ಬ್ರಾಹ್ಮಣ ಮಠಾಧೀಶರುಗಳಿಗೆ ವಿಪ್ರ ಸಮಾಜದಲ್ಲಿ ಒಗ್ಗಟ್ಟು ಬೇಡವೇ ?
ಅಭಿವ್ಯಕ್ತಿ
ಉಮಾ ಮಹೇಶ ವೈದ್ಯ
ಈ ದೇಶದಲ್ಲಿ ಯಾವುದೇ ಸಮಾಜದವರು ಯಾವುದೇ ಆತಂಕವಿಲ್ಲದೇ ಹೀಯಾಳಿಸುವ ರೀತಿಯಲ್ಲಿ ಇನ್ನೊಂದಾವುದೇ ಸಮಾಜ ವನ್ನು ಅವಮಾನಿಸಿ, ತಮ್ಮ ಕೃತ್ಯಗಳನ್ನು ಜೀರ್ಣಿಸಿಕೊಳ್ಳಬೇಕೆಂದರೆ, ಅವರ ಪ್ರಥಮ ಆದ್ಯತೆ ಈ ಬ್ರಾಹ್ಮಣ ಸಮಾಜ.
ಸಾರ್ವಜನಿಕ ಸಮಾರಂಭಗಳಲ್ಲಿ, ವಿಧಾನ ಸಭೆಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬ್ರಾಹ್ಮಣರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಅನೇಕ ವಿಷಯಗಳು ಚರ್ಚೆಯಾಗಿ, ವಿಪ್ರರಿಗೆ ನಮ್ಮ ನೆರವಿಗೆ ಯಾರೂ ಇಲ್ಲವೇ? ಎಂಬ ಅನಾಥ ಪ್ರಜ್ಞೆ ಉಂಟು ಮಾಡುವುದರಲ್ಲಿ, ಬ್ರಾಹ್ಮಣ ಮಠಾಽಶರುಗಳ ಪಾತ್ರ ದೊಡ್ಡದು ಎಂದರೆ ಅತಿಶಯೋಕ್ತಿಯೇನಲ್ಲ.
ಇದಕ್ಕೆ ಒಂದು ಉದಾಹರಣೆಯೆಂದರೆ, ನಮ್ಮ ರಾಜ್ಯದ ಒಂದು ಸಮಾಜದ ಕುರಿತಂತೆ ಒಬ್ಬ ರಾಜಕಾರಣಿ ಅವಮಾನವಾಗುವ ರೀತಿಯಲ್ಲಿ ತುಂಬಿದ ಸಭೆಯಲ್ಲಿ ಮಾತನಾಡಿದಾಗ, ಆ ರಾಜಕಾರಣಿಯ ಮಾತುಗಳನ್ನು ಖಂಡಿಸಿ, ಸಮಾಜದ ಎಲ್ಲ ಸದಸ್ಯರಲ್ಲಿ ಒಗ್ಗಟ್ಟನ್ನುಂಟು ಮಾಡಿ ಆ ರಾಜಕಾರಣಿಯ ವಿರುದ್ಧ ಸ್ವತಃ ಮಠಾಧೀಶರು ಹೋರಾಟಕ್ಕಿಳಿದಾಗ ತಬ್ಬಿಬ್ಬಾದ ಆ ರಾಜಕಾರಣಿ ಬೇಷರತ್ತು ಕ್ಷಮೆ ಕೇಳಿ, ಇನ್ನೆಂದೂ ಸಮಾಜದ ವಿರುದ್ಧ ಮಾತನಾಡುವುದಿಲ್ಲವೆಂದು ಹೇಳಿ ಪರಿಹಾರ ಧನ ನೀಡಿದ್ದು ಕಂಡಿ ದ್ದೇವೆ.
ಇದೇ ಸನ್ನಿವೇಶವನ್ನು ಬ್ರಾಹ್ಮಣ ಸಮಾಜದ ಬಗ್ಗೆ ಹೋಲಿಸಿದಾಗ, ಚಿತ್ರಣ ಸಂಪೂರ್ಣ ಭಿನ್ನ. ಈ ರಾಜಕಾರಣಿ ಮಠಾಧೀಶರು ಗಳ ಸಮಕ್ಷಮವೇ ಬ್ರಾಹ್ಮಣರನ್ನು ಹೀಯಾಳಿಸಿದರೆ, ಲ ಕಾಲ ಅಲ್ಲಿಯೇ ಗೊಂದಲದ ವಾತಾವರಣವುಂಟಾಗಿ ನಂತರ ಯಾವುದೇ ಖಂಡನೆ, ಪ್ರತಿರೋಧ ಉಂಟಾಗದೇ ಅಲ್ಲಿಯೇ ತಣ್ಣಗಾಗುಗುತ್ತದೆ.
ಇತ್ತೀಚಿಗೆ ಇನ್ನೊಂದು ಸಮಾಜದ ಸ್ವಾಮಿಗಳು “ದೇಶ ಹಾಳಾಗಿದ್ದು ಮಾಂಸ ತಿಂದವರಿಂದಲ್ಲ, ತುಪ್ಪ ತಿಂದವರಿಂದ” ಎಂದು ಬ್ರಾಹ್ಮಣ ಸಮಾಜವನ್ನು ಅವಹೇಳನ ಮಾಡಿದಾಗ ಕೆಲ ಯುವ ವಿಪ್ರ ನ್ಯಾಯವಾದಿಗಳು ಹೋಗಿ ಮುಖಂಡರುಗಳಿಗೆ ಹಾಗೂ ಮಠಾಧೀಶರುಗಳಿಗೆ ಬೇಷರತ್ತು ಕ್ಷಮೆ ಕೇಳುವಂತೆ ಒತ್ತಾಯಿಸಲು ಹೋರಾಟ ಮಾಡೋ ಣವೆಂದರೆ, ಆ ಯುವಕರ ಮನೋ ಸ್ಥೈರ್ಯವನ್ನು ಉಡುಗಿಸುವಂತೆ, ಹೋರಾಟದ ಮನೋಭಾವವನ್ನು ಹತ್ತಿಕ್ಕುವ ಮಾತುಗಳು ಕೇಳಿ ಬರುತ್ತವೆಯೇ ಹೊರತು ಆರಾಜಕಾರಣಿಯ ವಿರುದ್ಧ ಯಾವುದೇ ಹೋರಾಟದ ಕಿಚ್ಚು ಕಾಣುವುದೇ ಇಲ್ಲ.
“ಹೋಗ್ಲಿ ಬಿಡಿ, ಆ ದೇವರೇ ನೋಡಿಕೊಳ್ಳುತ್ತಾನೆ” ಎನ್ನುವ ಮಠಾಧೀಶರುಗಳಿಗೆ, ಸಮಾಜವಿದ್ದರೆ ತಾವು ಎನ್ನುವ ಕಟು ಸತ್ಯ ಅರ್ಥವಾಗುತ್ತಿಲ್ಲವೆಂಬುದೇ ಅಚ್ಚರಿಯ ವಿಷಯ. ಇತರೇ ಸಮಾಜದ ಮಠಾಧೀಶರು ಸಮಾಜದಲ್ಲಿನ, ಮತ ಭಿನ್ನಾಭಿಪ್ರಾಯ ಗಳನ್ನು, ಓರೆ ಕೋರೆಗಳನ್ನು ಬದಿಗಿಟ್ಟು, ಸಮಾಜದ ಮೇಲಾಗುತ್ತಿರುವ ದೌರ್ಜನ್ಯಗಳನ್ನು, ಬಾಹ್ಯ ಪ್ರಹಾರವನ್ನು ಎದುರಿಸಲು ಎಲ್ಲರನ್ನೂ ಈ ಏಕತೆಯಡಿಯಲ್ಲಿ ತಂದು ಒಂದು ಜನ ಶಕ್ತಿಯನ್ನಾಗಿ ಮಾರ್ಪಡಿಸಿ ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಗಟ್ಟಿಯಾದ ನೆಲೆಗಟ್ಟನ್ನು ರೂಪಿಸಿಕೊಟ್ಟ ಈ ಮಠಾಧೀಶರುಗಳನ್ನು ನೋಡಿ ವಿಪ್ರ ಸಮಾಜದ ಬಾಂಧವರು ತಮ್ಮ ಮೌನದಲ್ಲಿಯೂ ಹೇಳಿಕೊಳ್ಳಲಾಗದ ಬೇಗುದಿಯೆ ಅಭಿಪ್ರಾಯವೇ “ ನಮ್ಮ ಮಠಾಧೀಶರುಗಳಿಗೆ ಬ್ರಾಹ್ಮಣರಲ್ಲಿ ಒಗ್ಗಟ್ಟನ್ನುಂಟುಮಾಡುವುದು ಬೇಕಿಲ್ಲವೇ?” ಎನ್ನುವುದು.
