ಪ್ರತಿಭೆಗೆ ತಕ್ಕ ಉದ್ಯೋಗ ಖಾಸಗೀಕರಣದಿಂದ ಮಾತ್ರ ಸಾಧ್ಯ !
ವೀಕೆಂಡ್ ವಿಥ್‌ ಮೋಹನ್‌
ಮೋಹನ್‌ ವಿಶ್ವ
ದೇಶದೆಡೆ ಈಗ ಖಾಸಗೀಕರಣದ ಮಾತು ದಿನಬೆಳಗಾದರೆ ಕೇಳಿ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನೆಲ್ಲ ವನ್ನೂ ಮಾರುತ್ತಾರಂತೆ, ಹೀಗೆ ಮಾರುತ್ತಾ ಹೋದರೆ ದೇಶವನ್ನೇ ಮಾರುವ ಪರಿಸ್ಥಿತಿ ಬರುತ್ತದೆಯಂತೆಯೆಂಬ ಮಾತುಗಳು ಪ್ರತಿನಿತ್ಯವೂ ಕೇಳಿ ಬರುತ್ತಿದೆ.
೧೯೯೧ರಲ್ಲಿ ಭಾರತವು ಹಿಂದೆಂದೂ ಕಂಡರಿಯದ ಆರ್ಥಿಕ ಮುಗ್ಗಟ್ಟನ್ನು ಕಂಡಿತ್ತು. ನಮ್ಮ ಬಳಿ ಇದ್ದಂಥ ಚಿನ್ನವನ್ನು ಲಂಡನ್ನಿನ ಬ್ಯಾಂಕಿನಲ್ಲಿ ಅಡವಿಟ್ಟು ಸಾಲವನ್ನು ತಂದು ದೇಶ ನಡೆಸಿzವು. ಅಡವಿಟ್ಟು ದೇಶವನ್ನು ನಡೆಸಿದ್ದೇವೆಂದು ಹೇಳುವವರು, ಅಂತಹ ಪರಿಸ್ಥಿತಿಯನ್ನು ಭಾರತಕ್ಕೆ ತಂದವರ‍್ಯಾರು ಎಂಬ ಮಾತನ್ನು ಹೇಳುವುದಿಲ್ಲ.
ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಆಡಳಿತದಲ್ಲಿ ಆಗಬಾರದ ಸುಧಾರಣೆಗಳಾದವೆಂದು ಕೊಚ್ಚಿಕೊಳ್ಳುವವರು ಭಾರತಕ್ಕೆ೧೯೯೧ರಲ್ಲಿ ಯಾಕೆ ಈ ರೀತಿಯ ಪರಿಸ್ಥಿತಿ ಬಂತೆಂದು ಎಲ್ಲಿಯೂ ಹೇಳುವುದಿಲ್ಲ. ಈಗ್ಯಾಕೆ೧೯೯೧ರ ಕಥೆಯೆಂದು ಯೋಚಿಸುತ್ತಿದ್ದೀರಾ, ಹೌದು ಈಗಲೂ ಅಷ್ಟೇ ಭಾರತ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಕರೋನದಿಂದಾಗಿ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಲಾಕ್ ಡೌನ್‌ನಿಂದಾಗಿ ದೇಶದ ಆರ್ಥಿಕತೆ ಹಳ್ಳ ಹಿಡಿದಿದೆ. ಕಳೆದ ಎರಡು ತಿಂಗಳಿಂದ ಮಾತ್ರ ನಿಧಾನವಾಗಿ ಆರ್ಥಿಕತೆ ಮೇಲೇಳುತ್ತಿದೆ. ಒಂದು ದೇಶ ನಡೆಯಬೇಕೆಂದರೆ ಅಲ್ಲಿನ ಆರ್ಥಿಕತೆ ಮೇಲೇಳಬೇಕು ಆಗ ಮಾತ್ರ ಸರಕಾರಕ್ಕೆ ಬರಬೇಕಿರುವ ತೆರಿಗೆ ಬರುತ್ತದೆ. ತೆರಿಗೆ ಬಂದರಷ್ಟೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಾಧ್ಯ. ಭಾರತ ಸರಕಾರಕ್ಕೆ ಬರಬೇಕಿದ್ದ ತೆರಿಗೆಯಲ್ಲಿ ಅರ್ಧದಷ್ಟನ್ನು ಕರೋನ ನುಂಗಿಹಾಕಿದೆ. ಯೋಜನೆಗಳಿಗೆ ಹಂಚಿಕೆಯಾಗಿದ್ದಂಥ ಹಣ ವನ್ನು ಹೊಂದಿಸಲು ಆಗದ ಕಾರಣ ಸರಕಾರದ ಬಳಿ ಎರಡು ಆಯ್ಕೆ ಇರುತ್ತದೆ.
ಯೋಜನಾ ವೆಚ್ಚಗಳನ್ನು ಕಡಿಮೆ ಮಾಡಬೇಕು ಅಥವಾ ಸಾಲ ಮಾಡಿ ಹಣವನ್ನು ಹೊಂದಿಸಿ ಯೋಜನೆಗಳನ್ನು ಮುಂದುವರಿಸ ಬೇಕು. ವೆಚ್ಚವನ್ನು ಕಡಿಮೆ ಮಾಡಿದರೆ ಫಲಾನುಭವಿಗಳು ಬೀದಿಗಿಳಿದು ಪ್ರತಿಭಟನೆ ಮಾಡುತ್ತಾರೆ ಅಥವಾ ಫಲಾನುಭವಿಗಳ ಜೀವನದ ಮೇಲೆ ಬಹುದೊಡ್ಡ ಋಣಾತ್ಮಕ ಪ್ರಭಾವ ಬೀಳುತ್ತದೆ. ಸಾಲ ಮಾಡಿದರೆ ಅಂತಾರಾಷ್ಟ್ರೀಯ ರಾಷ್ಟ್ರೀಯ ಸಂಸ್ಥೆಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿಸುವ ಕೆಲಸ ಮಾಡಲು ಹದ್ದಿನಂತೆ ಕಾದು ಕುಳಿತಿರುತ್ತವೆ.
