ಕೋವಿಡ್’ನ ದೀರ್ಘಕಾಲೀನ ಪರಿಣಾಮಗಳೇನು ?
ವೈದ್ಯವೈವಿಧ್ಯ
ಡಾ.ಎಚ್.ಎಸ್.ಮೋಹನ್‌
ಈ ಕೋವಿಡ್-19 ಕಾಯಿಲೆ ನಮಗೆ ಆಗಾಗ್ಗೆ ಹೊಸ ವಿಷಯಗಳನ್ನು ಮನದಟ್ಟು ಮಾಡಿಕೊಡುತ್ತದೆ. ಇಲ್ಲಿಯವರೆಗೆ ಕೋವಿಡ್ ಕಾಯಿಲೆಯ ಕಡಿಮೆ ಮಟ್ಟದ ಸೋಂಕಿಗೆ ಒಳಗಾದವರಿಗೆ ಆ ನಂತರ ಹೆಚ್ಚಿನ ತೊಂದರೆಯಾಗುವುದಿಲ್ಲ ಎಂಬ ಭಾವನೆಯಿತ್ತು. ಆದರೆ ಈಗಿನ ಒಂದು ಅಧ್ಯಯನ ಆ ಭಾವನೆಯನ್ನು ಸುಳ್ಳು ಮಾಡುತ್ತದೆ.
ಕಡಿಮೆ ಮಟ್ಟದ ಸೋಂಕಿಗೆ ಒಳಗಾದ ರೋಗಿಗಳಲ್ಲಿ ಶೇ.62 ಜನರು ಹಲವು ತಿಂಗಳುಗಳ ನಂತರವೂ ತಮ್ಮ ಮೊದಲಿನ ಆರೋಗ್ಯ ಸ್ಥಿತಿಗೆ ಮರಳಿ ಬರಲಿಲ್ಲ ಎನ್ನುತ್ತದೆ ಈ ಅಧ್ಯಯನ. ಇದರಲ್ಲಿ ಹೆಚ್ಚಿನವರು ತಮಗೆ ವಿಪರೀತ ಸುಸ್ತಾಗುತ್ತಿದ್ದು ತಮ್ಮ ಎಂದಿನ ಮಾಮೂಲಿ ಕೆಲಸಗಳನ್ನು ಮಾಡಲು ತುಂಬಾ ತೊಂದರೆಯಾಗುತ್ತದೆ ಎನ್ನುತ್ತಾರೆ.
ಈ ಅಧ್ಯಯನವನ್ನು ಯು.ಕೆದ ಐರಿಶ್ ಮೆಡಿಕಲ್ ಸೆಂಟರ್‌ನಲ್ಲಿ ಕೈಗೊಳ್ಳಲಾಗಿತ್ತು. ತುಂಬಾ ಕಡಿಮೆ ಪ್ರಮಾಣದ ಕರೋನಾ ಸೋಂಕಿಗೆ ಒಳಗಾಗಿ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಂಡವರಲ್ಲಿಯೂ ಈ ರೀತಿಯ ಸುಸ್ತಿನ ತೊಂದರೆ ಬಹಳ ತಿಂಗಳುಗಳ ನಂತರವೂ ಇತ್ತು. ಸೋಂಕಿಗೆ ಒಳಗಾದ ಒಟ್ಟು ಶೇ.10 ಜನರಲ್ಲಿ ತುಂಬಾ ದೀರ್ಘಕಾಲ ವಿಪರೀತ ಸುಸ್ತು, ನಿದ್ರೆ ಸರಿಯಾಗಿಬರದಿರುವುದು, ಪದೇ ಪದೇ ಉಸಿರು ಕಟ್ಟುವುದು, ಮೆದುಳಿನ ಹಲವು ತೊಂದರೆ ಗಳು -ನೆನಪು ಸರಿಯಾಗಿ ಆಗದಿರುವುದು ಮತ್ತಿತರ ಮಾನಸಿಕ ತೊಂದರೆ ಗಳು-ಇವುಗಳು ತುಂಬಾ ತಿಂಗಳುಗಳವರೆಗೂ ಕಂಡುಬಂದವು.
