ಸ್ವಹಿತಾಸಕ್ತಿ ಸಾಧನೆಗಾಗಿ ಭಾರತದ ವಿರುದ್ದ ಷಡ್ಯಂತ್ರ
ಅಭಿವ್ಯಕ್ತಿ
ಚಂದ್ರಶೇಖರ ಬೇರಿಕೆ
ಕೇಂದ್ರ ಸರಕಾರದ 3 ಕೃಷಿ ಕಾಯಿದೆಗಳ ವಿರುದ್ಧ2020ರ ನವೆಂಬರ್‌ನಿಂದ ಆರಂಭವಾದ ರೈತರ ಹೋರಾಟ ಈಗ ಹೊಸ ರೂಪ ಪಡೆದುಕೊಳ್ಳುತ್ತಿದೆ.
ರೈತರ ಹೋರಾಟ ಆರಂಭವಾದಲ್ಲಿಂದ ಕೇಂದ್ರ ಸರಕಾರ ಮತ್ತು ರೈತ ಸಂಘಟನೆಗಳ ಮಧ್ಯೆ ಸುಮಾರು11ಸುತ್ತುಗಳ ಮಾತುಕತೆ ಗಳು ನಡೆಯಿತು. ಮಾತುಕತೆ ನಡೆದ ಸಂದರ್ಭದಲ್ಲಿ ಕೃಷಿ ಕಾಯಿದೆಗಳಲ್ಲಿನ ಕೆಲವು ಅಂಶ ಗಳನ್ನು ಕೈಬಿಡುವ ಪ್ರಸ್ತಾಪವನ್ನು ಕೇಂದ್ರ ಸರಕಾರವು ರೈತ ಸಂಘಟನೆಗಳ ಮುಂದಿಟ್ಟಿತ್ತು. ಮಾತುಕತೆಯ ಸಂದರ್ಭದಲ್ಲಿ ಚರ್ಚಿಸಿದ ವಿಚಾರಗಳು ಮತ್ತು ಪ್ರಸ್ತಾಪಗಳನ್ನು ಕೇಂದ್ರ ಸರಕಾರ ಅಧಿಕೃತವಾಗಿ ಪ್ರಕಟಿಸಿತು ಮತ್ತು  ದ್ರ ಸರಕಾರದ ಪ್ರಸ್ತಾಪವನ್ನು ರೈತ ಸಂಘಟನೆಗಳೂಬಹಿರಂಗಪಡಿಸಿದವು.
ಆದರೆ ಇಷ್ಟೂ ಮಾತುಕತೆಗಳ ಪೈಕಿ ಯಾವುದೂ ಫಲಪ್ರದವಾಗಲಿಲ್ಲ. ಅರ್ಥಾತ್ ಮಾತುಕತೆಗಳು ಫಲಪ್ರದ ವಾಗದಂತೆ ಸಂಚು ರೂಪಿಸಿದವರು ಆ ನಿಟ್ಟಿನಲ್ಲಿ ಸಫಲತೆಯನ್ನು ಕಂಡರು. ಈ ಮಧ್ಯೆ ರೈತರ ಹೋರಾಟದಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಮತ್ತು ಕರೋನಾ ಹರಡುವ ಭೀತಿ ಹೆಚ್ಚಿರುವುದರಿಂದ ಹೋರಾಟಗಾರರನ್ನು ಅಲ್ಲಿಂದ ತೆರವು ಗೊಳಿಸಲು ಆದೇಶ ನೀಡುವಂತೆ ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗುತ್ತದೆ. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ‘ಕೇಂದ್ರ ಸರಕಾರ ನಡೆಸುತ್ತಿರುವ ಮಾತುಕತೆಯಿಂದ ಯಾವುದೇ ಪ್ರಯೋಜನ ವಾಗುತ್ತಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟಿಸುವ ಹಕ್ಕಿದೆ.
