’ಆರ್ಯ ಜನಾಂಗ’ವೆಂಬ ಸುಳ್ಳು ಸಿದ್ದಾಂತವೇ ಕ್ರಿಶ್ಚಿಯನ್ನರ ’ಮತಾಂತರ’ದ ಮೂಲ
ವೀಕೆಂಡ್ ವಿಥ್‌ ಮೋಹನ್
ಮೋಹನ್ ವಿಶ್ವ
ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರ ಮೇಲೆ ಎಷ್ಟೇ ಶೋಷಣೆಗಳು ನಡೆದರೂ ಸಹ ಮತಾಂತರವಾಗುವ ತತ್ತ್ವ ವನ್ನು ಮಾತ್ರಎಂದು ಸಹ ಒಪ್ಪಿರಲಿಲ್ಲ. ಹಲವು ಬಾರಿ ದಲಿತರು ತಮ್ಮ ಮುಂದೆ ನಿಂತು ತಮಗಾಗುತ್ತಿರುವ ಅನ್ಯಾಯಗಳನ್ನು ಹೇಳಿಕೊಳ್ಳು ತ್ತಿದ್ದರೂ ಸಹ, ಮತಾಂತರವಾಗದಂತೆ ಹೇಳುತ್ತಿದ್ದರು.
ಅಂದಿನ ಕಾಲಘಟ್ಟದಲ್ಲಿ ಮತಾಂತರವು ಶೀಘ್ರವಾಗಿ ಕಣ್ಣ ಮುಂದಿರುವ ಪರಿಹಾರವಾಗಿ ಗೋಚರಿಸಿದರೂ ಸಹ, ಮತಾಂತರ ದಿಂದ ಮುಂದಿನ ದಿನಗಳಲ್ಲಿ ದಲಿತರ ತಲೆಮಾರುಗಳೇ ಇಲ್ಲವಾಗಬಹುದೆಂಬ ಕಟು ಸತ್ಯ ಅಂಬೇಡ್ಕರರಿಗೆ ತಿಳಿದಿತ್ತು. ದಶಕಗಳ ಕಾಲ ಹೋರಾಟ ಮಾಡಿದ ಅಂಬೇಡ್ಕರ್, ದಲಿತರನ್ನು ಮೀಸಲಾತಿ ಮೂಲಕ ಕೆಳಸ್ತರದಿಂದ ಮೇಲೆತ್ತಲು ಪ್ರಯತ್ನ ಪಟ್ಟು ಒಂದು ಮಟ್ಟಕ್ಕೆ ಯಶಸ್ವಿಯಾದರು.
ಆರ್ಥಿಕತೆಯ ವಿಷಯದಲ್ಲಿ ಎಷ್ಟೇ ಯಶಸ್ವಿಯಾದರೂ ಸಹ ಸಮಾಜದಲ್ಲಿ ದಲಿತರ ಮೇಲಿನ ಹಳೆಯ ಭಾವನೆಗಳು ಮಾತ್ರಕಡಿಮೆಯಾಗಲಿಲ್ಲ.‘ಕಾಲ ರಾಮ’ ಚಳುವಳಿಯ ಮೂಲಕ ದಲಿತರ ದೇವಸ್ಥಾನ ಪ್ರವೇಶದ ವಿಚಾರದಲ್ಲಿ ಆರು ವರ್ಷಗಳ ಕಾಲ ಅವರು ಮಾಡಿದ ಹೋರಾಟವನ್ನು ಸಮಾಜದ ಮೇಲ್ ಸ್ತರದ ಜನರು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇದರಿಂದ ಬೇಸತ್ತಿದ್ದ ಅಂಬೇಡ್ಕರ್ ಕೊನೆಯ ಗಳಿಗೆಯಲ್ಲಿ ‘ಬೌದ್ಧ’ ಧರ್ಮವನ್ನು ಸ್ವೀಕರಿಸಿದರು.
ಅಂಬೇಡ್ಕರ್ ಬೌದ್ಧ ಧರ್ಮ ವನ್ನು ಸ್ವೀಕರಿಸುವ ವೇಳೆಗಾಗಲೇ ಭಾರತದಲ್ಲಿ ಕ್ರಿಶ್ಚಿಯನ್ನರು ಪಾಶಿಮಾತ್ಯದ ಸುಳ್ಳು ಇತಿಹಾಸ ಗಳ ಮೂಲಕ ಹಲವು ಕಡೆಗಳಲ್ಲಿ ಮತಾಂತರವನ್ನು ಮಾಡಿಬಿಟ್ಟಿದ್ದರು. ಇವರ ಕುತಂತ್ರವನ್ನರಿತಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ವಾಗುವುದರ ಬಗ್ಗೆ ಕನಸಿನಲ್ಲಿಯೂ ಚಿಂತಿಸಿರಲಿಲ್ಲ. ಬಾಬಾ ಸಾಹೇಬರ ಆದರ್ಶಗಳನ್ನು ಪಾಲಿಸಿಕೊಂಡು ಬಂದಿರುವ ಹಲವು ದಲಿತರು ನೋಡನೋಡುತ್ತಲೇ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿ ಬಿಟ್ಟರು.
ಪ್ರಸ್ತುತ ಕಾಲಘಟ್ಟದಲ್ಲಂತೂ ಕ್ರಿಶ್ಚಿಯನ್ ಮತಾಂಧರ ಹಾವಳಿ ಎಗ್ಗಿಲ್ಲದೇ ಸಾಗುತ್ತಿದೆ. ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರವು ಹತ್ತು ವರ್ಷದಲ್ಲಿ ಮಾಡಿದ ಅತೀ ದೊಡ್ಡ ದೊಡ್ಡ ಹಗರಣಗಳಲ್ಲಿ ಕ್ರೈಸ್ತ ಮತಾಂತರವೂ ಒಂದು ದೊಡ್ಡ ಹಗರಣ. ಮಹಾಭಾರತ ಹಾಗೂ ರಾಮಾಯಣದಂಥ ಸಾವಿರಾರು ವರ್ಷಗಳ ಇತಿಹಾಸವಿರುವ ಭಾರತವನ್ನು ಛಿದ್ರ ಛಿದ್ರಗೊಳಿಸಲು ಪಾಶಿಮಾತ್ಯರು ಬಳಸಿದ ತಂತ್ರವಿದು.
