ಭವ್ಯ ಭಾರತದ ನಿರ್ಮಾಣಕ್ಕೆ ಒಂದು ಪ್ರೇರಿತ ಯುವಶಕ್ತಿ
ಸಲಹೆ
ಸದ್ಗುರು, ಈಶಾ ಫೌಂಡೇಶನ್‌
೨೦೨೦ನೇ ಇಸವಿಯು ನಮ್ಮಲ್ಲಿ ಅನೇಕರಿಗೆ ಬಹಳ ಸವಾಲಿನ ಸಮಯವಾಗಿತ್ತು. ದೇಶದ ಪ್ರತಿಯೊಬ್ಬ ನಾಗರಿಕರೂ ತಕ್ಕ ಮಟ್ಟಕ್ಕೆ ಬೆಲೆಯನ್ನು ತೆರಬೇಕಾಗಿ ಬಂದಿತು.
ಅದೇ ಸಮಯ, ಭಾರತವು ತಾನು ಹೊಂದಿರುವ ಅಪಾರ ಯುವಶಕ್ತಿಯ ಮೂಲಕ ಪ್ರಚಂಡ ಸಾಧ್ಯತೆಯನ್ನು ಸಾಕಾರಗೊಳಿಸುವ ಹೊಸ್ತಿಲಲ್ಲಿದೆ. ಯುವಜನತೆ ಎಂದರೆ ಮಾನವೀಯತೆಯನ್ನು ಸಾಕಾರಗೊಳಿಸುವ ಪ್ರಕ್ರಿಯಲ್ಲಿರುವವರು. ಅವರಿನ್ನೂ ಪೂರ್ಣಪ್ರಮಾಣದಲ್ಲಿ ಬೆಳವಣಿಗೆ ಕಂಡಿಲ್ಲ. ಈ ಕಾರಣದಿಂದಲೇ, ಅವರಿಗೆ ಜಗತ್ತಿನಲ್ಲಿ ಹೊಸ ಸಾಧ್ಯತೆಯನ್ನು ಸೃಷ್ಟಿಸಲು ಇನ್ನೂ ಅವಕಾಶವಿದೆ.
ಜಗತ್ತಿನಲ್ಲಿ ರಚನಾತ್ಮಕವಾದ ಏನಾದರೂ ಸಂಭವಿಸಬೇಕು ಎಂದರೆ, ಅದು ಯುವಜನರಿಂದಷ್ಟೇ ಆಗಬೇಕು. ಅದೇ ರೀತಿ ಜಗತ್ತಿನಲ್ಲಿ ಏನಾದರೂ ವಿನಾಶಕರ ಸಂಗತಿ ಸಂಭವಿಸಬೇಕು ಎಂದರೂ, ಅದು ಯುವಕರಿಂದಲೇ ಆಗುತ್ತದೆ. ಸಾಮಾನ್ಯವಾಗಿ, ಯುವಕರ ಸ್ವಭಾವವೆಂದರೆ ಅವರಲ್ಲಿ ಹೆಚ್ಚಿನ ಶಕ್ತಿಯಿದ್ದರೂ ಸಹ ಅವರು ಪ್ರತಿಕ್ರಿಯಾತ್ಮಕವಾರುತ್ತಾರೆ.
ಅವರಿಗೆ ಸೂರ್ತಿ ಅಥವಾ ಸರಿಯಾದ ಮಾರ್ಗದರ್ಶನ ಸಿಗದಿದ್ದರೆ, ವ್ಯರ್ಥವಾದ ಅಥವಾ ಏನನ್ನೂ ಮಾಡಲು ತೋಚದ ಶಕ್ತಿಯಾಗಿದ್ದರೆ, ಅವರು ನಕಾರಾತ್ಮಕತೆಯತ್ತ ಮಖ ಮಾಡುತ್ತಾರೆ. ಅವರಲ್ಲಿ ಅಗತ್ಯ ಸ್ಥಿರತೆಯಿದ್ದಿತೆಂದರೆ, ಅವರ ಅಪಾರ ಶಕ್ತಿಯನ್ನು ಸಕಾರಾತ್ಮಕ ಮತ್ತು ರಚನಾತ್ಮಕ ರೀತಿಯಲ್ಲಿ ಬಳಸಿಕೊಳ್ಳಬಹುದು.