ಸಮಾಜದಲ್ಲಿ, ಸದಸ್ಯರ ನಡುವೆ ಸೌಹಾರ್ದಯುತ ಸಹ ಜೀವನ, ಧಾರ್ಮಿಕ ಆಚರಣೆಗಳ ಜೊತೆ, ಪರಸ್ಪರ ಮತಾಚಾರ್ಯರ ಗೌರವಿಸುವಿಕೆ ನಮ್ಮ ಮಠಾಧೀಶರುಗಳು ಸಾರ್ವಜನಿಕರಿಗೆ ನಿರೂಪಿತವಾಗುವಂತೆ ನಡೆದುಕೊಳ್ಳುವುದರಿಂದ ಸಮಾಜದ ಜನರಲ್ಲಿ, ಮಠಾಽಶರಲ್ಲಿನ ಒಗ್ಗಟ್ಟು ಸಮುದಾಯದ ಬ್ರಾಹ್ಮಣರಲ್ಲಿ ಬಲಗೊಂಡು ಮತಗಳು ಭಿನ್ನವಿದ್ದರೂ ನಾವೆಲ್ಲ ಒಂದು ಎಂಬ ಭಾವ ಬಲಗೊಳ್ಳುತ್ತದೆ. ಆದರೆ ಈ ಆಶಯಕ್ಕೆ ಪೂರಕವಾಗಿ ಬ್ರಾಹಣ ಮಠಾಧೀಶರುಗಳು ನಡೆದುಕೊಳ್ಳುತ್ತಿದ್ದಾರೆಯೇ? ಖಂಡಿತವಾಗಿಯೂ ಇಲ್ಲ. ಇಂದಿನವೆರಗೂ ನಮ್ಮ ರಾಜ್ಯದ ವಿಪ್ರ ಮಠಾಧೀಶರುಗಳು ತಮ್ಮ ಮತಾಚಾರ್ಯರ ತತ್ವಗಳೇ ಇತರ ಮತಾಚಾರ್ಯರಿಗಿಂತ ಮಿಗಿಲು ಎಂದು ಈ ಇಪ್ಪತ್ತೊಂದನೇ ಶತಮಾನದಲ್ಲಿಯೂ ಸಹ “ದಿಗ್ವಿಜಯ”ವನ್ನು ಸಾಧಿಸುವ ಛಲದಲ್ಲಿದ್ದಾರೆಯೇ ಹೊರತು, ಸಮಾಜದ ಜನರಲ್ಲಿ ಏಕತೆಯನ್ನು ರೂಪಿಸಲು ಮತಗಳ ಬಗ್ಗೆ ಇರುವ ತಾರತಮ್ಯಗಳಿಗೆ ಕೊನೆ ಹಾಡಿ, ಯಾವುದೇ ಶ್ರಮ ವಹಿಸುತ್ತಿರುವುದು ಕಂಡು ಬರುತ್ತಿಲ್ಲವೆಂಬುದು ವಿಷಾದನೀಯ ವಿಷಯ.
ಸರಕಾರದ ನೀತಿಗಳಿಂದ ಜಮೀನು ಕಳೆದುಕೊಂಡ ಬ್ರಾಹಣರ ಪರವಾಗಿ ಹೋರಾಡಲು, ಯಾವುದೇ ಮಠಾಧೀಶರುಗಳು ಮುಂದಾಗದೇ ಇದ್ದುದರಿಂದ, ತಮ್ಮ ಜೀವನೋಪಾಯದ ಜಮೀನುಗಳನ್ನು ಕಳೆದುಕೊಂಡ ಎಷ್ಟೋ ಬ್ರಾಹಣ ಕುಟುಂಬಗಳು ಬಡತನದ ಬೇಗುದಿಯಲ್ಲಿ ಬೆಂದು ಹೋಗಿರುವ ಹಾಗೂ ನಿರ್ಗತಿಕ ಜೀವನವನ್ನು ಸಾವಿರಾರು ಬ್ರಾಹ್ಮಣ ಕುಟುಂಬಗಳು ಇಂದಿಗೂ ಸಹ ಪುರಾಣ ಕಾಲದಿಂದಲೂ ಜನಜನಿತವಾಗಿರುವ ಒಂದುವಾಕ್ಯದಂತೆ “ಒಂದು ಊರಿನಲ್ಲಿ ಒಬ್ಬ ಬಡ ಬ್ರಾಹಣನಿದ್ದನು” ಎನ್ನುವುದನ್ನೇ ಪ್ರತ್ಯಕ್ಷವಾಗಿ ರೂಢಿಸಿಕೊಂಡು ಬದುಕುತ್ತಿದ್ದಾರೆ ಎಂಬುದು ಮಠಾಧೀಶರುಗಳಿಗೆ ಗೊತ್ತಿಲ್ಲವೆಂದಲ್ಲ.
ಮಠದ ಜಮೀನುಗಳೇ ಸರಕಾರದ ಪಾಲಾಗಿ, ಗುಡಿ ಗುಂಡಾರಗಳು ದತ್ತಿ ಇಲಾಖೆಗೆ ಒಳಪಟ್ಟು, ಟ್ರಸ್ಟಿಗಳ ಹಿಡಿತಕ್ಕೆ ದೇವಸ್ಥಾನ ಗಳು ಸಿಲುಕಿ ಪಾರುಪತ್ಯೆಗಾರರು ಪತ್ತೆಯಿಲ್ಲದಂತಾಗಿ, ಅರ್ಚಕರ ಬದುಕು ತತ್ವಾರವಾದಾಗಲೂ ಇದನ್ನಾವುದನ್ನೂ ಗಮನಿಸಿ ಪರಿಹರಿಸಲು ಮುಂದಾಗದ ಈ ಮಠಾಧೀಶರುಗಳು ಏನೂ ಆಗೇ ಇಲ್ಲವೆಂಬಂತೆ ತಮ್ಮ ದೈನಂದಿನ ಅನುಷ್ಠಾದಲ್ಲಿಯೇ ಮುಳುಗಿಹೋಗಿದ್ದಾರೆ ಎನ್ನುವ ಅಸಹಾಯಕ ಕೂಗು ಪದೇ ಪದೇ ಮಾರ್ದನಿಸುತ್ತಲಿದೆ.
ಇರುವ ಬೆರಳಣೆಕೆಯ ಕೆಲವೇ ಬ್ರಾಹ್ಮಣ ರಾಜಕಾರಣಿಗಳ ಮೇಲೆ ಮಠಾಧೀಶರದು ಯಾವುದೇ ಹಿಡಿತವನ್ನು ಹೊಂದಿಲ್ಲ ಹಾಗೂ ಹೊಂದಲು ಸಾಧ್ಯವಿಲ್ಲ. ಏಕೆಂದರೆ, ಕರ್ನಾಟಕ ರಾಜ್ಯದ ಆರು ಕೋಟಿ ಜನ ಸಂಖ್ಯೆಯಲ್ಲಿ ವಿಪ್ರ ಸಮಾಜದವರ ಜನಸಂಖ್ಯೆ ಕೇವಲ ಹಲವು ಲಕ್ಷಗಳಷ್ಟು. ಒಂದು ಪ್ರಭಾವಿ ಮತ ಬ್ಯಾಂಕ್ ಆಗದಷ್ಟು ಇರುವ ಜನರ ಮಾತನ್ನು ಯಾರು ಕೇಳಬೇಕು? ನೀವೇನಿದ್ದರೂ ಮಡಿ ಮೈಲಿಗೆ ಮಾಡಿ, ಗಂಟೆ ಬಾರಿಸಿ, ಅಳ್ಳಿಟ್ಟು ತಿಂದು, ಪುಳಿಚಾರು ಊಟ ಮಾಡಿ ಮಲಗಿದರೆ ಮುಗಿತು ಎನ್ನುವ ಇತರರ ಮಾತುಗಳನ್ನು ಕೇಳಿಕೊಂಡು ಮೌನವಾಗಿ ಸಹಿಸಿಕೊಂಡು ಜೀವನ ಮಾಡುವಂತಹ ಸ್ಥಿತಿಯನ್ನು ಬ್ರಾಹ್ಮಣರಿಗೆ ತಂದಿಟ್ಟವರು ಯಾರು? ಇದರಲ್ಲಿ ಧಾರ್ಮಿಕ ಮುಖಂಡರ ಪಾತ್ರ ನಿಜಕ್ಕೂ ದೊಡ್ಡದಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇಂಥಹ ಸನ್ನಿವೇಶದಲ್ಲಿ ಈ ರಾಜಕಾರಣಿಗಳಿಗೆ ಬ್ರಾಹ್ಮಣ ಮತಗಳಿಗಿಂತ ಇತರೇ ಧರ್ಮದ ಹಾಗೂ ಜಾತಿಯ ಮತಗಳೇ ಮುಖ್ಯ.ಇದನ್ನೇ ಇತ್ತೀಚೆಗೆ ವಾಲ್ಮಿಕಿ ಸಮಾಜ ಹಾಗೂ ಕುರುಬ ಸಮಾಜದ ಹೋರಾಟಗಳನ್ನು ಗಮನಿಸದಾಗ ನಮಗೆ ಸ್ಪಷ್ಟ ವ್ಯತ್ಯಾಸ ಕಾಣಬಹುದು. ಈ ಸಮಾಜಗಳ ಮಠಾಧೀಶರುಗಳು ಹೋರಾಟದ ಮುಂಚೂಣೆಯಲ್ಲಿ ನಿಂತು, ತಮ್ಮ ಸಮಾಜದವರಿಗೆ ಧೈರ್ಯ ತುಂಬುವುದರ ಜೊತೆ, ಜನ ಪ್ರತಿನಿಧಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಒಗ್ಗಟ್ಟುನುಂಟು ಮಾಡಿ ಅಗತ್ಯವಾಗಿ ರುವ ಬೇಡಿಕೆಗಳನ್ನು ಈಡೇರಿಸಿಕೊಳ್ಳುವತ್ತ ತಮ್ಮ ಸಾಮೂಹಿಕ ಪ್ರಯತ್ನ ಮಾಡುತ್ತಾರೆ.
ಆದರೆ, ಈ ರೀತಿಯ ಸಾಮೂಹಿಕ ಪ್ರಯತ್ನ ವಿಪ್ರ ಮಠಾಧೀಶರಲ್ಲಿ ಕಾಣುತ್ತಿಲ್ಲವೇಕೆ ? ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಕಂಡು ಕೊಳ್ಳಲು ಹೋದಾಗ, ಕಂಡು ಬಂದ ಕಟು ಸತ್ಯವೆಂದರೆ, ಮಠಾಧೀಶರುಗಳು ಬ್ರಾಹ್ಮಣ ಸಮಾಜದ ಉನ್ನತಿಗಿಂತ ತಮ್ಮ ಮತಾಚಾರ್ಯರ ತತ್ವಗಳಿಗೆ ಜೋತು ಬಿದ್ದು ಶ್ರೇಷ್ಠ-ಕನಿಷ್ಠ ತಾರತಮ್ಯಗಳ ಬೇಧಾಭಿಪ್ರಾಯಗಳಲ್ಲಿಯೇ ಕಚ್ಚಾಡುತ್ತಿರುವುದರ ಫಲ ಈ ಸಮಾಜ ಹರಿದು ಹಂಚಿ ಹೋಗಿದ್ದಕ್ಕೆ ಕಾರಣವೆಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ.
