ಮುಕ್ತ ಆವರಣದಲ್ಲಿ ಕವನಗಳನ್ನು ತೂರಿಬಿಡುವ ಸ್ವಾರ್ಥ
ಸಂಡೆ ಸಮಯ
ಸೌರಭ ರಾವ್, ಕವಯತ್ರಿ, ಬರಹಗಾರ್ತಿ
ನಮ್ಮ ನಡುವಿನ ಒಬ್ಬ ಅದ್ಭುತ ಚಿಂತಕ, ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿ ಅವರು ಒಮ್ಮೆ ರಂಗ ಶಂಕರದಲ್ಲಿ ಕರ್ಣನನ್ನು, ಪಂಪನನ್ನು ನೆನಪಿಸಿಕೊಳ್ಳುತ್ತಾ ಹೀಗೆಂದಿದ್ದರು: ತಾಯಿಯೂ ತೊರೆದುಬಿಟ್ಟ ಮಗುವೊಂದನ್ನು ಕವಿಯಲ್ಲದೇ ಮತ್ಯಾರು ಇಷ್ಟು ಆರ್ತವಾಗಿ ಎತ್ತಿಕೊಳ್ಳುತ್ತಾರೆ? ಕವಿತೆಯೂ ಹಾಗೇ ಇರಬಹುದೇನೋ.
ಒಮ್ಮೆ ಕವಿ/ ಕವಯಿತ್ರಿ ಬರೆದುಬಿಟ್ಟಮೇಲೆ ಅದು ಓದುಗರ ಅಕ್ಕರೆಯ ಪಾಲನೆಯ ಉಳಿಯುವುದಲ್ಲವಾ? ಕಳೆದವಾರದ ಕವನಗಳಿಗೆ ಸಿಕ್ಕ ಸ್ಪಂದನೆ, ಅಕ್ಕರೆ ಅಚ್ಚರಿ ಮೂಡಿಸಿದೆ. ಕವಿತೆಯ ಕೆಲವು ಸಾಲುಗಳ, ಹೇಳದಂತೆಯೂ ಎಲ್ಲ ಹೇಳಿಕೊಂಡು ಬಿಡುವ ವಿಚಿತ್ರ ಮಾಯೆಗೆ ಬರಹಗಾರರಷ್ಟೇ ಓದುಗರೂ ತೆರೆದುಕೊಂಡುಬಿಡುವ ಮುಕ್ತತೆ ಎಷ್ಟು ಚಂದ. ಆ ಮಾನಸಿಕ, ಮಾನವೀಯ ಆವರಣದಲ್ಲಿ ಮತ್ತಷ್ಟು ಕವನಗಳನ್ನು ತೂರಿಬಿಡುವ ಸ್ವಾರ್ಥ ಈ ಭಾನುವಾರಕ್ಕೆ.
ಮಗುವೊಂದರ ಮೊದಲ ಹಲ್ಲುಗಳು ದಿನಕಳೆದಂತೆ ಇಷ್ಟಿಷ್ಟೇ ಮೂಡುವಂತೆ ಇಣುಕುತ್ತವೆ ಅಕ್ಷರಗಳು ಲೇಖನಿಯಿಂದಸದ್ಯಕ್ಕೆ ಭಾವವೆ ಬರೀ ತೊದಲು
ಕರ್ಣಅಂದು ನಿನ್ನ ಹೆತ್ತವಳ ಕಣ್ಣೀರಿಗೆ ರಣಾಗ್ರವೀರನಾದ ನಿನ್ನೆದೆಯೂ ತೇವಗೊಂಡುತಳಮಳಿಸಿದಂತೆನಿನ್ನ ರಕ್ತ ಚೆಲ್ಲಿದಾಗ ವಸುಂಧರೆಯೂ ಆರ್ತಳಾಗಿ ಆರ್ದ್ರಗೊಂಡಿದ್ದಳೇನೋಮಹಾಕಾವ್ಯ ಪ್ರಾಚೀನವಾದರೇನಾಯ್ತೋ ಕರ್ಣ,ನಿನ್ನ ನೆನೆಯುತ್ತ ನಡೆವಾಗೆಲ್ಲ ಈ ನೆಲವೂ ನಿನ್ನ ಹೆಸರ ನುಡಿದಂತಾಗುತ್ತದೆಕೃಷ್ಣನಂಥ ಕೃಷ್ಣನನ್ನೂ ನಿನ್ನ ಬಗ್ಗೆ ಪ್ರಶ್ನಿಸುವಂತಾಗಿನಿನ್ನ ನೋವುಗಳೆಲ್ಲ ನನ್ನಲ್ಲಿ ಹೊಸದಾಗುತ್ತವೆಕೆಲವು ಸತ್ಯಗಳಿಗೆ ಯಾವುದೂ ಸಕಾಲವಲ್ಲವೇನೋಭೂಮಿಗೆಷ್ಟು ಘೋರ ಗತಗಾಥೆಗಳ ಭಾರನಂಟುಓದುತ್ತಾ ಓದುತ್ತಾ ತೂಕಡಿಸಿ ಪುಸ್ತಕದ ಮೇಲೆ ತಲೆಯಿಟ್ಟು ಪುಟ್ಟ ಕಂದ ನಿದ್ದೆ ಹೋಗಿದ್ದಾಳೆಕಥೆ ನಿರುಪಾಯವಾಗಿ ಇನ್ನೂ ಎಚ್ಚರವಾಗಿದೆಅವಳ ಕಣ್ಣುಗಳ ಬೆಳಕಿಗಾಗಿ ಕಾಯುತ್ತಿದೆಅವಳ ತೊದಲು ನುಡಿಯಲ್ಲಿ ಪೂರ್ತಿ ಓದಿಸಿಕೊಳ್ಳಲು ತುಡಿಯುತ್ತಿದೆತೆರೆದ ಪುಟದ ಹೂವಿನ ಚಿತ್ರದ ಗುಲಾಬಿ ಅವಳ ಮುದ್ದು ಜೊಲ್ಲುಗೆನ್ನೆಯ ಮೇಲೂಹರಡುತ್ತಿದೆಕಥೆಗೂ ವಾಸ್ತವಕ್ಕೂ ಹೀಗೊಂದು ನಂಟುಅಜ್ಜಿಕುಕ್ಕರಗಾಲಲ್ಲಿ ಕೂತು ಕೊಳವೆ ಊದಿ ನೀನು ಒಲೆ ಹೊತ್ತಿಸುತ್ತಿದ್ದ ಆ ಎಲ್ಲ ನಸುಕುಗಳುನಿನ್ನುಸಿರಿನ ರಭಸಕ್ಕೆ ಹುಚ್ಚೆದ್ದು ಹಾರುತ್ತಿದ್ದ ಬಂಕಿ ಕಿಡಿಗಳ ನರ್ತನವಿರಾಗಿಯೊಬ್ಬನ ಕಣ್ಣುಗಳ ಆಳ, ತಳ ಕಪ್ಪು ಹಿಡಿದ ಪಾತ್ರೆಯ ತಗ್ಗುಗಳಲ್ಲಿಸೌದೆ ಉರಿಯುತ್ತಿದ್ದ ಚಿಟಪಟ ಸದ್ದಿನ ಸುಪ್ರಭಾತಬಿಸಿ ಪಾತ್ರೆ ಕೆಳಗಿಳಿಸಲು ಅ ಪಕ್ಕದಲ್ಲಿಟ್ಟಿದ್ದ ನಿನ್ನ ಹಳೆಯ ಸೀರೆಯ ಮಾಸಿದ ಚೂರುಸುಕ್ಕುಗಟ್ಟಿದ ನಿನ್ನ ಮುದ್ದು ಮೆದು ಕೈಗಳ ಮೇಲೆಅವೇ ಬಿಸಿ ಪಾತ್ರೆಗಳು ಎಂದೋ ಸುಟ್ಟಿದ್ದ ಒಂದೆರಡು ಮಾಸಿದ ಗಾಯನಿದಿರೆಗಣ್ಣಲ್ಲಿ ಎದ್ದು ನಾ ಹೊರಗೆ ಓಡಿ ಬಂದು ನೋಡುವಾಗ ಮನೆಯ ಮೇಲಿನಚಿಮನಿಯಿಂದಮೆಲ್ಲಗೆ ಹೋಗಿ ಅ ಕರಗಿಬಿಡುತ್ತಿದ್ದ ಕಪ್ಪು ಹೊಗೆಪ್ರತಿ ಬೆಳಗಿನ ಆ ನಿನ್ನ ಪ್ರಾರ್ಥನೆ ನೆನಪಿದೆ ಅಜ್ಜಿನಿನ್ನ ಅಷ್ಟೂ ಮೊಮ್ಮಕ್ಕಳಲ್ಲಿ ನಾನೊಬ್ಬಳೇ ನಿನ್ನನ್ನು ಹೋಲುತ್ತೇನೆನ್ನುತ್ತಾರಲ್ಲ ನಿನ್ನೆಲ್ಲ ಮಕ್ಕಳುಆಗೆಲ್ಲ ಒಡಲಲ್ಲಿ ಸಂಕಟದ ಸುಳಿಗಳೇಳುತ್ತವೆನೀ ಹೋದಾಗ ಪುಟ್ಟ ಹುಡುಗನಂತೆ ಬಿಕ್ಕಿದ್ದ ಅಪ್ಪನ ಕಣ್ಣೀರು ಅಲ್ಲಿ ಕೊಚ್ಚಿಹೋಗುತ್ತದೆನಿರೀಕ್ಷೆನನ್ನ ಪುಟ್ಟ ಪ್ರಪಂಚಕ್ಕೀಗ ಹೊಸತನದ ನಿರೀಕ್ಷೆಯ ಪುಳಕಹಸುಳೆಯೊಂದರ ಮೊದಲ ಅಳುವಿನ ಅನುರಣನದ, ನಾದದ ನೀರೀಕ್ಷೆಯ ಪುಳಕಗೆಳತಿಯ ಗರ್ಭದಲ್ಲಿ ಪುಟ್ಟ ಜೀವವೊಂದು ರೂಪತಾಳುತ್ತಿದೆಅವಳೊಂದಿಗೆ ಅವಳೊಳಗೇ ಉಸಿರಾಡುತ್ತಿದೆಇಷ್ಟರ ಅದಕ್ಕೆ ಎಲ್ಲಿಂದಲೋ ಹೇಗೋ ಪುಟ್ಟ ಮೂಗು, ಬಾಯಿ, ಕಣ್ಣುಗಳುಮೂಡಿಬಿಡುತ್ತವೆಎಲ್ಲವೂ ಗರ್ಭದ ಮಹಾಮೌನದಲ್ಲಿಹೊರಗಿನವರಿಗೆ ಕಾಣದ, ಕನಗುವ, ಕಾಡುವ ಕತ್ತಲಲ್ಲಿಗೆಳತಿ, ಸಹೋದ್ಯೋಗಿಯೂಕೆಲವು ದಿನಗಳಲ್ಲಿ ಕೆಲಸ ತೊರೆದುಬಿಡುತ್ತಾಳೆತಾಯಿಯಾಗುತ್ತಾಳೆಅದರ ಬಗ್ಗೆ ನಾವು ಮಾತನಾಡುವುದಿಲ್ಲನನ್ನ ಮೇಜಿನ ಬಳಿ ಆಗಾಗ ಬಂದು ನಿಲ್ಲುತ್ತಾಳೆನನಗಿಂತ ಮೂರು ವರ್ಷಕ್ಕಷ್ಟೇ ಹಿರಿಯಳುನನ್ನನ್ನೂ ಮಗುವೇನೋ ಎಂಬಂತೆ ಮುದ್ದಿಸುತ್ತಾಳೆಎಂದೋ ನಾ ಗೀಚಿದ್ದ ಕವನವೊಂದರ ಸಾಲನ್ನು ನೆನೆಯುತ್ತಾತಾನೇ ಗದ್ಗದಿತಳಾಗುತ್ತಾ ನನ್ನ ತಲೆ ನೇವರಿಸುತ್ತಾಳೆಉಗುರು ಕಚ್ಚುವ ನನ್ನ ದುರಭ್ಯಾಸಕ್ಕೆ ಕಡಿವಾಣ ಹಾಕಲುನನ್ನ ಉಗುರುಗಳಿಗೆ ಮೊದಲಸಲ ಬಣ್ಣ ಬಳಿದ ಗೆಳತಿಯಿವಳುಉಗುರು ದೇಹದ ಕಸ, ಅದಕ್ಕೇಕೆ ಅಲಂಕಾರ, ಎಂದದ್ದಕ್ಕೆ ಕಿವಿ ಹಿಂಡಿ,ಬಾಯ್ಮುಚ್ಚು. ಕೈ ಮುಂದೆ ಚಾಚು, ಎಂದು ಕಟ್ಟಪ್ಪಣೆ ವಿಧಿಸಿದಾಕೆಎಥ್ನಿಕ್ ಡೇ ದಿನ ಅಮ್ಮ ಊರಿನಲ್ಲಿಲ್ಲದಿದ್ದಾಗಸೀರೆ ಉಡಲು ಸಹಾಯ ಮಾಡುತ್ತಾ ನೆರಿಗೆಯನ್ನು ತನ್ನ ಚುರುಕು ಬೆರಳುಗಳಿಂದತಿದ್ದಿ ತೀಡಿದ,ಚೂರೇಚೂರು ದಪ್ಪವಾಗೇ, ಸೀರೆ ಮತ್ತೂ ಚಂದ ಒಪ್ಪುತ್ತದೆ, ಕಡ್ಡಿಗೆ ಸೀರೆ ಸುತ್ತಿದಹಾಗಿದೆ ಈಗ,ಎಂದು ಮೆಲ್ಲಗೆ ನಗುತ್ತಾ ಚುಡಾಯಿಸಿದ ಸಖಿಯೀಕೆನನ್ನ ಕಣ್ಣೆವೆ ಮೇಲೆ ದಿಕ್ಕಾಪಾಲಾಗಿ ಹರಿಯುತ್ತಿದ್ದ ಐ – ಲೈನರ್‌ಗೂ ದಿಕ್ಕು ತೋರಿಸಿದಾಕೆ!ಈಕೆಗೆ ಹೆಣ್ಣು ಮಗುವಾಗಲಿ ಎಂಬ ನನ್ನ ಹಂಬಲದ ಹುಚ್ಚುಇವಳ ಪೂರ್ವಜರು ಲಕ್ನೌದ ಯಾವುದೋ ರಾಜವಂಶದವರುಗರ್ವವಿರದ ಅವಳ ಗಾಂಭೀರ್ಯಕ್ಕೆ, ಅಳೆದು ತೂಗಿ ತೂಕದ ಮಾತಾಡುವ ಪರಿಗೆ ಹೀಗೊಂದು ಹಿನ್ನೆಲೆಹಿಂದಿ, ಉರ್ದುವಿನಲ್ಲಿ ಜೀವ ಹಿಂಡುವಷ್ಟು ಚಂದದ ಕವಿತೆ ಬರೆಯುತ್ತಾಳೆಬರೆದು ಮುಚ್ಚಿಡುತ್ತಾಳೆಆಗಾಗ ಕಾಡಿ, ಬೇಡಿ, ಗೋಗರೆದು, ಬೈದು, ಕೇಳಿ ಓದಬೇಕುಉತ್ಪ್ರೇಕ್ಷೆಯಲ್ಲ, ಅವಳ ಸಾಲುಗಳು, ಬಳಸುವ ಪದಗುಚ್ಛಗಳು,ಆ ನವಿರು, ನೋವು, ದುಗುಡ, ಆವೇಗ, ಹಿಗ್ಗು, ತಲ್ಲಣ, ತವಕ, ಮಿಡಿತ – ತುಡಿತಗಳುಆಗಾಗ ನನಗೆ ಗುಲ್ಜಾರ್‌ರನ್ನು ನೆನಪಿಸುವುದುಂಟುಅವಳ ನಿಷ್ಕಪಟ ಅಕ್ಷರಗಳ ಮಧ್ಯ ಮೋಸವಿಲ್ಲದ, ಮುಖವಾಡ ಧರಿಸದ ಮೌನವುಂಟುತನ್ನ ಕವಿತೆಯ ಮೂಲಕವೇ ನನ್ನನ್ನು ತನ್ನ ಜಗತ್ತಿಗೆ ಪರಿಚಯಿಸಿಕೊಂಡಾಕೆ ಈಕೆಅವಳ ಕಥೆಗಳ ಯಾವ ಲೌಕಿಕ ವಿವರಗಳ ಅರಿವೂ ನನಗಿಲ್ಲಅದರ ಅಗತ್ಯವೂ ಇಲ್ಲಕಥೆಗಳ ವಿವರಗಳ ಬಗ್ಗೆ ಕೆಟ್ಟ ಕುತೂಹಲವಲ್ಲ,ಕಥೆಗಳಿವೆ, ಇವೆ ಕಥೆಗಳು, ಎಂಬ ಸರಳ ಸತ್ಯವಷ್ಟೇ ಸಾಕುಮತ್ತೊಂದು ಜೀವಕ್ಕೆ ಮುಕ್ತವಾಗಿ ತೆರೆದುಕೊಂಡು ಹತ್ತಿರವಾಗಿಬಿಡುವುದಕ್ಕೆಅನಾಥ ಗತಕಾಲದ ಗಾಥೆಗಳಿಗೂ ಕೇಳುಗನೊಬ್ಬ ಸಿಕ್ಕರೆ ತಾಯಿಯೇ ಸಿಕ್ಕಂತೆಯಲ್ಲವಾ?