ಸ್ಥೂಲಕಾಯ ತರುವ ತೊಡಕುಗಳು
ವೈದ್ಯವೈವಿಧ್ಯ
ಡಾ.ಎಚ್.ಎಸ್.ಮೋಹನ್
ಸ್ಥೂಲಕಾಯದ ಬಗೆಗಿನ ತಪ್ಪು ತಿಳಿವಳಿಕೆಗಳ ಬಗ್ಗೆ ಎರಡು ವಾರ ಗಳ ಮೊದಲು ಈ ಅಂಕಣದಲ್ಲಿ ಬರೆದಿದ್ದೆ. ಈಗ ನಾವು ಸ್ಥೂಲಕಾಯ ಒಬ್ಬ ವ್ಯಕ್ತಿಗೆ ಉಂಟುಮಾಡುವ ತೊಡಕುಗಳು () ಅಥವಾ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನ ಹರಿಸೋಣ.
ಸ್ಥೂಲಕಾಯವು ವ್ಯಕ್ತಿಗೆ ಉಂಟುಮಾಡಬಹುದಾದ೧೦ಮುಖ್ಯ ತೊಡಕುಗಳೆಂದರೆ:೧.ಹೃದಯ ಕಾಯಿಲೆ೨.ಪಾರ್ಶ್ವವಾಯು,೩.ವಿಪರೀತ ಏರು ರಕ್ತದೊತ್ತಡ,೪.ಡಯಾಬಿಟಿಸ್,೫.ಪಿತ್ತಜನಕಾಂಗದ ಕಾಯಿಲೆಗಳು ಮತ್ತು ಕಲ್ಲುಗಳು (     )೬.ಕೆಲವು ಕ್ಯಾನ್ಸರ್ ಕಾಯಿಲೆಗಳು,೭.ಸಂಧಿವಾತ ಕಾಯಿಲೆ () ೮. ಗೌಟ್ ಕಾಯಿಲೆ ೯. ಉಸಿರಾಟದ ತೊಂದರೆಗಳು – ಸ್ಲೀಪ್ ಏಪ್ನಿಯಾ೧೦.ಅಸ್ತಮಾ.
೧.ಹೃದಯ ಕಾಯಿಲೆ:ಸ್ಥೂಲಕಾಯವು ಮೂರು ಭಿನ್ನ ರೀತಿಗಳಿಂದ ಹೃದಯದ ಮೇಲೆ ಪರಿಣಾಮ ಹೊಂದಿದೆ. ಅದು ರಕ್ತದಲ್ಲಿನ ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸಬಲ್ಲದು, ಅದರಲ್ಲಿಯೂ ಮುಖ್ಯವಾಗಿ ಕೆಟ್ಟ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ಸ್ ಮಟ್ಟವನ್ನು ಹೆಚ್ಚಿಸುತ್ತದೆ. ಅಲ್ಲದೆ ಮತ್ತೊಂದು ರೀತಿ ಎಂದರೆ ಒಳ್ಳೆಯ ಕೊಲೆಸ್ಟರಾಲ್ ಎಂದರೆ  ಅನ್ನು ಕಡಿಮೆ ಮಾಡುತ್ತದೆ. ಈ  ಕೊಲೆಸ್ಟರಾಲ್ ದೇಹದಲ್ಲಿನ ಕೆಟ್ಟ ಕೊಲೆಸ್ಟರಾಲ್  ತೆಗೆಯಲು ಹಾಗೂ ಹೃದಯ ಕಾಯಿಲೆ ಬರುವ ಸಾಧ್ಯತೆಯನ್ನು ಕಡಿಮೆ ಮಾಡಲು ಅವಶ್ಯಕ.
ಸ್ಥೂಲಕಾಯವು ಉಂಟುಮಾಡುವ ಹೃದಯದ ಮುಖ್ಯ ಕಾಯಿಲೆಗಳೆಂದರೆ – ಹೃದಯ ವೈಫಲ್ಯ ( ), ಹೃದಯದ ಬಡಿತದಲ್ಲಿ ಏರುಪೇರು ಉಂಟು ಮಾಡುವ ಕಾಯಿಲೆಗಳು ( ), ಹೃದಯಾಘಾತ ( ).