ರೈತರಿಗೂ ಪ್ರತಿಭಟಿಸುವ ಹಕ್ಕಿದ್ದು, ಅದನ್ನು ನಾವು ಕಸಿದುಕೊಳ್ಳುವುದಿಲ್ಲ. ಪೊಲೀಸರು ಈ ಹೋರಾಟವನ್ನು ನಿಗ್ರಹಿಸುವುದು ಸರಿಯಲ್ಲ. ಹಾಗಾಗಿ ಹಿಂಸಾಚಾರ ವಿಲ್ಲದೆ ರೈತರ ಹೋರಾಟ ಮುಂದುವರಿಯಲಿ. ಅಲ್ಲದೇ, ಯಾವುದೇ ಕಾರಣಕ್ಕೂ ರೈತರನ್ನು ಹೋರಾಟದ ಕಣದಿಂದ ತೆರವು ಗೊಳಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ’ ಎಂದು ಡಿಸೆಂಬರ್ 17,2020ರಂದು ಆದೇಶನೀಡಿತ್ತು. ಈ ಮಧ್ಯೆ ಕೃಷಿಯ ಬಗ್ಗೆ ಜ್ಞಾನವನ್ನು ಹೊಂದಿರುವ ತಜ್ಞರ ಸಮಿತಿಗೆ ಈ ವಿಷಯವನ್ನು ಹಸ್ತಾಂತರಿಸಿ ಎರಡೂ ಕಡೆಯವರ ವಾದವನ್ನು ಆಲಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಮಿತಿಯನ್ನು ರಚಿಸುವುದಾಗಿಯೂ, ಹೀಗಾಗಿ ಕೃಷಿ ಕಾಯಿದೆಗಳನ್ನು ಸದ್ಯ ತಡೆಹಿಡಿಯುವಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡಿತ್ತು.
ಆ ಬಳಿಕ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ಮತ್ತು ದೆಹಲಿ ಗಡಿಯಲ್ಲಿ ರೈತ ಹೋರಾಟದ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದಅರ್ಜಿಯ ವಿಚಾರಣೆ ಯನ್ನು ಜನವರಿ 12, 2021 ರಂದು ನಡೆಸಿದ ಸರ್ವೋಚ್ಛ ನ್ಯಾಯಾಲಯ , ಮುಂದಿನ ಆದೇಶದವರೆಗೆ ಮೂರೂ ಕೃಷಿ ಕಾಯಿದೆ ಗಳ ಜಾರಿಯನ್ನು ಅಮಾನತುಗೊಳಿಸಿತ್ತು ಮತ್ತು ತಜ್ಞರ ಸಮಿತಿ ರಚಿಸಿ ಮಹತ್ವದ ಆದೇಶ ನೀಡಿತ್ತು.
ನ್ಯಾಯಾಲಯದ ಈ ತೀರ್ಪು ಅತ್ಯಂತ ಸ್ವಾಗತಾರ್ಹವೂ ಮತ್ತು ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡುವ ಪ್ರಾಮಾಣಿಕಪ್ರಯತ್ನವೂ ಆಗಿತ್ತು. ಇದೇ ಸಂದರ್ಭದಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟ ಕೇಂದ್ರ ಸರಕಾರ ಮೂರೂ ಕೃಷಿ ಕಾಯಿದೆಗಳಜಾರಿಯನ್ನು18ತಿಂಗಳುಗಳ ಕಾಲ ತಡೆಹಿಡಿಯುವುದಾಗಿ ಘೋಷಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ರೈತ ಸಂಘಟನೆಗಳಸಹಕಾರವನ್ನು ಕೋರಿತ್ತು. ಇಲ್ಲಿಯ ವರೆಗೆ ಕೃಷಿ ಕಾಯಿದೆಗಳ ಹೋರಾಟಕ್ಕೆ ವಿರೋಧ ಪಕ್ಷಗಳ ಪ್ರಚೋದನೆ ಮತ್ತು ಅನ್ನದಾತನ ಹೆಸರಿನಲ್ಲಿ ನಕಲಿ ರೈತರ ಷಡ್ಯಂತ್ರದ ಬಗ್ಗೆ ಆರೋಪಗಳ ಹೊರತಾಗಿಯೂ ಇದು ಪಕ್ಕಾ ಭಾರತದ ಆಂತರಿಕ ವಿಚಾರವಾಗಿಯೇ ಚರ್ಚೆಯಲ್ಲಿತ್ತು. ಆದರೆ ಟ್ರಾಕ್ಟರ್‌ಗಳೊಂದಿಗೆ ಮತ್ತು ಕುದುರೆಗಳ ಮೇಲೆ ಕುಳಿತು ಖಡ್ಗ ಝಳಪಿಸಿಕೊಂಡು ಜನವರಿ 26,2021ರಂದು ರಾಷ್ಟ್ರದ ರಾಜಧಾನಿಗೆ ಪ್ರವೇಶ ಮಾಡಿದ ರೈತ ಹೋರಾಟಗಾರರು ಇದ್ದಕ್ಕಿದ್ದಂತೆ ದೆಹಲಿಯ ಕೆಂಪು ಕೋಟೆಗೆ ಲಗ್ಗೆಯಿಟ್ಟು ಇತಿಹಾಸದಲ್ಲೇ ನಡೆಯದ ಕರಾಳ ಘಟನೆಗೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ರೈತ ಹೋರಾಟಗಾರರು ಹಿಂಸಾಚಾರಕ್ಕೆ ತೊಡಗಿದ್ದರಿಂದ ಇಡೀ ಹೋರಾಟ ದಿಕ್ಕು ತಪ್ಪಿದಂತೆ ಅನುಮಾನ ಮೂಡಿತು ಮತ್ತು ಇದರ ಹಿಂದೆ ಯಾವುದೋ ಷಡ್ಯಂತ್ರ ಕೆಲಸ ಮಾಡುತ್ತಿರುವ ಗುಮಾನಿ ಎದ್ದಿತ್ತು. ಆಗಲೇ ಈ ಘಟನೆಯ ಹಿಂದೆ ದೇಶೀ ಕೈವಾಡದ ಶಂಕೆ ವ್ಯಕ್ತವಾಗಿ ನೈಜ ರೈತರಿಗೆ ಅವಮಾನ ಮಾಡಿದಂತಾಯಿತು. ವಿರೋಧ ಪಕ್ಷಗಳ ವಿರುದ್ಧ ಕುಮ್ಮಕ್ಕಿನ ಆರೋಪ ಕೇಳಿ ಬಂದು ಇದು ರಾಜಕೀಯ ಕೆಸರೆರೆಚಾಟಕ್ಕೂ ನಾಂದಿ ಯಾಯಿತು. ಅಲ್ಲದೇ ಇದು ರೈತ ಸಂಘಟನೆಗಳ ಮಧ್ಯೆ ಬಿರುಕಿಗೆ ಕಾರಣವಾಗಿ ಕೆಲವು ರೈತ ಸಂಘಟನೆ ಗಳು ಹೋರಾಟದಿಂದ ಹಿಂದೆ ಸರಿಯು ವಂತೆ ಮಾಡಿತ್ತು.
ಭಾರತದ ಆಂತರಿಕ ವಿಷಯವಾಗಿದ್ದ ರೈತ ಹೋರಾಟದ ವಿಚಾರದ ಮೇಲೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಕೆಲವರುಇದ್ದಕ್ಕಿದ್ದಂತೆ ಫೆಬ್ರವರಿ 2 ಮತ್ತು3ರಂದು ರೈತ ಹೋರಾಟಗಾರರ ಪರವಾಗಿ ಸಹಾನುಭೂತಿ ವ್ಯಕ್ತಪಡಿಸಿ ‘ಫಾರ್ಮರ‍್ಸ್ ಪ್ರೊಟೆಸ್ಟ್’ ಎಂಬ ಹ್ಯಾಷ್‌ಟ್ಯಾಗ್ ಬಳಸಿ ತಮ್ಮ ಟ್ವಿಟರ್ ಖಾತೆ ಯಲ್ಲಿ ಬರೆದುಕೊಂಡು ಭಾರತದ ಆಂತರಿಕ ವಿಷಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾಗುವಂತೆ ಮತ್ತು ಇನ್ನಷ್ಟು ರೋಚಕ ವಾಗುವಂತೆ ಮಾಡಿದರು. ಬಾರ್ಬಡೋಸ್ ಮೂಲದ ಪಾಪ್ ಗಾಯಕಿ ರಿಹಾನ್ನಾ ಮತ್ತು ಸ್ವೀಡನ್‌ನ ಹವಾಮಾನ ಬದಲಾವಣೆ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಇದರ ಪ್ರಧಾನಪಾತ್ರಧಾರಿಗಳು.
ಇವರಿಗೆ ಬೆಂಬಲ ನೀಡಿದವರಲ್ಲಿ ಅಮೆರಿಕಾದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ರ ಸಂಬಂಧಿಯಾದ ವಕೀಲೆ ಮೀನಾ ಹ್ಯಾರಿಸ್, ಕೆನಡಾದ ಯೂಟ್ಯೂಬರ್ ನಟಿ ಲಿಲಿ ಸಿಂಗ್, ಕೀನ್ಯಾದ ಪರಿಸರ ಹೋರಾಟಗಾರ್ತಿ ಎಲಿಜಬೆತ್ ವಾತುಟಿ, ಲೆಬೆನಾನ್ಮೂಲದ ಅಮೆರಿಕಾ ಮಾಡೆಲ್, ನೀಲಿ ಚಿತ್ರ ತಾರೆ ಮಿಯಾ ಖಲೀಫ, ಅಮೆರಿಕಾದ ನಟಿ ಅಮಂಡಾ ಸಿನಿ, ಹಾಲಿವುಡ್ಸ್ಟಾರ್ ಜಾನ್ ಕುಸ್ಯಾಕ್ ಪ್ರಮುಖರು. ಇವರಿಗೆ ಭಾರತದ ವ್ಯಕ್ತಿಗಳಿಂದಲೂ ಬೆಂಬಲ ವ್ಯಕ್ತವಾಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳ ಬೇಕಾದ ಅವಶ್ಯಕತೆಯಿಲ್ಲ.
