ಚಿತ್ರದುರ್ಗದ ಮುರುಘಾಮಠಕ್ಕೆ ಕಳಂಕ ತರುವ ಹುನ್ನಾರ ?
ವಿರಾಜ್.ಕೆ.ಅಣಜಿ
ನ್ಯೂಸ್ ವೆಬ್‌ಸೈಟ್‌ವೊಂದರ ವಿರುದ್ಧ ಚಿತ್ರದುರ್ಗದ ಮುರುಘಾಮಠವು ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿರುವ ಸುದ್ದಿ ಭಾರಿ ಚರ್ಚೆಗೆ ಒಳಗಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಮುರುಘಾ ಶ್ರೀಗಳ ಪೂರ್ವಾಶ್ರಮದ ಸಹೋದರನ ವಿರುದ್ಧ ದಾಖಲಾದ ಪ್ರಕರಣದ ಬಗ್ಗೆಯೂ ಬಿಸಿ ಬಿಸಿ ಚರ್ಚೆ ನಡೆದವು. ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದ ಹಲವು ಬದಿಗಳ ಚಿತ್ರಣವಿದು.
ಶ್ರೀಮಠದ ಆಸ್ತಿ ಅಕ್ರಮ ಬಳಕೆ ಆರೋಪದಲ್ಲಿ 2021ರ ಫೆಬ್ರವರಿ2ರಂದು ವಿಜಯ್ ಕುಮಾರ್ ಎಸ್.ದುರ್ಗದ್ ಎಂಬುವರುಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಇದೇ21ರಂದು ವಿಚಾರಣೆ ನಡೆಸಿದ್ದ ಹೈ ಕೋರ್ಟ್ ಮುರುಘಾಶರಣರು ಮತ್ತು ಇತರ ಏಳು ಜನರಿಗೆ ನೋಟಿಸ್ ನೀಡಿತ್ತು.
ನೋಟಿಸ್ ನೀಡಿದ್ದ ವಿಚಾರವನ್ನು ವೆಬ್‌ಸೈಟ್‌ನಲ್ಲಿ ‘ಹಣ-ಆಸ್ತಿ ದುರುಪಯೋಗ ಆರೋಪ, ಮುರುಘಾ ಶರಣರಿಗೆ ಹೈಕೋರ್ಟ್ತುರ್ತು ನೋಟಿಸ್’ ಎಂಬ ಅಡಿಬರಹದಲ್ಲಿ ಪ್ರಕಟಿಸಲಾಗಿತ್ತು. ಇದರ ಕುರಿತಾಗಿ ಸ್ಪಷ್ಟನೆ ನೀಡಲು ವೆಬ್‌ಸೈಟ್ ಮೊರೆ ಹೋದರೂಅವರು ಸಂಪರ್ಕಕ್ಕೆ ಸಿಗದಿದ್ದಾಗ, ‘ಅಪರಿಚಿತ ವ್ಯಕ್ತಿ’ ಎಂದು ನಮೂದಿಸಿ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿತ್ತು.
ಒಂದು ಮುಖಇದು ಎಲ್ಲಿಂದ ಆರಂಭ?:ಇದೇ ವೆಬ್‌ಸೈಟ್ ನಲ್ಲಿ ಫೆಬ್ರವರಿ 6 ಮತ್ತು16ರಂದು ಎರಡು ವರದಿಗಳು ಪ್ರಕಟವಾಗಿದ್ದವು. ಮೊದಲ ವರದಿಯಲ್ಲಿ ಮುರುಘಾ ಶರಣರ ಪೂರ್ವಾಶ್ರಮದ ಸಹೋದರ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪದಲ್ಲಿ ಜಾಮೀನಿಗೆ ಅರ್ಜಿ ಹಾಕಿದ್ದು, ಅದನ್ನು ಕೋರ್ಟ್ ವಜಾ ಮಾಡಿದೆ ಎನ್ನಲಾಗಿತ್ತು. ಎರಡನೇ ವರದಿಯಲ್ಲಿ ‘ಸೋದರ ದೊರೆಸ್ವಾಮಿ ವಿರುದ್ಧದ ಆರೋಪ, ಕಡೆಗೂ ಬಾಯ್ಬಿಟ್ಟ ಶರಣರು’ ಎಂಬ ಅಡಿಬರಹ ನೀಡಲಾಗಿತ್ತು.