ಒಮ್ಮೆ ಭಾರತದ ‘ ’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಡಿಮೆಯಾದರೆ, ಹೆಚ್ಚಿನ ಬಂಡವಾಳವು ಭಾರತಕ್ಕೆ ಹರಿದುಬರುವುದಿಲ್ಲ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಪರಿಸ್ಥಿತಿ ಬಿಗಿಯಾದ ಹಗ್ಗದ ಮೇಲಿನ ನಡಿಗೆಯಾಗಿದೆ. ಇನ್ನು ಒಂದು ವರ್ಷ ಈ ನಡಿಗೆಯನ್ನು ತಾಳ್ಮೆ ಹಾಗೂ ಎಚ್ಚರಿಕೆಯಿಂದ ನಡೆಸಿದರೆ ಆರ್ಥಿಕತೆಯು ಹಳೆಯ ಹಳಿಗೆ ಮರಳುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪೆಟ್ರೋಲ, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯೂ ಸಹ ಇದೇ ಕಾರಣಕ್ಕಾಗುತ್ತಿದೆ. ನಮಗೆ ತಿಳಿದಿರುವ ಹಾಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ತೆರಿಗೆಯಿಂದಲೇ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿರುವುದು. ಹಾಗಂತ ಸರಕಾರಗಳು ತೆರಿಗೆಯನ್ನು ಕಡಿಮೆ ಮಾಡಿದರೆ ಬೊಕ್ಕಸದಲ್ಲಿ ಹಣವಿರುವುದಿಲ್ಲ, ಹಣವಿಲ್ಲವೆಂದರೆ, ನಾನು ಆಗಲೇ ಹೇಳಿದ ಹಾಗೆ ಸಾಲ ಮಾಡಬೇಕುಅಥವಾ ಯೋಜನಾ ವೆಚ್ಚವನ್ನು ಕಡಿಮೆ ಮಾಡಬೇಕು. ಕಡಿಮೆ ಮಾಡಿದರೆ ಕರೋನ ಪರಿಸ್ಥಿತಿಯಲ್ಲಿ ಸರಕಾರಿ ಯೋಜನೆ ಗಳನ್ನು ನಂಬಿಕೊಂಡವರಿಗೆ ತೊಂದರೆಯಾಗುತ್ತದೆ.
ಹಾಗಂತ ಹೆಚ್ಚು ಮಾಡಿದರೂ ಸಹ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತದೆ. ಅತ್ತ ದರಿ, ಇತ್ತ ಪುಲಿ ಎಂಬಂತಾಗಿದೆ ಸರಕಾರದ ಈಗಿನ ಪರಿಸ್ಥಿತಿ. ಯಾವುದನ್ನು ಕಡಿಮೆ ಮಾಡಿದರೂ ತೊಂದರೆ ಅಥವಾ ಹೆಚ್ಚುಮಾಡಿದರೂ ತೊಂದರೆಯಾಗು ವಂಥ ಸಂದಿಗ್ನ ಪರಿಸ್ಥಿತಿಯಲ್ಲಿ ಎಲ್ಲ ರಾಜ್ಯ ಸರಕಾರಗಳಿವೆ. ಕೇಂದ್ರದ ಪರಿಸ್ಥಿತಿಯೂ ಇದಕ್ಕೆ ಹೊರತಲ್ಲ.
ಅಲ್ಲಿಯೂ ಅಷ್ಟೇ ಯೋಜನೆಗಳನ್ನು ಕಡಿಮೆಮಾಡುವ ಹಾಗಿಲ್ಲ. ಹಾಗಂತ ಪೆಟ್ರೋಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಆಗುತ್ತಿಲ್ಲ.೧೯೯೧ರಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದಾಗ, ಪಿ.ವಿ.ನರಸಿಂಹರಾವ್ ನೇತೃತ್ವದ ಸರಕಾರವು ಆರ್ಥಿಕ ನೀತಿಗಳನ್ನು ಸಡಿಲಗೊಳಿಸುವ ಮೂಲಕ ಲೈಸನ್ಸ್ ರಾಜ್ ಸಂಸ್ಕೃತಿಯನ್ನು ರದ್ದುಗೊಳಿಸಿ ವಿದೇಶಿಗರಿಗೆ ಹಾಗೂ ಇಲ್ಲಿನ ಖಾಸಗೀಯವರಿಗೆ ಹಲವಾರು ಸರಕಾರಿ ಸ್ವಾಮ್ಯದ ವ್ಯವಹಾರಗಳಲ್ಲಿ ಬಂಡವಾಳ ಹೂಡಲು ಅವಕಾಶ ಮಾಡಿಕೊಟ್ಟರು.
