ಸಮನ್ವಯದ ಬಾಳ್ವೆ ಮನುಷ್ಯನ ಧ್ಯೇಯವಾಗಿರಬೇಕು
ಅಭಿಮತ
ಸುರಭಿ
ಕರ್ನಾಟಕ ಸರಕಾರ ಜಾರಿ ಮಾಡಿರುವ ಗೋಹತ್ಯೆ ನಿಷೇಧ ಕಾಯಿದೆ ಮನಸ್ಸಿಗೆ ಬಹಳ ಸಂತೋಷ ತರುವವಿಷಯ. ಗೋಹತ್ಯೆ ನಿಷೇಧ ಮಾಡುತ್ತೇವೆ ಅಂತ ಇಂದಿರಾಗಾಂಧಿಯವರ ಕಾಲದಿಂದಲೂ ಕೇಳಿಬರುತ್ತಿದ್ದೇವೆ.
ಆದರೆ ಅದು ಸಾಕ್ಷಾತ್ಕಾರ ಆಗಿರೋದು ಇಷ್ಟು ವರ್ಷಗಳ ನಂತರ. ಗೋಹತ್ಯೆ ನಿಷೇಧ ವಿಚಾರಕ್ಕೆ ವಿಧಾನ ಪರಿಷತ್ತಿನಕಲಾಪದಲ್ಲಿ ಸಿ.ಎಂ.ಇಬ್ರಾಹಿಂ ಅವರು ಬಹಳ ತಾರ್ಕಿಕವಾಗಿ ಮಾತನಾಡಿದರು. ಹೈನುಗಾರಿಕೆಯೇ ಜೀವನಾಲಂಬನೆಆಗಿರುವ ರೈತನ ಬಾಯಿಗೆ ಮಣ್ಣು ಹಾಕುತ್ತಿದ್ದೀರಿ ಎಂದು ಸರಕಾರದ ಪರ ಬೆರಳು ತೋರಿಸಿದರು.
ಐವತ್ತು ಸಾವಿರ ಕೊಟ್ಟು ತರುವ ಹಸುವಿಗೆ, ಸರಕಾರವೆ ಇಪ್ಪತೈದು ಸಾವಿರ ರೈತನಿಗೆ ನೀಡಿ ನಂತರ ವೃದ್ಧ ಹಸುವನ್ನು ಗೋಶಾಲೆಗೆ ಬಿಡಬೇಕು ಅನ್ನೋರೀತಿ ವ್ಯವಸ್ಥೆ ಮಾಡಬೇಕಂತೆ. ಸಾಕಿರೊ ಹಸು ಐವತ್ತು ಸಾವಿರಕ್ಕಿಂತ ಹೆಚ್ಚಾಗಿ ಬೆಲೆಬಾಳೊ ಹಾಲು, ರೈತನ ಭೂಮಿಗೆ ಸಗಣಿ ಕೊಡತ್ತೆ. ಹಸುವಿನಿಂದ ಬಂದ ಆರ್ಥಿಕತೆ ಎಲ್ಲಿ ಮಾಯವಾಯ್ತೋ? ಹಸುವಿನ ಮಾಂಸ ದಿಂದಲೇ ರೈತನ ಕ್ಷೇಮಾಭಿವೃದ್ಧಿ ಆಗಬೇಕಾಗಿಲ್ಲ.
ಅಷ್ಟು ವರ್ಷ ಹಾಲು ನೀಡಿದೆ, ಅದರಿಂದ ನಮ್ಮ ಜೀವನ ನಡೆದಿದೆ ಅನ್ನೊ ವಿಶ್ವಾಸವನ್ನ ನಾವು ಮರೆಯಬಾರದು. ಏನು ಒಂದು ಹಸುವಿನ ಬದುಕು? ಹೈನುಗಾರಿಕೆಯಲ್ಲಿ ಒಂದು ಪ್ರಾಣಿಜನ್ಯವಾದ ಸುಖಕೂಡ ಹಸುವಿಗೆ ನಾವು ಅನುಭವಿಸಲು ಬಿಡೋದಿಲ್ಲ. ರೈತನ ಆರ್ಥಿಕ ಏಳಿಗೆಗಾಗಿ ಮಾತ್ರವೇ ಜೀವಿಸುವ ಹಸುವನ್ನು ಕೊನೆಗಾಲದಲ್ಲಿ ಒಂದು ಮಾಂಸ ಪರ್ವತ ಅನ್ನೋರೀತಿ ನೋಡೊ ನಮ್ಮ ದೃಷ್ಟಿ ಅಮಾನುಷ. ರೈತ ಮಣ್ಣಿನ ಮಗನಾದರೆ, ಹಸು ರೈತನ ಮಗು. ಕೃಷಿಗಿಂತ ಹತ್ತಿರವಾದ ಬೇರೊಂದು ಕೆಲಸವಿಲ್ಲ.
