ಸಾರಿ ಫಾದರ್‌, ಅದನ್ನು ಡಿಸ್‌ಕ್ಲೋಸ್‌ ಮಾಡೋಕಾಗಲ್ಲ
ತುಂಟರಗಾಳಿ
ಹರಿ ಪರಾಕ್‌
ಸಿನಿಗನ್ನಡಎಲ್ಲರನ್ನೂ ನಂಬುವವರಿಗೆ ಇದೊಂದು ಕಿವಿಮಾತು ಆಗಬೇಕು ಎನ್ನುವಂತ ಕೆಲಸವೊಂದು ಮೊನ್ನೆ ಗಾಂಧೀನಗರದಲ್ಲಿ ನಡೆದುಹೋಯಿತು. ವಿಖ್ಯಾತ್ ಎಂಬ ನಿರ್ಮಾಪಕನೊಬ್ಬನ ಜತೆ ಹಿರಿಯ ನಟ ಜಗ್ಗೇಶ್ ಅವರು ಮಾತನಾಡಿದ್ದರು.
ಅದನ್ನು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡ ವಿಖ್ಯಾತ್ ಅದನ್ನು ಈಗ ವಿಶ್ವವಿಖ್ಯಾತ ಮಾಡಿದ್ದಾನೆ. ಈ ಮನುಷ್ಯನ ಈ ಕ್ಯಾತೆ ಎಲ್ಲ ಕಡೆ ಸದ್ದು ಮಾಡಿತು. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಒಂದೇ ಇಂಡಸ್ಟ್ರಿಯಲ್ಲಿ ಇದ್ದುಕೊಂಡು ಹಿರಿಯ ನಟರೊಬ್ಬರು ಆಡಿದ ಖಾಸಗಿ ಮಾತುಗಳನ್ನು ಈತ ಕಡ್ಲೆಪುರಿಯಂತೆ ಹಂಚಿದ್ದು ಎಷ್ಟು ಸರಿ ಅನ್ನೋ ವಿಷಯ.
ಜಗ್ಗೇಶ್ ಅವರು ಈ ನಿರ್ಮಾಪಕನ ಜತೆ ತಮಗಿದ್ದ ಆತ್ಮೀಯತೆಯ ಕಾರಣಕ್ಕೆ ತಮಗೆ ಅನಿಸಿದ್ದನ್ನೆ ಹೇಳಿಕೊಂಡಿದ್ದಾರೆ. ಅಲ್ಲಿ ಕೆಲವು ನ್ಯೂಸ್ ಪೇಪರ್‌ಗಳ ಮತ್ತು ವೆಬ್ ಸೈಟಿನ ಹೆಸರೂ ಇದೆ. ಅಲ್ಲದೆ ಅದಕ್ಕಿಂತ ಮುಖ್ಯವಾಗಿ ಕಿರಿಕ್ ಆಗಿದ್ದು ದರ್ಶನ್ ಜತೆಗಿರುವ ಹುಡುಗರ ಬಗ್ಗೆ ಜಗ್ಗೇಶ್ ಅವರು ಮಾತನಾಡಿದ್ದು ದೊಡ್ಡ ಸುದ್ದಿ ಆಯಿತು.
