ಮಾರಾಟದಲ್ಲಿ ಆ ಪುಸ್ತಕ ಗೆದ್ದಿತು, ಆದರೆ ಅದನ್ನು ಬರೆದವರು ಸೋತರು !
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್‌
ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ನನ್ನ ಪರಿಚಿತರೊಬ್ಬರು, ಖ್ಯಾತ ವ್ಯಕ್ತಿತ್ವ ವಿಕಸನ ಗುರು ಶಿವ ಖೇರ ಬರೆದ   Winಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡುವಂತೆ ಹೇಳಿದರು.
ಅವರು ಖೇರ ಅವರಿಗೂ ಪರಿಚಿತರು. ಒಮ್ಮೆ ಅವರು ಖೇರಗೆ ಫೋನ್ ಮಾಡಿ, ನನಗೆ ಕೊಟ್ಟರು. ನಾನು ಅವರ ಜತೆ ಮಾತಾಡಿದೆ. ‘ನೀವು ನನ್ನ ಅತ್ಯಂತ ಜನಪ್ರಿಯ ಕೃತಿಯಾದ     ನ್ನು ಕನ್ನಡಕ್ಕೆ ಅನುವಾದ ಮಾಡಿಕೊಡುತ್ತೀರಾ?’ ಎಂದು ಕೇಳಿದರು. ನಾನು ಸಕಾರಾತ್ಮಕವಾಗಿ ಸ್ಪಂದಿಸಿದೆ. ಅಷ್ಟೇ ಅಲ್ಲ, ಮೂರು ತಿಂಗಳೊಳಗೆ, ಆ ಪುಸ್ತಕವನ್ನು ತರ್ಜುಮೆ ಮಾಡಿದೆ. ನಂತರ ಎರಡು ಸಲ ಪ್ರೂಫ್‌ ರೀಡ್ ಕೂಡ ಮಾಡಿಕೊಟ್ಟೆ. ಪುಸ್ತಕ ಮುದ್ರಣಕ್ಕೆ ಹೋಗುವ ಮುನ್ನ, ಮುಖಪುಟ ಮತ್ತು ಒಳಗಿನ ಪುಟಗಳನ್ನು ಕಳಿಸಿಕೊಟ್ಟರು. ಮುಖಪುಟದಲ್ಲಿ ಎಲ್ಲೂ ನನ್ನ ಹೆಸರು ಇರಲಿಲ್ಲ.
ಇಂಪ್ರಿಂಟ್ ಪುಟದಲ್ಲಿ ಸಣ್ಣ ಅಕ್ಷರಗಳಲ್ಲಿ ಇಂಗ್ಲೀಷಿನಲ್ಲಿ     ಎಂದು ಬರೆದಿತ್ತು. ಇದನ್ನು ನೋಡಿ ನನಗೆ ಬೇಸರವಾಯಿತು. ಪ್ರಕಾಶಕರನ್ನು ಸಂಪರ್ಕಿಸಿದಾಗ, ‘ಶಿವ ಖೇರ ಪುಸ್ತಕವನ್ನು ಯಾರೇ ಅನುವಾದಿಸಲಿ, ಅನುವಾದಕರ ಹೆಸರನ್ನು ಮುಖಪುಟದಲ್ಲಿ ಪ್ರಿಂಟ್ ಮಾಡುವುದಿಲ್ಲ. ಅವರ ಹೆಸರೊಂದೇ ಇರಬೇಕು. ನಿಮ್ಮ ಹೆಸರನ್ನು ಒಳಪುಟಗಳಲ್ಲಿ ಪ್ರಕಟಿಸುತ್ತೇವೆ. ಅದಕ್ಕಾಗಿ ನಿಮಗೆ ಹೇಗಿದ್ದರೂ ಸಂಭಾವನೆ ಕೊಡುತ್ತೇವಲ್ಲ?’ ಎಂದರು.
ಆಗ ನಾನು ಅವರಿಗೆ, ‘ನಾನು ಹಣಕ್ಕಾಗಿ ಈ ಪುಸ್ತಕವನ್ನು ಅನುವಾದಿಸಿಲ್ಲ. ನನ್ನ ಹೆಸರನ್ನು ಮುಖಪುಟದಲ್ಲಿ ಪ್ರಕಟಿಸುವು ದಾದರೆ, ನನಗೆ ಗೌರವ ಧನ ಬೇಡ. ಆದರೆ ನನ್ನ ಹೆಸರು ರಕ್ಷಾಪುಟದ ಮೇಲೆ ಪ್ರಕಟವಾಗಲೇಬೇಕು’ ಎಂದು ಹೇಳಿದೆ. ಅದಕ್ಕೆ ಅವರು, ‘ಹಾಗಿದ್ದರೆ ನೀವು ಶಿವ ಖೇರ ಅವರ ಜತೆಯೇ ಮಾತಾಡುವುದು ಲೇಸು’ ಎಂದು ಹೇಳಿದರು.