ಈ ದೇಶದಲ್ಲಿ ನಾವು ಗಮನ ಹರಿಸಬೇಕಾದ ಪ್ರಮುಖ ಅಂಶವೆಂದರೆ, ಯುವಕರಲ್ಲಿನ ಸಂಪೂರ್ಣ ಸ್ಫೂರ್ತಿಯ ಕೊರತೆಯನ್ನು ನೀಗಿಸುವುದು. ಸರಿಯಾದ ಸೂರ್ತಿ ಇಲ್ಲದೆ, ಯಾರೇ ಆಗಲೀ, ದೈಹಿಕವಾಗಿ, ಮಾನಸಿಕವಾಗಿ ಅಥವಾ ಸಾಮಾಜಿಕವಾಗಿ, ಅವರ ಪ್ರಸ್ತುತ ಮಿತಿಗಳನ್ನು ಮೀರಲಾಗುವುದಿಲ್ಲ. ನಾವು ಹೆಚ್ಚು ಸೂರ್ತಿ ಪಡೆದಾಗಲಷ್ಟೇ, ನಾವು ಎಲ್ಲವನ್ನೂ ಮೀರಿ ಮನುಷ್ಯರು ಸಾಮಾನ್ಯವಾಗಿ ಮಾಡದ ಕೆಲಸಗಳನ್ನು ಮಾಡಲು ಶಕ್ತರಾಗುತ್ತೇವೆ.
ಉದಾಹರಣೆಗೆ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ, ನಾವು ಪ್ರೇರಿತ ಜನಸಂಖ್ಯೆಯನ್ನು ಹೊಂದಿದ್ದವು. ಜನರು ಎಡೆಯಿಂದ ಹೊರಬಂದು ತಮ್ಮ ಜೀವನವನ್ನು ರಾಷ್ಟ್ರಕ್ಕಾಗಿ ತೊಡಗಿಸಿಕೊಳ್ಳಲು ಸಿದ್ಧರಿದ್ದರು. ಆದರೆ ಈ ಐವತ್ತು ವರ್ಷಗಳ ಅವಧಿಯಲ್ಲಿ, ಜನರನ್ನು ಪ್ರೇರೇಪಿಸುವಂಥ ಯಾವುದೇ ಕೆಲಸ ನಮ್ಮಿಂದ ನಡೆದಿಲ್ಲ; ಇದರ ಕಾರಣ ನಮಗೆ ಅಸಮಾಧಾನ ಮತ್ತು ದಿಗ್ಭ್ರಮೆ ಗೊಳಗಾದ ಜನರು ಕಾಣಸಿಗುತ್ತಿzರೆ. ನಮ್ಮ ಯುವಕರಿಗೆ ಮಾಹಿತಿ ಜ್ಞಾನವನ್ನು ರವಾನಿಸಲು ನಾವು ನಮ್ಮ ಸಮಯ, ಸಂಪನ್ಮೂಲಗಳು ಮತ್ತು ಶಕ್ತಿಯನ್ನು ಹೇಗೆ ಹೂಡಿಕೆ ಮಾಡುತ್ತಿರುವೆವೋ, ಅದೇ ರೀತಿಯಲ್ಲಿ ಅವರಲ್ಲಿ ಸೂರ್ತಿ ತುಂಬುವ ನಿಟ್ಟಿನಲ್ಲಿ ಸಹ ಹೂಡಿಕೆ ಮಾಡಬೇಕಾಗುತ್ತದೆ.
