ನೊಬೆಲ್ ವಂಚಿತ ಭಾರತದ ವಿಜ್ಞಾನಿ ಸರ್‌ ಜಗದೀಶ್‌ ಚಂದ್ರ ಬೋಸ್
ಸಾಂದರ್ಭಿಕಎಲ್.ಪಿ.ಕುಲಕರ್ಣಿ
ಭಾರತದಲ್ಲಿ ಸಿನಿಮಾ ತಾರೆಯರು, ಕ್ರಿಕೇಟ್ ಕಲಿಗಳಿಗೆ ಸಿಗುವಷ್ಟು ಪ್ರಸಿದ್ಧಿ ಬೇರಾವ ಕ್ಷೇತ್ರದ ಸಾಧಕರಿಗೂ ಸಿಗುತ್ತಿಲ್ಲ. ಅದರಲ್ಲೂವಿಜ್ಞಾನಿಗಳಿಗೆ ಇಂತಹ ಪ್ರಸಿದ್ಧಿ ಕನಸಿನ ಮಾತೇ ಎಂಬಂತಹ ವಾತಾವರಣ ನಿರ್ಮಾಣವಾಗಿದೆ.
ಇಷ್ಟೆ ಪೀಠಿಕೆಯ ಮುಖ್ಯ ಉದ್ದೇಶವೊಂದಿದೆ. ಅದನ್ನು ಮುಂದೆ ನೋಡೋಣ. ಆ ಕಾಲದಲ್ಲಿ ಅಷ್ಟೊಂದು ವಿದ್ಯಾವಂತರು ಭಾರತದಲ್ಲಿ ಸಿಗುವುದು ಅಪರೂಪ ವಾಗಿತ್ತು. ಇವರು 1884ರಲ್ಲಿ ಲಂಡನ್ನಿನ ಕೇಂಬ್ರಿಡ್ಜ್ ವಿವಿ ಯಲ್ಲಿ ಎಂ.ಎ. ಪದವಿಯನ್ನುಪಡೆದರು. ಆಗಿನ್ನೂ ವಿಜ್ಞಾನದಲ್ಲಿ ಪಿ.ಎಚ್.ಡಿ ಇರಲಿಲ್ಲ, ಎಂ.ಎ ಪದವಿಯೇ ಅತ್ಯುನ್ನತ ಪದವಿಯಾಗಿತ್ತು. ಎಂ.ಎ ಪದವಿಯಸಾಕಷ್ಟು ಐಚ್ಛಿಕ ವಿಷಯಗಳ ಆಯ್ಕೆ ಇತ್ತು. ಆಗ ಅವರ ಅಧ್ಯಾಪಕರಲ್ಲಿ ಪ್ರಸಿದ್ಧ ವಿಜ್ಞಾನಿ ಲಾರ್ಡ್ ರ್ಯಾಲೆಯೂ ಒಬ್ಬರಾ ಗಿದ್ದರು.
ಅಂತಹ ಮಹಾನ್ ಪ್ರತಿಭೆ 1885ರಲ್ಲಿ ಭಾರತಕ್ಕೆ ಮರಳಿ ಬಂದಿತ್ತು. ಆಗ ಅವರನ್ನು ಕೊಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಫಿಸಿಕ್ಸ್ ಪ್ರೊಫೆಸರನ್ನಾಗಿ ನೇಮಿಸಲಾಯಿತು. ಇದನ್ನು ಪ್ರಾಂಶುಪಾಲನಾಗಿದ್ದ ಸಿ.ಎಚ್.ಟಾನಿ ತೀವ್ರವಾಗಿ ವಿರೋಧಿಸಿದ. ಆದರೆ ಭಾರತೀ ಯರನ್ನು ಕಂಡರೆ ಉದಾರ ಮನೋಭಾವವುಳ್ಳ ವನಾಗಿದ್ದ ವೈಸ್ ರಾಯ್ ಲಾರ್ಡ್ ರಿಪ್ಪನ್ ಈ ಭಾರತೀಯ ಪ್ರತಿಭಾವಂತನನ್ನು ನೇಮಿಸುವಂತೆ ಆದೇಶ ಕೊಟ್ಟರು. ಆದರೂ ಇವರಿಗೆ ಸಂಪೂರ್ಣ ಸಂಬಳ ಕೊಡಲು ಟಾನಿ ನಿರಾಕರಿಸಿದನು.