ಅದೇನೇ ಇರಲಿ, ಆದರೆ ಈ ಮನುಷ್ಯ ಮಾಡಿದ್ದು ಎಷ್ಟು ಸರಿ. ಈ ಬಗ್ಗೆ ಚಿತ್ರರಂಗದ ಯಾರನ್ನಾದರೂ ಪ್ರತಿಕ್ರಿಯೆ ಕೇಳಿದರೆ ಈ ವಿಷಯದ ಬಗ್ಗೆ ನಾವು ಮಾತಾಡಲ್ಲ ಅಂತಾರೆ. ಯಾಕಂದ್ರೆ ಅದು ಪರ್ಸನಲ್ ವಿಷ್ಯ, ಹಾಗಾಗಿ ಅದರ ಬಗ್ಗೆ ಮಾತಾಡಬಾರದು ಎಂಬ ಅರಿವು ಅವರಿಗಿದೆ. ಆದರೆ ಅಂಥದೊಂದು ಸೂಕ್ಷ್ಮ ಈ ಸೋ ಕಾಲ್ಡ ಖ್ಯಾತ ನಿರ್ಮಾಪಕನಿಗೆ ಇಲ್ಲದೇ ಹೋಗಿದ್ದು ವಿಪರ್ಯಾಸ. ಸಿನಿಮಾ ನಟರು ನಮ್ಮ ಪತ್ರಕರ್ತರ ಜತೆ ಕೂಡ ಅನೇಕ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುತ್ತಾರೆ.
ಆದರೆ ಅದರಲ್ಲಿ ಯಾವುದನ್ನು ಬರೆಯಬೇಕು, ಯಾವುದನ್ನು ಬರೆಯಬಾರದು ಅನ್ನೋ ಕಾಮನ್ ಸೆನ್ಸ್ ಮತ್ತು ವೃತ್ತಿಧರ್ಮ ಪತ್ರಕರ್ತನಿಗೆ ಇರುತ್ತದೆ. ಹಾಗಾಗಿ ಅವರು ಅದನ್ನು ಬಿಟ್ಟುಕೊಡೋದಿಲ್ಲ, ಎಲ್ಲಾ ಕೆಲವರನ್ನು ಬಿಟ್ಟು. ಆದರೆ ಈ ವಿಖ್ಯಾತ್, ಇನ್ನೊಬ್ಬ ಕುಖ್ಯಾತ ಪತ್ರಕರ್ತನ ಜತೆ ಸೇರಿ ಬೇಕೆಂತಲೇ ಜಗ್ಗೇಶ್ ಅವರ ಮಾತುಗಳನ್ನು ಎಲ್ಲರಿಗೂ ಕಳಿಸಿ ವೈರಲ್ ಮಾಡಿರೋದು ಮಾತ್ರ ಸರಿಯಲ್ಲ. ಈ ಮನುಷ್ಯ ಇನ್ನೂ ಗಾಂಧಿನಗರದಲ್ಲಿ ಸಿನಿಮಾ ಮಾಡಿ ಬೆಳೆಯಬೇಕಾದವನು. ಈಗ ಈ ಬೆಳವಣಿಗೆಯಿಂದ ಈತನ ಬೆಳವಣಿಗೆ ಎಷ್ಟರ ಮಟ್ಟಿಗೆ ಸಾಧ್ಯ ಆಗುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.
ನೆಟ್ ಪಿಕ್ಸ್ಚರ್ಚ್ ಒಂದರಲ್ಲಿ ಕೆಲಸ ಮಾಡುತ್ತಿದ್ದ20ವರ್ಷದ ಡ್ರೋನ್ ಪ್ರತಾಪ ತಾನು ಮಾಡಿದ ತಪ್ಪನ್ನು ಕನ್ ಫ್ಯೂಸ್ ಮಾಡಿ ಕೊಳ್ಳಲು ಚರ್ಚಿಗೆ ಹೋದ. ಅಲ್ಲಿಗೆ ಹೋಗಿ ಫಾದರ್ ಅವರನ್ನು ಕಂಡುಫಾದರ್ ನಾನು ಒಂದು ಹುಡುಗಿಯ ಜತೆ ದೈಹಿಕ ಸಂಬಂಧ ಬೆಳೆಸಿದ್ದೇನೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ಈಗ ನಾನು ಅದನ್ನು ಕನ್ ಫ್ಯೂಸ್ ಮಾಡಿಕೊಳ್ಳುತ್ತಿದ್ದೇನೆ ಅಂದ. ಕನ್ ಫ್ಯೂಷನ್ ಫಾರ್ಮಾಲಿಟಿಗಳನ್ನೆ ಮುಗಿಸುವ ಮುಂಚೆ ಫಾದರ್ ಸರಿ ಪ್ರತಾಪ್, ನಿನ್ನ ಕನ್ ಫ್ಯೂಷನ್‌ಗೆ ವ್ಯವಸ್ಥೆ ಮಾಡುತ್ತೇನೆ.