‘ಆರ್ಯ’ರು ಭಾರತಕ್ಕೆ ಬಂದು ನಮಗೆ ಜೀವನ ಶೈಲಿ, ಸಂಸ್ಕೃತಿ, ಸಮಾಜದ ಕಲ್ಪನೆಯನ್ನು ಹೇಳಿಕೊಟ್ಟರೆಂದು ಸುಳ್ಳು ಇತಿಹಾಸ ಸೃಷ್ಟಿಸಿ ಭಾರತದ ಲಕ್ಷಾಂತರ ವರ್ಷಗಳ ಇತಿಹಾಸ ವನ್ನು ಮುಚ್ಚು ಹಾಕುವ ಪ್ರಯತ್ನ ಮಾಡಿದರು. ಯುರೋಪಿಯನ್ನರು ತಮ್ಮನ್ನು ತಾವು ಅತಿ ಶ್ರೇಷ್ಠರೆಂದು ಭಾವಿಸಿ ಜಗತ್ತಿನ ಇತರ ರಾಷ್ಟ್ರಗಳೂ ಸಹ ತಮ್ಮ ಇತಿಹಾಸವನ್ನೇ ನಂಬಬೇಕೆಂಬ ದುರಾಸೆ ಯಿಂದ ಏಷ್ಯಾ ಖಂಡವನ್ನು ಪ್ರವೇಶಿಸಿದ್ದರು.
ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ನಡೆದ ಹಲವು ಘಟನೆಗಳು ಇವರ ನಕಲಿ ಇತಿಹಾಸವನ್ನು ಬೆತ್ತಲೆಗೊಳಿಸಿದೆ. ಮೊದ ಮೊದಲು ಭಾರತಕ್ಕೆ ಆರ್ಯರು ಬಂದರು, ಅವರೇ ಶ್ರೇಷ್ಠರೆಂದು ಬಿಂಬಿಸಿ ಅವರಿಂದಲೇ ನಾವು ನಾಗರಿಕತೆ ಯನ್ನು ಕಲಿತವೆಂದು ಹೇಳಿದ್ದರು. ನಾವು ಭಾರತೀಯರು ಬೇರೆಡೆಯಿಂದ ವಲಸೆ ಬಂದು ಆರ್ಯರು ಹೇಳಿದ ರೀತಿಯಲ್ಲಿ ನಡೆದು ಕೊಂಡವರೆಂದೂ ಸಹ ಹೇಳಿದ್ದರು. ಇವರ ಮೊದಲ ಗುರಿಯಿದ್ದದ್ದು, ಭಾರತೀಯರ ಮೂಲ ಸ್ಥಾನ ಭಾರತವಲ್ಲವೆಂಬ ಸುಳ್ಳು ಭಾರತದ ಇತಿಹಾಸ ವನ್ನು ಸುಳ್ಳೆಂದು ಜನರಿಗೆ ತಿಳಿಸುವುದು.
ಮೊದಮೊದಲು ಈ ವಿಚಾರದಲ್ಲಿ ಯಶಸ್ವಿಯಾದ ಬ್ರಿಟಿಷ್ ಇತಿಹಾಸ ಸಂಶೋಧಕರು, ನಂತರ ಭಾರತವನ್ನು ಛಿದ್ರ ಛಿದ್ರ ಗೊಳಿಸುವ ಯೋಜನೆಯನ್ನು ಕೈಗೆತ್ತಿಕೊಂಡರು. ಉತ್ತರ ಭಾರತದ ವರನ್ನು ಆರ್ಯರ ಸಂತತಿಯೆಂದು ಬಿಂಬಿಸಿ, ದಕ್ಷಿಣ ಭಾರತದ ತಮಿಳರನ್ನು ದ್ರಾವಿಡರೆಂದು ಹೇಳುವ ಮೂಲಕ ಉತ್ತರ ಹಾಗೂ ದಕ್ಷಿಣದ ಮಧ್ಯೆ ದೊಡ್ಡದೊಂದು ಕಂದಕವನ್ನೇಸೃಷ್ಟಿಸಿದರು. ದ್ರಾವಿಡರು ಹಿಂದೂಗಳಲ್ಲ, ಅವರು ಆರ್ಯರಿಗಿಂತಲೂ ಹಳಬರೆಂದು ಸುಳ್ಳು ಇತಿಹಾಸವನ್ನು ಹೇಳುವ ಮೂಲಕ ಹಿಂದೂಗಳನ್ನು ವಿಭಜಿಸಿದರು.
ವಿಭಜನೆಯ ಸಂಧರ್ಭದಲ್ಲಿ ಬ್ರಾಹ್ಮಣರು ಹಾಗೂ ದಲಿತರ ನಡುವೆ ದೊಡ್ಡದೊಂದು ಕಂದಕವನ್ನು ಸೃಷ್ಟಿಸುವ ಮೂಲಕಶಾಶ್ವತವಾದ ಸಮಸ್ಯೆಯನ್ನು ಹುಟ್ಟುಹಾಕಿದರು. ದ್ರಾವಿಡರ ತಲೆಯನ್ನು ಅದೆಷ್ಟು ಹಾಳುಮಾಡಿದ್ದರೆಂದರೆ ತಮಿಳುನಾಡಿನ‘ದ್ರಾವಿಡ’ರ ಸಂಸ್ಕೃತಿ, ಇತಿಹಾಸ, ಆಚರಣೆಗಳೆಲ್ಲವೂ ‘ಕ್ರಿಶ್ಚಿಯನ್ನರ’ ಆಚರಣೆಗಳಿಗೆ ಹತ್ತಿರ ವಾದವೆಂದು ಹೇಳುವ ಮೂಲಕ ತಮಿಳುನಾಡಿನಲ್ಲಿ ತಮ್ಮ ಮತಾಂತರದ ಸುನಾಮಿಯನ್ನು ಶುರುಮಾಡಿದ್ದರು.
