ಭಾಷೆಯೇ ಭಾಷಾಂತರವಾಗುವಾಗ ಬೆರಗು
ಸಂಡೆ ಸಮಯ
ಸೌರಭ ರಾವ್, ಕವಯತ್ರಿ, ಬರಹಗಾರ್ತಿ
ಒಂದಕ್ಕೊಂದು ಸಂಬಂಧವೇ ಇಲ್ಲದ ವಿಷಯಗಳು ಕಾಡಿ ಒಂದಾದಮೇಲೊಂದರಂತೆ ಕವಿತೆಯಾಗಿಬಿಡುವ ಬೆರಗು, ಭಾಷೆ ಭಾವದ ಕೈಹಿಡಿಯುವ ಬೆರಗು ಈ ವಾರಕ್ಕೆ.
ಹೀಗೆಲ್ಲಾ ಮೌನಾಂತರವಾಗುವ, ಮತ್ತು ಒಮ್ಮೊಮ್ಮೆ ಭಾಷೆಯೇ ಭಾಷಾಂತರವಾಗುವಾಗ ಬೆರಗು ಈ ವಾರಕ್ಕೆ. ಹ್ಯಾಪಿ ಸಂಡೇ!ಸೋಮನಾಥಪುರ
ಝಲ್ಲರಿ ಜಾಗಟೆ ಘಂಟೆಗಳಿಲ್ಲಿ ಈಗ ಮೊಳಗುವುದಿಲ್ಲ
ಈ ತ್ರಿಕೂಟ ದೇವಾಲಯವೀಗ ಪ್ರಾಜ್ಞಮೌನಿ
ಇದು ನೀಲನಭದ ಕೆಳಗಿರುವ ನಕ್ಷತ್ರವೊಂದರ ಮೇಲೆ, ಕತ್ತಲ ಬಣ್ಣ ಹೊದ್ದು ನಿಂತ ನಕ್ಷತ್ರಮೌನ
ಪ್ರದಕ್ಷಿಣಾ ಪಥದಲ್ಲಿ ನಡೆ ಯುವಾಗ ಇತಿಹಾಸ ಜೊತೆಯಾಗುತ್ತದೆ
ಆಗಾಗ ಕೈಹಿಡಿದು ಜಗ್ಗಿ ಕಲ್ಲನ್ನು ಶಿಲ್ಪವಾಗಿಸಿದ ಪ್ರತಿಯೊಂದು ತಿರುವು
ಹಠಾತ್ತನೆ ನಿಂತ ರೇಖೆ
ಪುರಾಣದ ಯಾವುದೋ ಕ್ಷಣ ಸ್ಥಗಿತಗೊಂಡು ಭೂತಕಾಲವನ್ನು ವರ್ತಮಾನಕ್ಕೆ ತರುವ, ಕಲ್ಲು ಶಿಲೆಯಾಗುವ ಕಲೆಯ
ಕಂಡು ಮೆಚ್ಚುವ ತಾಳ್ಮೆ ಕಲಿಸುತ್ತದೆ.
ಗ್ರಹಿಸುವವರಿಗಿಲ್ಲಿ ಬಳಪದ ಕಲ್ಲು ಮೌನವ ಬರೆಯುತ್ತಾ, ತಿದ್ದಿಸುತ್ತಾ ಕಲಿಸುತ್ತಲೇ ಇದೆ
ಒಳಗೆಲ್ಲ ಕಪ್ಪುಕಲ್ಲಿನ ಮೇಲೆ ಚೆಲ್ಲುವ ಬೆಳಕಿನ ರಂಗೋಲಿ
ಕಪ್ಪು ಕನ್ನಡಿಗಳಂತೆ ನಿಂತ ನುಣುಪು ಕಂಬಗಳ ಕಟಿಯ ಚಕ್ರದಲ್ಲಿ ಕಾಲ ಸುತ್ತುತ್ತಲೇ ಇರುವ ಭ್ರಮೆ
ನವರಂಗ ಭುವನೇಶ್ವರಿಗಳ ನಡುವೆ ನಿಂತು ಕೇಶವನ ಮೋಹಕ್ಕೆ ವಶವಾದ ಉದ್ವೇಗಕ್ಕೆ ಅವನ ಕಲ್ಲಿನ ಕೊಳಲು ರಾಗವಾಗುವು ದಿಲ್ಲ
ಆದರೂ ಅವನ ಮೇಲಿನ ಅಮೂರ್ತ ವ್ಯಾಮೋಹವೇನೂ ಕಡಿಮೆಯಾಗುವುದಿಲ್ಲ ಹುಣ್ಣಿಮೆಯ ಬೆಳಕನ್ನು ಪ್ರಾಂಗಣ ಹೇಗೆ ಮಡಿಲು ತುಂಬಿಸಿಕೊಳ್ಳುತ್ತದೆಂದು ನೋಡಬೇಕು
ದೀಪಗಳ ಹೊನ್ನಬೆಳಕಲ್ಲಿ ದೇವಾಲಯ ಹೇಗೆ ಮಿನುಗುತ್ತದೆ?
