ಪ್ಯಾರಿಸ್ ಬಿಡೆನ್ ಎಂದ ಜೋ ಬೈಡನ್‌ !
ಪ್ರಚಲಿತ
ತುರುವೇಕೆರೆ ಪ್ರಸಾದ್‌
ಅಮೆರಿಕದ ನೂತನ ಅಧ್ಯಕ್ಷ ಜೋ ಬಿಡನ್ ಪ್ಯಾರಿಸ್ ಒಪ್ಪಂದವನ್ನು ಮತ್ತೆ ಒಪ್ಪಿಕೊಳ್ಳುವ ಮೂಲಕ ಜಾಗತಿಕ ತಾಪಮಾನನಿಯಂತ್ರಣಕ್ಕೆ ಬದ್ಧತೆ ಪ್ರದರ್ಶಿಸಿರುವುದು ಜಗತ್ತಿನಾದ್ಯಂತ ವಿಜ್ಞಾನಿಗಳು ಹಾಗೂ ಪರಿಸರ ಪ್ರೇಮಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.
ಮಾಜಿ ಅಧ್ಯಕ್ಷ ಟ್ರಂಪ್ ಬಿಲಿಯನ್ ಡಾಲರ್‌ಗಳನ್ನು ವ್ಯರ್ಥವಾಗಿ ಖರ್ಚು ಮಾಡಬೇಕಾಗಿದೆ ಎಂಬ ಕಾರಣವೊಡ್ಡಿ ಪ್ಯಾರಿಸ್ ಒಪ್ಪಂದಿಂದ ಈಚೆ ಬರುವ ನಿರ್ಧಾರ ಕೈಗೊಂಡು ಜಗತ್ತಿಗೆ ಮರ್ಮಾಘಾತ ನೀಡಿದ್ದರು. ಜಾಗತಿಕ ಮಟ್ಟದಲ್ಲಿ ಹವಾಮಾನಬದಲಾವಣೆಗೆ ಕಾರಣವಾಗುವ ಇಂಗಾಲ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸಲು ಯುನೈಟೆಡ್ ನೇಶನ್ಸ್‌ನ ನೇತೃತ್ವದಲ್ಲಿ ಜಪಾನ್‌ನ ಕ್ಯೋಟೋನಲ್ಲಿ ಡಿಸೆಂಬರ್೧೯೯೭ರಲ್ಲಿ ಒಪ್ಪಂದವಾಗಿ ಫೆಬ್ರವರಿ೨೦೦೫ರಲ್ಲಿ ಕ್ಯೋಟೋ ಪ್ರೋಟೋ ಕಾಲ್ ಜಾರಿಗೆ ಬಂತು.
ಅಮೆರಿಕಾ ಮೊದಲಿನಿಂದಲೂ ಈ ಒಪ್ಪಂದವನ್ನು ನಾಮಕಾವಸ್ಥೆ ಒಪ್ಪಂದವನ್ನಾಗಿ ಪರಿಗಣಿಸಿತ್ತು. ಯಾವುದೇ ಬದ್ಧತೆ ಇಲ್ಲದ ಅಮೆರಿಕಾ ತೃತೀಯ ಜಗತ್ತಿನ ರಾಷ್ಟ್ರಗಳಿಗೆ ಇಂಗಾಲ ಹೊರ ಸೂಸುವಿಕೆ ಕಡಿಮೆ ಮಾಡುವಂತೆ ಒಣ ಉಪದೇಶ ಮಾಡುತ್ತಿತ್ತು. ಅಮೆರಿಕಾ ಸಂಸತ್ತಿನಲ್ಲಿ ‘ಕ್ಯಾಪ್ ಅಂಡ್ ಟ್ರೇಡ್’ ವಿಧೇಯಕವೂ ಅತ್ಯಲ್ಪ ಮತಗಳಿಂದ ಅಂಗೀಕರಿಸಲ್ಪಟ್ಟಿತ್ತು.