ಬ್ರಿಟಿಷ್ ಪ್ರೊಫೆಸರ್‌ಗಳಿಗೆ ತಿಂಗಳಿಗೆ 300ರು. ಸಂಬಳ ವಿದ್ದರೆ, ಇವರಿಗೆ ಭಾರತೀಯನೆಂದು 100ರು. ಮಾತ್ರ ಸಂಬಳ ಕೊಡಲು  ಒಪ್ಪಿದನು. ಆದರೆ ಇವರು ಈ ಅನ್ಯಾಯವನ್ನು ಒಪ್ಪಿಕೊಳ್ಳದೆ ಸಂಬಳವನ್ನೇ ತೆಗೆದುಕೊಳ್ಳದೇ ಪುಗಸಟ್ಟೆ ಕೆಲಸಮಾಡುವುದಾಗಿ ಹೇಳಿದರು. ನಾಚಿಕೆಗೆಟ್ಟ ಟಾನಿ ಅದನ್ನು ಒಪ್ಪಿಕೊಂಡನು. ಇದರಿಂದ ಈ ಭಾರತೀಯ ಪ್ರೊಫೆಸರನ ಸ್ವಾಭಿಮಾನ ಎಂತಹು ದೆಂದು ಸ್ಪಷ್ಟವಾಗುತ್ತದೆ. 3 ವರ್ಷಗಳ ಕಾಲ ಅವರು ಪುಕ್ಕಟೆ ಕೆಲಸ ಮಾಡಿದರು. ಇದರಿಂದ ಅವರಿಗೆ ಮತ್ತು ಪತ್ನಿಗೆ ಕುಟುಂಬ ನಡೆಸುವುದು ಬಹಳ ಕಷ್ಟವಾಯಿತು. ಆದರೂ ಅವರು ಬಗ್ಗಲಿಲ್ಲ. ಆ ಮೂರು ವರ್ಷಗಳಲ್ಲಿ ಅವರು ಶ್ರೇಷ್ಠ ಅಧ್ಯಾಪಕ ಮಾತ್ರ ವಲ್ಲ, ಉತ್ತಮ ಸಂಶೋಧಕ ಎಂದು ಪ್ರಸಿದ್ಧರಾದರು. ಆಗ ಎಲ್ಲರೂ ಟಾನಿಯಂತೆ ನಾಚಿಕೆಯಿಲ್ಲದವರಾಗಿರಲಿಲ್ಲ. ಇವರನ್ನು ಸಂದರ್ಶಿಸಲು ಇವರ ಪ್ರಯೋಗಾಲಯಕ್ಕೆ ಬಂದಿದ್ದ ಭಗಿನಿ ನಿವೇದಿತ ಹೀಗೆ ಬರೆದರು: ಇಂತಹ ಮಹಾನ್ ವಿಜ್ಞಾನಿ ಎಂತಹ ಕಷ್ಟಸ್ಥಿತಿಯಲ್ಲಿ ಕೆಲಸಮಾಡಬೇಕಾಗಿದೆ ಎನ್ನುವು ದನ್ನು ನೋಡಿ ನನಗೆ ರೋಸಿಹೋಯಿತು. ಕಾಲೇಜಿನ ಸಣ್ಣಪುಟ್ಟ ಅಧಿಕಾರಿ ಗಳೂ ಅವರಿಗೆ ಒಂದೇಸಮ ತೊಂದರೆ ಕೊಟ್ಟು ಅವರ ಸಂಶೋಧನಾ ಕಾರ್ಯಕ್ಕೆ ಅಡಚಣೆ ಮಾಡುತ್ತಿದ್ದಾರೆ.