ಹೂಸ್ಟನ್‌ನ ಮೆಕ್ ಗವರ್ನ್ ಮೆಡಿಕಲ್ ಕಾಲೇಜಿನ ಸೋಂಕು ರೋಗದ ಪ್ರೊಫೆಸರ್ ಡಾ. ಲೂಯಿಸ್ ಆಸ್ಟ್ರಾಸ್ಕೈ ಅವರು ತಾವು ಈ ತರಹದ ಹಲವು ರೋಗಿಗಳನ್ನು ನೋಡಿದ್ದೇನೆ. ಅವರುಗಳ ಮುಖ್ಯ ಲಕ್ಷಣ ಎಂದರೆ ಬಹಳವಾದ ದೈಹಿಕ ಸುಸ್ತು ಹಾಗೂ ಮಾನಸಿಕ ತೊಂದರೆಗಳು ಎನ್ನುತ್ತಾರೆ. ತೀವ್ರತರವಾದ ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳಲ್ಲಿ ನಾವು ಮೊದಲಿನಿಂದ ಈ ತರಹದ ಲಕ್ಷಣಗಳನ್ನು ನೋಡುತ್ತಿದ್ದೆವು. ಆದರೆ ಈಗ ಸೋಂಕು ಕಡಿಮೆ ಇದ್ದ ರೋಗಿಗಳಲ್ಲಿ ಸಹಿತ ಈ ಲಕ್ಷಣಗಳನ್ನು ನೋಡು ತ್ತಿದ್ದೇವೆ ಎನ್ನುತ್ತಾರೆ.
ಈಗಾಗಲೇ ವಿಶ್ವಾದ್ಯಂತ ಹಲವು ತಜ್ಞ ವೈದ್ಯರು, ವಿಜ್ಞಾನಿ ಗಳು ಕಂಡುಕೊಂಡಂತೆ ತೀವ್ರತರವಾದ ಕೋವಿಡ್ ರೋಗಿಗಳಲ್ಲಿ ಹೃದಯ ಮತ್ತು ಕಿಡ್ನಿಗೆ ತೀವ್ರತರವಾದ ಹಾನಿ, ಶ್ವಾಸಕೋಶಗಳು ಸರಿಯಾಗಿ ಕೆಲಸ ಮಾಡದಿರುವುದು ಅಲ್ಲದೆ ಮಾನಸಿಕ ತೊಂದರೆ ಅದರಲ್ಲಿಯೂ ಮಾನಸಿಕ ಖಿನ್ನತೆ () ಬಹಳವಾಗಿ ಕಂಡುಬರುತ್ತಿವೆ.
ಡಬ್ಲಿನ್‌ನ ಸೇಂಟ್ ಜೇಮ್ಸ್ ಆಸ್ಪತ್ರೆಯಲ್ಲಿ ಕೈ ಗೊಂಡ ಈ ಅಧ್ಯಯನವನ್ನು ಮಾರ್ಚ್ ಮತ್ತು ಮೇ 2020ರಲ್ಲಿ ಕೋವಿಡ್ ಕಾಯಿಲೆಗೆ ಒಳಗಾದ 153 ರೋಗಿಗಳಲ್ಲ75 ದಿವಸಗಳ ನಂತರ ಕೈಗೊಳ್ಳಲಾಗಿತ್ತು. ಅದರಲ್ಲಿ ಅರ್ಧದಷ್ಟು ರೋಗಿಗಳು ಆಸ್ಪತ್ರೆಗೆ ದಾಖ ಲಾದವರು, ಇನ್ನರ್ಧ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಂಡವರು. ಈ ಎರಡೂ ಗುಂಪಿನ ರೋಗಿ ಗಳಲ್ಲಿ ತೀವ್ರತರವಾದ ಸುಸ್ತಿನ ಲಕ್ಷಣಗಳು ಇದ್ದವು. ಈ ಅಧ್ಯಯನದ ಮುಖ್ಯಸ್ಥ ಡಾ.ಲಿಯಾಮ್ ಟೌನ್ ಸೆಂಡ್ ಕೆಲವು ಧನಾತ್ಮಕ ಅಂಶಗಳೂ ಈ ಅಧ್ಯಯ ನದಲ್ಲಿ ಕಂಡುಬಂದವು ಎಂದು ನುಡಿಯುತ್ತಾರೆ.
ಅವರಲ್ಲಿ ಶೇ.4 ಜನರಲ್ಲಿ ಮಾತ್ರ ಶ್ವಾಸಕೋಶದ ಎಕ್ಸ್‌ ರೇಯಲ್ಲಿ ತೊಂದರೆ ಕಂಡುಬಂದಿತು. ಹಾಗಾಗಿ ಉಸಿರಾಟದ ತೊಂದರೆ ಶ್ವಾಸಕೋಶದ ಹಾನಿಯಿಂದ ಉಂಟಾಗಿದ್ದಲ್ಲ. ಬಹುಶಃ ತೀವ್ರತರವಾದ ಸುಸ್ತು, ಹೃದಯ ಮತ್ತು ರಕ್ತನಾಳಗಳ ವ್ಯವಸ್ಥೆಯಲ್ಲಿಆದ ಏರುಪೇರು ಮತ್ತು ಮಾಂಸಖಂಡಗಳಲ್ಲಿ ಉಂಟಾದ ತೊಂದರೆಯಿಂದ ಉಂಟಾದವು ಎಂದು ಅಭಿಪ್ರಾಯ ಪಡುತ್ತಾರೆ. ಅದರಲ್ಲಿಯೂ ಕಡಿಮೆ ಮಟ್ಟದ ಸೋಂ ಕಿನ ರೋಗಿಗಳಲ್ಲಿ ಕಂಡುಬರುವ ತೀವ್ರ ತರವಾದ ಸುಸ್ತಿನ ಕಾರಣ ಸರಿಯಾಗಿ ತಿಳಿಯುತ್ತಿಲ್ಲ ಎಂದು ಅವರ ಅಭಿಮತ. ಈ ರೀತಿಯ ಲಕ್ಷಣಗಳಿಗೆ ಏನು ಮಾಡಬೇಕು ಎಂಬುದು ಈಗಿನ ಚರ್ಚೆಯ ವಿಷಯ ಎಂದು ಅವರು ನುಡಿಯುತ್ತಾರೆ.