ಇದರ ಫಲವಾಗಿಯೇ ಹೆಚ್ಚಿನ ವಿದೇಶಿ ಬಂಡವಾಳವು ಭಾರತಕ್ಕೆ ಕಳೆದ ಮೂರು ದಶಕಗಳಲ್ಲಿ ಹರಿದು ಬಂತು. ಅಂದು ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟಂಥ ಕಾಂಗ್ರೆಸ್ ಸರಕಾರ ಇಂದು ಅದೇ ಖಾಸಗೀಕರಣವನ್ನು ವಿರೋಧಿಸುತ್ತಿರುವುದು ಸೋಜಿಗದ ಸಂಗತಿ.೧೯೯೧ರ ಆರ್ಥಿಕ ನೀತಿಯ ವಿರುದ್ಧ ರಸ್ತೆಗಿಳಿದು ಸಾವಿರಾರು ಜನರು ಪ್ರತಿಭಟನೆ ಮಾಡಿದರು. ಆದರೆಮೂರು ದಶಕಗಳ ಬಳಿಕ ಏನಾಯಿತು? ಅಂದು ಖಾಸಗೀಕರಣವನ್ನು ಉತ್ತೇಜಿಸಿ ಬಂಡವಾಳವನ್ನು ಆಕರ್ಷಿಸದಿದ್ದರೆ ಇಂದು ಭಾರತದಲ್ಲಿ ಕೇವಲ ‘ಅಂಬಾಸೆಡರ್’ ಅಥವಾ ‘ಮಾರುತಿ’ ಕಾರು ಇರುತಿತ್ತು.
ಅಷ್ಟೇ ಯಾಕೆ ದೂರದರ್ಶನ ಚಾನೆಲ್ ಬಿಟ್ಟು ಬೇರೆ ಯಾವ ಚಾನೆಲ್ ಕೂಡ ಇರುತ್ತಿರಲಿಲ್ಲ. ಇಷ್ಟೊಂದು ಸಿನಿಮಾ ಥಿಯೇಟರ್ ಇರುತ್ತಿರಲಿಲ್ಲ, ಇಷ್ಟೊಂದು ವಿಮಾನಯಾನ ಸೇವೆಗಳು ಬರುತ್ತಿರಲಿಲ್ಲ, ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಮಾಲ್‌ಗಳುಇರುತ್ತಿರಲಿಲ್ಲ. ಸ್ಮಾರ್ಟ್ ಫೋನ್ ಇರುತ್ತಿರಲಿಲ್ಲ, ಒಂದು ರುಪಾಯಿಗೆ ಒಂದು ಜಿ.ಬಿ ಇಂಟರ್ನೆಟ್ ಸಿಗುತ್ತಿರಲಿಲ್ಲ. ಪಟ್ಟಿಯನ್ನು ಹೇಳುತ್ತಾ ಹೋದರೆ ಲೆಕ್ಕಕ್ಕೆ ಸಿಗದಷ್ಟಿದೆ. ನೀವೇ ನಿಮ್ಮ ಸುತ್ತಮುತ್ತಲಿನ ದಿನನಿತ್ಯದ ಅಂಶಗಳನ್ನೊಮ್ಮೆ ಗಮನಿಸಿ ನೋಡಿಅವೆಲ್ಲವೂ ಖಾಸಗೀಕರಣದಿಂದಾದ ಬದಲಾವಣೆಗಳಲ್ಲದೆ ಮತ್ತೇನು? ತಾನು ಮಾಡಿದ ನೀತಿಯನ್ನು ಇಂದು ಕಾಂಗ್ರೆಸ್ ತಾನೇವಿರೋಧಿಸುತ್ತಿದೆ.
ಸರಕಾರಿ ಸ್ವಾಮ್ಯದ ಸಂಸ್ಥೆಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದೆಯೆಂದು ಎಲ್ಲರಿಗೂ ತಿಳಿದಿದೆ. ಸಾಮಾನ್ಯ ಜನರ ಬಳಿ ಕೇಳಿದರೆ ಅವರಿಗೆ ಖಾಸಗಿ ಸಂಸ್ಥೆಯ ಸೇವೆಗಳು ಉತ್ತಮವಾಗಿ ಕಾಣುತ್ತದೆಯೋ ಹೊರತು ಸರಕಾರಿ ಸಂಸ್ಥೆಯ ಸೇವೆಗಳು ಉತ್ತಮವಾಗಿ ಕಾಣುವುದಿಲ್ಲ. ಭಾರತೀಯ ರೈಲ್ವೆ ಸೇವೆಗಳನ್ನು ಪಾಶಿಮಾತ್ಯ ದೇಶಗಳಲ್ಲಿನ ರೈಲ್ವೆ ಸೇವೆಗಳಿಗೆ ಹೋಲಿಸಿದರೆ ಅವರೆಷ್ಟು ಮುಂದುವರಿದಿದ್ದಾರೆಂಬ ವಿಷಯ ತಿಳಿಯುತ್ತದೆ. ಕಾರಣ ಆ ದೇಶಗಳಲ್ಲಿ ಆಗಿರುವ ಖಾಸಗೀಕರಣ.