ಇವರ ಪೊಳ್ಳು ಇತಿಹಾಸವನ್ನು ನಂಬಿರುವ ಹಲವು ತಮಿಳರು ಇಂದಿಗೂ ಸಹ ‘ದ್ರಾವಿಡ’ ಇತಿಹಾಸವನ್ನು ನಂಬಿಕೊಂಡಿದ್ದಾರೆ.  ‘ದ್ರಾವಿಡ’ ಇತಿಹಾಸವು ನಿಜವೇ ಆಗಿದ್ದರೆ, ತಮಿಳುನಾಡಿನ ಪಲ್ಲವ ರಾಜಮನೆತನದವರು ಅಷ್ಟೊಂದು ದೊಡ್ಡ ದೊಡ್ಡದೇವಸ್ಥಾನಗಳನ್ನು ಕಟ್ಟುತ್ತಲೇ ಇರಲಿಲ್ಲ. ತಮಿಳುನಾಡಿನ ಪ್ರತಿಯೊಂದು ಜಿಯಲ್ಲೂ ಅದ್ಭುತವಾದ ಬೃಹತ್ ಹಿಂದೂದೇವಸ್ಥಾನಗಳಿವೆ. ದೇವನೊಬ್ಬನೇ ಎಂದು ಹೇಳುವ ಕ್ರಿಶ್ಚಿಯನ್ ಕಲ್ಪನೆಯ ಬೃಹತ್ ಚರ್ಚ್ ಗಳನ್ನು ಯಾವೊಬ್ಬ ತಮಿಳು ರಾಜನೂ ಕಟ್ಟಲಿಲ್ಲ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದ್ರಾವಿಡರ ಹೆಸರಿನಲ್ಲಿ ರಾಜಕೀಯ ಪಕ್ಷಗಳನ್ನು ಸ್ಥಾಪಿಸಿ ‘ಕರುಣಾನಿಧಿ’ ಹಾಗೂ ‘ಜಯಲಲಿತಾ’ ಹತ್ತಾರು ವರ್ಷಗಳ ಕಾಲ ಆಡಳಿತ ನಡೆಸಿದರು.
ದ್ವೀಪ ರಾಷ್ಟ್ರ ‘ಶ್ರೀಲಂಕಾ’ದಲ್ಲಿ ನಡೆದ ರಕ್ತಸಿಕ್ತ ‘ಎಲ್‌.ಟಿ.ಟಿ.ಇ’ ಇತಿಹಾಸದ ಮೂಲವೂ ಸಹ ಕ್ರಿಶ್ಚಿಯನ್ನರ ‘ಆರ್ಯನ್’ ಸುಳ್ಳು ಇತಿಹಾಸ. ಸಿಂಹಳೀಯರು ಆರ್ಯರ ಸಂತತಿಯವರು, ತಮಿಳರು ಆರ್ಯರಲ್ಲ. ಅವರೆಲ್ಲರೂ ದ್ರಾವಿಡರೆಂಬ ಸುಳ್ಳು ಇತಿಹಾಸವನ್ನು ಯೂರೋಪಿಯನ್ನರು ಸೃಷ್ಟಿಸಿದ್ದರು. ಜಗತ್ತಿನಾದ್ಯಂತ ‘ಕಾಲೋನಿ’ಗಳ ಮೂಲಕ ತಮ್ಮ ವಸಹಾತು ಸ್ಥಾಪಿಸಿದ್ದ ಬ್ರಿಟಿಷರಿಗೆ ತಮ್ಮ ಹಿಡಿತ ಸಾಧಿಸಲು ಇಂತಹ ಸುಳ್ಳು ಇತಿಹಾಸವನ್ನು ಸೃಷ್ಟಿಸ ಬೇಕಿತ್ತು. ‘ಶ್ರೀಲಂಕಾ’ವಂತೂ ಜನಾಂಗೀಯ ಕಲಹದಿಂದ ಹೊರಬರಲು ಮೂರು ದಶಕಗಳೇ ಬೇಕಾಯಿತು.
ತಾವು ಸ್ಥಾಪಿಸಿದ್ದ ‘ಕಾಲೋನಿ’ಗಳನ್ನು ಸ್ವತಂತ್ರ್ಯಗೊಳಿಸಿದ ಮೇಲೂ ಸಹ ಅಲ್ಲಿನ ಜನರು ಅನಾಯಾಸವಾಗಿ ಆಡಳಿತ ನಡೆಸಲು ಇವರು ಇಂದಿಗೂ ಬಿಡುತ್ತಿಲ್ಲ. ‘ಮ್ಯಾಕ್ಸ್ ಮುಲ್ಲರ್’ ಎಂಬ ಬ್ರಿಟಿಷ್ ಸಂಶೋಧನಾಕಾರ ಮಾಡಿದ ಅವಾಂತರದ ಪರಿಣಾಮವಾಗಿಶ್ರೀಲಂಕಾ ದೇಶವು ಎಂದೂ ಕಂಡರಿಯದ ಜನಾಂಗೀಯ ಕಲಹವನ್ನು ಕಂಡಿತ್ತು. ಆಫ್ರಿಕಾ ಖಂಡಕ್ಕೆ ಕಾಲಿಟ್ಟಂಥ ಬ್ರಿಟಿಷ್ಸಂಶೋಧನಾಕಾರರು ಅಲ್ಲಿನ ಬಡತನ ವನ್ನು ಅಸವನ್ನಾಗಿ ಬಳಸಿಕೊಂಡು, ‘ಬೈಬಲ’ನ ಹಲವು ವಿಚಾರಗಳನ್ನು ಅಲ್ಲಿನದಿನನಿತ್ಯದ ಆಚರಣೆಗಳಿಗೆ ತಾಳೆ ಮಾಡಿ ಆಫ್ರಿಕಾ ದೇಶದ ಜನರು ಗುಲಾಮರೆಂದು ನಂಬಿಸಿದರು.
