ಬಿಡೆನ್ ನಿನ್ನ ಪಾದ ಅಂತ ಬದಲಾಗ್ಬಿಡ್ತಾರೆ
ತುಂಟರಗಾಳಿ
ಹರಿ ಪರಾಕ್
ನೆಟ್ ಪಿಕ್ಸ್ಇಂಡಿಯಾ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿತ್ತು. ಪಾಕಿಸ್ತಾನದ ಸೈನ್ಯ ಕಂಗೆಟ್ಟು ಹೋಗಿತ್ತು. ಅದಕ್ಕೆ ಕಾರಣ ಯುದ್ಧ ದಲ್ಲಿ ಆಗುತ್ತಿದ್ದ ಹಿನ್ನಡೆ. ಅದರ ಜತೆಗೆ ಪಾಕಿಸ್ತಾನವನ್ನು ಇನ್ನೊಂದು ಸಮಸ್ಯೆ ಕಾಡುತ್ತಿತ್ತು. ಅಲ್ಲಿನ ಸೈನಿಕರು ನಮಗೆ ಸೋಲು ಗ್ಯಾರಂಟಿ ಅಂತ ಗೊತ್ತಾಗಿ ಗಡಿಗೆ ಹೋಗಿ ಪ್ರಾಣ ಕಳೆದುಕೊಳ್ಳೋದು ಯಾಕೆ ಅಂತ ಪಾಕಿಸ್ತಾನ ಸೈನ್ಯದಿಂದ ತಪ್ಪಿಸಿಕೊಂಡುಹೋಗಿ ಅಡಗಿ ಕೂತಿದ್ದರು.
ಪಾಕಿಸ್ತಾನಿ ಸೈನ್ಯ ಅಂಥ ಸೈನಿಕರನ್ನು ಹುಡುಕಿ ಬಲವಂತವಾಗಿ ವಾಪಸ್ ಕರೆದುಕೊಂಡು ಬರುತ್ತಿತ್ತು. ಹೀಗೆ ಒಂದು ದಿನ ಮಾರ್ಕೆಟ್ ಪ್ಲೇಸ್‌ನಲ್ಲಿ ತಪ್ಪಿಸಿಕೊಂಡು ಬಂದ ಪಾಕಿಸ್ತಾನಿ ಯೋಧನೊಬ್ಬನಿಗಾಗಿ ಶೋಧ ನಡೆಯುತ್ತಿತ್ತು. ಅಲ್ಲಿಗೆ ಸೈನ್ಯದ ಅಧಿಕಾರಿಗಳು ಬಂದಿದ್ದನ್ನು ನೋಡಿದ ತಪ್ಪಿಸಿಕೊಂಡು ಬಂದ ಯೋಧ ಬಚ್ಚಿಟ್ಟುಕೊಳ್ಳಲು ಜಾಗ ಹುಡುಕುತ್ತಿದ್ದ.
ಅಷ್ಟರಲ್ಲಿ ಮೈ ತುಂಬಾ ಬುರ್ಕಾ ಧರಿಸಿದ್ದ ಹೆಣ್ಮಗಳೊಬ್ಬಳು ಕಣ್ಣಿಗೆ ಬಿದ್ದಳು. ಅವಳ ಬಳಿ ಹೋಗಿ ಅಕ್ಕಾ, ತಪ್ಪು ತಿಳಿಬೇಡ ಸೈನ್ಯದವರು ನನ್ನ ಹುಡುಕ್ತಾ ಇzರೆ. ನಂಗೆ ಯುದ್ಧಕ್ಕೆ ಹೋಗೋಕೆ ಇಷ್ಟವಿಲ್ಲ. ಅವರು ಹೋಗೋವರೆಗೂ ನಿನ್ನ ಗೌನ್ ಒಳಗೆ ಬಚ್ಚಿಟ್ಟುಕೊಳ್ಳೋಕೆ ಜಾಗ ಕೊಡ್ತೀಯಾ ಅಂದ. ಆಕೆ ಸರಿ ಅಂತ ಗೌನ್ ಒಳಗೆ ಜಾಗ ಕೊಟ್ಟಳು. ಸ್ವಲ್ಪ ಹೊತ್ತಿನ ನಂತರ ಸೈನ್ಯದ ಅಧಿಕಾರಿಗಳು ಹೊರಟು ಹೋದರು. ಆಗ ಗೌನ್ ನಿಂದ ಹೊರಬಂದ ಸೈನಿಕ, ಥ್ಯಾಂಕ್ಸ್ ಅಕ್ಕಾ, ಒಂದ್ ಮಾತ್ ಹೇಳ್ತೀನಿ, ತಪ್ಪು ತಿಳಿಬೇಡಿ, ನಿಮ್ಮ ಕಾಲುಗಳು ತುಂಬಾ ಸಾಫ್ಟ್ ಆಗಿವೆ ಅಂದ. ಅದಕ್ಕೆ ಆ ಕಡೆಯಿಂದ ಉತ್ತರ ಬಂತು.