ಈ ಅದ್ವೈತ, ದ್ವೈತ ಹಾಗೂ ವಿಶಿಷ್ಠಾದ್ವೈತ ಮತ ಪ್ರವರ್ತಕರಾದ ಶ್ರೀ ಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರು ತಮ್ಮ ಮತಗಳಾಧಾರದ ಮೇಲೆ ಬ್ರಾಹ್ಮಣ ಸಮಾಜವನ್ನು ಒಡೆಯಿರಿ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಮಧ್ವ ತತ್ವಗಳ ಅನುಯಾಯಿಗಳು, ಅದ್ವೈತಿಗಳನ್ನು ಕಂಡರೆ, ಅಸೃಶ್ಯರಂತೆ ಕಾಣುವ, ಅದ್ವೈತಿಗಳು ದ್ವೈತಿಗಳನ್ನು ಕಂಡರೆ ಹರಿಹಾಯುವ ಈ ಪರಸ್ಪರ ಮತ ಪ್ರತಿಷ್ಠೆಗಳ ಹೊಡೆದಾಟವನ್ನು, ನೋಡಿಯೂ ಸಹ ಸಾಮರಸ್ಯ ತಾರದೇ ಗೊಂದಲ ಗಳಿಗೆ ಉತ್ತರಗಳನ್ನೂ ಕಂಡುಕೊಳ್ಳಲೂ ಪ್ರಯತ್ನ ಮಾಡುತ್ತಿಲ್ಲವೇಕೆ? ಯಾವುದೇ ಪ್ರಶ್ನೆಗಳಿಗೆ ಉತ್ತರ ಕೊಡದ ಒಂದೇ ವೇದಿಕೆಯಲ್ಲಿ ಇತರ ಮತಾನುಯಾಯಿ ವಿಪ್ರ ಸ್ವಾಮಿಜಿಗಳೊಂದಿಗೆ ಸಮಾನವಾಗಿ ಕೂಡಲು ಹಿಂದು ಮುಂದೆ ನೋಡುವ ಸಂಕುಚಿತ ಮನೋಸ್ಥಿತಿಯ ಮಠಾಽಶರುಗಳಿಂದ ಹೇಗೆ ಸಮಾಜದಲ್ಲಿ ಒಗ್ಗಟು ಮೂಡಲು ಸಾಧ್ಯ?.
ಈ ವಿಚಾರವನ್ನು ಹಿರಿಯ ವಿದ್ವಾಂಸರ ಜೊತೆ ಚರ್ಚೆ ಮಾಡುತ್ತಿರುವಾಗ ಕಂಡು ಬಂದ ಸೋಜಿಗದ ಸಂಗತಿಯೆಂದರೆ, ಈ ರಾಜಕೀಯ ಧುರೀಣರ ಸುತ್ತ ಮುತ್ತ ಅವರದೇ ಪಟಾಲಂ ಇರುವಂತೆ, ಮಠಾಧೀಶರುಗಳ ಸುತ್ತಮುತ್ತ ಪೂರ್ವಾಶ್ರಮದ ನೆಂಟರೇ ತುಂಬಿಕೊಂಡಿದ್ದಾರೆ. ಮಠಗಳ ಆಡಳಿತಾಧಿಕಾರಿ, ದಿವಾನ ಇತ್ಯಾದಿಗಳೆಲ್ಲ, ಸ್ವಾಮಿಜಿಗಳ ಸಂಬಂಧಿಕರೇ.
ಇದರರ್ಥ ಮಠದ ಸ್ವಾಮಿಜಿಗಳನ್ನು ತಮ್ಮ ಪ್ರಭಾವ ವಲಯದಿಂದ ಹೊರಗೆ ಬರದಂತೆ ನೋಡಿಕೊಂಡು, ಸದಾ ಕಿವಿ ಕಚ್ಚುತ್ತ, ಮತಗಳ ನಡುವೆ ಭಿನ್ನಾಭಿಪ್ರಾಯ ಸದಾ ಇರುವಂತೆ ನೋಡಿಕೊಳ್ಳುವದೇ ಇವರ ಕೆಲಸ. ಇದಕ್ಕೆ ಉದಾಹರಣೆಯಾಗಿ, ಆನೆಗೊಂದಿಯ ನವ ವೃಂದಾವನದ ಪ್ರಕರಣ, ಎಂದು ಹೇಳುತ್ತಾ ಉತ್ತರಾದಿ ಮಠಕ್ಕೂ, ಮಂತ್ರಾಲಯದ ರಾಯರ ಮಠಕ್ಕೂ ಈ ನವ ವೃಂದಾವನಗಳ ಸಮಾರಾಧನೆ , ಪೂಜೆ ಕೈಂಕರ್ಯಗಳು ವ್ಯಾಜ್ಯ ರೂಪ ಪಡದು ಹಲುವಾರು ದಶಕಗಳವರೆಗೆನ್ಯಾಯಾಲಯಗಳಲ್ಲಿ ಹೋರಾಟಕ್ಕೆ ಕಾರಣವಾಗಿದ್ದು ಮಠಾಧೀಶರುಗಳ ಸುತ್ತ ಮುತ್ತಲಿನ ಈ ಸಂಕುಚಿತ ಮನೋಧೀಭಾವದ ಖಾಸಗಿ ಭಕ್ತರು.
ಈ ವ್ಯಾಜ್ಯದಿಂದ ಈ ಎರಡೂ ಮಠಗಳ ಸ್ವಾಮಿಗಳು ಒಂದೇ ವೇದಕೆಯನ್ನು ಎಲ್ಲಿಯೂ ಹಂಚಿಕೊಳ್ಳಲಾಗಲಿಲ್ಲ, ಭಕ್ತರ ನಡುವೆ ಉಂಟಾದ ಭಿನ್ನಾಭಿಪ್ರಾಯ, ಗೊಂದಲಗಳನ್ನು ನಿವಾರಿಸಲು ಇಂದಿಗೂ ಉಭಯ ಸ್ವಾಮೀಜಿಗಳು ಪ್ರಯತ್ನ ಮಾಡಲಿಲ್ಲ. ಇದರಪರಿಣಾಮವಾಗಿಯೇ ನ್ಯಾಯಾಲಯದ ಆದೇಶದಂತೆ ಈಗ ಸರತಿ ಪ್ರಕಾರ ಸಮಾರಾಧನೆ, ಪೂಜೆ ಪುನಸ್ಕಾರಗಳನ್ನು ಮಾಡುವ ಅನಿವಾರ್ಯತೆ ಉಂಟಾಗಿದೆ. ಈ ಕಾರಣದಿಂದ ಮಠಗಳು, ಸ್ವಾಮಿಗಳ ನಡುವೆ ಇರದ ಒಗ್ಗಟ್ಟು ಹೇಗೆ ಇವರಿಂದ ಭಕ್ತರಲ್ಲಿ ಹಾಗೂ ಸಮಾಜದಲ್ಲಿ ಕಾಣಬಹುದು?” ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಇಂದಿಗೂ ಮೌನವಹಿಸಿರುವುದೇ ವಿಪ್ರ ಸಮಾಜ ದಲ್ಲಿನ ವಿಪರ್ಯಾಸ.
ಸನಾತನ ಕಾಲದಿಂದಲೂ ಕಂಡು ಬರುವ ಚಿತ್ರಣವೆಂದರೆ, ವಿಪ್ರ ಸ್ವಾಮಿಜಿಗಳು, ಧರ್ಮ ರಕ್ಷಣೆಗೆ ಅರ್ಹರಿಂದ ಸಾಮ್ರಾಜ್ಯವನ್ನು ಸ್ಥಾಪಿಸಿ ಸಮಸ್ತ ದೇಶದಲ್ಲಿ ಏಕತೆ ಹಾಗು ಅಖಂಡತೆಯನ್ನು ರಕ್ಷಿಸುವುದು. ಈ ಕಾರ್ಯವನ್ನು ಮಠಾಧೀಶನಲ್ಲದ ಚಾಣಿಕ್ಯನಿಂದ ಹಿಡಿದು ಮಠಾಧೀಶರಾಗಿದ್ದ ವಿದ್ಯಾರಣ್ಯರಿಂದ ಈ ಸಮಾಜದ ಕಟ್ಟುವಿಕೆ ಹಾಗು ಧರ್ಮವನ್ನು ಕಾಪಾಡುವಿಕೆಯನ್ನು ಕಾಣಬಹುದು.