ಈ ಸಂಬಂಧವಾಗಿ ಖೇರ ಅವರನ್ನೇ ನಾನು ನೇರವಾಗಿ ಸಂಪರ್ಕಿಸಿದೆ. ಅವರ ಪುಸ್ತಕಗಳನ್ನು ಓದಿ, ಅವರ ಮಾತುಗಳನ್ನು ಕೇಳಿ, ಅವರ ವಿಚಾರಗಳನ್ನು ತಿಳಿದು, ನಾನು ಅವರ ಬಗ್ಗೆ ಒಂದು ಒಳ್ಳೆಯ ಭಾವನೆ ಬೆಳೆಸಿಕೊಂಡಿ. ಅಂಥವರ ಪುಸ್ತಕ ಅನುವಾದಿ ಸುವುದಕ್ಕೆ ನನಗೆ ಅತೀವ ಹೆಮ್ಮೆಯೆನಿಸಿತ್ತು. ಆದರೆ ಅವರ ಜತೆ ಮಾತಾಡಿದ ನಂತರ ಅವರ ಬಗ್ಗೆ ಇದ್ದ ಗೌರವವೆ ಹೊರಟು ಹೋಯಿತು.
‘ಮಿಸ್ಟರ್ ಭಟ್, ನಾವು – ನೀವು ಹೆಚ್ಚು ಮಾತಾಡುವುದು ಬೇಡ. ಒಂದು ವೇಳೆ ಈ ಕನ್ನಡ ಪುಸ್ತಕವನ್ನು ನನ್ನ ಹೆಂಡತಿಯೇಅನುವಾದ ಮಾಡಿದ್ದರೂ, ನಾನು ಅವಳ ಹೆಸರನ್ನು ಮುಖಪುಟದಲ್ಲಿ ಪ್ರಕಟಿಸಲು ಒಪ್ಪುತ್ತಿರಲಿಲ್ಲ. ನನ್ನ ಪುಸ್ತಕದಲ್ಲಿನನ್ನದೊಂದೇ ಹೆಸರಿರಬೇಕು. ಬೇರೆಯವರ ಹೆಸರಿರುವುದನ್ನು ನಾನು ಸಹಿಸುವುದಿಲ್ಲ. ಕಾರಣ ಇದು ನನ್ನ ಆಸ್ತಿ. ನೀವುಎಷ್ಟೆಂದರೂ ಅನುವಾದಕರು’ ಎಂದು ಅತ್ಯಂತ ಒರಟು, ಗಡಚು ಮಾತುಗಳಲ್ಲಿ ಹೇಳಿದರು.
ನಾನು ಅವರಿಂದ ಈ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಅವರ ಪತ್ನಿ ಬಗ್ಗೆಯೇ ಅಷ್ಟೊಂದು ಕಠೋರವಾಗಿ ಮಾತಾಡುವವರ ಬಳಿ ವಾದಿಸಿ ಪ್ರಯೋಜನ ಇಲ್ಲವೆಂದು ಸುಮ್ಮನಾದೆ. ಅನುವಾದಕರ ಮಹತ್ವವೇ ಗೊತ್ತಿಲ್ಲವಲ್ಲ ಈ ಮನುಷ್ಯನಿಗೆ ಎಂದುಬೇಸರವಾಯಿತು. ಕೊನೆಗೂ ಅವರ ಪುಸ್ತಕದ ಮೇಲೆ ನನ್ನ ಹೆಸರು ಪ್ರಕಟವಾಗಲಿಲ್ಲ. ನಿಜ, ಒಂದು ವೇಳೆ ಅವರ ಪತ್ನಿಯೇಅನುವಾದಿಸಿದ್ದರೂ, ಅವರ ಹೆಸರನ್ನು ಖೇರ ಪ್ರಕಟಿಸುತ್ತಿರಲಿಲ್ಲ.
ಅದಾದ ನಂತರ ಶಿವ ಖೇರ   ,    ,    ,    ಎಂಬ ಪುಸ್ತಕಗಳನ್ನು ಬರೆದರು. ಪ್ರತಿ ಸಲ ಹೊಸ ಪುಸ್ತಕ ಪ್ರಕಟವಾದಾಗಲೂ ಅವರ ಪ್ರಕಾಶಕರು ಅವನ್ನು ಅನುವಾದಿಸಿಕೊಡಲು ನನ್ನನ್ನು ಸಂಪರ್ಕಿಸಿದರು. ನಾನು ನಿರಾಕರಿಸಿದೆ. ಒಮ್ಮೆ ಸ್ವತಃ ಖೇರ ಅವರೇ ಫೋನ್ ಮಾಡಿ, ಕೃತಿಯನ್ನು ಅನುವಾದಿಸುವಂತೆ ಕೋರಿದರು. ನಾನು ಅವರ ಮನವಿಯನ್ನು ಪುರಸ್ಕರಿಸಲಿಲ್ಲ. ಅವರದ್ದೇ ಕೃತಿಯ ಶೀರ್ಷಿಕೆ (  )ಯನ್ನು ಅವರಿಗೆ ನೆನಪಿಸಿದೆ. ಮೊದಲ ಪುಸ್ತಕವೊಂದೇ ಅವರು ಬರೆದ ಗಟ್ಟಿಕಾಳು.