ಆಗಷ್ಟೇ, ಸಮಾಜವು ಏಳಿಗೆ ಕಾಣುತ್ತದೆ ಮತ್ತು ಉಪಯುಕ್ತವಾದದ್ದನ್ನು ಮಾಡತೊಡಗುತ್ತದೆ. ಯುವಕರು ಪ್ರೇರಿತರಾಗಲು, ಒಂದು ಪ್ರಮುಖ ಅಂಶವೆಂದರೆ ಮಾನವೀಯತೆಯೊಂದಿಗಿನ ಅವರ ಗುರುತಿಸುವಿಕೆಯು ಕೇವಲ ತಮ್ಮಷ್ಟಕ್ಕೇ ಸೀಮಿತವಾಗಿರಬಾರದು. ಪ್ರಪಂಚದ ಎಲ್ಲರೂ ವಿಭಿನ್ನ ಪ್ರಮಾಣದಲ್ಲಿ ಮಾನವ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸುತ್ತಾರೆ.
ಕೆಲವರಿಗೆ ಮಾನವೀಯತೆಯ ಪರಿಕಲ್ಪನೆ ತಮಗಷ್ಟೇ ಸೀಮಿತವಾಗಿರುತ್ತದೆ, ಇನ್ನು ಕೆಲವರಿಗೆ ಆ ಪರಿಕಲ್ಪನೆ ತಾವು ಮತ್ತು ತಮ್ಮ ಕುಟುಂಬಕ್ಕೆ ಸೀಮಿತಗೊಂಡಿರುತ್ತದೆ. ಯುವಕರು ತಮ್ಮ ಸುತ್ತಲಿನ ಸಮಾಜ ಮತ್ತು ಪ್ರಪಂಚವನ್ನು ತಮ್ಮ ಮಾನವೀಯತೆಯ ಕಲ್ಪನೆಯಲ್ಲಿ ಸೇರಿಸಿಕೊಳ್ಳುವುದು ಮುಖ್ಯವಾಗುತ್ತದೆ. ದುರದೃಷ್ಟವಶಾತ್, ಆಧುನಿಕ ಶಿಕ್ಷಣದಲ್ಲಿ ಇದು ಕಣ್ಮರೆಯಾಗದೆ. ಈ ವ್ಯವಸ್ಥೆ ಜನರು ನಿರಂತರವಾಗಿ ತಮ್ಮ ಬಗ್ಗೆ ಯೋಚಿಸಲು ಮಾತ್ರ ತರಬೇತಿ ನೀಡುತ್ತಿದೆ.
ಇದು ಒಂದು ರೀತಿಯಲ್ಲಿ, ಎಲ್ಲವನ್ನೂ ತಮ್ಮ ಆರಾಮ ಮತ್ತು ಯೋಗಕ್ಷೇಮಕ್ಕಾಗಿ ಬಳಸಿಕೊಳ್ಳುವಂತಹ ಪ್ರವೃತ್ತಿ. ಆರಂಭ ದಲ್ಲಿ, ನಾವು ನಮ್ಮ ಭೂಮಿ, ಮರ – ಗಿಡಗಳು, ಪ್ರಾಣಿ – ಪಕ್ಷಿಗಳನ್ನು ನಮ್ಮ ಹಿತಕ್ಕಾಗಿ ಬಳಸುತ್ತಾ, ಇದೀಗ ಮನುಷ್ಯರನ್ನೂ ಸಹ ಬಳಸಿಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಈ ಶೋಷಣೆಯ ಮನೋಭಾವವು ನಮ್ಮ ಈಗಿನ ಶಿಕ್ಷಣ ವ್ಯವಸ್ಥೆಯ ಮೂಲಕ ಪ್ರಸರಿಸುತ್ತಿದೆ. ನಮಗೆ ಈಗ ತಕ್ಷಣಕ್ಕೆ ಬೇಕಾಗಿರುವುದು ಹೆಚ್ಚು ಅಂತರ್ಗತ ಜಗತ್ತು, ಹೆಚ್ಚು ಅಂತರ್ಗತ ಅರ್ಥಶಾಸ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಒಳಗೊಂಡ ಅಂತರ್ಗತ ಮಾನವ ಪ್ರಜ್ಞೆ.
