ಭಾಷಾಭಿಮಾನ ನಮ್ಮ ಕನ್ನಡಿಗರಲ್ಲಿ ಒಬ್ಬರಿಗೂ ಇಲ್ಲ
ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡನಟ ದರ್ಶನ್ ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ಧಾರೆ. ತಮ್ಮ ರಾಬರ್ಟ್ ಚಿತ್ರದ ಸಮಸ್ಯೆಯನ್ನು ಹೇಳಿಕೊಳ್ಳಲು ಫಿಲ್ಮ್ ಛೇಂಬರ್‌ಗೆ ಹೋಗಿದ್ದ ದರ್ಶನ್ ಅಲ್ಲಿ ಹಲವು ವಿಷಯಗಳ ಬಗ್ಗೆ ಮಾತನಾಡಿದ್ಧಾರೆ.
ರಾಬರ್ಟ್ ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಲು ಅಲ್ಲಿನವರು ಅವಕಾಶ ನೀಡುತ್ತಿಲ್ಲ ಎಂದು ಮಾತನಾಡಿದ ದರ್ಶನ್ ಅಲ್ಲಿನವರಿಗೆ ಭಾಷಾಭಿಮಾನ ಜಾಸ್ತಿ. ತಮಿಳು ತೆಲುಗಿನವರಿಗೆ ಇರೋ ಭಾಷಾಭಿಮಾನ ನಮ್ಮ ಕನ್ನಡಿಗರಲ್ಲಿ ಒಬ್ಬರಿಗೂ ಇಲ್ಲ ಎಂದು ಹೇಳಿ ಕನ್ನಡ ಸಿನಿಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿzರೆ. ತಮ್ಮ ಚಿತ್ರಕ್ಕೆ ಬಿಡುಗಡೆ ಆಗುವ ಅವಕಾಶ ಸಿಗದೇ ಇದ್ದುದಕ್ಕೆ ಹೀಗೆ ನೇರವಾಗಿ ಕನ್ನಡಿಗರನ್ನು ಟಾರ್ಗೆಟ್ ಮಾಡಿ ಮಾತಾಡಿ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದ್ದಾರೆ.
ನಿಮ್ಮ ಸಿನಿಮಾಗೆ ತೊಂದರೆ ಆಯಿತು ಅಂತ ಕನ್ನಡಿಗರ ಭಾಷಾಭಿಮಾನವನ್ನ ಪ್ರಶ್ನೆ ಮಾಡೋದು ಎಷ್ಟು ಸರಿ ಎಂದು ನೆಟ್ಟಿಗರುದರ್ಶನ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ಧಾರೆ. ಫೇಸ್ ಬುಕ್‌ನಲ್ಲಿ ಸಕ್ರಿಯರಾಗಿರುವ, ಬೆಂಗಳೂರಿನಲ್ಲಿ ಡಿವೈಎಸ್‌ಪಿ ಹುzಯಲ್ಲಿರುವ ಕಿಶೋರ್ ಭರಣಿ ಅವರು ಕೂಡ ದರ್ಶನ್ ಅವರ ಹೇಳಿಕೆಗೆ ರಿಯಾಕ್ಟ್ ಮಾಡಿದ್ದಾರೆ.  – 2 ಚಿತ್ರಕ್ಕಾಗಿ ಆಂಧ್ರದಲ್ಲಿ, ತಮಿಳು ನಾಡಿನಲ್ಲಿ ಥಿಯೇಟರ್ ಕೊಡಲು ಕಾಯುತ್ತ ಕುಳಿತಿದ್ಧಾರೆ. ಚೆನ್ನಾಗಿ ಸಿನಿಮಾ ಮಾಡಿದರೆ ಎಲ್ಲಾ ಕಡೆಡಿಮ್ಯಾಂಡ್ ಇದೆ. ಡಬ್ಬಾ ಮೂವಿಗಳನ್ನು ಮಾಡಿದರೆ, ನೀನು ಯಾವೂರ ದಾಸಯ್ಯ ಎಂದು ಅವರು ಕೇಳುತ್ತಾರೆ !!
ಕನ್ನಡಿಗರಿಗೆ ಭಾಷಾಭಿಮಾನ ಬೇರೆಯವರಿಗಿಂತ ಹೆಚ್ಚು ಇದೆ. ನೀವು ಎಷ್ಟೇ ಕೆಟ್ಟ ಚಿತ್ರಗಳನ್ನು ಕೊಟ್ಟರೂ ಅವುಗಳನ್ನು ಸಹ ನೋಡಿ ನಿಮ್ಮನ್ನೂ ಕೂಡ ಸ್ಟಾರ್ ಮಾಡಿದಾರಲ್ಲ ಅದುವೇ ಕನ್ನಡಿಗರ ಅಭಿಮಾನಕ್ಕೆ ಸಾಕ್ಷಿ ಎಂದು ದರ್ಶನ್ ಅವರಿಗೆ ತಿರುಗೇಟು ಕೊಟ್ಟಿzರೆ. ಒಟ್ಟಿನಲ್ಲಿ ದರ್ಶನ್ ತಮ್ಮ ಕೇರ್ ಲೆಸ್ ಆಟಿಟ್ಯೂಡ್‌ನಿಂದಾಗಿ ಕನ್ನಡ ಸಿನಿಪ್ರೇಮಿಗಳನ್ನು ಎದುರು ಹಾಕಿಕೊಂಡಿದ್ದಾರೆ.
ನೆಟ್ ಪಿಕ್ಸ್ಖೇಮು ಹುಟ್ಟು ಕುರುಡ. ಒಮ್ಮೆ ಖೇಮು ಅಮೆರಿಕಾಕ್ಕೆ ಹೋಗಿದ್ದ. ಅಲ್ಲಿನ ದೊಡ್ಡ ರೆಸಾರ್ಟ್ ಒಂದರಲ್ಲಿ ಉಳಿದುಕೊಳ್ಳಲು ಹೋದ. ಅವನ ಸಹಾಯಕ್ಕೆ ಅಂತ ಅಲ್ಲಿ ಒಬ್ಬ ಸರ್ವೀಸ್ ಬಾಯ್ ಅನ್ನು ನೇಮಿಸಿದರು. ಸರ್ವೀಸ್ ಬಾಯ್ ಖೇಮುಗೆ ಕಾಟೇಜ್ ತೋರಿಸಲು ಕರೆದುಕೊಂಡು ಹೋದ. ರೂಮಿನ ಒಳಗೆ ಹೋದ ಖೇಮು ಅಲ್ಲಿದ್ದ ಬೆಡ್ ಅನ್ನು ಮುಟ್ಟಿ ನೋಡಿ ಓಹ್, ಬೆಡ್ ತುಂಬಾ ದೊಡ್ಡದಿದೆ ಅಂದ. ಅದಕ್ಕೆ ಸರ್ವೀಸ್ ಬಾಯ್ ಹೇಳಿದ ಅಮೆರಿಕಾದಲ್ಲಿ ಎನೂ ದೊಡ್ಡದೇ. ಸರಿ ಖೇಮು ಫ್ರೆಷ್ ಆಗಿ ಬಂದು ನನ್ನನ್ನ ಬಾರ್ ಸೆಕ್ಷನ್‌ಗೆ ಕರೆದುಕೊಂಡು ಹೋಗು ಅಂದ. ಇಬ್ಬರೂ ಬಾರ್‌ಗೆ ಹೋದರು.
ಅಲ್ಲಿ ಖೇಮು ಒಂದು ಪೆಗ್ ವಿಸ್ಕಿ ಆರ್ಡರ್ ಮಾಡಿದ. ಆ ವಿಸ್ಕಿ ಗ್ಲಾಸ್ ಮುಟ್ಟಿ ನೋಡಿದ ಖೇಮು ಓಹ್ ಎಷ್ಟು ದೊಡ್ಡ ಗ್ಲಾಸ್ಅಂದ. ಅದಕ್ಕೆ ಸರ್ವೀಸ್ ಬಾಯ್ ಹೇಳಿದ. ಅಮೆರಿಕಾದಲ್ಲಿ ಎನೂ ದೊಡ್ಡದೇ. ಸರಿ ಒಂದೆರಡು ಪೆಗ್ ಆಯ್ತು. ಖೇಮು ಸ್ವಲ್ಪ ಟೈಟ್ ಆದ. ನಂತರ ಖೇಮುಗೆ ಟಾಯ್ಲೆಟ್‌ಗೆ ಹೋಗಬೇಕು ಅನ್ನಿಸಿತು. ಪಕ್ಕದ ಇದ್ದ ಸರ್ವೀಸ್ ಬಾಯ್ ಅನ್ನು ಟಾಯ್ಲೆಟ್‌ಗೆಕರ್ಕೊಂಡು ಹೋಗು ಅಂದ. ಅವನೂ ಕೂಡ ಒಂದೆರಡು ಪೆಗ್ ಏರಿಸಿದ್ದ. ಹಾಗಾಗಿ ಎದ್ದು ಹೋಗಲಾರದೆ, ಹೀಗೇ ನೇರ ಹೋಗಿ, ಲೆಫ್ಟ್ನಲ್ಲಿ ಎರಡನೇ ಡೋರ್ ಅಂತ ಹೇಳಿದ.
