ಗಾಂಧೀಜಿ ಬದುಕಿದ್ದಿದ್ದರೆ 1952, 1957ರಲ್ಲಿ ಸುಭಾಷ್ ಚಂದ್ರ ಬೊಸ್‌ಗೇ ಮತ ಹಾಕುತ್ತಿದ್ದರು !
ಎಂ.ಜೆ.ಅಕ್ಬರ್‌, ಬಿಜೆಪಿ ಸಂಸದ, ಹಿರಿಯ ಪತ್ರಕರ್ತ
ನಮ್ಮ ದೇಶದಲ್ಲಿ ವ್ಯಕ್ತಿ ಹಾಗೂ ಪಕ್ಷದ ನಡುವೆ ರಾಜಕೀಯವೆಂಬುದು ಹೇಗೆ ಅಪ್ಪಚ್ಚಿಯಾಗುವಂತೆ ಸಿಲುಕಿಕೊಂಡಿದೆಯೆಂದರೆ ನಾವು ಸಾಮಾನ್ಯ ವಾಗಿ ದೇಶದ ಚುನಾವಣಾ ಇತಿಹಾಸವನ್ನು ರೂಪಿಸುವಲ್ಲಿ ಭೌಗೋಳಿಕ ಅಂಶಗಳ ಪಾತ್ರವನ್ನೇ ಮರೆತುಬಿಡುತ್ತೇವೆ.
ರಾಜಕೀಯ ವ್ಯಾಖ್ಯಾನಗಳಂತೂ ಹೆಚ್ಚಿನ ಸಲ ಇತಿಹಾಸದಿಂದ ಒಡಮೂಡದೆ ಸಾಹಿತ್ಯದಿಂದಲೇ ರೂಪುಗೊಂಡುಬಿಡುತ್ತವೆ. ನಮ್ಮ ದೇಶದಲ್ಲಿ೧೯೩೦ರ ನಂತರ ಸ್ವತಂತ್ರ ಭಾರತದ ಭವಿಷ್ಯದ ನಾಯಕರು ಎಂದು ಅತಿ ಹೆಚ್ಚು ಚರ್ಚೆಗೊಳಗಾದವರು ಜವಾಹರಲಾಲ್ ನೆಹರು ಹಾಗೂ ಸುಭಾಷ್ ಚಂದ್ರ ಬೋಸ್. ಆದರೆ, ದೇಶಾದ್ಯಂತ ಅಸಾಧಾರಣ ಖ್ಯಾತಿ ಗಳಿಸುವತ್ತ ಹೆಜ್ಜೆ ಹಾಕುತ್ತಿದ್ದ ಬೋಸ್ ಅವರ ಕ್ರಾಂತಿಕಾರಿ ಬೆಳವಣಿಗೆಗಳನ್ನು ನಾವು ಗುರುತಿಸಿದ್ದಕ್ಕಿಂತ ಕಡೆಗಣಿಸಿದ್ದೇ ಹೆಚ್ಚು.
ಇವರಿಬ್ಬರಲ್ಲೂ ಅದ್ಭುತ ನಾಯಕತ್ವದ ಗುಣಗಳಿದ್ದವು ಮತ್ತು ಅಷ್ಟೇ ಅರ್ಹತೆಯೂ ಇತ್ತು. ಆದರೆ, ಒಂದೇ ಒಂದು ಮಹತ್ವದ ವ್ಯತ್ಯಾಸವಿತ್ತು. ಅದೇನೆಂದರೆ, ನೆಹರು ಅವರು ಗಾಂಽಜಿಯ ಪ್ರಭಾವಳಿಯ ಸುತ್ತ ಬೆಳೆದರು. ಬೋಸ್ ತಮ್ಮದೇ ಪ್ರಭಾವದಿಂದ ಬೆಳಗಿದರು. ಇಲ್ಲಿ ಇನ್ನೊಂದು ಅಂಶವನ್ನು ಹೇಳಬೇಕು. ಚರಿಷ್ಮಾ ಎಂಬುದಕ್ಕೊಂದು ಮ್ಯಾನ್ಯುಫ್ಯಾಕ್ಚರಿಂಗ್ ಡಿಫೆಕ್ಟ್ ಇದೆ. ಚರಿಷ್ಮಾ ಎಂಬುದು ತಾತ್ಕಾಲಿಕ. ಭೂಕಂಪನದಂತಹ ವಿಪತ್ತುಗಳಿಂದ ನಲುಗುವ ಭೂಮಿ ಕೂಡ ಚರಿಷ್ಮಾಕ್ಕೆ ಹೋಲಿಸಿದರೆ ಹೆಚ್ಚು ಸ್ಥಿರ.
೧೯೪೫ರ ಆಗಸ್ಟ್೧೭ರಂದು ಸುಭಾಷ್ ಚಂದ್ರ ಬೋಸ್ ರಷ್ಯಾಕ್ಕೆ ಹೋಗಲು ತೈಪೆಗೆ ತೆರಳುವ ಜಪಾನ್‌ನ ವಿಮಾನ ಹತ್ತುವ ಬದಲು ಸಮೀಪದ ದಾರಿಯಲ್ಲಿ ಬಂಗಾಳಕ್ಕೆ ಬಂದಿಳಿಯಲು ಥಾಯ್ಲೆಂಡ್‌ನಿಂದ ಹಡಗು ಹತ್ತಿದ್ದರೆ ಏನಾಗುತ್ತಿತ್ತು? ಆದರೆ, ಬೋಸ್ ತಾಯ್ನಾಡಿಗೆ ಬರಲಿಲ್ಲ. ಯುದ್ಧೋತ್ತರ ಯುರೋಪ್ ನಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೆಸೆಯುವ ಶಕ್ತಿಯಿರುವುದು ಸೋವಿಯತ್ ಒಕ್ಕೂಟಕ್ಕೆ ಮಾತ್ರ ಎಂದು ನಂಬಿದ್ದ ಅವರು ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಲು ರಷ್ಯಾದಿಂದ ಏನಾದರೂ ಸಹಾಯ ಸಿಗುತ್ತದೆಯೆಂಬ ನಂಬಿಕೆಯಿಂದ ಆ ದೇಶಕ್ಕೆ ಹೊರಟಿದ್ದರು.
೧೯೪೫ರ ಮೇ೨೫ರಂದು ಭಾಷಣವೊಂದರಲ್ಲಿ ಅವರೇ ಇದನ್ನು ಹೇಳಿದ್ದರು ಕೂಡ. ನಿಜ, ಆಗ ಬೋಸ್ ಭಾರತಕ್ಕೆ ಬಂದಿದ್ದರೆ ಅವರನ್ನುಬಂಧಿಸಲು ಬ್ರಿಟಿಷರು ಕಾಯುತ್ತಿದ್ದರು. ವೈಸರಾಯ್ ಲಾರ್ಡ್ ವೇವೆಲ್‌ಗೆ ಆಪ್ತ ಕಾರ್ಯದರ್ಶಿಯಾಗಿದ್ದ ಸರ್ ಇವಾನ್ ಜೆನ್ ಕಿನ್ಸ್ ಎಂಬಾತ ಇದನ್ನು ವೈಸರಾಯ್ ಕೌನ್ಸಿಲ್‌ನ ಗೃಹ ಸದಸ್ಯ ಸರ್ ಫ್ರಾನ್ಸಿಸ್ ಮೂಡಿ ಎಂಬುವನಿಗೆ೧೯೪೫ರ ಜುಲೈ೨೮ರಂದು ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದ. ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್‌ಎ)ಯನ್ನು ಕಟ್ಟುವ ಮೂಲಕ ಬ್ರಿಟನ್ನಿನ ಭಾರತೀಯ ಸೇನೆಯಲ್ಲಿ ಒಗ್ಗಟ್ಟು ಹಾಗೂ ಶಿಸ್ತು ಮಕಾಡೆಮಲಗುವಂತೆ ಮಾಡುವಲ್ಲಿ ಬೋಸ್ ಯಶಸ್ವಿಯಾಗಿದ್ದು ಬ್ರಿಟಿಷರನ್ನು ಕಂಗೆಡಿಸಿತ್ತು.