ಆದರೆ ನೀನು ಸಂಬಂಧ ಬೆಳೆಸಿದ ಆ ಹುಡುಗಿಯ ಹೆಸರೇನು? ಅಂತ ಕೇಳಿದ. ಅದಕ್ಕೆ ಡ್ರೋನ್ ಪ್ರತಾಪ್ ಉತ್ತರಿಸಿದ ಸಾರಿ ಫಾದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ. ಫಾದರ್ ಕೇಳುತ್ತಲೇ ಹೋದರು. ಪ್ರತಾಪ್ ಉತ್ತರಿಸುತ್ತಲೇ ಹೋದ.ಅದ್ಸರಿ, ನಮ್ಮ ಏರಿಯಾದಲ್ಲಿ ಅಂಥ ಹುಡುಗಿಯರು ಯಾರಿದ್ದಾರೆ? ಸಾರಿ ಫಾದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋ ಕಾಗಲ್ಲ ಚರ್ಚ್ ಹಿಂದಿನ ರೋಡಿನ ತೆರೆಸಾನಾ? ಸಾರಿ ಫಾ ದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ ಲೈಬ್ರೆರಿಯನ್ ಕ್ಯಾಥಿನಾ? ಸಾರಿ ಫಾದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ ಫ್ಲವರ್ ಶಾಪ್‌ನಲ್ಲಿ ಕೆಲಸ ಮಾಡೋ ರೋಸಿ? ಸಾರಿ ಫಾದರ್, ನಾನು ಅದನ್ನು ಡಿಸ್ ಕ್ಲೋಸ್ ಮಾಡೋಕಾಗಲ್ಲ ಸರಿ ಫಾದರ್‌ಗೆ ಇವನು ಬಾಯಿ ಬಿಡಲ್ಲ ಅಂತ ಗೊತ್ತಾಯ್ತು.
ಕನ್ ಫ್ಯೂಷನ್ ಮುಗಿಸಿ, ನೀನು ಯಾರ ಹೆಸರನ್ನೂ ಹೇಳಲಿಲ್ಲ. ಅದನ್ನು ನಾನು ಮೆಚ್ಚಿದ್ದೇನೆ. ಆದರೆ ತಪ್ಪಿಗೆ ಶಿಕ್ಷೆ ಆಗಲೇಬೇಕು.ಹಾಗಾಗಿ ನೀನು4ವಾರಗಳ ಕಾಲ ಚರ್ಚಿಗೆ ಬರುವಂತಿಲ್ಲ ಅಂತ ಹೇಳಿ ಕಳುಹಿಸಿದ. ಹೊರಗೆ ಬಂದ ಪ್ರತಾಪನನ್ನು ಅವನ ಸ್ನೇಹಿತ ಕೇಳಿದ, ನೋಡಿದ್ಯಾ ಸತ್ಯ ಹೇಳಿದ್ದಕ್ಕೆ ನಿಂಗೆ ಏನು ಸಿಕ್ತು?. ಅದಕ್ಕೆ ಪ್ರತಾಪ ತುಂಟತನದಿಂದ ಹೇಳಿದ ನಾಲ್ಕು ವಾರಗಳ ರಜೆ ಮತ್ತು ನನ್ನಂಥ ಹುಡುಗರ ಬಲೆಗೆ ಬೀಳುವಂಥ3ಹುಡುಗಿಯರ ಡೀಟೈಲ್ಸ್.
