ಪಿಚ್‌ ಅಭೀ ಬಾಕೀ ಹೈ !!
ತುಂಟರಗಾಳಿ
ಹರಿ ಪರಾಕ್‌
ಸಿನಿಗನ್ನಡಇತ್ತೀಚೆಗೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗಿರುವ ದೃಶ್ಯಂ 2 ಚಿತ್ರಕ್ಕೆ ಅತ್ಯದ್ಭುತ ಹೊಗಳಿಕೆ ಸಿಗುತ್ತಿದೆ. ಅದರಲ್ಲೂ ಸಿನಿಮಾ ಕ್ಲೆ ಮ್ಯಾಕ್ಸ್ ಮೈ ನವಿರೇಳಿಸುತ್ತದೆ.
ಊಹಿಸಿಕೊಳ್ಳೋಕೂ ಆಗಲ್ಲ ಎಂದೆ ಅನೇಕರು ಈ ಚಿತ್ರದ ಬಗ್ಗೆ ಹೇಳುತ್ತಿದ್ದಾರೆ. ಕೆಲವರು ಇದು ದೃಶ್ಯಂ ಮೊದಲ ಭಾಗವನ್ನು ಮೀರಿಸುತ್ತದೆ ಎಂದೆಲ್ಲ ಹೇಳುತ್ತಿರೋದನ್ನು ನೋಡಿ ನೀವು ಈ ಸಿನಿಮಾ ನೋಡಿದರೆ ನಿಮಗೆ ನಿರಾಶೆ ಖಂಡಿತ. ಎಲ್ಲರೂ ಹೊಗಳುತ್ತಿರುವ ಈ ಚಿತ್ರದ ಕ್ಲೆ ಮ್ಯಾಕ್ಸ್ ಕಾನ್ಸೆಪ್ಟ್ ಅನ್ನು ಅನೇಕ ಹಳೆಯ ಕನ್ನಡ ಚಿತ್ರಗಳ ನಾವು ನೋಡಿದ್ದೇವೆ.
ದೇವಸ್ಥಾನದ ಮೂಲ ವಿಗ್ರಹ ಕದ್ದು ಅಲ್ಲಿ ಡಮ್ಮಿ ವಿಗ್ರಹ ಇಡೋದು, ಬಂಗಾರದ ಆಭರಣ ಕದ್ದು ಅಲ್ಲಿ ಉಮಾ ಗೋಲ್ಡ್ ಇಡೋದು, ಡೈಮಂಡ್ಸ್ ಕದ್ದು ಅಲ್ಲಿನ ಗಾಜಿನ ಡ್ಯೂಪ್ಲಿಕೇಟ್ ಇಡೋದು, ಹೀಗೆ. ಹಾಗಾಗಿ ಈ ಕ್ಲೆ ಮ್ಯಾಕ್ಸ್‌ಗೆ ಯಾಕೆ ಜನ ಇಷ್ಟು ಫಿದಾ ಆಗಿದ್ದಾರೆ ಎಂದು ಆಶ್ಚರ್ಯ ಆದ್ರೆ ಅಚ್ಚರಿ ಇಲ್ಲ. ಇನ್ನು, ಅಲ್ಲಿರುವ ಮೂಳೆ ಸತ್ತ ಹುಡುಗನದ್ದಲ್ಲ ಎನ್ನುವುದನ್ನು ಪ್ರೂವ್ ಮಾಡೋಕೆ ಅಂತ ನಾಯಕ ಅವನದ್ದೇ ವಯಸ್ಸಿನ ತಲೆಗೆ ಪೆಟ್ಟು ಬಿದ್ದ ಹುಡುಗನದ್ದೇ ಅಸ್ಥಿಪಂಜರ ಹುಡುಕುವ ಅವಶ್ಯಕತೆ ಏನಿತ್ತು. ಅದು ಬೇರೆಯವರದ್ದು ಎಂದು ಪ್ರೂವ್ ಮಾಡೋದಷ್ಟೇ ನಾಯಕನ ಕೆಲಸ.