ಆದರೆ, ಬ್ರಿಟಿಷರ ಆಸೆ ಹಾಗೂ ಬ್ರಿಟಿಷರ ಸಾಮರ್ಥ್ಯದ ನಡುವೆ ದೊಡ್ಡ ವ್ಯತ್ಯಾಸವಿತ್ತು. ಬೋಸ್‌ರ ಪ್ರಭಾವ ಐಎನ್ಎಯಿಂದ ಆಚೆಗೆ ಸಾಮಾನ್ಯ ಸೇನೆಯ ಮೇಲೂ ಸಾಕಷ್ಟು ಬಿದ್ದಿತ್ತು. ಹೀಗಾಗಿ ಸಶಸ ಪಡೆಗಳು ಹಾಗೂ ಪೊಲೀಸ್ ಪಡೆಗಳಲ್ಲಿ ಯಾವಾಗ ಸ್ವಾತಂತ್ರ್ಯದ ಕಿಚ್ಚು ದಿಢೀರ್ ಭುಗಿಲೆದ್ದು ಎಲ್ಲೆಡೆ ಹರಡಬಹುದು ಎಂಬುದನ್ನು ಯಾರೂ ಊಹಿಸಲು ಸಾಧ್ಯವಿರಲಿಲ್ಲ.೧೯೪೫ರ ಜೂನ್೧೫ರಂದು ಲಾರ್ಡ್ ವೇವೆಲ್ ಈ ಕುರಿತು ಲಂಡನ್ನಿಗೆ ‘ನೋಟ್ ಬೈ ಮಿಲಿಟರಿ ಇಂಟೆಲಿಜೆನ್ಸ್ (ಆಯ್ದ ಭಾಗ)’ ಎಂಬ ಸಂದೇಶವೊಂದನ್ನು ಕಳಿಸಿದ್ದರು.
ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಗೆರಿಲ್ಲಾ ಪಡೆಯ ಅನಾಮಧೇಯ ಅಧಿಕಾರಿಯೊಬ್ಬ ತನಿಖೆಯ ಸಮಯದಲ್ಲಿ ನೀಡಿದ ಹೇಳಿಕೆಗಳನ್ನು ಆಧರಿಸಿನೀಡಿದ ಮಾಹಿತಿ ಇದಾಗಿತ್ತು. ‘ಐಎನ್‌ಎ ಅಧಿಕಾರಿಗಳು ಹಾಗೂ ಯೋಧರು ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಯುದ್ಧ ಸಾರಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರ ಮೇಲೆ ಯಾವುದೇ ಒತ್ತಡವಿಲ್ಲ. ಮಣಿಪುರದ ಹೋರಾಟದಲ್ಲಿ ಅನುಭವಿಸಿದಂತೆ ದೇಶದ ಸ್ವಾತಂತ್ರ್ಯಕ್ಕಾಗಿ ಯಾವುದೇ ರೀತಿಯ ಕಷ್ಟ ಬೇಕಾದರೂ ಅನುಭವಿಸಲು ಇವರು ಸಿದ್ಧರಿದ್ದಾರೆ.
ತಮ್ಮಲ್ಲಿ ಶಸ್ತ್ರಾಸ್ತ್ರಗಳು ಸಾಕ್ಟಷ್ಟಿಲ್ಲದ ಕಾರಣದಿಂದಲೇ ಈ ಹಿಂದೆ ಸೋಲಬೇಕಾಗಿ ಬಂತು ಎಂಬ ಅಚಲ ನಂಬಿಕೆ ಇವರಲ್ಲಿದೆ. ಬೋಸ್ ಭಾರತಕ್ಕೆ ಮರಳಿದ ಮೇಲೆ ಭಾರತೀಯ ಸೇನೆಯ ಮೂಲಕ ದೇಶಾದ್ಯಂತ ರಾಷ್ಟ್ರೀಯತೆಯ ಕಿಚ್ಚು ಹಚ್ಚುವ ಸಿದ್ಧತೆಗಳು ನಡೆಯುತ್ತಿವೆ’ ಎಂದು ವಿಚಾರಣೆಯ ವೇಳೆ ಐಎನ್‌ಎ ಅಧಿಕಾರಿ ಬಾಯ್ಬಿಟ್ಟಿರುವುದಾಗಿ ವೇವೆಲ್ ಕಳಿಸಿದ ಸಂದೇಶದಲ್ಲಿ ಹೇಳಲಾಗಿತ್ತು.
ಬ್ರಿಟಿಷ್ ಸೇನಾಪಡೆಯ ಕಮಾಂಡರ್ ಇನ್ ಚೀಫ್ ಜನರಲ್ ಸರ್ ಕ್ಲಾಡ್ ಔಚಿನ್‌ಲೆಕ್ ಕೂಡ ಈ ಕುರಿತು ಅತ್ಯಂತ ರಹಸ್ಯವಾದ ಹಾಗೂ ಖಾಸಗಿ ಸಂದೇಶವೊಂದನ್ನು೧೯೪೫ರ ನವೆಂಬರ್೨೪ರಂದು ಬ್ರಿಟನ್ನಿಗೆ ಕಳಿಸಿದ್ದ. ಅದರಲ್ಲಿ, ಐಎನ್ ಎಯ ಯಾವೊಬ್ಬ ಅಧಿಕಾರಿ ಅಥವಾ ಯೋಧನ ವಿರುದ್ಧ ಕೋರ್ಟ್ ಮಾರ್ಷಲ್ ನಡೆಸಿ ಮರಣದಂಡನೆ ನೀಡಿದರೂ ದೇಶದಲ್ಲಿ೧೯೨೧ಅಥವಾ೧೯೪೨ರಲ್ಲಾದ ದಂಗೆಗಿಂತದೊಡ್ಡ ದಂಗೆಯಾಗುತ್ತದೆ ಎಂದು ಬರೆದಿದ್ದ.
ಹೀಗಾಗಿ ರಾಜರ ವಿರುದ್ಧ ಯುದ್ಧ ಸಾರಿದ ಆರೋಪಗಳನ್ನು ಕೈಬಿಟ್ಟು ಅವರಿಗೆ ಕ್ಷಮಾದಾನ ನೀಡಬೇಕು; ಭಾರತೀಯ ಸೇನೆಯಲ್ಲಿರುವ ಗಣನೀಯ ಪ್ರಮಾಣದ ಸೈನಿಕರು ಐಎನ್‌ಎಯನ್ನು ಮೋಸಗಾರನೆಂದು ಗುರುತಿಸುವ ಬದಲು ದೇಶಭಕ್ತರೆಂದು ಕರೆಯತೊಡಗಿದ್ದಾರೆ ಎಂದೂ ತಿಳಿಸಿದ್ದ. ಬಹುಶಃ ಈ ಕಾರಣಕ್ಕಾಗಿಯೇ೧೯೪೬ರ ಜನವರಿ೩ರಂದು ಕ್ಯಾಪ್ಟನ್ ಪಿ.ಕೆ.ಸೆಹಗಲ್, ಕ್ಯಾಪ್ಟನ್ ಶಾ ನವಾಜ್ ಖಾನ್ ಹಾಗೂ ಲೆಫ್ಟಿನೆಂಟ್ ಜಿ.ಎಸ್.ಧಿಲ್ಲೋನ್ ಅವರಿಗೆ ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಔಚಿನ್‌ಲೆಕ್ ಲಾರ್ಡ್ ವೇವೆಲ್ ಜತೆಗೆ ಮಾತನಾಡಿ ‘ಹಣದ ದುರ್ಬಳಕೆ ಹಾಗೂ ವೇತನಪಾವತಿಯಲ್ಲಿನ ಅವ್ಯವಹಾರ’ ಎಂಬಂತಹ ಸಣ್ಣ ಆರೋಪಕ್ಕೆ ವಿಧಿಸುವ ಶಿಕ್ಷೆಯಾಗಿ ಮಾರ್ಪಡಿಸಿದ್ದ.
ಎನ್‌ಐಎ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿದರೆ ದೇಶಾದ್ಯಂತ ಅಷ್ಟೊಂದು ಆಕ್ರೋಶ ವ್ಯಕ್ತವಾಗುತ್ತಿತ್ತೆಂದರೆ ಸ್ವತಃ ಬೋಸ್ ಅವರನ್ನು ಹಿಡಿದು ವಿಚಾರಣೆಗೊಳಪಡಿಸಿದ್ದರೆ ಭಾರತದಲ್ಲಿ ಯಾವ ರೀತಿಯ ಬೆಂಕಿ ಭುಗಿಲೇಳಬಹುದಿತ್ತು ಎಂಬುದನ್ನು ಊಹಿಸಬಹುದು. ಅದಕ್ಕಿಂತ ಹೆಚ್ಚಾಗಿ, ಬೋಸ್ ಮೇಲೆ ಹೊರಿಸಬಹುದಾಗಿದ್ದ ಆರೋಪವಾದರೂ ಏನು? ಅವರು ಭಾರತೀಯ ಸೇನೆಯಲ್ಲಿರಲಿಲ್ಲ. ಹಾಗಿರುವಾಗ ಅವರನ್ನು ಕೋರ್ಟ್ ಮಾರ್ಷಲ್‌ಗೆ ಒಳಪಡಿಸುವುದು ಹೇಗೆ?೧೯೪೫ರಲ್ಲಿ ಯಾವ ಪೊಲೀಸ್ ಅಧಿಕಾರಿ ತಾನೇ ರಾಷ್ಟ್ರೀಯವಾದದ ವಿರುದ್ಧ ಆರೋಪಪಟ್ಟಿ ಬರೆಯಲು ಸಾಧ್ಯವಿತ್ತು? ಆ ಕಾಲದ ಅತ್ಯುತ್ತಮ ವಕೀಲ ಭೂಲಾಭಾಯಿ ದೇಸಾಯಿ.