ಇದೆಲ್ಲವನ್ನೂ ತಪ್ಪಿಸಿಕೊಳ್ಳಲು ಇವರು ರಾತ್ರಿ, ಯಾರೂ ಇಲ್ಲದ ಸಮಯದಲ್ಲಿ ಸಂಶೋಧನೆಯಲ್ಲಿ ತೊಡಗುತ್ತಿದ್ದರು. ಆದರೂ ಇವರ ಅಭಿಮಾನಿಗಳಲ್ಲಿ ಅನೇಕ ಬ್ರಿಟೀಷರು, ಅದರಲ್ಲಿಯೂ ವಿಜ್ಞಾನಿಗಳು ಇದ್ದರು. ಇವರುಗಳ ಒತ್ತಡದಿಂದ ಬ್ರಿಟೀಷ್ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಅವರ ಸಂಬಳವನ್ನು ಬ್ರಿಟೀಷರ ಮಟ್ಟಕ್ಕೆ ಏರಿಸಿದ್ದಲ್ಲದೆ ಅದೇ ಪ್ರಮಾಣದಲ್ಲಿ ಹಿಂದಿನಮೂರು ವರ್ಷದ ಸಂಬಳವನ್ನು ಅವರಿಗೆ ಸಲ್ಲಿಸಿತು. ಈ ಹಣದಿಂದ ಅವರು ಒಂದು ಖಾಸಗಿ ವಿಜ್ಞಾನ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಈ ಸಂಸ್ಥೆಯಲ್ಲಿಯೇ ಮುಂದೆ ಸಿ.ವಿ.ರಾಮನ್ ಸಂಶೋಧನೆ ಮಾಡಿ ನೊಬೆಲ್ ಬಹುಮಾನ ಪಡೆದಿದ್ದು. ಇಷ್ಟೆಅಡತಡೆಗಳನ್ನು ಮೆಟ್ಟಿನಿಂತ ಆ ಭಾರತದ ಅಪ್ಪಟ ವಿಜ್ಞಾನ ಪ್ರತಿಭೆ ಯಾರು ಗೊತ್ತೆ, ಸಸ್ಯಗಳಿಗೆ ಜೀವವಿದೆ, ಅವೂ ಸಹ ಇನ್ನುಳಿದ ಜೀವಿಗಳಂತೆ ಸಂವೇದನೆಗಳನ್ನು ವ್ಯಕ್ತಪಡಿಸುತ್ತವೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಜಗದೀಶಚಂದ್ರ ಬೋಸ್.ಜಗದೀಶ ಚಂದ್ರ ಬೋಸರು ಜನಿಸಿದ್ದು ನೂರಾ ಅರವತ್ತು ವರ್ಷಗಳಿಗೂ ಹಿಂದೆ, 1858ರ ನವೆಂಬರ್ 30ರಂದು – ಈಗ ಬಾಂಗ್ಲಾ ದೇಶದಲ್ಲಿರುವ ಮೈಮೆನ್ಸಿಂಗ್ ಎಂಬಲ್ಲಿ.
ಬೋಸರ ತಂದೆ ಭಗವಾನ್ ಚಂದ್ರಬೋಸ್ ಅವರು ಬ್ರಹ್ಮ ಸಮಾಜದ ಒಬ್ಬ ಪ್ರಮುಖರಾಗಿದ್ದರು. ವೃತ್ತಿಯಿಂದ ಅವರು ಸಹಾಯಕ ಕಮೀಷನರ್ ಮತ್ತು ಡೆಪ್ಯೂಟಿ ಮಾಜಿಸ್ಟ್ರೇಟ್ ಆಗಿದ್ದರು. ತಾಯಿ ಭಾಮಾ ಸುಂದರಿ. ತಂದೆ ದೊಡ್ಡ  ಅಧಿಕಾರಿ ಯಾಗಿದ್ದರೂ ಮಗನನ್ನು ಬಂಗ್ಲಾ ಭಾಷೆಯ ಒಂದು ಸಾಮಾನ್ಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಜಗದೀಶರ ಬಲಬದಿಯಲ್ಲಿ ತಂದೆಯ ಕಚೇರಿಯ ಜವಾನರ ಮಗ ಮುಸಲ್ಮಾನ ಹುಡುಗ ಮತ್ತು ಎಡಬದಿಯಲ್ಲಿ ಮೀನುಗಾರರೊಬ್ಬರ ಮಗ, ಆಪ್ತ ಗೆಳೆಯರು. ಈ ಮಕ್ಕಳೊಂದಿಗೆ ಆಟವಾಡುತ್ತಾ, ಹಳ್ಳ – ಕೊಳ್ಳ, ಝರಿ, ಕಾಡು – ಮೇಡು, ಗುಡ್ಡಗಳಲ್ಲಿ ಹಕ್ಕಿಗಳು, ಮೀನು, ಆಮೆ, ಮರ, ಗಿಡಗಳಪರಿಸರದಲ್ಲಿ ಅವುಗಳ ಕತೆಗಳನ್ನು ಹಂಚಿಕೊಳ್ಳುತ್ತಾ ದೊಡ್ಡವನಾದ ಜಗದೀಶರಿಗೆ ಪ್ರಕೃತಿಪ್ರೇಮ ಸ್ವಾಭಾವಿಕವಾಗಿಯೇ ಬಂತು.ಅಲ್ಲಿಯೇ ಅವರು ಸಸ್ಯಗಳೊಡನೆ ಮಾತನಾಡಲು’ ಪ್ರಾರಂಭಿಸಿದರು ಎನ್ನಬಹುದು.