ರೈತರ ಹೋರಾಟದ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಿದಾಡುತ್ತಿದ್ದಂತೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ತಕ್ಕತಿರುಗೇಟಿನ ಜತೆಗೆ ಎಚ್ಚರಿಕೆಯನ್ನು ನೀಡಿತು. ಭಾರತದ ದೇಶಾಂಗ ಇಲಾಖೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿ ರೈತ ಕಾಯಿದೆಗಳ ಬಗ್ಗೆ ಸ್ಪಷ್ಟನೆ ನೀಡಿ ‘ಇಂಡಿಯಾ ಟುಗೆದರ್’ ಮತ್ತು ‘ಇಂಡಿಯಾ ಎಗೆನೆಸ್ಟ್ ಪ್ರೊಪಗ್ಯಾಂಡಾ’ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಸುಳ್ಳು ಮತ್ತು ಬೇಜವಾಬ್ದಾರಿ ಯುತ ಹೇಳಿಕೆಗಳನ್ನು ಖಂಡಿಸಿದರು.
ಇದರ ಬೆನ್ನಲ್ಲೇ ಭಾರತದ ಕ್ರೀಡಾ ತಾರೆಯರಾದ ಸಚಿನ್ ತೆಂಡೂಲ್ಕರ್, ರಾಟ್ ಕ್ಲೊ, ಸೈನಾ ನೆಹ್ವಾಲ್, ಸಿನಿಮಾ ತಾರೆಯರಾದಅಕ್ಷಯ್ ಕುಮಾರ್, ಅಜಯ್ ದೇವಗನ್ ಅಲ್ಲದೇ ಸಾಮಾಜಿಕ ರಂಗದ ಧುರೀಣರು, ರಾಜಕೀಯ ನಾಯಕರು ಭಾರತ ವಿರುದ್ಧದ ದೇಶಿಯರ ಹಸ್ತಕ್ಷೇಪಗಳನ್ನು ಖಂಡಿಸಿ ಭಾರತೀಯರಾದ ನಾವೆಲ್ಲರೂ ದೇಶಿಯರ ಷಡ್ಯಂತ್ರದ ವಿರುದ್ಧ ಒಗ್ಗಟ್ಟಾಗಿರುವಂತೆ ಫೆಬ್ರವರಿ೩, ೨೦೨೧ರಂದು ಕರೆ ನೀಡಿದರು.
ರೈತ ಹೋರಾಟದ ಹಿನ್ನೆಲೆಯಲ್ಲಿ ನಡೆದ ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಭಾರತೀಯರಲ್ಲಿ ಕೆಲವರು ಎಷ್ಟು ಬೌದ್ಧಿಕ ದಿವಾಳಿಗಳು, ಶತಮೂರ್ಖರು, ರಾಜಕೀಯ ಲಾಭಕ್ಕಾಗಿ ಮೂರನೇ ದರ್ಜೆಯ ರಾಜಕೀಯ ಮಾಡು ವವರು, ವಿಚ್ಛಿದ್ರಕಾರಿ ಮನಸ್ಥಿತಿ ಯುಳ್ಳವರು, ಸ್ವಹಿತಾಸಕ್ತಿ ಸಾಧನೆಗಾಗಿ ಭಾರತದ ವಿರುದ್ಧದ ಯಾವುದೇ ದುಷ್ಕೃತ್ಯ ನಡೆಸುವವರ ವಿರುದ್ಧ ಕೈಜೋಡಿಸಲು ಹೇಸದವರು ಎಂಬುದನ್ನು ನಿರೂಪಿಸಿಯೇ ಬಿಟ್ಟರು.
ಭಾರತದ ಕೀರ್ತಿ ಪತಾಕೆ ಯನ್ನು ವಿಶ್ವ ಮಟ್ಟದಲ್ಲಿ ಹಾರಿಸಿದ, ಭಾರತದ ಕ್ರಿಕೆಟ್ಪಾಲಿನ ಆರಾಧ್ಯ ದೇವರು ಎಂದೆನಿಸಿರುವ ಸಚಿನ್ತೆಂಡೂಲ್ಕರ್‌ಗೆ ಮಾಡಿದ ಅವಮಾನವಾದರೂ ಎಂಥಾದ್ದು. ಭಾರತೀಯರಾಗಿ ನಾವು ಸಚಿನ್ ತೆಂಡೂಲ್ಕರ್ ಹೇಳಿಕೆ ಬಗ್ಗೆ ಹೆಮ್ಮೆ ಪಡುವುದನ್ನು ಬಿಟ್ಟು ಅವರ ಒಂದು ಹೇಳಿಕೆಯನ್ನು ಮುಂದಿಟ್ಟುಕೊಂಡು ಅವರನ್ನು ಅತ್ಯಂತ ನಿಕೃಷ್ಟವಾಗಿ ಬಿಂಬಿಸಿರುವುದು ಅಕ್ಷಮ್ಯ. ಕೇರಳದ ಕಾಂಗ್ರೆಸಿಗರು ಅವರ ಭಾವಚಿತ್ರಕ್ಕೆ ಮಸಿ ಬಳಿದರು.