ಕನ್ನಡದ ಸುದ್ದಿ ವಾಹಿನಿಯೊಂದು ಮಹಿಳೆ ನೀಡಿದ ದೂರಿನ ಬಗ್ಗೆ ಫೆ.7ರಂದು ವರದಿ ಪ್ರಸಾರ ಮಾಡಿತ್ತು. ಅದರಲ್ಲಿ ಆರೋಪಿಯನ್ನು ಮುರುಘಾ ಶ್ರೀಗಳ ಪೂರ್ವಾಶ್ರಮದ ಸಹೋದರ ಎಂಬುದನ್ನೇ ಮುಖ್ಯ ಗುರಿ ಮಾಡಿ ಸುದ್ದಿ ಪ್ರಸಾರ ಮಾಡಲಾಗಿತ್ತು.ಈ ಬಗ್ಗೆ ಹಲವೆಡೆ ಭಾರಿ ಚರ್ಚೆ, ಅಂತೆ ಕಂತೆಗಳು ಕೇಳಲಾರಂಭಿಸಿದ್ದವು. ಕಡೆಗೆ, ಎಲ್ಲದರ ಬಗ್ಗೆ ತಮ್ಮ ನಿಲುವು ಏನು ಎಂಬುದನ್ನು ತಿಳಿಸಲು ಫೆ.15ರಂದು ಶರಣರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು.
ಶರಣರು ಹೇಳಿದ್ದೇನು?:ಆರೋಪಿತ ವ್ಯಕ್ತಿಯು ಮುರುಘಾ ಮಠದಲ್ಲಿ ಕೆಲಸದಲ್ಲಿ ಇದ್ದದ್ದು ನಿಜ. ಆದರೆ, ಅವರ ವಿರುದ್ಧಒಂದಷ್ಟು ದೂರು ಮತ್ತು ಗುಮಾನಿಗಳು ಬಂದ ತಕ್ಷಣವೇ ಅವರನ್ನು ಶ್ರೀಮಠದಿಂದ ಬಿಡುಗಡೆ ಮಾಡಲಾಗಿತ್ತು.
ಕಳೆದ ಐದು ತಿಂಗಳಿನಿಂದ ಶ್ರೀಮಠಕ್ಕೂ ಅವರಿಗೂ ಸಂಬಂಧವಿಲ್ಲ. ಇದರ ಜತೆಗೆ, ಮಠವನ್ನು ರಕ್ತ ಸಂಬಂಧಿಗಳಿಗೆ ನೆರಳು ಮಾಡಿದ್ದಾರೆ ಎಂಬ ಆರೋಪ ದಿಂದಲೂ ಮುಕ್ತರಾಗಲು ಶ್ರೀಮಠದ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದ ತಮ್ಮ ಪೂವಾಶ್ರಮದ ಎಲ್ಲರನ್ನೂ ಹೊರಕಳಿಸಲಾಗಿದೆ. ಈಗ ದಾಖಲಾದ ಪ್ರಕರಣಕ್ಕೂ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ. ನಾವು ಯಾರ ಪರವೂ ನಿಲ್ಲುವುದಿಲ್ಲ. ತಪ್ಪು ಯಾರೇ ಮಾಡಿದ್ದರೂ ನ್ಯಾಯಾಂಗದ ಅನ್ವಯ ಶಿಕ್ಷೆಯಾಗಲಿ. ಶ್ರೀಮಠ ಎಂದಿಗೂ ನ್ಯಾಯ ಪರವಾದ ಹೆಜ್ಜೆ ಇಡುತ್ತಿದ್ದು, ಸರಿ-ತಪ್ಪುಗಳು ವಿಚಾರದಲ್ಲಿ ಯಾವದೇ ರಾಜಿಯಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಇನ್ನೊಂದು ಮುಖ ವರದಿಗಳೇಕೆ ಏಕಪಕ್ಷೀಯ?:ಇಡೀ ಪ್ರಕರಣದಲ್ಲಿ ಕೇವಲ ಆಪಾದಿತ ಮಹಿಳೆ ನೀಡಿದ ದೂರಿನಬಗ್ಗೆಯೇ ಹೆಚ್ಚಿನ ಚರ್ಚೆ ನಡೆದಿದ್ದು ಹಲವು ಗುಮಾನಿಗಳಿಗೆ ಕಾರಣವಾಗಿದೆ. ಇದು ಪೂರ್ವ ನಿಯೋಜಿತ ಕೃತ್ಯ ಎಂಬುದು ಶ್ರೀಮಠದ ಭಕ್ತರ ವಲಯದಲ್ಲಿ ಕೇಳಿಬಂದಿರುವ ಮಾತು. ಆ ಮಹಿಳೆ ದೂರಿನಲ್ಲಿ ತಿಳಿಸುರುವಂತೆ, 2019 ಸೆಪ್ಟೆಂಬರ್‌ನಲ್ಲಿಸೈಬರ್ ಕ್ರೈಂ ಕಾರ್ಯಾಗಾರಕ್ಕೆ ಶ್ರೀಮಠಕ್ಕೆ ಬಂದಾಗ ದೊರೆಸ್ವಾಮಿಯ ಪರಿಚಯವಾಗಿದೆ. ಅಲ್ಲಿಂದ ಆಕೆಯೇ, ದೊರೆಸ್ವಾಮಿ ಅವರಿಂದ ತನಗೆ ಬೇಕಾದ ಎಲ್ಲ ಅನುಕೂಲ ಮಾಡಿಕೊಳ್ಳಲು ತಾನೇ ಸಲುಗೆ ಬೆಳೆಸಿಕೊಂಡಿದ್ದಾರೆ.
ತಾನು ದೆಹಲಿಯ ಕಾಲೇಜಿನಲ್ಲಿ ಉಪನ್ಯಾಸಕಿ ಆಗಿದ್ದು, ತನ್ನನ್ನು ಶ್ರೀಮಠದಲ್ಲೇ ಒಂದು ಉನ್ನತ ಕೆಲಸಕ್ಕೆ ತೆಗೆದುಕೊಳ್ಳಿ ಎಂದುದುಂಬಾಲು ಬಿದ್ದಿದ್ದಾರೆ. ತಾನು ಹನಿಟ್ರ್ಯಾಪ್‌ಗೆ ಒಳಗಾಗುತ್ತಿದ್ದೇನೆ ಎಂಬ ಸುಳಿವನ್ನು ಅರಿಯದೇ ಈಗ ಆರೋಪಿ ಸ್ಥಾನದಲ್ಲಿ ನಿಂತಿರುವುದೇ ದೊರೆಸ್ವಾಮಿಯವರು ಮಾಡಿದ ಅತಿ ದೊಡ್ಡ ತಪ್ಪು!
ಇದು ಹನಿಟ್ರ್ಯಾಪ್ ಅಲ್ಲದಾಗಿದ್ದರೆ, ತಾನು ಮೊಬೈಲ್‌ನಲ್ಲಿ ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಳ್ಳುವ ಅವಶ್ಯ ಏನಿತ್ತು ಎಂಬುದು ಸಹಜವಾಗಿ ಮೂಡುವ ಪ್ರಶ್ನೆ. ಮಾನಸಿಕವಾಗಿ ಮಾತ್ರವೇ ಡಿಪೆಂಡ್ ಆದ ದೊರೆಸ್ವಾಮಿಯ ‘ವೀಕ್‌ನೆಸ್’ ಆಕೆಗೆ ಅಸವಾಗಿದೆ ಎಂಬುದು ಕಾಲ್ ರೆಕಾರ್ಡ್‌ಗಳನ್ನು ಕೇಳಿದ ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ.