ಲೈನ್ ಮ್ಯಾನ್ಅವ್ನು – ಮಗಾ, ಅವ್ಳು ನನ್ ಪ್ರಪೋಸಲ್ ರಿಜಕ್ಟ್ ಮಾಡಿಬಿಟ್ಲು. ಹೇಗಾದ್ರೂ ಹೆಲ್ಪ ಮಾಡೋ
ಇವ್ನು – ಸಾರಿ, ನಿಮ್ಮಿಬ್ಬರ ‘ಇಂಟರ್ನಲ್ ಅ-ರ್ಸ್’ನಲ್ಲಿ ನಾನು ತಲೆ ಹಾಕಲ್ಲ. ಕಾಂಟ್ರವರ್ಸಿ ಆಗ್ಬಿಡುತ್ತೆ.
‘ಒಳ್ಳೆ’ ‘ಟೀ’ ಮಾಡೋನು ನಮ್ಮ ದೇಶದ ‘ಆಸ್ತಿ’.“ – ’‘ಲಿವಿಂಗ್ ಟುಗೆದರ್’ ನಲ್ಲಿರೋ ಸ್ನೇಹಿತರನ್ನು ನೋಡಿ ನಾನೂ ಮದ್ವೆ ಆಗಲ್ಲ ಅಂತ ಡಿಸೈಡ್ಮಾಡೋದು ‘ಸಹ’ವಾಸ’ ದೋಷ
ಗಾಂಧಿನಗರದ ದುರಂತಕೆಲವು ಸಿನಿಮಾಗಳು ಬಿಡುಗಡೆ ಆಗಿದ್ದು ಗೊತ್ತಾಗೋದು, ಸಕ್ಸಸ್ ಮೀಟ್ ಕರೆದಾಗಲೇ.
ಸೋಡಾಬುಡ್ಡಿಗಳ ಸಮಸ್ಯೆಹಾಕ್ಕೊಂಡ್ರೆ ಪ್ರಪಂಚಕ್ಕೆ ಅವರು ಚೆನ್ನಾಗ್ ಕಾಣಲ್ಲ
ತೆಗೆದ್ರೆ ಅವರಿಗೆ ಪ್ರಪಂಚ ಚೆನ್ನಾಗ್ ಕಾಣಲ್ಲಶಿವರಾಜ್ ಕುಮಾರ್ ಅಭಿಮಾನಿಗಳು ಅವರ ಸಿನಿಮಾಗಳನ್ನ ನೋಡೋ ದೃಷ್ಟಿಕೋನದೂರದೃಷ್ಟಿ ಅರ್ಥಾತ್ ಲಾಂಗ್ ಸೈಟ್ಹಳೆಯ ಕಾಲದ ನಾಣ್ಯಗಳನ್ನು ಸಂಗ್ರಹ ಮಾಡುವ ಹವ್ಯಾಸಚಿಲ್ರೆ ಶೋಕಿ
ನಂಬರ್ ಒನ್ ಹೀರೋ ಆಗಿರೋನ ಮೊಬೈಲ್ ನಂಬರ್ ತಗೊಳ್ಳೋಕೆ ಹೋಗಿ ನಿಮ್ಮನಂಬರ್ ಹೇಳಿ ಅಂದ್ರೆ ಯಶಸ್ಸಿನ ಗುಂಗಿನಲ್ಲಿ ಅವನು ಹೇಳೋದುಒನ್ಕಟಿಂಗ್ ಶಾಪ್‌ನಲ್ಲಿ ನೆಲದ ಮೇಲೆ ಬಿದ್ದ ಕತ್ತರಿಸಿದ ಕೂದಲ ರಾಶಿಕೂದಲ ಸಂಗಮವ್ಯಾಲೈಂಟೈನ್ಸ್ ಡೇಜವಾನ್ ಹುಡುಗ ಹುಡುಗಿಯರು ಕಿಸ್ ಆನ್ ಮಾಡೋ ದಿನ