ಇನ್ನು ಕೆಲವರು ಅವರನ್ನು ಆರ್‌ಎಸ್‌ಎಸ್ ಸಮವಸದ ಚಡ್ಡಿ ಹಾಕಿಸಿ ಚಿತ್ರಿಸಿದ್ದೂ ಆಯಿತು. ಆರ್‌ಜೆಡಿ ನಾಯಕ ಶಿವಾನಂದ ತಿವಾರಿ ಅವರು ‘ರಿಹಾನಾ ಮತ್ತು ಗ್ರೇಟಾ ಥನ್‌ಬರ್ಗ್ ವಿರುದ್ಧ ಕೇಂದ್ರ ಸರಕಾರ ಸಚಿನ್ ತೆಂಡೂಲ್ಕರ್ ಅವರನ್ನು ಕಣಕ್ಕಿಳಿಸಿದೆ’ ಎಂದು ಆರೋಪಿಸಿ ಅವರು ಭಾರತ ರತ್ನಕ್ಕೆ ಅರ್ಹರಲ್ಲ ಎಂದರು. ಇನ್ನು ಎನ್‌ಸಿಪಿಯ ಶರದ್ ಪವಾರ್ ಪ್ರತಿಕ್ರಿಯಿಸಿ, ‘ಹಲವಾರು ಭಾರತೀಯರು ತಮ್ಮ ನಿಲುನ ಬಗ್ಗೆ ಟ್ವೀಟ್ ಮಾಡಿದ್ದರು.
ಆದರೆ ತಮ್ಮದಲ್ಲದ ಇತರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಜಾಗರೂಕ ರಾಗಿರಬೇಕು. ಹೀಗೆಂದು ನಾನು ಸಚಿನ್ ತೆಂಡೂಲ್ಕರ್‌ಗೆ ಸಲಹೆ ನೀಡಲು ಬಯಸುತ್ತೇನೆ’ ಎಂದು ಹೇಳಿದರು. ಸಂಸತ್ ಸದಸ್ಯ, ಕಾಂಗ್ರೆಸ್ ಪಕ್ಷದ ಪಂಜಾಬ್‌ನ ಜಸ್ಬೀರ್ ಗಿಲ್ ಅವರು‘ಸಚಿನ್ ತೆಂಡೂಲ್ಕರ್ ಅವರು ಭಾರತ ರತ್ನಕ್ಕೆ ಅರ್ಹರಲ್ಲ. ಸರಕಾರದಿಂದ ಪ್ರತಿಫಲವಾಗಿ ಏನನ್ನೋ ಬಯಸಿ ಸರಕಾರದಪರವಾಗಿ ಟ್ವೀಟ್ ಮಾಡಿದ್ದಾರೆ. ತನ್ನ ಮಗ ಅರ್ಜುನ್ ಐಪಿಎಲ್‌ಗೆ ಆಯ್ಕೆ ಯಾಗಲು ಬಯಸಿದ್ದಾರೆ. ಈ ವ್ಯಕ್ತಿ ಭಾರತ ರತ್ನಕ್ಕೆ ಅರ್ಹನೇ ಎಂಬುದನ್ನು ನಿರ್ಧರಿಸಲು ಸಾರ್ವಜನಿಕರಿಗೆ ಬಿಡಲು ಬಯಸುತ್ತೇನೆ’ ಎಂದು ಹೇಳಿಕೆ ನೀಡಿದರು.