ಮನೆ, ಕೆಲಸ, ಒಳ್ಳೆಯ ಸ್ಥಾನಮಾನ ಬೇಕು ಎಂಬುದನ್ನು ಆಕೆ ಮೆಲುದನಿಯಲ್ಲೇ ಮಾತನಾಡಿ, ದೊರೆಸ್ವಾಮಿ ಅವರಿಂದ ‘ಎಸ್, ಆಗಲಿ ಮಾಡಿಕೊಡುತ್ತೇನೆ’ ಎಂದು ಹೇಳಿಸಿಕೊಳ್ಳುತ್ತಿದ್ದರು. ಬರು ಬರುತ್ತ ಆಸೆಗಳು ಹೆಚ್ಚಾಗಿದ್ದು, ತನ್ನ ಬೇಡಿಕೆಗಳನ್ನುಬೇಗ ಆಗಬೇಕು ಎಂದು ದೊರೆಸ್ವಾಮಿ ಅವರಿಗೆ ಫೋನಿನಲ್ಲೇ ಧಮಕಿ ಹಾಕುವ ಮಟ್ಟಕ್ಕೆ ಹೋಗಿದೆ.
ಪ್ರೀತಿಯಿಂದ ಮಾತನಾಡುತ್ತಿದ್ದ ಆ ಮಹಿಳೆ, ಕೊನೆ ಕೊನೆಗೆ ದೊರೆಸ್ವಾಮಿಗೆ ‘ಏನೋ, ಯಾಕೋ?, ಎಂದು ಏಕವಚನ ಬಳಸುವಷ್ಟು ಮಟ್ಟಕ್ಕೆ ಹೋಗಿದೆ. ಒಂದರಲ್ಲಂತೂ ‘ಏನ್ ನಿಮ್ಮಪ್ಪಂದಾ ಮಠ ಅದು, ಚಿಕ್ಕ ಹುಡುಗಿ ಜೀವನದಲ್ಲಿ ಹೀಗೆಲ್ಲ ಮಾಡಿದ್ದೀಯ, ನನ್ನ ಹತ್ರ ಎಲ್ಲ — ಇದೆ. ಎಲ್ಲವನ್ನೂ ನೋಟ್ ಬರೆದಿಟ್ಟು, ಮೀಡಿಯಾಗೆಲ್ಲ ಕಳಿಸಿ, ನಾನು ಸುಸೈಡ್ಮಾಡಿಕೊಳ್ಳುವೆ. ಆಮೇಲೆ, ನಿನ್ನ ಒದ್ದು ಎಳೆದುಕೊಂಡು ಹೋಗುವಂತೆ ಮಾಡುತ್ತೇನೆ’ ಎನ್ನುವ ಮಟ್ಟಿಗೆ ‘ವ್ಯವಹಾರ’ ಬಂದು ನಿಂತಿದೆ.
ಉತ್ತರ ಸಿಗಬೇಕಾದಹಲವು ಪ್ರಶ್ನಗಳು
ಕಾರ್ಯಾಗಾರ ಮುಗಿದ ನಂತರವೂ ಸಂಪರ್ಕವೇಕೆ?ಅಧಿಕಾರಿಗೆ ಅಷ್ಟೊಂದು ಸದರ ಕೊಟ್ಟಿದ್ದೇಕೆ?ಹಣ, ಆಸ್ತಿ, ಸ್ಥಾನಕ್ಕಾಗಿ ಡಿಮ್ಯಾಂಡ್ ಮಾಡಿದ್ದು ಸುಳ್ಳಾ?ಮಠದ ವಿರುದ್ಧ ಇಷ್ಟೆಲ್ಲ ಮಾಡಲು ಆಕೆಯ ಹಿಂದೆ ದೊಡ್ಡ ಗುಂಪಿರಬಹುದೇ?
ಶ್ರೀಗಳ ವಿರೋಧಿಗಳ ಒಳಸಂಚಿಗೆ ಮಹಿಳೆಯೇ ದಾಳವಾದಳೇ?