ತಮ್ಮ ಆಸ್ಪತ್ರೆಯಲ್ಲಿ ಈ ರೀತಿಯ ರೋಗಿಗಳ ಈ ಲಕ್ಷಣಗಳ ಜವಾದ ಕಾರಣಗಳನ್ನು ಹುಡುಕಲು ಶ್ವಾಸಕೋಶದ ಹಾನಿಯಪ್ರಮಾಣ ಮತ್ತು ಹೃದಯದ ಮಾಂಸಖಂಡಗಳಿಗೆ ಆದ ಹಾನಿಯ ಪ್ರಮಾಣವನ್ನು ಅಳೆಯಲಾಯಿತು. ಕೆಲವರಲ್ಲಿ ಆಹಾರ ದಲ್ಲಿನ ಕೆಲವು ಅಂಶಗಳ ಕೊರತೆ ಇದಕ್ಕೆ ಕಾರಣ ಎಂದು ಗೊತ್ತಾಯಿತು. ಹೆಚ್ಚಿನವರಲ್ಲಿ ಕಾರಣ ಹುಡುಕಲು ಸಾಧ್ಯವಾಗಲಿಲ್ಲ ಎಂದು ಆಸ್ಟ್ರೋ ಸ್ಕಿ ನುಡಿಯುತ್ತಾರೆ. ಕೆಲವರಲ್ಲಿ ಮಾನಸಿಕ ಲಕ್ಷಣಗಳು -ಅದರಲ್ಲಿ ಯೂ ತೀವ್ರವಾದ ಮಾನಸಿಕ ಆತಂಕ, ಮಾನಸಿಕ ಖಿನ್ನತೆ ಮತ್ತು ಇತರ ಮಾನಸಿಕ ಒತ್ತಡಗಳು ಕಾರಣವಾಗಿ ರಬಹುದು ಎಂದು ಭಾವಿಸಲಾಗಿದೆ.
ನರವ್ಯೂಹಗಳಲ್ಲಿ ತೊಂದರೆ: ಇತ್ತೀಚಿನ ಮತ್ತೊಂದು ಅಧ್ಯಯನ ಈ ಕೋವಿಡ್ ಸಾಂಕ್ರಾಮಿಕ ಉಂಟು ಮಾಡಿದ ನರಗಳ ತೊಂದರೆಯನ್ನು ಎತ್ತಿ ತೋರಿಸುತ್ತದೆ. ಈ ಸಾಂಕ್ರಾಮಿಕ ದೀರ್ಘಕಾಲದ ನರಗಳ ತೊಂದರೆ ಯನ್ನು ಅದರಲ್ಲಿಯೂ ಮೆದುಳಿನ ನಿರ್ಧಾ ರ ತೆಗೆದು ಕೊಳ್ಳುವ ಗುಣ ಕಡಿಮೆಯಾಗಿ ಚಿತ್ತ ವೈಕಲ್ಯ () ಹೆಚ್ಚು ಕಂಡು ಬರುತ್ತದೆ ಎನ್ನುತ್ತದೆ ಆ ಅಧ್ಯಯನ. ಈಗಾಗಲೇ ಜಗತ್ತಿನಾದ್ಯಂತ 88 ಮಿಲಿಯನ್‌ಗಿಂತಲೂ ಅಧಿಕ ಜನರಲ್ಲಿ ಕಂಡು ಬಂದ ಈ ಕೋವಿಡ್ ಕಾಯಿಲೆ ಈಗ ತನ್ನ ದೀರ್ಘ ಕಾಲದ ಪ್ರತಾಪವನ್ನು ತೋರಿಸಲು ಆರಂಭಿ ಸಿದೆ.