ಅಷ್ಟಕ್ಕೂ ರಿಹಾನಾ ಮತ್ತು ಗ್ರೇಟಾ ಥನ್‌ಬರ್ಗ್ ಟ್ವೀಟ್‌ಗೆ ಪ್ರತಿಯಾಗಿ ಸಚಿನ್ ತೆಂಡೂಲ್ಕರ್ ಟ್ವೀಟಿಸಿದ್ದೇನೆಂದರೆ ಭಾರತದ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗದು. ವಿದೇಶಿ ಶಕ್ತಿಗಳು ಪ್ರೇಕ್ಷಕರಾಗಬಹುದೇ ವಿನಾ ದೇಶದ ಒಳಗಿನ ವಿಚಾರದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ. ಭಾರತ ಏನು ಎಂಬುದು ಮತ್ತು ಭಾರತಕ್ಕೆ ಏನು ಬೇಕು ಎಂಬುದನ್ನು ನಿರ್ಧರಿಸಲು ಭಾರತೀಯರಿಗೆ ಗೊತ್ತಿದೆ. ಒಂದು ದೇಶವಾಗಿ ನಾವು ಒಗ್ಗಟ್ಟಿನಿಂದಿರೋಣ’!
ಛೇ! ಎಂಥಾ ವಿಪರ್ಯಾಸ. ಸುಮಾರು 24 ವರ್ಷಗಳ ಕಾಲ ಕ್ರಿಕೆಟ್ ಆಡಿ ಭಾರತ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ ಒಬ್ಬ ಅಪ್ಪಟ ದೇಶಪ್ರೇಮಿ ಮತ್ತು ಪ್ರಬುದ್ಧ ವ್ಯಕ್ತಿಯನ್ನು ರಾಜಕೀಯ ತೀಟೆಗಾಗಿ ಈ ರೀತಿ ನಡೆಸಿಕೊಳ್ಳುವುದು ನ್ಯಾಯವೇ? ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಯನ್ನು ಹೆಚ್ಚಿಸಿದ ವ್ಯಕ್ತಿಗೆ ಸಭ್ಯತೆಯ ಪಾಠವೇ? ಅಷ್ಟಕ್ಕೂ ಭಾರತದ ಪರವಾಗಿ ಧ್ವನಿ ಎತ್ತಲು ಅವರಿಗೆ ಕೇಂದ್ರ ಸರಕಾರದ ನಿರ್ದೇಶನವೇ ಬೇಕೇ? ಸಚಿನ್ ತೆಂಡೂಲ್ಕರ್ ಅವರನ್ನು ಟೀಕಿಸುವವರು ದೇಶಕ್ಕಾಗಿ ನೀಡಿದ ಕೊಡುಗೆ ಯಾದರೂ ಏನು? ಅಧಿಕಾರ ದೊರೆಯದ ಹತಾಶೆಯಿಂದ ಇಷ್ಟು ಕೀಳು ಮಟ್ಟಕ್ಕೆ ಇಳಿಯುವುದೇ? ಇನ್ನು ಭಾರತದ ಆಂತರಿಕ ವಿಷಯಕ್ಕೆ ಮೂಗು ತೂರಿಸಿದ ವಿಚಾರದ ಬಗ್ಗೆ ಚರ್ಚಿಸುವುದಾದರೆ, ಭಾರತ ಮತ್ತು ಇಲ್ಲಿನ ಭೌಗೋಳಿಕ ಸ್ಥಿತಿ, ಕೃಷಿ ಸುಧಾರಣೆ, ಕೃಷಿ ಕಾನೂನುಗಳು, ವಾಸ್ತವಿಕತೆ ಮತ್ತು ಇಲ್ಲಿನ ರೈತರ ಪರಿಸ್ಥಿತಿಯ ಬಗ್ಗೆ ಲವಲೇಶವೂ ಗೊತ್ತಿಲ್ಲದ, ಕೇವಲ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಮಾತ್ರಕ್ಕೆ ಭಾರತದ ಆಂತರಿಕ ವಿಷಯಕ್ಕೆ ಮೂಗು ತೂರಿಸು ವುದೇ? ಪಾಪ್ ಗಾಯಕಿಯಾಗಿರುವ ರಿಹಾನ್ನಾ ಕೋವಿಡ್-19ನಿಂದ ಸದ್ಯ ಯಾವುದೇ ಅವಕಾಶಗಳು ಲಭ್ಯವಿಲ್ಲದೇ ನಿರುದ್ಯೋಗಿಯಾಗಿರುವ ಸೆಲೆಬ್ರಿಟಿ.