ಅವಳು ಬರೆದ ಕವನಗಳ ನನಗೆ ಬಹಳ ಹತ್ತಿರಾದದ್ದೊಂದಿದೆಅದರಲ್ಲಿ ಅವಳೇ ತನ್ನ ಬಾಲ್ಕನಿಯಲ್ಲಿ ನಿಂತುಸಂಜೆಯೊಂದು ರಾತ್ರಿಯ ಮಡಿಲಲ್ಲಿ ತಲೆಯಿಟ್ಟುತನ್ನನೇ ತಾನು ಮರೆಯುವುದನ್ನು ನೋಡುತ್ತಿzಳೆತಂಗಾಳಿ ಚರ್ಮಕ್ಕೆ ತಾಗುತ್ತಲೇ ಮನದಲ್ಲಿ ಕಲಕಿಹೋದ ನೆನಪುಗಳನ್ನುಒಂದೊಂದಾಗಿ ಸಂತೈಸಿ ತಂತಮ್ಮ ಜಾಗದಲ್ಲಿ ಸ್ಥಿರವಾಗಿ ನಿಲ್ಲುವಂತೆ ಮಾಡುತ್ತಾಳೆಮನಸ್ಸಲ್ಲದೇ ದೇಹಕ್ಕೂ ಇರುವ ನೆನಪುಗಳ ಬಗ್ಗೆ ನಾವ್ಯಾಕೆ ಹೆಚ್ಚು ಬರೆಯುವುದಿಲ್ಲವೆಂಬನನ್ನನು ಪದೇ ಪದೆ ಕಾಡುವ ಪ್ರಶ್ನೆಗೆಖಚಿತವಲ್ಲದಿದ್ದರೂ ಸಾಂತ್ವನ ತರುವಷ್ಟರಮಟ್ಟಿಗಿನ ಉತ್ತರವಾಗಿ ತಾನೇ ನಿಲ್ಲುತ್ತಾಳೆಅವಳ ಆ ಕ್ಷಣದ ಏಕಾಂತಕ್ಕೆ ಭಂಗತಂದುಕೊಳ್ಳದಂತೆಜಾಗರೂಕಳಾಗಿ ನನ್ನನ್ನು ಹತ್ತಿರ ಬಿಟ್ಟುಕೊಳ್ಳುತ್ತಾಳೆಇಷ್ಟೆ ಕವಿತೆಯಲ್ಲಿ, ಹುಚ್ಚುಹಿಡಿಸಿಬಿಡುವ ಅಮೂರ್ತದಲ್ಲಿಸಹೋದ್ಯೋಗಿ ಗೆಳತಿಯಾಗಿ ಗೆಳತಿ ತಾಯಿಯಾಗುವಷ್ಟು ದೊಡ್ಡವಳಾಗಿ ಬೆಳೆದುಬಿಟ್ಟಿzಳೆಮನಸ್ಸಿಗೆ ತೀರಾ ಹತ್ತಿರಾಗಿಬಿಟ್ಟಿzಳೆನಾ ಇದ್ದ ನಿಂತು ನೋಡುತ್ತಾ ನಾನೂ ಬೆಳೆಯುತ್ತಿರುವುದನ್ನು ಮರೆತುಬಿಟ್ಟಿದ್ದೇನೆಅತ್ತ ತಾಯಿಯಲ್ಲ ಇತ್ತ ಮಗುವಲ್ಲನಾನು ಸುಮ್ಮನೆ ನಾನಾಗಿ ಒಂದು ದಿನ ಅವಳ ಜೊತೆ ಅವಳ ಮನೆಯ ಬ್ಯಾಲ್ಕನಿಯಲ್ಲಿ ಕೂತುಏನೇನನ್ನೋ ಮಾತನಾಡಬೇಕಿದೆಅವಳ ಮಗು ನಿzಯಿಂದೆದ್ದು ಅಳಲು ಶುರು ಮಾಡಿದಾಗಇವಳು ನನ್ನನ್ನೂ, ತಾನು ಇಷ್ಟಪಟ್ಟು ಸವಿಯುವ ಸಂಜೆಯಾಗಸವರ್ಣಗಳನ್ನೂ ಮರೆತುಮನೆಯೊಳಗೆ ಗಡಿಬಿಡಿಯಲ್ಲಿ ಓಡಿಹೋಗುವುದ ನೋಡುತ್ತಾನಾ ಮುಗುಳ್ನಗಬೇಕಿದೆ.