ಈ ಕಾಯಿಲೆಯ ವೇಗವನ್ನು ಕಡಿಮೆ ಮಾಡಲು ಮತ್ತು ರೋಗ ಲಕ್ಷಣಗಳ ತೀವ್ರತೆಯನ್ನು ತಗ್ಗಿಸಲು ಹಲವಾರು ಅಧ್ಯಯನಗಳು ಜಗತ್ತಿನಾದ್ಯಂತ ನಡೆ ಯುತ್ತಿವೆ. ಕೆಲವು ವೈದ್ಯ ವಿಜ್ಞಾನಿಗಳು ಕೋವಿಡ್ ನಂತರದ ಜೀವನ ಹೇಗಿರಬಹುದು ಎಂಬ ಬಗ್ಗೆ ತಮ್ಮ ಅಭಿಪ್ರಾಯವನ್ನು ಕ್ರೋಢೀಕರಿಸುತ್ತಿದ್ದಾರೆ. ಇತ್ತೀಚಿನ ಆಲ್ಜೀಮರ್ಸ್ ಮತ್ತು ಡಿಮೆನ್ಷಿಯಾ ಜರ್ನಲ್‌ನಲ್ಲಿ ಪ್ರಕಟವಾದ ಒಂದುಲೇಖನ ಹಿಂದಿನ ಹಳೆಯ ಹಲವು ರೀತಿಯ ಕಾಯಿಲೆಗಳ ಬಗ್ಗೆ ಗಮನಹರಿಸಿ ಅಧ್ಯಯನ ಮಾಡಲಾಯಿತು.
ಒಂದು ಶತಮಾನದ ಮೊದಲು ಸಂಭವಿಸಿದ ಗ್ರೇಟ್ ಸ್ಪಾನಿಷ್ – ಕಾಯಿ ಲೆಯ ಬಗ್ಗೆಯೂ ಈ ಅಧ್ಯಯನದಲ್ಲಿ ಗಮನ ಹರಿಸಲಾ ಯಿತು. ನ್ಯೂರೋಟ್ರೋಪಿಕ್ ವೈರಸ್: ಕೋವಿಡ್ ಉಂಟು ಮಾಡುವ ಸಾರ್ಸ್ ಸಿ.ಓ.2 ವೈರಸ್ ಅನ್ನು ವಿಜ್ಞಾನಿಗಳುನ್ಯೂರೋಟ್ರೋಪಿಕ್ ವೈರಸ್ ಎಂದು ಪರಿಗಣಿ ಸುತ್ತಾರೆ.
ಏಕೆಂದರೆ ಈ ವೈರಸ್, ನರಜೀವಕೋಶಗಳ ಒಳಗೆ ಪ್ರವೇಶಿಸುತ್ತದೆ. ಇನ್ನಿತರ ನ್ಯೂರೋಟ್ರೋಪಿಕ್ ವೈರಸ್ ಗಳೆಂದರೆ ಮಂ (ಮಂಗನ ಬಾವು), ರೇಬೀ ಸ್ ಮತ್ತು ಎಪ್ ಸ್ಟಿನ್ ಬಾರ್ ವೈರಸ್‌ಗಳು. ಕೆಲವು ಈ ರೀತಿಯ ವೈರಸ್‌ಗಳು ಕಡಿಮೆ ಪ್ರಮಾಣದ ರೋಗ ಲಕ್ಷಣಗಳನ್ನು ತೋರಿಸಿದರೆ ಮತ್ತೆ ಕೆಲವು ಮೆದುಳಿನಲ್ಲಿ ಊತ, ಪಾರ್ಶ್ವವಾಯು ಮತ್ತು ವ್ಯಕ್ತಿಗೆ ಮರಣವನ್ನು ಉಂಟು ಮಾಡಬಲ್ಲವು. ಕೆಲವು – ವೈರಸ್‌ಗಳು ಈಗಿನ ಕರೋನಾ ವೈರಸ್‌ನಂತೆಯೇ ನ್ಯೂರೋಟ್ರೋ ಪಿಕ್ ವೈರಸ್‌ಗಳು. ಆ ವೈರಸ್‌ಗಳು ದೀರ್ಘಕಾಲದ ಪರಿಣಾಮಗಳನ್ನು ಏನು ಉಂಟು ಮಾಡಿದ್ದವು ಎಂಬುದರ ಬಗ್ಗೆ ಸಂಶೋಧಕರು ಗಮನ ಹರಿಸಿದರು.