ಹಾಗಾಗಿ ಅಲ್ಲಿ ಯಾರ ಅಸ್ಥಿಪಂಜರವನ್ನಾದರೂ ಇಡಬಹುದಿತ್ತು ಎಂಬ ಪ್ರಶ್ನೆಗಳೂ ಸಹಜ. ದೃಶ್ಯಂ ಚಿತ್ರದ ಕ್ಲೆ ಮ್ಯಾಕ್ಸ್‌ನಲ್ಲಿ ನಾಯಕ ಶವವನ್ನು ಪೊಲೀಸ್ ಸ್ಟೇಷನ್ ಕೆಳಗೇ ಹೂತಿಡುವ ಅಂಶ ಎಲ್ಲರನ್ನೂ ದಂಗುಬಡಿಸಿತ್ತು. ಆದರೆ ಅಂಥ ಸೀಕ್ರೆಟ್ ಅನ್ನು, ಯಾರೋ ನೋಡಿದ್ದ, ಅವನು ಸಾಕ್ಷಿ ಹೇಳಿದ ಎಂದು ಇಲ್ಲಿ ಸರಳವಾಗಿ ತೋರಿಸಲಾಗಿದೆ. ಹಾಗಾದರೆ ದೃಶ್ಯಂ 2 ನಲ್ಲಿ ನಾಯಕಮಾಡುವ ಬೋನ್ ರಿಪ್ಲೇಸ್ಮೆಂಟ್ ಕೆಲಸವನ್ನೂ ಇನ್ಯಾರೋ ನೋಡಿರುತ್ತಾರೆ. ಅದನ್ನೇ ಇಟ್ಕೊಂಡು ದೃಶ್ಯಂ 3 ಕೂಡಾ ಮಾಡ ಬಹುದಲ್ಲವೇ ಎನಿಸಬಹುದು.
ಇದರ ಜತೆಗೆ ಅನವಶ್ಯಕವಾದ ಸಾಕ್ಷಿ ಹೇಳುವವನ ಪರ್ಸನಲ್ ಕಥೆ ಎಲ್ಲ ಸೇರಿ, ಪರವಾಗಿಲ್ಲ, ಇದೊಂದು ಡೀಸೆಂಟ್ ಸೀಕ್ವೆಲ್ಎನಿಸಬಹುದೇ ಹೊರತು ಅದ್ಭುತ ಎನಿಸುವುದು ಕಷ್ಟ.
ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಇಬ್ಬರೂ ವಿಮಾನದಲ್ಲಿ ಕೂತಿದ್ದರು. ವಿಮಾನ ಮುಂಬೈ ಇಂದ ದೆಹಲಿಗೆ ಹೋಗ್ತಾ ಇತ್ತು. ಸ್ವಲ್ಪ ಹೊತ್ತಿನ ಪ್ರಯಾಣದ ನಂತರ ಮಧ್ಯದಲ್ಲಿ ಏನೋ ತೊಂದರೆ ಆಗಿದೆ ಅಂತ ಗಗನಸಖಿ ಕಡೆಯಿಂದ ಅನೌನ್ಸ್‌ಮೆಂಟ್ ಬಂತು. ಈ ಪ್ಲೇನ್ ಮುಂದೆ ಹೋಗಲ್ಲ ಅಂತ ಜೈಪುರದಲ್ಲಿ ಪ್ಲೇನ್ ಅನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಯಿತು.
ನಿಮ್ಮನ್ನು ಇನ್ನೊಂದು ಪ್ಲೇನ್‌ಗೆ ಶಿಫ್ಟ್ ಮಾಡಲಾಗುತ್ತದೆ, ಅಲ್ಲಿಯವರೆಗೂ ಕೆಳಗಿಳಿದು ಬಂದು ನಿಂತ್ಕೊಳಿ ಅಂತ ಎಲ್ಲ ಪ್ರಯಾಣಿಕರಿಗೂ ಹೇಳಲಾಯಿತು. ಎಲ್ಲರೂ ಕೆಳಗಿಳಿದು ಬಂದು ನಿಂತರು. ಆದರೆ ಒಬ್ಬ ಅಜ್ಜಿ ಮಾತ್ರ ಅ ಕೂತಿದ್ದಳು. ಆಕೆ ಕುರುಡಿ. ತನಗೆ ದಾರಿ ತೋರಿಸಲಿಕ್ಕೆ ಅಂತ ಅಜ್ಜಿ ಯಾವಾಗಲೂ ಒಂದು ನಾಯಿಯನ್ನು ಕರೆದುಕೊಂಡು ಓಡಾಡುತ್ತಿದ್ದಳು.ಅದು ಆಕೆಯ ಕೆಳಗೆ ಕೂತಿತ್ತು. ಅಜ್ಜಿಯನ್ನು ನೋಡಿದ ಪೈಲೆಟ್ ಯಾಕೆ ನೀವು ಕೆಳಗೆ ಇಳಿದು ಸ್ವಲ್ಪ ರಿಲ್ಯಾಕ್ಸ್ ಮಾಡ ಬಹುದಲ್ವಾ ಅಂತ ಕೇಳಿದ. ಅದಕ್ಕೆ ಅಜ್ಜಿ ಇಲ್ಲಪ್ಪ ನಂಗೆ ಕಣ್ಣು ಕಾಣಿಸೊಲ್ಲ.