ಭಾರತ ಸರಕಾರದ ವಿರುದ್ಧದ ಒಂದು ಟ್ವೀಟ್‌ಗೆ ಬರೊಬ್ಬರಿ18ಕೋಟಿ ಪಡೆದಿದ್ದಾಳೆ ಎಂಬುದು ಮೂಲಗಳಿಂದ ಮಾಹಿತಿ. ಇದೇ ರಿಹಾನ್ನಾಳ ದೇಶವಾದ ಬಾರ್ಬಡೋಸ್‌ಗೆ ಭಾರತ1ಲಕ್ಷ ಕೋವಿಡ್ ಲಸಿಕೆ ಯನ್ನು ಕಳುಹಿಸಿಕೊಟ್ಟಿದೆ. ಇದಕ್ಕಾಗಿ ಆ ದೇಶದ ಪ್ರಧಾನಿ ಮಿಯಾ ಮೊಟ್ಲೇ ಭಾರತಕ್ಕೆ ಧನ್ಯವಾದ ಮತ್ತು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಈ ರಿಹಾನ್ನಾಳ ಒಂದು ಟ್ವೀಟ್ ಕಾಣಿಸಿಕೊಂಡ ಕೂಡಲೇ ಬರ್ಖಾ ದತ್ ಎಂಬ ಅಡ್ಡಕಸುಬಿ ಭಾರತ ಸರಕಾರದ ವಿರುದ್ಧ ಒಂದು ಲೇಖನ ವನ್ನು ಬರೆದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಪ್ರಕಟಿಸುತ್ತಾಳೆ. ಅಲ್ಲಿಗೆ ವಿದೇಶಿಯರ ಷಡ್ಯಂತ್ರಕ್ಕೆ ಭಾರತೀಯರ ಕೈಜೋಡಿಸುವಿಕೆ ಸಾಬೀತಾಗುತ್ತದೆ.
ಇಷ್ಟರಲ್ಲೇ ಗ್ರೇಟಾ ಥನ್‌ಬರ್ಗ್ ಎಂಬ ಸ್ವೀಡನ್‌ನ ಹವಾಮಾನ ಬದಲಾವಣೆ ಕಾರ್ಯಕರ್ತೆ ಎಂಟ್ರಿ ಕೊಡುತ್ತಾಳೆ.2019ರಲ್ಲಿ ವಿಶ್ವಸಂಸ್ಥೆಯ ಕ್ಲೆ ಮೇಟ್ ಆಕ್ಷನ್ ಶೃಂಗದಲ್ಲಿ ಭಾಗವಹಿಸಿ ಜಾಗತಿಕ ನಾಯಕ ರನ್ನು ಉದ್ದೇಶಿಸಿ ‘ಹೌ ಡೇರ್ ಯೂ’ ಎಂಬ ಮಾತಿನ ಮೂಲಕ ಪ್ರವರ್ಧ ಮಾನಕ್ಕೆ ಬಂದ ಇವಳು ಭಾರತ ಸರಕಾರದ ವಿರುದ್ಧ ಮಾಡಿದ ಎರಡನೇ ಟ್ವೀಟ್ ಎಡವಟ್ಟಿನಿಂದ ಭಾರತ ವಿರೋಧಿ ದುಷ್ಟಸಂಚು ಬಯಲಾಯಿತು. ಈ ಟ್ವೀಟ್‌ನಲ್ಲಿ ವೆಬ್‌ಸೈಟ್ ಒಂದು ಸಿದ್ಧಪಡಿಸಿದ ಗೂಗಲ್ ಡಾಕ್ಯುಮೆಂಟ್ ಲಿಂಕ್‌ನ್ನು ಒಳಗೊಂಡ ಟೂಲ್‌ಕಿಟ್ ಪೋಸ್ಟ್‌ನ್ನು ಪ್ರಕಟಿಸಿದ್ದು, ಇದರಲ್ಲಿ ಬಹಳ ಆತಂಕಕಾರಿ ಅಂಶಗಳು ಬಯಲಾಯಿತು.
ಸಿದ್ದಪಡಿಸಿದ ಟ್ವೀಟ್ ಕಂಟೆಂಟ್‌ಗಳು, ಹ್ಯಾಷ್‌ಟ್ಯಾಗ್‌ಗಳು, ಟರ್ ಹ್ಯಾಂಡಲ್‌ಗಳು, ಪ್ರಚೋದನಾತ್ಮಕ ಶೀರ್ಷಿಕೆ ಮತ್ತು  ವಿಡಿಯೊಗಳು, ಇನ್ನಷ್ಟು. ಮತ್ತಷ್ಟು ಆ ಡಾಕ್ಯುಮೆಂಟ್ ಲಿಂಕ್‌ನಿಂದ ಬೆಳಕಿಗೆ ಬಂದವು. ಜನವರಿ10, 17, 23 ರಂದುಸಂಚು ಗಾರರು ಒಟ್ಟು ಸೇರಿ ರೂಪಿಸಿದ ಯೋಜನೆ ಬಗ್ಗೆ ಉಲ್ಲೇಖವಿತ್ತು. ಹಾಗೆಯೇ ‘ಗ್ಲೋಬಲ್ ಡೇ ಆಫ್ ಆಕ್ಷನ್’ ಮಾಡಲು ಜನವರಿ ೨೬ರಂದು ಮಾಡಿದ ಪ್ರತಿಭಟನೆಯ ರೂಪುರೇಷೆ ಬೆಳಕಿಗೆ ಬಂತು.