ಕುರುಡ ಖೇಮು ನಶೆಯಲ್ಲಿ ನಡೆದುಕೊಂಡು ಹೋಗಿ, ಎರಡನೇ ಡೋರ್ ಬದಲು ಮೂರನೇ ಡೋರ್‌ನಲ್ಲಿ ಎಂಟ್ರಿ ಆದ. ಅದು ಸ್ವಿಮ್ಮಿಂಗ್ ಪೂಲ್‌ಗೆ ಹೋಗುವ ದಾರಿ ಆಗಿತ್ತು. ಸೀದಾ ಹೋದವನೇ ಖೇಮು ಪೂಲ್‌ನೊಳಗೆ ಬಿದ್ದು ಬಿಟ್ಟ. ತಕ್ಷಣ ಗಾಬರಿಯಾದ ಖೇಮು ಕಿರುಚಿಕೊಳ್ಳತೊಡಗಿದ. ಅಯ್ಯೋ ಅಮೆರಿಕಾದಲ್ಲಿ ಎನೂ ದೊಡ್ಡದೇ. ಯಾರೂ ಫ್ಲಷ್ ಮಾಡಬೇಡ್ರಪ್ಪ ಪ್ಲೀಸ್.
ಲೈನ್ ಮ್ಯಾನ್ಪಂಜಾಬಿ ರೈತರನ್ನು ಯಾವ್ ಕಾಯಿದೆ ಅಡಿ ಬಂಧಿಸಬಹುದು?‘ಪೇಟಾ’ ಆಕ್ಟ್ಮೊನ್ನೆ ರೈತರ ಹೋರಾಟಕ್ಕೆ ಸಾಥ್ ಕೊಟ್ಟವರು‘ಸಿಖ್’ ಮೈಂಡೆಡ್ ಪೀಪಲ್ಅವರನ್ನ ಹಿಡಿಯೋಕೆ ಹೋದ ಪೊಲೀಸರ ಪಾಲಿಸಿಸಿಖ್ ರೆ ಸಿಗ್ಲಿ, ಬಿಟ್ರೆ ಬಿಡ್ಲಿಫಾಸ್ಟ್ ಫುಡ್ ಮಾರುವ ಫುಟ್ ಪಾತ್ಫುಡ್ ಪಾತ್ಇಂಡಿಯಾ ಬಾರ್ಡರ್‌ನಲ್ಲಿ ಚೀನಾ ಹಳ್ಳಿ ನಿರ್ಮಿಸಿದೆನಾನು ಅಲ್ಲಿ ಗ್ರಾಮ ವಾಸ್ತವ್ಯ ಮಾಡಬಹುದಾ?- ಕುಮಾರಸ್ವಾಮಿಯಡಿಯೂರಪ್ಪ ಸರಕಾರದಲ್ಲಿ ಸದ್ಯಕ್ಕೆಮಿನಿಸ್ಟರ್ ಚೇರ್ = ಮ್ಯೂಸಿಕಲ್ ಚೇರ್ಎಡಗಣ್ಣು ಹೊಡಕೊಂಡ್ರೆ ಏನ್ ಮಾಡಬೇಕು?ಮೊನ್ನೆ ಬಲಗಣ್ಣು ಹೊಡಕೊಂಡಾಗ ಯಾವ್ ಸೀಮೆಗಿಲ್ಲದ ಒಳ್ಳೇದೂ ಆಗಿರಲಿಲ್ಲ ಬಿಡು ಅಂತ ಸಮಾಧಾನ ಮಾಡ್ಕೋಬೇಕು.ಇಷ್ಟ್ ದಿನ ರೋಡಲ್ಲಿ ಆಟೋಗಳನ್ನ ನೋಡಿದ್ರೆ ಭಯ ಆಗ್ತಿತ್ತು, ಅಡ್ಡಾದಿಡ್ಡಿ ನುಗ್ತಾರೆಅಂತ.