ಐಎನ್‌ಎ ಅಧಿಕಾರಿಗಳ ಪರ ವಕಾಲತ್ತು ವಹಿಸಿದ್ದ ಅವರು ಆಧುನಿಕ ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದ್ದರು. ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಪ್ರತಿಯೊಬ್ಬರ ಹಕ್ಕಾಗಿತ್ತು. ಹೀಗಾಗಿ ಬ್ರಿಟಿಷ್ ಕೋರ್ಟ್‌ನಲ್ಲಿ ಅದ್ಭುತ ವಾದ ಮಂಡನೆ ಮಾಡಿದ ದೇಸಾಯಿ, ‘ನಿಮ್ಮ ಪ್ರಕಾರ ಫ್ರಾನ್ಸ್‌ನಲ್ಲಿ ಜರ್ಮನ್ವಸಾಹತುನ ವಿರುದ್ಧ ಯುದ್ಧ ಸಾರಿದ್ದ ಚಾರ್ಲ್ಸ್ ಡಿ ಗೌಲೆಯ ಫ್ರೀ ಫ್ರೆಂಚ್ ಪಡೆಗಳ ಹೋರಾಟ ಅಕ್ರಮವೇ? ಅವರ ಹೋರಾಟ ಕಾನೂನುಬದ್ಧ ಅಂತಾದರೆ ಐಎನ್‌ಎ ಹೋರಾಟ ಕೂಡ ಕಾನೂನುಬದ್ಧ’ ಎಂದು ಹೇಳಿದ್ದರು.
ವಾಸ್ತವವಾಗಿ ಆಗೇನಾದರೂ ಬೋಸ್‌ರನ್ನು ಜೈಲಿಗೆ ತಳ್ಳಿ ವಿಚಾರಣೆಗೊಳಪಡಿಸಿದ್ದರೆ ಅದರಿಂದ ದೇಶದ ಹಳ್ಳಿಹಳ್ಳಿಯ ಮನೆಮನೆಯಲ್ಲೂ ಅವರ ಬಗ್ಗೆ ಇನ್ನಷ್ಟು ಪ್ರೀತಿ ಹೆಚ್ಚುತ್ತಿತ್ತು. ತನ್ಮೂಲಕ ಅವರ ರಾಜಕೀಯ ಪಕ್ಷವಾದ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್‌ಗೆ ದೇಶಾದ್ಯಂತ ಏಕಾಏಕಿ ವೇದಿಕೆಯೊಂದು ದೊರಕಿದಂತಾಗುತ್ತಿತ್ತು.೧೯೪೫ರ ನವೆಂಬರ್೨೦ರಂದು ಗುಪ್ತಚರ ದಳದ ನಿರ್ದೇಶಕರು ಬ್ರಿಟಿಷ್ ಸರ್ಕಾರಕ್ಕೆ ‘ಭಾರತದಲ್ಲಿಜನಸಾಮಾನ್ಯರೆಲ್ಲರನ್ನೂ ಈ ಪರಿ ಆಕರ್ಷಿಸಿದ ವಿಷಯಗಳು ಬಹಳ ಅಪರೂಪ. ಇದೊಂದು ಅನುಕಂಪದ ಅಲೆ.
ಐಎನ್‌ಎ ಅಧಿಕಾರಿಗಳಿಗೆ ಶಿಕ್ಷೆಯಾದರೆ ಅದರ ಪರಿಣಾಮ ಜನಾಂಗೀಯ (ಅಂದರೆ ಭಾರತೀಯರ ಮೇಲಿನ) ದೌರ್ಜನ್ಯವೆಂದು ಪರಿಗಣಿತವಾಗುತ್ತದೆ.ಅದು ವರ್ಷಗಳ ಕಾಲ ಭಾರತೀಯರ ಮನಸ್ಸಿನಲ್ಲಿ ಉಳಿಯುತ್ತದೆ. ಐಎನ್‌ಎ ಪರ ಅನುಕಂಪ ವ್ಯಕ್ತಪಡಿಸುವವರು ಕೇವಲ ಸರ್ಕಾರದ ವಿರುದ್ಧ ಇರುವವರಷ್ಟೇ ಆಗಿರುವುದಿಲ್ಲ. ಇಂತಹ ಅನುಕಂಪ ಎಲ್ಲಾ ಜಾತಿ-ಧರ್ಮಗಳನ್ನು ಮೀರಿ ದೇಶದೆಲ್ಲೆಡೆಯ ಜನರಿಂದ ವ್ಯಕ್ತವಾಗುತ್ತದೆ. ಹೀಗಾಗಿ ಇದರಿಂದ ಭಾರತೀಯ ಸೇನೆಗೆ ಬಂದೊದಗಿರುವ ಅಪಾಯವನ್ನು ಕಡೆಗಣಿಸುವುದು ದಡ್ಡತನವಾಗುತ್ತದೆ’ ಎಂದು ಹೇಳಿದ್ದರು.
ಬೋಸ್‌ಗಿದ್ದ ಈ ಜನಪ್ರಿಯತೆ ಹಾಗೂ ಪ್ರಸಿದ್ಧಿಯೇ ಕಾಂಗ್ರೆಸ್ ನಾಯಕರನ್ನೂ ಕಂಗೆಡಿಸಿತ್ತು.೧೯೫೨ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ ಬೋಸ್ಗೆದ್ದುಬಿಡುತ್ತಿದ್ದರು ಎಂದು ನಾನು ಹೇಳುವುದಿಲ್ಲ. ಗಾಂಧೀಜಿಯ ಪ್ರಭಾವ, ಅವರ ಹುತಾತ್ಮ ಪಟ್ಟದಿಂದ ಜನರ ಮೇಲಾಗಿದ್ದ ಭಾವನಾತ್ಮಕ ಪರಿಣಾಮ ಹಾಗೂ ಗಾಂಧೀಜಿಯಿಂದಲೇ ಕಾಂಗ್ರೆಸ್‌ಗೆ ಲಭಿಸಿದ್ದ ಸಾಂಸ್ಥಿಕ ಶಕ್ತಿಯನ್ನು ಮಣಿಸುವುದು ಸುಲಭರಲಿಲ್ಲ. ಅದರಲ್ಲೂ ಹಿಂದಿ ಭಾಷಿಕ ಪ್ರದೇಶಗಳಲ್ಲಿ ಮತದಾರರನ್ನು ಕಾಂಗ್ರೆಸ್‌ನಿಂದ ಬೇರೆಡೆಗೆ ಸೆಳೆಯುವುದು ಬಹಳ ಕಷ್ಟತ್ತು. ಆದರೆ, ಫಾರ್ವರ್ಡ್ ಬ್ಲಾಕ್ ಪಕ್ಷ ಸ್ವತಂತ್ರ ಭಾರತದ ಮೊದಲ ಸಂಸತ್ತಿನಲ್ಲಿ ಗಣನೀಯ ಸಂಖ್ಯೆಯ ಸದಸ್ಯರನ್ನಂತೂ ಹೊಂದಿರುತ್ತಿತ್ತು.
ನಂತರ೧೯೫೭ರಲ್ಲಿ ಸುಭಾಷ್ ಚಂದ್ರ ಬೋಸ್ ಭಾರತಕ್ಕೆ ನಾಯಕತ್ವ ಒದಗಿಸುವ ಹಂತ ತಲುಪಿರುತ್ತಿದ್ದರು. ಬಂಗಾಳವನ್ನು ಮೂಲವಾಗಿಟ್ಟು ಕೊಂಡ, ಪೂರ್ವದ ಪ್ರದೇಶಗಳಲ್ಲಿ ಉತ್ತಮ ನೆಲೆ ಹೊಂದಿದ್ದ ಬೋಸ್, ಕರಾವಳಿ ಪ್ರದೇಶಗಳಲ್ಲಿ ವಿಶೇಷ ರೀತಿಯ ಮೈತ್ರಿಯೊಂದನ್ನು ಕುದುರಿಸಿಕೊಳ್ಳಲು ಸಾಧ್ಯವಿತ್ತು. ಅದರ ಜೊತೆಗೆ ಬಿಹಾರ, ಈಶಾನ್ಯ ರಾಜ್ಯಗಳು, ರಾಜಸ್ಥಾನ, ನಗರ ಪ್ರದೇಶಗಳ ಅಲ್ಪಸಂಖ್ಯಾತರು ಹೀಗೆ ಕಾಂಗ್ರೆಸ್ ಪಕ್ಷದ ಮತಬ್ಯಾಂಕ್‌ನಲ್ಲೂ ತಮ್ಮ ಸಿದ್ಧಾಂತ ಹಾಗೂ ಜನಪ್ರಿಯತೆಯಿಂದಾಗಿ ಪ್ರವೇಶ ಪಡೆಯಲು ಸಾಧ್ಯವಿತ್ತು.
