ಪರಾವಲಂಬಿ ಸೋಂಕು ವಯಸ್ಸಾಗುವುದನ್ನು ತಡೆಯುವುದೇ ?
ವೈದ್ಯ ವೈವಿಧ್ಯ
ಡಾ.ಎಚ್.ಎಸ್. ಮೋಹನ್
ಶತ ಶತಮಾನಗಳ ನಾಗರಿಕತೆಯ ಬೆಳವಣಿಗೆ ಆಗುತ್ತಾ ಆಗುತ್ತಾ ಮಾನವ ದೇಹವು ತನ್ನ ಹೊರಗಿನ ವಾತಾವರಣಕ್ಕೆ ಹೊಂದಿ ಕೊಳ್ಳುತ್ತಾ ಬಂದಿದೆ. ಈ ಎ ಬೆಳವಣಿಗೆಗಳ ಪರಿಣಾಮವಾಗಿ ಮನುಷ್ಯನ ದೇಹದ ಆರೋಗ್ಯ ಉತ್ತಮಗೊಳ್ಳುತ್ತಾ ಬಂದು ಮಾನವನ ಆಯುಷ್ಯ ಕ್ರಮೇಣ ಜಾಸ್ತಿಯಾಗುತ್ತಾ ಬಂದಿತು.
ಹಾಗೆಯೇ ಮನುಷ್ಯ ದೇಹದ ಸ್ವಚ್ಛತೆ ಮತ್ತು ಸುತ್ತಲಿನ ವಾತಾವರಣ ಮತ್ತು ಪರಿಸರದ ಸ್ವಚ್ಛತೆ ಹೆಚ್ಚುತ್ತಾ ಬಂದಂತೆ ಮಾನವ ದೇಹದ ಪರಾವಲಂಬಿ ಜೀವಿಗಳು () ಕಡಿಮೆ ಆಗುತ್ತಾ ಬಂದವು. ಪರಿಣಾಮ ವಾಗಿ ಆ ಸಂಬಂಧ ಬರುವ ದೇಹದ ಕಾಯಿಲೆಗಳು ಬಹಳಷ್ಟು ಕಡಿಮೆ ಆದವು. ಇದೆಲ್ಲದರ ಪರಿಣಾಮವಾಗಿ ಪ್ರಪಂಚದ ಹಲವಾರು ದೇಶಗಳಲ್ಲಿ ಈ ಪರಾವಲಂಬಿ ಜೀವಿಗಳಿಂದ ಬರುವ ಕಾಯಿಲೆಗಳು ಸಂಪೂರ್ಣವಾಗಿ ಕಡಿಮೆ ಆದವು. ಆದರೆ ಜಗತ್ತಿನ ಮತ್ತೆ ಕೆಲವು ಭಾಗಗಳಲ್ಲಿ ಈ ಕಾಯಿಲೆ ಗಳು ಇನ್ನೂ ಇವೆ.
ಇತಿಹಾಸ ಕೆದಕಿದರೆ ಈ ಪರಾವಲಂಬಿ ಜೀವಿಗಳು ಮತ್ತು ಮನುಷ್ಯ ಶತ ಶತಮಾನಗಳ ಕಾಲ ಒಟ್ಟಾಗಿ ಪರಸ್ಪರ ಪೂರಕವಾಗಿ ಬದುಕಿದ್ದಾರೆ. ಈ ಪರಾವಲಂಬಿ ಜೀವಿಗಳ ದೆಸೆಯಿಂದ ಮಾನವ ದೇಹದ ಪ್ರತಿರೋಧ ವ್ಯವಸ್ಥೆ ಬೆಳವಣಿಗೆಯಾಗಿದೆ ಎನ್ನಲಾ ಗಿದೆ. ಈ ಹಳೆಯ ಮಿತ್ರರ ನಂಬಿಕೆಯ ಪ್ರಕಾರ ಈ ಪರಾವಲಂಬಿ ಜೀವಿಗಳು ಮನುಷ್ಯನ ತುಂಬಾ ಹಳೆಯ ಮಿತ್ರರು. ಅವುಗಳು ನಮ್ಮ ದೇಹದಲ್ಲಿ ಸರಿಯಾದ ಸಂಖ್ಯೆಯಲ್ಲಿಇದ್ದಾಗ ಅವು ದೇಹದ ರಕ್ಷಣಾ ಶಕ್ತಿಯನ್ನು ಹೆಚ್ಚಿಸುತ್ತವೆ. ಅವುಗಳ ಸಂಖ್ಯೆ ಕಡಿಮೆ ಯಾದಂತೆ ಅಲರ್ಜಿ ಸಂಬಂಧ ಕಾಯಿಲೆ ಗಳು ಹಾಗೂ ಆಟೋ ಇಮ್ಯೂನ್ ಕಾಯಿಲೆಗಳು ಜಾಸ್ತಿ ಯಾಗತೊಡಗಿದವು.