ಯೋಗ ಅಥವಾ ಅಧ್ಯಾತ್ಮಿಕ ಪ್ರಕ್ರಿಯೆಯ ಮಹತ್ವವೆಂದರೆ ಅದು ಈ ಅಂತರ್ಗತ ಪ್ರಜ್ಞೆಯನ್ನು ಎಲ್ಲರಲ್ಲಿ ತರುತ್ತದೆ. ಯೋಗದ ಮುಖ್ಯ ಗುರಿಯೆಂದರೆ, ಅಸ್ತಿತ್ವವನ್ನು ನಿಮ್ಮದೇ ಭಾಗವನ್ನಾಗಿ ಅನುಭವಿಸುವ ಸ್ಥಿತಿಯನ್ನು ಹೊಂದುವುದು. ನಮ್ಮ ವೈವಿಧ್ಯತೆಯನ್ನು ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಬಳಸಿಕೊಳ್ಳುವುದು. ಜಾತಿ, ಧರ್ಮ, ಮತ ಇವುಗಳನ್ನು ಒಳಗೊಂಡಂತೆ ಒಬ್ಬರು ಯಾವುದೇ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ್ದರೂ ಸಹ, ಇದನ್ನು ಹೇಗೆ ನಾವು ದೇಶದಲ್ಲಿ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನಾಗಿ ಬಳಸಿಕೊಳ್ಳಬಹುದು ಎಂದು ಎಲ್ಲರೂ ನೋಡುವ ಸಮಯ ಬಂದಿದೆ.
ನಿಮ್ಮ ನಂಬಿಕೆಗಳು ಅಥವಾ ಸಂಸ್ಕೃತಿ ಯಾವ ರೀತಿ ಪರಿಹಾರವಾಗಿ ಬಳಕೆಗೆ ಬರಬಹುದು ಎಂಬುದನ್ನು ಮನಗಾಣಿರಿ. ನಿಮ್ಮನಂಬಿಕೆಯು ಕೇವಲ ನಿಮ್ಮೊಳಗಿನ ವೈಯಕ್ತಿಕ ಅನ್ವೇಷಣೆಯಾಗಿರಲಿ. ನಿಮ್ಮ ಜಾತಿ ಈ ರಾಷ್ಟ್ರದ ವಿವಿಧ ಸಂಸ್ಕೃತಿಗಳವೈವಿಧ್ಯತೆಯ ಬಗ್ಗೆ ಇರಲಿ. ನಾವು ಸಿದ್ಧಾಂತ, ನಂಬಿಕೆ, ಜಾತಿ ಮತ್ತು ಧರ್ಮವನ್ನು ನಮ್ಮನ್ನು ಬೇರ್ಪಡಿಸುವ ಶಕ್ತಿಯಾಗಿಬಳಸಬಾರದು.
ನಾವು ಇದೀಗ ಆ ಒಂದು ಹಂತದಲ್ಲಿದ್ದೇವೆ, ಅದರಲ್ಲೂ ವಿಶೇಷವಾಗಿ ಈ ಸಾಂಕ್ರಾಮಿಕ ರೋಗವು ದೇಶಾದ್ಯಂತ ವ್ಯಾಪಿಸಿದ ಈ ಸಮಯದಲ್ಲಿ, ನಾವು ನಮ್ಮಲ್ಲಿರುವ ಬುದ್ಧಿಶಕ್ತಿ, ಜ್ಞಾನ, ಇತಿಹಾಸ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಗಮನಿಸಿದರೆ, ಹಲವು ರಾಷ್ಟ್ರಗಳ ಹೋಲಿಕೆಯಲ್ಲಿ ನಾವು ದೃಡ ಹೆಜ್ಜೆಯನ್ನು ಕಂಡುಕೊಂಡಿಲ್ಲ. ನಮ್ಮ ನಾಗರಿಕರ ಜೀವನಮಟ್ಟದ ದೃಷ್ಟಿಯಿಂದ ನೋಡಿದರೆ, ನಾವು ಏಷ್ಯಾದೊಳಗೂ ಸಹ ಅನೇಕ ದೇಶಗಳೊಂದಿಗೆ ಸಮಾನ ಮಟ್ಟದಲ್ಲಿಲ್ಲ.