ಪಾಂಡಿಚೇರಿಯಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇನ್ನು೧೦೦ಸರಕಾರಿ ಸ್ವಾಮ್ಯದ ಸಂಸ್ಥೆ ಗಳನ್ನು ಖಾಸಗೀಕರಣ ಮಾಡುವ ಗುರಿಯನ್ನು ಸರಕಾರವು ಹೊಂದಿದ್ದು, ಇದರಿಂದ ಸುಮಾರು ಅಂದಾಜು೧,೫೦,೦೦೦ಕೋಟಿಯಷ್ಟು ಹಣವನ್ನು ಕ್ರೂಡೀಕರಿಸುವ ಉದ್ದೇಶವನ್ನು ಹೊಂದಿರುವುದಾಗಿ ಹೇಳಿದ್ದಾರೆ. ನಷ್ಟದಲ್ಲಿರುವ ಹಲವಾರು ಸರಕಾರಿ ಸಂಸ್ಥೆಗಳು, ಸರಕಾರಿ ಸ್ವಾಮ್ಯದಲ್ಲಿರುವ ಬ್ಯಾಂಕುಗಳು, ಭಾರತೀಯ ರೈಲ್ವೆಯ ಕೆಲವು ಸೇವಾ ವಲಯಗಳು, ನಷ್ಟದಲ್ಲಿರುವ ‘ಏರ್ ಇಂಡಿಯಾ’ ವಿಮಾನಯಾನ ಸಂಸ್ಥೆ, ಹೆಚ್ಚಿನ ಹಣವನ್ನು ತನ್ನ ನಿಧಿಯಲ್ಲಿಟ್ಟುಕೊಂಡಿರುವ ‘ಎಲ.ಐ.ಸಿ’ ವಿಮೆ ಸಂಸ್ಥೆ ಹೀಗೆ ಹಲವಾರು ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಬೇಕಿರುವ ಹಣವನ್ನು ಕ್ರೋಡೀಕರಿಸುವ ಉದ್ದೇಶವನ್ನು ಹೊಂದಲಾಗಿದೆ.
ಖಾಸಗೀಕರಣದಿಂದ ಸರಕಾರಿ ಸಂಸ್ಥೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ಕಡಿಮೆಮಾಡುವ ಉದ್ದೇಶವೂ  ಸಹ ಇದರಲ್ಲಿ ಸೇರಿದೆ. ಖಾಸಗೀಕರಣವಾದರೆ ಕೆಲಸ ಮಾಡುತ್ತಿರುವ ನೌಕರರು ಹಾಗೂ ಆಡಳಿತ ಮಂಡಳಿಯ ಸದಸ್ಯರಿಗೆ ತಾವು ಖರ್ಚು ಮಾಡುವ ಪ್ರತಿಯೊಂದು ರುಪಾಯಿಯ ಮೇಲೂ ಹೆಚ್ಚಿನ ಹೊಣೆಗಾರಿಕೆಯಿರುತ್ತದೆ. ಈಗಿನ ಸರಕಾರಿ ಸ್ವಾಮ್ಯದಸಂಸ್ಥೆಗಳಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಪ್ರತಿನಿತ್ಯವೂ ಮಾಧ್ಯಮಗಳಲ್ಲಿ ಬರುವ ವರದಿಯನ್ನು ನೀವುಗಳು ಈಗಾಗಲೇಕೇಳಿರಬಹುದು. ಪ್ರತಿಷ್ಠಿತ ‘ಟೊಯೋಟಾ’ ಸಂಸ್ಥೆಯ ಉದ್ಯೋಗಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಕಳೆದ ಮೂರುತಿಂಗಳಿಂದ ನೋಡುತ್ತಿದ್ದೇವೆ. ಅಲ್ಲಿನ ಉದ್ಯೋಗಿಗಳು ನೀಡುವ ಕಾರಣಗಳನ್ನೊಮ್ಮೆ ಕೇಳಿದರೆ ಏನು ಹೇಳಬೇಕೋ ತಿಳಿಯುತ್ತಿಲ್ಲ.
ಸಂಡಾಸಿಗೆ ಹೋಗಿ ಎರಡು ನಿಮಿಷ ಬರುವುದು ತಡವಾದರೆ ತಮ್ಮ ಮೇಲಾಧಿಕಾರಿಗಳು ಬೈತಾರಂತೆ, ಒಂದು ನಿಮಿಷ ಕೆಲಸದಲ್ಲಿತಡವಾದರೆ ಬೈತಾರಂತೆ. ಅದೇ ಸರಕಾರಿ ಸಂಸ್ಥೆಗಳಲ್ಲಿ ದಿನದಲ್ಲಿ ಅದೆಷ್ಟು ಗಂಟೆಗಳ ಕಾಲ ಈ ರೀತಿಯ  ಕಾಲಹರಣವಾಗು ತ್ತದೆಯೋ ಭಗವಂತನೇ ಬಲ್ಲ. ಮಾತು ಮಾತಿಗೂ ‘ಜಪಾನ್’ ದೇಶದಂತೆ ಭಾರತವೂ ಸಹ ಮುಂದುವರಿಯಬೇಕೆಂದು ಬೊಬ್ಬೆಹೊಡೆಯುವುದರ ಜತೆಗೆ ‘ಜಪಾನ್’ ಮೂಲದ ‘ಟೊಯೋಟಾ’ಕಂಪನಿಯ ನಿಯಮಾವಳಿಗಳನ್ನೂ ಪಾಲಿಸಬೇಕು. ಅಂತಹ ಕಠಿಣ ನಿಯಮಗಳನ್ನು ಪಾಲಿಸುವುದರ ಫಲವಾಗಿ ಅಂದು ಅಣುಬಾಂಬಿಗೆ ತತ್ತರಿಸಿದ್ದಂಥ ‘ಜಪಾನ್’ ಇಂದು ಪ್ರಪಂಚದ ಮೂರನೇ ದೊಡ್ಡ ಆರ್ಥಿಕ ದೇಶವಾಗಿ ನಿಂತಿದೆ.
