಾರತ ಯೋಜನೆಯನ್ನು ಘೋಷಿಸಿದ್ದು ಇದರಲ್ಲಿ ದೇಶದ ಆರ್ಥಿಕತೆಯನ್ನು ಉತ್ತೇಜಿಸಲು೨೦ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.
೨೦ಲಕ್ಷ ಕೋಟಿ ಡಾಲರ್ ಲೆಕ್ಕದಲ್ಲಿ೨೬೬ಶತಕೋಟಿ ಡಾಲರ್ ಆಗುತ್ತದೆ. ’ಆತ್ಮ ನಿರ್ಭರ  ಭಾರತ’ ಯೋಜನೆಯಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ವಲಯಕ್ಕೆ೧. ೬೩ಲಕ್ಷ ಕೋಟಿ, ಸಣ್ಣ ಉದ್ಯಮಗಳ ಜಾಮೀನುರಹಿತ ಸಾಲಕ್ಕೆ೩ಲಕ್ಷ ಕೋಟಿ ಹೀಗೆ ಪ್ರತಿ ವಲಯಕ್ಕೂ ಸಹ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಆತ್ಮನಿರ್ಭರ ಭಾರತದ೨೦ಲಕ್ಷ ಕೋಟಿ ವಿಶೇಷ ಪ್ಯಾಕೇಜ್೧೪೯ದೇಶಗಳ ಜಿಡಿಪಿಗಿಂತ ದೊಡ್ಡದು.
ಪಾಕಿಸ್ತಾನದ ವಾರ್ಷಿಕ ಜಿಡಿಪಿಯ ಶೇ.೮೩ರಷ್ಟಕ್ಕೆ ಭಾರತದ ಕೋವಿಡ್ ಪ್ಯಾಕೇಜ್ ಸಮ. (ಪಾಕ್‌ನ ವಾರ್ಷಿಕ ಜಿಡಿಪಿ ಮೌಲ್ಯ೩೨೦ಶತಕೋಟಿ ಡಾಲರ್ ಅಥವಾ೨೪ಲಕ್ಷ-ಕೋಟಿ. ) ಕೋವಿಡ್ ಬಿಕ್ಕಟ್ಟು ನಿರ್ವಹಣೆಗೆ ಜಿಡಿಪಿಯ ಹೆಚ್ಚುಭಾಗ (೧೦%)ತೆಗೆದಿಟ್ಟ ದೇಶಗಳಲ್ಲಿ ಭಾರತ೩ನೇ ಸ್ಥಾನದಲ್ಲಿದೆ. ಇಂತಹ ಕ್ರಾಂತಿಕಾರಕ ಬದಲಾವಣೆಗಳ ಪರಿಣಾಮ ಈ ವರ್ಷದ ಅಕ್ಟೋಬರ್೧೬ರ ವೇಳೆಗೆ ಭಾರತದ ವಿದೇಶಿ ವಿನಿಮಯ ಸಂಗ್ರಹ ದಾಖಲೆಯ೫೫೫.೧೨ಶತಕೋಟಿ ಡಾಲರ್‌ಗೆ (೪೦ಲಕ್ಷ ಕೋಟಿ)ಏರಿಕಯಾಗಿದೆ.
ಡಾಲರ್ ಸಂಗ್ರಹ ಗಣನೀಯವಾಗಿ ಏರಿಕೆಯಾಗಿದೆ. ವಿದೇಶಿ ವಿನಿಮಯ ಸಂಗ್ರಹದಲ್ಲಿ ಯೆನ್, ಪೌಂಡ್, ಯುರೋ ಕರೆನ್ಸಿಗಳು ಸೇರಿವೆ. ಚಿನ್ನದ ಸಂಗ್ರಹ೬೩ಶತಕೋಟಿ ಡಾಲರ್(೨.೬೨ಲಕ್ಷ ಕೋಟಿ )ಗೆ ವೃದ್ಧಿಸಿದೆ ಎಂದು ಆರ್‌ಬಿಐ ತಿಳಿಸಿದೆ.೨೦೨೦ರ ಜುಲೈ೧೬ರ ವೇಳೆಗೆ೫೧ಬಿಲಿಯನ್ ಡಾಲರ್‌ ಹೂಡಿಕೆಯೊಂದಿಗೆ ಭಾರತ ಎಫ್‌ಡಿಐ ಹೂಡಿಕೆಯಲ್ಲಿ ಜಗತ್ತಿನ೯ನೇ ದೊಡ್ಡ ರಾಷ್ಟ್ರ ವಾಗಿ ಗುರುತಿಸಿಕೊಂಡಿದೆ.
ಇಂತಹ ಕ್ರಾಂತಿಕಾರಕ ಬದಲಾವಣೆಗಳನ್ನು ಗಮನಿಸಿ ಐಎಂಫ್ ಭಾರತದ ಜಿಡಿಪಿಯೂ೨೦೨೧ರ ವೇಳೆಗೆ ಮತ್ತಷ್ಟು ಹೆಚ್ಚಲಿದೆ ಎಂದು ತಿಳಿಸಿದೆ.೨೦೨೧ರಲ್ಲಿ ಭಾರತದ ಜಿಡಿಪಿ ಪುಟಿದೇಳಲಿದೆ. ನಕಾರಾತ್ಮಕ ಇಳಿಕೆಯು ಸಕಾರಾತ್ಮಕ ಏರಿಕೆಯ ಮಟ್ಟಕ್ಕೆಮರಳಲಿದ್ದು ಜಿಡಿಪಿ ಶೇಕಡ೮.೮ಕ್ಕೆ ಏರಲಿದೆ. ಅಲ್ಲದೆ ತ್ವರಿತ ಬೆಳವಣಿಗೆಯ ಆರ್ಥಿಕತೆಯ ದೇಶ ಎನ್ನುವ ಹೆಗ್ಗಳಿಕೆಯನ್ನು ಭಾರತ ಮತ್ತೆ ಪಡೆಯಲಿದೆ. ಇದೇ ಅವಧಿಯಲ್ಲಿ ಚೀನಾದ ಜಿಡಿಪಿ೮.೨%ರಷ್ಟಿದ್ದು ಭಾರತಕ್ಕಿಂತ ಕಡಿಮೆ ಇರಲಿದೆ ಎಂದು ಐ.ಎಂ.ಫ್ ಹೇಳಿದೆ.
ಇದೇ ಅವಧಿಯಲ್ಲಿ ಜಾಗತಿಕ ಜಿಡಿಪಿ೫.೫%ಮತ್ತು ಅಮೆರಿಕದ ಜಿಡಿಪಿ೩.೯%ಇರಲಿದೆ ಎಂದು ಐಎಂಫ್ ಹೇಳಿದೆ. ಭವಿಷ್ಯ ಎಷ್ಟು ಅದ್ಭುತವಾಗಿದೆ ಎಂದರೆ ಪಾ ಕಾನಿನ ಚೇರ್ಮನ್ ಲಿ ಎಂಗ್ ವೇ ಹೇಳಿದಂತೆ ಜಗತ್ತಿನ ಉತ್ಪಾದನೆಯಲ್ಲಿ ಚೀನಾದ ಕಾಲಮುಗಿದಿದೆ. ಇದರ ಅರ್ಥ ಭಾರತದ ಕಾಲ ಆರಂಭವಾಗಿದೆ ಎಂದರ್ಥ.