1917, 1918ರ – ಸಾಂಕ್ರಾಮಿಕ ಹಾಗೂ ಇನ್ನೂ ಕೆಲವು – ಸಾಂಕ್ರಾಮಿಕಗಳು ಹಲವು ಮೆದುಳಿನ ಸಮಸ್ಯೆಗಳ ಜತೆಗೆ ತಳುಕು ಹಾಕಿಕೊಂಡಿವೆ ಎಂದು ಈ ಮೇಲಿನ ಅಧ್ಯಯನದ ಮುಖ್ಯಸ್ಥ ಡಾ ಗೇಬ್ರಿಯಲ್ ಎ.ಡಿ. ಎರಾಸ್ಕ್ವಿನ್ ಅವರು ಹೇಳುತ್ತಾರೆ. ಇವರು ಸಾನ್ ಆಂಟೋನಿಯೋದ ಯುನಿವರ್ಸಿಟಿ ಆಫ್ ಟೆಕ್ಸಾಸ್ ಹೆಲ್ತ ಸೈ ಕೇಂದ್ರದಲ್ಲಿ ನರರೋಗ ಶಾಸದ ಪ್ರೊಫೆಸರ್. ಮೊದಲು ಕಾಣಿಸಿಕೊಂಡಿದ್ದ ಶ್ವಾಸಕೋಶಕ್ಕೆ ಹಾನಿ ಉಂಟು ಮಾಡುವ ವೈರಸ್‌ಗಳಾದ ಎಚ್೧ಎನ್೧ಮತ್ತು ಸಾರ್ಸ್ ಸಿ ಓ ವೈರಸ್‌ಗಳೂ ಮೆದುಳು ಮತ್ತು ನರಗಳಿಗೆ ಹಾನಿ ಉಂಟು ಮಾಡಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹಲವು ವೈದ್ಯ ವಿಜ್ಞಾನಿಗಳ ಪ್ರಕಾರ ಈ ವೈರಸ್ ಸೋಂಕುಗಳಿಗೆ ಒಳಗಾದ ರೋಗಿ ಗಳು ಭವಿಷ್ಯದಲ್ಲಿ ಆಲ್ಜೀಮರ‍್ಸ್, ಪಾರ್ಕಿನ್ಸನ್ ಕಾಯಿಲೆ ಮತ್ತು ಹಲವು ರೀತಿಯ ಮಾನಸಿಕ ಕಾಯಿಲೆಗೆ ಒಳಗಾಗುವ ಸಾಧ್ಯತೆಗಳಿವೆ. ಈಗಾಗಲೇ ಎಲ್ಲರಿಗೆ ಗೊತ್ತಿರುವಂತೆ ಕೋವಿಡ್ 19 ಕಾಯಿಲೆಗೆ ಒಳಗಾದ ಕೆಲವರಲ್ಲಿ ಏನೂ ರೋಗ ಲಕ್ಷಣಗಳೇ ಇರುವುದಿಲ್ಲ. ಮತ್ತೆ ಕೆಲವರಲ್ಲಿ ಸಾಮಾನ್ಯದಿಂದಹೆಚ್ಚಿನ ಲಕ್ಷಣಗಳು ಇರುತ್ತವೆ. ಮುಖ್ಯವಾದ ಲಕ್ಷಣಗಳೆಂದರೆ-ಒಣ ಕೆಮ್ಮು, ಜ್ವರ, ಉಸಿರಾಟದ ತೊಂದರೆಗಳು.
ಇದರಲ್ಲಿ ಶೇ. 15-20 ರೋಗಿಗಳಲ್ಲಿ ನರಕ್ಕೆ ಸಂಬಂಧಪಟ್ಟ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅವೆಂದರೆ-ರುಚಿ ಮತ್ತು ವಾಸನೆಯ ಸಂವೇದನೆಗಳು ನಾಶವಾಗುವುದು, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಮತ್ತು ಬಹಳ ದಿನಗಳಿಂದ ಇರುವ ತಲೆನೋವು. ವಾಸನೆಯ ನಾಶ ಆರಂಭದಲ್ಲಿ ಅಷ್ಟು ಗಂಭೀರ ಅನಿಸದಿದ್ದರೂ, ಅದು ನೇರವಾಗಿ ಮೆದುಳಿನ ಕೆಲಸಕ್ಕೆ ಸಂಬಂಧಪಟ್ಟಿದ್ದರಿಂದ ಮುಖ್ಯವಾಗುತ್ತದೆ. ನರ ಜೀವಕೋಶ ಕೋವಿಡ್‌ನ ದೀರ್ಘಕಾಲೀನ ಪರಿಣಾಮಗಳೇನು?
ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಬಹುಭಾಗಗಳಲ್ಲಿ ಕಾಣಬಹುದು. ಇಂತಹ ಶೌರ್ಯಭರಿತ ಇತಿಹಾಸ ವುಳ್ಳ ಕನ್ನಡ ನಾಡನ್ನು ಪ್ರತಿನಿಧಿಸುತ್ತಿರುವ ಇಂದಿನ  ಜನಪ್ರತಿನಿಧಿಗಳು ನಾಡಿನ ನೆಲ, ಜಲ, ಭಾಷೆ ರಕ್ಷಣೆಯ ವಿಷಯದಲ್ಲಿ ಸ್ವಾಭಿಮಾನವನ್ನು ಮರೆತು  ಗುಲಾಮರಂತೆ ವರ್ತಿಸುತ್ತಿದ್ದಾರೆ. ಗಳ ಒಳಗೆ ಹೋಗಲು ಸಾರ್ಸ್ ಸಿ.ಓ 2 ವೈರಸ್ ಜೀವ ಕೋಶಗಳ ಹೊರಭಾಗದ ಮೆಂಬ್ರೇನ್‌ನಲ್ಲಿ ಇರುವ ಏಸ್ ರಿಸೆಪ್ಟಾರ್‌ಗಳಿಗೆ ತಳುಕಿಹಾಕಿಕೊಳ್ಳುತ್ತವೆ. ವಾಸನೆ ಗ್ರಹಿಸುವ ಮುಖ್ಯ ಭಾಗವಾದ ಆಲ್ ಫ್ಯಾಕ್ಟರಿ ಬಲ್ಬನಲ್ಲಿ ಈ ರೀತಿಯ ರಿಸೆಪ್ಟಾರ್‌ಗಳು ತುಂಬಾ ಅಧಿಕೃತ ವಾಗಿರುತ್ತವೆ.