೨.ಪಾರ್ಶ್ವವಾಯು:ಸ್ಥೂಲಕಾಯದವರು ಪಾರ್ಶ್ವ ವಾಯುವಿಗೆ ಗುರಿಯಾಗುವ ಸಾಧ್ಯತೆ ಇತರರಿಗಿಂತ ಜಾಸ್ತಿ. ದೇಹದಲ್ಲಿ ಅನಗತ್ಯವಾದ ಕೊಬ್ಬಿನ ಅಂಶ ಇದ್ದಾಗ ಅದು ದೇಹದಲ್ಲಿ ಉರಿಯೂತ ()ಕ್ಕೆ ಕಾರಣ ವಾಗುತ್ತದೆ. ಪರಿಣಾಮ ಎಂದರೆ ರಕ್ತದ ಚಲನೆ ಕುಂಠಿತ ಗೊಳ್ಳುತ್ತದೆ. ನಂತರ ರಕ್ತನಾಳಗಳಲ್ಲಿ ರಕ್ತ ಕಟ್ಟಿಕೊಂಡು ಪಾರ್ಶ್ವವಾಯು ಬರಲು ಕಾರಣ ವಾಗುತ್ತದೆ. ಪಾರ್ಶ್ವವಾಯು ಪೂರ್ಣ ಪ್ರಮಾಣದಲ್ಲಿ ಉಂಟಾಗದೇ ಇದ್ದಾಗಲೂ ಕೆಲವರಲ್ಲಿ ಸಣ್ಣ ಪ್ರಮಾಣದ ಸ್ಟ್ರೋಕ್ಸ್ಉಂಟಾಗಬಹುದು. ಇದನ್ನು    ಎನ್ನುತ್ತೇವೆ. ಈ ತರಹದ ಸಣ್ಣ ಪ್ರಮಾಣದ ಸ್ಟ್ರೋಕ್ಸ್ ಭವಿಷ್ಯದಲ್ಲಿ ಪೂರ್ಣ ಪ್ರಮಾಣದ ಸ್ಟ್ರೋಕ್ಸ್ ಅಥವಾ ಪಾರ್ಶ್ವ ವಾಯುವಾಗಿ ಪರಿಣಮಿಸಬಹುದು.
೩.ಸ್ಥೂಲಕಾಯ:ವ್ಯಕ್ತಿಯ ರಕ್ತದೊತ್ತಡವನ್ನು ಹೆಚ್ಚಿಸಬಲ್ಲದು. ಸ್ಥೂಲಕಾಯದ ವ್ಯಕ್ತಿಗಳಲ್ಲಿ ದೇಹಕ್ಕೆ ಆಮ್ಲಜನಕ ಮತ್ತು ಇತರ ಪೋಷಕಾಂಶಗಳನ್ನು ಪೂರೈಸಲು ಹೆಚ್ಚಿನ ಪ್ರಮಾಣದ ರಕ್ತ ಬೇಕಾಗುತ್ತದೆ. ಆಗ ರಕ್ತದ ಒತ್ತಡವು ಅನಿವಾರ್ಯವಾಗಿ ಹೆಚ್ಚಾಗುತ್ತದೆ. ಅಲ್ಲದೆ ಈ ಹೆಚ್ಚಿನ ರಕ್ತವನ್ನು ದೇಹದ ಇತರೆಡೆ ಒಯ್ಯಲು ಹೆಚ್ಚಿನ ಒತ್ತಡ ಬೇಕಾಗುತ್ತದೆ. ಈ ಎಲ್ಲಾ ಕಾರಣ ಗಳಿಂದ ಏರಿದ ರಕ್ತದೊತ್ತಡವು ಹೃದಯಾಘಾತ ( ) ಉಂಟಾಗಲು ಕಾರಣವಾಗುತ್ತದೆ.
ಅಮೆರಿಕದ ಒಂದು ಸರ್ವೆಯ ಅಂದಾಜಿನ ಪ್ರಕಾರ ಅಲ್ಲಿನ ವಯಸ್ಕರ ಶೇ.೭೦ರಷ್ಟು ಜನರಲ್ಲಿ ಸ್ಥೂಲಕಾಯವಿದೆ. ಶೇ.೬೭ರಷ್ಟುಜನರಲ್ಲಿ ವಿಪರೀತ ಏರುರಕ್ತದೊತ್ತಡವೂ ಇದೆ. ಹಾಗಾಗಿ ಇವೆರಡೂ ಹೆಚ್ಚಿನ ಸಂದರ್ಭಗಳಲ್ಲಿ ಒಬ್ಬ ವ್ಯಕ್ತಿಯಲ್ಲಿ ಒಟ್ಟಿಗೇ ಇರುವ ಸಾಧ್ಯತೆ ಇದೆ. ಜತೆಗೆ ಸ್ಥೂಲಕಾಯ ವ್ಯಕ್ತಿಗಳ ವಿಪರೀತ ತೂಕವು ಕಿಡ್ನಿಯ ಮೇಲೆ ಒತ್ತಡ ಹೇರುತ್ತದೆ. ಪರಿಣಾಮವಾಗಿ ಅದು ಹೃದಯದ ಮೇಲೆ ಮತ್ತಷ್ಟು ಒತ್ತಡ ಹೇರುತ್ತದೆ.
