ದೇಣಿಗೆ ವಿಚಾರದಲ್ಲಿ ಚಿಲ್ಲರೆ ರಾಜಕೀಯ
ಅಭಿವ್ಯಕ್ತಿ
ಚಂದ್ರಶೇಖರ ಬೇರಿಕೆ
ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ದೇಶಾದ್ಯಂತ ಅಯೋಧ್ಯೆ ಶ್ರೀರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ವಿಚಾರದಲ್ಲಿ ಅನಿರೀಕ್ಷಿತ ಹೇಳಿಕೆ ನೀಡಿ ಅನಪೇಕ್ಷಿತ ವಿವಾದವನ್ನು ಮೈಮೇಲೆ ಎಳೆದುಕೊಂಡ ರಾಜ್ಯದ ಇಬ್ಬರು ರಾಜಕಾರಣಿಗಳು.
ಮಾಜಿ ಮುಖ್ಯಮಂತ್ರಿಗಳಾದ ಈ ಇಬ್ಬರೂ ರಹಸ್ಯ ಅಜೆಂಡಾ ಸಾಧನೆಗಾಗಿ ಕೈಗೆತ್ತಿಕೊಂಡ ವಿಷಯ ಅವರಿಗೇ ತಿರುಗು ಬಾಣವಾಗುತ್ತದೆ ಎಂಬುದನ್ನು ಗ್ರಹಿಸಲು ಅವರಿಂದ ಸಾಧ್ಯವಾಗಲಿಲ್ಲ ಎಂಬುದೇ ವಿಪರ್ಯಾಸ. ಈ ವಿಚಾರದಲ್ಲಿ ಈ ಇಬ್ಬರೂ ಗಳಿಸಿಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ – ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು.
ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ. ಜರ್ಮನಿಯಲ್ಲಿ ನಾಜಿ ಹುಟ್ಟಿದ ಕಾಲದ ಆರೆಸ್ಸೆಸ್ ಹುಟ್ಟಿದೆ ಎಂದು ಇತಿಹಾಸಜ್ಞರು ಹೇಳುತ್ತಾರೆ. ಆರೆಸ್ಸೆಸ್ ಕೂಡ ಆ ನೀತಿಗಳನ್ನೇ ಜಾರಿ ಮಾಡಿದರೆ ಮುಂದೇನಾಗುತ್ತದೆಂಬ ಆತಂಕವಿದೆ. ರಾಮಮಂದಿರ ಹಿಂದೂಗಳ ಭಕ್ತಿ, ಭಾವನೆಗಳ ಮೂರ್ತ ರೂಪ, ಅದು ಆಗಬೇಕು. ಆದರೆ ಅದೇ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧ. ಇತಿಹಾಸ ಹೇಳುತ್ತಾ ನಿಂತಿರುವ ಪುರಾತನ ದೇಗುಲಗಳ ಹಿಂದೆ ಜನರನ್ನು ವಿಭಜಿಸಿದ ಕತೆಗಳಿಲ್ಲ. ಆ ದೇಗುಲಗಳ ನಿರ್ಮಾಣಕ್ಕಾಗಿ ದೇಣಿಗೆ ಹೆಸರಿನಲ್ಲಿ ಹಣ ಸಂಗ್ರಹಿಸಿದ ಉಲ್ಲೇಖವಿಲ್ಲ.
ದೇವರನ್ನು ರಾಜಕೀಯಕ್ಕಾಗಿ ಉಪಯೋಗಿಸಿಕೊಂಡ ಉಖವಿರುವ ಒಂದೇ ಒಂದು ಶಾಸನ ನಮಗೆ ಸಿಕ್ಕಿಲ್ಲ. ಈಗ ಇಂಥ ಕೃತ್ಯಮಾಡುತ್ತಿರುವವರು ದಯವಿಟ್ಟು ನಿಲ್ಲಿಸಿ’. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕ್ಕಾಗಿ ದೇಣಿಗೆ ಸಂಗ್ರಹಿಸಲು ಕೆಲವರು ಧಮ್ಕಿ ಹಾಕುತ್ತಿದ್ದಾರೆ. ದೇಣಿಗೆ ಸಂಗ್ರಹಣೆ ಯಲ್ಲಿ ಪಾರದರ್ಶಕತೆ ಎಲ್ಲಿದೆ’ ಎಂಬುದು ಎಚ್.ಡಿ. ಕುಮಾರ ಸ್ವಾಮಿಯವರ ಪ್ರಶ್ನೆ.ಎಚ್.ಡಿ. ಕುಮಾರಸ್ವಾಮಿಯವರ ಸಾಮಾಜಿಕ ಕಳಕಳಿ ಮೆಚ್ಚುವಂತದ್ದೇ.
ಆದರೆ ಅದು ಕೆಲವೊಂದು ಸನ್ನಿವೇಶ ಗಳನ್ನು ಅವಲಂಬಿಸಬಾರದು. ಫೆಬ್ರವರಿ 2006ರಿಂದ ಅಕ್ಟೋಬರ್ 2007ರವರೆಗೆ20ತಿಂಗಳ ಅವಧಿಗೆ ಆರ್‌ಎಸ್ ಎಸ್ ಹಿನ್ನೆಲೆಯ ಬಿಜೆಪಿ ನಾಯಕರ ಬೆಂಬಲ ದೊಂದಿಗೆ ಈ ರಾಜ್ಯದ ಮುಖ್ಯಮಂತ್ರಿ ಯಾದಾಗ ಆರ್‌ಎಸ್‌ಎಸ್ ನಾಜಿ ನೀತಿಯನ್ನು ಹೊಂದಿರಲಿಲ್ಲ. ಫೆಬ್ರವರಿ 9, 2021 ರಂದು ನಡೆದ ವಿಧಾನ ಪರಿಷತ್ ಸಭಾಪತಿ ಚುನಾವಣೆ ಯಲ್ಲಿ ಆರ್‌ಎಸ್‌ಎಸ್ ಹಿನ್ನೆಲೆಯ ಬಿಜೆಪಿ ನಾಯಕರ ಬೆಂಬಲ ದೊಂದಿಗೆ ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರುಅವಿರೋಧವಾಗಿ ಸಭಾಪತಿಯಾಗಿ ಆಯ್ಕೆಯಾದಾಗ ಆರ್ ಎಸ್‌ಎಸ್‌ನ ಹುಟ್ಟಿನ ಕಾಲದ ಬಗ್ಗೆ ಗೊತ್ತಿರಲಿಲ್ಲ.
ಬಿಜೆಪಿ ನಾಯಕರು ಕೆಲವೊಂದು ಸಂದರ್ಭದಲ್ಲಿ ಕುಮಾರಸ್ವಾಮಿ ಯವರ ಬೆನ್ನಿಗೆ ನಿಂತಾಗ ಹಿಟ್ಲರ್ ಕಾಲದ ಬೆಳವಣಿಗೆಗಳುಇವರ ಗಮನಕ್ಕೇ ಬಂದಿರಲೇ ಇಲ್ಲ. ನಿನ್ನೆ ಮೊನ್ನೆವರೆಗೂ ಆರ್‌ಎಸ್‌ಎಸ್ ಹಿನ್ನೆಲೆಯವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದ ಕುಮಾರ ಸ್ವಾಮಿಯವರು ಇದ್ದಕ್ಕಿದ್ದಂತೆ ಆರ್‌ಎಸ್‌ಎಸ್ ಮೇಲೆ ಮುಗಿ ಬೀಳಲು ಕಾರಣವಾದರೂ ಏನು? ಆರ್‌ಎಸ್‌ಎಸ್ ಅನ್ನುನಾಜಿಗಳಿಗೆ ಹೋಲಿಸಿ ಹೇಳಿಕೆ ನೀಡುವ ಜರೂರತ್ತುಏನಿತ್ತು? ವಿಧಾನ ಪರಿಷತ್ ಸಭಾಪತಿ ಸ್ಥಾನದಲ್ಲಿ ಜೆಡಿಎಸ್ನ ಬಸವರಾಜ ಹೊರಟ್ಟಿಯವರನ್ನು ಕೂರಿಸಲು ಬಿಜೆಪಿ ಸಹಕಾರ ಕೋರಿ ಮೈತ್ರಿ ಮಾಡಿಕೊಂಡಿರುವುದನ್ನು ಸದನದಲ್ಲಿ ದಾಖಲಿಸಿ ಜೆಡಿಎಸ್ ಜಾತ್ಯತೀತ ಮುಖವಾಡ ವನ್ನು ಕಳಚುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತ್ತು.
ಜೆಡಿಎಸ್ ಪಕ್ಷವು ವಿಧಾನ ಪರಿಷತ್‌ನಲ್ಲಿ ಬಿಜೆಪಿ ನಾಯಕರ ಸಹಕಾರ ಪಡೆದ ಕಾರಣದಿಂದಾಗಿ ರಾಜಕೀಯ ಲಾಭದ ಜತೆಗೆ ತನ್ನ ಜಾತ್ಯತೀತ ಬ್ರಾಂಡ್‌ಗೆ ಧಕ್ಕೆಯಾಗುತ್ತದೆ ಎಂಬುದನ್ನು ಅರಿತು ತಳಮಳಗೊಂಡ ಕುಮಾರಸ್ವಾಮಿಯವರು ಜಾತ್ಯತೀತ’ ಸಿದ್ಧಾಂತವನ್ನು ನಿರೂಪಿಸಲು ಮಾಧ್ಯಮದ ಮುಂದೆ ಬಂದು ಹೇಳಿಕೆ ಕೊಟ್ಟಿದ್ದು ಮಾತ್ರ ಆರ್‌ಎಸ್‌ಎಸ್ ವಿರುದ್ಧ. ಸಾರ್ವಜನಿಕ ಹಿತದೃಷ್ಟಿಯಿಂದ ಇಂತಹ ಹೇಳಿಕೆ ಕೊಟ್ಟರು ಎಂದಾದರೆ ಅಧಿಕಾರ ಅನುಭವಿಸುವಾಗ ಮಾತ್ರ ಯಾಕೆ ಇವರಿಗೆ ಆರ್‌ಎಸ್‌ಎಸ್ಸಿದ್ಧಾಂತ ಸ್ವೀಕೃತವಾಗುತ್ತದೆ.