ಅನೇಕ ವಿಧಗಳಲ್ಲಿ ನಾವು ಇತರ ರಾಷ್ಟ್ರಗಳ ಹೋಲಿಕೆಯಲ್ಲಿ ಇಪ್ಪತ್ತೈದರಿಂದ ಮೂವತ್ತು ವರ್ಷಗಳವರೆಗೆ ಹಿಂದೆ ಉಳಿದಿ ದ್ದೇವೆ. ಸಾಂಕ್ರಾಮಿಕದ ನಂತರದ ದಿನಗಳು, ನಮಗೆ ಒಳ್ಳೆಯ ಅವಕಾಶವನ್ನು ತಂದುಕೊಟ್ಟಿದೆ. ನಾವು ಒಂದೇ ರಾಷ್ಟ್ರವಾಗಿ ಕಾರ್ಯನಿರ್ವಹಿಸಿದರೆ, ನಮ್ಮ ವೈವಿಧ್ಯತೆಯನ್ನು ಸಾಧ್ಯತೆಯಾಗಿ ಮತ್ತು ಬಹುಮುಖಿ ಅಂಶಗಳನ್ನು ದೊಡ್ಡ ಆಸ್ತಿಯಾಗಿ ಬಳಸಿಕೊಳ್ಳಬಹುದು.
ಸ್ವಾತಂತ್ರ್ಯ ದೊರೆತು ಎಪ್ಪತ್ನಾಲ್ಕು ವರ್ಷಗಳ ನಂತರವೂ, ಭವ್ಯ ಭಾರತದ ಕನಸುಗಳು ಇನ್ನೂ ಒಂದು ಶತಕೋಟಿ ಜನರ ಹೃದಯಗಳಲ್ಲಿ ಮತ್ತು ಮನಸ್ಸಿನಲ್ಲಿ ಜ್ವಲಿಸುತ್ತಿವೆ. ಈ ರಾಷ್ಟ್ರದ ನಿರ್ಮಾಣಕ್ಕಾಗಿ ಒಂದು ಶತಕೋಟಿ ಜನರು ಎದ್ದುನಿಂತರೆ, ಮಾನವೀಯತೆಯ ಇತಿಹಾಸದಲ್ಲಿ ಹಿಂದೆಂದೂ ಆಗದಂತಹುದನ್ನು ನಾವು ಮಾಡಬಹುದು – ಅಂದರೆ, ನಾವು ಒಂದು ದೊಡ್ಡ ಮಟ್ಟದ ಜನರನ್ನು ಒಂದು ಹಂತದ ಜೀವನದಿಂದ ಇನ್ನೊಂದಕ್ಕೆ ಕರೆದೊಯ್ಯಬಹುದು.
ಕೆಲವು ರಾಷ್ಟ್ರಗಳಲ್ಲಿ, ಇದನ್ನು ಬಹಳ ಬಲವಂತದಿಂದ ಮಾಡಲಾಗಿದೆ. ಒಂದು ಪೀಳಿಗೆಯಲ್ಲಿ, ಸುಮಾರು೬೦೦ಮಿಲಿಯನ್ ಜನರನ್ನು ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಂದು ಹಂತದ ಜೀವನದಿಂದ ಇನ್ನೊಂದಕ್ಕೆ ಏರಿಸಿರುವುದು ಹಿಂದೆಂದೂ ನಡೆದಿಲ್ಲ. ಈ ಅವಕಾಶವು ಈ ಪೀಳಿಗೆಯ ಜನರಾದ ನಮ್ಮ ಮುಂದೆ ಇದೆ. ಪ್ರತಿಯೊಬ್ಬ ನಾಗರಿಕರು, ವಿಶೇಷವಾಗಿ ಈ ದೇಶದಯುವಕರು ಈ ಬಗ್ಗೆ ಗಮನಹರಿಸಬೇಕು.