ಹೀಗೆ ಪರಾವಲಂಬಿ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದ ಹಾಗೆ ದೇಹದ ಉರಿಯೂತದ () ಅಂಶ ಜಾಸ್ತಿ ಯಾಗುತ್ತಾ ಹೋಗುತ್ತದೆ. ಈ ಉರಿಯೂತ ವ್ಯಕ್ತಿಯ ದೇಹಕ್ಕೆ ವಯಸ್ಸಾದಂತೆ ಹೆಚ್ಚಾಗುತ್ತದೆ. ಈ ಉರಿಯೂತದ ಪರಿಣಾಮವಾಗಿ ವ್ಯಕ್ತಿಗೆ ವಯಸ್ಸಾದಂತೆ ಬರುವ ಕಾಯಿಲೆಗಳಾದ ಮಾನಸಿಕ ವಿಕಲ್ಪತೆ, ಕ್ಯಾನ್ಸರ್, ಆಸ್ಟಿಯೋಪೋರೋಸಿಸ್ (ಮೂಳೆ ಕರಗುವಕಾಯಿಲೆ) ಮತ್ತು ಹೃದಯದ ಕಾಯಿಲೆಗಳು ತೊಂದರೆ ಕೊಡಲಾರಂಭಿಸುತ್ತವೆ.
ಇತ್ತೀಚಿನ ಮತ್ತೊಂದು ಅಧ್ಯಯನವು ದೇಹದಲ್ಲಿ ಈ ರೀತಿಯ ಉರಿಯೂತದ ಅಂಶ ಜಾಸ್ತಿಯಾದಾಗ ಈಗಿನ ಪ್ರಸ್ತುತ ಕೋವಿಡ್ ಕಾಯಿಲೆಯ ಲಕ್ಷಣಗಳೂ ತೀವ್ರಗೊಳ್ಳುತ್ತವೆ ಎನ್ನಲಾಗಿದೆ. ಯು.ಕೆ.ಯ ಲಂಡನ್ ವಿಶ್ವವಿದ್ಯಾಲಯ ಕಾಲೇಜಿನ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತಿ ಏಜಿಯಿಂಗ್ ಸಂಸ್ಥೆಯ ಡಾ. ಡೇವಿಡ್ ಜೆಮ್ಸ ಮತ್ತು ಬ್ರೂಸ್ ಜಾಂಗ್ ಎನ್ನುವವರು ಈ ಉರಿಯೂತದ ದೆಸೆಯಿಂದ ಬರುವ ಕಾಯಿಲೆಗಳನ್ನು ಪರಾವಲಂಬಿ ಜೀವಿಗಳನ್ನು ಚಿಕಿತ್ಸೆಯಾಗಿ ಉಪಯೋಗಿಸಿ ಹಿಮ್ಮೆಟ್ಟಿಸಲು ಸಾಧ್ಯವೇ ಎಂಬುದರ ಬಗ್ಗೆ ಈಗಾಗಲೇ ಇರುವ ಸಂಶೋಧನಾ ಸಾಹಿತ್ಯವನ್ನು ಅಧ್ಯಯನ ಮಾಡಿದರು.
ಇದು ಇತ್ತೀಚಿನ ಈ ಲೈಫ್ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನಕಾರರು ಪರಾವಲಂಬಿ ಜೀವಿಗಳಿಂದ  ಹೆಲ್ಮಿಂಥ್ ‌ಗಳು ಎಂಬ ವಿಶೇಷ ವರ್ಗದ ಮೇಲೆಯೆ ಹೆಚ್ಚಿನ ಅಧ್ಯಯನ ಕೈಗೊಂಡರು. ಈ ಹೆಲ್ಮಿಂಥ್‌ಗಳ ಗುಂಪಿನಲ್ಲಿ ಉರುಟು ಜಂತುಗಳು ( ), ಚಪ್ಪಟೆ ಜಂತುಗಳು ( ) ಮತ್ತು ಫುಕ್‌‌ಗಳು ಬರುತ್ತವೆ. ಈ ಪರಾವಲಂಬಿ ಜೀವಿಗಳು ಮಾನವ ದೇಹದ ಒಳಗಡೆ ಜೀವಿಸುತ್ತಿದ್ದು ನಮ್ಮ ದೇಹದ ಪ್ರತಿರೋಧ ವ್ಯವಸ್ಥೆಯ ಧನಾತ್ಮಕ ಅಂಶದಿಂದ ನಮ್ಮ ದೇಹದಲ್ಲಿ ಉಳಿದು ಕೊಳ್ಳುತ್ತವೆ. ಈ ರೀತಿಯ ಈ ಅಧ್ಯಯನದ ಅಂಶಗಳು ನಮ್ಮ ದೇಹದ ಪ್ರತಿರೋಧ ವ್ಯವಸ್ಥೆಯ ಸಂಕೀರ್ಣತೆಯನ್ನು ತೋರಿಸುತ್ತದೆ.