ಖಾಸಗೀಕರಣದ ಪ್ರಯೋಜನವೆಂದರಿತು, ತಾನು ಮಾಡುವ ಪ್ರತಿಯೊಂದು ಕೆಲಸಕ್ಕೂ ಹೊಣೆಗಾರಿಕೆಯಿರುತ್ತದೆ. ಉದ್ಯೋಗಿಗಳ ಸಂಬಳ ಅವರು ಮಾಡುವ ಕೆಲಸದ ಮೇಲೆ ನಿರ್ಧಾರವಾಗುತ್ತದೆ. ಹಾಗಂತ ಖಾಸಗೀಕರಣವನ್ನು ಮಾಡಿದ ಕೂಡಲೇ ಎಲ್ಲವೂ ಸರಿ ಹೋಗುತ್ತದೆಯಂತಲ್ಲ, ಹಲವಾರು ಖಾಸಗೀ ಸಂಸ್ಥೆಗಳೂ ಸಹ ನಷ್ಟ ಅನುಭವಿಸಿ ಮುಳುಗಿಹೋಗಿರುವ ಉದಾಹರಣೆಗಳಿವೆ. ಸಂಸ್ಥಾಪಕ ಮಾಡಿದ ತಪ್ಪಿನಿಂದಾಗಿ ‘ಯಸ್ ಬ್ಯಾಂಕ್’ ಎರಡು ತಿಂಗಳುಗಳ ಕಾಲ ಕಷ್ಟದಲ್ಲಿತ್ತು.
ಹೆಸರಾಂತ ಉದ್ಯಮಿ ‘ಸಿzರ್ಥ’ರ ‘ಕಾಫಿ ಡೇ’ಯ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ? ಸಾಲದ ಬಾಧೆಯನ್ನು ತಡೆಯಲಾಗದೆ ಆತ್ಮಹತ್ಯೆಯನ್ನೇ ಮಾಡಿಕೊಂಡರು. ವಿಜಯ್ ಮಲ್ಯ ಸಾಲ ತೀರಿಸಲಾಗದೆ ದೇಶಬಿಟ್ಟು ಹೋಗಿಬಿಟ್ಟ. ಇಷ್ಟೆ ಸಮಸ್ಯೆಯಿದ್ದರೂ ಸಹ ಖಾಸಗೀ ಸಂಸ್ಥೆಗಳಲ್ಲಿ ಸರಕಾರಿ ಸಂಸ್ಥೆಗಳಿಗಿಂತಲೂ ಹೆಚ್ಚಿನ ಹೊಣೆಗಾರಿಕೆ ಇರುವುದಂತೂ ನಿಜ ಸಂಗತಿ. ಖಾಸಗೀಯವರು ಹೂಡಿದ ತಮ್ಮ ಬಂಡವಾಳಕ್ಕೆ ಪ್ರತಿನಿತ್ಯವೂ ಆದಾಯವನ್ನು ನಿರೀಕ್ಷಿಸಿರುತ್ತಾರೆ. ಸಂಸ್ಥೆಯ ಪ್ರತಿಯೊಂದು ಖರ್ಚಿನ ಮೇಲೂ ನಿಗವಿಟ್ಟಿರುತ್ತಾರೆ. ಸಂಸ್ಥೆಯಲ್ಲಿ ಮಾರಾಟ ಮಾಡಬೇಕಾದಂಥ ವಸ್ತುಗಳ ಮೇಲಂತೂ ಅವರ ಕಣ್ಣು ಸದಾ ಇದ್ದೇ ಇರುತ್ತದೆ.
ಸರಕಾರಿ ಸಂಸ್ಥೆಗಳು ಇಲ್ಲಿಯವರೆಗೂ ಈ ಮಟ್ಟದ ಹೊಣೆಗಾರಿಕೆಯನ್ನು ಹೊಂದಿದ್ದರೆ ಗ್ರಾಹಕರಾಗಿ ನಾವ್ಯಾಕೆ ‘ಏರ್ ಇಂಡಿಯಾ’ ವಿಮಾನವನ್ನು ಹತ್ತುವುದಿಲ್ಲ? ‘’ ಸಿಮ್ ಕಾರ್ಡ್ ಯಾಕೆ ತೆಗೆದುಕೊಳ್ಳುವುದಿಲ್ಲ? ‘’ ನಿರ್ಮಿತ ‘ ’ಗಳನ್ಯಾಕೆ ಬಳಸಿಕೊಳ್ಳುವುದಿಲ್ಲ? ‘ತೇಜಸ್’ ಯುದ್ಧ ವಿಮಾನವನ್ನು ನಿರ್ಮಾಣ ಮಾಡಲು ‘ಎಚ್.ಎ.ಎಲ್‌’ ಯಾಕಿಷ್ಟು ಸಮಯ ತೆಗೆದುಕೊಂಡಿತು? ಖಾಸಗೀಕರಣದಿಂದ ಹೆಚ್ಚಿನ ಸಮಸ್ಯೆಯನ್ನು ಎದುರಿಸುವವರು ಕೆಂಪು ಬಣ್ಣದ ಬಾವುಟ ಹಿಡಿದು ಪ್ರತಿಭಟನೆ ಮಾಡುವ ಕಮ್ಯುನಿಸ್ಟರು, ಖಾಸಗೀ ಸಂಸ್ಥೆಗಳ ಬಳಿ ಇವರ ಆಟ ಹೆಚ್ಚು ನಡೆಯುವುದಿಲ್ಲ.