ಹೌದು, ಇವತ್ತು ಬೆಳಗ್ಗೆ ತಾನೇ ಫುಲ್ ಬಾಡಿ ವ್ಯಾಕ್ಸಿಂಗ್ ಮಾಡಿಸಿಕೊಂಡೆ, ಆಕ್ಚುವಲೀ, ಯುದ್ಧಕ್ಕೆ ಹೋಗೋಕೆ ನಂಗೂ ಇಷ್ಟ ಇಲ್ಲ ಸಿನಿಗನ್ನಡ ನಿನ್ನೆ ಪೊಗರು ಸಿನಿಮಾದ ಕಾರ್ಯಕ್ರಮದಲ್ಲಿ ನಿರ್ದೇಶಕ ಎಪಿ ಅರ್ಜುನ್ ಕೆಲವು ಆನ್‌ಲೈನ್ ಸಿನಿಮಾ ವಿಮರ್ಶೆ ಮಾಡುವವರನ್ನು ತರಾಟೆಗೆ ತೆಗೆದುಕೊಂಡಿದ್ಧಾರೆ. ಆದರೆ ವಿಮರ್ಶೆಯ ಗಂಧ ಗಾಳಿ ಇಲ್ಲದೆ ವಿಮರ್ಶೆ ಮಾಡುವವ ರನ್ನು ಕರೆದು ಬಾರಿಸಬೇಕು ಎನ್ನುವ ಅವರ ಮಾತು ತೀರಾ ಅತಿಯಾಯಿತು ಎನ್ನುವ ಅಭಿಪ್ರಾಯ ಸಿನಿಮಾ ಪ್ರೇಮಿಗಳ ವಲಯ ದಲ್ಲಿ ಕೇಳಿಬರುತ್ತಿದೆ. ಆದರೆ ಎಷ್ಟೇ ಆದರೂ ಅವರು ಅಟೆಂಡ್ ಮಾಡಿದ್ದುದು ಪೊಗರು ಚಿತ್ರದ ಪ್ರೆಸ್ ಮೀಟ್.
ಹಾಗಾಗಿ ಅವರ ಆಟಿಟ್ಯೂಡ್‌ನಲ್ಲೂ ಕೊಂಚ ಪೊಗರು ಕಾಣಿಸಿಕೊಂಡಿದೆ ಎಂಬುದು ಸಿನಿಕತನ. ಆದರೆ ವಾಸ್ತವವಾಗಿ ಅರ್ಜುನ್ ಹೇಳಿದ್ದು ವಿಮರ್ಶೆಯ ಹೆಸರಿನಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡುವ ಮತ್ತು ಕೆಟ್ಟದಾಗಿ ವಿಮರ್ಶೆ ಮಾಡುವವರ ಬಗ್ಗೆ. ಇಲ್ಲಿ ಒಂದು ವಿಷಯವನ್ನು ನಾವು ಗಮನಿಸಬೇಕು. ಒಂದು ಸಿನಿಮಾ ಕೆಟ್ಟದಾಗಿದೆ ಎನ್ನುವ ವಿಮರ್ಶೆಗೂ, ಒಂದು ಕೆಟ್ಟ ಸಿನಿಮಾ ವಿಮರ್ಶೆಗೂ ಸಾಕಷ್ಟು ಅಂತರವಿದೆ.