ಕ್ರೈಸ್ತ ಧರ್ಮದಲ್ಲಿ ಬರುವ ‘ಹ್ಯಾಮ’ಗೆ ನೀಡಿದ ಶಾಪದಿಂದ ಅವನ ಸಂತತಿಯವರೆಲ್ಲರೂ ಸಹ ಗುಲಾಮರಾಗಿದ್ದಾರೆ. ಹಾಗಾಗಿಜೀವನ ಪರ್ಯಂತ ಅವರೆಲ್ಲರೂ ಗುಲಾಮರಾಗಿಯೇ ಇರಬೇಕೆಂದು ಹೇಳುವ ಮೂಲಕ ಆಫ್ರಿಕಾ ಖಂಡವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡಲಿಲ್ಲ. ಇಂದಿಗೂ ಅಷ್ಟೇ ವಿಶ್ವ ಅರೋಗ್ಯ ಸಂಸ್ಥೆ, ವಿಶ್ವ ವಿದ್ಯಾ ಸಂಸ್ಥೆ, ವಿಶ್ವ ಸಂಸ್ಥೆಯ ಹಲವು ಘಟಕಗಳು ಆಫ್ರಿಕನ್ನರ ಏಳಿಗೆಗಾಗೇ ಸಾವಿರಾರು ಕೋಟಿಯ ಹಣವನ್ನು ಖರ್ಚು ಮಾಡುತ್ತಿದ್ದರೂ ಸಹ, ತಮ್ಮ ಕ್ರಿಶ್ಚಿಯನ್ ಮತಾಂತರ ಹಾಗೂ ಸುಳ್ಳು ಇತಿಹಾಸವನ್ನು ಅಲ್ಲಿನ ಜನರ ಮುಂದಿಡುತ್ತಾರೆ.
ವಿಶ್ವದ ದೊಡ್ಡ ದೊಡ್ಡ ಸಂಸ್ಥೆಯಲ್ಲಿರುವವರೆಲ್ಲರೂ ಸಹ ಪಾಶಿಮಾತ್ಯ ಸಂಸ್ಕೃತಿಯ ರಾಯಭಾರಿಗಳಾಗಿರುವುದ ರಿಂದ ತಮ್ಮ ಮೂಲ ಉದ್ದೇಶವನ್ನು ಬಳಸಿಯೇ ಆಫ್ರಿಕಾದ ಜನರಿಗೆ ಸಹಾಯ ಮಾಡುತ್ತಾರೆ. ‘ಆರ್ಯ’ರು ದೈವಾಂಶಸಂಬೂತರಂತೆ ಅವರಿಗೆ ಮಾತ್ರ ವಿಜ್ಞಾನ, ಕಲೆ ಹಾಗೂ ರಾಜಕೀಯದ ಅನುಭವವಿತ್ತಂತೆ, ಅವರಿಂದ ನಾವೆಲ್ಲರೂ ಕಲಿತೆವಂತೆ. ಎಲ್ಲ ಅಂತೇ ಕಂತೆಗಳಸುರಿಮಳೆ ಮಧ್ಯೆ ದ್ವಾಪರಯುಗ, ತ್ರೇತಾಯುಗದಲ್ಲಿ ಭಾರತ ಖಂಡದಲ್ಲಿ ನಡೆದ ಘಟನೆಗಳನ್ನು ಮುಚ್ಚಿಹಾಕುವ ಪ್ರಯತ್ನಇಂದಿಗೂ ನಡೆಯುತ್ತಿದೆ.
ರಾಮಾಯಣದಲ್ಲಿ ಸೀತಾಮಾತೆ ಯನ್ನು ಕರೆತರಲು ಪ್ರಭು ಶ್ರೀ ರಾಮನು ಲಂಕೆಯವರೆಗೂ ಕಪಿಸೈನ್ಯವನ್ನು ಬಳಸಿಕೊಂಡು ಸಮುದ್ರದ ಮೇಲೆ ಸೇತುವೆಯನ್ನೇ ನಿರ್ಮಿಸಿದ. ಈ ಸೇತುವೆಯು ಇಂದಿಗೂ ವೈಜ್ಞಾನಿಕವಾಗಿ ಸಾಬೀತಾಗಿರುವಾಗ, ವಿಜ್ಞಾನ ವನ್ನು ನಮಗೆ ಹೊರಗಿನಿಂದ ಬಂದವರು ಹೇಳಿಕೊಟ್ಟವರೆಂದು ಹೇಳುವಾಗ ನಗು ಬರುತ್ತದೆ. ‘ಹಳೇಬೀಡಿನ, ವಾಸ್ತುಶಿಲ್ಪ ಗಳಲ್ಲಿ‘ದೂರದರ್ಶಕ’ದ ಉಖವಿದೆ, ಪಾನೀಯವನ್ನು ಕುಡಿಯಲು ‘ಸ್ಟ್ರಾ’ ಬಳಸುತ್ತಿದ್ದಂಥ ಉಲ್ಲೇಖವಿದೆ.
ಸುಮಾರು 900 ವರ್ಷಗಳ ಹಳೆಯ ಕೆತ್ತನೆಗಳಲ್ಲಿ ಆಧುನಿಕ ಸಮಾಜದಲ್ಲಿ ಬಳಸುವ ವಸ್ತುಗಳ ಉಖವಿರುವಾಗ ‘ಆರ್ಯರು’ಭಾರತಕ್ಕೆ ಬಂದು ನಾಗರಿಕತೆಯನ್ನು ಹೇಳಿಕೊಟ್ಟರೆಂಬ ಬ್ರಿಟಿಷರ ಇತಿಹಾಸ ಶುದ್ಧ ಸುಳ್ಳು. ಬ್ರಿಟಿಷರು ಭಾರತಕ್ಕೆ ಬರುವಐದುನೂರು ವರ್ಷಗಳ ಹಿಂದೆಯೇ ರಾಜ ವಿಷ್ಣುವರ್ಧನನ ಕಾಲದಲ್ಲಿ ಹಳೇಬೀಡಿನಲ್ಲಿ ಕಟ್ಟಿದ ‘ಹೊಯ್ಸಳೇಶ್ವರ’ದೇವಾಲಯ ದಲ್ಲಿ ಭವ್ಯ ಭಾರತದ ಇತಿಹಾಸವನ್ನು ಶಿಲ್ಪಿಗಳು ಕೆತ್ತಿರುವಾಗ, ನಂತರ ಬಂದಂತಹ ಬ್ರಿಟಿಷರ ‘ಆರ್ಯ’ಸಂಶೋಧನೆಗಳ ಸುಳ್ಳುಗಳು ಬೆತ್ತಲೆಯಾಗಿ ನಿಂತಿವೆ.