ದೃಗ್ಗೋಚರ ಬೆಳಕಿನ ತರಂಗ ದೂರಗಳು ಕೆಂಪು ತುದಿಯಲ್ಲಿ 4000 ಆಂಗಸ್ಟ್ರಾನ್‌ಗಳೂ. ಅಂದರೆ, ಒಂದು ಆಂಗಸ್ಟ್ರಾನ್ ಎಂದರೆಮಿಲಿಮೀಟರಿನ ಕೋಟಿಯಂದು ಭಾಗ. ನೇರಳೆ ತುದಿಯಲ್ಲಿ 7000 ಆಂಗಸ್ಟ್ರಾನ್‌ಗಳೂ ಇರುತ್ತವೆ. 1857- 1894ರಲ್ಲಿ ಜೀವಿಸಿದ್ದ ಹೈನರಿಕ್ ಹರ್ತ್ಸ್ ಒಂದು ಸೆಂಟಿಮೀಟರ್‌ನಿಂದ ಒಂದು ಮೀಟರ್ ತರಂಗ ದೂರಗಳಿರುವ ವಿದ್ಯುತ್ಕಾಂತ ತರಂಗಗಳೂ ಇರ ಬೇಕೆಂದು ಯೋಚಿಸಿ ಅವುಗಳನ್ನು ಉತ್ಪತ್ತಿ ಮಾಡಲು ಒಂದು ವಿಧಾನವನ್ನು ಸಿದ್ಧಪಡಿಸಿದ. ಬೋಸ್ ಅವರು ಆ ಹರ್ತ್ಸ್ತರಂಗ ಗಳನ್ನು ಕುರಿತ ಸಂಶೋಧನೆಯನ್ನು ಕೈಗೆತ್ತಿಕೊಂಡಾಗ ಆ ತರಂಗಗಳನ್ನು ನಿಸ್ತಂತು ಸಂಪರ್ಕಕ್ಕೆ ಬಳಸಿಕೊಳ್ಳಬಹು ದೆಂದು ಯೋಚಿಸಿದರು.
ತಂತಿಯ ನೆರವಿನಿಂದ ಸಂಪರ್ಕ ಸಾಧಿಸಬಲ್ಲ ಟೆಲಿಗ್ರಾಂ, ಟೆಲಿಫೋನ್‌ಗಳು ಮಾತ್ರ ಗೊತ್ತಿದ್ದ ಆ ಕಾಲದಲ್ಲಿ ಅವರ ಯೋಚನೆ ಕೇವಲ ಗಾಳಿಗೋಪುರದಂತಿತ್ತು. ಬೋಸ್ ಅವರು ಮಾತ್ರ ಆತ್ಮವಿಶ್ವಾಸದಿಂದ ಮುಂದುವರಿದು, ಆಗ ತಮಗೆ ಬೇಕಾದುದ್ದೇನಿ ದ್ದರೂ ದೂರದಿಂದ ಹರ್ತ್ಸ್ ತರಂಗಗಳ ರೂಪದಲ್ಲಿ ಬರುತ್ತಿರುವ ಸಂದೇಶವನ್ನು ಗ್ರಹಿಸಬಲ್ಲ ಒಂದು ಉಪಕರಣ ಅಷ್ಟೆ ಎಂದು ತೀರ್ಮಾನಿಸಿದರು.