ಏರು ರಕ್ತದೊತ್ತಡವಿದ್ದಾಗ ಅದು ಕಿಡ್ನಿಯ ಸಣ್ಣ ರಕ್ತನಾಳಗಳಿಗೆ ಹಾನಿ ಉಂಟು ಮಾಡುತ್ತದೆ. ಆ ರಕ್ತನಾಳಗಳ ಒಳಗಿನ ಭಾಗ ದಪ್ಪವಾಗಿ ರಕ್ತದ ಹರಿವು ಕಡಿಮೆಯಾಗುತ್ತದೆ. ಪರಿಣಾಮ ಎಂದರೆ ಕಿಡ್ನಿಗೆ ರಕ್ತದ ಕೆಟ್ಟ ಅಂಶಗಳನ್ನು ಹೊರಹಾಕಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹೃದಯದ ಮೇಲೆ ಒತ್ತಡ ಹೆಚ್ಚುತ್ತದೆ. ಸ್ಥೂಲಕಾಯ ಮತ್ತು ವಿಪರೀತ ರಕ್ತದೊತ್ತಡ ಒಬ್ಬ ವ್ಯಕ್ತಿಯಲ್ಲಿ ಜತೆಯಲ್ಲಿ ರುವ ತರಹದ ರೋಗಿಗಳು ಜಾಸ್ತಿಯಾದಾಗ ಅದು ಸಮಾಜದಲ್ಲಿನ ಆರ್ಥಿಕ ಸಂಕಷ್ಟಗಳಿಗೂ ಕಾರಣವಾಗುತ್ತದೆ.
ಮೊದಲು ತಿಳಿಸಿದಂತೆ ಏರುರಕ್ತದೊತ್ತಡದ ವ್ಯಕ್ತಿಗಳಲ್ಲಿ ಶೇ.೭೮ರಷ್ಟು ಪುರುಷರು ಮತ್ತು ಶೇ.೬೫ರಷ್ಟು ಮಹಿಳೆಯರು ಸ್ಥೂಲಕಾಯದವರೇ ಆಗಿರುತ್ತಾರೆ.
೪.ಸ್ಥೂಲಕಾಯವು ಡಯಾಬಿಟಿಸ್ ತರಬಲ್ಲದು:ಇತ್ತೀಚಿನ ಅಮೆರಿಕದಲ್ಲಿನ ಸರ್ವೆಯ ಪ್ರಕಾರ೬೫ಮತ್ತು ನಂತರದ ವಯಸ್ಸಿನ ಶೇ.೬೮ರಷ್ಟು ಜನರು ಡಯಾಬಿಟಿಸ್  ಜತೆಗೆ ಹೃದಯದ ಕಾಯಿಲೆಯನ್ನೂ ಹೊಂದಿದ್ದಾರೆ. ಡಯಾಬಿಟಿಸ್ ವ್ಯಕ್ತಿಗಳು ಇತರರಿಗಿಂತ೪ಪಟ್ಟು ಜಾಸ್ತಿ ಹೃದಯದ ಕಾಯಿಲೆಗೆ ಒಳಗಾಗುವ ಸಾಧ್ಯತೆ ಇದೆ. ಸ್ಥೂಲಕಾಯದ ವ್ಯಕ್ತಿಗಳಲ್ಲಿ ದೇಹವು ತನಗೆ ಅಗತ್ಯವಿರುವಷ್ಟು ಇನ್ಸುಲಿನ್ ಉತ್ಪಾದಿಸುತ್ತದೆ. ಆದರೆ ದೇಹದ ಜೀವಕೋಶಗಳು ಇನ್ಸುಲಿನ್‌ನ ಕಾರ್ಯಕ್ಕೆ ಸ್ಪಂದಿಸುವುದಿಲ್ಲ.
ಇತ್ತೀಚಿನ ಒಂದು ಸಂಶೋಧನೆಯ ಪ್ರಕಾರ ಸ್ಥೂಲ ಕಾಯದ ವ್ಯಕ್ತಿಗಳ ಜೀವಕೋಶಗಳ ಒಳಭಾಗದಲ್ಲಿ ಒತ್ತಡಜಾಸ್ತಿಯಾಗುತ್ತದೆ. ಈ ಸ್ಥೂಲಕಾಯದ ವ್ಯಕ್ತಿಗಳು ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುತ್ತಾ ಹೋದ ಹಾಗೆ ದೇಹದ ಜೀವಕೋಶ ಗಳ ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್ ಮೇಲೆ ಒತ್ತಡ ಹೆಚ್ಚು ಬೀಳುತ್ತದೆ. ತನಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದಿರುವಷ್ಟು ಆಹಾರದ ಅಂಶಗಳು ಬಂದಾಗ ಮೇಲಿನ ಭಾಗ ಜೀವಕೋಶಕ್ಕೆ ಅಪಾಯದ ಸಂಕೇತಗಳನ್ನು ಕಳುಹಿಸುತ್ತದೆ.