ಹೆಲ್ಮಿಂಥ್ ಗುಂಪಿನ ಪರಾವಲಂಬಿ ಜೀವಿಗಳು ನಮ್ಮ ದೇಹದಲ್ಲಿ ಕಡಿಮೆಯಾದರೆ ನಮ್ಮ ಜೀವಿತದ ಮೊದಲ ಭಾಗದಲ್ಲಿ ಕಂಡು ಬರುವ ಹಲವಾರು ಉರಿಯೂತದ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತವೆ ಎಂದು ವಿಜ್ಞಾನಿ ಗಳು ಅಭಿಪ್ರಾಯ ಪಡುತ್ತಾರೆ. ಅಂತಹ ಕಾಯಿಲೆ ಗಳೆಂದರೆ ಅಸ್ತಮಾ, ಎಕ್ ಜೀಮಾದಂಥ ಚರ್ಮದ ಕಾಯಿಲೆ, ಮಲ್ಟಿಪಲ್ ಸ್ಕ್ಲೆರೋಸಿಸ್, ರುಮಟೈಡ್ ಅರ್ತರೈಟಿಸ್, ಉರಿಯೂತದಿಂದ ಬರುವ ಕರುಳಿನ ಕಾಯಿಲೆ ಟೈಪ್ 1 ಡಯಾಬಿಟಿಸ್.
ಈಗಿನ ಹಲವು ಪುರಾವೆಗಳು ಮತ್ತು ಅಧ್ಯಯನಗಳ ಪ್ರಕಾರ ಸಾಮಾನ್ಯ ವಾಗಿ ಬರುವಂತಹ ಈ ರೀತಿಯ ಹೆಲ್ಮಿಂಥ್‌ಗಳ ಸೋಂಕಿ ನಿಂದಾಗಲೀ ಅಥವಾ ಚಿಕಿತ್ಸೆಯ ರೂಪದಲ್ಲಿ ಹೆಲ್ಮಿಂಥ್‌ಗಳನ್ನು ದೇಹಕ್ಕೆ ಪೂರೈಸಿದಾಗ ಈ ರೀತಿಯ ಉರಿಯೂತದ ಕಾಯಿಲೆ ಗಳನ್ನು ಕಡಿಮೆ ಮಾಡಲು ಸಾಧ್ಯ. 1976ರಷ್ಟು ಹಿಂದೆಯೇ ಟಿ ಎಲ್ಲಾ ಟರ್ಟಾನ್ ಎಂಬ ಸಂಶೋಧಕರು ತನ್ನಲ್ಲಿನ ಚಪ್ಪಟೆ ಜಂತುವಿನ ಸೋಂಕಿನ ದೆಸೆಯಿಂದ ತನ್ನ ದೇಹದ ಅಲರ್ಜಿ ಕಾಯಿಲೆ ಬಹಳಷ್ಟು ಕಡಿಮೆಯಾಗಿದೆ ಎಂಬುದಾಗಿ ನುಡಿದಿದ್ದರು.
ಇತ್ತೀಚಿನ ಒಂದು ಅಧ್ಯಯನದಲ್ಲಿ ಕೆನಡಾದ ಮಾಂಟ್ರಿಯಲ್ ವಿಶ್ವವಿದ್ಯಾನಿಲಯದ ಮಾರ್ಕ್ ಬಾರಬತಿ ಅವರು ಇಲಿಗಳಿಗೆ ಉದ್ದೇಶ ಪೂರ್ವಕವಾಗಿ ಈ ಚಪ್ಪಟೆ ಜಂತುವಿನಿಂದ ಸೋಂಕು ಉಂಟು ಮಾಡಿದಾಗ ಮಲ್ಟಿಪಲ್ ಸ್ಕ್ಲೆರೋಸಿಸ್ ಕಾಯಿಲೆ ಗಮನಾರ್ಹವಾಗಿ ಕಡಿಮೆ ಯಾಯಿತು.