‘ಹಿಂದೂ’ ಪುರಾಣಗಳು ‘ಬೈಬಲ’ ನಿಂದ ಕದ್ದಿರುವುದಾಗಿ ಸುಳ್ಳು ಇತಿಹಾಸ ಸಂಶೋಧನಾ ಗ್ರಂಥಗಳನ್ನು ಹಲವು ಬ್ರಿಟಿಷ್‘ವಿದ್ವಾಂಸರು’ ಬರೆದಿzರೆ. ತಾವು ಬಲವಂತವಾಗಿ ಸ್ಥಾಪಿಸಿದ್ದ ‘ಕಾಲೋನಿ’ಗಳನ್ನು ಸರಿಯೆಂದು ಪ್ರತಿಪಾದಿಸಲು ಶುರು ವಾದಂತಹಯೂರೋಪಿಯನ್ನರ ಸುಳ್ಳು ವಾದವೇ ‘ಆರ್ಯರು’. ಸಂಸ್ಕೃತ ಭಾಷೆಗೂ ಕುತ್ತು ತಂದಿದ್ದಂತಹ ಇವರು, ಗ್ರೀಕ್ ಭಾಷೆಯನ್ನು ಸಂಸ್ಕೃತದ ಮೂಲಭಾಷೆಯೆಂದು ಹೇಳಿದ್ದರು.
ಈಗಲೂ ಅಷ್ಟೇ ನಮ್ಮ ತಲೆಯಲ್ಲಿ ತುಂಬಿರುವ ಇತಿಹಾಸ ವನ್ನು ಓದಿದರೆ, ‘ಗ್ರೀಕರಿಂದ’ ಸಂಸ್ಕೃತ ಭಾಷೆಯು ಬಂತೆಂಬ ಭಾವನೆ ಮೂಡುತ್ತದೆ. ಬೈಬಲ್‌ನಲ್ಲಿರುವ ಒಂದೊಂದೇ ಅಂಶಗಳನ್ನು ಅಧ್ಯಯನ ಮಾಡಿ, ಯಾವ್ಯಾವ ಅಂಶಗಳು ಹಿಂದೂ ಸಂಸ್ಕೃತಿ ಗಳಿಗೆ ತಾಳೆಹೊಂದುತ್ತವೆಯೇ ಅವೆಲ್ಲ ವನ್ನೂ ‘ಕ್ರಿಶ್ಚಿಯನ್ನರ’ ಮೂಲಕ್ಕೆ ತಾಳೆ ಮಾಡಿದರು. ವಿಷ್ಣುವಿನ ನಾಲ್ಕನೇ ಅವತಾರ ವಾದ ‘ನರಸಿಂಹ’ನನ್ನು ‘ಬೈಬಲ್‌’ನಲ್ಲಿ ಬರುವ ‘ನಿರ್ಮೋದ್’ನಿಗೆ ಹೋಲಿಸಿದರು. ಶ್ರೀಕೃಷ್ಣನು ಹೇಳಿದ ನುಡಿಮುತ್ತುಗಳನ್ನು ಇಂದಿಗೂ ಚರ್ಚ್‌ಗಳಲ್ಲಿ ಹೇಳುತ್ತಿರುತ್ತಾರೆ, ಶ್ರೀಕೃಷ್ಣ ಹಾಗೂ ಯೇಸು ಕ್ರಿಸ್ತ ಒಬ್ಬನೇ ಎಂದು ಹೇಳುವ ಮೂಲಕ ಹಲವು ಅಮಾಯಕರನ್ನು ಹಣದ ಆಮಿಷವೊಡ್ಡಿ ಮತಾಂತರ ಮಾಡುತ್ತಿದ್ದಾರೆ.
‘ಬೈಬಲ್’ನಲ್ಲಿ ಬರುವ ಘಟನೆಗಳಿಗೆ ಹೋಲಿಕೆಯಾಗುವ ಘಟನೆಗಳನ್ನು ‘ಇತಿಹಾಸವೆಂದು’ ಹೇಳಿ, ಹೋಲಿಕೆಯಾಗದ ಘಟನೆಗಳನ್ನು ‘ಪುರಾಣ’ವೆಂದು ಹೇಳಿ ವೈಜ್ಞಾನಿಕ ಪುರಾವೆ ಗಳನ್ನು ಕೇಳುವ ಮೂಲಕ, ಹಿಂದೂ ಧರ್ಮದ ಮೂಲಕ್ಕೆ ಬೆಂಕಿಯಿಡುವ ಕೆಲಸ ಮಾಡುತ್ತಿದ್ದಾರೆ. ಬ್ರಿಟಿಷರು ಭಾರತದಲ್ಲಿ ತಾವು ಹುಟ್ಟುಹಾಕಿದ ಸುಳ್ಳು ಸೈದ್ಧಾಂತವನ್ನು ಮತ್ತಷ್ಟು ಪಸರಿಸಲು ಬಳಸಿಕೊಂಡಂತಹ ಮಾರ್ಗವೆಂದರೆ ಸಂಶೋಧನಾ ವಿಶ್ವವಿದ್ಯಾಲಗಳು.
