ಕೃಷ್ಣರ ನೆರವಿನಿಂದಲೇ ರಾಮನ್ ನೊಬೆಲ್ ಪಡೆದದ್ದು!
ನ್ನಿಮಿತ್ತ
ಎಲ್‌.ಪಿ.ಕುಲಕರ್ಣಿ
ತಲೆಬರಹ ನೋಡಿ ಆಶ್ಚರ್ಯವಾಗಬಹುದು. ಎಲ್ಲಿಯ ರಾಮ, ಎಲ್ಲಿಯ ಕೃಷ್ಣ, ಅವರಿಗೆ ನೊಬೆಲ್ ಪ್ರಶಸ್ತಿ ಸಿಗುವುದೆಂದರೇನು? ಲೇಖನ ಓದುತ್ತಾ ಸಾಗಿದಂತೆ ವಿವರ ತಿಳಿಯಲಿದೆ. ರಾಮನ್‌ಗೆ ಈ ಕೃಷ್ಣರ ನೆರವಿನಿಂದಲೇ ನೊಬೆಲ್ ಪ್ರಶಸ್ತಿ ದೊರಕಿದ್ದು ಎಂದು.ಶಾಲೆಯಲ್ಲಿ ಬಹುವಾಗಿ ಸ್ಫೂರ್ತಿ ನೀಡುತ್ತಿದ್ದ ಶ್ರೀಸುಬ್ರಹ್ಮಣ್ಯ ಅಯ್ಯರ್ ಅವರು ಇವರಿಗೆ ಶಿಕ್ಷಕರಾಗಿದ್ದರು.
ಇವರ ಮಾತುಗಳಲ್ಲೇ ಹೇಳುವುದಾದರೆ, ವಿಜ್ಞಾನದ ಬಗ್ಗೆ ನನಗೆ ಮೊದಲು ಪ್ರೀತಿ ಹುಟ್ಟಿದ್ದು ಹೈಸ್ಕೂಲಿನಲ್ಲಿ. ನನ್ನ ಶಿಕ್ಷಕರುವೃತ್ತಿ ನಿರತ ವಿಜ್ಞಾನಿಯೇನು ಆಗಿರಲಿಲ್ಲ. ಆದರೆ ಅವರು ವಿಜ್ಞಾನವನ್ನು ಬಹಳ ಸ್ಪಷ್ಟವಾಗಿ ಹಾಗೂ ಮೋಡಿ ಮಾಡುವರೀತಿಯಲ್ಲಿ ವಿವರಿಸುತ್ತಿದ್ದರು. ಅವರ ಪಾಠಗಳು ನಮ್ಮ ಮನಸ್ಸಿನಾಳಕ್ಕೆ ಇಳಿಯುತ್ತಿದ್ದವಲ್ಲದೆ, ಇನ್ನಷ್ಟು ವಿಜ್ಞಾನಕ್ಕೆ ಹಾತೊರೆ ಯುವಂತೆ ಮಾಡುತ್ತಿದ್ದವು. ಅದು ಭೌತಶಾಸ್ತ್ರವೇ ಆಗಿರಬಹುದು ಅಥವಾ ಭೂಗೋಳ ಇಲ್ಲವೆ ರಸಾಯನ ಶಾಸ್ತ್ರವೇ ಆಗಿದ್ದಿರ ಬಹುದು.
ಅವರ ಬೋಧನೆಯ ಶೈಲಿ ಮಾತ್ರ ಅದ್ವಿತೀಯವಾದದ್ದು. ಅವರು ಸುಮ್ಮನೆ ಪುಸ್ತಕದಲ್ಲಿದ್ದ ಪಾಠಗಳನ್ನು ಒಪ್ಪಿಸುತ್ತಿರಲಿಲ್ಲ. ಅನೇಕ ಸರಳವಾದ ಪ್ರಯೋಗಗಳನ್ನು ಮಾಡಿ ತೋರಿಸುತ್ತಿದ್ದರು ಹಾಗೂ ನಾವೂ ಸಹ ಅವುಗಳನ್ನು ನಾವಾಗಿಯೇ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದರು. ತಾವೊಬ್ಬ ವಿಜ್ಞಾನಿಯಾಗಿ ಹೊರಹೊಮ್ಮಲು ತಮಗೆ ಪ್ರೇರಣೆಯಾದ ಶಿಕ್ಷಕರನ್ನು ಹೀಗೆ ಸದಾ ಸ್ಮರಿಸು ತ್ತಿದ್ದ ಭಾರತದ ಆ ವಿಜ್ಞಾನಿಯೇ ಕೆ.ಎಸ್. ಕೃಷ್ಣನ್. ಇವರನ್ನು ಪ್ರೀತಿಯಿಂದ ಸಂಕ್ಷಿಪ್ತವಾಗಿ ‘ಕೆಎಸ್‌ಕೆ’ ಎಂದೂ ಸಹ ಕರೆಯ ಲಾಗುತ್ತಿದೆ.