ರಾಷ್ಟ್ರದ ಭವಿಷ್ಯವು ನಿಮ್ಮ ಕೌಶಲ್ಯಗಳು, ನಿಮ್ಮ ದೃಢ ನಿಶ್ಚಯ ಮತ್ತು ಪ್ರೇರಿತ ರೀತಿಯಲ್ಲಿ ನಿಮ್ಮ ಕಾರ್ಯವೈಖರಿಯ ಮೇಲೆಅವಲಂಬಿತವಾಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಾವು ಒಂದು ಶತಕೋಟಿಗೂ ಹೆಚ್ಚು ಜನರ ಕನಸನ್ನುಜೀವಂತ ವಾಸ್ತವವಾಗಿಸಲು ಬಯಸಿದರೆ, ಇದು ಸೂಕ್ತ ಸಮಯ. ಸಾಂಕ್ರಾಮಿಕ ನಂತರದ ದಿನಗಳಲ್ಲಿ ಈ ರಾಷ್ಟ್ರವನ್ನುನಿರ್ಮಿಸಲು ಕೇಂದ್ರೀಕೃತ ಚಟುವಟಿಕೆಯಲ್ಲಿ ಉತ್ಸಾಹವಿರುವಂತೆ ನಾವು ಖಚಿತಪಡಿಸಿಕೊಳ್ಳಬೇಕು.
ನಾವು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಎಂದರೆ ಇನ್ನೂ ಬಹಳಷ್ಟು ಕೆಲಸಗಳು ಬಾಕಿ ಇವೆ. ಆದ್ದರಿಂದ ಯುವಕರು, ವಿಶೇಷವಾಗಿ ಮುಂಬರುವ ಎರಡು ವರ್ಷಗಳಲ್ಲಿ, ಸುಮ್ಮನೆ ಕುಳಿತು ಉದ್ಯೋಗಕ್ಕಾಗಿ ಕಾಯಬಾರದು. ಆ ಮನಸ್ಥಿತಿ ಹೋಗಬೇಕು. ನಮ್ಮ ಸಮಾಜದಲ್ಲಿ ಇರುವ ಅನೇಕ ಸಮಸ್ಯೆ ಗಳಿಗೆ ತಾವು ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಪ್ರತಿಯೊಬ್ಬರೂ ನೋಡಬೇಕು. ಈ ಪರಿಹಾರಗಳನ್ನು ಒದಗಿಸುವ ಮೂಲಕ, ಅವರು ತಮ್ಮ ಬದುಕನ್ನು ಕಂಡುಕೊಳ್ಳಬೇಕು, ಅಭಿವೃದ್ಧಿ ಹೊಂದಬೇಕು ಮತ್ತು ಬೆಳೆಯಬೇಕು, ಆಧುನಿಕತೆ ಹೊಂದಬೇಕು ಮತ್ತು ರಾಷ್ಟ್ರಕ್ಕೆ ಪ್ರಚಂಡ ಸಾಧ್ಯತೆಗಳನ್ನು ಸೃಷ್ಟಿಸಬೇಕು.
ಭವ್ಯ ಭಾರತದ ನಿರ್ಮಾಣದಲ್ಲಿ, ನಮ್ಮಲ್ಲಿ ಪ್ರತಿಯೊಬ್ಬರಿಗೂ, ವಿಶೇಷವಾಗಿ ಈ ರಾಷ್ಟ್ರದ ಯುವಕರಿಗೆ ಒಂದು ಪಾತ್ರವಿದೆ.ನೀವು ಎದ್ದುನಿಂತು ಸರಿಯಾದ ಕೆಲಸಗಳನ್ನು ಮಾಡಬೇಕೆಂದು ನಾನು ನಿಮ್ಮನ್ನು ಕೋರುತ್ತೇನೆ!