ಅಲ್ಲದೆ ಒಂದು ಸಿನಿಮಾ ಚೆನ್ನಾಗಿದೆ, ಚೆನ್ನಾಗಿಲ್ಲ ಅಂತ ಹೇಳೋದು ಕೇವಲ ಅಭಿಪ್ರಾಯ. ಅದು ವಿಮರ್ಶೆ ಅಲ್ಲ. ಒಂದು ಸಿನಿಮಾ ಯಾಕೆ ಚೆನ್ನಾಗಿಲ್ಲ, ಹೇಗೆ ಚೆನ್ನಾಗಿದೆ ಅಂತ ವಿವರವಾಗಿ ಹೇಳಿದರೆ ಅದು ವಿಮರ್ಶೆ ಆಗುತ್ತದೆ. ಅದನ್ನೇ ಅರ್ಜುನ್ ಅವರು ಹೇಳಿರೋದು. ಅಲ್ಲದೆ ವಿಮರ್ಶೆ ಅನ್ನೋದು ಸಾಹಿತ್ಯದ ಒಂದು ಪ್ರಕಾರ. ಒಂದು ಸಿನಿಮಾ ಹೇಗಿದೆ ಅನ್ನುವುದರಿಂದ ಹಿಡಿದು, ಅದು ಪ್ರೇಕ್ಷಕನ ಮೇಲೆ ಬೀರುವ ಪರಿಣಾಮ, ಅದರ ಪ್ರಸ್ತುತತೆ ಇನ್ನೂ ಹಲವಾರು ಸೂಕ್ಷ್ಮ ವಿಷಯಗಳನ್ನುಒಳಗೊಂಡಿರುತ್ತದೆ.
ಹಾಗಾಗಿ ವಿಮರ್ಶೆ ಮಾಡೋನಿಗೆ ಸಿನಿಮಾ ಬಗ್ಗೆ ಒಂಚೂರು ಆಳವಾದ ಜ್ಞಾನ, ಅಧ್ಯಯನ ಇರಬೇಕು, ಅದಿಲ್ಲದೆ ಸಿನಿಮಾ ಸಂಬಂಧಿತ ಪದಗಳನ್ನೂ ತಪ್ಪು ತಪ್ಪಾಗಿ ಉಚ್ಛಾರ ಮಾಡುವ ಕೆಲವರು ಬಾಲಿಶವಾಗಿ ವಿಮರ್ಶೆ ಮಾಡುತ್ತಾರೆ ಎಂದು ಅರ್ಜುನ್ ಹೇಳಿದ್ಧಾರೆ. ಅವರು ಹೇಳಿದ್ದರಲ್ಲಿ ತಪ್ಪಿಲ್ಲ. ಆದರೆ ಅದನ್ನು ಕೇಳಿದ ಎಲ್ಲರಿಗೂ ಅವರ ಈ ಮಾತುಗಳಿಗಿಂತ ಹೆಚ್ಚಾಗಿ ಎಫೆಕ್ಟ್ಆಗಿರೋದು ಕರೆದು ಬಾರಿಸಿ ಎಂಬ ಅವರ ಹೇಳಿಕೆ. ಹಾಗಾಗಿ ಅರ್ಜುನ್ ಹೇಳಿರುವ ಮುಖ್ಯ ವಿಷಯ ಬಿಟ್ಟು ಅವರ ಬಾರಿಸು ಕನ್ನಡ ಡಿಂಡಿಮವ ಎಂಬ ಹೇಳಿಕೆಯ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಆದರೆ ಅರ್ಜುನ್ ಹೇಳಿರುವ ವಿಮರ್ಶೆಯ ನುಡಿಗಳು ಎಷ್ಟು ಸರಿಯೋ, ಅವರ ಕರೆದು ಬಾರಿಸಿ ಹೇಳಿಕೆ ಕೂಡ ಅಷ್ಟೇ ತಪ್ಪು ಎನ್ನುವುದಂತೂ ನಿಜ.