ಉರಿಯೂತದ ರೀತಿಯ ವಿದ್ಯಮಾನಗಳು:ಈ ಮೇಲಿನ ಎಲ್ಲಾ ಅಧ್ಯಯನ ಮತ್ತು ಸಂಶೋಧನೆಗಳು ಈ ಹೆಲ್ಮಿಂಥ್‌ಗಳ ಚಿಕಿತ್ಸೆಯಿಂದ ವಯಸ್ಸಾಗುವ ಹಂತದಲ್ಲಿ ಬರುವ ಉರಿಯೂತದ ವಿದ್ಯಮಾನಗಳನ್ನು ಒಂದು ಹಂತದಲ್ಲಿ ನಿಯಂತ್ರಿಸ ಬಹುದಾದರೂ ಇವು ಇಳಿ ವಯಸ್ಸಿನಲ್ಲಿ ಬರುವ ಹಲವು ಲಕ್ಷಣಗಳು ಅಥವಾ ವಿದ್ಯಮಾನಗಳನ್ನು ತಡೆಯಲು ಸಾಧ್ಯವೇ ಎಂಬ ಪ್ರೆಶ್ನೆ ಹಾಗೆಯೇ ಉಳಿಯುತ್ತದೆ. ಈ ರೀತಿಯ ಉರಿಯೂತದ ಮುಖ್ಯ ಲಕ್ಷಣ ಎಂದರೆ ರಕ್ತದಲ್ಲಿನ ಉರಿಯೂತಕ್ಕೆ ಸಂಬಂಧಪಟ್ಟ ಪ್ರೋಟೀನ್ ( - ) ಗಮನಾರ್ಹವಾಗಿ ಹೆಚ್ಚಳ ಹೊಂದುತ್ತದೆ. ಹಲವಾರು ಪ್ರಯೋಗಗಳ ಪ್ರಕಾರ ಈ ಉರಿಯೂತಕ್ಕೆ ಸಂಬಂಧಪಟ್ಟ ಪ್ರೋಟೀನ್ ಹೆಚ್ಚಳವನ್ನು ಹೆಲ್ಮಿಂಥ್ ಸೋಂಕನ್ನು ನಾವು ಹೊಸದಾಗಿ ಉಂಟು ಮಾಡುವುದರಿಂದ ಕಡಿಮೆ ಮಾಡಬಹುದು.
ಇದಕ್ಕೆ ವಿರುದ್ಧವಾಗಿ ಹೆಲ್ಮಿಂಥ್‌ಗಳಿಗೆ ಕೊಡುವ ಚಿಕಿತ್ಸೆಯಿಂದ – ಉದಾಹರಣೆಗೆ ಹೊಟ್ಟೆಯ ಜಂತುವನ್ನು ನಿರ್ಮೂಲನ ಮಾಡಲು ನಾವು ಚಿಕಿತ್ಸೆ ಮಾಡಿದರೆ ಅವು ಹೆಲ್ಮಿಂಥ್‌ಗಳನ್ನು ಸಾಯಿಸುತ್ತವೆ. ಪರಿಣಾಮವಾಗಿ ಈ ಉರಿಯೂತದ ಪ್ರೋಟೀನ್‌ನಪ್ರಭಾವ ಜಾಸ್ತಿ ಯಾಗುತ್ತದೆ. ಈ ಹೆಲ್ಮಿಂಥ್‌ಗಳನ್ನು ನೇರವಾಗಿ ಮಾನವ ದೇಹಕ್ಕೆ ಚಿಕಿತ್ಸೆಯ ರೂಪದಲ್ಲಿ ಕೊಟ್ಟರೆ ಅದರಿಂದ ಲಾಭವಿದೆಯಾದರೂ ಅದರಿಂದ ನಮಗೆ ಇಷ್ಟವಿಲ್ಲದ ಸೋಂಕುಗಳೂ ಆಗಬಹುದು.
ಹಾಗಾಗಿ ಈ ಸಂದರ್ಭ ದಲ್ಲಿ ವಿಜ್ಞಾನಿಗಳ ಪ್ರಕಾರ ಹೆಲ್ಮಿಂಥ್‌ಗಳ ಮಾಲಿಕ್ಯುಲಾರ್ ಭಾಗಗಳನ್ನು ಮಾತ್ರ ಪ್ರತ್ಯೇಕಿಸಿ ಉಪಯೋಗಿ ಸುವುದು ಒಳ್ಳೆಯದು. ಹೀಗೊಂದು ಪ್ರಯೋಗದ ಕಡೆ ಗಮನ ಹರಿಸೋಣ. ಯು.ಕೆ.ಯ ಗ್ಲಾಸ್ಗೋ ವಿಶ್ವವಿದ್ಯಾನಿಲಯದ ಜೆನ್ನಿ ಕ್ರೋವ್ ಮತ್ತು ಸಂಗಡಿಗರು ಈ ಪ್ರಯೋಗವನ್ನು ಕೈಗೊಂಡರು. ಅತೀ ಹೆಚ್ಚು ಕ್ಯಾಲೋರಿ ಒಳಗೊಂಡ ಆಹಾರವನ್ನುಪ್ರಯೋಗದ ಇಲಿಗಳಿಗೆ ಕೊಡಲಾಯಿತು. ಉರುಟು ಜಂತುಗಳಿಂದ ತೆಗೆದ ಉರಿಯೂತದ ವಿರುದ್ಧದ ಘಟಕ ಈ ಎಸ್ () – ೬೨ ಎಂಬ ಪ್ರೋಟೀನ್‌ನನ್ನು ಇವುಗಳಿಗೆ ಕೊಡಲಾಯಿತು.