ಉಳಿದ ಯಾವ ಕೃತಿಯೂ ಹೆಸರು ಮಾಡಲಿಲ್ಲ. ಖೇರ ಒಬ್ಬ ಉತ್ತಮ ವ್ಯಕ್ತಿತ್ವ ವಿಕಸನ ಗುರು. ಆದರೆ ಅಸಲಿಗೆ ಅವರ ವ್ಯಕ್ತಿತ್ವವೇ ವಿಕಸನ ಆಗಿರಲಿಲ್ಲ. ಹೃದಯ ವೈಶಾಲ್ಯ ಇರದ ಯಾರೂ ಸಾರ್ವಜನಿಕ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವೇ ಇಲ್ಲ. ಖೇರ ಅವರು ಜೀವನದಲ್ಲಿ ಯಶಸ್ವಿಯಾಗುವುದು ಹೇಗೆ, ಗೆಲ್ಲುವುದು ಹೇಗೆ ಎಂದು ಪುಸ್ತಕ ಬರೆದಿರಬಹುದು, ಕಾರ್ಯಾಗಾರಗಳನ್ನು ಮಾಡಬಹುದು, ಆದರೆ ವೈಯಕ್ತಿಕ ಜೀವನದಲ್ಲಿ ಅವನ್ನು ಸಾಧಿಸಲು ಆಗಲೇ ಇಲ್ಲ. ಅವರು ಬರೆದ ಪುಸ್ತಕ ಚೆನ್ನಾಗಿ ಮಾರಾಟವಾಗಿರಬಹುದು.
ಆದರೆ ಅದೊಂದೇ ಯಶಸ್ಸಿನ ಮಾನದಂಡವಲ್ಲ. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅವರು ದಕ್ಷಿಣ ದಿಲ್ಲಿ ಲೋಕಸಭಾಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಠೇವಣಿ ಕಳೆದುಕೊಂಡರು. 2008ರಲ್ಲಿ ಭಾರತೀಯ ರಾಷ್ಟ್ರವಾದಿ ಸಮಾನತಾ ಪಾರ್ಟಿಯನ್ನು ಸ್ಥಾಪಿಸಿದರು. ಅವರ ಪಕ್ಷದ ಒಬ್ಬನೇ ಒಬ್ಬ ಅಭ್ಯರ್ಥಿ ಕಾರ್ಪೊರೇಷನ್ ಚುನಾವಣೆಯಲ್ಲೂ ಗೆಲ್ಲಲಿಲ್ಲ. 2009ರಲ್ಲಿ ತಮ್ಮ ಪಕ್ಷದಿಂದ ಚುನಾವಣೆಗೆ ನಿಂತರು. ಮತ್ತೊಮ್ಮೆ ದಯನೀಯವಾಗಿ ಸೋತರು.    ಪುಸ್ತಕ ಗೆದ್ದಿತು. ಆದರೆ ಖೇರ ಸೋತರು.
ಅವರು ಹಾಂಗ, ಇವರು ಹೀಂಗ!ನಾನು ಶಿವ ಖೇರ ಅವರನ್ನು ನೆನಪಿಸಿಕೊಳ್ಳಲು ಕಾರಣವಿದೆ. ಕೆಲವು ದಿನಗಳ ಹಿಂದೆ, ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿಅರ್ಥಾತ್ ಯು.ಜಿ.ಕೃಷ್ಣಮೂರ್ತಿ ಆಲಿಯಾಸ್ ಯೂಜಿ ಬರೆದ      ಎಂಬ ಪುಸ್ತಕವನ್ನು ಓದುತ್ತಿದ್ದೆ. ಇದನ್ನು ಪತ್ರಕರ್ತ ವೈಎನ್ಕೆ ‘ಯೂಜಿ ಅಲ್ಲ, ಗುರೂಜಿ’ ಎಂದು ಚೆಂದವಾಗಿ ಭಾವಾನುವಾದ ಮಾಡಿದ್ದಾರೆ. ಈ ಪುಸ್ತಕದಲ್ಲಿ ಒಂದೆಡೆ ಯೂಜಿ, ‘ಇದು ನನ್ನದೇ ವಿಚಾರ, ಯೋಚನೆ, ನನ್ನದೇ ಪದ, ನನ್ನದೇ ಅನುಭವ ಎನ್ನುವಂಥ ಒಂದೇ ಒಂದೂ ಇಲ್ಲ. ನನ್ನ ಅನುಭವ ನನ್ನದೊಂದೇ ಅಲ್ಲ.
ಅದು ಇನ್ನ್ಯಾರದ್ದು ಆಗಿರಬಹುದು. ಈ ಜಗತ್ತಿನಲ್ಲಿ ನೀವು ಮಾಡುವಂಥದ್ದು ಏನೂ ಇಲ್ಲ. ಎಲ್ಲವೂ ಇಲ್ಲಿಯೇ ಇವೆ. ನೀವುಮಾಡುವ ಮುನ್ನವೇ ಮತ್ಯಾರೋ ಮಾಡಿಟ್ಟಿದ್ದಾರೆ. ಆದರೆ ನಾವು, ಇವನ್ನೆಲ್ಲ ಮಾಡಿದ್ದು ನಾನು, ನನ್ನ ವಿಚಾರ ಎಂದೆಹೇಳಿಕೊಳ್ಳುತ್ತೇವೆ, ಅವೆ ಅರ್ಥಹೀನ’ ಎಂದು ಹೇಳಿದ್ದಾರೆ. ಯೂಜಿ ಬರೆದ ಆ ಕೃತಿಯ ಮೊದಲ ವಾಕ್ಯ ಆರಂಭವಾಗುವುದು ಹೀಗೆ – ‘ನನ್ನ ಈ ಪುಸ್ತಕದ ಯಾವುದಾದರೂ ಅಂಶ ನಿಮಗೆ ಇಷ್ಟವಾದರೆ, ಅದನ್ನು ಬಳಸಬೇಕೆಂದು ನಿಮಗೆ ಅನಿಸಿದರೆ, ಧಾರಾಳವಾಗಿಬಳಸಬಹುದು. ಇದಕ್ಕೆ ಕಾಪಿರೈಟ್ ಇಲ್ಲ.