ಆದರೆ, ಇಂದಿನ ಮಠಾಧೀಶರುಗಳಿಂದ ಸಾಮ್ರಾಜ್ಯವನ್ನು ಕಟ್ಟುವುದನ್ನು ಬಿಡಿ ಇರುವ ಸಣ್ಣ ಸಮಾಜದ ಒಡಕುಗಳನ್ನುನಿವಾರಿಸಿ ಒಗ್ಗಟ್ಟನ್ನು ಸ್ಥಾಪಿಸುವ ಶಕ್ತಿಯನ್ನು ಹೊಂದದೇ ಇರುವುದು ಅವರ ಧಾರ್ಮಿಕ ಮುಂದಾಳುತನವನ್ನು ಪ್ರಶ್ನಿಸುವ ಸಂಗತಿಯಾಗಿದೆ. ಹಿಂದೂ ಧರ್ಮದಿಂದ ವಿಶೇಷವಾಗಿ ಬ್ರಾಹ್ಮಣ ಸಮಾಜದ ಕನ್ಯೆಯರು ಇತರೇ ಧರ್ಮದ ಹುಡುಗರನ್ನು ಮದುವೆ ಯಾದಾಗ, ಮೌನವಾಗಿರುವ ಇವರು, ಅದೇ ಬ್ರಾಹ್ಮಣ ಸಮಾಜದ ಹುಡುಗನೊಬ್ಬ ಬೇರೆ ಜಾತಿಯ ಅಥವಾಧರ್ಮದ ಹುಡುಗಿಯನ್ನು ಮದುವೆಯಾಗಿ ಬಂದರೆ, ಏನೋ ಅಧರ್ಮ ಮಾಡಿದರಂತೆ ವರ್ತಿಸಿ, ಇಬ್ಬರಿಗೂ ಮುದ್ರೆ ಹಾಕದೇ ಬಹಿಷ್ಕರಿಸಿದಂತೆ ವರ್ತಿಸುವ ಸ್ವಾಮಿಗಳಿಂದ ಸಮಾಜದಲ್ಲಿ ಹೇಗೆ ಒಗ್ಗಟ್ಟನ್ನು ನಿರೀಕ್ಷಿಸಲು ಸಾಧ್ಯ? ಇದನ್ನು ಬಿಡಿ, ಬೇರೆ ಧರ್ಮದ ಹುಡುಗನನ್ನು ಮದುವೆಯಾಗಿ, ಅಲ್ಲಿ ದುರಂತ ದಿನಗಳನ್ನು ಕಂಡು ಪುನಃ ಹಿಂದೂ ಧರ್ಮಕ್ಕೆ ಮರಳಿ ಬರಲು ಸಿದ್ಧಳಿರುವ ಆ ಹೆಣ್ಣುಮಗಳಿಗೆ ಸಮಾಧಾನ, ಸಾಂತ್ವನದ ನುಡಿಗಳನ್ನಾಡದೇ ಒಳಗೆ ಪ್ರವೇಶಿಸುವ ಬಾಗಿಲನ್ನೇ ಮುಚ್ಚಿದರೆ ಹೇಗೆ?ಮಠಾಧೀಶರಾಗಿದ್ದ ಸ್ವಾಮಿಗಳು ಸನ್ಯಾಸವನ್ನು ತೊರೆದು ಗೃಹಸ್ಥರಾಗಿ ಸಂಸಾರ ನಡೆಸುವುದನ್ನು ನಾವೆಲ್ಲ ನೋಡುತ್ತಿದ್ದೇವೆ.
ಸನ್ಯಾಸಾಶ್ರಮವನ್ನು ಸ್ವೀಕರಿಸುವ ಮೊದಲು ಆ ವ್ಯಕ್ತಿ ತನ್ನ ಶ್ರಾದ್ಧವನ್ನು ತಾನೇ ಮಾಡಿಕೊಂಡು ತರ್ಪಣವನ್ನು ಬಿಡುತ್ತಾನೆ. ಇದರರ್ಥ, ಉಳಿದ ಆಶ್ರಮಗಳಿಗೆ ಸಂಬಂಧಿಸಿದಂತೆ ಆ ವ್ಯಕ್ತಿ ಮೃತನಾದ (ಸಿವಿಲ್ ಡೆತ್) ಎಂದು. ಇಂತಹ ಮೃತ ವ್ಯಕ್ತಿ ಹೇಗೆ ಮತ್ತೊಮ್ಮೆ ಗೃಹಸ್ಥಾಶ್ರಮಕ್ಕೆ ಹೇಗೆ ಮರಳ ಬಲ್ಲನೋ ಅದೇ ರೀತಿಯಲ್ಲಿ ಇನ್ನೊಂದು ಧರ್ಮದವರು ಅಥವಾ ಸಮಾಜದವರು ಬ್ರಾಹ್ಮಣ ಸಂಕುಲದೊಳು ಬರಬಹುದಲ್ಲವೇ? ಎಂಬ ಪ್ರಶ್ನೆಗೆ ಉತ್ತರ ನೀಡದ ಸ್ವಾಮಿಜಿಗಳು ಮತ ಭಿನ್ನಾಭಿಪ್ರಾಯಗಳಲ್ಲಿ ತಮ್ಮ ಭಕ್ತರನ್ನು ಹಾಗೂ ಸಮಾಜವನ್ನು ಬಲಿಕೊಡುತ್ತಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲ.
ನಮ್ಮ ಧರ್ಮದಿಂದ , ಸಮಾಜದಿಂದ ಸಮಾಧಾನ, ತೃಪ್ತಿ ದೊರೆಯದಿದ್ದರೆ ಅವರಿಗೆ ಮತ್ತೊಂದು ಧರ್ಮ ಅಥವಾ ಸಮಾಜಕ್ಕೆ ಹೊರಳಿದರೆ ಯಾವುದೇ ತಪ್ಪಿಲ್ಲ ಎಂದು ಇತ್ತೀಚೆಗೆ ಹೆಸರಾಂತ ವಿಪ್ರ ಸ್ವಾಮಿಜಿಗಳೊಬ್ಬರು ನುಡಿದಾಗ, ಮನಸಿಗನ್ನಿಸಿದ್ದು, ಈಗಾಗಲೇ ಊರಿಗೆ ಹೆಚ್ಚೆಂದರೆ ಇರುವ ಹತ್ತು ಬ್ರಾಹ್ಮಣ ಮನೆಗಳು ಭವಿಷ್ಯದಲ್ಲಿ ಮತ್ತಷ್ಟು ಕಡಿಮೆಯಾಗುವುದರಲ್ಲಿ ಸಂಶಯವಿಲ್ಲ.
ಪಾದ ಪೂಜೆಗೆ, ಗುಡಿ ಗೋಪರಗಳನ್ನು ಕಟ್ಟಲು, ಸಮಾರಾಧನೆಗಳನ್ನು, ಉತ್ಸವಗಳನ್ನು ನಡೆಸಲು ಈ ಕುಟುಂಬಗಳ ದೇಣಿಗೆ ಬಯಸುವ ಧಾರ್ಮಿಕ ಮುಖಂಡರುಗಳು ಈ ಸಮಾಜವನ್ನು ಗಟ್ಟಿಯಾಗಿ ಕಟ್ಟಲು, ವಿಸ್ತರಿಸಲು ಯಾಕೆ ಪ್ರಯತ್ನಿಸುತ್ತಿಲ್ಲ? ಒಂದು ಸಲ ಯಾವುದೇ ಮಠದ ಸ್ವಾಮಿಗಳಾದರೆ ಸಾಕು, ರಾತ್ರೋ ರಾತ್ರಿ ಲಾಟರಿ ಹೊಡೆದಂತೆ. ಓಡಾಡಲು ಐಶಾರಾಮಿ ವಾಹನಗಳು, ಬೇಕು ಬೇಡಿಕೆಗಳನ್ನು ನೋಡಿಕೊಳ್ಳಲು ಸಿಬ್ಬಂದಿ , ಟೊಂಕ ಬಗ್ಗಿಸಿ ಸೇವೆ ನಿಲ್ಲುವ ಭಕ್ತ ಗಣ, ಇತ್ಯಾದಿಗಳು ಸಾಯುವವರೆಗೂ ದೊರೆಯುವಾಗ ಸಮಾಜ ತಗೆದುಕೊಂಡು ನಾವೇನು ಮಾಡೋಣ? ಎನ್ನುವ ಮನೋಭಾವವೇ ಇಂದಿಗೂ ಸಮಾಜದಲ್ಲಿ ಒಡಕು ಮುಂದುವರೆಯಲು ಕಾರಣವಾಗಿದೆಯೇ? ಬ್ರಾಹ್ಮಣ ಸಮಾಜ ಯಾಕೆ ಇತರ ಸಮಾಜ ಹಾಗೂ ಧರ್ಮ ದಂತೆ ವಿಸ್ತಾರವಾಗಲಿಲ್ಲವೆಂಬ ವಿಷಯವನ್ನು ಹಿರಿಯರೊಂದಿಗೆ ಚರ್ಚಿಸುತ್ತಿರುವಾಗ, ಅವರು ಹೇಳಿದ ಮಾತು ನಿಜಕ್ಕೂ ಮಾರ್ಮಿಕವಾಗಿತ್ತು.
ಅದೇನೆಂದರೆ “ಅನುಷ್ಠಾನಕ್ಕೆ ಬಾವಿ ಇರದ ಮನೆ ಅಥವಾ ಊರಿಗೆ ಕಾಲಿಡದ ಸ್ವಾಮಿಜಿಗಳು ಇವೆಲ್ಲವ ಬಿಟ್ಟು ಬೀದಿಯಲ್ಲಿಸಮಾಜದ ಏಳ್ಗೆಗೆ, ಒಗ್ಗಟ್ಟಿಗೆ ಹೋರಾಡಲು ಹೇಗೆ ಸಾಧ್ಯ? ಇವರಿಗೆ ಮತಾಚಾರ್ಯರು, ತತ್ವಗಳು, ನಾಮಗಳು, ಮುದ್ರೆಗಳು, ಶಂಕರರನ್ನು ಸಂಕರನೆಂದು ಹೀಯಾಳಿಸಿ ಸಂತಸ ಪಡುವುದು, ಮಧ್ವರು ಸ್ಕಂದನನ್ನು ಉಡುಪಿಯ ಕೃಷ್ಣನೆಂದು ಮತಾಕ್ರಮಣ ಮಾಡಿದ ಬಗ್ಗೆ ಚರ್ಚೆಗಳಲ್ಲಿಯೇ ಸೀಮಿತರಾಗಿ, ಭೂತಕಾಲದಲ್ಲಿ ಕಳೆದು ಹೋದವರಿಗೆ ಭವಿಷ್ಯದ ಚಿಂತೆಯಿಲ್ಲ ಹಾಗೂ ಇವರಿಂದ ಸಮಾಜದಲ್ಲಿ ಒಗ್ಗಟ್ಟನ್ನು ರೂಪಿಸುವ ನಿರೀಕ್ಷೆಯನ್ನು ಹೊಂದುವುದೇ ಒಂದು ಭ್ರಮೆ ಎಂದರೆ ತಪ್ಪಾಗಲಿಕ್ಕಿಲ್ಲ.”ಈದೇಶದಲ್ಲಿ ಯಾವುದೇ ಸಮಾಜದವರು ಯಾವುದೇ ಆತಂಕವಿಲ್ಲದೇ ಹೀಯಾಳಿಸುವ ರೀತಿಯಲ್ಲಿ ಇನ್ನೊಂದಾವುದೇ ಸಮಾಜ  ನ್ನು ಅವಮಾನಿಸಿ, ತಮ್ಮ ಕೃತ್ಯಗಳನ್ನು ಜೀರ್ಣಿಸಿಕೊಳ್ಳಬೇಕೆಂದರೆ, ಅವರ ಪ್ರಥಮ ಆದ್ಯತೆ ಈ ಬ್ರಾಹ್ಮಣ ಸಮಾಜ.