ಭಾರತಕ್ಕಷ್ಟೇ ಅಲ್ಲ ಏಷ್ಯಾ ಖಂಡಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಪ್ರಪ್ರಥಮ ನೊಬೆಲ್ ಪಾರಿತೋಷಕ ತಂದುಕೊಟ್ಟ ಹೆಮ್ಮೆಯವಿಜ್ಞಾನಿ ಸರ್.ಸಿ.ವಿ.ರಾಮನ್‌ರ ಬಗ್ಗೆ ನಮಗೆ ಗೊತ್ತು. ಆದರೆ, ಅವರ ಹತ್ತು ಹಲವು ಸಂಶೋಧನೆಗಳ ಹಿಂದೆ ಅವಿರತವಾಗಿಶ್ರಮವಹಿಸಿದ ಒಬ್ಬ ಮಹಾನ್ ಚೇತನದ ಬಗ್ಗೆ ಬಹುಶಃ ನಮಗೆ ಗೊತ್ತಿರಲಿಕ್ಕಿಲ್ಲ. ಅವರೇ ಕೆ.ಎಸ್. ಕೃಷ್ಣನ್. ಅವರ ಪೂರ್ಣಹೆಸರು ಕರಿಯಮಾಣಿಕ್ಯಂ ಶ್ರೀನಿವಾಸ ಕೃಷ್ಣನ್. ರಾಮನ್ ಅವರಿಗಿಂತ ಹತ್ತು ವರ್ಷ ಕಿರಿಯರು. ರಾಮನ್ ಜನಿಸಿದ್ದು 1888, ನವೆಂಬರ್ 7ರಂದು ತಿರುಚಿನಾಪಳ್ಳಿಯಲ್ಲಿ.
ಕೃಷ್ಣನ್ ಜನಿಸಿದ್ದು ತಮಿಳುನಾಡಿನ ಕೊಡೈಕೆನಲ್ ಸಮೀಪದ ವಾಟ್ರಾಪ್ ಎಂಬ ಪುಟ್ಟ ಗ್ರಾಮದಲ್ಲಿ, 4ನೇ ಡಿಸೆಂಬರ್ 1898 ರಂದು. ರಾಮನ್ ಅವರದು ಶ್ರೀಮಂತ ಕುಟುಂಬ. ಆದರೆ ಕೃಷ್ಣನ್‌ಗೆ ಇಂಥ ಅದೃಷ್ಟ ಇರಲಿಲ್ಲ. ಇವರ ತಂದೆ ಶ್ರೀನಿವಾಸಅಯ್ಯಂಗಾರ್ – ಶಾಲಾ ಉಪಾಧ್ಯಾಯರು. ತುಂಬು ಸಂಸಾರ, ಅದರ ಜೊತೆಗೆ ತುಂಬು ಬಡತನವೂ ಇತ್ತು. ಇಂಥ ಆರ್ಥಿಕ ಸಂಕಷ್ಟದ ನಡುವೆಯೂ ಕೃಷ್ಣನ್ ಓದು ಮುಂದುವರಿದಿತ್ತು. ಶಾಲಾ ದಿನಗಳಿಂದಲೂ ಬಾಲಕ ಕೃಷ್ಣನ್‌ಗೆ ಗಣಿತ, ಭೌತಶಾಸ್ತ್ರ ಮತ್ತು ಸಾಹಿತ್ಯದಲ್ಲಿ ಬಹಳ ಆಸಕ್ತಿ ಇತ್ತು. ಕೃಷ್ಣನ್ ತಮ್ಮ ಬಾಲ್ಯದ ಶಾಲಾ ದಿನಗಳನ್ನು ನೆನಪಿಸಿಕೊಳ್ಳುತ್ತಾ- ಶಾಲೆಯಲ್ಲಿ ಇವರಿಗೆ ವಿಜ್ಞಾನಿ ಅರ್ಕಿಮಿಡಿಸ್‌ನ ಮೇಲೆ ಪ್ರಬಂಧವೊಂದನ್ನು ಬರೆಯಲು ಹೇಳಿದರಂತೆ, ಇದನ್ನು ಬರೆಯುವಾಗ ಬಾಲಕ ಕೃಷ್ಣನ್ ಸಾಂದ್ರತೆಯನ್ನು ಕಂಡು ಹಿಡಿಯಲು ತಾನೇ ನಿರ್ಮಿಸಿದ ಒಂದು ಉಪಕರಣವನ್ನೂ ಸಹ ಅದರಲ್ಲಿ ಸೇರಿಸಿ ಬರೆದಿದ್ದ ರಂತೆ.