ಆನಂತರ ಈ ಎಸ್ – 62 ಪ್ರೋಟೀನ್ ಅವುಗಳ ಕರುಳಿನ ಅಡಚಣೆ ನಾಶವಾಗುವುದನ್ನು ತಡೆಯಿತು. ಹಾಗೆಯೇ ಕೊಬ್ಬಿನಅಂಗಾಂಶ ಹಂಚುವುದನ್ನು ತಡೆಯಿತು. ಈ ಎರಡೂ ವಿಚಾರಗಳು ಉರಿಯೂತ ಹೆಚ್ಚಿಸುವ ವಿಚಾರಗಳು. ಹಾಗೆಯೇ ಈ ಇಲಿಯ ಆಯುಷ್ಯ ಅಥವಾ ಜೀವಿತಾವಧಿಯು ಸಾಮಾನ್ಯ ಇತರ ಇಲಿಗಳಿಗಿಂತ ಶೇ.12ರಷ್ಟು ಜಾಸ್ತಿಯಾಯಿತು. ಇದರಿಂದ ಈ ಈಎಸ್ – 62 ಪ್ರೋಟೀನ್ ಉರಿಯೂತವನ್ನು ತಡೆಯುವಲ್ಲಿ ಹಾಗೆಯೇ ಆರೋಗ್ಯ ಸಂಬಂಧಿ ವಯಸ್ಸಾಗುವುದನ್ನು ತಡೆಯುವಲ್ಲಿಯೂ ಸಹಾಯ ಮಾಡಿತು. ಈ ತರಹದ ಹಲವಾರು ಅಧ್ಯಯನಗಳು ಹೆಲ್ಮಿಂಥ್‌ಗಳು ಅಥವಾ ಅವುಗಳಿಂದ ತೆಗೆದ ಇಂತಹ ವಸ್ತುಗಳು ರುಮಟೈಡ್ ಆರ್ತರೈಟಿಸ್, ಅತಿರೋಸ್ಲೀ ರೋಸಿಸ್ (ರಕ್ತನಾಳ ಕಿರಿದಾಗುವಿಕೆಯ ಕ್ರಿಯೆ) ಮತ್ತು ಟೈಪ್2ಡಯಾಬಿಟಿಸ್ ಬರದಂತೆ ತಡೆಯುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತವೆ ಎನ್ನಲಾಗಿದೆ.
ಕೆಲವು ಅಧ್ಯಯನಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಈ ಹೆಲ್ಮಿಂಥ್‌ಗಳು ಸಹಾಯಕಾರಿ ಎನ್ನುತ್ತವೆ. ದೊಡ್ಡ ಕರುಳಿನ ಕ್ಯಾನ್ಸರ್ ಬಾರದಂತೆ ತಡೆಯುವಲ್ಲಿ ಚಪ್ಪಟೆ ಜಂತುಗಳು ಸಹಾಯಕಾರಿ ಎಂದು ಇಲಿಗಳಲ್ಲಿ ಕೈಗೊಂಡ ಅಧ್ಯಯನ ಗಳು ತಿಳಿಸುತ್ತವೆ. ಇದೇಸಂದರ್ಭದಲ್ಲಿ ಒಂದು ವಿಚಾರ ವನ್ನು ಗಮನಿಸಬೇಕು. ಕೆಲವು ಹೆಲ್ಮಿಂಥ್‌ಗಳು ಕ್ಯಾನ್ಸರ್ ಕಾಯಿಲೆಯನ್ನು ತರಬಲ್ಲವು ಅಥವಾ ಉಂಟುಮಾಡ ಬಲ್ಲವು. ಉದಾಹರಣೆಗೆ ಶೈಸ್ಟೋಸೋಮಾ ಹೆಮಟೋ ಬಿಯಂ ಎಂಬ ನಿರ್ದಿಷ್ಟ ಜಾತಿಯ ಹೆಲ್ಮಿಂಥ್ ಮನುಷ್ಯನಮೂತ್ರಚೀಲದ ( ) ಕ್ಯಾನ್ಸರ್ ಉಂಟುಮಾಡಬಲ್ಲದು.