ಸಾರ್ವಜನಿಕ ಸಮಾರಂಭಗಳಲ್ಲಿ, ವಿಧಾನ ಸಭೆಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬ್ರಾಹ್ಮಣರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಅನೇಕ ವಿಷಯಗಳು ಚರ್ಚೆಯಾಗಿ, ವಿಪ್ರರಿಗೆ ನಮ್ಮ ನೆರವಿಗೆ ಯಾರೂ ಇಲ್ಲವೇ? ಎಂಬ ಅನಾಥ ಪ್ರಜ್ಞೆ ಉಂಟು ಮಾಡುವುದರಲ್ಲಿ, ಬ್ರಾಹ್ಮಣ ಮಠಾಧೀಶರುಗಳ ಪಾತ್ರ ದೊಡ್ಡದು ಎಂದರೆ ಅತಿಶಯೋಕ್ತಿಯೇನಲ್ಲ.
ಇದಕ್ಕೆ ಒಂದು ಉದಾಹರಣೆಯೆಂದರೆ, ನಮ್ಮ ರಾಜ್ಯದ ಒಂದು ಸಮಾಜದ ಕುರಿತಂತೆ ಒಬ್ಬ ರಾಜಕಾರಣಿ ಅವಮಾನವಾಗುವ ರೀತಿಯಲ್ಲಿ ತುಂಬಿದ ಸಭೆಯಲ್ಲಿ ಮಾತನಾಡಿದಾಗ, ಆ ರಾಜಕಾರಣಿಯ ಮಾತುಗಳನ್ನು ಖಂಡಿಸಿ, ಸಮಾಜದ ಎಲ್ಲ ಸದಸ್ಯರಲ್ಲಿ ಒಗ್ಗಟ್ಟನ್ನುಂಟು ಮಾಡಿ ಆ ರಾಜಕಾರಣಿಯ ವಿರುದ್ಧ ಸ್ವತಃ ಮಠಾಧೀಶರು ಹೋರಾಟಕ್ಕಿಳಿದಾಗ ತಬ್ಬಿಬ್ಬಾದ ಆ ರಾಜಕಾರಣಿ ಬೇಷರತ್ತು ಕ್ಷಮೆ ಕೇಳಿ, ಇನ್ನೆಂದೂ ಸಮಾಜದ ವಿರುದ್ಧ ಮಾತನಾಡುವುದಿಲ್ಲವೆಂದು ಹೇಳಿ ಪರಿಹಾರ ಧನ ನೀಡಿದ್ದು ಕಂಡಿದ್ದೇವೆ.
ಇದೇ ಸನ್ನಿವೇಶವನ್ನು ಬ್ರಾಹ್ಮಣ ಸಮಾಜದ ಬಗ್ಗೆ ಹೋಲಿಸಿದಾಗ, ಚಿತ್ರಣ ಸಂಪೂರ್ಣ ಭಿನ್ನ. ಈ ರಾಜಕಾರಣಿ ಮಠಾಽಶರುಗಳ ಸಮಕ್ಷಮವೇ ಬ್ರಾಹ್ಮಣರನ್ನು ಹೀಯಾಳಿಸಿದರೆ, ಕೆಲ ಕಾಲ ಅಲ್ಲಿಯೇ ಗೊಂದಲದ ವಾತಾವರಣವುಂಟಾಗಿನಂತರ ಯಾವುದೇ ಖಂಡನೆ, ಪ್ರತಿರೋಧ ಉಂಟಾಗದೇ ಅಲ್ಲಿಯೇ ತಣ್ಣಗಾಗುಗುತ್ತದೆ.
ಇತ್ತೀಚಿಗೆ ಇನ್ನೊಂದು ಸಮಾಜದ ಸ್ವಾಮಿಗಳು “ದೇಶ ಹಾಳಾಗಿದ್ದು ಮಾಂಸ ತಿಂದವರಿಂದಲ್ಲ, ತುಪ್ಪ ತಿಂದವರಿಂದ” ಎಂದು ಬ್ರಾಹ್ಮಣ ಸಮಾಜವನ್ನು ಅವಹೇಳನ ಮಾಡಿದಾಗ ಕೆಲ ಯುವ ವಿಪ್ರ ನ್ಯಾಯವಾದಿಗಳು ಹೋಗಿ ಮುಖಂಡರುಗಳಿಗೆ ಹಾಗೂ ಮಠಾಽಶರುಗಳಿಗೆ ಬೇಷರತ್ತು ಕ್ಷಮೆ ಕೇಳುವಂತೆ ಒತ್ತಾಯಿಸಲು ಹೋರಾಟ ಮಾಡೋ ಣವೆಂದರೆ, ಆ ಯುವಕರ ಮನೋ ಸ್ಥೈರ್ಯವನ್ನು ಉಡುಗಿಸುವಂತೆ, ಹೋರಾಟದ ಮನೋಭಾವವನ್ನು ಹತ್ತಿಕ್ಕುವ ಮಾತುಗಳು ಕೇಳಿ ಬರುತ್ತವೆಯೇ ಹೊರತು ಆರಾಜಕಾರಣಿಯ ವಿರುದ್ಧ ಯಾವುದೇ ಹೋರಾಟದ ಕಿಚ್ಚು ಕಾಣುವುದೇ ಇಲ್ಲ.
“ಹೋಗ್ಲಿ ಬಿಡಿ, ಆ ದೇವರೇ ನೋಡಿಕೊಳ್ಳುತ್ತಾನೆ” ಎನ್ನುವ ಮಠಾಧೀಶರುಗಳಿಗೆ, ಸಮಾಜವಿದ್ದರೆ ತಾವು ಎನ್ನುವ ಕಟು ಸತ್ಯ ಅರ್ಥವಾಗುತ್ತಿಲ್ಲವೆಂಬುದೇ ಅಚ್ಚರಿಯ ವಿಷಯ. ಇತರೇ ಸಮಾಜದ ಮಠಾಽಶರು ಸಮಾಜದಲ್ಲಿನ, ಮತ ಭಿನ್ನಾಭಿಪ್ರಾಯ ಗಳನ್ನು, ಓರೆ ಕೋರೆಗಳನ್ನು ಬದಿಗಿಟ್ಟು, ಸಮಾಜದ ಮೇಲಾಗುತ್ತಿರುವ ದೌರ್ಜನ್ಯಗಳನ್ನು, ಬಾಹ್ಯ ಪ್ರಹಾರವನ್ನು ಎದುರಿಸಲು ಎಲ್ಲರನ್ನೂ ಈ ಏಕತೆ ಯಡಿಯಲ್ಲಿ ತಂದು ಒಂದು ಜನ ಶಕ್ತಿಯನ್ನಾಗಿ ಮಾರ್ಪಡಿಸಿ ಧಾರ್ಮಿಕವಾಗಿ ಹಾಗೂ ಸಾಮಾಜಿಕವಾಗಿ ಗಟ್ಟಿಯಾದ ನೆಲೆಗಟ್ಟನ್ನು ರೂಪಿಸಿಕೊಟ್ಟ ಈ ಮಠಾಧೀಸಮಾಜದ ಬಾಂಧವರು ತಮ್ಮ ಮೌನದಲ್ಲಿಯೂ ಹೇಳಿಕೊಳ್ಳಲಾಗದ ಬೇಗುದಿಯೆ ಅಭಿಪ್ರಾಯವೇ “ ನಮ್ಮ ಮಠಾಧೀಶರುಗಳಿಗೆ ಬ್ರಾಹ್ಮಣರಲ್ಲಿ ಒಗ್ಗಟ್ಟನ್ನುಂಟು ಮಾಡುವುದು ಬೇಕಿಲ್ಲವೇ?” ಎನ್ನುವುದು.
ಸಮಾಜದಲ್ಲಿ, ಸದಸ್ಯರ ನಡುವೆ ಸೌಹಾರ್ದಯುತ ಸಹ ಜೀವನ, ಧಾರ್ಮಿಕ ಆಚರಣೆಗಳ ಜೊತೆ, ಪರಸ್ಪರ ಮತಾಚಾರ್ಯರ ಗೌರವಿಸುವಿಕೆ ನಮ್ಮ ಮಠಾಧೀಶರುಗಳು ಸಾರ್ವಜನಿಕರಿಗೆ ನಿರೂಪಿತವಾಗುವಂತೆ ನಡೆದುಕೊಳ್ಳುವುದರಿಂದ ಸಮಾಜದ ಜನರಲ್ಲಿ, ಮಠಾಽಶರಲ್ಲಿನ ಒಗ್ಗಟ್ಟು ಸಮುದಾಯದ ಬ್ರಾಹ್ಮಣರಲ್ಲಿ ಬಲಗೊಂಡು ಮತಗಳು ಭಿನ್ನವಿದ್ದರೂ ನಾವೆಲ್ಲ ಒಂದು ಎಂಬ ಭಾವ ಬಲಗೊಳ್ಳುತ್ತದೆ. ಆದರೆ ಈ ಆಶಯಕ್ಕೆ ಪೂರಕವಾಗಿ ಬ್ರಾಹಣ ಮಠಾಧೀಶರುಗಳು ನಡೆದುಕೊಳ್ಳುತ್ತಿದ್ದಾರೆಯೇ? ಖಂಡಿತವಾಗಿಯೂ ಇಲ್ಲ.