ಆಗ ಅದು ಜೀವಕೋಶದ ಹೊರಭಾಗದಲ್ಲಿರುವ ಇನ್ಸುಲಿನ್ ರೆಸಪ್ಟಾರ್‌ಗಳಿಗೆ ಕೆಲಸ ಮಾಡದಂತೆ ಸೂಚಿಸುತ್ತದೆ. ಪರಿಣಾಮ ಎಂದರೆ ಇನ್ಸುಲಿನ್ ರೆಸಿಸಟನ್ಸ್ ಎಂಬ ಸ್ಥಿತಿ ಉಂಟಾಗಿ ರಕ್ತದಲ್ಲಿ ಸಕ್ಕರೆಯ ಅಂಶ ವಿಪರೀತ ಜಾಸ್ತಿಯಾಗಿ ವ್ಯಕ್ತಿಗೆ ಡಯಾಬಿಟಿಸ್ ಉಂಟಾಗುತ್ತದೆ. ಸ್ಥೂಲಕಾಯದ ವಯಸ್ಕರಲ್ಲಿ ಡಯಾಬಿಟಿಸ್ ಬರುವ ಸಾಧ್ಯತೆ ಇತರರಿಗಿಂತ ಶೇ.೮೦ – ೮೫ರಷ್ಟು ಜಾಸ್ತಿಎನ್ನಲಾಗಿದೆ.
ಡಯಾಬಿಟಿಸ್ ಬರುವ ಮತ್ತೊಂದು ರೀತಿ ಎಂದರೆ ಸ್ಥೂಲಕಾಯದ ವ್ಯಕ್ತಿಗಳಲ್ಲಿರುವ ಹೊಟ್ಟೆಯ ಭಾಗದ ಕೊಬ್ಬು, ಕೊಬ್ಬಿನ ಜೀವಕೋಶಗಳಿಗೆ ‘ಪ್ರೊ ಇನ್ ಫ್ಲಮೇಟರಿ ರಾಸಾಯನಿಕ’ ಗಳನ್ನು ಸ್ರವಿಸುವಂತೆ ಆದೇಶಿಸುತ್ತದೆ. ಈ ರಾಸಾಯನಿಕಗಳು ದೇಹದ ಇನ್ಸುಲಿನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತವೆ. ಪರಿಣಾ ಮ ಎಂದರೆ ಇನ್ಸುಲಿನ್ ರೆಸಿಸ್ಟನ್ಸ್ ಎನ್ನುವ ಸ್ಥಿತಿ ಉಂಟಾಗಿವ್ಯಕ್ತಿಗೆ ಡಯಾಬಿಟಿಸ್ ಬರುತ್ತದೆ.
೫. ಕೆಲವು ಕ್ಯಾನ್ಸರ್ ಕಾಯಿಲೆಗಳು:ಸ್ಥೂಲಕಾಯ ಮತ್ತು ವಿಪರೀತ ತೂಕ ವಿವಿಧ ಕ್ಯಾನ್ಸರ್ ಬರಲು ಕಾರಣವಾಗುತ್ತದೆ. ಸ್ಥೂಲಕಾಯದ ವ್ಯಕ್ತಿಗಳಲ್ಲಿರುವ ಹೆಚ್ಚಿನ ಕೊಬ್ಬಿನ ಅಂಶಗಳು ದೇಹದ ಇತರ ಭಾಗಗಳಿಗೆ ಸಂದೇಶ ಕಳಿಸುತ್ತದೆ. ಈ ಸಂದೇಶಕ್ಕೆ ಸ್ಪಂದಿಸಿ ನಮ್ಮ ಜೀವಕೋಶಗಳು ಹೆಚ್ಚು ಪ್ರಮಾಣದಲ್ಲಿ ವಿಘಟನೆ ಹೊಂದುತ್ತವೆ. ಇದರ ಪರಿಣಾಮದಿಂದ ವಿವಿಧ ಕ್ಯಾನ್ಸರ್‌ಗಳು ಬರುತ್ತವೆ.