ಇದನ್ನು ಧಾರಾಳವಾಗಿ ಭಟ್ಟಿ ಇಳಿಸಬಹುದು, ನಿಮಗೆ ಇಷ್ಟವಾದ ಭಾಗವನ್ನು ಎಗರಿಸಬಹುದು, ವಿತರಿಸಬಹುದು, ಬೇಕೆನಿಸಿದ ರೀತಿಯಲ್ಲಿ ವ್ಯಾಖ್ಯಾನಿಸಬಹುದು, ವಿರೂಪಗೊಳಿಸಬಹುದು, ಮಿಶ್ರಣ ಮಾಡಬಹುದು, ಇವನ್ನೆ ಬರೆದಿದ್ದು ನೀವೇ ಎಂದುಹೇಳಿಕೊಳ್ಳಬಹುದು, ನನ್ನ ಒಪ್ಪಿಗೆ ಅಥವಾ ಅನುಮತಿ ಇಲ್ಲದೇ ಅನುವಾದಿಸಬಹುದು, ಮೂಲ ಲೇಖಕ ನೀವೇ ಎಂದು ಯಾರು ಬೇಕಾದರೂ ಘೋಷಿಸಿಕೊಳ್ಳಬಹುದು. ಬೇಕಾದರೆ ನೀವೇ ಮೂಲ ಲೇಖಕರು ಎಂದು ಮುದ್ರಿಸಿಕೊಳ್ಳಬಹುದು, ಅನುವಾದ ಮಾಡಿ ನಿಮ್ಮ ಹೆಸರನ್ನೇ ಹಾಕಿಕೊಳ್ಳಬಹುದು.’
ಆದರೆ ಒಬ್ಬನೇ ಒಬ್ಬ ವ್ಯಕ್ತಿ ಅಂಥ ಸಾಹಸ ಮಾಡಿಲ್ಲ. ಇದನ್ನು ಯಾರೇ ಅನುವಾದಿಸಿ ತಮ್ಮ ಹೆಸರನ್ನು ಹಾಕಿಕೊಂಡರೂ,ಇದನ್ನು ಅವರು ಬರೆದಿದ್ದಲ್ಲ, ಇಂಥ ಯೋಚನೆ ಅವರಿಗೆ ಬರಲು ಸಾಧ್ಯವಿಲ್ಲ ಎಂದೇ ಎಲ್ಲರೂ ಯೋಚಿಸುತ್ತಾರೆ. ಇದನ್ನುಯೂಜಿ ಅವರಲ್ಲದೇ ಬೇರೆ ಯಾರೂ ಸಹ ಬರೆಯಲು ಸಾಧ್ಯವಿಲ್ಲ ಎಂದೇ ಎಲ್ಲರೂ ಯೋಚಿಸುತ್ತಾರೆ. ಈ ಪ್ರಕೃತಿಯಲ್ಲಿಯಾವುದೂ ಒರಿಜಿನಲ್ ಅಲ್ಲ ಎಂದು ಸ್ವತಃ ಯೂಜಿ ಹೇಳಿದ್ದರೂ, ಅವರ ಕೃತಿಯಲ್ಲಿನ ವಿಚಾರ ಅವರದ್ದೇ ಒರಿಜಿನಲ್ ಆಗಿದ್ದರೂ, ಅದನ್ನು ಯಾರು ಬೇಕಾದರೂ ತಮ್ಮದೇ ಎಂದು ಹೇಳಿಕೊಳ್ಳಬಹುದು ಎಂದು ಖುದ್ದು ಯೂಜಿಯೇ ಹೇಳಿದ್ದರೂ, ಯಾರೂ ಅದನ್ನು ಎಗರಿಸುವ, ತಮ್ಮದೆಂದು ಹೇಳುವ ದಾಢಸಿತನ ತೋರಿಲ್ಲ.