ಮೀಮಾಂಸೆಲೈನ್‌ಮನ್ವಿಗ್‌ಗಳ ಬಗ್ಗೆ ಇರೋ ಮಾಹಿತಿ
ವಿಗ್ ಜ್ಞಾನಹೊಗಳುವವರು – ಹೊಗಳು ಭಟರುತೆಗಳುವವರು ‘ಉಗುಳು’ ಭಟರುಅನ್ನದ ಋಣಕ್ಕೆ ಹೊಗಳುವವರು‘ಅಗಳು’ ಭಟರುಹೊಗಳಿ ಬೆಣ್ಣೆ ಹಚ್ಚುವವರುಹೊಗಳು ಚ್ಠಿಠಿಠಿಛ್ಟ್ಠಿಒಬ್ಬರ ಅನ್ನ ತಿಂದೂ ಹೊಗಳದವರುಅವರ ಬಗ್ಗೆ ಹೇಳದೇ ಇರೋದೇ ಬೆಟರುನಕಲಿ ಗೋರಕ್ಷಕರು ಓದಿದ್ದೆಲ್ಲಿ?‘”’  ಯೂನಿವರ್ಸಟಿರಸ್ತೆ ‘ಬದಿ’ ವ್ಯಾಪಾರ‘ಸೈಡ್’ ಬ್ಯುಸಿನೆಸ್ಫಾರ್ಮರ್ಸ್ ಪ್ರೊಟೆಸ್ಟ್‌ಗೆ ಬೆಂಬಲ ಕೊಡೋರು‘ರೈತಿ’ ಸ್ಟ್ಸ್ಸಿಗ್ನಲ್ ಆಪ್ ಅನ್ನು ಇಂಡಿಯಾದಲ್ಲಿ ಮೊದಲು ಡೌನ್ಲೋಡ್ ಮಾಡಿದ್ದು ಯಾರು?ಅರ್ನಾಬ್ ಗೋಸ್ವಾಮಿಕಾಂಗ್ರೆಸ್ ಮುಕ್ತ ಭಾರತ ಅಂದ್ರೇನು?ಹಸ್ತಂಗತವಾಟ್ಸಾಪ್ ಪೇಮೆಂಟ್ಸ್ ಆಪ್ಷನ್ ಶುರು ಮಾಡಿದ್ದು ಹೇಗೆ?ಹಿಂದಿ ಬರದೇ ಇರೋರು ಹಿಂದಿ ಮಾತಾಡಿ ‘ವಾಟ್ಸಾಪ್ ಮೇ ಭೇಜೋ’ ಅನ್ನೋದಿಕ್ಕೆ‘ವಾಟ್ಸಾಪ್ ಮೇ ಬೇಚೋ’ ಅಂದಿದ್ದನ್ನು ಕೇಳಿ ಕೇಳಿ.ಎಷ್ಟು ತಿಂದರೂ ಹೊಟ್ಟೆ ತುಂಬದೇ ಇರೋದು ಯಾರಿಗೆ?‘ತೇಗದ’ ಮರಕ್ಕೆಲೂಸ್ ಟಾಕ್ಟ್ರಂಪ್ ಅವ್ರೇ ವೈಟ್ ಹೌಸಿಂದ ನಿಮ್ಮನ್ನ ಓಡಿಸಿಬಿಟ್ರಲ್ಲ?– ಏನ್ ಮಾಡೋದು, ವಿವೇಕಾನಂದ, ಸಚಿನ್ ತೆಂಡೂಲ್ಕರ್ ಅಂಥವರ ಹೆಸರನ್ನ ನನ್ನನಾಲಿಗೆಯಲ್ಲಿ ಕೆಡಿಸಿ ನನ್ ಹೆಸ್ರು ನಾನೇ ಕೆಡಿಸ್ಕೊಂಡ್ ಬಿಟ್ಟೆನಿಮ್ ಟ್ರಂಪ್ ಕಾರ್ಡ್ ಆಗಿ ಮೋದಿ ಇದ್ರೂ ನಿಮಗೆ ಉಪಯೋಗ ಆಗ್ಲಿಲ್ಲವಲ್ಲ?