೧೨೦೦ಪುಟಗಳಿರುವ ಈ ಮಸೂದೆಯ ಕರಡನಲ್ಲಿ ಮಸೂದೆಯ ಮಂಡನೆಯ ಕ್ಷಣಗಣನೆಯ ಸಂದರ್ಭದಲ್ಲಿ೩೦೦ಪುಟಗಳನ್ನು ಹೊಸದಾಗಿ ಸೇರಿಸಲಾಗಿತ್ತು. ಈ ವಿಧೇಯಕವನ್ನು ಕನಿಷ್ಠ ಯಾವೊಬ್ಬ ಸದಸ್ಯನಾದರೂ ಪೂರ್ಣವಾಗಿಓದಿರುವುದೇ ಅನುಮಾನ ಎಂದು ಹೇಳಲಾಗಿತ್ತು. ಬರಾಕ್ ಒಬಾಮ ಅಮೆರಿಕಾ ಅಧ್ಯಕ್ಷರಾದ ನಂತರ ಅಮೆರಿಕಾ ಕ್ಯೊಟೊಪ್ರೊಟೋಕಾಲ್‌ಗೆ ತನ್ನ ಬದ್ಧತೆಯನ್ನು ಕಾಯಂ ಮಾಡುತ್ತದೆ ಎಂದೇ ನಿರೀಕ್ಷಿಸಲಾಗಿತ್ತು.
ಅದರೆ ಆರಂಭಿಕ ದಿನಗಳಲ್ಲಿ ಒಬಾಮ ಆಡಳಿತ ಸಹ ಕ್ಯೊಟೋಪ್ರೊಟೋಕಾಲ್‌ಗೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಆ ನಂತರವಷ್ಟೇ ಅವರು ಜಾಗತಿಕ ತಾಪಮಾನದ ತೀವ್ರತೆಯನ್ನು ಮನಗಂಡು ಪ್ಯಾರಿಸ್ ಒಪ್ಪಂದಕ್ಕೆ ಸಹಿ ಮಾಡುವುದೇ ಅಲ್ಲದೆ ಇತರ ರಾಷ್ಟ್ರಗಳನ್ನೂ ಈ ಒಪ್ಪಂದಕ್ಕೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ವರ್ಷ ಟ್ರಂಪ್ ಪ್ಯಾರಿಸ್ ಒಪ್ಪಂದ ದಿಂದ ಈಚೆ ಬಂದಿರುವುದಾಗಿ ಘೋಷಿಸಿ ಕ್ಯೊಟೋಗೆ ಟಾಟಾ ಹೇಳಿ ಅಮೆರಿಕ ಜಾಗತಿಕ ಒಪ್ಪಂದದ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಿದ್ದರು.
೨೦೦೦ದ ದಶಕಕ್ಕೆ ಹೋಲಿಸಿದರೆ ಇಂಗಾಲದ ಹೊರಸೂಸುವಿಕೆ ಶೇ.೫೦ರಷ್ಟು ಹೆಚ್ಚಾಗಿದೆ ಎಂದು ಯುಎನ್‌ಇಪಿ ವರದಿಗಳು ಹೇಳುತ್ತವೆ. ಕ್ಯೊಟೊ ಪ್ರೊಟೊಕಾಲ್ ಒಪ್ಪಂದದಂತೆ ಮುಂದುವರಿದರಾಷ್ಟ್ರಗಳು೨೦೦೦ದಲ್ಲಿ ಇದ್ದ ಇಂಗಾಲ ಹೊರಸೂಸುವಿಕೆಯ ಮಟ್ಟದ ಶೇ.೫ರಷ್ಟನ್ನು ಕಡಿಮೆ ಗೊಳಿಸಬೇಕಿತ್ತು. ಆದರೆ ಅಮೆರಿಕಾದಲ್ಲಿ ಅದು ಯಾವ ನಿಯಂತ್ರಣಕ್ಕೂ ಸಿಕ್ಕಿಲ್ಲ, ಈಗಲೂ ಚೀನಾ ನಂತರ ಅಮೆರಿಕಾ ದೇಶವೇ ಇಂಗಾಲ ಹೊರ ಸೂಸುವಿಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ನೊಬಲ್ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ. ಆಲ್ಗೇರ್ ಬಹಳ ಹಿಂದೆಯೇ ಈ ಬಗ್ಗೆ ತೀವ್ರ ಅಸಮಾಧಾನ  ವ್ಯಕ್ತಪಡಿಸಿದ್ದರು.