ಸಂದರ್ಭಾನುಸಾರ ಏನೇನು ಮಾಡಬೇಕೆಂಬುದರ ವಿಸ್ತೃತ ಉಲ್ಲೇಖವಿತ್ತು. ಫೆಬ್ರವರಿ12ರಿಂದ ಮತ್ತೆ ಅರಾಜಕತೆ ಸೃಷ್ಟಿಸ ಬೇಕೆಂಬ ಯೋಜನೆಯೂ ಬಯಲಾಗಿದ್ದು, ಭಾರತದ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲು ಸೂಚನೆಯಿತ್ತು. ಈ ಯೋಜನೆ ಯನ್ನು ಸಿದ್ದಪಡಿಸಿದ್ದು ಖಲಿಸ್ತಾನ್ ಕಾರ್ಯಕರ್ತ ಎಮ್ ಓ ಧಲಿವಾಲ್ ಎನ್ನುವ ವ್ಯಕ್ತಿಯ ಸಹಸಂಸ್ಥಾಪಕತ್ವದಪೊಯೆಟಿಕ್ ಜಸ್ಟಿಸ್ ಫೌಂಷನ್ ಎಂಬ ಸಂಘಟನೆಯ ಆಸ್ಕ್ ಇಂಡಿಯಾ ವೈ.ಕಾಮ್. ಅಂದರೆ ದೊಡ್ಡ ಮಟ್ಟದ ಅಂತಾರಾಷ್ಟ್ರೀಯ ಪಿತೂರಿ, ಒಳಸಂಚು ಇದರ ಹಿಂದೆ ಕೆಲಸ[ಮಾಡುತ್ತಿರುವುದು ಜಗಜ್ಜಾಹೀರಾಗಿದ್ದು, ಕೃಷಿ ಕಾನೂನುಎಂಬ ಸೂಕ್ಷ್ಮ ವಿಷಯವನ್ನು ನೆಪ ಮಾಡಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಿ ಜಾಗತಿಕ ಮಟ್ಟದಲ್ಲಿ ಭಾರತದ ಮಾನಹರಾಜು ಹಾಕುವ ಅಂತಾರಾಷ್ಟ್ರೀಯ ಷಡ್ಯಂತ್ರ ಬಟಾ ಬಯಲಾಯಿತು.
ರಾಷ್ಟ್ರಘಾತುಕ ಶಕ್ತಿಗಳ ವಿರುದ್ಧ ದೇಶದ ಐಕ್ಯತೆ ಬಲಿಷ್ಟವಾಗಬೇಕು. ಇಂಥ ಷಡ್ಯಂತ್ರಗಳಿಂದ ದೇಶದ ಅಖಂಡತೆಗೆ ಧಕ್ಕೆಯಾಗ ದಂತೆ ನೋಡಿಕೊಳ್ಳುವುದು ಭಾರತೀಯರೆಲ್ಲರ ಜವಾಬ್ದಾರಿ. ಹಾಗೆಯೇ ಭಾರತದ ಆಂತರಿಕ ವಿಚಾರವನ್ನು ಪರಸ್ಪರ ಬಗೆಹರಿಸಿಕೊಳ್ಳಲು ಭಾರತದ130ಕೋಟಿ ದೇಶವಾಸಿಗಳು ಸಮರ್ಥರಿದ್ದು, ಅದಕ್ಕೆ ದೇಶಿಯರ ಹಸ್ತಕ್ಷೇಪದ ಅಗತ್ಯವಿಲ್ಲ. ರಾಜಕೀಯ ಪಕ್ಷಗಳು ರಾಜಕೀಯ ತೀಟೆಗಾಗಿ ದೇಶದ ಹಿತಾಸಕ್ತಿಯನ್ನು ಬಲಿ ಕೊಡುವುದನ್ನು ಬಿಟ್ಟು ಭಾರತದ ಪ್ರತಿಷ್ಠೆಗೆ ಧಕ್ಕೆ ತರುವ ದುಷ್ಟಶಕ್ತಿಗಳನ್ನು, ವಿದ್ಯಮಾನಗಳನ್ನು ಮಟ್ಟ ಹಾಕುವಂತಾಗಬೇಕು.
ಇಂಡಿಯಾ ಟುಗೆದರ್, ಇಂಡಿಯಾ ಎಗೆನೆಸ್ಟ್ ಪ್ರೊಪಗ್ಯಾಂಡಾ!