ಅದೇ ಉಪಕರಣ ವನ್ನು ಬಹಳ ವರ್ಷಗಳ ಹಿಂದೆಯೇ ಕಂಡುಹಿಡಿಯಲಾಗಿತ್ತು. ಅಲ್ಲದೇ ಅದನ್ನು ‘ನಿಕೊಲಾಸ್ ಹೈಡ್ರೋ ಮೀಟರ್’ ಎಂದು ತಿಳಿದಾಗ ಕೃಷ್ಣನ್ ರಿಗೆ ಬಹಳವೇ ಆಶ್ಚರ್ಯವಾಗಿತ್ತಂತೆ. ಈ ವಿಚಾರವೇ ಮುಂದೆ ಕೃಷ್ಣನ್‌ರಿಗೆ ಸ್ವತಂತ್ರವಾಗಿ ಯೋಚಿಸುವಂತೆ ಹಾಗೂ ವಿಜ್ಞಾನದಲ್ಲಿ ಸಂಶೋಧನೆ ಕೈಗೊಳ್ಳುವಂತೆ ಪ್ರೇರೇಪಿಸಿರಬೇಕು. ತಂದೆ ಶ್ರೀನಿವಾಸ ಅಯ್ಯಂಗಾರರು ಸಂಸ್ಕೃತದಲ್ಲಿ ಆಳವಾದ ಪಾಂಡಿತ್ಯ ಹೊಂದಿದ್ದರು. ಹಾಗಾಗಿ ಬಾಲಕ ಕೃಷ್ಣನ್ ಅವರಲ್ಲೂ ಸಂಸ್ಕೃತದಲ್ಲಿ ಆಸಕ್ತಿ ಹುಟ್ಟಿತು.
ಮುಂದೆ ಕೃಷ್ಣನ್ ಮಧುರೆಯ ಅಮೆರಿಕನ್ ಕಾಲೇಜು, ನಂತರ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಕ್ರಿಶ್ಚಿಯನ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಅಲೆಗ್ಸಾಂಡರ್ ಮೊಟ್ರಾಫ್ ತರುಣ ಕೃಷ್ಣನ್ ಅವರ ಅದ್ಭುತ ಪ್ರತಿಭೆಯನ್ನು ಗುರುತಿಸಿದರು. ಪದವಿ ವ್ಯಾಸಂಗ ಮುಗಿಯುತ್ತಲೇ (1918) ರಸಾಯನ ಶಾಸ್ತ್ರ ಪ್ರಯೋಗಾಲಯದಲ್ಲಿ ಪ್ರಯೋಗನಿರೂಪಕನಾಗಿ ಸೇರುವ ಅವಕಾಶ ಸಿಕ್ಕಿತು. ಕೃಷ್ಣನ್ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ಬಂದ ಅವಕಾಶವನ್ನು ಒಪ್ಪಿಕೊಂಡರು.ಶ್ರಮವಹಿಸಿ, ಶ್ರದ್ಧೆಯಿಂದ ದುಡಿದರು.