ಕೊಬ್ಬಿನ ಜೀವಕೋಶಗಳು ಹೊರಹಾಕಿದ ಸಂದೇಶಗಳು ದೇಹದ ಬೆಳವಣಿಗೆಯ ಹಾರ್ಮೋನು ( ) ಹೆಚ್ಚಾಗು ವಂತೆ ಮಾಡುತ್ತದೆ. ಈ ಹಾರ್ಮೋನು ಅಲ್ಲಿನ ಜೀವಕೋಶಗಳಿಗೆ ಹೆಚ್ಚು ಹೆಚ್ಚಾಗಿ ವಿಭಜನೆ ಹೊಂದುವಂತೆ ಸೂಚಿಸುತ್ತದೆ. ಪರಿಣಾಮ ಎಂದರೆ ವಿವಿಧ ಕ್ಯಾನ್ಸರ್ ಕಾಯಿಲೆಗಳು ಬರುತ್ತವೆ.
ಉರಿಯೂತ:ದೇಹದಲ್ಲಿ ಕೊಬ್ಬಿನ ಜೀವಕೋಶಗಳು ಜಾಸ್ತಿಯಾದಾಗ ಪ್ರತಿರೋಧ ವ್ಯವಸ್ಥೆಯ ಜೀವಕೋಶಗಳು ಅಲ್ಲಿನ ಕೊಬ್ಬಿನ ಜೀವಕೋಶಗಳನ್ನು ಹೊರಹಾಕಲು ಬರುತ್ತವೆ. ಆಗ ಉರಿಯೂತ ಉಂಟಾಗುತ್ತದೆ. ಈ ಉರಿಯೂತವು ಜೀವಕೋಶಗಳಿಗೆ ಬೇಗ ವಿಭಜನೆ ಹೊಂದುವಂತೆ ಸೂಚಿಸುತ್ತದೆ. ಪರಿಣಾಮ ಎಂದರೆ ಕ್ಯಾನ್ಸರ್ ಬರುತ್ತದೆ.
ಲೈಂಗಿಕ ಹಾರ್ಮೋನುಗಳು:ಮಹಿಳೆಯರಿಗೆ ಮುಟ್ಟುನಿಂತಾದ ಮೇಲೆ ಕೊಬ್ಬಿನ ಜೀವಕೋಶಗಳು ಈಸ್ಟ್ರೊಜೆನ್ ಹಾರ್ಮೋನನ್ನು ಉತ್ಪಾದಿಸುತ್ತವೆ. ಈ ಹೆಚ್ಚಿನ ಹಾರ್ಮೋನು ಮಹಿಳೆಯರ ಸ್ತನದ ಭಾಗಗಳಲ್ಲಿ ಮತ್ತು ಗರ್ಭಕೋಶದ ಭಾಗಗಳಲ್ಲಿನ ಜೀವಕೋಶ ಗಳನ್ನು ಹೆಚ್ಚಿಸುತ್ತವೆ. ಆಗ ಈ ಭಾಗಗಳಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಸ್ಥೂಲಕಾಯ ಮತ್ತು ವಿಪರೀತ ತೂಕ೧೩ರೀತಿಯ ಕ್ಯಾನ್ಸರ್ ಕಾಯಿಲೆ ತರಬಲ್ಲದು. ಅವೆಂದರೆ೧.ಸ್ತನ೨.ಕರುಳಿನ ಭಾಗ೩. ಮೇದೋಜೀರಕ ಗ್ರಂಥಿ ()೪.ಅನ್ನನಾಳ೫.ಪಿತ್ತಕೋಶ ( )೬.ಗರ್ಭಕೋಶ ಮತ್ತು೭.ಗರ್ಭಾಶಯ ()೮.ಕಿಡ್ನಿ೯.ಲಿವರ್೧೦.ಹೊಟ್ಟೆಯ ಮೇಲ್ಭಾಗ೧೧.ಮೈಯಲೋಮಾ (ರಕ್ತದ ಕ್ಯಾನ್ಸರ್)೧೨.ಮೆನಿಂಜಿಯೋಮಾ (ಮೆದುಳಿನ ಕ್ಯಾನ್ಸರ್) ೧೩.ಥೈರಾಯ್ಡ್ ಕ್ಯಾನ್ಸರ್.