ಖ್ಯಾತ ವಿಜ್ಞಾನ ಲೇಖಕ ಜೆ.ಆರ್. ಲಕ್ಷ್ಮಣರಾವ್ ಅವರು ಹೇಳುವಂತೆ; 1895ರ ವೇಳೆಗೆ ಅಂತಹ ಒಂದು ಉಪಕರಣವನ್ನು ಅವರು ನಿರ್ಮಿಸಿದರು. ‘ಕೊಹಿರರ್’ ಎಂದು ಕರೆಯಲಾಗಿರುವ ಆ ಉಪಕರಣ ತುಂಬ ಸರಳ ವಾದುದು; ಲೋಹದ ಪುಡಿಯನ್ನು ಮಂದ್ರ ವಾಗಿ ತುಂಬಿರುವ ಒಂದು ಡಬ್ಬಿ, ಅಷ್ಟೆ. ಅದು ವಿದ್ಯುತ್ ವಾಹಕವಾಗಿ ಅಷ್ಟೇನೂ ಸಮರ್ಪಕವಾಗಿ ಕೆಲಸ ಮಾಡುವು ದಿಲ್ಲ. ಹರ್ತ್ಸ್ ತರಂಗಗಳು ಅದರ ಮೇಲೆ ಬಿದ್ದಾಗ ಅದು ಒಂದು ಸಮರ್ಪಕ ವಿದ್ಯುತ್ ವಾಹಕದಂತೆ ವರ್ತಿಸುತ್ತದೆ. ಅದನ್ನು ಕಂಡು ಹಿಡಿದ ವರ್ಷವೇ ಅವರು ಕೋಲ್ಕತಾದಲ್ಲಿ ನೀಡಿದ ಒಂದು ಸಾರ್ವಜನಿಕ ಉಪನ್ಯಾಸದಲ್ಲಿ ಅದನ್ನು ಪ್ರದರ್ಶಿಸಿದರು.
ಉಪನ್ಯಾಸ ಮಂದಿರದಲ್ಲಿ ಅವರಿಟ್ಟು ಕೊಂಡಿದ್ದ ರೇಡಿಯೇಟರ್ ನಿಂದ ಅವರು ಕಳುಹಿಸಿದ ಹರ್ತ್ಸ್ ತರಂಗಗಳನ್ನು 75 ಅಡಿದೂರದಲ್ಲಿದ್ದ ಇನ್ನೊಂದು ಕೊಠಡಿ ಯಲ್ಲಿ ಅವರು ಇಟ್ಟಿದ್ದ ಕೊಹಿರರ್ ಉಪಕರಣವು ಗ್ರಹಿಸಿ ಒಂದು ಗಂಟೆಯನ್ನು ಬಾರಿಸಿತು.ಒಂದು ಪಿಸ್ತೂಲು ಗುಂಡನ್ನು ಹಾರಿಸಿತು. ಬೋಸ್‌ರು ತಮ್ಮ ಸಂಶೋಧನೆಯನ್ನು ಮುಂದುವರಿಸಿ, ಆ ಉಪಕರಣವನ್ನು ಉತ್ತಮ ಪಡಿಸುವುದರಲ್ಲಿ ನಿರತರಾಗಿದ್ದಾಗ ಅವರು ಇಂಗ್ಲೆಂಡಿಗೆ ಹೋಗಬೇಕಾಯಿತು. ಬ್ರಿಟೀಷ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್‌ ಸೈನ್ಸ್‌ನವರು ಅವರನ್ನು ಆಹ್ವಾನಿಸಿದ್ದರು.