ಚರಿಷ್ಮಾ ಜೊತೆಗೆ ಬೋಸ್ ಬಳಿ ಧೈರ್ಯ ಹಾಗೂ ಕಲ್ಪನಾಶಕಿಯಿತ್ತು. ಅವರು ಯಾರಿಂದಲೂ ಅತಿಯಾಗಿ ಅಚ್ಚರಿಗೊಳಗಾಗುತ್ತಿರಲಿಲ್ಲ. ಗಾಂಧೀಜಿ ಯಿಂದ ಕೂಡ. ಮೊದಲ ಹೆಜ್ಜೆ ಇಡುವುದಕ್ಕಿಂತ ಮೊದಲು ಸರಿಯಾದ ತಂತ್ರಗಾರಿಕೆಯೊಂದನ್ನು ಮನಸ್ಸಿನಲ್ಲೇ ಹೆಣೆಯುವ ಶಕ್ತಿ ಅವರಿಗಿತ್ತು. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ,೧೯೪೧ರ ಜನವರಿ೧೭ರಂದು ಅವರು ಪಠಾಣನ ವೇಷ ಧರಿಸಿ ಕಲ್ಕತ್ತಾ ತೊರೆದು ಕಾರು, ರೈಲು, ಹೇಸರಗತ್ತೆ ಹತ್ತಿ, ಕಾಲ್ನಡಿಗೆಯಲ್ಲಿ ಕಾಬೂಲ್‌ಗೆ ಹೋಗಿದ್ದು. ಅಲ್ಲಿಂದ ವೇಷ ಮರೆಸಿಕೊಂಡು ಇಟಲಿಯ ಒರ್ಲಾಂಡೋ ಮಜೋಟಾ ಎಂದು ಹೇಳಿಕೊಂಡು ಮಾಸ್ಕೋ ಮತ್ತು ಬರ್ಲಿನ್‌ಗೆ ಹೋಗಿದ್ದರು.
ಅಂತಹ ಚುರುಕು ಮೆದುಳಿನ, ವಾಸ್ತವದ ಮೇಲೆ ಸಾಕಷ್ಟು ಹಿಡಿತವುಳ್ಳ ಹಾಗೂ ದೂರದೃಷ್ಟಿಯಿಂದಲೇ ಎಲ್ಲವನ್ನೂ ಮಾಡುವ ವ್ಯಕ್ತಿ ಚುನಾವಣಾ ರಾಜಕೀಯದಲ್ಲೂ ಖಂಡಿತವಾಗಿ ಅದ್ಭುತ ಸಾಧನೆ ಮಾಡುತ್ತಿದ್ದರು. ಭಾರತದ ಕರಾವಳಿಯ ಭಾಷೆಗಳೆಂದರೆ ಬಂಗಾಳಿ, ಒಡಿಯಾ, ತೆಲುಗು, ತಮಿಳು, ಮಲೆಯಾಳಂ, ಕನ್ನಡ, ಕೊಂಕಣಿ, ಮರಾಠಿ ಮತ್ತು ಗುಜರಾತಿ. ಬೋಸ್‌ಗೆ ಬಂಗಾಳಿಯ ಮೇಲಿದ್ದ ಪ್ರೀತಿಗೆ ಯಾವ ವಿವರಣೆಯೂ ಬೇಕಿಲ್ಲ.೧೯೫೨ರ ಚುನಾವಣೆಯಲ್ಲಿ ಬಂಗಾಳದ ಪ್ರತಿಯೊಂದು ಸೀಟನ್ನೂ ಅವರು ಗೆಲ್ಲುತ್ತಿದ್ದರು. ಎಲ್ಲರೂ ಮರೆತಿರುವ ಇನ್ನೊಂದು ಸಂಗತಿಯೆಂದರೆ ಅವರು ಹುಟ್ಟಿದ್ದು ಒಡಿಶಾದ ಕಟಕ್ ನಲ್ಲಿ.
ಅದರ ಜೊತೆಗೆ ರಾಜಕೀಯವಾಗಿ ಅನುಕೂಲಕ್ಕೆ ಬರುವ ಇನ್ನೊಂದು ಸಂಗತಿಯೆಂದರೆ ಒಡಿಶಾದಲ್ಲಿ ಆಗ ರಾಜಾಳ್ವಿಕೆಯ ರಾಜ್ಯಗಳು ಬಹಳ ಇದ್ದವು.ಗಾಂಧೀಜಿ ಯಾವತ್ತೂ ರಾಜಾಳ್ವಿಕೆಯ ರಾಜ್ಯಗಳಿಗೆ ತಮ್ಮ ಚಳವಳಿಯನ್ನು ಕೊಂಡೊಯ್ಯುತ್ತಿರಲಿಲ್ಲ. ಈಗಾಗಲೇ ಅವುಗಳನ್ನು ಭಾರತೀಯರೇಆಳುತ್ತಿದ್ದಾರೆ ಎಂದು ಗಾಂಧೀಜಿ ಹೇಳುತ್ತಿದ್ದರು. ಬ್ರಿಟಿಷರು ಭಾರತ ತೊರೆದ ಮೇಲೆ ಇವರೆಲ್ಲ ಭಾರತ ಸರ್ಕಾರದಲ್ಲಿ ಸೇರಿಕೊಂಡರು ಅಥವಾ ಜನರೇಇವರನ್ನು ಓಡಿಸಿದರು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಈ ರಾಜ್ಯಗಳಲ್ಲಿ ಹೇಳಿಕೊಳ್ಳುವಂತಹ ಸಂಘಟನಾತ್ಮಕ ಶಕ್ತಿ ಇರಲಿಲ್ಲ. ಎಲ್ಲಿಯವರೆಗೆ ಪರ್ಯಾಯ ರಾಜಕೀಯ ಪಕ್ಷ ಹುಟ್ಟಿಕೊಳ್ಳಲಿಲ್ಲವೋ ಅಲ್ಲಿಯವರೆಗಷ್ಟೇ ಈ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತಿತ್ತು.
೧೯೬೨ರಲ್ಲಿ ಕಾಂಗ್ರೆಸ್ ಬಗ್ಗೆ ಜನರಿಗಿದ್ದ ನಂಬಿಕೆ ಇಳಿಯತೊಡಗಿದಾಗ ಇದು ಇನ್ನಷ್ಟು ನಿಚ್ಚಳವಾತು.೧೯೬೭ರ ಹೊತ್ತಿಗೆ ರಾಜಾಳ್ವಿಕೆ ಇದ್ದ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಗಣನೀಯ ಪ್ರಮಾಣದಲ್ಲಿ ನೆಲೆಯೂರಿದ್ದವು. ಕಾಂಗ್ರೆಸ್‌ನ ಈ ದೌರ್ಬಲ್ಯವನ್ನು ಬೋಸ್ ತಮ್ಮ ಸಂಘಟನೆಗೆ ಅನುಕೂಲವಾಗುವಂತೆ ಬಹಳ ಚೆನ್ನಾಗಿ ಬಳಸಿಕೊಳ್ಳಬಲ್ಲವರಾಗಿದ್ದರು. ಬೋಸ್‌ಗೆ ಹೇಗೆ ಬೆಂಬಲ ಸಿಗುತ್ತಿತ್ತು? ತಮಿಳುನಾಡು ನೇರವಾಗಿ ಅಥವಾ ತನ್ನ ಪ್ರಾದೇಶಿಕ ಪಕ್ಷವಾದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮೂಲಕ ಹಿಂದಿಯೇತರ ರಾಜ್ಯದಿಂದ ಬಂದ ನಾಯಕನಿಗೆ ಖಂಡಿತ ಓಗೊಡು ತ್ತಿತ್ತು. ಕಾಂಗ್ರೆಸ್ ನಿಂದ ಜನರು ದೂರ ಸರಿಯುತ್ತಿರುವುದು೧೯೫೭ರಲ್ಲಿ ಡಿಎಂಕೆ೧೫ಸೀಟು ಗೆದ್ದಾಗಲೇ ಢಾಳಾಗಿ ಕಾಣಿಸಿತ್ತು.
೧೯೬೨ರ ದ್ರಾವಿಡ ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಗೆದ್ದ ಸೀಟುಗಳ ಸಂಖ್ಯೆ೫೦ಕ್ಕೆ ಏರಿತ್ತು. ಹಿಂದಿ ಹೇರಿಕೆಯ ಭಯ ಇಂದಿಗೂ ತಮಿಳು ನಾಡಿನಲ್ಲಿದೆ. ಆದರೆ, ಸಾಕಷ್ಟು ಕಡಿಮೆಯಾಗಿದೆ. ತೆಲಂಗಾಣದಲ್ಲಿ ಬೋಸ್ ಅವರ ಬಡತನ ವಿರೋಧಿ ನೀತಿಗಳು ಫಾರ್ವರ್ಡ್ ಬ್ಲಾಕ್‌ಗೆ ಮತತಂದುಕೊಡುತ್ತಿದ್ದವು. ಕಳೆಗುಂದುತ್ತಿದ್ದ ಕಮ್ಯುನಿಸ್ಟ್ ಚಳವಳಿ ಹಾಗೂ ನಿಜಾಮರ ನಾಡಿನಲ್ಲಿ ಕಾಂಗ್ರೆಸ್‌ಗಿದ್ದ ಸಡಿಲ ನೆಲೆಯಿಂದ ಬೋಸ್‌ಗೆ ಲಾಭವಾಗುತ್ತಿತ್ತು.  ಕೇರಳದ ಸಮಾಜವಾದಿಗಳು ಅವರದೇ ಲೋಕದಲ್ಲಿ ರಾಜಕಾರಣ ಮಾಡುತ್ತಾ ಮತದಾರರ ಮೇಲೆ ಹಿಡಿತ ಹೊಂದಿದ್ದರೂ ಅವರನ್ನು ಬೋಸ್ ಕಾಂಗ್ರೆಸ್ ವಿರೋಧಿ ಮೈತ್ರಿಯಲ್ಲಿ ಸೇರ್ಪಡೆಯಾಗುವಂತೆ ಮನವೊಲಿಸುತ್ತಿದ್ದರು.
ಬಂಗಾಳದಲ್ಲಿ೧೯೬೭ರಲ್ಲಿ ಫಾರ್ವರ್ಡ್ ಬ್ಲಾಕ್ ಪಕ್ಷ ಕಾಂಗ್ರೆಸ್ ವಿರೋಧಿ ಮೈತ್ರಿಕೂಟದ ಅಂಗವಾಗಿತ್ತು.೧೯೫೭ರಲ್ಲಿ ಸಹಜವಾಗಿಯೇ ಅಂತಹ ಸಮೂಹಗಳಿಗೆ ಬೋಸ್ ನಾಯಕರಾಗಿರುತ್ತಿದ್ದರು. ಈ ಮೊದಲು ಹೇಳಿದ ಕಾರಣಗಳಿಂದಾಗಿಯೇ ಕರ್ನಾಟಕದ ಮೈಸೂರು ರಾಜ್ಯದಲ್ಲೂ ಕಾಂಗ್ರೆಸ್ಪಕ್ಷಕ್ಕೆ ಕಷ್ಟವಿತ್ತು. ಹಾಗೆಯೇ, ಬೋಸ್ ಮಹಾರಾಷ್ಟ್ರಕ್ಕೆ ಕಾಲಿಟ್ಟರೆ ಕಾಂಗ್ರೆಸ್ ಪಕ್ಷ೧೯೭೭ರವರೆಗೆ ಅನುಭವಿಸಿದ ಅದ್ಭುತ ಜನಬೆಂಬಲವನ್ನು ಮುಂದೆ ಖಂಡಿತ ಅನುಭವಿಸಲು ಸಾಧ್ಯವಿರಲಿಲ್ಲ.
ಗುಜರಾತ್‌ನಲ್ಲಿ ಬೋಸ್‌ರ ವೈಯಕ್ತಿಕ ವರ್ಚಸ್ಸು ಹಾಗೂ ಸ್ಥಳೀಯ ನಾಯಕರ ಜೊತೆಗಿನ ಮೈತ್ರಿಯಿಂದ ಸಾಕಷ್ಟು ಲಾಭವಾಗುತ್ತಿತ್ತು.೧೯೬೨ರ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗುಜರಾತ್‌ನಲ್ಲಿ ಕೇವಲ೧೬ಸೀಟು ಗೆದ್ದಿತ್ತು. ಸ್ವತಂತ್ರ ಪಾರ್ಟಿಗೆ೪, ಇನ್ನಿತರ ಸಣ್ಣಪುಟ್ಟ ಪಕ್ಷಗಳು ತಲಾ ಒಂದು ಸ್ಥಾನ ಗಳಿಸಿದ್ದವು. ಗುಜರಾತ್ ಅಕ್ಷರಶಃ ಕಾಂಗ್ರೆಸ್‌ವಿರೋಧಿ ನಾಯಕನಿಗಾಗಿ ಕಾಯುತ್ತಿತ್ತು. ಹಾಗೆಯೇ ಜಾರ್ಖಂಡ್, ಛತ್ತೀಸ್‌ಗಢ ಹಾಗೂಈಶಾನ್ಯ ರಾಜ್ಯಗಳಲ್ಲೂ ಬೋಸ್ ಪ್ರಭಾವ ಕೆಲಸ ಮಾಡುವುದು ನಿಶ್ಚಿತವಾಗಿತ್ತು. ಏಕೆಂದರೆ ದೇಶದ ಇತರ ರಾಜ್ಯಗಳಿಗಿಂತ ಮೊದಲೇ ಕಾಂಗ್ರೆಸ್ ಪಕ್ಷಕ್ಕೆ ಈ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿತ್ತು.
ಅದು ಬೋಸ್ ಗೆ ಕೂಡಲೇ ಮತ ತಂದುಕೊಡದಿದ್ದರೂ ನಿಧಾನವಾಗಿ ಅಲ್ಲಿನ ರಾಜಕಾರಣವನ್ನು ಅವರು ತಮ್ಮತ್ತ ತಿರುಗಿಸಿಕೊಳ್ಳಲು ಸಾಧ್ಯವಿತ್ತು. ಅದಕ್ಕೆ ಕಾರಣ ಸರಳ.೧೯೫೦ಮತ್ತು೧೯೬೦ರ ದಶಕದಲ್ಲಿ ಕಾಂಗ್ರೆಸ್ ಪಕ್ಷ ಬುಡಕಟ್ಟು ಸಮುದಾಯಗಳನ್ನು ಬೇಕಾಬಿಟ್ಟಿಯಾಗಿ ನಡೆಸಿಕೊಂಡಿತ್ತು. ಅವುಗಳಿಗೆ ಸ್ವತಂತ್ರ ರಾಜಕೀಯ ಅಸ್ತಿತ್ವವಲ್ಲ, ಅಂತಹದ್ದೊಂದು ಅಸ್ತಿತ್ವ ಕಂಡುಕೊಳ್ಳುವ ಸಾಮರ್ಥ್ಯವೂ ಅವುಗಳಿಗೆ ಇಲ್ಲ ಎಂದು ಕಾಂಗ್ರೆಸ್ಪಕ್ಷ ಧೀಮಾಕು ತೋರಿತ್ತು. ಹೀಗಾಗಿ ಕಾಂಗ್ರೆಸ್ ಸರ್ಕಾರಗಳು ಸಣ್ಣಪುಟ್ಟ ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಾ ತಮ್ಮ ನಾಯಕರನ್ನು ಖುಷಿಯಾಗಿಟ್ಟು ಕೊಳ್ಳುವ ಕೆಲಸವನ್ನಷ್ಟೇ ಮಾಡುತ್ತಿದ್ದವು.  ಇನ್ನು, ಹಿಂದಿ ಭಾಷಿಕ ರಾಜ್ಯವಾಗಿದ್ದರೂ ಬಿಹಾರದಲ್ಲಿ ಬೋಸ್‌ಗೆ ಉತ್ತಮ ನೆಲೆ ಸಿಗುವ ಸಾಧ್ಯತೆಯಿತ್ತು.
ಪೂರ್ವ ಹಾಗೂ ಈಶಾನ್ಯ ಬಿಹಾರದ ಸಂಸ್ಕೃತಿ ಬಂಗಾಳದ ಸಂಸ್ಕೃತಿಯಂತೆಯೇ ಇತ್ತು. ಅದಕ್ಕಿಂತ ಹೆಚ್ಚಾಗಿ ಬಿಹಾರಕ್ಕೆ ಜಯಪ್ರಕಾಶ್ ನಾರಾಯಣರಂತಹ ಚಿಂತಕರು ಹಾಕಿಕೊಟ್ಟ ಪ್ರಬಲವಾದ ಸಮಾಜವಾದಿ ಚಳವಳಿಯ ಹಿನ್ನೆಲೆ ಯಿತ್ತು. ರಾಮಮನೋಹರ ಲೋಹಿಯಾ ಅಂತೂನೇರವಾಗಿ ಕಾಂಗ್ರೆಸ್ ವಿರೋಧಿ ಸಿದ್ಧಾಂತದವರೇ ಆಗಿದ್ದರು. ಅವರಿಗೆ ಬೇರೆಲ್ಲ ಕಡೆಗಿಂತ ಹೆಚ್ಚು ಬೆಂಬಲಿಗರು ಬಿಹಾರದಲ್ಲಿದ್ದರು.೧೯೩೯ರಲ್ಲಿಗಾಂಧೀಜಿಯ ವಿರುದ್ಧವೇ ಬೋಸ್ ಸ್ಪರ್ಧಿಸಿ ತ್ರಿಪುರಾದ ಕಾಂಗ್ರೆಸ್ ಅಽವೇಶನಕ್ಕೆ ಅಧ್ಯಕ್ಷರಾದಾಗ ಚ್ಚರಿಯೆಂಬಂತೆ ಬಿಹಾರದ ನಾಯಕರು ಬೋಸ್‌ರಬೆನ್ನಿಗೆ ನಿಂತಿದ್ದರು.