ಕಾರಣ ಆ ವಿಚಾರಗಳನ್ನು ತನ್ನದೆಂದು ಹೇಳಿಕೊಳ್ಳಲೂ ತಾಕತ್ತುಬೇಕು. ಅಂಥ ಯೋಚನೆಗಳು ಸಾಮಾನ್ಯರಿಗೆ ಬರಲು ಸಾಧ್ಯ ವಿಲ್ಲ. ಯೂಜಿ ಅವರಂಥವರಿಗೆ ಮಾತ್ರ ಬರಲು ಸಾಧ್ಯ. ಅದಕ್ಕಾಗಿ ಅವರೇ ಹಾಗೆ ಹೇಳಿಕೊಂಡಿದ್ದಾರೆ.  ಆದರೆ ಶಿವ ಖೇರ ಅದೆಂಥ ಸಣ್ಣ ಮನುಷ್ಯ ಅಂದರೆ, ಅವರು ತಮ್ಮ ಪುಸ್ತಕ, ಕಾರ್ಯಾಗಾರದ ಜಾಹೀರಾತಿನಲ್ಲಿ     ,     ಎಂಬ ವಾಕ್ಯದ ಕೊನೆಯಲ್ಲಿ ಚಿಕ್ಕದಾಗಿ  (ಟ್ರೇಡ್ ಮಾರ್ಕ್) ಎಂದು ಬರೆಯಿಸಿರುತ್ತಾರೆ. ಅಂದರೆ ಈವಾಕ್ಯ ತನಗೆ ಮಾತ್ರ ಹೊಳೆದಿತ್ತೆಂದೂ, ಅದನ್ನು ಬೇರೆ ಯಾರೂ ತಮ್ಮ ಅನುಮತಿಯಿಲ್ಲದೇ ಬಳಸಕೂಡದೆಂದೂ ಇದರ ಅರ್ಥ.ಸೀಟ್ ಬೆಲ್ಟ್ ಕಂಡು ಹಿಡಿದವನು ನಾನು, ಏರ್ ಬ್ಯಾಗ್ ಕಂಡು ಹಿಡಿದವನು ನಾನು, ಆಕ್ಸಿಜನ್ ಕಂಡು ಹಿಡಿದವನು ನಾನು.. ನನ್ನ ಅನುಮತಿಯಿಲ್ಲದೇ ಬೇರೆ ಯಾರೂ ಅವನ್ನು ಬಳಸಕೂಡದು ಎಂದು ಶಿವ ಖೇರ ಅವರಂತೆ ಟ್ರೇಡ್ ಮಾರ್ಕ್ ಹಾಕಿಕೊಂಡಿದ್ದರೆ ಈ ಜಗತ್ತು ಹೇಗಿರುತ್ತಿತ್ತು, ಸ್ವಲ್ಪ ಯೋಚಿಸಿ.
ಒಂದು ವೇಳೆ ನೀವು ಖೇರ ಅನುಮತಿಯಿಲ್ಲದೇ    … ವಾಕ್ಯ ಬಳಸಿದ್ದು ಅವರಿಗೆ ಗೊತ್ತಾದರೆ, ನಿಮ್ಮ ಮೇಲೆ ಕೇಸು ಹಾಕಿ ಹಣ ಕೀಳುತ್ತಾರೆ. ವಿಚಾರಗಳಿಗೂ ಬೇಲಿ ಹಾಕುವ ಮನೋಭಾವ ಅಪಾಯಕಾರಿಯಾದುದು. ಇದು ನನ್ನ ಯೋಚನೆ, ನಿನ್ನ ತಲೆಯೊಳಗೆ ಇದು ಹೇಗೆ ಹೊಕ್ಕಿತು ಎಂದು ಕೇಳಿದರೆ ಏನು ಮಾಡೋದು? ಖೇರಗೂ, ಯೂಜಿಗೂ ಹೋಲಿಕೆಯೇ ಸರಿ ಅಲ್ಲ. ಆದರೆ
ಖೇರ ಬದುಕಿದ್ದ ಕಾಲಘಟ್ಟದಲ್ಲಿ ಯೂಜಿ ಕೂಡ ಬದುಕಿದ್ದರು. ಆದರೂ ಅವರಿಗೂ, ಇವರಿಗೂ ಅವೆಷ್ಟು ವ್ಯತ್ಯಾಸ! ಅವರುಹಾಂಗ, ಇವರು ಹೀಂಗ! ಅಪಾಯಕಾರಿ ಮನುಷ್ಯನ ಕುರಿತು ಇವೆ ಇರಲಿ. ನನಗೆ ಯೂಜಿ ಇಷ್ಟವಾದ ವ್ಯಕ್ತಿ. ಕಾರಣ ಅವರು ಎಂದೂ ಉಪದೇಶ ಮಾಡಲಿಲ್ಲ. ಇದೇ ನನ್ನ ಸಂದೇಶ ಎಂದು ಸಾರಲಿಲ್ಲ. ಯೂಜಿಗೆ ಸಾರ್ವಜನಿಕ ಸಭೆ – ಸಮಾರಂಭ ಗಳೆಂದರೆ ಆಗುತ್ತಿರಲಿಲ್ಲ. ಆದರೆ ಅವರನ್ನು ಸಾವಿರಾರು ಜನ ಮುತ್ತಿಕೊಳ್ಳುತ್ತಿದ್ದರು.