ಒಂದೆಡೆ ತಮ್ಮ ಲೇಖನದಲ್ಲಿ ಎ.ಪಿ.ಕೃಷ್ಣ ಅವರು ವಿಜ್ಞಾನಿ ಕೆ.ಎಸ್.ಕೃಷ್ಣನ್ ಅವರ ಬಗ್ಗೆೆ ಹೀಗೆ ಪ್ರಸ್ತಾಪಿಸುತ್ತಾ ಹೋಗುತ್ತಾರೆ; ಕೆ.ಎಸ್.ಕೃಷ್ಣನ್ ಹೀಗೆ ಹೇಳುತ್ತಾರೆ, ಕಾಲೇಜಿನ ರಸಾಯನಶಾಸ್ತ್ರ ಪ್ರಯೋಗಾಲಯದ ಸಹಾಯಕ ಹುದ್ದೆಯನ್ನು ನಾನು ತ್ಯಜಿಸಿ ಭೌತ ವಿಜ್ಞಾನದಲ್ಲಿ ಸಂಶೋಧನೆಗೆಂದು ಕೋಲ್ಕತಾಗೆ ಹೋದೆ ಮತ್ತು ರಾಮನ್ ಅವರನ್ನು ಭೇಟಿಯಾದೆ. ಅವರು ನನ್ನನ್ನು ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿಸಿಕೊಳ್ಳಲು ಒಪ್ಪಿದರೂ, ಕೂಡಲೇ ಸಂಶೋಧನೆಗೆ ತೊಡಗಲು ಹೇಳಲಿಲ್ಲ. ಎರಡು ವರ್ಷಗಳ ಕಾಲ ಸಂಶೋಧನೆಯ ಬೇರೆ ಬೇರೆ ಹಂತಗಳ ಕುರಿತಾಗಿ ತಿಳಿದುಕೊಳ್ಳುತ್ತ, ಭೌತಶಾಸ್ತ್ರದಲ್ಲಿ ಇನ್ನಷ್ಟು ಒಳನೋಟ ದಕ್ಕಿದ ಮೇಲೆ ರಾಮನ್ ಅವರ ಸಂಶೋಧನಾ ತಂಡಕ್ಕೆ ಸೇರಲು ಸಾಧ್ಯವಾಯಿತು.
ನನ್ನ ಅದೃಷ್ಟ – ಆ ಐದು ವರ್ಷಗಳು – ನನ್ನ ವಿಜ್ಞಾನ ಜೀವನದ ಪರಮ ಸಂಭ್ರಮದ ಋತುಗಳು. ಕೋಲ್ಕತಾ ವಿಶ್ವವಿದ್ಯಾಲಯ ದಲ್ಲಿ ಭೌತಶಾಸ್ತ್ರ ಅಧ್ಯಾಪಕರಾಗಿದ್ದ ರಾಮನ್ ಇಂಗ್ಲೆಂಡಿನಲ್ಲಿ ವೈಜ್ಞಾನಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಿ ಮರಳಿ ತವರಿಗೆ ಪ್ರಯಾಣಿಸುತ್ತಿದ್ದಾರೆ (1921, ಸಪ್ಟೆಂಬರ್ ತಿಂಗಳು). ಮೆಡಿಟರೇನಿಯನ್ ಸಮುದ್ರದ ಅಚ್ಚ ನೀಲಿ ಬಣ್ಣವನ್ನು ಕಂಡ ರಾಮನ್ ಬೆರಗಾದರು. ಎಂಥ ನೀಲಿ – ಎಂಥ ಚೆಲುವು!
ಬಾನಿನ ನೀಲಿ ಬಣ್ಣಕ್ಕೆ ವಾಯುಮಂಡಲದಲ್ಲಿರುವ ಧೂಳಿನ ಕಣಗಳು ಮತ್ತು ಬಗೆ ಬಗೆಯ ಅನಿಲಗಳ ಪರಮಾಣುಗಳು ಹೇಗೆ ಕಾರಣವೆಂದು ಲಾರ್ಡ್ ರಾಲೆ ಅದಾಗಲೇ ಬಲು ಸುಂದರವಾಗಿ ವಿವರಿಸಿದ್ದ. ಆದರೆ ಸಮುದ್ರದ ನೀಲಿಗೆ ವಿವರಣೆ ನೀಡಲುಸಾಧ್ಯವಾಗಿರಲಿಲ್ಲ. ಇದೀಗ ರಾಮನ್ ಆ ದಿಸೆಯಲ್ಲಿ ಅಧ್ಯಯನ ಆರಂಭಿಸಿದರು – ಅಲ್ಲೇ ಹಡಗಿನಲ್ಲೆ! ತನ್ನೆೆದುರು ಹರಡಿ ಬಿದ್ದ ನೀಲಿ ಬಣ್ಣದ ನೀರಿನ ರಾಶಿಯನ್ನು ನೋಡುತ್ತಿದ್ದಂತೆ ನೀರಿನ ಅಣುಗಳಿಂದ ನೀಲಿ ಬಣ್ಣದ ಬೆಳಕು ಅತ್ಯಧಿಕ ಪ್ರಮಾಣದಲ್ಲಿ ಚದರಿಸಲ್ಪಡುವುದೇ ಈ ನೀಲಿಗೆ ಕಾರಣವೆಂದು ಅವರಿಗನ್ನಿಸಿತು.