ವಾಸನೆಯ ಸಂವೇದನೆ ಈ ಆಲ್ ಫ್ಯಾಕ್ಟರಿ ಬಲ್ಬ್ ಮೂಲಕವೇ ಮೆದುಳಿಗೆ ಹೋಗುವುದು. ಅಲ್ಲದೇ ಈ ಆಲ್ ಫ್ಯಾಕ್ಟರಿ ಬಲ್ಬ ಮೆದುಳಿನ ಹಿಪ್ರೋ ಕ್ಯಾಂಪಸ್ ಭಾಗದಲ್ಲಿ ನೆನಪಿಗೆ ಸಂಬಂಧಪಟ್ಟ ಭಾಗವಿದೆ. ಡಾ. ಎರಾಸ್ಕ್ವನ್ ಪ್ರಕಾರ ಮೆದುಳಿಗೆ ಆಕ್ರಮಣ ಮಾಡುವ ಈ ವೈರಸ್ ನೇರವಾಗಿ ಹಿಪ್ರೋಕ್ಯಾಂಪಸ್ ಭಾಗಕ್ಕೆ ಹೋಗುತ್ತದೆ. ಹಾಗಾಗಿಯೇ ಈ ತರಹದ ರೋಗಿಗಳಲ್ಲಿ ನೆನಪಿಗೆ ಸಂಬಂಧಪಟ್ಟ ಲಕ್ಷಣ ಅಂದರೆ ತೀವ್ರ ರೀತಿಯ ಮರೆವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಈ ರೀತಿಯ ರೋಗಿಗಳಲ್ಲಿ ಮೆದುಳಿನ ಭಾಗದಲ್ಲಿ ದ್ರವ ಶೇಖರಣೆ, ಮೆದುಳಿನಲ್ಲಿ ಉರಿಯೂತ ( ) ಮತ್ತು ಫಿಟ್ಸ್ ರೀತಿಯ ಕಂಪನ ಕಾಣಿಸಿಕೊಳ್ಳಬಹುದು.
ದೀರ್ಘಕಾಲೀನ ಕೋವಿಡ್ ರೋಗಿಗಳಲ್ಲಿ ಶ್ವಾಸಕೋಶಗಳಿಗೆ ತೀವ್ರ ರೀತಿಯ ಹಾನಿ ಉಂಟಾಗಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಈ ಹಾನಿಯನ್ನು ಚಿಕಿತ್ಸೆ ಮಾಡಿ ರಿಪೇರಿ ಮಾಡಲು ಸಾಧ್ಯವಿಲ್ಲ. ಅಲ್ಲದೇ ಕೋವಿಡ್ ಕಾಯಿಲೆಯ ಪರಿಣಾಮ ಶ್ವಾಸಕೋಶಕ್ಕಿಂ ತಲೂ ದೇಹದ ಬೇರೆ ಅಂಗಗಳಿಗೂ ಬಹಳಷ್ಟು ಹಾನಿ ಯಾಗಬಹುದು. ಈ ವೈರಸ್ ಮೆದುಳಿನ ಬ್ರೇನ್‌ಸ್ಟೆಮ್‌ಗೆ ಉಂಟು ಮಾಡುವಹಾನಿಯಿಂದ ಶ್ವಾಸಕೋಶದ ಹಾನಿ ಮತ್ತು ಕರುಳು ಮತ್ತು ಹೊಟ್ಟೆಯ ಭಾಗದ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆಎನ್ನಲಾಗಿದೆ.