ಆ ಸಂದರ್ಭದಲ್ಲಿ ಅವರು ಮಾತಾಡುತ್ತಿರಲಿಲ್ಲ. ಅವರ ಮೌನದಲ್ಲಿ ಅವರ ಅಭಿಮಾನಿಗಳು ಉತ್ತರಗಳನ್ನು ಪಡೆಯುತ್ತಿದ್ದರು. ಅವರು ಎಂದೂ ಉಪನ್ಯಾಸ ನೀಡುತ್ತಿರಲಿಲ್ಲ. ಅವರಲ್ಲಿ ಎಡ – ಬಲ – ಮಧ್ಯ ಹೀಗೆ ಯಾವ ಸಿದ್ಧಾಂತಗಳೂ ಇರಲಿಲ್ಲ. ದೇವರ ಬಗ್ಗೆ ಮಾತಾಡಿ ಎಂದೂ ಹೆದರಿಸುತ್ತಿರಲಿಲ್ಲ. ಯೂಜಿಗೆ ಒಂದು ಸಂಘ – ಸಂಘಟನೆ – ಬಾವುಟ ಯಾವವೂ ಇರಲಿಲ್ಲ. ಅವರಿಗೆ ಆಫೀಸು, ಸೆಕ್ರೆಟರಿಯೂ ಇರಲಿಲ್ಲ. ಅವರಿಗೆ ಟೆಲಿಫೋನ್, ಫ್ಯಾಕ್ಸ್ ಕೂಡ ಇರಲಿಲ್ಲ.
ಅವರದ್ದೆನ್ನುವ ಒಂದು ಖಾಯಂ ಅಡ್ರೆಸ್ ಇರಲಿಲ್ಲ. ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ಸಹ ಇರಲಿಲ್ಲ. ಒಂದೇ ಜಾಗದಲ್ಲಿಎರಡು ತಿಂಗಳಿಗಿಂತ ಹೆಚ್ಚು ಕಾಲ ವಾಸಿಸುತ್ತಿರಲಿಲ್ಲ. ಒಂದು ಸಣ್ಣ ಸೂಟಕೇಸ್ ಬಿಟ್ಟರೆ, ಅವರದ್ದೆನ್ನುವ ಯಾವುದೂ ಇರಲಿಲ್ಲ. ಬೆಂಗಳೂರಿಗೆ ಬಂದ ಯೂಜಿ, ಎರಡು ತಿಂಗಳು ಉಳಿದು ಹೋದರೆ, ಮತ್ತೊಮ್ಮೆ ಬರುತ್ತಿದ್ದುದು, ಎರಡು – ಮೂರು ವರ್ಷಗಳ ನಂತರವೇ. ಆಗ ಅವರ ಸೂಟಕೇಸ್, ಬಟ್ಟೆಗಳು ಬದಲಾಗಿರುತ್ತಿದ್ದವು. ಯಾವ ವಸ್ತುವಿನ ಬಗ್ಗೆಯೂ ಅವರಿಗೆ ಮೋಹ ಇರಲಿಲ್ಲ. ಪುಸ್ತಕ ಓದಿದ ಬಳಿಕ, ಅದನ್ನು ಆಸಕ್ತರಿಗೆ ಕೊಟ್ಟುಬಿಡುತ್ತಿದ್ದರು.
ಅವರಿಗೆ ಯಾರಾದರೂ, ಏನಾದರೂ ಕೊಟ್ಟರೆ, ಅದನ್ನು ಬೇರೆಯವರಿಗೆ ಕೊಟ್ಟು ಬಿಡುತ್ತಿದ್ದರು. ಯಾವ ವಸ್ತುವನ್ನೂ ಅವರು ಇಷ್ಟಪಟ್ಟವರಲ್ಲ. ಹಣ, ಬಟ್ಟೆ,  ಉಪಕರಣ, ಬಂಗಾರ, ಆಭರಣ, ಸಾಮಾನು – ಸಾಮಗ್ರಿ… ಹೀಗೆ ಯಾವುದರಿಂದಲೂ ಅವರನ್ನು ಆಕರ್ಷಿಸಲು ಸಾಧ್ಯವಿರಲಿಲ್ಲ.
ದೇವರು, ಧರ್ಮ, ಆತ್ಮ, ಪ್ರೀತಿ, ಕರುಣೆ, ಮಾನವೀಯತೆ, ಸಂಬಂಧ – ಹೀಗೆ ಯಾವುದೇ ವಿಷಯಗಳ ಬಗ್ಗೆ ನಮಗಿರುವಅಭಿಪ್ರಾಯವನ್ನು ಬುಡಮೇಲು ಮಾಡಿ ಅವರು ತಲ್ಲಣಗೊಳಿಸುತ್ತಿದ್ದರು. ಅದಕ್ಕಾಗಿ ಅವರನ್ನು ಪ್ರೀತಿಯಿಂದ ‘ಅಪಾಯಕಾರಿ ಮನುಷ್ಯ’ ಎಂದು ಕರೆಯುತ್ತಿದ್ದರು. ಯೂಜಿ ಜತೆ ಅರ್ಧ ಗಂಟೆ ಮಾತಾಡಿದರೆ, ಒಂಥರಾ ಗೊಂದಲ, ಗಲಿಬಿಲಿ. ನಾನು ಅವರನ್ನು ಹತ್ತಾರು ಸಲ ವೈಎನ್ಕೆ ಜತೆ ಭೇಟಿ ಮಾಡಿದಾಗಲೆ, ಈ ರೀತಿಯ ಚಡಪಡಿಕೆ ಮತ್ತು ಗೊಂದಲವನ್ನು ಅನುಭವಿಸಿದ್ದೇನೆ.
ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ಶುದ್ಧ ಪೆಕರನಂತೆ, ‘ಯೂಜಿ, ಈ ಜಗತ್ತಿಗೆ ನಿಮ್ಮ ಸಂದೇಶವೇನು?’ಎಂದು ಕೇಳಿದ್ದೆ. ಅದಕ್ಕೆ ಅವರು, “     . ಈ ಜಗತ್ತಿಗೆ ಯಾರ ಸಂದೇಶ, ಉಪದೇಶದ ಅಗತ್ಯವಿಲ್ಲ. ಈಗಿರುವ ಹಾಗೆ ಇರಲಿ, ನಿಮ್ಮ ಮಾತು ನಿಮಗೊಂದೇ ಅಲ್ಲ, ಎಲ್ಲರಿಗೂ ಶತ್ರು. “    ’  ಎಂದು ಖಂಡುತುಂಡಾಗಿ ಹೇಳಿದ್ದರು.
‘ಯಾರೂ ನೀವು ಅಂದುಕೊಂಡ ಹಾಗೆ ಇರುವುದಿಲ್ಲ. ನೀವು ಸತ್ತರೆ ನಿಮ್ಮ ಆತ್ಮೀಯರು ದುಃಖಿಸುತ್ತಾರೆ. ಅವರಿಗೆ ನಿಮ್ಮಅಂತ್ಯಸಂಸ್ಕಾರದ ವೆಚ್ಚವನ್ನು ಭರಿಸುವಂತೆ ಯಾರಾದರೂ ಹೇಳಿದರೆ, ಅವರು ಯೋಚಿಸುತ್ತಾರೆ. ಆಗ ಅವರಿಗೆ ನಿಜವಾಗಿದುಃಖವಾಗುತ್ತದೆ. ಬದುಕಿನಲ್ಲಿ ಹಣ ಏನು ಅಂದ್ರೆ ಇಷ್ಟೇ’ ಎಂದು ಯೂಜಿ ಹೇಳಿದ್ದು ನೆನಪಾಗುತ್ತದೆ. ‘ಹಣದಿಂದ ಏನೂಆಗೊಲ್ಲ ಅಂತ ಯಾರಾದರೂ ಹೇಳಿದರೆ ಅವರ ಮಾತನ್ನು ನಂಬಬೇಡಿ. ನೀವು ಖರ್ಚು ಮಾಡಲು ಆಗದಷ್ಟು ಹಣಸಂಪಾದಿಸಿದರೆ ಮಾತ್ರ ಈ ಮಾತನ್ನು ಹೇಳಬಹುದು’ ಎಂದು ಹೇಳಿದ್ದರು.
ನೀವು ನೀವಾಗಿರಲು ಪ್ರಯತ್ನಿಸಿ, ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ನೀವು ಬೇರೆ ಯಾರೋ ಆಗಲು ಯೋಚಿಸಿದ ಕ್ಷಣದಿಂದಲೇ ನಿಮ್ಮ ಎಲ್ಲಾ ಸಮಸ್ಯೆಗಳು ಆರಂಭವಾಗುತ್ತವೆ’ ಎಂದು ಹೇಳುತ್ತಿದ್ದ ಯೂಜಿ, ‘ನಿಮಗೆ ಯಾವುದರಲ್ಲಿ ಆಸಕ್ತಿ ಯಿದೆಯೋ, ನಿಮ್ಮ ದೇಹಕ್ಕೆ ಅವುಗಳಲ್ಲಿ ಆಸಕ್ತಿ ಇರುವುದಿಲ್ಲ. ಯಾವ ಹೊಸ ಸಂಗತಿಗಳನ್ನೂ ತಿಳಿದುಕೊಳ್ಳಬೇಕು ಎಂಬ ಬಗ್ಗೆ ದೇಹ ಹವಣಿಸುವುದಿಲ್ಲ.
ದೇಹವನ್ನು ಅದರ ಪಾಡಿಗೆ ಬಿಟ್ಟುಬಿಡಬೇಕು. ಆದರೆ ಮನಸ್ಸು  ಹಾಗೆ ಸುಮ್ಮನಿರುವುದಕ್ಕೆ ಬಿಡುವುದಿಲ್ಲ. ಸಮಸ್ಯೆಗಳುಶುರುವಾಗುವುದಕ್ಕೆ ಇದೇ ಕಾರಣ’ ಎಂದು ಅವರು ಹೇಳಿದ್ದು ಆಗಾಗ ನೆನಪಾಗುತ್ತದೆ.