ಸಮುದ್ರದ ನೀರನ್ನು ಕುಪ್ಪಿಗಳಲ್ಲಿ ಸಂಗ್ರಹಿಸಿ, ತಮ್ಮೊಂದಿಗೆ ಸದಾ ಇರುತ್ತಿದ್ದ ರೋಹಿತ ದರ್ಶಕವನ್ನು ಬಳಸಿಕೊಂಡು ಹಡಗಿ ನಲ್ಲಿಯೇ ಪ್ರಯೋಗ ಮಾಡಿದರು. ಹದಿನೈದು ದಿನಗಳ ಪಯಣ ಮುಗಿಸಿ ಹಡಗು ಮುಂಬಯಿಯ ರೇವಿಗೆ ತಲಪುವ ಹೊತ್ತಿಗೆ ಪ್ರಯೋಗ ಫಲಿತಾಂಶಗಳು ಸಂಶೋಧನಾ ಲೇಖನ ಗಳಾಗಿದ್ದವು. ಅವು ಪ್ರತಿಷ್ಠಿತ ನೇಚರ್ ಪತ್ರಿಕೆಯಲ್ಲಿ ಪ್ರಕಟ ಗೊಂಡವು ಕೂಡ. ದ್ರವ ಮಾಧ್ಯಮದಲ್ಲಿ ಬೆಳಕಿನ ಚದರಿಕೆಯ ಪರೀಕ್ಷೆಗಾಗಿ ರಾಮನ್ ತಮ್ಮ ಶಿಷ್ಯರನ್ನು ನಿಯೋಜಿಸಿ ದರು. ಚದರಿಕೆಯಾದ ಬೆಳಕಿನ ಧ್ರುವೀಕರಣದ () ಬಗ್ಗೆ ಸ್ಪಷ್ಟ ವಿವರಗಳಿಗಾಗಿ ರಾಮನ್ ಮತ್ತವರ ಶಿಷ್ಯಂದಿರು ಹೆಣಗಾಡುತ್ತಿದ್ದರು.
ಒಂದು ದಿನ (1927) ಬೆಳಗ್ಗೆ ಕೃಷ್ಣನ್ ಅವರ ಕೊಠಡಿಗೆ ಬಂದ ರಾಮನ್ ಹೇಳಿದರಂತೆ ಸೈದ್ಧಾಂತಿಕ ಭೌತವಿಜ್ಞಾನದಲ್ಲಿ ಕಳೆದ ಮೂರು ವರ್ಷಗಳಿಂದ ನಿರತನಾದ ನಿನ್ನನ್ನು ತುಸು ಪ್ರಾಯೋಗಿಕ ಕ್ಷೇತ್ರಕ್ಕೆ ಎಳೆಯುತ್ತಿದ್ದೇನೆ. ಒಬ್ಬ ವಿಜ್ಞಾನಿ ಸದಾ ಸಿದ್ಧಾಂತ ದಲ್ಲಿಯೇ ಮುಳುಗಿರುವುದು ತರವಲ್ಲ ದ್ರವಗಳಲ್ಲಿ ಬೆಳಕಿನ ಚದರಿಕೆಯ ಐತಿಹಾಸಿಕ ಪ್ರಯೋಗಗಳಿಗೆ ಕೃಷ್ಣನ್ ತೊಡಗಿದ್ದು ಹೀಗೆ. ರಾಮನ್ ಮಾತುಗಳು ವಿಜ್ಞಾನ ಲೋಕದಲ್ಲಿ ನನ್ನ ಬೆಳವಣಿಗೆಗೆ ಅಗಾಧ ಪರಿಣಾಮ ಬೀರಿತೆಂದು ಕೃಷ್ಣನ್ ಆಗಾಗ ಸ್ಮರಿಸುತ್ತಿದ್ದರು. ಕೃಷ್ಣನ್ ಒಬ್ಬ ಅಪ್ಪಟ ವಿಜ್ಞಾನಿ. ಸಿದ್ಧಾಂತ ಮತ್ತು ಪ್ರಯೋಗಗಳೆರಡರಲ್ಲೂ ಅಪ್ರತಿಮ. ಗುರಿ ತಲುಪುವ ತನಕವಿಶ್ರಾಂತಿ ಎಂಬುದಿರಲಿಲ್ಲ.