ಎಲ್ಲ ರಂಗದಲ್ಲೂ ಸೋತಿದ್ದ ನೆಹರು೧೯೫೭ರ ಚುನಾವಣೆಯಲ್ಲಿ ಬೋಸ್ ಇದ್ದಿದ್ದರೆ ಅವರ ಚುನಾವಣಾ ವಿಷಯ ಏನಾಗಿರುತ್ತಿತ್ತು? ಬಡತನ.ಜವಾಹರಲಾಲ್ ನೆಹರು ದಶಕಗಳಿಂದ ಅಧಿಕಾರ ನಡೆಸಿದ್ದರೂ ಬಡತನದ ಸೂಚ್ಯಂಕದಲ್ಲಿ ಭಾರತ ಯಾವ ಸುಧಾರಣೆಯನ್ನೂ ಕಂಡಿರಲಿಲ್ಲ. ಬ್ರಿಟಿಷರು ಬಿಟ್ಟುಹೋದಾಗ ಭಾರತ ಎಷ್ಟು ಬಡ ರಾಷ್ಟ್ರವಾಗಿತ್ತೋ ಈಗಲೂ ಅಷ್ಟೇ ಬಡ ರಾಷ್ಟ್ರವಾಗಿತ್ತು. ಜೊತೆಗೆ ನೆಹರು ಸರ್ಕಾರ ತನ್ನೆಲ್ಲಾ ಆರ್ಥಿಕ ನೀತಿಗಳಲ್ಲೂ ಮೇಲ್ನೋಟಕ್ಕೇ ಸೋತಿರುವುದು ಕಾಣಿಸುತ್ತಿತ್ತು. ಅಲ್ಲಿ ಬರಿ ಭರವಸೆಗಳಿದ್ದವು, ಆದರೆ ಕೆಲಸಗಳು ಆಗುತ್ತಿರಲಿಲ್ಲ.
ಆರ್ಥಿಕ ರಂಗದಲ್ಲಿ ಜನರಲ್ಲಿ ಮೂಡಿದ್ದ ನಿರಾಶಾವಾದ ಹಾಗೂ ಆಕ್ರೋಶಗಳು ಸಾಮಾಜಿಕ ಮತ್ತು ರಾಜಕೀಯ ಹಿಂಸಾಚಾರಕ್ಕೆ ನಾಂದಿಹಾಡಿದ್ದವು. ತನ್ಮೂಲಕ೧೯೬೦ರ ಮಧ್ಯದಲ್ಲಿ ನಕ್ಸಲ್ ಚಳವಳಿ ತೀವ್ರಗೊಂಡಿತು. ಬುಡಕಟ್ಟು ನಾಯಕ ಜಂಗಲ್ ಸಂತಲ್ ಸೇರಿದಂತೆ ನಕ್ಸಲ್ ಚಳವಳಿಯ ಮೂಲ ಪುರುಷರು ನಗರ ಪ್ರದೇಶ ಅಥವಾ ಅರೆ ನಗರ ಪ್ರದೇಶಗಳಲ್ಲಿ ಈ ಚಳವಳಿಗೆ ಬೆಂಬಲ ಕೊನೆಯಾದ ನಂತರವೂ ಹೋರಾಟವನ್ನು ಜಾರಿಯಲ್ಲಿಟ್ಟಿದ್ದರು.
ಹೀಗಾಗಿ ಚುನಾವಣಾ ಪ್ರಚಾರಕ್ಕೆ ಬೋಸ್ ಇಳಿದಿದ್ದರೆ ಅವರ ಮಾತಿಗೆ ಜಾತಿ, ಮತ ಅಥವಾ ಜನಾಂಗಗಳ ಹಂಗಿಲ್ಲದೆ ಎಲ್ಲೆಡೆಯಿಂದ ಬೆಂಬಲ ವ್ಯಕ್ತವಾಗುತ್ತಿತ್ತು. ಏಕೆಂದರೆ ಅದು ಆರ್ಥಿಕ ಅಸಮಾನತೆಯ ವಿರುದ್ಧ ಇರುತ್ತಿತ್ತು. ಬೋಸ್ ಅವರ ರಾಜಕೀಯದ ಎರಡು ಪ್ರಮುಖ ಆಧಾರ ಸ್ತಂಭಗಳು ಸಾಮಾಜಿಕ ಸಾಮರಸ್ಯ ಹಾಗೂ ಆರ್ಥಿಕ ಸಮಾನತೆಯಾಗಿರುತ್ತಿದ್ದವು.
೧೯೫೨ಹಾಗೂ೧೯೭೧ರ ನಡುವೆ ಕಾಂಗ್ರೆಸ್ ಪಕ್ಷದ ಯಶಸ್ಸಿಗೆ ಹಾಗೂ ಈ ಶತಮಾನದ ಮೊದಲ ದಶಕದಲ್ಲಿ ಅದರ ಭಾಗಶಃ ಪುನರುಜ್ಜೀವನಕ್ಕೆ ಕಾರಣ ವೇನು? ಸರಳವಾಗಿ ಹೇಳುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರ ಸಂಪೂರ್ಣ ಬೆಂಬಲ ದೊರೆತಾಗಲೆಲ್ಲ ಸಂಸತ್ತಿನಲ್ಲಿ ಸರಳ ಬಹುಮತ ದೊರೆತಿದೆ.೧೯೫೨ರಲ್ಲಿ ಕಾಂಗ್ರೆಸ್೩೬೪ಸೀಟು ಮತ್ತು ಶೇ.೪೫ಮತ ಪಡೆದಿತ್ತು;೧೯೫೭ರಲ್ಲಿ೩೭೧ಸೀಟು ಹಾಗೂ ಶೇ.೪೭.೮ಮತ ಪಡೆದಿತ್ತು. ಇದರಲ್ಲಿ ಮುಸ್ಲಿಂ ಮತಗಳನ್ನು ಕಳೆದರೆ ಮತ ಗಳಿಕೆಯ ಸರಾಸರಿ ಶೇ.೩೦ರ ಆಸುಪಾಸಿನಲ್ಲಿರುತ್ತದೆ. ಸೀಟುಗಳ ಸಂಖ್ಯೆ ಯೂ ಸಾಕಷ್ಟು ಕಡಿಮೆ ಯಾಗುತ್ತದೆ.೧೯೬೭ರ ಲೋಕಸಭೆ ಚುನಾವಣೆಯ ಫಲಿತಾಂಶ ನೋಡಿ. ಆ ಬಾರಿ ಮುಸ್ಲಿಮರು ಕಾಂಗ್ರೆಸ್‌ನಿಂದ ವಿಮುಖಗೊಂಡಿದ್ದರು.
೧೯೨೦ಹಾಗೂ೧೯೨೧ರಲ್ಲಿ ಮುಸ್ಲಿಮರು ಅಸಹಕಾರ ಅಥವಾ ಖಿಲಾಫತ್ ಚಳವಳಿಗೆ ಮಹಾತ್ಮಗಾಂಧೀಜಿಯವರ ನಾಯಕತ್ವವನ್ನು ಒಪ್ಪಿಕೊಂಡಿದ್ದರು. ಆದರೆ,೧೯೨೨ರ ಫೆಬ್ರವರಿಯಲ್ಲಿ ಚೌರಿ ಚೌರಾದ ಪೊಲೀಸ್ ಸ್ಟೇಶನ್ ಮೇಲೆ ದಾಳಿ ನಡೆದ ನಂತರ ಅಸಹಕಾರ ಚಳವಳಿಯನ್ನುಗಾಂಧೀಜಿ ದಿಢೀರ್ ನಿಲ್ಲಿಸಿಬಿಟ್ಟಾಗ ಕಾಂಗ್ರೆಸ್ ಬಗ್ಗೆ ಮುಸ್ಲಿಮರಿಗೆ ಅನುಮಾನ ಶುರುವಾತು. ಏಕೆಂದರೆ ಆ ಚಳವಳಿ ಬಹುತೇಕ ನಿರ್ಣಾಯಕ ಹಂತಕ್ಕೆ ತಲುಪಿ ಬ್ರಿಟಿಷರು ಕಂಗೆಟ್ಟು ಹಿಮ್ಮೆಟ್ಟುವ ಲಕ್ಷಣ ತೋರುತ್ತಿದ್ದರು. ಸಂತನಂತಹ ಗಾಂಧೀಜಿಯವರಲ್ಲಿ ಯಾರಿಗೂ ನಂಬಿಕೆ ಕಡಿಮೆಯಾಗಲಿಲ್ಲ. ಆದರೆ, ರಾಜಕೀಯ ಪಕ್ಷವಾದ ಕಾಂಗ್ರೆಸ್ ಮೇಲೆ ಯಾರಿಗೂ ನಂಬಿಕೆ ಹೆಚ್ಚಲಿಲ್ಲ.