ಇಂದಿನವೆರಗೂ ನಮ್ಮ ರಾಜ್ಯದ ವಿಪ್ರ ಮಠಾಧೀಶರುಗಳು ತಮ್ಮ ಮತಾಚಾರ್ಯರ ತತ್ವಗಳೇ ಇತರ ಮತಾಚಾರ್ಯರಿ ಗಿಂತ ಮಿಗಿಲು ಎಂದು ಈ ಇಪ್ಪ ತ್ತೊಂದನೇ ಶತಮಾನದಲ್ಲಿಯೂ ಸಹ “ದಿಗ್ವಿಜಯ”ವನ್ನು ಸಾಧಿಸುವ ಛಲದಲ್ಲಿದ್ದಾರೆಯೇ ಹೊರತು, ಸಮಾಜದ ಜನರಲ್ಲಿ ಏಕತೆಯನ್ನು ರೂಪಿಸಲು ಮತಗಳ ಬಗ್ಗೆ ಇರುವತಾರತಮ್ಯಗಳಿಗೆ ಕೊನೆ ಹಾಡಿ, ಯಾವುದೇ ಶ್ರಮ ವಹಿಸುತ್ತಿರುವುದು ಕಂಡು ಬರುತ್ತಿಲ್ಲವೆಂಬುದು ವಿಷಾದನೀಯ ವಿಷಯ.
ಸರಕಾರದ ನೀತಿಗಳಿಂದ ಜಮೀನು ಕಳೆದುಕೊಂಡ ಬ್ರಾಹಣರ ಪರವಾಗಿ ಹೋರಾಡಲು, ಯಾವುದೇ ಮಠಾಧೀಶರುಗಳು ಮುಂದಾಗದೇ ಇದ್ದುದರಿಂದ, ತಮ್ಮ ಜೀವನೋಪಾಯದ ಜಮೀನುಗಳನ್ನು ಕಳೆದುಕೊಂಡ ಎಷ್ಟೋ ಬ್ರಾಹಣ ಕುಟುಂಬಗಳು ಬಡತನದ ಬೇಗುದಿಯಲ್ಲಿ ಬೆಂದು ಹೋಗಿರುವ ಹಾಗೂ ನಿರ್ಗತಿಕ ಜೀವನವನ್ನು ಸಾವಿರಾರು ಬ್ರಾಹ್ಮಣ ಕುಟುಂಬಗಳು ಇಂದಿಗೂ ಸಹ ಪುರಾಣ ಕಾಲದಿಂದಲೂ ಜನಜನಿತವಾಗಿರುವ ಒಂದು ವಾಕ್ಯದಂತೆ “ಒಂದು ಊರಿನಲ್ಲಿ ಒಬ್ಬ ಬಡ ಬ್ರಾಹಣನಿದ್ದನು” ಎನ್ನುವುದನ್ನೇ ಪ್ರತ್ಯಕ್ಷವಾಗಿ ರೂಢಿಸಿಕೊಂಡು ಬದುಕುತ್ತಿದ್ದಾರೆ ಎಂಬುದು ಮಠಾಧೀಶರುಗಳಿಗೆ ಗೊತ್ತಿಲ್ಲವೆಂದಲ್ಲ.
ಮಠದ ಜಮೀನುಗಳೇ ಸರಕಾರದ ಪಾಲಾಗಿ , ಗುಡಿ ಗುಂಡಾರಗಳು ದತ್ತಿ ಇಲಾಖೆಗೆ ಒಳಪಟ್ಟು, ಟ್ರಸ್ಟಿಗಳ ಹಿಡಿತಕ್ಕೆ ದೇವಸ್ಥಾನ ಗಳು ಸಿಲುಕಿ ಪಾರುಪತ್ಯೆಗಾರರು ಪತ್ತೆಯಿಲ್ಲದಂತಾಗಿ, ಅರ್ಚಕರ ಬದುಕು ತತ್ವಾರವಾದಾಗಲೂ ಇದನ್ನಾವುದನ್ನೂ ಗಮನಿಸಿ ಪರಿಹರಿಸಲು ಮುಂದಾಗದ ಈ ಮಠಾಧೀಶರುಗಳು ಏನೂ ಆಗೇ ಇಲ್ಲವೆಂಬಂತೆ ತಮ್ಮ ದೈನಂದಿನ ಅನುಷ್ಠಾದಲ್ಲಿಯೇ ಮುಳುಗಿಹೋಗಿದ್ದಾರೆ ಎನ್ನುವ ಅಸಹಾಯಕ ಕೂಗು ಪದೇ ಪದೇ ಮಾರ್ದನಿಸುತ್ತಲಿದೆ.
ಇರುವ ಬೆರಳಣೆಕೆಯ ಕೆಲವೇ ಬ್ರಾಹ್ಮಣ ರಾಜಕಾರಣಿಗಳ ಮೇಲೆ ಮಠಾಧೀಶರದು ಯಾವುದೇ ಹಿಡಿತವನ್ನು ಹೊಂದಿಲ್ಲ ಹಾಗೂ ಹೊಂದಲು ಸಾಧ್ಯವಿಲ್ಲ. ಏಕೆಂದರೆ, ಕರ್ನಾಟಕ ರಾಜ್ಯದ ಆರು ಕೋಟಿ ಜನ ಸಂಖ್ಯೆಯಲ್ಲಿ ವಿಪ್ರ ಸಮಾಜದವರ ಜನಸಂಖ್ಯೆ ಕೇವಲ ಹಲವು ಲಕ್ಷಗಳಷ್ಟು. ಒಂದು ಪ್ರಭಾವಿ ಮತ ಬ್ಯಾಂಕ್ ಆಗದಷ್ಟು ಇರುವ ಜನರ ಮಾತನ್ನು ಯಾರು ಕೇಳಬೇಕು? ನೀವೇನಿದ್ದರೂ ಮಡಿ ಮೈಲಿಗೆ ಮಾಡಿ, ಗಂಟೆ ಬಾರಿಸಿ, ಅಳ್ಳಿಟ್ಟು ತಿಂದು, ಪುಳಿಚಾರು ಊಟ ಮಾಡಿ ಮಲಗಿದರೆ ಮುಗಿತು ಎನ್ನುವ ಇತರರ ಮಾತುಗಳನ್ನು ಕೇಳಿಕೊಂಡು ಮೌನವಾಗಿ ಸಹಿಸಿಕೊಂಡು ಜೀವನ ಮಾಡುವಂತಹ ಸ್ಥಿತಿಯನ್ನು ಬ್ರಾಹ್ಮಣರಿಗೆ ತಂದಿಟ್ಟವರು ಯಾರು? ಇದರಲ್ಲಿ ಧಾರ್ಮಿಕ ಮುಖಂಡರ ಪಾತ್ರ ನಿಜಕ್ಕೂ ದೊಡ್ಡದಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಇಂಥಹ ಸನ್ನಿವೇಶದಲ್ಲಿ ಈ ರಾಜಕಾರಣಿಗಳಿಗೆ ಬ್ರಾಹ್ಮಣ ಮತಗಳಿಗಿಂತ ಇತರೇ ಧರ್ಮದ ಹಾಗೂ ಜಾತಿಯ ಮತಗಳೇ ಮುಖ್ಯ.ಇದನ್ನೇ ಇತ್ತೀಚೆಗೆ ವಾಲ್ಮಿಕಿ ಸಮಾಜ ಹಾಗೂ ಕುರುಬ ಸಮಾಜದ ಹೋರಾಟಗಳನ್ನು ಗಮನಿಸದಾಗ ನಮಗೆ ಸ್ಪಷ್ಟ ವ್ಯತ್ಯಾಸ ಕಾಣಬಹುದು. ಈ ಸಮಾಜಗಳ ಮಠಾಧೀಶರುಗಳು ಹೋರಾಟದ ಮುಂಚೂಣೆಯಲ್ಲಿ ನಿಂತು, ತಮ್ಮ ಸಮಾಜದವರಿಗೆ ಧೈರ್ಯ ತುಂಬುವುದರ ಜೊತೆ, ಜನ ಪ್ರತಿನಿಧಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ  ಒಗ್ಗಟ್ಟುನುಂಟು ಮಾಡಿ ಅಗತ್ಯ ವಾಗಿರುವ ಬೇಡಿಕೆಗಳನ್ನು ಈಡೇರಿಸಿಕೊಳ್ಳುವತ್ತ ತಮ್ಮ ಸಾಮೂಹಿಕ ಪ್ರಯತ್ನ ಮಾಡುತ್ತಾರೆ.
ಆದರೆ, ಈ ರೀತಿಯ ಸಾಮೂಹಿಕ ಪ್ರಯತ್ನ ವಿಪ್ರ ಮಠಾಧೀಶರಲ್ಲಿ ಕಾಣುತ್ತಿಲ್ಲವೇಕೆ ? ಎಂಬ ಮಿಲಿ ನ್ ಡಾಲರ್ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೋದಾಗ, ಕಂಡು ಬಂದ ಕಟು ಸತ್ಯವೆಂದರೆ, ಮಠಾಧೀಶರುಗಳು ಬ್ರಾಹ್ಮಣ ಸಮಾಜದ ಉನ್ನತಿಗಿಂತ ತಮ್ಮ ಮತಾಚಾರ್ಯರ ತತ್ವಗಳಿಗೆ ಜೋತು ಬಿದ್ದು ಶ್ರೇಷ್ಠ-ಕನಿಷ್ಠ ತಾರತಮ್ಯಗಳ ಬೇಧಾಭಿಪ್ರಾಯಗಳಲ್ಲಿಯೇ ಕಚ್ಚಾಡುತ್ತಿರುವುದರ ಫಲ ಈ ಸಮಾಜ ಹರಿದು ಹಂಚಿ ಹೋಗಿದ್ದಕ್ಕೆ ಕಾರಣವೆಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ.