ಧೂಪ-ಪುಷ್ಪ-ಚಂದನದ ಗಂಧಕ್ಕೆ ಒಳಗಿನ ಗಾಳಿ ಮತ್ತೆಂದು ಮತ್ತೇರುತ್ತದೆ?
ಹಳೆಯದರ ಹಂಬಲವೇ ಇಲ್ಲದೆ, ನಾಳೆಯೆಂಬ ಕಲ್ಪನೆಯೇ ಇಲ್ಲದೆ
ವರ್ತಮಾನದ ನಿರಂತರತೆಯಲ್ಲಿ ನಿಲ್ಲುವ ಈ ಗಾಂಭೀರ್ಯದ ಮುಂದೆ
ಶಾಂತವಾಗಿ, ಮೂಕವಾಗಿ ನಿಂತ ಘಳಿಗೆಗಳೇ ಪ್ರಾರ್ಥನೆ
ಬೇಂದ್ರೆ ಅಜ್ಜ
ಬೇಂದ್ರೆ ಅಜ್ಜ
ಒಮ್ಮೊಮ್ಮೆ ಬರೆಯುವುದ ನಿಲ್ಲಿಸಿಬಿಡಬೇಕೆನಿಸುತ್ತದೆ
ಎಲ್ಲದರ ನಿರರ್ಥಕತೆ ಉದಾಸ ಮುಖ ಧರಿಸಿ ವಿಷಾದದ ನಗೆ ಬೀರುತ್ತಾ ಎದುರು ನಿಲ್ಲುತ್ತದೆ
ಕಷ್ಟಗಳ ಮೆಟ್ಟಿ ನಿಂತಾಗ ಹೆಮ್ಮೆಯಿಲ್ಲದೇ, ಪುಟ್ಟ ಗೆಲುವುಗಳ ಸಂಭ್ರಮಿಸದೇ
ಮಧ್ಯದಲ್ಲೆಲ್ಲೋ ತಟಸ್ಥ ನಿಂತಾಗ, ಬೇಂದ್ರೆ ಅಜ್ಜ
ಬರೆಯುವುದ ನಿಲ್ಲಿಸಿಬಿಡಬೇಕೆನಿಸುತ್ತದೆ
ಕವಿತೆಯಲ್ಲೂ ಸುಳ್ಳನಾಡುವ ಕವಿಗಳ ಮಧ್ಯೆೆ ಮಾರ್ಗದರ್ಶನವಿಲ್ಲದೆ
ದಿಕ್ಕುಗೆಟ್ಟು ನಿಂತಾಗ, ಬೇಂದ್ರೆ ಅಜ್ಜ
ನಿನ್ನ ನೆನಪೇಕೋ ತೀಕ್ಷ್ಣವಾಗಿಬಿಡುತ್ತದೆ
ನಿರ್ಲಿಪ್ತಿ ಗಡಿ ಎಡವಿ ತಾತ್ಸಾರಕ್ಕೆ ಜಿಗಿಯುವ ಮನಸ್ಸನ್ನು ಸಂತೈಸುವುದು ಕಷ್ಟವಾಗುತ್ತದೆ
ಬಾಡಿ ನಿಂತ ಬುದ್ಧಿ ಮತ್ತೆ ಮತ್ತೆ ಬದುಕಿಗೆ ತೆರೆದುಕೊಳ್ಳುವಾಗ ಏಕೋ ಬಳಲುತ್ತದೆ ಆದರೂ, ಬೇಂದ್ರೆ ಅಜ್ಜ, ನಿನ್ನ ನೆನಪಾಗುತ್ತದೆನಲಿವಿಗಿಂತ ನೋವಿನಲ್ಲಿ ನಿನ್ನ ನೆನಪು ಗಾಢವಾಗುತ್ತದೆ ಆ ನೆನಪೇ ಬೆಳಕಾಗುತ್ತದೆ.