ಅಲ್ಲಿ ಅವರು ತಮ್ಮ ಸಂಶೋಧನೆಯ ಒಂದು ವರದಿಯನ್ನು ಮಂಡಿಸಿದರು. ಅದನ್ನು ಅಪಾರವಾಗಿ ಮೆಚ್ಚಿಕೊಂಡ ಲಾರ್ಡ್ ಕೆಲ್ವಿನ್ ಅವರು ಬೋಸ್ ಅವರ ಸಾಧನೆಯನ್ನು ಕೊಂಡಾಡಿದ್ದಲ್ಲದೆ, ಎಂಭತ್ತು ವರ್ಷದ ಆ ವೃದ್ಧ ಕುಂಟುತ್ತಾ ಮಹಡಿ ಹತ್ತಿ ಹೋಗಿ, ಮಹಿಳೆಯರ ಗ್ಯಾಲರಿಯಲ್ಲಿದ್ದ ಶ್ರೀಮತಿ ಬೋಸ್ ಅವರನ್ನು ಕಂಡು ತಮ್ಮ ಎರಡು ಕೈಗಳಿಂದಲೂ ಅವರ ಕೈ ಕುಲುಕಿ ಆಕೆಯ ಪತಿಯ ಪ್ರತಿಭೆಯನ್ನು ಶ್ಲಾಘಿಸಿ ಅಭಿನಂದಿಸಿದರು.
ಬೋಸ್‌ರ ಸಾಧನೆಯನ್ನು ಇಂಗ್ಲೆಂಡಿನ ಲಾರ್ಡ್ ರ್ಯಾಲೇ ಅವರು 1899ರ ಮಾರ್ಚ್ 6ರಂದು ಲಂಡನ್ನಿನ ರಾಯಲ್ಸೊಸೈಟಿಗೆ ತಿಳಿಸಿದರು. ಅದೇ ವರ್ಷ ಏಪ್ರಿಲ್ 27 ರಂದು ನಡೆದ ರಾಯಲ್ ಸೊಸೈಟಿಯ ಸಭೆಯಲ್ಲಿ ಅದನ್ನು ಮಂಡಿಸ ಲಾಯಿತು. ಕೆಲವು ತಿಂಗಳುಗಳ ನಂತರ ಅಂದರೆ 1901ರಲ್ಲಿ ರಾಯಲ್ ಇಟ್ಯಾಲಿಯನ್ ನೌಕಾ ದಳದ ಲೆಫ್ಟಿನೆಂಟ್ ಸೊಲಾರಿ ಎಂಬುವನ ಕೈಗೆ ಆ ಉಪಕರಣ ಹೇಗೋ ಸಿಕ್ಕಿತು. ಅವನು ಅದನ್ನು ಪ್ರಯೋಗಿಸಿ ನೋಡಿ, ತನ್ನ ಬಾಲ್ಯದ ಸ್ನೇಹಿತ, ಮಾರ್ಕೋನಿಎಂಬಾತಾನಿಗೆ ಉಡುಗೊರೆಯಾಗಿ ಕೊಟ್ಟ.
ಮಾರ್ಕೋನಿ, ಕೂಡಲೇ ಅದಕ್ಕೆ ಪೇಟೆಂಟ್ ಪಡೆದುಕೊಂಡಿದ್ದಲ್ಲದೆ, ರೇಡಿಯೊ ತರಂಗಗಳನ್ನು ಬ್ರಿಟನ್ನಿನಿಂದ ಅಮೆರಿಕಕ್ಕೆ ಕಳುಹಿಸಲು ಪ್ರಯತ್ನಿಸಿ, ಅದರಲ್ಲಿ ಯಶಸ್ವಿಯಾದ. ನೊಬೆಲ್ ಪಾರಿತೋಷಕವನ್ನು ನಿರ್ಧರಿಸುವವರು ಈ ಹಿನ್ನೆಲೆ ಕಥೆಯನ್ನು ಅರಿಯದೆಯೇ ಮಾರ್ಕೋನಿಯ ಪೇಟೆಂಟ್‌ನಿಂದ ಮತ್ತು ಅಪಾರ ಪ್ರಚಾರಕ್ಕೊಳಗಾಗಿದ್ದ ಆತನ ಸಾಗರಾಂತರ ರೇಡಿಯೋ ಪ್ರಸಾರದಿಂದ ಪ್ರಭಾವಿತರಾಗಿ, 1909ರ ಭೌತಶಾಸ್ತ್ರದ ನೊಬೆಲ್ ಪಾರಿತೋಷಕ ವನ್ನು ಮಾರ್ಕೋನಿಗೆ ನೀಡಿದರು.