ಸ್ಲೀಪ್ ಏಪ್ನಿಯಾ:ವ್ಯಕ್ತಿಯು ಮಲಗಿದಾಗ ಉಸಿರಾಟದ ಕ್ರಿಯೆಗೆ ತೊಂದರೆಯಾಗಿ ಕೆಲವೊಮ್ಮೆ ಆತ ವಿಪರೀತವಾಗಿ ಗೊರಕೆಹೊಡೆಯಲು ಆರಂಭಿಸುತ್ತಾನೆ. ಮುಖ್ಯ ಕಾರಣ ಎಂದರೆ ಕುತ್ತಿಗೆಯಲ್ಲಿನ ಉಸಿರಾಟದ ನಾಳಗಳಲ್ಲಿ ಅಡಚಣೆ ಉಂಟಾಗುವುದು. ಉದಾಹರಣೆ ಕೊಡುವುದಾದರೆ ಒಂದು ಸ್ಟ್ರಾ ಕಡ್ಡಿಯ ಮೂಲಕ ಉಸಿರಾಡಿದಂತೆ. ಸ್ಥೂಲಕಾಯದ ವ್ಯಕ್ತಿಗಳಲ್ಲಿ ಈ ರೀತಿಯ ಉಸಿರಾಟದ ತೊಂದರೆ ಬೇರೆಯವರಿಗಿಂತ ಜಾಸ್ತಿ ಕಾಣಿಸಿಕೊಳ್ಳುತ್ತದೆ.
ಹೀಗೆ ತೊಂದರೆಯಾದಾಗ ಆ ವ್ಯಕ್ತಿಗೆ ನಿದ್ರೆಯು ಸರಿಯಾಗಿ ಬರದೆ ಪುನಃ ಮತ್ತಷ್ಟು ತೂಕ ಜಾಸ್ತಿಯಾಗಲು ಕಾರಣವಾಗುತ್ತದೆ.ವ್ಯಕ್ತಿಯಲ್ಲಿ ತೂಕ ಜಾಸ್ತಿಯಾದಾಗ ಆತನ ಕುತ್ತಿಗೆಯ ಭಾಗದಲ್ಲಿ ಕೊಬ್ಬಿನ ಅಂಶವು ಜಾಸ್ತಿಯಾಗಿ ಗಾಳಿಯ ಚಲನೆಗೆ ತಡೆ ಒಡ್ಡುತ್ತದೆ. ಗಾಳಿಯು ಕಿರಿದಾದ ಕೊಳವೆಯ ರೀತಿಯ ವಾಯುನಾಳದಲ್ಲಿ ಸಂಚರಿಸುತ್ತಿರುವುದರಿಂದ ಶಬ್ದ ಉತ್ಪತ್ತಿಯಾಗಿ ಗೊರಕೆ ಉಂಟಾಗುತ್ತದೆ.
ಅಲ್ಲದೆ ಹೊಟ್ಟೆಯ ಭಾಗದ ವಿಸ್ತೀರ್ಣ ಜಾಸ್ತಿಯಾಗಿ ಆತನ ಎದೆಯ ಭಾಗವನ್ನು ತೀವ್ರವಾಗಿ ಒತ್ತುತ್ತದೆ. ಪರಿಣಾಮ ಎಂದರೆ ಶ್ವಾಸಕೋಶದ ಒಳಭಾಗದ ಸ್ಥಳ ಕಡಿಮೆ ಯಾಗುತ್ತದೆ. ಅದು ಪುನಃ ವಾಯುನಾಳದಲ್ಲಿ ಗಾಳಿಯ ಚಲನೆಗೆ ತಡೆ ಒಡ್ಡುತ್ತದೆ.ಪರಿಣಾಮ ಎಂದರೆ ಸ್ಲೀಪ್ ಏಪ್ನಿಯಾ ಮತ್ತಷ್ಟು ಜಾಸ್ತಿಯಾಗುತ್ತದೆ.
ಸ್ಥೂಲಕಾಯ ಮತ್ತು ಪಿತ್ತಜನಕಾಂಗದ ಕಲ್ಲುಗಳು:ಹೊಟ್ಟೆಯ ಬಲಭಾಗದಲ್ಲಿ ಲಿವರ್‌ನ ಹಿಂಭಾಗದಲ್ಲಿ ಪಿತ್ತಜನಕಾಂಗ ( ) ಇರುತ್ತದೆ. ಇದರಲ್ಲಿ ಹರಳುಗಳ ರೀತಿಯ ಸ್ರಾವಗಳು ಗಟ್ಟಿಯಾದಾಗ ನಾವು ಪಿತ್ತಜನಕಾಂಗದ ಕಲ್ಲುಗಳು ಎನ್ನುತ್ತೇವೆ. ಈ ಕಲ್ಲುಗಳು ಕಣ್ಣಿಗೆ ಕಾಣಿಸದಷ್ಟು ಸಣ್ಣದಾಗಿಯೂ ಇರಬಹುದು. ಅಥವಾ ಕೆಲವೊಮ್ಮೆ ಗಾಲ್ ಚೆಂಡು ಅಥವಾ ನಿಂಬೆಹಣ್ಣಿನಷ್ಟು ದೊಡ್ಡದೂ ಇರಬಹುದು.