ಈಗ ಟ್ರಾಕ್ಟರ್‌ಗಳನ್ನ ನೋಡಿದ್ರೆ ಭಯ ಆಗುತ್ತೆತಮ್ಮ ಖಾತೆ ಬಗ್ಗೆ ಅಸಮಾಧಾನ ಇರೋ ಎಂಟಿಬಿ ನಾಗರಾಜ್ ಯಡಿಯೂರಪ್ಪ ಅವರಬಗ್ಗೆ ಹೇಳಿದ್ದುಊರಿಗೆ ಉಪಕಾರಿ, ನನಗೆ ಅಬಕಾರಿಕನ್ನಡಿಗರ ವಿಶಾಲ ಹೃದಯದ ಬಗೆಗಿನ ಮಾತುಈ ಪ್ರಪಂಚ ‘ಕನ್ನಡಿ’ಗರಿದ್ದಂತೆ. ನೀವು ಅವರನ್ನ ಬೇರೆ ಭಾಷೆಯಲ್ಲಿ ಮಾತಾಡಿಸಿದ್ರೆ ಅವರೂಅದೇ ಭಾಷೆಯಲ್ಲಿ ಮಾತಾಡ್ತಾರೆ.
ಲೂಸ್ ಟಾಕ್
ನಮ್ ದೇಶದ್ ರೈತರ ಕಣ್ಣಲ್ಲಿ ನೀರು ಹಾಕಿಸುತ್ತಿದ್ದೀರಲ್ಲ… ಸರಿನಾ?ಅಯ್ಯೋ.. ಪ್ರತಿಭಟನೆ ಟೈಮಲ್ಲಿ ಟಿಯರ್ ಗ್ಯಾಸ್ ಹೊಡೆದ್ವಿ ಅಷ್ಟೇ. ಅದಕ್ಕೇ ಹಿಂಗೆಲ್ಲ ಅನ್ನೋದಾ…ಆದ್ರೂ ನಮ್ಮ ಅನ್ನದಾತರನ್ನ ಬೀದಿಗೆ ತಂದ್ ಬಿಟ್ರಿ ಅಲ್ವಾ ನೀವು?ನೋಡಿ, ಮತ್ತದೇ ತಪ್ಪು ತಿಳಿವಳಿಕೆ. ರೈತರು ಪ್ರತಿಭಟನೆಗೆ ಅಂತ ರಸ್ತೆಗೆ ಇಳಿದಿದ್ದಾರೆ ಅಷ್ಟೇ.ಆದ್ರೂ ದಿಲ್ಲಿಯ ಸಡಕ್ ಮೇಲೆ ಇರೋ ಸಿಖ್ ರೈತರು ಯಾಕೋ ಸಿಕ್ಕಾಪಟ್ಟೆ ಖಡಕ್ಆಗಿದ್ದಾರಲ್ಲ?ಅದಕ್ಕೆ ಕಾರಣ, ಸಿಖ್ಖರ ಹೆಸರಲ್ಲಿ ಸಿಕ್ಕ ಸಿಕ್ಕವರೆಲ್ಲ ಸಡಕ್‌ಗೆ ಇಳಿದಿರೋದು. ಅವರಿಗೆ ಸರಿಯಾದ ಸಬಕ್ ಸಿಖಾವೂಂಗ.ಸರಿ, ರೈತರ ಜತೆಗಿನ ಮಾತುಕತೆಯಲ್ಲಿ ಏನಾದ್ರೂ ಪ್ರೋಗ್ರೆಸ್ ಆಗ್ತಾ ಇದೆಯಾ?ಪ್ರೋಗ್ರೆಸ್ ಆಗೋಕೆ ಈ ಕಾಂಗ್ರೆಸ್‌ನೋರು ಬಿಟ್ರೆ ತಾನೇ?ಅಂತೂ ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅಂತೀರಾ?ಹೌದು ಮತ್ತೆ, ನಾವು ಎಷ್ಟೋ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರೋಕೂ ಅವರ ಶಾಸಕರೇ ಕಾರಣ ಅಲ್ವಾ?
(ಕಾಲ್ಪನಿಕ ಸಂದರ್ಶನ)