ಈ ಅದ್ವೈತ, ದ್ವೈತ ಹಾಗೂ ವಿಶಿಷ್ಠಾದ್ವೈತ ಮತ ಪ್ರವರ್ತಕರಾದ ಶ್ರೀ ಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು ಹಾಗೂ ಶ್ರೀ ರಾಮಾನುಜಾಚಾರ್ಯರು ತಮ್ಮ ಮತಗಳಾಧಾರದ ಮೇಲೆ ಬ್ರಾಹ್ಮಣ ಸಮಾಜವನ್ನು ಒಡೆಯಿರಿ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಮಧ್ವ ತತ್ವಗಳ ಅನುಯಾಯಿಗಳು, ಅದ್ವೈತಿಗಳನ್ನು ಕಂಡರೆ, ಅಸೃಶ್ಯರಂತೆ ಕಾಣುವ, ಅದ್ವೈತಿಗಳು ದ್ವೈತಿಗಳನ್ನು ಕಂಡರೆ ಹರಿಹಾಯುವ ಈ ಪರಸ್ಪರ ಮತ ಪ್ರತಿಷ್ಠೆಗಳ ಹೊಡೆದಾಟವನ್ನು, ನೋಡಿಯೂ ಸಹ ಸಾಮರಸ್ಯ ತಾರದೇ ಗೊಂದಲ ಗಳಿಗೆ ಉತ್ತರಗಳನ್ನೂ ಕಂಡುಕೊಳ್ಳಲೂ ಪ್ರಯತ್ನ ಮಾಡುತ್ತಿಲ್ಲವೇಕೆ? ಯಾವುದೇ ಪ್ರಶ್ನೆಗಳಿಗೆ ಉತ್ತರ ಕೊಡದ ಒಂದೇ ವೇದಿಕೆಯಲ್ಲಿ ಇತರ ಮತಾನುಯಾಯಿ ವಿಪ್ರ ಸ್ವಾಮಿಜಿಗಳೊಂದಿಗೆ ಸಮಾನವಾಗಿ ಕೂಡಲು ಹಿಂದು ಮುಂದೆ ನೋಡುವ ಸಂಕುಚಿತ ಮನೋಸ್ಥಿತಿಯ ಮಠಾಧೀಶರುಗಳಿಂದ ಹೇಗೆ ಸಮಾಜದಲ್ಲಿ ಒಗ್ಗಟು ಮೂಡಲು ಸಾಧ್ಯ?.
ಈ ವಿಚಾರವನ್ನು ಹಿರಿಯ ವಿದ್ವಾಂಸರ ಜೊತೆ ಚರ್ಚೆ ಮಾಡುತ್ತಿರುವಾಗ ಕಂಡು ಬಂದ ಸೋಜಿಗದ ಸಂಗತಿಯೆಂದರೆ, ಈ ರಾಜಕೀಯ ಧುರೀಣರ ಸುತ್ತ ಮುತ್ತ ಅವರದೇ ಪಟಾಲಂ ಇರುವಂತೆ, ಮಠಾಧೀಶರುಗಳ ಸುತ್ತ ಮುತ್ತ ಪೂರ್ವಾಶ್ರಮದ ನೆಂಟರೇ ತುಂಬಿಕೊಂಡಿದ್ದಾರೆ.
ಮಠಗಳ ಆಡಳಿತಾಧಿಕಾರಿ, ದಿವಾನ ಇತ್ಯಾದಿಗಳೆಲ್ಲ, ಸ್ವಾಮಿಜಿಗಳ ಸಂಬಂಧಿಕರೇ. ಇದರರ್ಥ ಮಠದ ಸ್ವಾಮಿಜಿಗಳನ್ನು ತಮ್ಮ ಪ್ರಭಾವ ವಲಯದಿಂದ ಹೊರಗೆ ಬರದಂತೆ ನೋಡಿಕೊಂಡು, ಸದಾ ಕಿವಿ ಕಚ್ಚುತ್ತ, ಮತಗಳ ನಡುವೆ ಭಿನ್ನಾಭಿಪ್ರಾಯ ಸದಾ ಇರುವಂತೆ ನೋಡಿಕೊಳ್ಳುವದೇ ಇವರ ಕೆಲಸ. ಇದಕ್ಕೆ ಉದಾಹರಣೆಯಾಗಿ, ಆನೆಗೊಂದಿಯ ನವ ವೃಂದಾವನದ ಪ್ರಕರಣ, ಎಂದು ಹೇಳುತ್ತಾ ಉತ್ತರಾದಿಮಠಕ್ಕೂ, ಮಂತ್ರಾಲಯದ ರಾಯರ ಮಠಕ್ಕೂ ಈ ನವ ವೃಂದಾವನಗಳ ಸಮಾರಾಧನೆ , ಪೂಜೆ ಕೈಂಕರ್ಯಗಳು ವ್ಯಾಜ್ಯ ರೂಪ ಪಡದು ಹಲುವಾರು ದಶಕಗಳವರೆಗೆ ನ್ಯಾಯಾಲಯಗಳಲ್ಲಿ ಹೋರಾಟಕ್ಕೆ ಕಾರಣವಾಗಿದ್ದು ಮಠಾಶೀಶರುಗಳ ಸುತ್ತ ಮುತ್ತಲಿನ ಈ ಸಂಕುಚಿತ ಮನೋಭಾವದ ಖಾಸಗಿ ಭಕ್ತರು.
ಈ ವ್ಯಾಜ್ಯದಿಂದ ಈ ಎರಡೂ ಮಠಗಳ ಸ್ವಾಮಿಗಳು ಒಂದೇ ವೇದಕೆಯನ್ನು ಎಲ್ಲಿಯೂ ಹಂಚಿಕೊಳ್ಳ ಲಾಗಲಿಲ್ಲ, ಭಕ್ತರ ನಡುವೆ ಉಂಟಾದ ಭಿನ್ನಾಭಿಪ್ರಾಯ, ಗೊಂದಲಗಳನ್ನು ನಿವಾರಿಸಲು ಇಂದಿಗೂ ಉಭಯ ಸ್ವಾಮೀಜಿಗಳು ಪ್ರಯತ್ನ ಮಾಡಲಿಲ್ಲ. ಇದರ ಪರಿಣಾಮವಾಗಿಯೇ ನ್ಯಾಯಾಲಯದ ಆದೇಶದಂತೆ ಈಗ ಸರತಿ ಪ್ರಕಾರ ಸಮಾರಾಧನೆ, ಪೂಜೆ ಪುನಸ್ಕಾರಗಳನ್ನು ಮಾಡುವ ಅನಿವಾರ್ಯತೆ ಉಂಟಾಗಿದೆ. ಈ ಕಾರಣದಿಂದ ಮಠಗಳು, ಸ್ವಾಮಿಗಳ ನಡುವೆ ಇರದ ಒಗ್ಗಟ್ಟು ಹೇಗೆ ಇವರಿಂದ ಭಕ್ತರಲ್ಲಿ ಹಾಗೂ ಸಮಾಜದಲ್ಲಿ ಕಾಣಬಹುದು?” ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಾದವರು ಇಂದಿಗೂ ಮೌನವಹಿಸಿರುವುದೇ ವಿಪ್ರ ಸಮಾಜದಲ್ಲಿನ ವಿಪರ್ಯಾಸ.
ಸನಾತನ ಕಾಲದಿಂದಲೂ ಕಂಡು ಬರುವ ಚಿತ್ರಣವೆಂದರೆ, ವಿಪ್ರ ಸ್ವಾಮಿಜಿಗಳು, ಧರ್ಮ ರಕ್ಷಣೆಗೆ ಅರ್ಹರಿಂದ ಸಾಮ್ರಾಜ್ಯವನ್ನು ಸ್ಥಾಪಿಸಿ ಸಮಸ್ತ ದೇಶದಲ್ಲಿ ಏಕತೆ ಹಾಗು ಅಖಂಡತೆಯನ್ನು ರಕ್ಷಿಸುವುದು. ಈ ಕಾರ್ಯವನ್ನು ಮಠಾಧೀಶನಲ್ಲದ ಚಾಣಿಕ್ಯನಿಂದ ಹಿಡಿದು ಮಠಾಧೀಶರಾಗಿದ್ದ ವಿದ್ಯಾರಣ್ಯರಿಂದ ಈ ಸಮಾಜದ ಕಟ್ಟುವಿಕೆ ಹಾಗು ಧರ್ಮವನ್ನು ಕಾಪಾಡುವಿಕೆಯನ್ನು ಕಾಣಬಹುದು.