ಲೂಸ್ ಟಾಕ್ಸ್ಯಾಂಡಲ್‌ವುಡ್ ಡೈರೆಕ್ಟರ್ಏನ್ ಸಾರ್ ಹೆಂಗ್ ನಡೀತಿದೆ ನಿಮ್ಮ ಸಿನಿಮಾ ಶೂಟಿಂಗ್?ಅಯ್ಯೋ ಚಿತ್ರೀಕರಣ ಬರದಿಂದ ಸಾಗುತ್ತಿದೆ ಕಣ್ರೀರೀ ಅದು ಬರದಿಂದ ಅಲ್ಲ , ಭರದಿಂದರೀ ಸ್ವಾಮಿ ನಮ್ ಪ್ರೊಡ್ಯೂಸರ್ ಹತ್ರ ದುಡ್ಡಿಲ್ಲ, ಹಣದ ಕೊರತೆ ಇದೆ. ಅದಕ್ಕೇ ಬರದಿಂದಸಾಗುತ್ತಿದೆ ಅಂತ ಹೇಳಿದ್ದು.ಓ ಹಂಗೆ , ಆದ್ರೆ ಮೊನ್ನೆ ಶೂಟಿಂಗಿಗೆ ಅಂತ ರಾಜಸ್ಥಾನಕ್ಕೆ ಹೋಗಿದ್ದಾಗ, ನಮ್ಪ್ರೊಡ್ಯೂಸರ್ ದುಡ್ಡನ್ನ ನೀರಿನ್ ಥರ ಖರ್ಚು ಮಾಡಿದ್ರು ಅಂತಿದ್ರಿಹೌದು ರೀ, ರಾಜಸ್ಥಾನದಲ್ಲಿ ನೀರಿನ್ ಥರ ಖರ್ಚ್ ಮಾಡಿದ್ರು ಅಂದ್ರೆ ತುಂಬಾ ಕಡಿಮೆದುಡ್ಡು ಖರ್ಚು ಮಾಡಿದ್ರು ಅಂತ ಅಲ್ವಾ.ಓಹೋ, ಯಾಕೋ ಡೈರೆಕ್ಟರ್ ಸಾಹೇಬ್ರು ಬರೀ ಇನ್ ಡೈರೆಕ್ಟ್ ಆಗಿ ಮಾತಾಡ್ತಾ ಇದ್ದೀರ.ಏನ್ ಮಾಡೋದು ನಮ್ಮ ನಿರ್ಮಾಪಕರು ಏರಿಯಲ್ ಶಾಟ್ ತೆಗೆಯೋಕೂ ದುಡ್ಡು ಬಿಚ್ಚಲ್ಲ..ಕಲೆ ಒಳ್ಳೆಯದೇ ನಿಜ, ಆದ್ರೆ ಸಿನಿಮಾ ಕಲೆಗೆ ಬೆಲೆ ಕಟ್ಟಲಿಲ್ಲ ಅಂದ್ರೆ ಹೆಂಗೆ?ಆದ್ರೂ 15 ದಿನ ಶೂಟಿಂಗ್ ಯಶಸ್ವಿಯಾಗಿ ಮುಗಿಸಿದ್ದೀರ ಅಲ್ವಾ?ಹೌದೌದು. ಅದೇ ದೊಡ್ಡ ಸಾಧನೆ. ಸಿನಿಮಾಗಳು ಬಿಡುಗಡೆ ಆದಮೇಲೆ ಯಶಸ್ವಿ 10ನೇ ದಿನ,15ದಿನ ಅಂತ ಹಾಕ್ಕೊತಾರಲ್ಲ, ಹಂಗೇ ನಾವು ಅಮೋಘ 15 ದಿನಗಳ ಶೂಟಿಂಗ್ ಮುಕ್ತಾಯ ಅಂತ ಪೋಸ್ಟರ್ ಹಾಕಿಸ್ಬೇಕು ಅಂದ್ಕೊಂಡಿದ್ದೀವಿ.