ಪೊಲೀಸರ ವಶಕ್ಕೆ ದೊರೆಸ್ವಾಮಿ ಪತ್ನಿ ನೀಡಿದ್ದ ದೂರು ಮತ್ತು ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ್ದ ಜಿಲ್ಲಾ ನ್ಯಾಯಾಲಯ ಆ ಮಹಿಳೆ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾ ಮಾಡಿತ್ತು. ಇದರಿಂದಾಗಿ, ದೆಹಲಿಯಲ್ಲಿದ್ದ ಆಕೆಯನ್ನು ಶುಕ್ರವಾರವಷ್ಟೇ ಪೊಲೀಸರು ಬಂಧಿಸಿದ್ದಾರೆ. ಆದರೆ, ಈ ಸುದ್ದಿ ಮಾತ್ರ ಚರ್ಚೆಗೆ, ಮುನ್ನಲೆಗೆ ಬಾರದಿರುವುದು ಏಕೆಎಂಬುದು ಕುತೂಹಲ ಮೂಡಿಸುತ್ತದೆ.
ಶರಣರ ನಿರ್ಧಾರಶ್ರೀಮಠದ ಉನ್ನತ ಸ್ಥಾನದಲ್ಲಿದ್ದು ದೊರೆಸ್ವಾಮಿಯವರು ಹೀಗೊಂದು ಅಪಸವ್ಯ ಮಾಡುತ್ತಿದ್ದಾರೆ ಎಂಬ ಗುಮಾನಿ ಕಿವಿಗೆ ಬೀಳುತ್ತಿದ್ದಂತೆಯೇ ಮುರುಘಾ ಶರಣರು ಅಲರ್ಟ್ ಆಗಿದ್ದಾರೆ. ಮುರುಘಾ ಮಠಕ್ಕೆ ಕಳಂಕ ತಾಗಬಾರದು ಎಂಬಕಾರಣಕ್ಕೆ ಶ್ರೀಮಠದ ಸಿಇಒ ಹುದ್ದೆಯಿಂದ ರಾಜೀನಾಮೆ ಪಡೆವ ಗಟ್ಟಿ ನಿಲುವು ತೆಗೆದುಕೊಂಡಿದ್ದಾರೆ. ಜತೆಗೆ, ತಮ್ಮ ವಿದ್ಯಾಭ್ಯಾಸ ಅರ್ಹತೆಗೆ ಅನುಗುಣವಾಗಿ ವಿದ್ಯಾಪೀಠದ ಅಡಿಯಲ್ಲಿ, ಹಿಂದಿನ ಅಧಿಕಾರಿಗಳ ಕಾಲದಲ್ಲಿ ನೇಮಕವಾಗಿದ್ದ ತಮ್ಮ ಪೂರ್ವಾಶ್ರಮದ ಎಲ್ಲರನ್ನೂ ಶ್ರೀಮಠದ ಸಂಸ್ಥೆಗಳಿಂದ ಹೊರ ಹೋಗಲು ಸೂಚಿಸಿದ್ದರು. ಶ್ರೀಮಠ ಹಾಗೂ ಶ್ರೀಗಳ ಗೌರವಕ್ಕೆ ಧಕ್ಕೆ ಆಗಬಾರದೆಂದು, ಸರಿಸುಮಾರು ೧೦ಕ್ಕೂ ಹೆಚ್ಚು ನೌಕರರು (ಶ್ರೀಗಳ ಪೂರ್ವಾಶ್ರಮದವರು) ರಾಜೀನಾಮೆ ನೀಡಿ ಹೊರಹೋದ ಸಂಪೂರ್ಣ ದಾಖಲೆಗಳಿವೆ.
ನೇರ ನೋಟತನ್ನಲ್ಲಿ ಯಾವುದೇ ಹಿಡನ್ ಅಜೆಂಡಾ ಅಥವಾ ಯಾರದ್ದೋ ಚಿತಾವಣೆ ಇಲ್ಲದೇ ಆ ಮಹಿಳೆ ಇಷ್ಟೆಲ್ಲಾ ಮಾಡಲು ಹೇಗೆ ಸಾಧ್ಯ ಎಂಬುದು ಮಠದ ವಿದ್ಯಮಾನ ತಿಳಿದವರ, ವಿಚಾರವಂತರ ಸರಳ ಪ್ರಶ್ನೆ. ಆಕೆ ದೂರಿನಲ್ಲಿ ಹೇಳಿಕೊಂಡಿರುವಂತೆ, ತನಗೆ ಅತ್ಯಾಚಾರ ಆಗುವವರೆಗೆ ಆಕೆ ಸಲುಗೆ ಕೊಟ್ಟದ್ದೇಕೆ? ಒಂದು ದಿನದ ಕಾರ್ಯಾಗಾರ ಮುಗಿದ ನಂತರವೂ ವರ್ಷವಿಡಿ ದೊರೆಸ್ವಾಮಿಯ ಜತೆ ಒಡನಾಟ ಇಟ್ಟುಕೊಂಡಿದ್ದೇಕೆ? ಒಂದೊಮ್ಮೆ ದೊರೆಸ್ವಾಮಿ ಅವರ ಉದ್ದೇಶ, ಮಾತು ಸರಿಯಿಲ್ಲ ಎನಿಸಿದಾಕ್ಷಣ ಅವರಿಂದ ಅಂತರ ಕಾಯ್ದುಕೊಳ್ಳಲಿಲ್ಲವೇಕೆ? ಅಥವಾ ಮುರುಘಾ ಶರಣರಿಗೆ ದೂರ ನೀಡಲಿಲ್ಲವೇಕೆ? ಕನಿಷ್ಠ ಪಕ್ಷ,ದೊರೆಸ್ವಾಮಿ ಅವರ ಪತ್ನಿಗೇ ಈ ವಿಚಾರ ತಿಳಿಸಿಲಿಲ್ಲವೇಕೆ? ಇದಲ್ಲದಕ್ಕೆ ಉತ್ತರ, ದೊರೆಸ್ವಾಮಿ ತಪ್ಪು ಮಾಡಲಿ ಎಂದೇ ಆಕೆ ಬಯಸಿದ್ದರು. ನಂತರ ಅದನ್ನು ಬಳಸಿಕೊಂಡು ಮಠದ ಮರ್ಯಾದೆ ಪ್ರಶ್ನೆ ಎತ್ತಿ, ಒಂದಷ್ಟು ಕೋಟಿ ಹಣದ ಬೇಡಿಕೆ ಇಡುವ ಉದ್ದೇಶವೇ ಆಕೆಗಿತ್ತು ಎಂಬುದು ಚಿತ್ರದುರ್ಗದಲ್ಲಿ ಆಕೆಯ ಜತೆಗಿದ್ದವರು, ಅರಿತವರು ಮಾಡಿರುವ ಅನಾಲಿಸಿಸ್.
ದೊರೆಸ್ವಾಮಿ ಪತ್ನಿಯ ಒಡಲಾಳಯಾವುದೇ ಮಹಿಳೆಗೆ ತನ್ನ ಪತಿ ಇಂತಹ ವಿಚಾರಗಳಲ್ಲಿ ತಪ್ಪಿತಸ್ಥ ಎನಿಸಿಕೊಳ್ಳುವುದನ್ನು ಸಹಿಸಲಾಗದು. ಆಗ ಪತ್ನಿಯ ನಿರ್ಧಾರಗಳು ಅತ್ಯಂತ ಮಹತ್ವದ್ದು. ತನ್ನ ಪತಿಗಾದ ಮೋಸದ ವಿರುದ್ಧ ಹೋರಾ ಡಲು ದೊರೆಸ್ವಾಮಿ ಅವರ ಪತ್ನಿಚಿತ್ರದುರ್ಗದಲ್ಲಿ ಪ್ರತಿದೂರನ್ನು ದಾಖಲಿಸುವ ಧೈರ್ಯ ತೋರಿದ್ದರು. ತನ್ನ ಗಂಡನಿಗೆ ನಂಬಿಕೆ ದ್ರೋಹ ಮಾಡಲಾಗಿದೆ ಎಂದು ತಮ್ಮ ಮನದಾಳದ ನೋವು ಅರುಹಿಕೊಂಡಿದ್ದರು.