ಅವರ ಪ್ರಯೋಗಾಲಯದ ಬಾಗಿಲು ಸೂರ್ಯೋದಯದ ಮೊದಲೇ ತೆರೆಯುತ್ತಿತ್ತು – ಮುಚ್ಚಿಕೊಳ್ಳುತ್ತಿದ್ದುದು ನಟ್ಟಿರುಳಿನಲ್ಲಿ. ಆದರೆ ಸಂಜೆ ಹೊತ್ತು ಮಾತ್ರ ಕೃಷ್ಣನ್ ಫುಟ್ಬಾಲ್ ಆಟ ಆಡುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲವಂತೆ! ಇಂಗ್ಲೀಷ್, ಸಂಸ್ಕೃತ ಮತ್ತು ತಮಿಳು ಸಾಹಿತ್ಯಗಳಲ್ಲಿ ಆಳ ಪಾಂಡಿತ್ಯವಿದ್ದ ಕೃಷ್ಣನ್ ಇದ್ದಲ್ಲಿ ಸಂವಾದ ಬೇರೆಯೇ ಸ್ತರಕ್ಕೆ ಜಿಗಿಯುತ್ತಿತ್ತು.
ಎಳೆಯರನ್ನು ಅನನ್ಯವಾಗಿ ಪ್ರೋತ್ಸಾಹಿಸುತ್ತಿದ್ದರು. ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ ಅಮೆರಿಕದ ಕಾಂಪ್ಟನ್ ಅವರಿಗೆ ಕಾಂಪ್ಟನ್ ಪರಿಣಾಮಕ್ಕಾಗಿ ದೊರೆತಿದೆ ಎಂಬ ಸುದ್ದಿಯನ್ನು ಕೃಷ್ಣನ್ ಅರುಹಿದಾಗ ರಾಮನ್ ಹೇಳಿದರಂತೆ. ಓಹ್, ಇದೊಂದು ಸಂತಸದ ಸುದ್ದಿ. ನೋಡಿ, ಎಕ್ಸ್‌ – ಕಿರಣ ಗಳಿಗೆ ಇದು ನಿಜವಾದರೆ ಅದಕ್ಕೆ ಸಂವಾದಿಯಾದದ್ದು ಗೋಚರ ಬೆಳಕಿನಲ್ಲೂ ಆಗಬ ಹುದು. ನಾವು ಅದೇ ದಿಸೆಯಲ್ಲಿ ಮುಂದುವರಿಯಬೇಕು. ಸರಿ ದಾರಿಯಲ್ಲಿ ಸಾಗುತ್ತಿದ್ದೇವೆ.
ಅದು ಖಂಡಿತ ಸಿಗುತ್ತದೆ. ನೊಬೆಲ್ ಪ್ರಶಸ್ತಿ ನಮ್ಮ ಪಾಲಿಗೆ ದೊರೆಯಲಿದೆ ಇದು ರಾಮನ್ ಅವರ ಆತ್ಮವಿಶ್ವಾಸದ ಒಂದುಝಲಕು. ನಿಜ, ಅಮೆರಿಕದ ಡೆನಿಸ್ಕಾಂಪ್ಟನ್ ಮಾಡಿದ್ದು ಘನ ದ್ರವ್ಯಗಳಲ್ಲಿ ಎಕ್ಸ್‌ – ಕಿರಣಗಳ ಚದರುವಿಕೆಯನ್ನು ಮತ್ತು ಆಮೂಲಕ ಅವುಗಳ ಅಲೆಯುದ್ಧ ಹೆಚ್ಚುವ ವಿಶಿಷ್ಟ ವಿದ್ಯಮಾನವನ್ನು. ಇದೇ ಬಗೆಯಲ್ಲಿ ಬೆಳಕಿನ ಕಿರಣಗಳು ದ್ರವ ಮಾಧ್ಯಮದಲ್ಲಿ ಸಾಗುವಾಗ ಮಾಧ್ಯಮದ ಅಣು ಪರಮಾಣುಗಳಿಂದ ಚದರಿಸಲ್ಪಟ್ಟು ಅವುಗಳ ಅಲೆಯುದ್ಧದಲ್ಲಿ ವ್ಯತ್ಯಾಸವಾಗಲಾರದೇ? ವಾಸ್ತವವಾಗಿ ಈ ದಿಸೆಯಲ್ಲಿ ಅದಾಗಲೇ ಸೈದ್ಧಾಂತಿಕ ಸೂಚನೆಗಳು ಒದಗಿದ್ದವು. 1923ರಲ್ಲಿ ಜರ್ಮನಿಯ ಭೌತ ವಿಜ್ಞಾನಿಗಳಾದ ಸ್ಮೆೆಕೆಲ್, ಹೈಸೆನ್ಬರ್ಗ್ ಮತ್ತು ಕ್ರಾಮರ್ ಹಾಗೂ 1927ರಲ್ಲಿ ಡಿರಾಕ್, ಬೆಳಕಿನ ಕಿರಣವು ಪದಾರ್ಥದ ಮೂಲಕ ಹಾದುಹೋಗು ವಾಗ ಚದರಿಕೆಯಿಂದ ಕಿರಣದ ಅಲೆಯುದ್ದದಲ್ಲಿ ವ್ಯತ್ಯಾಸವಾಗಬಹುದೆಂದು ಊಹಿಸಿದ್ದರು.