ಈ ಬಗೆಗಿನ ಭವಿಷ್ಯದ ಸಂಶೋಧನೆ:ಮೊದಲು ತಿಳಿಸಿದ ಡಾ.ಜೆಮ್ಸ ಮತ್ತು ಜಾಂಗ್ ಅವರು ಈ ಹೆಲ್ಮಿಂಥ್ ಚಿಕಿತ್ಸೆಯ ಬಗೆಗೆ ಹಲವು ಮುಖ್ಯ ಪ್ರೆಶ್ನೆಗಳನ್ನು ಎತ್ತುತ್ತಾರೆ. ದೇಹದ ಉರಿಯೂತವನ್ನು ಕಡಿಮೆ ಮಾಡಲು ಈ ಹೆಲ್ಮಿಂಥ್ ಚಿಕಿತ್ಸೆಯನ್ನು ಯಾವವಯಸ್ಸಿನವರಲ್ಲಿ ಕೊಡಬೇಕು? ಅಲ್ಲದೆ ಈ ಚಿಕಿತ್ಸೆ ಕಾಯಿಲೆ ಬರದಂತೆ ತಡೆಯುವಲ್ಲಿ ಮಾತ್ರ ಯಶಸ್ವಿಯಾಗುತ್ತದೆಯೇ ಅಥವಾ ಈಗಾಗಲೇ ಇರುವ ಕಾಯಿಲೆಯ ಲಕ್ಷಣಗಳನ್ನು ರಿವರ್ಸ್ ಮಾಡಲು ಸಾಧ್ಯವೇ? ಈ ಬಗೆಗೆ ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು ಭವಿಷ್ಯದಲ್ಲಿ ವಿವರವಾದ ಅಧ್ಯಯನ ನಡೆಯಬೇಕೆಂದು ಅಭಿಪ್ರಾಯ ಪಡುತ್ತಾರೆ.
ಈಗ ನಾವು ಮತ್ತೊಂದು ವಿಚಾರ – ನಮ್ಮ ಕರುಳಿನ ಆರೋಗ್ಯವು ನಮ್ಮ ದೇಹದ ಆರೋಗ್ಯದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದನ್ನು ಗಮನಿಸೋಣ. ನಮ್ಮ ದೇಹದಲ್ಲಿ ಬಹಳಷ್ಟು ಬ್ಯಾಕ್ಟೀರಿಯಾಗಳಿವೆ. ನಮ್ಮ ದೇಹದಲ್ಲಿರುವ ಜೀವ ಕೋಶಗಳಿಗಿಂತ ಹೆಚ್ಚಿನ ಸಂಖ್ಯೆಯ ಬ್ಯಾಕ್ಟೀರಿಯಾ ಗಳಿವೆ ಎಂಬುದು ವಸ್ತುಸ್ಥಿತಿ. ಅದರಲ್ಲಿ ಹೆಚ್ಚಿನ ಬ್ಯಾಕ್ಟೀರಿಯಾಗಳು ನಮ್ಮ ಆಹಾರದ ಜೀರ್ಣಕ್ರಿಯೆಯಲ್ಲಿ ಸಹಾಯ ಮಾಡುವುದಲ್ಲದೆ ನಮ್ಮ ದೇಹದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೂಪ್ರಭಾವವನ್ನು ಬೀರುತ್ತವೆ.
ಕರುಳಿನಲ್ಲಿ ಅವು ತಮ್ಮ ಸಂಖ್ಯೆಯನ್ನು ವೃದ್ಧಿ ಮಾಡುವುದಲ್ಲದೆ ದೇಹದ ಕೆಟ್ಟ ಬ್ಯಾಕ್ಟೀರಿಯಾಗಳ ಪ್ರಭಾವ ವನ್ನು ಕಡಿಮೆ ಮಾಡುತ್ತವೆ. ಹಾಗೆಯೇ ಅವುಗಳ ಸಂಖ್ಯೆ ಜಾಸ್ತಿಯಾಗದಂತೆ ನೋಡಿಕೊಳ್ಳುತ್ತವೆ. ಇವು ಕರುಳಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ಸಮತೋಲನ ಕಾದುಕೊಳ್ಳುತ್ತವೆ. ನಮ್ಮ ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳ ಸಂಖ್ಯೆ ಜಾಸ್ತಿಯಾದರೆ ಈ ಕೆಳಗಿನ ಕಾಯಿಲೆಗಳು ಬರುತ್ತವೆ – ಕ್ರಾನ್‌ನ ಕಾಯಿಲೆ, ಅಲ್ಸರೇಟಿವ್ ಕೋಲೈಟಿಸ್ ಮತ್ತು ಇರಿಟಬಲ್ ಬವೆಲ್ ಸಿಂಡ್ರೋಮ.ಕೊಲೆಸ್ಟರಾಲ್‌ಗೂ ಹೃದಯಕ್ಕೂ ಇರುವ ಸಂಬಂಧಗಳ ಕೊಂಡಿಯಲ್ಲಿ ಈ ಕರುಳಿನ ಬ್ಯಾಕ್ಟೀರಿಯಾಗಳೂ ಇವೆ.