ದೊಡ್ಡ ದೊಡ್ಡ ಶೈಕ್ಷಣಿಕ ಸಮಿತಿಗಳನ್ನು ರಚಿಸಿ ಅವುಗಳಲ್ಲಿ ಸುಳ್ಳು ಸಂಶೋಧನೆಗಳನ್ನು ಮಾಡಿಸಿ ಜಗತ್ತಿನಲ್ಲಿ ತಾವು ಹೇಳಿದಸಿದ್ಧಾಂತಗಳೇ ಸರಿಯೆಂಬ ವಾದವನ್ನು ಮಂಡಿಸತೊಡಗಿದ್ದರು. 1784ರಲ್ಲಿ ಕೋಲ್ಕತಾದಲ್ಲಿ ‘ಏಷಿಯಾಟಿಕ್ ಸೊಸೈಟಿ’ಸ್ಥಾಪಿಸುವ ಮೂಲಕ ತಮ್ಮ ಮೊದಲ ಸಂಶೋಧನಾ ಸಂಸ್ಥೆಯನ್ನು ಶುರುಮಾಡಿದರು. 1829ರ ವರೆಗೂ ಈ ಸೊಸೈಟಿಯಲ್ಲಿ ಭಾರತೀಯರಿಗೆ ಸಂಶೋಧನೆಗೆ ಅವಕಾಶ ವಿರಲಿಲ್ಲ. ಭಾರತೀಯರನ್ನು ಕೇವಲ ಮಾಹಿತಿ ನೀಡುವವರಾಗಿ ಬಳಸಿಕೊಳ್ಳ ಲಾಗುತ್ತಿತ್ತು. ಅಬ್ಬಬ್ಬಾ ಎಂದರೆ ಭಾರತೀಯರನ್ನು ಸಹಾಯಕರನ್ನಾಗಿ ಬಳಸಿಕೊಳ್ಳಲಾಗುತ್ತಿತ್ತು, ಭಾರತೀಯರನ್ನು ಬಳಸಿ ಕೊಂಡರೆ ಎಲ್ಲಿ ತಮ್ಮ ಸಂಶೋಧನೆಗೆ ಪೆಟ್ಟಾಗುವುದೆಂಬ ಭಯ ಬ್ರಿಟಿಷರಿಗಿತ್ತು.
1800ರಲ್ಲಿ ‘ಕಾಲೇಜ್ ಆಫ್ ಪೋರ್ಟ್ ವಿಲಿಯಮ್ಸ್’, 1814ರಲ್ಲಿ ಮದ್ರಾಸಿನಲ್ಲಿ ‘ಕಾಲೇಜ್ ಆಫ್ ಪೋರ್ಟ್ ಸಂತ ಜಾರ್ಜ್’ ಸ್ಥಾಪಿಸುವ ಮೂಲಕ ‘ತಮಿಳರ’ ದ್ರಾವಿಡ ಸಿದ್ಧಾಂತವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಲಂಡನ್‌ನಲ್ಲಿಯೂ ಸಹ 1888ರಲ್ಲಿ ‘ಭಾರತೀಯ ಸಂಶೋಧನಾ ಕೇಂದ್ರ’ವನ್ನು ಸ್ಥಾಪಿಸಿದರು. ಇವನ್ನೆಲ್ಲ ನೋಡಿದ ನಮ್ಮ ಸೊಕಾಲ್ಡ ಸೆಕ್ಯುಲರ್ ಭಾರತೀಯರು ಸಂಶೋಧನೆಗೆಂದು ಬ್ರಿಟನ್ನಿಗೆ ತೆರಳಿ ವಾಪಾಸ್ ಬಂದು ದೊಡ್ಡದಾಗಿ ಬೀಗುತ್ತಿದ್ದರು.
ನೂರಾರು ವರ್ಷಗಳ ಹಿಂದೆಯೇ ನಮ್ಮಲ್ಲಿ ‘ಬನಾರಸ್’ನಂತಹ ಬೃಹತ್ ವಿಶ್ವವಿದ್ಯಾಲಯದಲ್ಲಿ ಹಿಂದೂ ಧರ್ಮದ ಬಗ್ಗೆ ನಡೆದಿರುವ ಅದೆಷ್ಟೋ ಸಂಶೋಧನೆಗಳಿವೆ, ಮುಸಲ್ಮಾನರ ಆಕ್ರಮಣದಿಂದ ಹಾಳಾದ ವಿಶ್ವವಿದ್ಯಾಲಯವನ್ನು ಮರೆತು, ಬ್ರಿಟಿಷರು ನಿರ್ಮಿಸಿದ್ದಂತಹ ‘ಆರ್ಯನ್’ ಸಂಶೋಧನಾ ವಿಶ್ವ ವಿದ್ಯಾಲಯಗಳ ಮೊರೆ ಹೋದದ್ದು ಮಾತ್ರ ವಿಪರ್ಯಾಸ.ಭಾರತದಲ್ಲಿದಂತಹ ವರ್ಣ ವ್ಯವಸ್ಥೆಯನ್ನು ಜಾತಿ ವ್ಯವಸ್ಥೆಯನ್ನಾಗಿ ಬದಲಾಯಿಸಿದವರೇ ಬ್ರಿಟಿಷರು, ಸಮಾಜ ದಲ್ಲಿಅವನವನು ಮಾಡುವ ಕೆಲಸಕ್ಕನುಗುಣವಾಗಿ ಗುರುತಿಸಲ್ಪಡುತಿದ್ದನು.
ಇಂತಹ ಗುರುತಿವಿಕೆಯನ್ನೇ ಜಾತಿ ಪದ್ಧತಿಯಾಗಿ ಬ್ರಿಟಿಷರು ಬದಲಾಯಿಸಿದರು. 1901ರ ಜನಗಣತಿಯ ಸಂದರ್ಭದಲ್ಲಿ ಬ್ರಿಟಿಷ್ ಕಮಿಷನರ್ ‘ರೈಸಲೇ’ ಮೊಟ್ಟಮೊದಲ ಬಾರಿಗೆ ಸರಕಾರಿ ದಾಖಲೆಗಳಲ್ಲಿ ಬಳಕೆಯಾಗುವಂತೆ ಸುಮಾರು 2378 ಜಾತಿಗಳನ್ನು ಪಟ್ಟಿ ಮಾಡಿದ. ಈತನು ಪಟ್ಟಿ ಮಾಡಿದ ಪಟ್ಟಿಗಳನ್ನು ಸರಕಾರಿ ಕೆಲಸಗಳ ನಮೂನೆಗಳಲ್ಲಿ ತುಂಬಲು ಪುಟಗಟ್ಟಲೆ ಜಾಗಬೇಕಿತ್ತು. ಈತ ಜಗತ್ತಿನ ಅತ್ಯಂತ ಕೆಟ್ಟದಾದ ಹಾಗೂ ಕಷ್ಟವಾದ ಸರಕಾರಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದ, ಇವನು ಮಾಡಿದ ಆ ಒಂದು ತಪ್ಪಿನಿಂದ ಬ್ರಿಟಿಷರಿಗೆ ಭಾರತೀಯ ಜಾತಿ ವ್ಯವಸ್ಥೆಯ ಸಂಪೂರ್ಣ ಜುಟ್ಟು ಜನಿವಾರ ಸಿಕ್ಕಂತಾಗಿತ್ತು.