೧೯೩೭ರಲ್ಲಿ ಸಾಮೂಕ ಜನಸಂಪರ್ಕ ಆಂದೋಲನಗಳ ಮೂಲಕ ಅವರ ಪ್ರೀತಿ ಗಳಿಸಲು ನೆಹರು ಯತ್ನಿಸಿ ಸೋತರು. ಏಕೆಂದರೆ ಮುಸ್ಲಿಮರು ನೆಹರು ಅವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕಾಂಗ್ರೆಸ್‌ನ ಮುಸ್ಲಿಂ ನಾಯಕ ಮೌಲಾನಾ ಆಜಾದ್ ಕೂಡ೧೯೩೭ರ ಚುನಾವಣೆಯ ನಂತರದ ಸಮ್ಮಿಶ್ರ ಸರ್ಕಾರದಲ್ಲಿ ಮುಸ್ಲಿಂ ಲೀಗ್‌ನ ಹಲ್ಲು ಕಿತ್ತಿದ್ದಕ್ಕಾಗಿ ನೆಹರು ಅವರನ್ನು ಕಟುವಾಗಿ ಟೀಕಿಸಿದ್ದರು. ಆ ಬೆಳವಣಿಗೆಯೇ ಮುಂದೆ ದೇಶವಿಭಜನೆಗೆ ಕಾರಣವಾಯಿತು ಎಂದು ಮೌಲಾನಾ ಹೇಳಿದ್ದರು.
೧೯೪೬ರಲ್ಲಿ ಯಾವ ಮುಸ್ಲಿಂ ಮತ ದಾರರೂ ಕಾಂಗ್ರೆಸ್ ಜೊತೆ ಇರಲಿಲ್ಲ. ಸ್ವತಂತ್ರ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಆರಂಭಿಸಿ ಮುಸ್ಲಿಮರಿಗೆ ಕಾಂಗ್ರೆಸ್ ಪಕ್ಷ ನೀಡುತ್ತಾ ಬಂದ ಸಂದೇಶ ಒಂದೇ ಆಗಿತ್ತು: ‘ನಿಮಗೆ ಬೇರೆಲ್ಲೂ ಹೋಗಲು ಸಾಧ್ಯವಿಲ್ಲ.’ ಪ್ರಜಾ ಪ್ರಭುತ್ವದಲ್ಲಿ ಈ ಮಾತು ಕೇಳಲು ಯಾರೂ ಬಯಸುವುದಿಲ್ಲ. ಏಕೆಂದರೆ ಎಲ್ಲಿ ಆಯ್ಕೆ ಇಲ್ಲವೋ ಅದು ಪ್ರಜಾಪ್ರಭುತ್ವವಲ್ಲ. ಸುಭಾಸ್ ಚಂದ್ರ ಬೋಸ್ ಉತ್ತಮ ಪರ್ಯಾಯ ಆಯ್ಕೆಯೊಂದನ್ನು ನೀಡಿದ್ದರೆ೧೯೬೭ರಲ್ಲಿ ಅಲ್ಲ,೧೯೫೭ರಲ್ಲೇ ಕಾಂಗ್ರೆಸ್‌ಗೆ ಮುಸ್ಲಿಮರ ಬೆಂಬಲ ಖಂಡಿತ ಸಿಗುತ್ತಿರಲಿಲ್ಲ.
ಇನ್ನು ಬಂಗಾಳದ ಮುಸ್ಲಿಮರು೧೯೫೨ರಲ್ಲೇ ಇನ್ನಿತರ ಬಂಗಾಳಿಗಳ ಜೊತೆಗೆ ಬೋಸ್‌ಗೆ ಮತ ಹಾಕುತ್ತಿದ್ದರು. ಇನ್ನೈದು ವರ್ಷಗಳಲ್ಲಿ ಬಿಹಾರ ಅದೇ ದಾರಿಗೆ ಬರುತ್ತಿತ್ತು. ಜೊತೆಗೆ ಗಂಗಾ ನದಿಯ ತಟದಲ್ಲಿರುವ ಹಾಗೂ ಕರಾವಳಿಯಲ್ಲಿರುವ ಅಲ್ಪಸಂಖ್ಯಾತ ಮೈತ್ರಿ ಪಕ್ಷಗಳು ಬೋಸ್ ಅವರ ಜೊತೆಗೆ ಬರುತ್ತಿದ್ದವು. ಆಗಲೂ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವೇ ಅತಿದೊಡ್ಡ ಪಕ್ಷವಾಗಿ ಉಳಿಯುತ್ತಿದ್ದಿರಬಹುದು. ಆದರೆ, ರಾಷ್ಟ್ರ ಮಟ್ಟದ ಮೊದಲ ಯುನೈಟೆಡ್ ಫ್ರಂಟ್ ಮೂಲಕ ಬೋಸ್ ಪ್ರಧಾನಿಯಾಗಿರುತ್ತಿದ್ದರು.
೬೮ವರ್ಷದ ನೆಹರು೧೯೫೭ರಲ್ಲಿ ಸುಸ್ತಾಗಿದ್ದರು. ಆದರೆ, ಬೋಸ್ ಇನ್ನೂ೬೦ರ ಯೌವನದಲ್ಲಿದ್ದರು. ವಾಸ್ತವವಾಗಿ೧೯೫೭ರ ಚುನಾವಣೆಯ ನಂತರ ನೆಹರು ರಾಜೀನಾಮೆ ನೀಡುವ ಬಗ್ಗೆ ಗಂಭೀರವಾಗಿ ಯೋಚಿಸಿದ್ದರು. ಆಗ ಅವರು ಮನಸ್ಸಿನ ಮಾತು ಕೇಳಿದ್ದರೆ ಇಂದು ದೇಶ ಅವರ ಕುರಿತಾದ ಒಳ್ಳೆಯ ನೆನಪುಗಳನ್ನಷ್ಟೇ ಮೆಲುಕು ಹಾಕುತ್ತಿತ್ತು. ಆದರೆ, ಅವರು ಹುದ್ದೆ ಬಿಡಲಿಲ್ಲ. ಅಧಿಕಾರದ ಮೋಹ ದೊಡ್ಡದು. ಹೀಗಾಗಿ೧೯೬೨ರಲ್ಲಿ ಚೀನಾ ವಿರುದ್ಧದ ಸೋಲು, ದೇಶದಲ್ಲಿ ಸದಾ ಬರಗಾಲದಲ್ಲಿ ಬದುಕಿದಂತೆ ಬದುಕಿದ ಜನರು,೧೯೬೦ರ ದಶಕದ ಆರ್ಥಿಕ ಹಿಂಜರಿಕೆಹೀಗೆ ಹಲವು ಋಣಾತ್ಮಕ ವಿಚಾರಗಳಿಗಾಗಿ ನೆಹರು ಅವರನ್ನು ಜನರು ನೆನಪಿಸಿಕೊಳ್ಳುವಂತಾಗಿದೆ.
ಬೋಸ್ ಪ್ರಧಾನಿಯಾಗಿದ್ದರೆ ಭಾರತದ ಮಿಲಿಟರಿ ಶಕ್ತಿಯ ಜೊತೆಗೆ ಖಂಡಿತ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅಲಿಪ್ತ ನೀತಿಯ ಹೆಸರಿನಲ್ಲಿ ದೇಶದಸೇನೆಯನ್ನು ದುರ್ಬಲವಾಗಿ ಉಳಿಸದೆ ಚೀನಾಕ್ಕೂ ಸಡ್ಡು ಹೊಡೆಯುತ್ತಿದ್ದರು. ಆಗ, ಭಾರತದ ಮೇಲೆ ದಾಳಿ ನಡೆಸಲು ಆದೇಶ ನೀಡುವ ಮುನ್ನ ಮಾವೋ ಜೆಡಾಂಗ್ ಎರಡು ಬಾರಿ ಯೋಚಿಸುತ್ತಿದ್ದರು. ದೇಶದ ಯುದ್ಧ ಕೈದಿಗಳನ್ನೇ ಬಳಸಿಕೊಂಡು ಅತ್ಯಂತ ದುರ್ಗಮ ಯುದ್ಧಭೂಮಿಯಲ್ಲೂ ಯುದ್ಧ ಮಾಡುವ ಸಾಮರ್ಥ್ಯದ ಸೇನೆಯನ್ನು ಕಟ್ಟಿದ್ದವರು ಬೋಸ್.