ನಾವು ಕೆಂಪು ಮಾಂಸ, ಮೊಟ್ಟೆಗಳನ್ನು ಸೇವಿಸಿದಾಗ ಈ ಬ್ಯಾಕ್ಟೀರಿಯಾಗಳು ಒಂದು ರಾಸಾಯನಿಕವನ್ನು ಉತ್ಪಾದಿಸುತ್ತವೆ. ಈರಾಸಾಯನಿಕವು ನಂತರ ಲಿವರ್‌ನಲ್ಲಿ ( –  – ) ಆಗಿ ಬದಲಾಗುತ್ತದೆ. ಇವು ರಕ್ತನಾಳಗಳಲ್ಲಿ ಕೊಲೆಸ್ಟರಾಲ್ ಒಟ್ಟುಗೂಡಿಸುವಲ್ಲಿ ತಮ್ಮ ಪ್ರಭಾವ ಬೀರುತ್ತವೆ. ಈಗ ಸಂಶೋಧಕರು ಆಲಿವ್ ಮತ್ತು ದ್ರಾಕ್ಷಿ ಬೀಜದ ಎಣ್ಣೆ ಯಲ್ಲಿರುವ ಸ್ವಾಭಾವಿಕ ವಸ್ತುವಾದ  ಎಂಬುದರಿಂದ ಬ್ಯಾಕ್ಟೀರಿಯಾಗಳು ಈ  ವಸ್ತುವನ್ನು ಉತ್ಪಾದಿಸದಂತೆ ತಡೆಯಲು ಸಾಧ್ಯವೇ ಎಂದು ಸಂಶೋಧನೆ ನಡೆಸುತ್ತಿದ್ದಾರೆ.
ಹೆಚ್ಚಿನ ಪ್ರಮಾಣದ   ವು ಸುದೀರ್ಘ ಕಿಡ್ನಿಯ ಕಾಯಿಲೆ ಉಂಟುಮಾಡಬಹುದು. ಈಗಾಗಲೇ ಕಿಡ್ನಿಯ ಕಾಯಿಲೆ ಇರುವವರಲ್ಲಿ  ವಸ್ತುವನ್ನು ಸುಲಭವಾಗಿ ದೇಹದಿಂದ ಹೊರಹಾಕಲು ಸಾಧ್ಯವಾಗುವುದಿಲ್ಲ. ಪರಿಣಾಮ ಎಂದರೆ ಇವು ಪುನಃ ಹೃದಯದ ಕಾಯಿಲೆ ಉಂಟುಮಾಡುತ್ತವೆ. ಸಾಮಾನ್ಯವಾಗಿ ನಮ್ಮ ಮೆದುಳು ಯಾವಾಗಲೂ ನಮ್ಮ ದೇಹದ ತುಂಬಾ ಸಂದೇಶಗಳನ್ನು ಕಳುಹಿಸುತ್ತಾ ಇರುತ್ತವೆ. ಕರುಳು ಈ ಸಂದೇಶಗಳಿಗೆ ಉತ್ತರ ಹೇಳಬಲ್ಲವು. ನಮ್ಮ ಕರುಳಿನಲ್ಲಿ ಮೊದಲು ಪ್ರಸ್ತಾಪಿಸಿದ ಬ್ಯಾಕ್ಟೀರಿಯಾಗಳ ಸಮತೋಲನ ವ್ಯವಸ್ಥೆ ಇದ್ದಾಗ ಅದು ನಮ್ಮ ಭಾವನಾತ್ಮಕ ವರ್ತನೆಯ ಮೇಲೆ ಪ್ರಭಾವಬೀರುತ್ತದೆ.