ಕನಸಿನಲ್ಲಿ ಕಂಡ ಇಲಿಗಳುಮೊನ್ನೆ ಯೋಗಿ ದುರ್ಲಭಜೀ ಅವರಿಗೆ ಫೋನ್ ಮಾಡಿ, ಒಂದು ಜೋಕ್ ಹೇಳಿ ಎಂದೆ. ‘ನಾನೇನು ಜೋಕ್ ಮಶಿನ್ನಾ?’ ಎಂದು ಕೇಳಿದರು. ಹಾಗೆ ಹೇಳಿದವರೇ ‘ನೋಡಿ, ಒಂದು ಹಾಸ್ಯ ಪ್ರಸಂಗ ನೆನಪಾಗುತ್ತಿದೆ’ ಎಂದು ಹೇಳಿದರು. ಒಮ್ಮೆ ಜರ್ಮನ್ ರಾಜಕುಮಾರನಿಗೆ ಕನಸಿನಲ್ಲಿ ಮೂರು ಇಲಿಗಳು ಕಂಡವಂತೆ. ಒಂದು ದಪ್ಪವಾಗಿತ್ತು, ಇನ್ನೊಂದು ಸಪೂರವಾಗಿತ್ತು ಮತ್ತು ಮತ್ತೊಂದು ಕುರುಡಾಗಿತ್ತು. ಈ ಕನಸಿನ ಅರ್ಥವೇನಿರಬಹುದು ಎಂದು ಆತ ಬಲ್ಲವರನ್ನು ಕೇಳಿ ತಿಳಿದುಕೊಳ್ಳಲು ಬಯಸಿದ. ಆ ಕ್ಷಣದಲ್ಲಿ ಯಾರೂ ಸಿಗಲಿಲ್ಲ. ರಾಜಕುಮಾರ ತನ್ನ ಪತ್ನಿಯನ್ನೇ ಕೇಳಿದ.
ಅದಕ್ಕೆ ಆಕೆ ಹೇಳಿದಳು – ‘ದಪ್ಪವಾಗಿರುವ ಇಲಿಯೆಂದರೆ ನಿಮ್ಮ ಮಂತ್ರಿ. ಸಪೂರವಾಗಿರುವ ಇಲಿ ಅಂದರೆ ಜನರು ಮತ್ತುಕುರುಡು ಇಲಿ ಅಂದ್ರೆ ನೀವು’ ಸಾವಿನ ದಿನ ಯಾವುದು ? ನಿಮಗೆ ಗೊತ್ತಿದ್ದಿರಬಹುದು, ಹಿಟ್ಲರ್‌ನಿಗೆ ಯಹೂದಿಗಳನ್ನು ಕಂಡರೆ ಆಗುತ್ತಿರಲಿಲ್ಲ. ಅವರನ್ನು ಹಿಂಸೆ ಕೊಟ್ಟು ಸಾಯಿಸುತ್ತಿದ್ದ. ಆತನಿಗೆ ಆಗಾಗ ಜ್ಯೋತಿಷಿಗಳನ್ನು ಕರೆಯಿಸಿ ತನ್ನ ಭವಿಷ್ಯಕೇಳುವ ಚಟವಿತ್ತು. ಒಂದು ದಿನ ಆತನಿಗೆ ತಾನು ಎಷ್ಟು ದಿನ ಬದುಕಿರುತ್ತೇನೆ ಎಂಬುದನ್ನು ತಿಳಿದುಕೊಳ್ಳುವ ಮನಸ್ಸಾಯಿತು.‘ನಾನು ಯಾವ ದಿನ ಸಾಯುತ್ತೇನೆ ಎಂಬುದನ್ನು ಹೇಳುತ್ತೀರಾ?’ ಎಂದು ಜ್ಯೋತಿಷಿಗಳನ್ನು ಕೇಳಿದ.
ಬಹಳ ಯೋಚಿಸಿದ ಜ್ಯೋತಿಷಿ, ‘ನೀವು ಯಹೂದಿಗಳ ರಜಾ ದಿನದಂದು ಸಾಯುತ್ತೀರಿ’ ಎಂದು ಹೇಳಿದ. ಇದರಿಂದ ಕುಪಿತನಾದ ಹಿಟ್ಲರ್, ‘ಅದ್ಸರಿ, ಅದು ಯಾವ ದಿನ ಎಂದು ಹೇಳಿ’ ಎಂದ. ಅದಕ್ಕೆ ಜ್ಯೋತಿಷಿ, ‘ಅದ್ಯಾವ ದಿನ ಎಂದು ಹೇಳುವುದು ಕಷ್ಟ’ ಎಂದ, ತುಸು ನಡುಗುತ್ತಾ. ಅದರಿಂದ ಹಿಟ್ಲರ್ ಮತ್ತಷ್ಟು ಆಕ್ರೋಶಗೊಂಡ. ‘ನನಗೆ ಗೊತ್ತಿದೆ, ನೀನು ಬೇಕೆಂದೇ ಹೇಳುತ್ತಿಲ್ಲ. ನೀನು ಸತ್ಯವನ್ನು ಹೇಳಲೇಬೇಕು’ ಎಂದು ಗದರಿದ. ತನಗೆ ಗೊತ್ತಿಲ್ಲ ಎಂದು ಪರಿಪರಿಯಾಗಿ ಹೇಳಿದರೂ ಹಿಟ್ಲರ್ ಕೇಳಲಿಲ್ಲ.
ಏನೂ ಹೇಳದಿದ್ದರೆ, ಈತ ಏನೂ ಮಾಡಲು ಹೇಸದವನು ಎಂಬುದು ಜ್ಯೋತಿಷಿಗೆ ಖಾತ್ರಿಯಾಯಿತು. ಆತ ಉಪಾಯಮಾಡಿ ಹೇಳಿದ – ‘ನನಗೆ ಗೊತ್ತಿಲ್ಲ, ಆದರೂ ಹೇಳುತ್ತೇನೆ, ನೀವು ಯಾವ ದಿನ ಸಾಯುತ್ತೀರೋ ಆ ದಿನ ಯಹೂದಿಯರಿಗೆರಜಾ ದಿನ’