ಒಂದೇ ಕಲ್ಲಿರಬಹುದು ಅಥವಾ ನೂರಾರಿರಬಹುದು. ಏನೂ ರೋಗ ಲಕ್ಷಣ ತೋರಿಸದೆ ಇರಬಹುದು ಅಥವಾ ವಿಪರೀತ ನೋವು ಉಂಟು ಮಾಡಬಹುದು. ನಮ್ಮ ಆಹಾರದ ಪಚನ ಕ್ರಿಯೆಯಲ್ಲಿ ಬೈಲ್ ಎಂಬ ದ್ರವರೂಪದ ವಸ್ತು ಭಾಗವಹಿಸುತ್ತದೆ. ಇದುಕೊಬ್ಬಿನ ಅಂಶವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಬೈಲ್‌ನಲ್ಲಿ ತುಂಬಾ ಜಾಸ್ತಿ ಪ್ರಮಾಣದ ಕೊಲೆಸ್ಟರಾಲ್ ಅಥವಾ ಬಿಲಿರುಬಿನ್ ಅಂಶಗಳು ಶೇಖರಣೆಗೊಂಡಾಗ ಮತ್ತು ಅದರಲ್ಲಿ ಅಗತ್ಯ ಪ್ರಮಾಣದ ಬೈಲ್ ಆಮ್ಲಗಳು ಅಥವಾ ಲೆಸಿಥಿನ್ ಅಂಶ ಕಡಿಮೆ ಇದ್ದಾಗ ಈ ರೀತಿಯ ಕಲ್ಲುಗಳ ಉಗಮಕ್ಕೆ ಕಾರಣವಾಗುತ್ತದೆ.
ಪಿತ್ತಜನಕಾಂಗದ ಮುಖ್ಯವಾದ ಕಲ್ಲುಗಳೆಂದರೆ ಕೊಲೆಸ್ಟರಾಲ್ ಮತ್ತು ಬಿಲಿರುಬಿನ್ ಕಲ್ಲುಗಳು. ಸ್ಥೂಲಕಾಯವು ಪಿತ್ತಜನ ಕಾಂಗದ ಕಲ್ಲುಗಳಿಗೆ ಕಾರಣವಾಗಬಹುದು. ಕಾರಣ ಎಂದರೆ ಅದು ಕೊಲೆಸ್ಟರಾಲ್ ಮತ್ತು ಲೆಸಿಥಿನ್‌ಗಳ ಸಮತೋಲನವನ್ನು ತಪ್ಪಿಸುತ್ತದೆ. ಅಲ್ಲದೆ ವ್ಯಕ್ತಿಯ ತೂಕ ಜಾಸ್ತಿಯಾದಾಗ ಪಿತ್ತಜನಕಾಂಗಕ್ಕೆ ತನ್ನ ನಾಳದಿಂದ ಬೈಲನ್ನು ಸಂಪೂರ್ಣವಾಗಿ ಹೊರಹಾಕಲು ಸಾಧ್ಯವಾಗದೆ ಅಲ್ಲಿ ಕೊಲೆಸ್ಟರಾಲ್ ಜಾಸ್ತಿ ಇರುವ ಬೈಲ್ ದ್ರವ ಶೇಖರಗೊಂಡು ಅದು ಕಲ್ಲಿನ ರೂಪದಲ್ಲಿಪರಿವರ್ತನೆಗೊಳ್ಳುತ್ತದೆ.
ಸ್ಥೂಲಕಾಯ ಮತ್ತು ಸಂಧಿವಾತದ ಕಾಯಿಲೆ :ಆಸ್ಟಿಯೋಆರ್ತರೈಟಿಸ್ ಕಾಯಿಲೆ ವ್ಯಕ್ತಿಯ ಸಂದುಗಳಲ್ಲಿ () ಕಾಣಿಸಿಕೊಳ್ಳುವ ಅತೀ ಸಾಮಾನ್ಯ ಕಾಯಿಲೆ. ಇದರಲ್ಲಿ ಕಾಯಿಲೆಯ ಲಕ್ಷಣಗಳು ಕೈ, ಮೊಳಕಾಲು, ಸೊಂಟ, ಬೆನ್ನು ಮತ್ತು ಕುತ್ತಿಗೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ತೂಕ ಈ ಆಸ್ಟಿಯೋಆರ್ತರೈಟಿಸ್ ಕಾಯಿಲೆಗೆ ಹೇಗೆ ಕಾರಣವಾಗುತ್ತದೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲ.