ಹಾಗಾಗಿ ಈ ಕರೋನಾ ವೈರಸ್ ಮೆದುಳಿಗೆ ಹಾನಿ ಉಂಟು ಮಾಡುವುದರಿಂದ ಕಡಿಮೆ ರೀತಿಯ ಸೋಂಕು ಕಾಣಿಸಿಕೊಂಡ ರೋಗಿಗಳಲ್ಲಿ ಹಲವು ತಿಂಗಳು ಮತ್ತು ವರ್ಷಗಳ ನಂತರವೂ ತೀವ್ರ ರೀತಿಯ ವಿವಿಧ ತೊಡಕುಗಳು () ಕಾಣಿಸಿ ಕೊಳ್ಳುವ ಸಾಧ್ಯತೆಯಿದೆ. ಆದರೆ ಈ ಕೋವಿಡ್ ಕಾಯಿಲೆ ತೀರಾ ಹೊಸ ಕಾಯಿಲೆಯಾದ್ದರಿಂದ ದೂರದ ಪರಿಣಾ ಮಗಳ ಬಗ್ಗೆ ಇನ್ನೂ ತೀವ್ರ ರೀತಿಯ ಅಧ್ಯಯನ ನಡೆಯಬೇಕಿದೆ ಎನ್ನುವುದು ವಿeನಿಗಳ ಅಭಿಮತ. ಈ ರೀತಿ ಬೇರೆ ವೈರಸ್‌ಗಳಂತೆಯೇ ಈ ವೈರಸ್ ಸಹಿತ ನೆನಪು, ವ್ಯಕ್ತಿಯ ವರ್ತನೆಯ ಮೇಲೆ ಪ್ರಭಾವ ಬೀರಿ ಬೀರುವ ಮೆದುಳಿನ ಭಾಗದ ಮೇಲೆ ಬಹಳ ತೀವ್ರ ರೀತಿಯ ಪರಿಣಾಮ ಹೊಂದಿದೆ ಎಂದು ಮೊದಲು ತಿಳಿಸಿದ ಆಲ್ಜೀಮರ್ಸ್ ಮತ್ತು ಡಿಮೆನ್ಷಿಯಾ ಲೇಖನದಲ್ಲಿ ಪ್ರತಿಪಾದಿಸಲಾಗಿದೆ.
ನ್ಯಾನೊ ಪಾರ್ಟಿಕಲ್ ಮೂಲದ ವ್ಯಾಕ್ಸಿನ್ :ಕೋವಿಡ್-19 ಕಾಯಿಲೆ ತಡೆಯುವ ನಿಟ್ಟಿನಲ್ಲಿ ವ್ಯಾಕ್ಸೀನ್ ಗಳ ಬಗ್ಗೆ ಈವರೆಗೆ ನೀವು ಬಹಳಷ್ಟು ಸುದ್ದಿಗಳನ್ನು ಕೇಳಿದ್ದೀರಿ. ಭಾರತದಲ್ಲಿ ಕೋವಿಶೀಲ್ಡ ಮತ್ತು ಕೋವ್ಯಾಕ್ಸೀನ್‌ಗಳು ಪ್ರಯೋಗವಾಗುತ್ತಿದ್ದರೆ ಅಮೆರಿಕ ದಲ್ಲಿ ಫೈಜರ್ ಮತ್ತು ಮಾಡೆನಾರ್ ವ್ಯಾಕ್ಸೀನ್ ಬಳಕೆಯಲ್ಲಿವೆ. ಇಂಗ್ಲೆಂಡಿನಲ್ಲಿ ಆಕ್ಸ್ ಫರ್ಡ್ ಜನೈಕಾ ವ್ಯಾಕ್ಸೀನ್ಬಳಕೆಯಲ್ಲಿದೆ. ಅಮೆರಿಕದ ವ್ಯಾಕ್ಸೀನ್‌ಗಳನ್ನು ತೀರಾ ಕಡಿಮೆ ತಾಪಮಾನದಲ್ಲಿ ಇಟ್ಟು ಬಳಸಬೇಕಾದ್ದರಿಂದ ಅವು ಜಗತ್ತಿನ ಹಲವಾರು ಬಡ ದೇಶಗಳಿಗೆ ಉಪಯೋಗವಾಗುವುದಿಲ್ಲ.
ಹಾಗಾಗಿ ಹಳೆಯ ರೀತಿಯ ವ್ಯಾಕ್ಸೀ ನ್ ಗಳು ಜೆನೆಟಿಕ್ ರೀತಿಯ ಮಾರ್ಪಾಡು ಹೊಂದಿದ ವೈರಸ್ ಅಥವಾ ಸತ್ವಹೀನ ಮಾಡಿದ ಬಲಹೀನ ಮಾಡಿದ ವೈರಸ್ ಒಳಗೊಂಡ ವ್ಯಾಕ್ಸೀನ್ ಈ ರೀತಿಯ ಮಧ್ಯಮ ಮತ್ತು ಬಡ ದೇಶಗಳಿಗೆ ಅನುಕೂಲ. ಆದರೆ ಅವುಗಳನ್ನು ಅಭಿವೃದ್ಧಿ ಪಡಿಸಲು ತುಂಬಾ ದೀರ್ಘ ಕಾಲ ಬೇಕು. ಹಾಗೂ ಹಲವು ಪಾರ್ಶ್ವ ಪರಿಣಾಮಗಳೂ ಉಂಟಾಗಬಹುದು. ಹಾಗಾಗಿ ಅಮೆರಿಕದ ಸ್ಟಾನ್ ಫರ್ಡ್ ವಿಶ್ವವಿದ್ಯಾನಿಲಯದ ಜೀವ ರಸಾಯನ ಶಾಸ್ತ್ರ ವಿಜ್ಞಾನಿಗಳು ನ್ಯಾನೋ ಪಾರ್ಟಿಕಲ್ ತಳಹದಿಯ ಕೋವಿಡ್-19ವ್ಯಾಕ್ಸೀನ್‌ನ ಪ್ರೋಟೋ ಟೈಪ್ ತಯಾರಿಸಿದ್ದಾರೆ.