ಖ್ಯಾತ ಪರಿಸರ ವಿಜ್ಞಾನಿ ಅನಿಲ್ ಅಗರ್‌ವಾಲ್ ವಾತಾವರಣವನ್ನು ಸರ್ವರಿಗೂ ಸೇರಿದ ಜಾಗತಿಕ ಆಸ್ತಿಯಾಗಿ ಪರಿಗಣಿಸಿ ತಲಾಹೊರಸೂಸುವ ಹಕ್ಕು ಮತ್ತು ಹೊರಸೂಸುವ ಸಮಾನ ಜಾಗವನ್ನು ನಿಗದಿಪಡಿಸಬೇಕು. ಯಾವ ದೇಶ ಹೆಚ್ಚು ಅನಿಲ ಹೊರ ಸೂಸುತ್ತದೆಯೋ ಅದು ನಿಗದಿತ ಮಟ್ಟದಲ್ಲಿ ಹೊರಸೂಸದಿರುವ ದೇಶಗಳಿಗೆ ಹೊರಸೂಸುವ ಬಾಡಿಗೆ ನೀಡಬೇಕು. ಎರಡೂ ಗುಂಪಿನವರು ಸ್ವಯಂ ನಿಯಂತ್ರಣಕ್ಕೆ ಒಳಪಟ್ಟು ಸಮತೋಲನ ವ್ಯವಸ್ಥೆಯೊಂದನ್ನು ಜಾರಿಗೆ ತರಬೇಕು ಎಂದು ಪ್ರತಿಪಾದಿಸಿದ್ದರು.
ಅಂತಾರಾಷ್ಟ್ರೀಯ ಹೊರಸೂಸುವಿಕೆಯ ಮಾರಾಟ, ಶುದ್ಧ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಜಂಟಿಕಾರ್ಯಾಚರಣೆಯ ಮೂಲಕ ಮುಂದುವರಿದ ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು ತಗ್ಗಿಸಿತನ್ಮೂಲಕ ಜಾಗತಿಕ ತಾಪಮಾನವನ್ನು ನಿಯಂತ್ರಿಸುವ ಪ್ರಯತ್ನ ಮಾಡಬೇಕಿತ್ತು. ಆದರೆ ಇದು ನಿರೀಕ್ಷಿಸಿದಷ್ಟು ಯಶ ಸಿಕ್ಕಿಲ್ಲ. ಈ ಅಭಿವೃದ್ಧಿ ದೇಶಗಳ ಶುದ್ಧ ತಂತ್ರಜ್ಞಾನದ ಅಭಿವೃದ್ಧಿಗೆ ಲಕ್ಷಾಂತರ ಡಾಲರ್ ಹಣ ನಾವೇಕೆ ಸುರಿಯಬೇಕು ಎಂದು ಅಮೆರಿಕ ಮತ್ತಿತರ ಸಿರಿವಂತ ದೇಶಗಳಿಗೆ ಹಿಂದಿನಿಂದಲೂ ಅಸಡ್ಡೆ ಇದ್ದೇ ಇದೆ.