ಅಲ್ಲಿನ ನಿಯಮಾವಳಿಯನುಸಾರ ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು. ಅಲ್ಲಿ ಇವರಿಗೆ ಸುಖಾಸುಮ್ಮನೆ ಪ್ರತಿಭಟನೆ ಮಾಡಲು ಆಗುವುದಿಲ್ಲ. ಕಾರ್ಖಾನೆಯ ಯಜಮಾನನ ಲಾಭಾಂಶದ ಬಗ್ಗೆ ಮಾತನಾಡುವ ಕಮ್ಯೂನಿಸ್ಟರು ಆತನ ನಷ್ಟದ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ. ‘ಕಾರ್ಲ್ ಮಾರ್ಕ್ಸ್’, ‘ಲೆನಿನ್’, ‘ಮಾವೋ’ ಯಾರೊಬ್ಬನೂ ತಮ್ಮ ನೀತಿಗಳಲ್ಲಿ ಕಾರ್ಖಾನೆ ಮಾಲೀಕನ ನಷ್ಟದ ಬಗ್ಗೆ ಮಾತನಾಡುವುದಿಲ್ಲ. ಹತ್ತರಲ್ಲಿ ಆರು ಸಂಸ್ಥೆಗಳು ನಷ್ಟದಲ್ಲಿರುತ್ತವೆ.
ಆ ಸಂಸ್ಥೆಯ ಪರವಾಗಿ ನಿಂತಿರುವ ಒಂದೇ ಒಂದು ಕಮ್ಯುನಿಸ್ಟ್ ಸಂಘಟನೆಯನ್ನು ನಾನಂತೂ ನೋಡಿಲ್ಲ. ‘ಕಾಫಿ ಡೇ’ನಸಿzರ್ಥ ಆತ್ಮಹತ್ಯೆ ಮಾಡಿಕೊಂಡ ನಂತರ ಕೆಂಪು ಬಾವುಟ ಹಿಡಿದ ಸಂಘಟನೆಗಳು ಒಮ್ಮೆಯಾದರೂ ಶ್ರದ್ಧಾಂಜಲಿ ಸಲ್ಲಿಸಲಿಲ್ಲ.ಸಾವಿರಾರು ಕಾರ್ಮಿಕರಿಗೆ ಉದ್ಯೋಗ ನೀಡಿದ ಸಂಸ್ಥೆಯ ಬಗ್ಗೆ ಕೊಂಚವೂ ಕಾಳಜಿಯಿಲ್ಲದ ಸಂಘಟನೆಗಳು ಲಾಭಂಶಕ್ಕಾಗಿ ಮಾತ್ರ ಬೀದಿಗಿಳಿಯುತ್ತವೆ. ಸರಕಾರಿ ಸೌಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದರಿಂದ ಸರಕಾರದ ಬೊಕ್ಕಸಕ್ಕೆ ಹಣವು ಒದಗಿ ಬರುವುದರ ಜತೆಗೆ, ಸರಕಾರವು ಬ್ಯಾಂಕುಗಳಲ್ಲಿ ತೆಗೆದುಕೊಂಡಿರುವ ಸಾಲದ ಹೊರೆಯು ಕಡಿಮೆ ಯಾಗುತ್ತದೆ.
ಯಾವುದೊ ವಿದೇಶಿ ಹಣವು ಹೂಡಿಕೆಯಾಗಿ ಸರಕಾರಕ್ಕೆ ಒಳ್ಳೆಯದಾಗುವುದಾದರೆ ಆಗಲಿಬಿಡಿ, ಅದರಲ್ಲಿ ತಪ್ಪೇನಿದೆ? ಇಷ್ಟು ವರ್ಷಗಳಿಂದ ಜಾರಿಯಲ್ಲಿರುವ ಕಾನೂನುಗಳಡಿಯಲ್ಲಿ ಈ ಸಂಸ್ಥೆಗಳನ್ನು ಸರಿದಾರಿಗೆ ತರಲಾಗುತ್ತಿಲ್ಲವೆಂದರೆ ಖಾಸಗಿಯವರು ತರಲು ಮುಂದೆ ಬಂದರೆ ತಪ್ಪೇನಿದೆ? ಪ್ರತಿನಿತ್ಯದ ಸೇವೆಗಳಿಗೆ ಸಾರ್ವಜನಿಕರೇ ಹೆಚ್ಚಾಗಿ ಖಾಸಗಿ ಸಂಸ್ಥೆಗಳ ಮೊರೆ ಹೋಗ ಲಿಚ್ಚಿಸುವಾಗ ಸರಕಾರಿ ಸಂಸ್ಥೆಗಳ ಖಾಸಗೀಕರಣ ತಪ್ಪೇನು? ಕಳೆದ ಹತ್ತು ವರ್ಷಗಳಿಂದ ‘ವಿಮೆ’ಯದಂಥ ಖಾಸಗೀಕರಣದ ಸುಧಾರಣೆಯನ್ನು ಹೇಗೆ ತಾನೆ ಮರೆಯಲು ಸಾಧ್ಯ? ಕೇವಲ ‘ಎಲ.ಐ.ಸಿ’ಯನ್ನೇ ನಂಬಿಕೊಂಡಿದ್ದಂಥ ಜನ ಇಂದು ನೂರಾರು ವಿಮಾ ಕಂಪನಿಯ ಮೊರೆ ಹೋಗಿದ್ದಾರೆ.