ಇದು ಕಡಿಮೆ ಬೆಲೆಯದ್ದು, ಪರಿಣಾ ಮಕಾರಿ, ಸಾಮಾನ್ಯ ಕೊಠಡಿಯ ತಾಪಮಾನದಲ್ಲಿಯೂ ಇರಿಸಬಹುದು. ಅಲ್ಲದೆ ಅದನ್ನು ಫ್ರೀಜ್ ಮಾಡಿ ಪೌಡರ್ ರೂಪಕ್ಕೆ ತಂದು ನಂತರ ಹಡಗಿನಲ್ಲಿ ಬಹಳ ದೂರ ಸಾಗಿಸಬಹುದು ಎನ್ನಲಾಗಿದೆ. ಅಲ್ಲದೆ ಇದು ಒಂದೇ ಡೋಸ್‌ನ ವ್ಯಾಕ್ಸೀನ್. ಇದು ಫೆರಿಟಿನ್ ಎಂಬ ಕಬ್ಬಿಣದ ಅಂಶ ಇರುವ ಪ್ರೋಟೀನ್ ನ ತುಂಬಾ ಕಡಿಮೆ ಗಾತ್ರದ ನ್ಯಾನೋ ಪಾರ್ಟಿಕಲ್‌ಗಳನ್ನು ಒಳಗೊಂಡಿದೆ. ಈ ಫೆರಿಟಿನ್ ನ್ಯಾನೋ ಪಾರ್ಟಿಕಲ್‌ನಲ್ಲಿ ವೈರಸ್ ಮಾನವ ಜೀವಕೋಶಗಳನ್ನು ಭೇದಿಸಿ ಉಂಟು ಮಾಡುವ ರೀತಿಯ ಸ್ಪೈಕ್ ಪ್ರೋಟೀನ್‌ಗಳನ್ನು ಅಳವಡಿಸಿ ತಯಾರಿಸಲಾಗಿದೆ.
ನ್ಯಾನೋ ಪಾರ್ಟಿಕಲ್‌ನ ಒಂದೇ ಒಂದು ಡೋಸ್ ಪ್ರಾಣಿಯ ದೇಹದೊಳಗೆ ನ್ಯೂಟ್ರಲೈಸಿಂಗ್ ಆಂಟಿಬಾಡಿಯನ್ನು ಹುಟ್ಟು ಹಾಕುತ್ತದೆ. ಈ ಆಂಟಿಬಾಡಿಗಳು ವೈರಸ್ ಮಾನವ ಜೀವಕೋಶಗಳ ಒಳಗೆ ಹೋಗುವುದನ್ನು ತಡೆಯುತ್ತವೆ. ಇತ್ತೀಚಿಗೆ ಕೋವಿಡ್ ಕಾಯಿಲೆಯಿಂದ ಗುಣವಾದವರಲ್ಲಿರುವ ಆಂಟಿಬಾಡಿಗಳ ಎರಡರಷ್ಟು ಪ್ರಮಾಣದ ಆಂಟಿಬಾಡಿಗಳನ್ನು ಈ ವ್ಯಾಕ್ಸಿನ್ ಉತ್ಪಾದಿ ಸುತ್ತದೆ. ಈಗ ಬಳಕೆಯಲ್ಲಿರುವ ಎಲ್ಲಾ ವ್ಯಾಕ್ಸೀನ್‌ಗಳೂ ಎರಡನೇ ಡೋಸ್ ನಂತರವೇ ಆಂಟಿಬಾಡಿಗಳನ್ನು ಹುಟ್ಟು ಹಾಕು ವುದು. ಹಾಗಾಗಿ ಇದರ ಬಗ್ಗೆ ಮತ್ತೂ ಸಂಶೋಧನೆ ಕೈಗೊಂಡು ಸೂಕ್ತ ರೀತಿಯಲ್ಲಿ ಹೊರಗೆ ಬಂದರೆ ಇದೇ ಉತ್ತಮ ವ್ಯಾಕ್ಸೀನ್ ಆಗಬಹುದು.