ಸುಮಾರು೩೭ದೇಶಗಳು೧೯೯೦ರಲ್ಲಿದ್ದ ಹೊರಸೂಸುವಿಕೆ ಮಟ್ಟಕ್ಕಿಂತ ಶೇ.೧೬ರಷ್ಟು ಹೊರಸೂಸುವಿಕೆಯನ್ನು೨೦೦೮–೧೨ರ ಅವಧಿಯಲ್ಲಿ  ನಿರ್ಬಂಧಿಸಿದವು. ಇದರಿಂದ ಅವು ತೀವ್ರ ನಷ್ಟ ಅನುಭವಿಸಬೇಕಾಯಿತು. ಆದರೆ ಶ್ರೀಮಂತ ರಾಷ್ಟ್ರಗಳು ಇಂತಹ ಯಾವುದೇ ಸ್ವಯಂ ನಿಯಂತ್ರಿತ ಬದ್ಧತೆಗೆ ಒಳಗಾಗಲಿಲ್ಲ. ಆದರೆ ನಂತರ ಜಾಗತಿಕ ಹೊರಸೂಸುವಿಕೆ೧೯೯೦ರಲ್ಲಿ ಇದ್ದದ್ದಕ್ಕಿಂತ ಶೇ.೫೦ರಷ್ಟು ಹೆಚ್ಚಾಯಿತು.
ಪ್ರಾಥಮಿಕ ಹಂತದಲ್ಲಿ ಕ್ಯೋಟೋ ಒಪ್ಪಂದದಲ್ಲಿ ಹೊರಗುಳಿದಿದ್ದ ಚೀನಾ ಮೊದಲಾದ ದೇಶಗಳು ತೀವ್ರ ಕೈಗಾರಿಕೀಕರಣಕ್ಕೆ ನಾಂದಿ ಹಾಡಿದವು. ಇದರ ಫಲವಾಗಿ ಜಾಗತಿಕ ತಾಪಮಾನವೂ ಏರಿಕೆಯ ಹಾದಿ ಹಿಡಿಯಿತು. ಈ ಮಧ್ಯೆ೨೦೧೨ಕ್ಕೆ ಕ್ಯೊಟೋಪ್ರೊಟೋಕಾಲ್ ಕೊನೆಗೊಳ್ಳಬೇಕಿತ್ತು. ಕತಾರ್‌ನ ದೋಹಾದಲ್ಲಿ ನಡೆದ ಶೃಂಗಸಭೆಯಲ್ಲಿ ಕ್ಯೊಟೋ ಒಪ್ಪಂದವನ್ನು೨೦೨೦ರವರೆಗೆ ಮುಂದುವರಿಸುವ ತೀರ್ಮಾನ ಕೈಗೊಳ್ಳಲಾಯಿತು.
೮ವರ್ಷಗಳ೨ನೇ ಅವಧಿಯಲ್ಲಿ ಶೇ.೧೮ರಷ್ಟು ಇಂಗಾಲ ಹೊರ ಸೂಸುವಿಕೆಯ ಪ್ರಮಾಣವನ್ನು ತಗ್ಗಿಸುವ ಆಶಯವ್ಯಕ್ತವಾಯಿತು. ಎಲ್ಲಾ ದೇಶಗಳೂ ಈ೨ನೇ ಅವಧಿಯ ಮುಂದುವರಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂಬುದೇ ಶೃಂಗಸಭೆಯ ಆಶಯವಾಗಿತ್ತು. ಆದರೆ ತೀವ್ರ ಇಂಗಾಲ ಹೊರಸೂಸುವಿಕೆ ಪ್ರಮಾಣ ಹೊಂದಿರುವ ರಷ್ಯಾ, ಜಪಾನ್,ನ್ಯೂಜಿಲ್ಯಾಂಡ್, ಕೆನಡಾ ದೇಶಗಳು ಈ ಒಪ್ಪಂದಿಂದ ಆಚೆ ಉಳಿದವು. ಇದರ ಪರಿಣಾಮ ಶೇ.೧೪ಇಂಗಾಲ ಹೊರಸೂಸುವ ಐರೋಪ್ಯ ಒಕ್ಕೂಟ ಹಾಗೂ ಆಸ್ಟ್ರೇಲಿಯಾ ದೇಶಗಳಷ್ಟೇ ಈಗ ಒಪ್ಪಂದದ ಚೌಕಟ್ಟಿನಲ್ಲಿ ಉಳಿದವು.
ಕ್ಯೊಟೋ ಒಪ್ಪಂದದಲ್ಲೂ ಅನೇಕ ಲೋಪದೋಷಗಳಿವೆ. ಹಲವು ದೇಶಗಳು ಈ ತೂತುಗಳಲ್ಲಿ ನುಸುಳುವ ಜಾಣ್ಮೆ ತೋರುತ್ತಿವೆ. ಅತಿ ಹೆಚ್ಚಿನ ಇಂಗಾಲ ಹೊರಸೂಸುವ ದೇಶದ ಅಲ್ಯುಮಿನಿಯಂ, ಉಕ್ಕು ಉತ್ಪಾದನಾ ಘಟಕಗಳನ್ನು ಕ್ಯೋಟೋ  ಪ್ರೋಟೋಕಾಲ್ ‌ಗೆ ಸಹಿ ಹಾಕದ ಸಾಗರಾದಾಚೆಯ ರಾಷ್ಟ್ರಗಳಿಗೆ ವರ್ಗಾಯಿಸುತ್ತಿವೆ. ಜಗತ್ತಿನಾದ್ಯಂತ ವಸಾಹತುಗಳನ್ನು ನಿರ್ಮಿಸುವುದರಲ್ಲಿ ಅಗ್ರೇಸರ ಎನಿಸಿದ ಯನೈಟೆಡ್ ಕಿಂಗ್ ಡಂ ಇದರ ಪೂರ್ಣ ಲಾಭ ಪಡೆದಿದೆ.
ಹಾಗಾಗಿ ಅದು೨೦೦೦ದಲ್ಲಿದ್ದ ಹೊರಸೂಸುವಿಕೆ ಪ್ರಮಾಣಕ್ಕಿಂತ ಶೇ.೨೩ರಷ್ಟು ಹೊರಸೂಸುವಿಕೆ ನಿರ್ಬಂಧಿಸಿರುವುದಾಗಿ ಹೇಳಿಕೊಳ್ಳುತ್ತಿದೆ. ಯುರೋಪಿನ ಬಹುತೇಕ ರಾಷ್ಟ್ರಗಳ ಕೈಗಾರಿಕೆಗಳು ಚೀನಾಗೆ ವರ್ಗಾವಣೆಗೊಂಡಿವೆ. ಹೀಗಾಗಿ ಏಷ್ಯಾ ಉಪಖಂಡದಲ್ಲಿ ಗರಿಷ್ಠ ಇಂಗಾಲ ಹೊರಸೂಸುವಿಕೆ ಉಂಟಾಗಲಿದ್ದು ಚೀನಾ ಜಾಗತಿಕ ತಾಪಮಾನದ ಧಗಧಗಿಸುವ ಅಗ್ನಿಕುಂಡಎನಿಸಲಿದೆ. ಚೀನಾ ಶೇ.೨೯.೫ಇಂಗಾಲ ಹೊರಸೂಸುವಿಕೆ ಪ್ರಮಾಣ ಹೊಂದಿರುವುದೇ ಇದಕ್ಕೆ ನಿದರ್ಶನ.
ಒಂದು ಭೂಭಾಗದಲ್ಲಿ ನಿಯಂತ್ರಣಗೊಂಡ ಹೊರಸೂಸುವಿಕೆ ಮತ್ತೊಂದೆಡೆ ಉಕ್ಕಿ ಹರಿದರೆ ಕ್ಯೊಟೋಪ್ರೋಟೋಕಾಲ್ ಅಸ್ತಿತ್ವದಿಂದ ಏನು ಪ್ರಯೋಜನ? ಎಂದು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಅರ್ಥಶಾಸಜ್ಞ ಡಯಟರ್ ಹೆಲ್ಮ್ ಆತಂಕ ವ್ಯಕ್ತಪಡಿಸುತ್ತಾರೆ. ಈ ನಿಟ್ಟಿನಲ್ಲಿ ಕ್ಯೊಟೋ ಒಪ್ಪಂದಕ್ಕೆ ಬದ್ಧರಾಗಿರುವಂತೆ ಹಾಗೂ ತಮ್ಮ ಕೈಗಾರಿಕೆಗಳನ್ನು ಇತರ ದೇಶಗಳಿಗೆವರ್ಗಾಯಿಸದಂತೆ ಮುಂದುವರಿದ ದೇಶಗಳ ಮೇಲೆ ಅಭಿವೃದ್ಧಿಶೀಲ ರಾಷ್ಟ್ರಗಳು ತೀವ್ರ ಒತ್ತಡ ಹೇರಬೇಕಿದೆ. ಆದರೆ ಜಗತ್ತಿನ ದೊಡ್ಡಣ್ಣ ಎನಿಸಿದ ಅಮೆರಿಕಾ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದದ್ದು ಪ್ರಬಲ ನಾಯಕತ್ವವೇ ಇಲ್ಲದಂತಾಗಿತ್ತು.
ಇತರ ದೇಶಗಳೂ ಯಾವುದೇ ಮುಲಾಜಿಲ್ಲದೆ ಹಿಂದೆ ಸರಿಯುವ ಆತಂಕ ಎದುರಾಗಿತ್ತು. ಯಾವುದೇ ಒಪ್ಪಂದಕ್ಕಿಂದ ಜಾಗತಿಕ ತಾಪಮಾನ ನಿಯಂತ್ರಣದಲ್ಲಿ ನೈತಿಕ ಹೊಣೆಗಾರಿಕೆ ಮತ್ತು ಸ್ವಯಂ ನಿಯಂತ್ರಣವನ್ನೂ ದೇಶಗಳು ಮರೆತರೆ ಮನುಕುಲದ ಅವಸಾನದ ಕ್ಲೆ ಮ್ಯಾಕ್ಸ್ ಸ್ಟೀಫನ್ ಹಾಕಿಂಗ್ ಹೇಳಿರುವ ನೂರು ವರ್ಷಗಳಿಗೂ ಮುಂಚೆಯೇ ಸಂಭವಿಸಿದರೂ ಅಚ್ಚರಿಯೇನಿಲ್ಲ.ಅಮೆರಿಕಾದ ಹಿಂದಿನ ಅಧ್ಯಕ್ಷ ಒಬಾಮಾ ಅಮೆರಿಕಾದಲ್ಲಿ೨೦೦೫ರಲ್ಲಿ ಇದ್ದ ಹೊರಸೂಸುವಿಕೆಯ ಪ್ರಮಾಣದ ಶೇ.೨೬–೨೮ರಷ್ಟು ಇಂಗಾಲ ಹೊರಸೂಸುವಿಕೆಯ ಪ್ರಮಾಣವನ್ನು ಕಡಿತ ಗೊಳಿಸುವ ಭರವಸೆ ನೀಡಿದ್ದರು, ಆದರೆ ಟ್ರಂಪ್ಅವಧಿ ಯಲ್ಲಿ ಈ ಹವಾಮಾನ ಬದಲಾವಣೆ ಕುರಿತು ಇದ್ದ ಎಲ್ಲ ನಿರ್ಬಂಧಗಳು, ನೀತಿ ನಿಯಮಗಳು ಶೇ.೭೦ರಷ್ಟು ಗಾಳಿಗೆ ತೂರಿಹೋದವು.
ಜೋ ಬೈಡನ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ತಾವು ಅಧಿಕಾರಕ್ಕೆ ಬಂದರೆ ಮತ್ತೆ ಪ್ಯಾರಿಸ್ ಒಪ್ಪಂದಕ್ಕೆ ಮಾನ್ಯತೆ ನೀಡುವುದಾಗಿ ಘೋಷಿಸಿದ್ದರು. ಈಗ ಜಾಗತಿಕ ಉಷ್ಣಾಂಶ೧.೨ಡಿಗ್ರಿ ಸೆಲ್ಸಿಯಸ್ ಏರಿದ್ದು ಅದು೨ಡಿಗ್ರಿ ದಾಟಿದರೆ ಜಾಗತಿಕ ಆಹಾರ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದಬೈಡನ್ ಗಾಳಿ, ವಿದ್ಯುತ್, ಸೌರ ಶಕ್ತಿಗಳೇ ಮೊದಲಾದ ಮರುನವೀಕರಣಗೊಳಸಿಬಹುದಾದ ಇಂಧನಗಳ ಬಳಕೆಗೆ ಮಹತ್ವ ಕೊಟ್ಟು೨೦೩೫ರ ವೇಳೆಗೆ ಕೋಲ್ ಮೊದಲಾದ ಪಳಯುಳಿಕೆ ಇಂಧನಗಳ ಬಳಕೆ ಹಾಗೂ ಹೊರಸೂಸುವಿಕೆ ತಡೆಗಟ್ಟುವ ಹಾಗೂ೨೦೫೦ರ ವೇಳೆಗೆ ಅಮೆರಿಕಾವನ್ನು ಕಾರ್ಬನ್ ನ್ಯೂಟ್ರಲ್ ದೇಶ ವಾಗಿಸುವ ಮಾತಾಡಿದ್ದರು.
ಬೈಡನ್ ಅಧಿಕಾರಕ್ಕೆ ಬಂದ ಮೊದಲ ದಿನವೇ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ಪ್ಯಾರಿಸ್ ಒಪ್ಪಂದಕ್ಕೆ ಮರುಸೇರ್ಪಡೆಯಾಗುವ ಮೂಲಕ ಜಾಗತಿಕ ಪರಿಸರ ಸಂರಕ್ಷಣೆಯಲ್ಲಿ ಅಮೆರಿಕ ಮತ್ತೆ ನಾಯಕತ್ವವನ್ನು ಪಡೆದಂತಾಗಿದೆ. ಬೈಡನ್ ತಾವು ಮಾತು ಕೊಟ್ಟಿದ್ದಂತೆ ಅಮೆರಿಕಾದ್ಯಂತ೫ಲಕ್ಷ ವಿದ್ಯುತ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಬೇಕಿದೆ. ಶುದ್ಧ ಹಾಗೂನವೀಕರಿಸಬಹುದಾದ ಇಂಧನಗಳ ಉತ್ಪಾದನೆ, ದಾಸ್ತಾನು ಮತ್ತು ಪ್ರಸರಣೆ ಬಗ್ಗೆ ಯೋಜನೆಗಳನ್ನು ರೂಪಿಸಬೇಕಿದೆ.
ಮುಖ್ಯವಾಗಿ ಚೀನಾ ಹೊರ ಸೂಸುವಿಕೆಯ ಮೇಲೂ ನಿರ್ಬಂಧ ಹೇರಬೇಕಿದೆ. ಹಾಗೆಯೇ ಹಿಂದುಳಿದ ಹಾಗೂ ಅಭಿವೃದ್ಧಿಶೀಲದೇಶಗಳಿಗೆ ಶುದ್ಧ ಇಂಧನಗಳ ತಂತ್ರಜ್ಞಾನ ಸ್ಥಾಪನೆಗೆ ನೆರವು ನೀಡಬೇಕಿದೆ. ಈ ನಿಟ್ಟಿನಲ್ಲಿ ಮುಂದಿನ ನವೆಂಬರ್‌ನಲ್ಲಿ ಸ್ವೀಡನ್‌ನ ಗ್ಲಾಸ್ಗೋ ನಗರದಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಭೆ ಅತ್ಯಂತ ಮಹತ್ವದ್ದಾಗಿದ್ದು ಅಮೆರಿಕಾ ನಡೆಯ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.