ಮುಂದಿನ ಪ್ರಯಾಣಕ್ಕೆ ಅರೇಂಜ್ ಮೆಂಟ್‌ವರೆಗೂ ನಾನು ಇಲ್ಲೇ ಕೂತಿರ್ತೀನಿ. ನನ್ನ ನಾಯಿಯನ್ನ ಸ್ವಲ್ಪ ಓಡಾಡಿಸಿಕೊಂಡು ಬರ್ತೀಯಾ ಅಂತ ಕೇಳಿತು. ಖಂಡಿತಾ ಅಂತ ಪೈಲೆಟ್ ದಾರಿ ತೋರಿಸುವ ನಾಯಿಯನ್ನು ಕರೆದುಕೊಂಡು ಪ್ಲೇನ್‌ನಿಂದ ಇಳಿಯುತ್ತಿದ್ದ. ಅವನು ಕಣ್ಣಿಗೆ ಕಪ್ಪು ಕನ್ನಡಕ ಬೇರೆ ಹಾಕಿದ್ದ. ಅವನು ಇಳಿದು ಬರುತ್ತಿದ್ದುದನ್ನು ನೋಡಿದ ಕೆಳಗೆ ನಿಂತಿದ್ದ ಖೇಮು ಒಮ್ಮೆಲೇ ಗಾಬರಿಯಾಗಿ ಕೂಗಿದ, ಅಯ್ಯೋ, ಅಲ್ ನೋಡೇ, ಬರೀ ಪ್ಲೇನ್ ಅಲ್ಲ, ಈ ಏರ್ ಲೈನ್ಸ್‌ನೇ ಚೇಂಜ್ ಮಾಡ್ಬೇಕು. ಬಡ್ಡಿಮಕ್ಳು, ಕುರುಡರನ್ನೆ ಪೈಲೆಟ್ ಮಾಡವ್ರೆ.
ಲೈನ್ ಮ್ಯಾನ್ಹಳೇ ಕಾಲದ ಹಳ್ಳಿ ಶೈಲಿಯಲ್ಲಿ ಊಟ ಮಾಡೋ ಪದ್ಧತಿತಾಟ್ ಪ್ರೊಸೆಸ್ದುಂಬಿ ಜೇನಿಗೆ ಹೇಳಿದ್ದೇನು?ನಾನು ನಿನ್ನ ಮನದುಂಬಿ ಪ್ರೀತಿಸ್ತೀನಿಸ್ಟೇಡಿಯಂಗೆ ಮೋದಿ ಹೆಸರಿಟ್ರಲ್ಲ, ಈ ವಿಷ್ಯದ ಬಗ್ಗೆ ನಿಮ್ಮ ಸ್ಟ್ಯಾಂಡ್ ಏನು?ಅಮಿತ್ ಶಾ – ಸ್ಟೇಡಿಯಂನ ಯಾವ ಸ್ಟ್ಯಾಂಡ್‌ಗೆ ನನ್ನ ಹೆಸರಿಡಬೇಕು ಅಂತ ಇನ್ನೂ ಡಿಸೈಡ್ ಮಾಡಿಲ್ಲ.ಎಲ್ಲವನ್ನೂ ಪ್ರಶ್ನೆ ಮಾಡುವವರ ಗುಂಪುಆಸ್ಕ್ ಪೋರ್ಸ್ಧ್ರುವ ಸರ್ಜಾ ಓದುಗರ ಪ್ರಶ್ನೆಗೆ ಉತ್ತರಿಸುವ ಕಾಲಂ ಶುರು ಮಾಡಿದ್ರೆ ಅದರ ಹೆಸರುಉತ್ತರ ಧ್ರುವಡೇಂಜರಸ್ ಆಗಿ ಡ್ರೈವ್ ಮಾಡೋ ಆಂಬುಲೆನ್ಸ್ ಡ್ರೈವರ್‌ಗೆ ಏನಂತ ಬಯ್ಬೇಕು?ಯಾಕೋ ಮಗನೇ, ಇವತ್ ಯಾರೂ ಗಿರಾಕಿ ಸಿಗಲಿಲ್ವಾ?ಪೂರಿಗೆ ಬರೀ ಚಟ್ನಿ ಕೊಟ್ಟಾಗ ಆಗೋ ಬೇಸರದಲ್ಲಿ ಮೂಡುವ ಹಾಡುಏನಾಗಲಿ ಮುಂದೆ ಸಾಗು ನೀಕುರಿ ಮಾಂಸ ತಿಂದು ಹೊಟ್ಟೆ ಬರಿಸಿಕೊಂಡವನುಲ್ಯಾಂಬೋದರಮನುಷ್ಯನ ದೇಹದಲ್ಲಿ ಕೋಪ ಹುಟ್ಟಿಸುವ ಅಂಗಪಿತ್ತ ಜನಕಾಂಗ