ವ್ಯಕ್ತಿಯ ತೂಕ ಜಾಸ್ತಿಯಾದಾಗ ಮೊಳಕಾಲಿನಂಥ ತೂಕವನ್ನೇ ಹೊರುವ ಸಂದುಗಳು ಒತ್ತಡಕ್ಕೆ ಒಳಗಾಗಿ ಅದರಪರಿಣಾಮ ವಾಗಿ ಸಂದುವಿನ ಕಾರ್ಟಿಲೇಜ್‌ಗಳು ಛಿದ್ರ ಗೊಳ್ಳುತ್ತವೆ. ಒಬ್ಬ ವ್ಯಕ್ತಿ ನಡೆಯುವಾಗ ಆತನ ದೇಹದ ತೂಕದ೩ – ೬ರಷ್ಟು ಜಾಸ್ತಿ ಆತನ ಮೊಳಕಾಲಿನ ಮೇಲೆ ಬೀಳುತ್ತದೆ. ಅಲ್ಲದೆ ಕೆಲವೊಮ್ಮೆ ರಕ್ತನಾಳಗಳಲ್ಲಿನ ತೊಂದರೆಗಳು ಸಣ್ಣ ಸಂದುಗಳ ಆಸ್ಟಿಯೋ ಆರ್ತರೈಟಿಸ್‌ಗೆ ಕಾರಣವಾಗುತ್ತದೆ. ತೂಕ ಜಾಸ್ತಿ ಇರುವ ಮಹಿಳೆಯರು ಇತರರಿಗಿಂತ೪ಪಟ್ಟು ಜಾಸ್ತಿ ಆಸ್ಟಿಯೋಆರ್ತರೈಟಿಸ್‌ಗೆ ಒಳಗಾದರೆ ಪುರುಷರಲ್ಲಿ ಈ ತೊಂದರೆ೫ಪಟ್ಟಿನಷ್ಟು ಜಾಸ್ತಿ.
ಸ್ಥೂಲಕಾಯ ಮತ್ತು ಗೌಟ್ ಕಾಯಿಲೆ:ದೇಹದಲ್ಲಿ ಹೆಚ್ಚಿನ ಪ್ರಮಾಣದ ಯೂರಿಕ್ ಆಮ್ಲ ಶೇಖರಗೊಂಡರೆ ಅದು ಕ್ರಿಸ್ಟಲ್‌ಗಳ ರೂಪದಲ್ಲಿ ಸಂದುಗಳಲ್ಲಿ () ಶೇಖರಗೊಳ್ಳುತ್ತದೆ. ಸಾಮಾನ್ಯವಾಗಿ ಈ ಯೂರಿಕ್ ಆಮ್ಲವು ಕಿಡ್ನಿಯ ಮೂಲಕ ಹೊರಹಾಕಲ್ಪಡುತ್ತದೆ. ವ್ಯಕ್ತಿಯ ತೂಕ ಜಾಸ್ತಿಯಾದಾಗ ಆತನ ಕಿಡ್ನಿಗೆ ಕೆಲಸ ಮಾಡುವ ತಾಕತ್ತು ಕಡಿಮೆಯಾಗುತ್ತದೆ. ಆಗ ಗೌಟ್ ಬರುವ ಸಾಧ್ಯತೆ ಜಾಸ್ತಿಯಾಗುತ್ತದೆ.ಸಾಮಾನ್ಯರಿಗಿಂತ ಹೆಚ್ಚಿನ ತೂಕ ಹೊಂದಿದ ವ್ಯಕ್ತಿಗಳಲ್ಲಿ೧೦ಪಟ್ಟು ಜಾಸ್ತಿ ಗೌಟ್ ಕಾಯಿಲೆ ಬರುವ ಸಾಧ್ಯತೆ ಉಂಟಾಗುತ್ತದೆ.
ಹೊಟ್ಟೆಯ ಭಾಗದಲ್ಲಿ ಕೊಬ್ಬು ಜಾಸ್ತಿ ಇದ್ದವರಲ್ಲಿ ಅವರ ದೇಹದ ತೂಕ ಜಾಸ್ತಿ ಇಲ್ಲದಿದ್ದರೂ ಗೌಟ್ ಬರುವ ಸಾಧ್ಯತೆ ಜಾಸ್ತಿ. ಏಕೆಂದರೆ ಹೊಟ್ಟೆಯ ಭಾಗದ ಕೊಬ್ಬು ಉರಿಯೂತದ ರಾಸಾಯನಿಕ ಗಳನ್ನುಉಂಟುಮಾಡಿ ಅವು ಗೌಟ್ ಬರಲು ಪೂರಕವಾಗುತ್ತದೆ.