-ಏನ್ ಮಾಡೋದು ಕಷ್ಟಕಾಲ ಬಂದ್ರೆ ಸ್ನೇಹಿತರೂ ನಮ್ಮ ಶತ್ರುಗಳು ಹತ್ರ ಹೋಗಿ ಬಿಡೆನ್ನಿನ್ನ ಪಾದ’ ಅಂತ ಬದಲಾಗ್ಬಿಡ್ತಾರೆ.ನೀವು ಇಂಡಿಯಾಗೆ ಬಂದಾಗ ನಿಮಗೆ ಇಲ್ಲಿನ ಸ್ಲಮ್ ಕಾಣಿಸಬಾರ್ದು ಅಂತ ಮೋದಿ ರಸ್ತೆಉದ್ದಕ್ಕೂ ಗೋಡೆ ಕಟ್ಟಿಸಿದ್ರಲ್ಲ. ಅದರ ಬಗ್ಗೆ ಏನ್ ಹೇಳ್ತೀರಾ?-ಅಯ್ಯೋ ಅದೇನ್ ಅವ್ರ್ ಸ್ವಂತ ಐಡಿಯಾ ಅಲ್ಲ ಬಿಡಿ, ನಮ್ ನ್ಯೂಯಾರ್ಕ್‌ನಲ್ಲಿರೋವಾಲ್ ಸ್ಟ್ರೀಟ್ ನೋಡಿ ಕಾಪಿ ಮಾಡಿದ್ದು.ನೀವ್ ಎಲೆಕ್ಷನ್‌ನಲ್ಲಿ ಯಾಕ್ ಸೋತ್ರಿ ಅಂತ ಗೊತ್ತಾಯ್ತು ಬಿಡಿ. ಸರಿ, ನಿಮ್ಮ ಸೋಲಿಗೆ ಚೈನಾರಿಯಾಕ್ಷನ್ ಏನಿತ್ತು?-ಅಯ್ಯೋ, ಅವ್ರು ಫುಲ್ ಕಿಲಾಡಿ ಜನ ಕಣ್ರೀ. ಕಣ್ಮುಚ್ಕೊಂಡೆ ಹಾಲ್ ಕುಡೀತಾರೆ. ಇಂಡಿಯಾಬಾರ್ಡರ್‌ನಲ್ಲಿ ಮನೆ ಕಟ್ಟಿಸಿದೀವಿ. ಗೃಹಪ್ರವೇಶಕ್ ಬನ್ನಿ ಅಂತ ಕಾಲ್ ಮಾಡಿದ್ರು. ನಂದೇ ಇಲ್ಲಿತಿಥಿ ಇದೆ ಬರಕಾಗಲ್ಲ ಅಂದೆ.
ಸರಿ, ಕೆಲಸ ಹೋಯ್ತಲ್ಲ, ಮುಂದೆ ಜೀವನಕ್ಕೇನ್ ಮಾಡ್ತೀರಾ?-ರೀ ಸ್ವಾಮಿ, ನಾನೇನ್ ನಿಮ್ ವೈಟ್ ಫೀಲ್ಡನಲ್ಲಿ ಸಾ- ವೇರ್ ಎಂಜಿನಿಯರ್ ಆಗಿದ್ನಾ..?ನಾನಿದ್ದಿದ್ದು ವೈಟ್ ಹೌಸ್‌ನಲ್ಲಿ. ಬ್ಲಾಕ್ ಮನಿಗೇನು ಕೊರತೇನ ನಂಗೆ. ವೆಯ್ಟ ಅಂಡ್ ಸೀ.
(ಕಾಲ್ಪನಿಕ ಸಂದರ್ಶನ)