ಇದನ್ನು ಬೆಂಬತ್ತಿದವರು ರಾಮನ್ ಮತ್ತು ಅವರ ಸಂಗಡಿಗರು. ಇವರಲ್ಲದೇ ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವ ವಿದ್ಯಾಲಯದಲ್ಲಿ ರಾಸ್, ರಷ್ಯಾದಲ್ಲಿ ಲ್ಯಾಂಡ್‌ಸ್‌‌ಬರ್ಗ್ ಮತ್ತು ಮ್ಯಂಡೆಲ್ಸ್ಟನ್ ತಂಡದಿಂದಲೂ ಬಿರುಸಿನಿಂದ ಪ್ರಯೋಗ ನಡೆಯುತ್ತಿತ್ತು. ಅಂದರೆ ಅಂತಾರಾಷ್ಟ್ರೀಯವಾಗಿ ಸಂಶೋಧನಾ ಪೈಪೋಟಿ – ತುರುಸಿನ ಸ್ಪರ್ಧೆ. 1928ರ ಫೆಬ್ರವರಿ ತಿಂಗಳಿನ ಮೊದಲ ವಾರದಿಂದಲೇ ಪ್ರಯೋಗಗಳು ಬಿರುಸಿನಿಂದ ಸಾಗಿದವು.
ಫೆಬ್ರವರಿ 28ರ ಬೆಳಗ್ಗೆ ಹತ್ತರ ಹೊತ್ತಿಗೆ ತಮ್ಮ ಪ್ರಯೋಗದಲ್ಲಿ ರಾಮನ್ ಮತ್ತು ಕೃಷ್ಣನ್ ಯಶಸ್ಸು ಕಂಡರು. ದ್ರವ ಮಾಧ್ಯಮದಲ್ಲಿ ಬೆಳಕಿನ ಅಲೆಗಳನ್ನು ಮಾಧ್ಯಮದ ಅಣುಗಳು ಚದರಿಸುವ ಮೂಲಕ ಬೆಳಕಿನ ರೋಹಿತ ರೇಖೆಯ ಅಲೆಯುದ್ದ ವ್ಯತ್ಯಾಸವಾಗಿ ಹೊಸ ರೇಖೆಗಳು ಪ್ರಕಟವಾಗುವ ನೂತನ ವಿದ್ಯಮಾನವನ್ನು ಅಂದು ಅವರಿಬ್ಬರು ಕಂಡರು. ರಾಮನ್ ತಮಗೆ ನೊಬೆಲ್ ಪ್ರಶಸ್ತಿ ಬಹು ಬೇಗನೆ ಲಭಿಸುತ್ತದೆಂದು ನಂಬಿದ್ದರು.