ಕೃಷಿಯಿಂದ ನಾವು ಬೆಳೆಯಬೇಕು, ತಿನ್ನಬೇಕು, ದುಡಿಬೇಕು. ಕೃಷಿ ಹೆಸರಲ್ಲಿ ನಿಸ್ವಾರ್ಥವಾಗಿ ಸೇವೆ ಮಾಡೊ ಹಸುವನ್ನುಅಕಾರಣ ಗಲ್ಲಿಗೆ ಶರಣಾಗಿಸಬಾರದು. ಕೃಷಿ ನಮ್ಮ ಜೀವನಾಲಂಬನೆಯೆ ಹೊರತು ಹಸು ಜೀವನಾಲಂಬನೆಯಲ್ಲಅನ್ನೋದನ್ನ ನಾವು ಮರೆತುಬಿಡಬಾರದು. ಆರ್ಥಿಕತೆಯೇ ಮನುಷ್ಯನ ಜೀವನದ ಪರಮೋದ್ಧೇಶವಲ್ಲ. ಆರ್ಥಿಕತೆಯಜತೆಗೆ ಧಾರ್ಮಿಕತೆ, ಅಧ್ಯಾತ್ಮಿಕತೆಯನ್ನು ಸರಿಸಮಾನವಾಗಿ ನಾವು ಪೋಷಿಸಿದರೆ ಮಾತ್ರವೆ ನಾವು ಮಾನವರು.ಇದಕ್ಕೋಸ್ಕರ ಎಲ್ಲರು ಸಸ್ಯಾಹಾರಿಗಳಾಗಬೇಕು ಅಂಥ ಹೇಳ್ತಾ ಇಲ್ಲ.
ಕೋಳಿ ಕುರಿ ಆಡು ಮೇಕೆ ಮೀನು ಅಂಥ ಎಷ್ಟೋ ಪ್ರಾಣಿಗಳು ಆಹಾರಕ್ಕಾಗೆ ಇರಬೇಕಾದರೆ, ಹಸುವಿನ ಮಾಂಸವನ್ನೇ ತಿನ್ನಬೇಕು,ಅದರ ಮಾಂಸವನ್ನ ಮಾರಿಯೇ ನಮ್ಮ ಆರ್ಥಿಕತೆ ಬೆಳೆಯಬೇಕು ಎಂಬುದು ಸ್ವಾರ್ಥವಷ್ಟೆ. ಇಬ್ರಾಹಿಂನವರು ಅವ್ವ ಅನ್ನೊದಕ್ಕೆ ಡೆಫಿನೆಷನ್ ಏನು ಅಂಥ ಕೇಳಿದ್ರು. ಅವ್ವ ಅಂದ್ರೆ ನಿಸ್ವಾರ್ಥೆ. ಆ ಅವ್ವ ನಮ್ಮ ಹಸು. ಜರ್ಸಿ ಹಸು ಗಂಡು ಕರು ಹಾಕಿದ್ರೆ ಎಲ್ಲಿ ಮಾರಲಿ ಅಂಥ ಕೇಳಿದ್ರು. ಹಸು, ಕರು ಹಾಕೋದು ನೀವು ಮಾರಕಲ್ಲ.
ಅದು ಕರು ಹಾಕೋದು ಅದರ ಪ್ರಕೃತಿ. ಅದು ನಮಗೆ ಉಪಯೋಗವಿಲ್ಲ ಅಂತ ತಲೆ ಚಚ್ಕೊಳ್ಳೋದು ನಮ್ಮ ಲೋಭ. ಗೋಹತ್ಯೆ ನಿಷೇಧ ಕಾಯಿದೆ ರೈತನ ಜೀವನದ ವಿಷಯ ಮಾತ್ರವಲ್ಲ, ಇದು ಗೋವಿನ ಜೀವನದ ವಿಷಯ. ನಿಸ್ವಾರ್ಥವಾಗಿ ಜೀವಿಸೊ ಮೂಕ ಪ್ರಾಣಿಯ ಜೀವನ. ಹಿಂದು ಧರ್ಮದ ಉತ್ಕೃಷ್ಟ ದೈವ ಅಂತ ಭಾವಿಸೊ ಕಾಮಧೇನುವಿನ ಜೀವನ. ನಮ್ಮ ಈಭೂಮಿಯಲ್ಲಿ ಮನುಷ್ಯನ ಸಂಖ್ಯೆ ಹೆಚ್ಚೇ ಇದ್ದರು, ಪಶು ಪಕ್ಷಿಗಳಿಗೆ ಸೇರಬೇಕಾದ ಭೂಮಿಯನ್ನು ಅವರಿಗೆ ಬಿಡಬೇಕಾಗಿರುವುದು ನಮ್ಮ ಧರ್ಮ. ಹೇಗೆ ಕಾಡು ಪ್ರಾಣಿಗಳಿಗೆ ಒಂದು ಸೀಮಿತ ನಾಡನ್ನು ಬಿಟ್ಟುಕೊಡುತ್ತೇವೊ, ಹಾಗೆ ನಮ್ಮ ಗೋವುಗಳಿಗೂ ಅದರಭೂಮಿಪಾಲು ಸಲ್ಲಬೇಕು.
ಗೋಮಾಳ ಭೂಮಿಯನ್ನು ನಮ್ಮ ಹಿಂದಿನ ರಾಜರುಗಳ ಕಾಲದಲ್ಲೂ ಹಸುಗಳಿಗಾಗಿ ಬಿಟ್ಟಿದ್ದರು. ಗೋಶಾಲೆ ಜತೆಗೆ ಗೋಮಾಳದ ಜಾಗಗಳನ್ನು ಸರಕಾರ ಹಸು ಕರು ಎತ್ತುಗಳಿಗೆ ನೀಡಬೇಕು. ನಾನು ಮಾತ್ರವಲ್ಲ, ನನ್ನ ಧರ್ಮ, ನನ್ನ ಭೂಮಿ, ನನ್ನ ಕಾಡು, ನನ್ನ ಪ್ರಾಣಿ ಎಲ್ಲರೂ ಸಮನ್ವಯದಿಂದ ಬಾಳಬೇಕು ಎನ್ನುವುದು ಮನುಷ್ಯನ ಧ್ಯೇಯವಾಗಿರಬೇಕು.