ಖಾಸಗೀ ಕಂಪನಿಗಳು ನೀಡುವ ಬಂಡವಾಳದ ಮೇಲಿನ ಆದಾಯ ಹಲವು ಕಡೆ ‘ಎಲ್‌.ಐ.ಸಿ’ಗಿಂತಲೂ ಹೆಚ್ಚಿದೆ. ಆಸ್ಪತ್ರೆಗಳಿಗೆ ಅಡ್ಮಿಟ್ ಆದ ಕೆಲವೇ ಕೆಲವು ನಿಮಿಷಗಳಲ್ಲಿ ಖರ್ಚನ್ನು ನೋಡಿಕೊಳ್ಳಲು ಒಪ್ಪಿಗೆ ನೀಡುವ ಹಲವು ‘ವೈದ್ಯಕೀಯ ವಿಮೆ’ ಸಂಸ್ಥೆಗಳಿವೆ. ಒಂದು ಸಾವಿರ ರುಪಾಯಿ ‘ಪ್ರೀಮಿಯಂ’ ಹಣದಲ್ಲಿ ಲಕ್ಷ ವೆಚ್ಚದ ವೈದ್ಯಕೀಯ ವಿಮೆ ನೀಡುವ ಖಾಸಗೀ ಕಂಪನಿ ಗಳಿವೆ. ಒಂದು ಕಾಲದಲ್ಲಿ ಅಚಾನಕ್ಕಾಗಿ ಬರುವ ವೈದ್ಯಕೀಯ ವೆಚ್ಚಗಳಿಗಾಗಿ ಮನೆಯಲ್ಲಿದ್ದಂಥ ಚಿನ್ನವನ್ನು ಅಡವಿಡುವ ಪರಿಸ್ಥಿತಿ  ಎದುರಾಗುತ್ತಿತ್ತು. ಆ ಕಾಲದಲ್ಲಿ ಚಿನ್ನವೆಂಬುದು ‘ಸಾಮಾಜಿಕ ಭದ್ರತೆ’ಯಾಗಿತ್ತು.
ಆದರೀಗ ಕಡಿಮೆ ದರದಲ್ಲಿ ‘ವೈದ್ಯಕೀಯ ವಿಮೆ’ಗಳು ಬಂದಮೇಲೆ ಚಿನ್ನವು ಸಾಮಾಜಿಕ ಭದ್ರತೆಯಾಗಿ ಉಳಿದಿಲ್ಲ. ಹಲವು ಕಾರ್ಖಾನೆಗಳು, ಕಚೇರಿಗಳು ‘’’ನಿಂದ ಹೊರಗೆ ಖಾಸಗಿ ವಿಮೆಯ ಮೂಲಕ ತಮ್ಮ ಉದ್ಯೋಗಿಗಳ ವೈದ್ಯಕೀಯ ವೆಚ್ಚವನ್ನು ನೋಡಿಕೊಳ್ಳುತ್ತಿದೆ. ವೈದ್ಯಕೀಯ ವಿಭಾಗದಲ್ಲಿ ಖಾಸಗೀಕರಣವಾಗಿಲ್ಲದಿದ್ದರೆ ಇಂದಿಗೂ ನಾವು ‘ವಿಕ್ಟೋರಿಯಾ’ ಆಸ್ಪತ್ರೆ, ‘ಬೌರಿಂಗ್ ಆಸ್ಪತ್ರೆ’, ‘ಸಂಜಯ್ ಗಾಂಧಿ’ ಆಸ್ಪತ್ರೆಯನ್ನೇ ನಂಬಿಕೊಳ್ಳಬೇಕಿತ್ತು. ಇಂದಿಗೂ ಇಲ್ಲಿಗೆ ಚಿಕಿತ್ಸೆಗೆಂದು ತೆರಳುವ ಕೋಟ್ಯಂತರ ಮಂದಿ ಬಡವರಿದ್ದಾರೆ.
ಅವರ ಜತೆಗೆ ಇತರರೂ ಸಹ ಸೇರಿಕೊಂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ನೀವೇ ಊಹಿಸಿ ನೋಡಿ. ಸರಕಾರಗಳೂ ಅಷ್ಟೇ ಹಲವು ಖಾಸಗಿ ವಿಮಾ ಕಂಪನಿಗಳ ವಿಮೆಯನ್ನು ಬಳಸಿಕೊಂಡು ತಮ್ಮ ಉದ್ಯೋಗಿಗಳನ್ನು ನೋಡಿಕೊಳ್ಳುತ್ತಿದೆ. ‘ಆಯುಷ್ಮಾನ್ ಭಾರತ್’ ಯೋಜನೆ ಅಡಿಯಲ್ಲಿ ಕೋಟ್ಯಂತರ ಜನರ ವಿಮೆಯನ್ನು ಮಾಡಲು ಸಹಕಾರಿಯಾದದ್ದು ಖಾಸಗೀಕರಣವಲ್ಲದೇ ಮತ್ತಿನ್ನೇನು? ಒಂದು ಕಾಲದಲ್ಲಿ ಹೆರಿಗೆ ಮಾಡಿಸಲು ಕೇವಲ ಸರಕಾರಿ ಆಸ್ಪತ್ರೆಗಳನ್ನು ನಂಬಿಕೊಂಡಿದ್ದವರಿಗೆ ಇಂದು ‘ ’ ರೀತಿಯ ಹೈಟೆಕ್ ಹೆರಿಗೆ ಆಸ್ಪತ್ರೆಗಳು ಬರಲು ಕಾರಣವೇನು? ಮತ್ತದೇ ಖಾಸಗೀಕರಣ ಹಾಗೂ ಜಾಗತಿಕ ಬಂಡವಾಳ ಹೂಡಿಕೆ. ‘ಖಾಸಗೀಕರಣ’ವೆಂಬ ಗುಮ್ಮವನ್ನು ತೋರಿಸಿ ಇಡೀ ದೇಶವೇ ಮಾರಾಟವಾಗುತ್ತದೆ.