ಹೀಗೆ ಬೋಸ್ ರಿಗೆ ಸಿಗಬೇಕಾಗಿದ್ದ ನೊಬೆಲ್ ಮಾರ್ಕೋನಿ ಪಾಲಾಯಿತು. ಸಸ್ಯಗಳ ಬೆಳವಣಿಗೆ, ಸಂವೇದನೆಗಳಿಗೆ ಸಂಬಂಽಸಿದ‘ಕ್ರಿಸ್ಕೋಗ್ರಾಫ್’ ಎಂಬ ಉಪಕರಣವನ್ನು ಸಂಶೋಧಿಸಿದರು. ಹೀಗೆ ಹತ್ತು ಹಲವು ವೈಜ್ಞಾನಿಕ ಉಪಕರಣಗಳು, ಸಂಶೋಧನಾಪ್ರಬಂಧಗಳನ್ನು ಪ್ರಕಟಿಸಿದ ಜಗದೀಶ ಚಂದ್ರಬೋಸರು ದೇಶ ಕಂಡ ಅಪ್ರತಿಮ ವಿಜ್ಞಾನಿ. ಅವರೇ ಹೇಳುವಂತೆ: ನಾನೇನೂಸೃಷ್ಟಿಕರ್ತನಲ್ಲ. ಈ ಜಗತ್ತಿನಲ್ಲಿ ಅಂತರ್ಗತವಾಗಿರುವ ಕೆಲವೊಂದು ವಸ್ತು ವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿ ಕೊಂಡಿವೆ.
ಹಾಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು ಎಂಬ ಧೋರಣೆಯು ಅವರ ಹೃದಯವೈಶಾಲ್ಯ ಮತ್ತು ಸಮಾಜಮುಖಿ ವಿಚಾರಧಾರೆಗೆ ಸಾಕ್ಷಿಯಾಗಿತ್ತು. ಇಂದು ಹಲವು ಜ್ಞಾನ ಶಾಖೆಗಳ ನೂತನ ಸಂಶೋಧನೆಗಳು,ಅರಿವು ಮುಂತಾದವುಗಳು ಬಹುರಾಷ್ಟ್ರೀಯ ಕಂಪನಿಗಳ, ಲಾಭಕೋರ ಕಾರ್ಪೋರೇಟ್ ಕಂಪನಿಗಳ ಪಾಲಾಗುತ್ತಿವೆ. ಇಂದು‘ಪೇಟೆಂಟ’, ‘ಬೌದ್ಧಿಕ ಆಸ್ತಿ ಹಕ್ಕು’ ಎಂಬ ಪರಿಕಲ್ಪನೆಗಳು ಜಗತ್ತಿನ ಜನರ ಜೀವ ಹಿಂಡುತ್ತಿವೆ. ಅತಿ ಅಗ್ಗವಾಗಿ ಸಿಗಬಹುದಾದಜೀವರಕ್ಷಕ ಔಷಧಿಗಳೂ ಸಹ ತೀರಾ ದುಬಾರಿಯಾಗಿ ಬಡವರನ್ನು ಕೊಲ್ಲುತ್ತಿವೆ. ಈಗ ಕರೋನಾ ಮಹಾಮಾರಿಯ ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ಅದಕ್ಕೆ ಸೂಕ್ತವಾದ ಲಸಿಕೆಯನ್ನು ತಯಾರಿಸಿದ್ದೇವೆ ಎಂದು ನೂರಾರು ಪ್ರಯೋಗ ನಿರತ ವಿಜ್ಞಾನಿಗಳುಹೇಳುತ್ತಿದ್ದಾರೆ. ಎಷ್ಟರ ಮಟ್ಟಿಗೆ ಆ ಹೇಳಿಕೆಗಳು ಸತ್ಯವಾಗಿವೆಯೋ ಎಂಬುದನ್ನು ಕಾಲವೇ ನಿರ್ಣಯಿಸಬೇಕು.