ಲೂಸ್ ಟಾಕ್ಅಕ್ಷರ್ ಪಟೇಲ್ (ಕಾಲ್ಪನಿಕ ಸಂದರ್ಶನ)ಏನ್ ಪಟೇಲ್ರೇ, ಅಹಮದಾಬಾದ್ ಟೆಸ್ಟ್‌ನಲ್ಲಿ ಬೋಲರ್‌ಗಳು ಬಾಲ್ ಟರ್ನ್ಮಾಡ್ರೋ ಅಂದ್ರೆ ಮ್ಯಾಚ್ ನೇ ಟರ್ನ್ ಮಾಡಿಬಿಟ್ರ?ಏನ್ ಮಾಡೋದು. ರೂಟ್‌ನಂಥ ಬ್ಯಾಟ್ಸ್‌ಮನ್‌ಗಳು ಬೋಲರ್ ಆಗಿ ಟರ್ನ್ ಆದ್ರು.ಬ್ಯಾಟಿಂಗ್ ಆಡೋಕೆ ಬಂದೋರೆಲ್ಲ ಬೋಲರ್‌ಗಳಿಗೆ ಬ್ಯಾಟ್ಸ್ ಆಫ್ ಟು ಯೂ ಅಂತವಿಕೆಟ್ ಚೆಲ್ಲಿದರೆ ಏನ್ ಮಾಡೋಕಾಗುತ್ತೆ.ಆದ್ರೂ, ಇದು೨ದಿನದ ಒಳಗೇ ಟೆಸ್ಟ್ ಮ್ಯಾಚ್ ಮುಗಿದು ಹೋಯ್ತಲ್ಲ. ಪಾಪ ಬ್ಯಾಟ್ಸ್‌ಮನ್‌ಗಳು ಪಿಚ್‌ನ ಎಷ್ಟು ಬೈಕೊಂಡ್ರೋ ಏನೋ ನೋಡಿ ಇದರಲ್ಲಿ ಪಿಚ್ ದೇನೂ ತಪ್ಪಿಲ್ಲ. ಬ್ಯಾಟ್ಸ್‌ಮನ್‌ಗಳ ಫುಟ್ ವರ್ಕ್ ಸರಿ ಇರಲಿಲ್ಲ ಅಷ್ಟೇ. ಅದೆನೋ ಅಂತಾರಲ್ಲ ಕುಣೀಲಾರದವಳು ನೆಲ ಡೊಂಕು ಅಂದ್ಳಂತೆ ಅಂತ, ಹಂಗಾಯ್ತು ಇದು. ಅಹಮದಾಬಾದ್ ಪಿಚ್ ಸರಿ ಇಲ್ಲ ಅಂತ ಕೆಲವರು ತುಂಬಾ ಟೀಕೆ ಮಾಡ್ತಾ ಇದ್ದಾರಲ್ಲ.
ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?ಅದನ್ನೆ ಕೇಳಿ ಮನಸ್ಸಿಗೆ ಪಿಚ್ಚೆನ್ನಿಸಿತು. ಆದ್ರೆ, ಇಷ್ಟಕ್ಕೇ ಹಿಂಗಂದ್ರೆ ಹೆಂಗೆ. ಮುಂದಿನ ಮ್ಯಾಚ್ ಕೂಡ ಅಲ್ಲೇ ನಡೆಯೋದು. ಪಿಚ್ ಅಭೀ ಬಾಕೀ ಹೈ.
ಸರಿ ನಿಮ್ಮ ಬೋಲಿಂಗ್ ಬಗ್ಗೆ ಏನ್ ಹೇಳ್ತೀರಿ?ಹದಿನೈದು ಸೆಷನ್‌ಗಳಲ್ಲಿ ನಡೆಯಬೇಕಿದ್ದ ಟೆಸ್ಟ್ ಮ್ಯಾಚ್ ಅನ್ನು ಐದೇ ಸೆಷನ್‌ಗಳಲ್ಲಿ ಮುಗಿಸಿದ ಈ ಅಕ್ಷರ್ ಪಟೇಲ್‌ಗೆ ಅರ್ಜುನ ಅಲ್ಲ, ಬಬ್ರುವಾಹನ ಪ್ರಶಸ್ತಿ ಕೊಡಬೇಕು ಸ್ಟೇಡಿಯಂಗೆ ಮೋದಿ ಹೆಸರಿಟ್ಟಿದ್ದಕ್ಕೇ ಆ ಮಟ್ಟದ ಗೆಲುವು ಸಾಧ್ಯವಾಯಿತಾ ಅಂತ?ಸ್ಟೇಡಿಯಂಗೆ ಮೋದಿ ಹೆಸರಿಟ್ರೂ ಕೊನೆಗೂ ಅದು ಪಟೇಲರದ್ದೇ ಅಂತ ಪ್ರೂವ್ ಮಾಡಿದ್ನಲ್ಲ ಈ ಅಕ್ಷರ್ ಪಟೇಲ್‌.