ಸಾರ್ವಜನಿಕರು ಬೀದಿಗೆ ಬಂದು ಬೀಳುತ್ತಾರೆಂದು ಹೇಳುವ ಮೂಲಕ ಇಲ್ಲಸಲ್ಲದ ಸುಳ್ಳು ಹೇಳಲಾಗುತ್ತಿದೆ.೧೯೯೧ರಿಂದ ಇಲ್ಲಿಯವರೆಗೂ ಅದೆಷ್ಟು ದೇಶದ ಅಸ್ತಿ ಮಾರಾಟ ವಾಯಿತು? ಅದೆಷ್ಟು ಸಾರ್ವಜನಿಕರು ಬೀದಿಗೆ ಬಂದರು? ಯಾರ ಬಳಿಯೂ ಉತ್ತರವಿಲ್ಲ. ಒಂದು ಕಾಲವಿತ್ತು ಸರಕಾರಿ ನೌಕರಿಯಲ್ಲಿರುವ ಹುಡುಗನಿಗೆ ಮಾತ್ರ ತಮ್ಮ ಮಗಳನ್ನು ಕೊಡಲು, ಹುಡುಗಿಯ ಅಪ್ಪ ಅಮ್ಮ ನಿರ್ಧರಿಸುತ್ತಿದ್ದರು. ಆದರೀಗ ಎಲ್ಲವೂ ಉಲ್ಟಾ ಆಗಿಹೋಗಿದೆ.
ಸರಕಾರಿ ಸಂಸ್ಥೆಯಲ್ಲಿ ನೀಡುತ್ತಿರುವ ಸವಲತ್ತುಗಳಿಗಿಂತಲೂ ಹೆಚ್ಚಿನ ಸವಲತ್ತು ಗಳನ್ನು ಖಾಸಗಿ ಸಂಸ್ಥೆಗಳು ನೀಡುತ್ತಿವೆ. ಅಂಬಾಸೆಡರ್ ಕಾರಿನ ಜಾಗದಲ್ಲಿ ಇಂದು ‘” ’ ‘’’ ಕಾರುಗಳು ಓಡಾಡುತ್ತಿವೆ, ಕೈ ತಿರುಗಿಸಿ ಕರೆ ಮಾಡುತ್ತಿದ್ದಂಥ ಕೆಂಪು ಬಣ್ಣದ ಟೆಲಿಫೋನ್ ಜಾಗದಲ್ಲಿ ‘ಐ ಫೋನ್’ಗಳು ಬಂದಿವೆ. ‘ಎಚ್.ಎಂ.ಟಿ’ ವಾಚುಗಳ ಜಾಗದಲ್ಲಿ ‘ರಾಡೋ’ ವಾಚುಗಳು ಬಂದಿವೆ.
ಬೆಂಗಳೂರಿನಲ್ಲಿ ನೋಡ ನೋಡುತ್ತಲೇ ಒಳ ರಾಜಕೀಯದಿಂದ ಬಾಗಿಲು ಮುಚ್ಚಿದ ‘ಎಚ್.ಎಂ.ಟಿ’, ಎನ್.ಜಿ.ಈ.ಎಫ್, ಐ.ಟಿ.ಐ, ಬಿನ್ನಿ ಮಿಲ್ ಸಂಸ್ಥೆಗಳು ಬಹಳಷ್ಟು ಪಾಠ ಕಲಿಸಿವೆ. ಸರಕಾರಿ ಸಂಸ್ಥೆಯಲ್ಲಿನ ರಾಜಕೀಯಗಳು, ಒಳಜಗಳಗಳು, ಪ್ರಯೋಜನ ವಿಲ್ಲದ ಖರ್ಚುಗಳು, ಕೆಲಸಗಾರರು ಮಾಡುವ ಕೆಲಸಕ್ಕೆ ಇಲ್ಲದ ಸರಿಯಾದ ಹೊಣೆಗಾರಿಕೆ ಇವೆಲ್ಲವೂ ಎಂದಿಗೂ ಸರಿ ಯಾಗುವದಿಲ್ಲವೆಂದು ತಿಳಿದಾಗ ಖಾಸಗೀಕರಣ ಅನಿವಾರ್ಯವಾಗಿ ಮಾಡಲೇ ಬೇಕಾಗುತ್ತದೆ. ಇದರ ನಡುವೆ ಮೀಸಲಾತಿ ಯನ್ನು ಬಳಸಿಕೊಂಡು ಸರಕಾರಿ ಸಂಸ್ಥೆಗಳಲ್ಲಿ ನಡೆಸುವ ಲಾಭಿಯಿಂದ ಲಕ್ಷಾಂತರ ಪ್ರತಿಭಾನ್ವಿತ ವಿದ್ಯಾರ್ಥಿಗಳು ಒಳ್ಳೆಯ ಕೆಲಸವಿಲ್ಲದೆ ಜೀವನ ನಡೆಸ ಲಾಗುತ್ತಿಲ್ಲವೆಂಬ ಅಂಶ ಎಲ್ಲರಿಗೂ ತಿಳಿದಿದೆ.
ಖಾಸಗಿ ಸಂಸ್ಥೆ ಗಳಲ್ಲಿ ಮೀಸಲಾತಿಯ ಬದಲು ಪ್ರತಿಭೆಗೆ ಅವಕಾಶಗಳು ಹೆಚ್ಚಿರುವುದರಿಂದ ಮೀಸಲಾತಿಯ ಲಾಭಿಯೂ ಕಡಿಮೆ ಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಾನು ಆಗಲೇ ಹೇಳಿದ ಹಾಗೆ ಕಣ್ಣಿಗೆ ಕಾಣದ ‘ಖಾಸಗೀಕರಣ’ವೆಂಬ ಗುಮ್ಮವನ್ನು ಸಾರ್ವಜನಿಕರಿಗೆ ತೋರಿಸಿ ಕಮ್ಯುನಿಸ್ಟರು ತಮ್ಮ ಬೆಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ.