ವಯಸ್ಸಾಗುವುದನ್ನು ತಡೆಯಲು ಚಿಕಿತ್ಸೆ ಇದೆಯೇ ?
ವೈದ್ಯವೈವಿಧ್ಯ
ಡಾ.ಎಚ್‌.ಎಸ್.ಮೋಹನ್‌
ಹೃದಯದ ಕಾಯಿಲೆಗಳು, ಕ್ಯಾನ್ಸರ್, ಡಯಾಬಿಟಿಸ್, ಚಿತ್ತವೈಕಲ್ಯ – ಈ ತರಹದ ಕಾಯಿಲೆ ಗಳನ್ನು ಗುಣಪಡಿಸಲು, ಇಲ್ಲವಾಗು ವಂತೆ ಮಾಡಲು ಸಂಶೋಧಕರು ಕೋಟ್ಯಂತರ ಡಾಲರುಗಳನ್ನು ಪ್ರತಿವರ್ಷ ಖರ್ಚು ಮಾಡುತ್ತಿದ್ದಾರೆ. ಒಂದು ವೇಳೆ ಇವೆಲ್ಲಕ್ಕೂ ಮತ್ತು ಇನ್ನೂ ಹಲವು ದೀರ್ಘಕಾಲೀನ ಕಾಯಿಲೆಗಳಿಗೂ ಚಿಕಿತ್ಸೆ ಕಂಡುಹಿಡಿದರೂ ಅಂತಿಮವಾಗಿ ಮನುಷ್ಯ ಮರಣ ಹೊಂದಲೇ ಬೇಕು. ಹಾಗಿದ್ದರೆ ನಾವು ವಯಸ್ಸಾಗುವುದನ್ನು ನಿಲ್ಲಿಸಿಲ್ಲ ಎಂದು ಅಮೆರಿಕದ ಇಲಿನಾಯ್ಸ್  ವಿಶ್ವವಿದ್ಯಾ ನಿಲಯದ ಎಪಿಡಿಯ ಮಾಲಜಿ ಮತ್ತು ಬಯೋಸ್ಟಾಟಿಸ್ಟಿಕ್ಸ್‌ನ ಪ್ರೊಫೆಸರ್ ಜೇ ಓಲ್ ಶಾಂಸ್ಕಿ ಅಭಿಪ್ರಾಯ ಪಡುತ್ತಾರೆ.
ಹಾಗಿದ್ದರೆ ನಾವು ಈ ವಯಸ್ಸಾಗುವುದನ್ನು ನಿಲ್ಲಿಸಿದರೆ? ಈಗ ನಾವು ಕಾಯಿಲೆಗಳನ್ನು ಗುಣಪಡಿಸಿ ಮನುಷ್ಯನ ಆಯುಷ್ಯವನ್ನು ದೀರ್ಘ ಪಡಿಸಲು ಪ್ರಯತ್ನಿಸುತ್ತಿದ್ದೇವೆ. ಅದರ ಬದಲು ನಾವು ವಯಸ್ಸಾಗುವುದನ್ನು ನಿಲ್ಲಿಸುವ ಬಗ್ಗೆ ಜಾಸ್ತಿ ಗಮನ ಹರಿಸಿದರೆ ಹೇಗೆ? ಕೆಲವೊಂದು ವಿಜ್ಞಾನಿಗಳು ಈಗ ಈ ದಿಸೆಯಲ್ಲಿ ಯೋಚನೆ ಮಾಡುತ್ತಿzರೆ. ಹಲವು ಬಿಲಿಯನ್ ಡಾಲರುಗಳನ್ನು ಈ ಸಂಶೋಧನೆಗೆ ವ್ಯಯ ಮಾಡಿ ನಮ್ಮ ದೇಹದ ಮಾಲಿಕ್ಯುಲಾರ್ ಬಯಲಾಜಿಕಲ್ ಗಡಿಯಾರವನ್ನು ರಿವರ್ಸ್ ಎಂಜಿನಿಯರಿಂಗ್ಮಾಡಲು ಸಾಧ್ಯವೇ ಎಂದು ಪ್ರಯತ್ನಿಸುತ್ತಿದ್ದಾರೆ.
ಹಾಗಾದರೆ ಅವರ ಉದ್ದೇಶ? ಮನುಷ್ಯನನ್ನು ಕೊಲ್ಲುವ ಕಾಯಿಲೆಗಳನ್ನು ಇಲ್ಲವಾಗಿಸುವುದಲ್ಲ. ಮನುಷ್ಯನ ಮರಣವನ್ನೇ ಬರದಿರುವ ಹಾಗೆ ಮಾಡುವುದು. ಅಮರತ್ವದೆಡೆಗೆ ಹೆಜ್ಜೆ: ತನ್ನ ಮುಪ್ಪನ್ನು ಮೊಮ್ಮಗನಿಗೆ ಕೊಟ್ಟು ತಾನು ಆತನ ಯೌವನ ಪಡೆದ ರಾಜಾ ಯಯಾತಿಯ ಕತೆ ಬಹಳ ಜನ ಕೇಳಿರಬಹುದು. ಅದು ಆಗ. ಆದರೆ ಈಗ ಬಯೋ ಮೆಡಿಕಲ್ ಜೆರಂಟಾಲಜಿಸ್ಟ್ ಆಬ್ರೆ ಡಿ ಗ್ರೇ ಎಂಬುವವರು ಈಗ ಸುಮಾರು 1000 ವರ್ಷ ಕಾಲ ಬದುಕುವ ಮನುಷ್ಯ ನಮ್ಮಲ್ಲಿಯೇ ಈಗ ಇದ್ದಾರೆ ಎಂದು ಆಶಾ ಭಾವನೆಯಿಂದ ನುಡಿಯುತ್ತಾರೆ.
ಭವಿಷ್ಯದಲ್ಲಿ ನಾವು ಯಾವ ರೀತಿಯ ಚಿಕಿತ್ಸೆಯನ್ನು ಕಂಡುಹಿಡಿಯುತ್ತೇವೆ ಎಂಬುದರ ಮೇಲೆ ಮನುಷ್ಯ ಎಷ್ಟು ಕಾಲ ಬದುಕ ಬಹುದು ಎಂಬುದಕ್ಕೆ ನಿರ್ದಿಷ್ಟ ಗಡಿಯನ್ನು ನಿರ್ಮಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ನಾವು ಎಷ್ಟು ಕಾಲ ಜನರನ್ನು ಆರೋಗ್ಯ ವಾಗಿಡುತ್ತೇವೆ ಎಂಬುದರ ಮೇಲೆ ಮಿತಿ ಇರಲಾರದು ಎಂದು ಅವರ ಅಭಿಮತ. ಈ ವಯಸ್ಸಾಗುವುದರ ಮೇಲೆ ಸಂಶೋಧನೆ ನಡೆಸುತ್ತಿರುವ ಉಲ್ಲೇಖ ರೀಸರ್ಚ್ ಫೌಂಡೇಶನ್‌ನ ಮುಖ್ಯಸ್ಥರು ಅವರು.
ವಿಜ್ಞಾನಿಗಳು ಈ ದಿಸೆಯಲ್ಲಿ ಹಲವು ಅಧ್ಯಯನಗಳನ್ನು ಮಾಡಿzರೆ. ಟರ್ರ‍ಿಟೋಪಿಸ್ ಡೋಹ್ರನಿ ಎಂಬ ಜೆಲ್ಲಿ ಮೀನಿನ ದೀರ್ಘ ಆಯುಷ್ಯದ ಬಗ್ಗೆ ಅಧ್ಯಯನ ನಡೆಸಿzರೆ. ಆ ಪ್ರಾಣಿ ವಯಸ್ಸಾದ ನಂತರ ಅಪಾಯ ಅಥವಾ ಆಹಾರದ ಕೊರತೆ ಬಂದಾಗ ತನ್ನ ಬಾಲ್ಯದ ಹಂತ – ಪಾಲಿಪ್ ಹಂತಕ್ಕೆ ಬದಲಾಯಿಸಿಕೊಂಡು ಮರಣಕ್ಕೆ ಸೆಡ್ಡು ಹೊಡಿಯುತ್ತದೆ. ಜಗತ್ತಿನಲ್ಲಿ ಈ ರೀತಿಯ ಸಾಮರ್ಥ್ಯ ಇರುವುದು ಇದೊಂದೇ ಪ್ರಾಣಿಗೆ ಎನ್ನಲಾಗಿದೆ.
ನೀರಿನೊಳಗಡೆ ಈ ರೀತಿಯ ಸುದೀರ್ಘ ಆಯುಷ್ಯದ ಗುಟ್ಟು ಹಲವಿರಬಹುದು ಎನ್ನಲಾಗಿದೆ. ಲಾಬ್ ಸ್ಟರ್ ಎಂದು ಕರೆಯುವ ಸಮುದ್ರದ ಏಡಿಯು ಬಹಳವಾಗಿ ಯೌವನದ ಎಂಜೈಮ್‌ನ್ನು ಹೊಂದಿದೆ ಎನ್ನಲಾಗಿದೆ. ಸುತ್ತಲಿನ ಉತ್ತಮ ವಾತಾವರಣ ಸಿಕ್ಕಿದರೆ  ಕ್ರಸ್ಟೇಷಿಯನ್ (ಗಡಸು ಚರ್ಮ ಹೊಂದಿದ ಮತ್ತೊಂದು ರೀತಿಯ ಜಲಚರ ) ಪ್ರಾಣಿಗಳು ಬಹಳ ಕಾಲ ಬದುಕುತ್ತವೆ ಎನ್ನಲಾಗಿದೆ.
ಮಾನವರಲ್ಲಿ ಸಂಶೋಧಕರು ಸುದೀರ್ಘ ಕಾಲ ಬದುಕಿರುವವರ ಮೇಲೆ ಅಧ್ಯಯನ ಮಾಡಿದ್ದಾರೆ. ಇದರಲ್ಲಿ ಅವರು ದೀರ್ಘ ಕಾಲ ಬದುಕಿರುವವರು ಮಾತ್ರವಲ್ಲ ದೀರ್ಘಕಾಲೀನ ಕಾಯಿಲೆಗಳಿಲ್ಲದೆ ಬದುಕಿರುವವರನ್ನು ಅವರು ಆರಿಸಿಕೊಂಡಿದ್ದಾರೆ.ಹಾಗೆಂದು ಇವರಲ್ಲಿ ಕೆಲವೊಂದು ಕೆಟ್ಟ ಹವ್ಯಾಸಗಳು ಇದ್ದಿರಲೂಬಹುದು. 80 ವರ್ಷ ದಾಟಿ ಮನಸ್ಸು ಮತ್ತು ಬುದ್ಧಿ ತುಂಬಾ ಸರಿಯಾಗಿರುವವರು ಮುಖ್ಯ ಇವರಿಗೆ. ಹಾಗಿದ್ದಾಗ ಉಳಿದ 80 ವರ್ಷ ದಾಟಿದವರಿಗಿಂತ ಇವರ ದೇಹವು ಎಲ್ಲಾ ರೀತಿಯಲ್ಲಿಸರಿಯಾಗಿ ಇರುತ್ತದೆ. ಈಗ ಸಿಕ್ಕಿದ ಮಾಹಿತಿಯ ಪ್ರಕಾರ 95-112 ವರ್ಷಗಳವರೆಗೆ ಬದುಕಿರುವವರು ಕ್ಯಾನ್ಸರ್, ಹೃದಯದ ಕಾಯಿಲೆ, ಡಯಾಬಿಟಿಸ್, ಮೂಳೆ ಕರಗುವ ಕಾಯಿಲೆ ಆಸ್ಟಿಯೊಪೊರೋಸಿಸ್ ಮತ್ತು ಪಾರ್ಶ್ವವಾಯು – ಈ ರೀತಿಯ ಕಾಯಿಲೆ ಗಳು ಇಂತಹವರಲ್ಲಿ ಬೇರೆಯವರಿಗಿಂತ 24 ವರ್ಷಗಳ ನಂತರ ಕಾಣಿಸಿಕೊಂಡಿತು.
ಇದು ಏಕೆ ಎಂದು ಸ್ಪಷ್ಟವಾಗಿ ಕಂಡು ಹಿಡಿದರೆ ಇಂತಹವರ ಡಿಎನ್ ಎಯನ್ನು ಹೋಲುವ ರೀತಿಯ ನಿರ್ದಿಷ್ಟ ಜೀನ್ ಚಿಕಿತ್ಸೆಕಂಡು ಹಿಡಿಯಬಹುದು ಎಂದು ಸಂಶೋಧಕರ ಅಭಿಮತ. ಇವರ ಜೀನ್‌ಗಳಲ್ಲಿ ಇರುವ ಗುಟ್ಟನ್ನು ಕಂಡು ಹಿಡಿದರೆ ಕಡಿಮೆ ಆಯುಸ್ಸು ಇರುವವರಿಗೆ ಸೂಕ್ತ ಚಿಕಿತ್ಸೆ ನಡೆಸಿ ಅವರಿಗೂ ಜಾಸ್ತಿ ಜೀವಿತಾವಧಿ ಉಂಟಾಗುವಂತೆ ಮಾಡಲು ಸಾಧ್ಯ ಎಂದು ಮುಖ್ಯ ಸಂಶೋಧಕ ಬಲ್ ಷನ್ ಸ್ಕಿ ಅಭಿಪ್ರಾಯ ಪಡುತ್ತಾರೆ.
ಬೇರೆ ಬೇರೆ ಕಾಯಿಲೆಗಳನ್ನು ಚಿಕಿತ್ಸೆ ಮಾಡುವುದಕ್ಕಿಂತ ವಯಸ್ಸಾಗುವುದನ್ನು ತಡೆಯುವುದನ್ನು ಚಿಕಿತ್ಸೆ ಮಾಡುವುದೇ ಸೂಕ್ತ ಎಂದು ಅವರ ಅಭಿಪ್ರಾಯ. ಅವರ ಮಾತುಗಳನ್ನು ಕೇಳಿ ಸ್ವಾರಸ್ಯವಾಗಿದೆ. ಆರೋಗ್ಯದ ಪಾರ್ಶ್ವ ಪರಿಣಾಮವೇ ದೀರ್ಘಾ ಯುಷ್ಯ. ನಾವು ಜನರನ್ನು ಆರೋಗ್ಯವಂತ ರನ್ನಾಗಿ ಮಾಡಿದರೆ ಬೇಗ ಮರಣ ಬರುವುದನ್ನು ತಪ್ಪಿಸಬಹುದು.
ದೀರ್ಘಾಯುಷಿಗಳ ಬಗ್ಗೆ ಗಮನ ಹರಿಸೋಣ :ಇರ್ವಿಂಗ್ ಖಾನ್ ಮತ್ತು ಆತನ ಎರಡು ಸಹೋದರಿಯರು ಮತ್ತು ಆತನ ಸಹೋದರ – ಈ 4ಜನರು ಒಮ್ಮೆ ಜಗತ್ತಿನಲ್ಲಿ ದೀರ್ಘಕಾಲದ ವರೆಗೆ ಬದುಕಿರುವವರು ಎಂದು ದಾಖಲಿಸಲ್ಪಟ್ಟಿದ್ದರು.2015ರಲ್ಲಿ ಇರ್ವಿಂಗ್ ಖಾನ್ ಮರಣ ಹೊಂದಿದಾಗ ಆತನಿಗೆ109ವರ್ಷ ವಯಸ್ಸಾಗಿತ್ತು. ಆತನ ಹಿರಿಯ ಅಕ್ಕ ಹೆಲೆನ್ 110 ವರ್ಷ ಬದುಕಿದ್ದಳು. ಇಲ್ಲಿ ಗಮನಿಸಬೇಕಾಗಿದ್ದೆಂದರೆ ಈಕೆ80ವರ್ಷಗಳಷ್ಟು ಸುದೀರ್ಘ ಕಾಲ ಧೂಮಪಾನಿಯಾಗಿದ್ದಳು.
ಉಳಿದ ಇಬ್ಬರು ಸಹಿತ 100 ಕ್ಕಿಂತ ಜಾಸ್ತಿ ವರ್ಷ ಬದುಕಿದ್ದರು. ಹಾಗಾಗಿ ವಿರಳವಾಗಿ ಕಂಡು ಬರುವ ಈ ರೀತಿಯ  ದೀರ್ಘಾಯುಷಿ ಜೀವನ ಅವರ ಕುಟುಂಬದಲ್ಲಿಯೂ ಇದೆ. ಹಾಗೆಯೇ ಅವರ ಜೀನ್‌ಗಳೂ ಮುಖ್ಯ ಎನ್ನಲಾಗಿದೆ. ದಾಖಲೆ ಪ್ರಕಾರ ಬಹಳ ದೀರ್ಘಕಾಲ ಬದುಕಿದವಳು ಫ್ರೆಂಚ್ ಮಹಿಳೆ ಜೇಯಿನ್ ಕಾಲ್ಮೆಂಟ್ ಎನ್ನಲಾಗಿದೆ. 1997ರಲ್ಲಿ ಈಕೆ ಮಡಿದಾಗ ಆಕೆಗೆ 122 ವರ್ಷ 165 ದಿನಗಳಾಗಿತ್ತು.
ಮೆಟ್ ಫೆರ್ಮಿನ್ ದೀರ್ಘಾಯುಷ್ಯ ತರುವುದೇ?
2015ರಲ್ಲಿ ಮೈಕೆಲ್ ಕ್ಯಾಂಟರ್ ಎಂಬುವವರಿಗೆ ಡಯಾಬಿಟಿಸ್ ಪೂರ್ವ ಹಂತ ಎಂದು ಮೆಟ್ ಫೆರ್ಮಿನ್ ಔಷಧ ಕೊಡಲಾ ಯಿತು. ಒಂದು ಬಾರಿ ಅದು ಹತೋಟಿಗೆ ಬಂದಾಗ ವೈದ್ಯರು ಆ ಔಷಧವನ್ನು ನಿಲ್ಲಿಸಲು ಸಲಹೆ ನೀಡಿದರು. ಆ ಔಷಧವನ್ನು ಬಗ್ಗೆ ದೀರ್ಘಾಯುಷ್ಯದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಕೇಳಿದ್ದ.
62ವರ್ಷದ ವಕೀಲನಾದ ಈತ ಈ ಔಷಧ ಮುಂದುವರಿಸಬಾರದೇಕೆ ಎಂದು ಮುಂದುವರಿಸಿದ. ಕೆಲವು ದಿನಗಳ ನಂತರ ಆತನ ಪತ್ನಿ ವೆಸ್ಟ್ ಹಾರ್ಟ್ ಫರ್ಡ್‌ನ ಮೇಯರ್ ಶಾರಿ ಸಹಿತ ಮೆಟ್ ಫಾರ್ಮಿನ್ ತೆಗೆದುಕೊಳ್ಳಲು ಆರಂಭಿಸಿದಳು. ಅವರ ದೈನಂದಿನಜೀವನದಲ್ಲಿ ಇದು ಒಂದು ರೀತಿಯ ಮಾನಸಿಕ ನೆಮ್ಮದಿ ಮತ್ತು ದೈಹಿಕ ಉತ್ಸಾಹ ಉಂಟು ಮಾಡುತ್ತಿದೆ ಎಂದು ಅವರಿಬ್ಬರ ಅನಿಸಿಕೆ.
ಅವರಿಗೆ ಶೀಘ್ರವೇ ಒಂದು ಉತ್ತರ ಸಿಗಬಹುದು ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಬೇಸಿಕ್ ಬಯಾಲಜಿ ಆಫ್ ಏಜಿಯಿಂಗ್‌ನ ನಿರ್ದೇಶಕ ನೀರ್ ಬಾರ್ಜಿಲಾಯಿ ಎನ್ನುವವರು ಈ ಬಗ್ಗೆ ಅಂದರೆ ವಯಸ್ಸಾಗುವುದು ತಪ್ಪಿಸಬಹುದಾದಒಂದು ಆರೋಗ್ಯ ಸಮಸ್ಯೆ ಎಂಬ ಬಗ್ಗೆ ಅಧ್ಯಯನ ಕೈಗೊಂಡಿದ್ದಾರೆ.
ಅವರು     () ಎಂಬ ಅಧ್ಯಯನ ಮಾಡುತ್ತಿದ್ದಾರೆ. ಅಂದರೆ ಮೆಟ್ ಫಾರ್ಮಿನ್ ಔಷಧವು ವಯಸ್ಸಾಗುವುದನ್ನು ತಡೆಯುವ ಬಗ್ಗೆ ಅಧ್ಯಯನ. ಇದರ ಫಲಿತಾಂಶ ಒಳ್ಳೆಯದಾಗಿ ಕಂಡು ಬಂದರೆ ಜಗತ್ತಿನ ಎಲ್ಲಾ ಜನರು ಮೆಟ್ ಫಾರ್ಮಿನ್  ಸೇವಿಸಿ ದೀರ್ಘಾಯುಷಿ ಗಳಾಗಬಹುದೇನೋ ಎಂದು ನೀರ್ ಬಾರ್ಜಿಲಾಯಿ ಅಭಿಪ್ರಾಯ ಪಡುತ್ತಾರೆ.
ಈ ಅಧ್ಯಯನ ಸದ್ಯದಲ್ಲಿ3ನೆಯ ಹಂತದಲ್ಲಿದೆ. ಅದರ ಅಂತಿಮ ಅವಧಿಯಲ್ಲಿ ಚಿಕಿತ್ಸೆಯ ಬಗ್ಗೆ ಎಲ್ಲಾ ಡಿಎ ಒಪ್ಪಿಗೆ ದೊರಕಿಸಿ ಕೊಳ್ಳಬಹುದು ಎಂದು ಸಂಶೋಧಕರ ಅನಿಸಿಕೆ. ಹಿಂದಿನ ಸಂಶೋಧನೆಗಳು ಡಯಾಬಿಟಿಸ್ ಕಾಯಿಲೆಗೆ ಮೆಟ್ ಫಾರ್ಮಿನ್ ತೆಗೆದುಕೊಳ್ಳುವ ರೋಗಿಗಳು ಮೆಟ್ ಫಾರ್ಮಿನ್ ತೆಗೆದುಕೊಳ್ಳದ ರೋಗಿಗಳಿಗಿಂತ ಹೆಚ್ಚು ದೀರ್ಘಕಾಲ ಬದುಕಿದ್ದರು ಎನ್ನುತ್ತದೆ. ಹಾಗೆಯೇ ಈ ಔಷಧ ವಯಸ್ಸಾದ ಮೇಲೆ ಬರುವ ಕಾಯಿಲೆಗಳಾದ ಹೃದಯದ ಕಾಯಿಲೆ, ಚಿತ್ತವೈಕಲ್ಯ, ಆಲ್ಜೀಮರ್ಸ್‌ಗಳು ಬಾರದಂತೆ ಮಾಡುತ್ತದೆ ಎಂದು ಸಹಿತ ಹೇಳಲಾಗಿದೆ.
ಅಲ್ಲದೆ ಹಲವು ರೀತಿಯ ಕ್ಯಾನ್ಸರ್ ಬಾರದಂತೆ ಮಾಡುವಲ್ಲಿಯೂ ಸಹಾಯ ಮಾಡುತ್ತದೆ ಎನ್ನಲಾಗಿದೆ. ಈಗಿನ ಕೋವಿಡ್ 19 ಕಾಯಿಲೆಯ ರೋಗಿಗಳು ಸಹಿತ ಮೆಟ್ ಫಾರ್ಮಿನ್ ಸೇವಿಸುತ್ತಿರುವವರು ಈ ಕಾಯಿಲೆಗೆ ತುತ್ತಾದರೆ ಆಸ್ಪತ್ರೆಗಳಲ್ಲಿ ಸುದೀರ್ಘ ಕಾಲ ಇರುವುದು ಅಥವಾ ಕಾಯಿಲೆಯಿಂದ ಮರಣ ಹೊಂದುವುದು – ಈ ರೀತಿಯ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗಿದೆ.ಮೆಟ್ ಫಾರ್ಮಿನ್ ಔಷಧ ಈ ರೀತಿಯ ಕೆಲಸ ಹೇಗೆ ಮಾಡುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಔಷಧ ಮೂಲಭೂತವಾಗಿ ಗಲೇಗಾ ಅಫಿಸಿನಾಲಿಸ್ ಎಂಬ ಗಿಡದಿಂದ ಹೊರತಂದದ್ದು. ಈ ಗಿಡ ಬಹಳ ಹಿಂದಿನ ಕಾಲದಿಂದಲೂ ಔಷಧದ ಸಸ್ಯ ಎಂದು ವಿವಿಧ ಕಾಯಿಲೆಗಳಲ್ಲಿ ಬಳಕೆಯಲ್ಲಿತ್ತು ಎನ್ನಲಾಗಿದೆ.
ಸುದೀರ್ಘ ಜೀವನ ಮತ್ತು ಆರೋಗ್ಯವಂತ ಜೀವನ:ಹಲವು ಸಂಶೋಧಕರು ಆರೋಗ್ಯಯುಕ್ತ ಜೀವನದ ಅವಧಿ ವಿಸ್ತರಿಸ ಬೇಕೇ ಹೊರತು ಬರೀ ಆಯುಷ್ಯವನ್ನಲ್ಲ ಎಂದು ಅಭಿಪ್ರಾಯ ಪಡುತ್ತಾರೆ. ಆರೋಗ್ಯವಂತ ಜೀವನ ಶೈಲಿಯು ಹೆಚ್ಚಿನ ಜನರ ಆಯುಷ್ಯವನ್ನು ವೃದ್ಧಿಸುತ್ತದೆ. ಜತೆಗೆ ಜೀವಕೋಶಗಳ ಸ್ತರದಲ್ಲಿ ವಯಸ್ಸಾಗುವುದನ್ನು ತಪ್ಪಿಸುತ್ತದೆ. ಈ ಜೀವನ ಶೈಲಿಯಮುಖ್ಯ ಅಂಶಗಳೆಂದರೆ – ಧೂಮಪಾನ ತ್ಯಜಿಸುವುದು (ಅಭ್ಯಾಸವುಳ್ಳವರು), ಇಲ್ಲದಿದ್ದರೆ ಮದ್ಯಪಾನದಿಂದ ದೂರವಿರುವುದು, ವಾರದಲ್ಲಿ 5 1/2 ಗಂಟೆಗಿಂತ ಜಾಸ್ತಿ  ದೈಹಿಕ ವ್ಯಾಯಾಮ ಅಥವಾ ಶ್ರಮ ಕೈಗೊಳ್ಳುವುದು, ವಯಸ್ಸಿಗೆ ತಕ್ಕ ಹಾಗೆ ತೂಕ ಸರಿ ಯಾಗಿಟ್ಟುಕೊಳ್ಳುವುದು.
ವಯಸ್ಸಾಗುವ ಕೆಲವು ಮಾರ್ಕರ್‌ಗಳನ್ನು ತಪ್ಪಿಸಿ ಕೆಲವು ಔಷಧಗಳು ಇದನ್ನು ಮಾಡಬಹುದು. ಈ ಮಾರ್ಕರ್ ಗಳೆಂದರೆ – ಜೀನ್‌ಗಳಲ್ಲಿನ ಟಿಲೋಮಿಯರ್‌ನ ಉದ್ದ, ಉರಿಯೂತ, ಆಕ್ಸಿಡೇಷನ್ ನಿಂದ ಉಂಟಾಗುವ ಮಾನಸಿಕ ಒತ್ತಡ, ಜೀವಕೋಶ ಗಳಲ್ಲಿನ ಮೆಟಬಾಲಿಸಂ ಕ್ರಿಯೆ ನಿಧಾನ ಗತಿಯಲ್ಲಿ ಸಾಗುವುದು. ಹಾಗೆಂದು ಇವುಗಳಲ್ಲಿ ಎಲ್ಲವನ್ನೂ ಸರಿಪಡಿಸಬೇಕೆಂದೇನೂ ಇಲ್ಲ. ಅವುಗಳಲ್ಲಿ ಒಂದನ್ನು ಸರಿಯಾಗಿ ಬದಲಿಸಿದರೆ ಉಳಿದವುಗಳು ಸಹಿತ ಬದಲಾಗುತ್ತವೆ ಎಂದು ಬಾರ್ಜಿಲಾಯಿ ಅಭಿಪ್ರಾಯ ಪಡುತ್ತಾರೆ.
ವಯಸ್ಸಾಗುವ ಬಗ್ಗೆ ಇರುವ ವೈದ್ಯಕೀಯ ಶಬ್ದ ಎಂದರೆ ಸೆನೆಸೆನ್ಸ್ (). ಇದರಲ್ಲಿ ಜೀವಕೋಶಗಳಿಗೆ ವಿಪರೀತ ಒತ್ತಡ ಉಂಟಾಗಿ ಡಿಎನ್‌ಎ ನಷ್ಟವಾಗುವುದರಿಂದ ಜೀವಕೋಶಗಳು ನಾಶ ವಾಗುತ್ತವೆ. ಪರಿಣಾಮವಾಗಿ ಜೀವಕೋಶಗಳು ವೃದ್ಧಿಸುವು ದನ್ನು ನಿಲ್ಲಿಸಿ ಬಿಡುತ್ತವೆ. ಹಾಗೆಂದು ಅವು ಸಾಯುವುದಿಲ್ಲ. ಅವು ಉಪಯೋಗರಹಿತವಾಗುತ್ತವೆ. ಈ ರೀತಿಯ ನಿಧಾನ ಕ್ರಿಯೆ ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮವನ್ನು ಹೊಂದಿದೆ. ಆಗ ಜೀನ್‌ಗಳು ಮ್ಯುಟೇಷನ್ ಅಥವಾ ತೀವ್ರ ರೀತಿಯ ಬದಲಾವಣೆ ಹೊಂದುವ ಸಾಧ್ಯತೆ ಇದೆ.
ದೇಹಕ್ಕೆ ಶಕ್ತಿ ಒದಗಿಸುವ ಜೀವಕೋಶದೊಳಗಿನ ಮೈಟೊಕಾಂಡ್ರಿಯಾವು ದೇಹಕ್ಕೆ ಶಕ್ತಿ ಒದಗಿಸಲು ತುಂಬಾ ಕಷ್ಟ ಪಡುತ್ತದೆ. ಹಾಗಾದಾಗ ಜೀವಕೋಶಗಳಿಗೆ ನಷ್ಟ ಉಂಟಾಗುತ್ತದೆ. ಆಗ ಡಯಾಬಿಟಿಸ್, ಆರ್ತರೈಟಿಸ್, ಅಲ್ಸರೇಟಿವ್ ಕೋಲೈಟಿಸ್ (ದೊಡ್ಡ ಕರುಳಿನಲ್ಲಿ ಕಾಣಿಸಿಕೊಳ್ಳುವ ಅಲ್ಸರ್ ಕಾಯಿಲೆ) ಮತ್ತಿತರ ಕಾಯಿಲೆಗಳು ಬರಬಹುದು.
ವಯಸ್ಸಾಗುವ ಮುಖ್ಯ ಲಕ್ಷಣ ಎಂದರೆ ಉಪಯೋಗ ರಹಿತ ಜೀವಕೋಶಗಳು ( ) ಸಂಖ್ಯೆ ಜಾಸ್ತಿಯಾಗುತ್ತಾ ಹೋಗುವುದು. ಹಾನಿಯುಂಟಾದ ಜೀವಕೋಶಗಳು ಉಪಯೋಗ ರಹಿತವಾಗುತ್ತವೆ. ಇವು ಹಾನಿಕಾರಕ ಮತ್ತು ಅನಿಯಮಿತ ಜೀವಕೋಶಗಳ ವಿಭಜನೆಯಿಂದ ದೇಹವನ್ನು ರಕ್ಷಿಸುತ್ತವೆ. ಹಣ್ಣಿನ ರಾಶಿಯಲ್ಲಿ ಇರುವ ಹಾಳಾದ ಸೇಬು ಹಣ್ಣು ಹತ್ತಿರದ ಬೇರೆ ಹಣ್ಣುಗಳನ್ನು ಹೇಗೆ ಹಾಳುಗೆಡವುದೋ ಹಾಗೆಯೇ ಈ ಉಪಯೋಗ ರಹಿತ ಜೀವಕೋಶಗಳು ಹತ್ತಿರದ ಜೀವಕೋಶಗಳನ್ನು ಹಾಳುಗೆಡವಲು ಅಥವಾ ಉಪಯೋಗ ರಹಿತ ಮಾಡಲು ಪ್ರಯತ್ನಿಸುತ್ತವೆ.
ಅವು ಉರಿಯೂತ ಉಂಟುಮಾಡಲು ಸಹಾಯ ಮಾಡುವ ಪ್ರೋಟೀನ್ ‌ಹೊರಹಾಕುತ್ತವೆ. ಆಗ ದೇಹವು ಈ ರೀತಿಯ ಉಪಯೋಗ ರಹಿತ ಜೀವಕೋಶಗಳನ್ನು ಹೊರ ಹಾಕುತ್ತವೆ. ಆದರೆ ದೇಹದ ಪ್ರತಿರೋಧ ವ್ಯವಸ್ಥೆ ಹಳೆಯದಾದಾಗ ದೇಹವನ್ನು ಶುದ್ಧೀ ಕರಿಸಲು ಅದಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಉಪಯೋಗರಹಿತ ಜೀವಕೋಶಗಳು ತುಂಬಾ ಸಂಖ್ಯೆಯಲ್ಲಿ ಉಳಿದುಕೊಳ್ಳುತ್ತವೆ. ಈ ರೀತಿಯ ಬೇಡದ ಜೀವಕೋಶಗಳನ್ನು ಸರಿಯಾದ ಕಾಲಕ್ಕೆ ಹೊರಹಾಕುವುದರಿಂದ ವಯಸ್ಸಾಗುವುದನ್ನು ಬಹಳಷ್ಟು ತಡೆಯಬಹುದು ಎಂದು ತಜ್ಞರ ಅಭಿಮತ.
ಈ ರೀತಿಯ ಕ್ರಮ ಔಷಧಗಳಿಂದ ಮಾಡಬಹುದು ಎಂದು ಡಿ ಗ್ರೇ ಅವರು ಅಭಿಪ್ರಾಯ ಪಡುತ್ತಾರೆ. ಇದು ನಷ್ಟವನ್ನು ಸರಿಪಡಿಸುತ್ತದೆ. ಹೀಗೆ ನಷ್ಟ ಸರಿಪಡಿಸಿ ದೇಹದ ಗಡಿಯಾರವನ್ನು ಹಿಂದಕ್ಕೆ ತಿರುಗಿಸಲು ಸಹಾಯ ಮಾಡುತ್ತದೆ. ಈ ಬಗ್ಗೆ ಹಲವುಔಷಧಗಳನ್ನು ಪ್ರಯೋಗಕ್ಕೆ ಹಚ್ಚಿ ಪ್ರಯೋಗ ಮಾಡಲಾಗುತ್ತಿದೆ. ಅವುಗಳ ಪರಿಣಾಮ ಕಾದು ನೋಡಬೇಕಷ್ಟೇ.