ದಕ್ಷಿಣ ಭಾರತದ ಇತಿಹಾಸದಲ್ಲಿ ನಡೆದ ಮತಾಂತರದ ಮುಖ್ಯ ರೂವಾರಿಯೆಂದರೆ ‘ಬಿಷಪ್ ಕ್ಲಾಡ್ ವೆಲ್’ ತನ್ನ 24ನೆಯ ವಯಸಿನಲ್ಲಿ ಮದ್ರಾಸ್ ನಗರಕ್ಕೆ ಬಂದಿಳಿದ ಈತ, ಭಾರತೀಯರನ್ನು ಧರ್ಮ ಹಾಗೂ ಭಾಷೆಗಳ ಆಧಾರದ ಮೇಲೆ ವಿಭಜಿಸಿ ಹಿಂದೂ ಧರ್ಮದ ಕೆಲವೊಂದು ಆಚರಣೆ ಗಳನ್ನು ಕ್ರಿಶ್ಚಿಯನ್ನರ ‘ಬೈಬಲ’ನಲ್ಲಿರುವ ಆಚರಣೆಗಳಿಗೆ ತಾಳೆ ಹಾಕಿದ. ನೋಡನೋಡುತ್ತಲೇ ಈತನು ‘ತಿರುನಲ್ವೇಲಿ’ಯ ಚರ್ಚ್‌ನಲ್ಲಿ ‘ಬಿಷಪ್’ ಆದ, ತಾನು ಬಿಷಪ್ ಆದ ಸಂದರ್ಭದಲ್ಲಿ ದ್ರಾವಿಡನ್ನರ ಬಗ್ಗೆ ಬರೆದಿದ್ದ ಪುಸ್ತಕವೊಂದನ್ನು ‘ಈಸ್ಟ್’ ಇಂಡಿಯಾ ಕಂಪನಿ 1881ರಲ್ಲಿ ಪ್ರಕಟಿಸಿತ್ತು.
ಈತನ ಮತಾಂತರಕ್ಕೆ ತತ್ತರಿಸಿದ ತಮಿಳುನಾಡಿನಲ್ಲಿ ಇಂದಿಗೂ ದ್ರಾವಿಡ ಮನಸ್ಥಿತಿ ಅಲುಗಾಡುತಿಲ್ಲ. ಹಿಂದೂ ಧರ್ಮವನ್ನು ದ್ರಾವಿಡರಿಂದ ಬೆರ್ಪಡಿಸುವಲ್ಲಿ ಈತ ಯಶಸ್ವಿಯಾಗಿದ್ದ. ಈತ ಸತ್ತ ಎಂಟು ದಶಕಗಳ ಮೇಲೆ, ಈತನ ದೊಡ್ಡದೊಂದು ಪ್ರತಿಮೆಯನ್ನು ಚೆನ್ನೈನ ಮರೀನಾ ಬೀಚ್ ನಲ್ಲಿ ಸ್ಥಾಪಿಸಲಾಯಿತು. ಈತನು ತನ್ನ ಶಕ್ತಿಯನ್ನು ಬಳಸಿಕೊಂಡು ದಕ್ಷಿಣ ತಮಿಳುನಾಡಿನ ಹಲವೆಡೆ ಹಿಂದೂ ದೇವಸ್ಥಾನದ ಕಲಾಕೃತಿಗಳನ್ನೇ ಬದಲಿಸಿದ್ದ. ಈತನು ಹೇಳಿದ ದ್ರಾವಿಡ ಸಿದ್ಧಾಂತವನ್ನು ನಂಬಿದ ತಮಿಳುನಾಡಿನ ಜನರು ಇಂದಿಗೂ ತಮ್ಮನ್ನು ತಾವು ಹಿಂದೂಗಳೆಂದು ಹೇಳಿಕೊಳ್ಳುವುದಿಲ್ಲ.
‘ಕ್ಲಾಡ್ ವೆಲ್’ನ ಸುಳ್ಳು ವಾದಗಳು ಹೇಗಿವೆಯೆಂದರೆ, ದಕ್ಷಿಣ ಭಾರತೀಯರು ‘ಸಂಸ್ಕೃತ’ ಭಾಷೆಯನ್ನು ಕಿತ್ತೊಗೆಯಬೇಕಂತೆ, ‘ಬೈಬಲ’ನ ಮೂಲಕ ತಾವು ಕಳೆದುಕೊಂಡಂಥ ಸಂಸ್ಕೃತಿ ಹಾಗೂ ಭಾಷೆಯನ್ನು ಹುಡುಕಬೇಕಂತೆ. ಈತನದ್ದು ಕೇವಲ ಅಂತೆ ಕಂತೆಗಳಷ್ಟೇ. ಯಾವ ಭಾಷೆಯನ್ನು ಎಲ್ಲಿ ಹುಡುಕಬೇಕೆಂದು ಈತ ಹೇಳಲಿಲ್ಲ. ತನ್ನ ವಾದಗಳಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಸರಿಹೊಂದುವಂತಹ ಧಾರ್ಮಿಕ ಆಚರಣೆಗಳನ್ನು ‘ತಮಿಳರ ದ್ರಾವಿಡ’ ಧರ್ಮಕ್ಕೆ ಜೋಡಿಸಿ, ಸರಿಹೊಂದದ ಆಚರಣೆಗಳನ್ನು ಸಂಪೂರ್ಣ ‘ಬ್ರಾಹ್ಮಣ’ ಆಚರಣೆಗಳೆಂದು ಕರೆದ.