ನೈಟ್ ಹುಡ್ ಪ್ರಶಸ್ತಿ(1916) – 1917ರಲ್ಲಿ, ಲಂಡನ್ನಿನ ಫೆಲೋ ಆಫ್ ರಾಯಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆ(1920), ಇಂಡಿ ಯನ್ ಸೈನ್ಸ್ ಕಾಂಗ್ರೆಸ್‌ನ 14ನೇ ಅಧಿವೇಶನದ ಅಧ್ಯಕ್ಷತೆಯ ಗೌರವ(1927), ವಿಯೆನ್ನಾ ಅಕಾಡೆಮಿ ಅಫ್ ಸೈನ್ಸ್‌ನ ಸದಸ್ಯತ್ವ ಗೌರವ (1928), ಫಿನ್ನಿಶ್ ಸೊಸೈಟಿ ಅಫ್ ಸೈನ್ಸ್ ಅಂಡ್ ಲೆಟರ್ಸ್ ಸದಸ್ಯತ್ವ ಗೌರವ (1929), ಮುಂತಾದ ಪ್ರಶಸ್ತಿ ಗೌರವಗಳು ಜಗದೀಶ ಚಂದ್ರ ಬೋಸರಿಗೆ ಒಲಿದು ಬಂದವು.
ರಿಸ್ಪಾನ್ಸ್ ಇನ್ ದಿ ಲಿವಿಂಗ್ ಆಂಡ್ ನಾನ್ ಲಿವಿಂಗ್ (1902) , ಪ್ಲ್ಯಾಂಟ್ ರಿಸ್ಪಾನ್ಸ್ ಆಸ್ ಎ ಮೀನ್ಸ್ ಆಫ್ ಫಿಜಿಯೊಲಾಜಿಕಲ್ಇನ್ವೆಸ್ಟಿಗೇಷನ್ (1906), ಕಾಂಪೇರಿಟಿವ್ ಇಲೆಕ್ಟ್ರೊ – ಫಿಜಿಯಾಲೊಜಿ ಇನ್ವೆಸ್ಟಿಗೇಷನ್ (1907), ಇನ್ನೂ ಮುಂತಾದವು ಬೋಸರ ಪ್ರಮುಖ ಕೃತಿಗಳು. ಬೋಸರ ಬಗ್ಗೆ ಸಾಕಷ್ಟು ಲೇಖನಗಳು, ಪುಸ್ತಕಗಳು ಹೊರ ಬಂದರೂ ಕೂಡ ಅವುಗಳಲ್ಲಿ ಪ್ರಮುಖವಾದುದು ಪ್ರಖ್ಯಾತ ಜೀವಶಾಸಜ್ಞನಾಗಿದ್ದ ಪ್ಯಾಟ್ರಿಕ್ ಗೆಡೆಸ್ ಎಂಬುವನು 1920ರಲ್ಲಿ ಇಂಗ್ಲೀಷ್‌ನಲ್ಲಿ ಬರೆದ ಸರ್ ಜಗದೀಶ ಚಂದ್ರ ಬೋಸರ ಜೀವನ ಮತ್ತು ಸಾಧನೆ ಸರ್ವಶ್ರೇಷ್ಠ ಕೃತಿಗಳಂದು.
ಒಂದು ವೇಳೆ ಮಾರ್ಕೋನಿ ಬೋಸರ ನಿಸ್ತಂತು ತಂತ್ರಜ್ಞಾನವನ್ನು ನಕಲು ಮಾಡದೇ ಹೋಗಿದ್ದರೆ, ಆ ನೊಬೆಲ್ ಪ್ರಶಸ್ತಿಬೋಸರಿಗೇ ಸಿಗುತ್ತಿತ್ತು. ಅಷ್ಟೇ ಅ ಭಾರತಕ್ಕೆ ವಿಜ್ಞಾನ ಕ್ಷೇತ್ರಕ್ಕೆ ಸಿಕ್ಕ ಪ್ರಪ್ರಥಮ ನೊಬೆಲ್ ಪಾರಿತೋಷಕ ಕೂಡಾ ಇದೇಆಗುತ್ತಿತ್ತು!.