ನಿನ್ನ ಕಾವ್ಯದ ಲಯ – ತಾಳದ ಶಕ್ತಿ ಕೆಲಸಕ್ಕೆ ಬಾರದ ಮೌನ ಮುರಿದು ಮಾತನಾಡಿಸುತ್ತದೆ, ಆಡದ ಮಾತನೆಲ್ಲ ಆಲಿಸುತ್ತದೆನಿನ್ನ ಬದುಕಿಗೆ ಕನ್ನಡಿ ಹಿಡಿದು ಎಂದೂ ನೀನಲ್ಲದ ಬೇರೇನನ್ನೋ ಹುಸಿಯಾಡದ ನಿನ್ನ ಕಾವ್ಯ ಗುರುವಾಗುತ್ತದೆ ಅಪರೂಪ ವಾದರೂ ಜೊತೆಯುಳಿಯುತ್ತದೆ ನೊಂದೂ ನೊಂದೂ ನವಿರಾದ, ಮತ್ತೂ ಮಗುವಾದ ನಿನ್ನ ಮನಸ್ಸು ಸದ್ಯಕ್ಕೆ ಸಾಕು, ಬೇಂದ್ರೆ ಅಜ್ಜ ಬರೆಯುವುದ ನಿಲ್ಲಿಸಿಬಿಡಬೇಕೆನಿಸಿದಾಗ, ನೀ ಹೀಗೇ ನೆನಪಾಗುತ್ತಿರು ಜೊತೆಗಿರು ಅನುಭವ ಭಾವವಾಗುತ್ತಾ, ಭಾವ ಭಾಷೆಯ ಜೊತೆ ಬೆರೆಯುತ್ತಾ ಕವಿತೆಯಾಗಿಬಿಡುವ ಬೆರಗು ನೀನಾಗಿಬಿಡು ಬಾಲ್ಯದ ಹಳ್ಳಿ ಈಗ ಕಂಡದ್ದು ಮೋಡದೊಳಗಿನ ತೇವ ಮೋಡವೆಲ್ಲಾ ಮಳೆಯಾಗಿಬಿಡುವ ತೇವ ಧಗೆಯಲ್ಲಿ ದಣಿದ ಧರಿತ್ರಿ ಮೊದಲ ಮಳೆಗೆ ಸೂಸುವ ಮೃದ್ಗಂಧದ ತೇವಊರ ಹೊರಗಿನ ತಾವರೆ ಸರಸ್ಸಿನಲ್ಲಿ ಕಿರಿದಲೆಗಳು ಮೂಡಿ ಮರೆಯಾಗುವ ತೇವ ಹಳದಿ ಕರವೀರದೊಳಗೆ ಅಡಗಿ ಕೂತ ಇಬ್ಬನಿಯ ತೇವ
ಮನೆಯ ಮುಂದಿನ ರಂಗೋಲಿ ಜಿನುಗು
ಮಳೆಯಲ್ಲಿ ತನ್ನ ಚುಕ್ಕಿಯ ಲೆಕ್ಕ ಮರೆತು
ಗಲಿಬಿಲಿಗೊಳ್ಳುವ ತೇವತೊಟ್ಟಿಮನೆಯ ಹೆಬ್ಬಾಗಿಲು ಮುದ್ದಾಗಿಕೊಬ್ಬಿಿಕೊಳ್ಳುವ ತೇವಗವಾಕ್ಷ – ಕಟಾಂಜನಗಳಲ್ಲಿ ಸಾಲಾಗಿ ನಿಂತಹನಿಗಳ ಹೊಳಪಿನ ತೇವನೆನೆದು ಒದ್ದೆಯಾಗಿ ಮುದುಡಿ ಮಲಗಿದಬೀದಿನಾಯಿಗಳ ಮೌನದ ತೇವಅವನ್ನೆಲ್ಲಾ ಹತ್ತಿರ ಕರೆದು ಅಕ್ಕರೆಯ ತುತ್ತುನೀಡುವ ಎದುರುಮನೆಯ ಶಿವಮುದ್ದಿಯ ಮಮತೆಯ ಕಂಗಳ ಕಾಂತಿಯ ತೇವಇಪ್ಪತ್ತಕ್ಕೇ ವೈಧವ್ಯ ಬಂದರೂ ಗಂಟಲಲ್ಲೇ ಹೆಪ್ಪುುಗಟ್ಟಲುಬಿಟ್ಟ ಅವಳ ಕಾಣದ ಅಳುವಿನ ತೇವಆ ದಿನ ಏನೂ ಅರಿಯದೇ ಅವಳ ಮಡಿಲಲ್ಲಿ ಮಲಗಿದ್ದ ಕಂದನ ಮುಗ್ಧನಗುವಿನ ತೇವಹಳ್ಳಿಯ ಗಂಧಗಳ ತೇವ, ಬಣ್ಣಗಳೂ ತೇವಅಲ್ಲಲ್ಲೇ ಬಿಟ್ಟುಬಂದ ಅಷ್ಟಷ್ಟು ಬಾಲ್ಯದ ನೆನಪುಗಳ ತೇವಮೆಲುಕು ಹಾಕುತ್ತಾ ನಡೆವಾಗ ಪಕ್ಕವೇ ಹೇಳದೇ ಇದ್ದದ್ದೂ ಕೇಳಿಸಿದಂತೆ ಮೌನದಿಹೆಜ್ಜೆ ಹಾಕುವ ಗೆಳೆಯನ ಕಿರುನಗೆಯ ತುಂಟತನದ ತೇವನಸುಕಿನಲ್ಲಿ ಎದ್ದ ತಕ್ಷಣ ಪಕ್ಕದಲ್ಲೇ ಮಗುವಿನಂತೆ ಮಲಗಿದ, ಮುದ್ದಿಗೆ ಕರೆವ ಅವನಜೊಲ್ಲುಗೆನ್ನೆಯ ತೇವಸಂಸಾರದಿಂದ ತಾನಂತೂ ಮುಕ್ತವಾದಂತೆ ನಿಂತ ಖಾಲಿಮನೆಯ ನೀರವದ ನಿರ್ವಿಕಾರ ತೇವಅಂಗಳದ ತೊಟ್ಟಿಯಲ್ಲಿ ತುಂಬಿ ತುಳುಕುವ ಮೌನದ ಅನಂತತೆಯ ತೇವಅಗಲಿಕೆಯ ನೋವಿನ ತೇವಹೊಸ ಗಮ್ಯಗಳೆಡೆಗೆ ಕರೆದೊಯ್ಯುವ ಕನಸುಗಳ ಬೆಳಕಿನ ತೇವಮೋಡದೊಳಗಿನ ತೇವಮೋಡವೆಲ್ಲಾ ಮಳೆಯಾಗಿಬಿಡುವ ತೇವನೃತ್ಯಗಾರ್ತಿಯರಿಗೆ ನಮನನಿನ್ನ ಬೆರಳತುದಿಗಳ ಕೆಂಬಣ್ಣದಲ್ಲಿಕಾಲಭೈರವನ ರೌದ್ರ, ಪಾರ್ವತಿಯ ಲಾಸ್ಯ-ಲಜ್ಜೆನಕ್ಷತ್ರಗಳಿಗೆ ದನಿಯಿದ್ದರದು ನೀ ತೊಟ್ಟು ನುಡಿಸುವ ನೂಪುರನಾದದಲ್ಲಿನಾದಧಾರಿಣಿ,ಲಯ – ತಾಳ – ಗತಿಗಳು ನಿನ್ನ ಪಾದದಲ್ಲಿಅರೆ ಕ್ಷಣದಲ್ಲಿ ಭುವಿಯ ಮೆಟ್ಟಿ ಜಿಗಿದುಮರುಕ್ಷಣದ ಹಗುರಾದ ಹೆಜ್ಜೆಯ ಅವನೀಚುಂಬನದಲ್ಲಿಭಾವರೂಪಿಣಿ, ಭಾವಮಹಾನಿಧಿ,ಸಮಯವನೇ ಹಿಡಿದು ನಿಲ್ಲಿಸುವನಿನ್ನ ಸ್ನಿಗ್ಧಸುಂದರ ಕಣ್ಣಹೊರಳಿನಲ್ಲಿ, ಅವು ಸೂಸುವ ಶೃಂಗಾರದಲ್ಲಿಅದೇ ನಯನಗಳು ನುಡಿಯುವ ಅದ್ಭುತದಲ್ಲಿ, ಉಲಿಯುವ ಶಾಂತದಲ್ಲಿಕಮಲಗಳರಳುತ್ತವೆ – ಪದ್ಮದೆಸಳುಗಳು ನಿನ್ನ ನೀಳ ಬೆರಳುಗಳುಹಂಸ – ಮಯೂರ – ಗರುಡ – ಮತ್ಸ್ಯ- ಕೂರ್ಮ ತ್ರಿಶೂಲ – ಪತಾಕಗಳೆಲ್ಲ ಮುದ್ರೆಗಳಲ್ಲಿನಿನ್ನೆಲ್ಲ ಭಂಗಿಗಳಲ್ಲಿ ಅವುಗಳ ಲಾಲಿತ್ಯ- ರಮ್ಯತೆಗಳಲ್ಲಿಅನಂತ ಲೋಕಾಂಕುರನಿಲುವಿನ ನವಿರು ರೂಪಾಂತರದಲ್ಲೇ ಸ್ತ್ರೀ – ಪುರುಷ – ರಕ್ಕಸರಾಗಿಸೃಷ್ಟಿ – ಸ್ಥಿತಿ – ಸಂಹಾರಗಳ ಅಧಿದೇವತೆಗಳಾಗಿಸೃಷ್ಟಿಸಮಷ್ಟಿರಸಸೌಂದರ್ಯವೆಲ್ಲ ಚಲಿಸುವ ಬಿಂದುವಾಗಿ, ನೀನಾಗಿ,ನೃತ್ಯನಾದದೆ ಮೈಮರೆತುಭಾವಸಮಾಧಿ ಸೃಷ್ಟಿಸುವ ಮಾಯೆ,ನಿನಗಿದೋ ಪದಪುಂಜಪ್ರಣಾಮ