ಬ್ರಾಹ್ಮಣರು ದ್ರಾವಿಡರ ಮೇಲೆ ಆಕ್ರಮಣ ಮಾಡಿದವರು, ಅವರಿಂದ ದ್ರಾವಿಡರ ನಾಶವಾಗುತ್ತದೆ ಎಂಬ ಸುಳ್ಳನ್ನು ತಮಿಳರ ತಲೆಯಲ್ಲಿ ತುಂಬಿದ. ಈತನ ಸುಳ್ಳು ಸಿದ್ಧಾಂತವನ್ನು ನಂಬಿದ ಕೆಲವು ತಮಿಳುನಾಡಿನ ವಿದ್ವಾಂಸರು, ತಮ್ಮ ನಾಡಿನ ಹಳೆಯ ಸಂಸ್ಕೃತಿ ಹಾಗೂ ಆಚರಣೆಗಳ ಪರಾಮರ್ಶೆಮಾಡಲು ಶುರುಮಾಡಿದರು. ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬಂದಂತಹ ಆಚರಣೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಲು ಶುರು ಮಾಡಿದ್ದರು. ತಮಿಳರ ಪ್ರಸಿದ್ಧ ‘ಶೈವ ಸಿದ್ದಾಂತವನ್ನುಪ್ರಶ್ನಿಸಿದ ಈತ, ಪೋಪ್‌ನ ಜೊತೆಗೂಡಿ ‘ಶೈವ ಸಿದ್ಧಾಂತ’ವು ಪರೋಕ್ಷವಾಗಿ ಕ್ರಿಶ್ಚಿಯನ್ನರು ರೂಢಿಸಿಕೊಂಡಂತಹ ಸಿದ್ಧಾಂತವೆಂದು ಹೇಳಿದ.
ತಮಿಳುನಾಡಿನ ಶ್ರೇಷ್ಠ ಕವಿ ‘ತಿರುವಳ್ಳುವರ್’  ಕ್ರಿಶ್ಚಿಯನ್ನರಿಂದ ಜೀವನದ ತತ್ತ್ವಗಳನ್ನು ಕಲಿತಿದ್ದರಂತೆ, ತಮ್ಮ ಪುಸ್ತಕದ ಮೂಲಕ ತಮಿಳರಿಗೆ ಸುಲಭವಾಗುವ ಸಲುವಾಗಿ ‘ತಿರುವಳ್ಳುವರ್’ ಕವಿತೆಗಳ ರೂಪದಲ್ಲಿ ಕ್ರಿಶ್ಚಿಯನ್ ಧರ್ಮದ ತತ್ತ್ವಗಳನ್ನು ಹೇಳುತ್ತಿದ್ದರಂತೆ. ಕ್ರಿಶ್ಚಿಯನ್ ಮಿಷನರಿಗಳು ನೋಡನೋಡುತ್ತಲೇ ‘ದ್ರಾವಿಡರು’ ಭಾರತದ ಕ್ರಿಶ್ಚಿಯನ್ ಧರ್ಮದ ಮೂಲ ನಿವಾಸಿಗಳೆಂದು ಹೇಳುವ ಮೂಲಕ ತಮಿಳುನಾಡಿನೆಡೆ ತಮ್ಮ ಮತಾಂತರವನ್ನು ಹೆಚ್ಚಿಸಿದರು.
ಯೂರೋಪಿನ ಕ್ರಿಶ್ಚಿಯನ್ ಮಿಷನರಿಗಳು ಬ್ರಿಟಿಷರು ಸ್ಥಾಪಿಸಿದ್ದ ‘ಕಾಲೋನಿ’ಗಳನ್ನು ಸಂಪೂರ್ಣ ಕ್ರಿಶ್ಚಿಯನ್‌ಮಯಗೊಳಿಸುವ ಸಲುವಾಗಿ ಆಯಾ ದೇಶಗಳ ಸಂಸ್ಕೃತಿ ಯನ್ನು ನಾಶ ಗೊಳಿಸಲು ಹಂತಹಂತವಾಗಿ ಪ್ರಯತ್ನಿಸುತ್ತಲೇ ಬಂದಿದ್ದಾರೆ.ಇಂದಿಗೂ ಸಹ ಅವರು ನಡೆಸುತ್ತಿರುವ ಮತಾಂತರವೆಂಬ ವಿನಾಶ ಕಾರಿ ವ್ಯವಸ್ಥೆ ಭಾರತದಲ್ಲಿ ಹಲವು ಸಮಸ್ಯೆಯನ್ನು ತಂದೊಡ್ಡಿದೆ.
ಇವರು ಪ್ರತಿಪಾದಿಸಿದ ಸುಳ್ಳು ಸಿದ್ಧಾಂತಗಳನ್ನು ಸರಿಯೆಂದು ಹೇಳುವ ಮೂಲಕ ಭಾರತದ ಕಮ್ಯುನಿಸ್ಟರು ಆಂತರಿಕ ಶತ್ರುಗಳಾಗಿzರೆ. ಆಂತರಿಕ ಶತ್ರುಗಳನ್ನು ಸೃಷ್ಟಿಸಿ ತಮ್ಮ ಮತಾಂತರ ವನ್ನು ಸುಸೂತ್ರವಾಗಿ ಕ್ರಿಶ್ಚಿಯನ್ನರು ಮಾಡುತ್ತಿದ್ದಾರೆ. ಆರ್ಯರುಎಂಬ ಪೊಳ್ಳು ಸಿದ್ಧಾಂತವನ್ನು ಭಾರತೀಯರ ತಲೆಯಲ್ಲಿ ತುಂಬುವ ಮೂಲಕ, ಹಣದ ಆಮಿಷವೊಡ್ಡಿ ಕ್ರಿಶ್ಚಿಯನ್ನರು ‘ಮತಾಂತರ’ ಮಾಡುವಲ್ಲಿ ಸತತವಾಗಿ ನಿರತರಾಗಿದ್ದಾರೆ.