ಹೀಗಾಗಿ ರಕ್ಷಣೆಯ ವಿಷಯದಲ್ಲಿ ಅವರದು ಅನುಪಮ ಸಾಧನೆಯಾಗಿರುತ್ತಿತ್ತು. ಆದರೆ, ಆರ್ಥಿಕ ಕ್ಷೇತ್ರದಲ್ಲಿ ಅವರು ಇಷ್ಟೇ ಪರಿಣಾಮಕಾರಿ ಯಾಗಿರುತ್ತಿದ್ದರು ಎಂದು ಹೇಳಲು ಸಾಧ್ಯಲ್ಲ. ಏಕೆಂದರೆ ಅವರ ಆರ್ಥಿಕ ನೀತಿಯ ಚಿಂತನೆಗಳು ಹೆಚ್ಚು ಪ್ರಚುರವಾಗಿಲ್ಲ. ಹಾಗಂತ ಅವರು ಬೇರೆಲ್ಲಾವಿಷಯಗಳಲ್ಲೂ ವ್ಯೂಹಾತ್ಮಕ ಹಾಗೂ ತಾರ್ಕಿಕ ಹೆಜ್ಜೆಗಳನ್ನೇ ಇಡುತ್ತಿದ್ದುದರಿಂದ ಆರ್ಥಿಕ ಕ್ಷೇತ್ರದಲ್ಲೂ ಉತ್ತಮ ನಾಯಕತ್ವವನ್ನೇ ಪ್ರದರ್ಶಿಸುತ್ತಿದ್ದರು ಎಂದು ನಂಬುವುದಕ್ಕೆ ಕಾರಣಗಳಿವೆ.
೧೯೪೫ರಲ್ಲಿ ಯುರೋಪ್‌ನ ಬೆಂಬಲ ಪಡೆದು ಬ್ರಿಟಿಷರಿಂದ ದೇಶಕ್ಕೆ ಬಿಡುಗಡೆ ಕೊಡಿಸುವ ಯೋಚನೆ ಮಾಡುವುದರ ಬದಲು ಬೋಸ್ಸ್ವದೇಶದತ್ತ ಮುಖ ಮಾಡಿದ್ದರೆ೧೯೫೭ರ ಚುನಾವಣೆ ಯಲ್ಲಿ ದೇಶದ ಪ್ರಜ್ಞಾವಂತ ಯುವ ಮತದಾರರು ಮುನ್ನೆಲೆಗೆ ಬರುವುದನ್ನು ನಾವು ನಿರೀಕ್ಷಿಸಬಹುದಿತ್ತು.೧೯೪೫ರ ವೇಳೆಗೆ ಭಾರತೀಯ ಯುವಕರ ಮನಸ್ಸಿನಲ್ಲಿ ಬೋಸ್ ಪ್ರಶ್ನಾತೀತ ಹೀರೋ ಆಗಿದ್ದರು. ಬೋಸ್‌ರ ಯುದ್ಧ ಘೋಷಣೆ ‘ಇನ್‌ಕ್ವಿಲಾಬ್ ಜಿಂದಾಬಾದ್’ ಅನ್ನು ದೇಶದುದ್ದಗಲಕ್ಕೂ ಹರಡಿದವರು ಯುವಕರೇ.
ಬೋಸ್ ಎಂಬ ಅಪ್ರತಿಮ ವಿದ್ಯಮಾನವನ್ನು ಗಾಂಧೀಜಿಯವರು ತಮ್ಮ ಶಿಷ್ಯರಿಗಿಂತ ಮೊದಲೇ ಗುರುತಿಸಿದ್ದರು. ಗಾಂಧೀಜಿಯವರ ಸಿದ್ಧಾಂತವನ್ನುಬೋಸ್ ತಿರಸ್ಕರಿಸಿ ಜರ್ಮನಿಯಲ್ಲಿ ವಾಸಿಸುತ್ತಿದ್ದರೂ ಅವರ ಬಗ್ಗೆ ಗಾಂಧೀಜಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.೧೯೪೨ರ ಜೂನ್‌ನಲ್ಲಿ ಅಮೆರಿಕನ್ ಪತ್ರಕರ್ತ ಲೂಯಿಸ್ ಫಿಶರ್‌ಗೆ ನೀಡಿದ ಸಂದರ್ಶನದಲ್ಲಿ ಗಾಂಧೀಜಿ, ‘ದೇಶಭಕ್ತರಲ್ಲೇ ಅಪ್ರತಿಮ ದೇಶ ಭಕ್ತನೆಂದು ನಾನು ಬೋಸ್‌ರನ್ನು ಗುರುತಿಸುತ್ತೇನೆ.
ವರು ದಾರಿ ತಪ್ಪಿರಬಹುದು. ನಾನು ಅವರನ್ನು ಸಾಕಷ್ಟು ವಿಷಯಗಳಲ್ಲಿ ವಿರೋಧಿಸಿದ್ದೇನೆ. ಅವರು ಕಾಂಗ್ರೆಸ್‌ನ ಅಧ್ಯಕ್ಷರಾಗುವುದನ್ನು ನಾನು ಎರಡು ಬಾರಿ ತಪ್ಪಿಸಿದ್ದೇನೆ. ಆದರೂ ಅವರು ಅಧ್ಯಕ್ಷರಾದರು. ನನ್ನ ಹಾಗೂ ಅವರ ಸಿದ್ಧಾಂತಗಳು ಬೇರೆಯಾಗಿದ್ದರೂ ಅವರನ್ನು ನಾನು ಗೌರವಿಸುತ್ತೇನೆ’ ಎಂದು ಹೇಳಿದ್ದರು. ನಾಲ್ಕು ವರ್ಷಗಳ ನಂತರ೧೯೪೬ರ ಫೆಬ್ರವರಿ೧೫ರಂದು ಗಾಂಧೀಜಿ, ‘ಇಂಡಿಯನ್ ನ್ಯಾಷನಲ್ ಆರ್ಮಿ ನಮ್ಮೆಲ್ಲರ ಮೇಲೆ ಹಿಪ್ನಾಟಿಸಂ ಮಾಡಿದೆ.
ನೇತಾಜಿಯ ಹೆಸರೇ ಒಂದು ತೂಕ. ಅವರ ದೇಶಭಕ್ತಿ ಇನ್ನೊಂದು ತೂಕ. ಅವರ ಧೈರ್ಯ ಅವರೆಲ್ಲಾ ಕೆಲಸಗಳಿಗಿಂತಲೂ ಒಂದು ಕೈ ಮೇಲು. ಅವರ ಗುರಿ ದೊಡ್ಡದಿತ್ತು. ಆದರೆ ಸೋತರು. ಯಾರು ಸೋತಿಲ್ಲ ಹೇಳಿ? ಅವರ ಬಗ್ಗೆ ಇದಕ್ಕಿಂತ ಹೆಚ್ಚು ಮೆಚ್ಚುಗೆ ಹೇಗೆ ವ್ಯಕ್ತಪಡಿಸಲಿ… ನೇತಾಜಿ ಮತ್ತು ಅವರ ಸೇನೆ ನಮಗೆಲ್ಲಾ ಸ್ವಯಂ ತ್ಯಾಗ, ವರ್ಗಾತೀತ ಹಾಗೂ ಜಾತ್ಯತೀತ ಏಕತೆ ಮತ್ತು ಶಿಸ್ತು ಹೇಗಿರಬೇಕು ಎಂಬುದನ್ನು ಹೇಳಿಕೊಡುತ್ತದೆ. ಅವರಿಗೆ ನಾವು ಸಲ್ಲಿಸುವ ಗೌರವವೆಂದರೆ ಈ ಮೂರು ಗುಣಗಳನ್ನು ಅಳವಡಿಸಿಕೊಳ್ಳುವುದು’.
ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ಶಕ್ತಿಯ ವಿರುದ್ಧ ಸುಭಾಷ್ ಚಂದ್ರ ಬೋಸ್ ಯುದ್ಧವನ್ನೇ ಸಾರಿದ್ದರು. ಅಂತಹ ಶಕ್ತಿಗಳನ್ನು ಹಿಮ್ಮೆಟ್ಟಿಸ ಬೇಕೆಂದು ಸದಾಕಾಲ ಪ್ರತಿಪಾದಿಸುತ್ತಿದ್ದರು. ಹಾಗೆ ಯುದ್ಧದ ಮಂತ್ರ ಜಪಿಸುತ್ತಲೇ ಅವರು ಭಾರತೀಯರ ನಡುವೆ ಶಾಂತಿ ಮತ್ತು ಸಹಬಾಳ್ವೆಯನ್ನು ಪ್ರತಿಪಾದಿಸುತ್ತಿದ್ದರು. ಮಹಾತ್ಮ ಗಾಂಧೀಜಿಗೆ ಇದು ಗೊತ್ತಿತ್ತು. ಗಾಂಧೀಜಿ ಬದುಕಿದ್ದಿದ್ದರೆ೧೯೫೨ಮತ್ತು೧೯೫೭ರಲ್ಲಿಖಂಡಿತ ಸುಭಾಷ್ ಚಂದ್ರ ಬೋಸ್‌ಗೇ ಮತ ಹಾಕುತ್ತಿದ್ದರು.