ಅವರ ನಿರೀಕ್ಷೆ ಹುಸಿಯಾಗಲಿಲ್ಲ. 1930ರ ನೊಬೆಲ್ ಪ್ರಶಸ್ತಿ ರಾಮನ್ನರಿಗೆ ಒಲಿಯಿತು. ರಾಮನ್ ಪರಿಣಾಮದ ಆವಿಷ್ಕಾರದಲ್ಲಿ ಬಹು ದೊಡ್ಡ ಪಾತ್ರ ವಹಿಸಿದ ಕೃಷ್ಣನ್ ಅವರಿಗೂ ನೊಬೆಲ್ ಪ್ರಶಸ್ತಿ ನೀಡಬೇಕಿತ್ತೆನ್ನುವ ಅಭಿಮತವಿದೆ. ನೊಬೆಲ್ಪ್ರಶಸ್ತಿ ವಿಜೇತ ಎಸ್ ಚಂದ್ರಶೇಖರ್ ಹೇಳಿದ್ದಾರೆ. ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ ಇಬ್ಬರು ಶ್ರೇಷ್ಠ ವಿಜ್ಞಾನಿಗಳಾದರಾಮನ್ ಮತ್ತು ಕೃಷ್ಣನ್ ನಡುವಿನ ಪರಸ್ಪರ ಸಹಕಾರ ಮತ್ತು ಉತ್ತೇಜನದಿಂದ ರಾಮನ್ ಪರಿಣಾಮದ ಆವಿಷ್ಕಾರವಾಯಿತು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಇದರ ನಿರ್ದೇಶಕರಾಗಿದ್ದ ರಾಮಶೇಷನ್ ಅವರೊಂದಿಗೆ ನಡೆದ ಸುದೀರ್ಘ ಸಂದರ್ಶನ ದಲ್ಲಿ ಕೃಷ್ಣನ್ ಹೇಳುತ್ತಾರೆ. ರಾಮನ್ ಪರಿಣಾಮದ ಆ ವಿದ್ಯಮಾನದಲ್ಲಿ ನಾನು ಭಾಗವಹಿಸಿದ್ದೇನೋ ನಿಜ. ಪ್ರೊ.ರಾಮನ್ ನನಗೆ ಬೆಳಕಿನ ಚದರುವಿಕೆಯ ವಿದ್ಯಮಾನದ ಕುರಿತಂತೆ ಪ್ರಯೋಗ ನಡೆಸಲು ಸೂಚಿಸಿದರು. ಅವರ ನಿರ್ದೇಶನದಂತೆ ನಾನು ಪ್ರಯೋಗ ನಡೆಸಿದೆ, ಅಷ್ಟೇ. ಇದೇ ಸಂದರ್ಶನದಲ್ಲಿ ರಾಮನ್ ಬಗ್ಗೆ ಕೃಷ್ಣನ್ ಹೇಳಿದ್ದಾರೆ.
ಪ್ರೊಫೆಸರ್ ರಾಮನ್ 24 ಗಂಟೆಗಳ ವಿಜ್ಞಾನಿ – ಪ್ರಾಯಶಃ ನಿದ್ದೆಯ ಹೊತ್ತನ್ನೊಂದು ಬಿಟ್ಟು. ಪ್ರತಿ ಕ್ಷಣವೂ ವಿಜ್ಞಾನದ ಬಗ್ಗೆಅವರು ಚಿಂತಿಸುತ್ತಿದ್ದರು; ಚರ್ಚಿಸುತ್ತಿದ್ದರು. ಇದು ಕೃಷ್ಣನ್ ಅವರ ಸೌಜನ್ಯ. ರಾಮನ್ ತಮ್ಮ ಸಹದ್ಯೋಗಿಯಾಗಿದ್ದ ಕೃಷ್ಣನ್ಕೊಡುಗೆಯನ್ನು ಮುಕ್ತವಾಗಿ ಶ್ಲಾಘಿಸಿದ್ದರು. ನೊಬೆಲ್ ಪ್ರಶಸ್ತಿ ಸ್ವೀಕಾರ ಮಾಡುತ್ತ ಮಾಡಿದ ಉಪನ್ಯಾಸದಲ್ಲಿ ಕೃಷ್ಣನ್ ಅವರಕೊಡುಗೆಯನ್ನು ರಾಮನ್ ಸ್ಮರಿಸಿಕೊಂಡರು. 1930ರ ಸುಮಾರಿಗೆ ಆಂಧ್ರ ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದ ಪ್ರೊಫೆಸರ್ ಹುದ್ದೆಗೆ ಕೃಷ್ಣನ್ ಅರ್ಜಿ ಹಾಕಿದಾಗ ರಾಮನ್ ಶಿಫಾರಸ್ಸು ಪತ್ರ ಬರೆದರು ಒಂದೊಮ್ಮೆ 1930ರ ನೊಬೆಲ್ ಪ್ರಶಸ್ತಿಯನ್ನು 1921ರಿಂದ ಕೋಲ್ಕತಾದಲ್ಲಿ ಬೆಳಕಿನ ಚದರಿಕೆ ಬಗ್ಗೆ ನಡೆಸಿದ ಸಂಶೋಧನೆಗಳ ಬದಲಿಗೆ 1928ರ ಸಂಶೋಧನೆಯನ್ನಷ್ಟೇ ಗಮನಿಸಿ ನೀಡಿದ್ದಾ ದರೆ, ಕೃಷ್ಣನ್ ಅವರಿಗೂ ನೊಬೆಲ್ ಪ್ರಶಸ್ತಿ ಅರ್ಹವಾಗಿಯೇ ಸಲ್ಲಬೇಕು.