ಹಾಗೆಯೇ ಇವು ನಮ್ಮ ಮೆದುಳು, ದೃಶ್ಯ, ಶಬ್ದ, ರುಚಿ ಮತ್ತು ಆಕಾರಗಳಿಗೆ ಸ್ಪಂದಿಸುವಲ್ಲಿ ಸಹಿತ ತಮ್ಮ ಪ್ರಭಾವ ಬೀರುತ್ತವೆ. ಈ ಸಮತೋಲನ ವ್ಯತ್ಯಾಸವಾದಾಗ ಹಲವು ಕಾಯಿಲೆಗಳು – ಆಟಿಸಂ, ವಿಪರೀತ ಆತಂಕದ ಪ್ರವೃತ್ತಿ, ಮಾನಸಿಕ ಖಿನ್ನತೆ ಹಾಗೆಯೇ ದೀರ್ಘಕಾಲೀನ ನೋವಿನ ಅನುಭವ – ಇವೆ ಬರಬಹುದು ಎಂದು ವಿಜ್ಞಾನಿಗಳ ಅಭಿಮತ. ಹಾಗೆಯೇ ಕರುಳಿನ ಬ್ಯಾಕ್ಟೀರಿಯಾ ಗಳು  ಸ್ಥೂಲಕಾಯದ ಮೇಲೂ ಪ್ರಭಾವ ಹೊಂದಿವೆ.
ಕರುಳಿನಲ್ಲಿ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾಗಳ ಅಸಮತೋಲನದಿಂದ ಮೆದುಳಿ ನಿಂದ ತಪ್ಪು ಸಂದೇಶಗಳು ಹೊರಡು ತ್ತವೆ. ಅವು ವ್ಯಕ್ತಿಗೆ ಹಸಿವಾಗಿದೆ ಅಥವಾ ಹೊಟ್ಟೆ ತುಂಬಿದೆ ಎಂಬ ಬಗ್ಗೆ ಕಳಿಸುವ ತಪ್ಪು ಸಂದೇಶಗಳು. ಹಾಗೆಯೇ ಸಂಶೋಧಕರ ಪ್ರಕಾರ ಈ ಬ್ಯಾಕ್ಟೀರಿಯಾಗಳಿಗೂ ಪಿಟ್ಯೂಟರಿ ಗ್ರಂಥಿಗೂ ಸಂಬಂಧ ಇದೆ. ಅದು ನಮ್ಮ ಹಸಿವಿನ ಬಗ್ಗೆ ನಿಯಂತ್ರಣ ಹೊಂದಿದೆ. ಹಾಗಾಗಿಯೇ ಈ ಪಿಟ್ಯೂಟರಿ ಗ್ರಂಥಿ ನಮ್ಮ ಕರುಳಿನ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಹೆಚ್ಚು ಕಡಿಮೆ ಮಾಡಬಲ್ಲವು. ಸ್ಥೂಲಕಾಯವನ್ನು ಚಿಕಿತ್ಸೆ ಮಾಡುವ ಹೊಸ ಅಧ್ಯಯನವೊಂದು ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
ನಮ್ಮ ಕರುಳಿನ ಬ್ಯಾಕ್ಟೀರಿಯಾಗಳನ್ನು ನಾವು ಬದಲಿಸಲು ಸಾಧ್ಯವೇ? ಹುಟ್ಟಿನಿಂದ ಒಂದು ರೀತಿಯ ಬ್ಯಾಕ್ಟೀರಿಯಾದ ವ್ಯವಸ್ಥೆ ನಮ್ಮ ಕರುಳಿನಲ್ಲಿ ಇದ್ದರೂ ನಮ್ಮ ಸುತ್ತಲಿನ ವಾತಾವರಣ ಮತ್ತು ನಮ್ಮ ಆಹಾರ ಇದನ್ನು ಬದಲಿಸಬಲ್ಲವು. ಪ್ರೊಬಯಾಟಿಕ್ಸ್ ಎಂಬ ವಸ್ತುಗಳು ಒಳ್ಳೆಯ ಬ್ಯಾಕ್ಟೀರಿಯಾಗಳ ರೀತಿ ಕೆಲಸ ಮಾಡುತ್ತವೆ.
ಅವು ಈಗಾಗಲೇ ನಮ್ಮ ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಜತೆಗೆ ಕೆಲಸ ಮಾಡಿ ಅವುಗಳ ಕಾರ್ಯಕ್ಷಮತೆ ವೃದ್ಧಿಸು ತ್ತವೆ. ಹಾಗೆಯೇ ಅವು ನಮ್ಮ ದೇಹದ ಪ್ರತಿರೋಧ ಶಕ್ತಿಯನ್ನು ವೃದ್ಧಿಸಬಲ್ಲವು. ಹಾಗೆಯೇ ಇರಿಟಬಲ್ ಬವೆಲ್ ಸಿಂಡ್ರೋಮ್‌ ನಂಥ ಕಾಯಿಲೆಯಲ್ಲಿ ನಮ್ಮ ಕರುಳಿನ ಆರೋಗ್ಯವನ್ನು ವೃದ್ಧಿಸುತ್ತವೆ.