ಆದರೆ, ಇಂದಿನ ಮಠಾಧೀಶರುಗಳಿಂದ ಸಾಮ್ರಾಜ್ಯವನ್ನು ಕಟ್ಟುವುದನ್ನು ಬಿಡಿ ಇರುವ ಸಣ್ಣ ಸಮಾಜದ ಒಡಕುಗಳನ್ನುನಿವಾರಿಸಿ ಒಗ್ಗಟ್ಟನ್ನು ಸ್ಥಾಪಿಸುವ ಶಕ್ತಿಯನ್ನು ಹೊಂದದೇ ಇರುವುದು ಅವರ ಧಾರ್ಮಿಕ ಮುಂದಾಳುತನವನ್ನು ಪ್ರಶ್ನಿಸುವ ಸಂಗತಿಯಾಗಿದೆ. ಹಿಂದೂ ಧರ್ಮದಿಂದ ವಿಶೇಷವಾಗಿ ಬ್ರಾಹ್ಮಣ ಸಮಾಜದ ಕನ್ಯೆಯರು ಇತರೇ ಧರ್ಮದ ಹುಡುಗರನ್ನು ಮದುವೆಯಾದಾಗ, ಮೌನವಾಗಿರುವ ಇವರು, ಅದೇ ಬ್ರಾಹ್ಮಣ ಸಮಾಜದ ಹುಡುಗನೊಬ್ಬ ಬೇರೆ ಜಾತಿಯ ಅಥವಾಧರ್ಮದ ಹುಡುಗಿಯನ್ನು ಮದುವೆಯಾಗಿ ಬಂದರೆ, ಏನೋ ಅಧರ್ಮ ಮಾಡಿದರಂತೆ ವರ್ತಸಿ, ಇಬ್ಬರಿಗೂ ಮುದ್ರೆ ಹಾಕದೇ ಬಹಿಷ್ಕರಿಸಿದಂತೆ ವರ್ತಿಸುವ ಸ್ವಾಮಿಗಳಿಂದ ಸಮಾಜದಲ್ಲಿ ಹೇಗೆ ಒಗ್ಗಟ್ಟನ್ನು ನಿರೀಕ್ಷಿಸಲು ಸಾಧ್ಯ? ಇದನ್ನು ಬಿಡಿ, ಬೇರೆ ಧರ್ಮದ ಹುಡುಗನನ್ನು ಮದುವೆಯಾಗಿ, ಅಲ್ಲಿ ದುರಂತ ದಿನಗಳನ್ನು ಕಂಡು ಪುನಃ ಹಿಂದೂ ಧರ್ಮಕ್ಕೆ ಮರಳಿ ಬರಲು ಸಿದ್ಧಳಿರುವ ಆ ಹೆಣ್ಣುಮಗಳಿಗೆ ಸಮಾಧಾನ, ಸಾಂತ್ವನದ ನುಡಿಗಳನ್ನಾಡದೇ ಒಳಗೆ ಪ್ರವೇಶಿಸುವ ಬಾಗಿಲನ್ನೇ ಮುಚ್ಚಿದರೆ ಹೇಗೆ?ಮಠಾಧೀಶರಾಗಿದ್ದ ಸ್ವಾಮಿಗಳು ಸನ್ಯಾಸವನ್ನು ತೊರೆದು ಗೃಹಸ್ಥರಾಗಿ ಸಂಸಾರ ನಡೆಸುವುದನ್ನು ನಾವೆಲ್ಲ ನೋಡುತ್ತಿದ್ದೇವೆ.
ಸನ್ಯಾಸಾಶ್ರಮವನ್ನು ಸ್ವೀಕರಿಸುವ ಮೊದಲು ಆ ವ್ಯಕ್ತಿ ತನ್ನ ಶ್ರಾದ್ಧವನ್ನು ತಾನೇ ಮಾಡಿಕೊಂಡು ತರ್ಪಣವನ್ನು ಬಿಡುತ್ತಾನೆ. ಇದರರ್ಥ, ಉಳಿದ ಆಶ್ರಮಗಳಿಗೆ ಸಂಬಧಿಸಿದಂತೆ ಆ ವ್ಯಕ್ತಿ ಮೃತನಾದ (ಸಿವಿಲ್ ಡೆತ್) ಎಂದು. ಇಂತಹ ಮೃತ ವ್ಯಕ್ತಿ ಹೇಗೆ ಮತ್ತೊಮ್ಮೆ ಗೃಹಸ್ಥಾಶ್ರಮಕ್ಕೆ ಹೇಗೆ ಮರಳ ಬಲ್ಲನೋ ಅದೇ ರೀತಿಯಲ್ಲಿ ಇನ್ನೊಂದು ಧರ್ಮದವರು ಅಥವಾ ಸಮಾಜದವರು ಬ್ರಾಹ್ಮಣ ಸಂಕುಲದೊಳು ಬರಬಹುದಲ್ಲವೇ? ಎಂಬ ಪ್ರಶ್ನೆಗೆ ಉತ್ತರ ನೀಡದ ಸ್ವಾಮಿಜಿಗಳು ಮತ ಭಿನ್ನಾಭಿಪ್ರಾಯಗಳಲ್ಲಿ ತಮ್ಮ ಭಕ್ತರನ್ನು ಹಾಗೂ ಸಮಾಜವನ್ನು ಬಲಿಕೊಡುತ್ತಿದ್ದಾರೆಂದರೆ ತಪ್ಪಾಗಲಿಕ್ಕಿಲ್ಲ.
ನಮ್ಮ ಧರ್ಮದಿಂದ , ಸಮಾಜದಿಂದ ಸಮಾಧಾನ, ತೃಪ್ತಿ ದೊರೆಯದಿದ್ದರೆ ಅವರಿಗೆ ಮತ್ತೊಂದು ಧರ್ಮ ಅಥವಾ ಸಮಾಜಕ್ಕೆ ಹೊರಳಿದರೆ ಯಾವುದೇ ತಪ್ಪಿಲ್ಲ ಎಂದು ಇತ್ತೀಚೆಗೆ ಹೆಸರಾಂತ ವಿಪ್ರ ಸ್ವಾಮಿಜಿಗಳೊಬ್ಬರು ನುಡಿದಾಗ, ಮನಸಿಗನ್ನಿಸಿದ್ದು, ಈಗಾಗಲೇ ಊರಿಗೆ ಹೆಚ್ಚೆಂದರೆ ಇರುವ ಹತ್ತು ಬ್ರಾಹ್ಮಣ ಮನೆಗಳು ಭವಿಷ್ಯದಲ್ಲಿ ಮತ್ತಷ್ಟು ಕಡಿಮೆಯಾಗುವುದರಲ್ಲಿ ಸಂಶಯ ವಿಲ್ಲ. ಪಾದ ಪೂಜೆಗೆ, ಗುಡಿ ಗೋಪರಗಳನ್ನು ಕಟ್ಟಲು, ಸಮಾರಾಧನೆಗಳನ್ನು, ಉತ್ಸವಗಳನ್ನು ನಡೆಸಲು ಈ ಕುಟುಂಬಗಳ ದೇಣಿಗೆ ಬಯಸುವ ಧಾರ್ಮಿಕ ಮುಖಂಡರುಗಳು ಈ ಸಮಾಜವನ್ನು ಗಟ್ಟಿಯಾಗಿ ಕಟ್ಟಲು, ವಿಸ್ತರಿಸಲು ಯಾಕೆ ಪ್ರಯತ್ನಿಸು ತ್ತಿಲ್ಲ? ಒಂದು ಸಲ ಯಾವುದೇ ಮಠದ ಸ್ವಾಮಿಗಳಾದರೆ ಸಾಕು, ರಾತ್ರೋ ರಾತ್ರಿ ಲಾಟರಿ ಹೊಡೆದಂತೆ.
ಓಡಾಡಲು ಐಶಾರಾಮಿ ವಾಹನಗಳು, ಬೇಕು ಬೇಡಿಕೆಗಳನ್ನು ನೋಡಿಕೊಳ್ಳಲು ಸಿಬ್ಬಂದಿ , ಟೊಂಕ ಬಗ್ಗಿಸಿ ಸೇವೆ ನಿಲ್ಲುವ ಭಕ್ತ ಗಣ, ಇತ್ಯಾದಿಗಳು ಸಾಯುವವರೆಗೂ ದೊರೆಯುವಾಗ ಸಮಾಜ ತೆಗೆದುಕೊಂಡು ನಾವೇನು ಮಾಡೋಣ? ಎನ್ನುವಮನೋಭಾವವೇ ಇಂದಿಗೂ ಸಮಾಜದಲ್ಲಿ ಒಡಕು ಮುಂದುವರೆಯಲು ಕಾರಣವಾಗಿದೆಯೇ? ಬ್ರಾಹ್ಮಣ ಸಮಾಜ ಯಾಕೆ ಇತರ ಸಮಾಜ ಹಾಗೂ ಧರ್ಮದಂತೆ ವಿಸ್ತಾರವಾಗಲಿಲ್ಲವೆಂಬ ವಿಷಯವನ್ನು ಹಿರಿಯರೊಂದಿಗೆ ಚರ್ಚಿಸುತ್ತಿರುವಾಗ, ಅವರು ಹೇಳಿದಮಾತು ನಿಜಕ್ಕೂ ಮಾರ್ಮಿಕವಾಗಿತ್ತು.
ಅದೇನೆಂದರೆ “ಅನುಷ್ಠಾನಕ್ಕೆ ಬಾವಿ ಇರದ ಮನೆ ಅಥವಾ ಊರಿಗೆ ಕಾಲಿಡದ ಸ್ವಾಮಿಜಿಗಳು ಇವೆಲ್ಲವ ಬಿಟ್ಟು ಬೀದಿಯಲ್ಲಿಸಮಾಜದ ಏಳ್ಗೆಗೆ, ಒಗ್ಗಟ್ಟಿಗೆ ಹೋರಾಡಲು ಹೇಗೆ ಸಾಧ್ಯ? ಇವರಿಗೆ ಮತಾಚಾರ್ಯರು, ತತ್ವಗಳು, ನಾಮಗಳು, ಮುದ್ರೆಗಳು, ಶಂಕರರನ್ನು ಸಂಕರನೆಂದು ಹೀಯಾಳಿಸಿ ಸಂತಸ ಪಡುವುದು, ಮಧ್ವರು ಸ್ಕಂದನನ್ನು ಉಡುಪಿಯ ಕೃಷ್ಣನೆಂದು ಮತಾಕ್ರಮಣ ಮಾಡಿದ ಬಗ್ಗೆ ಚರ್ಚೆಗಳಲ್ಲಿಯೇ ಸೀಮಿತರಾಗಿ, ಭೂತಕಾಲದಲ್ಲಿ ಕಳೆದು ಹೋದವರಿಗೆ ಭವಿಷ್ಯದ ಚಿಂತೆಯಿಲ್ಲ ಹಾಗೂ ಇವರಿಂದ ಸಮಾಜದಲ್ಲಿ ಒಗ್ಗಟ್ಟನ್ನು ರೂಪಿಸುವ ನಿರೀಕ್ಷೆಯನ್ನು ಹೊಂದುವುದೇ ಒಂದು ಭ್ರಮೆ ಎಂದರೆ ತಪ್ಪಾಗಲಿಕ್ಕಿಲ್ಲ.”