ಇವರಿಗೆ ಬೆದರಿಕೆ ಕರೆಗಳು ಬಂದಿವೆ ಎಂದಾದರೆ ಇಲ್ಲವೇ ದೇಣಿಗೆ ಕೊಡದ ಮನೆಗಳಿಗೆ ಗುರುತು ಹಾಕಿರುವ ವಿಚಾರ ಗಮನಕ್ಕೆ ಬಂದಿದ್ದೇ ಆಗಿದ್ದಲ್ಲಿ ಕಾನೂನು ಕ್ರಮಕ್ಕೆ ಯಾಕೆ ಮುಂದಾಗಲಿಲ್ಲ? ಬಲಾತ್ಕಾರದಿಂದ ದೇಣಿಗೆ ವಸೂಲಿ ಮಾಡುತ್ತಿರುವವಿಷಯ ಗಮನಕ್ಕೆ ಬಂದಿದ್ದರೂ ಆ ಬಗ್ಗೆ ಸಂಬಂಧ ಪಟ್ಟವರಿಗೆ ದೂರು ಕೊಡದಿರುವುದು ಸಾಮಾಜಿಕ ಜವಾಬ್ದಾರಿಯಿಂದ ನುಣುಚಿಕೊಂಡಂತೆ ಅಲ್ಲವೇ? ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಅನುಸಾರವಾಗಿ ರಚಿತವಾದ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹಣದ ದುರುಪಯೋಗ ಮಾಡುತ್ತಿದೆ ಎಂದು ಆಧಾರ ರಹಿತ ಹೇಳಿಕೆ ಕೊಟ್ಟರೆ ಅದು ಪಲಾಯನವಾದ ಮತ್ತು ಕುಮಾರಸ್ವಾಮಿಯವರ ಅವಕಾಶವಾದಿ ರಾಜಕಾರಣ ಎನಿಸಿಕೊಳ್ಳುತ್ತದೆ.
ಇನ್ನು ಮತ್ತೊಬ್ಬ ರಾಜಕಾರಣಿ ಸಿದ್ದರಾಮಯ್ಯನವರ ಹೇಳಿಕೆ ಹೀಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಗೊಳ್ಳುತ್ತಿರುವುದು ವಿವಾದಿತ ಜಮೀನಿನಲ್ಲಿ. ಹೀಗಾಗಿ, ದೇಣಿಗೆ ನೀಡದಿರಲು ತೀರ್ಮಾನಿಸಿದ್ದೇನೆ. ದೇಣಿಗೆ ಕೇಳಿಕೊಂಡು ನನ್ನ ಮನೆಗೂ ಕೆಲ ಮಂದಿ ಬಂದಿದ್ದರು. ಆದರೆ, ವಿವಾದಿತ ಜಮೀನಿನಲ್ಲಿ ನಿರ್ಮಾಣ ಆಗುತ್ತಿರುವ ಮಂದಿರಕ್ಕೆ ದುಡ್ಡು ಕೊಡಲ್ಲ. ಬೇರೆ ಎಲ್ಲಿಯಾದರೂ ನಿರ್ಮಾಣ ಮಾಡುವುದಿದ್ದರೆ ಕೊಡುತ್ತೇನೆ. ದೇಶಪ್ರೇಮದ ಪಾಠ ಮಾಡುವ ನಾಯಕರು ತಮ್ಮ ಇತಿಹಾಸವನ್ನೊಮ್ಮೆ ನೆನಪು ಮಾಡಿಕೊಳ್ಳಲಿ.
ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಕಾಂಗ್ರೆಸ್ ನಾಯಕರು ಬಲಿದಾನಗೈದಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣಾರ್ಪಣೆ ಮಾಡಿದ ಒಬ್ಬನೇ ಒಬ್ಬ ಆರ್‌ಎಸ್‌ಎಸ್ ನಾಯಕನ ಹೆಸರನ್ನು ಬಿಜೆಪಿಯವರು ಹೇಳಲಿ ನೋಡೋಣ. ಆರ್‌ಎಸ್‌ಎಸ್ ದೇಶಪ್ರೇಮಿ ಸಂಘಟನೆಯಲ್ಲ, ಅದೊಂದು ಕೋಮು ಸಂಘಟನೆ. ತನ್ನನ್ನು ತಾನು ದೇಶಪ್ರೇಮಿ ಸಂಘಟನೆ ಎಂದು ಜನರಿಗೆಸುಳ್ಳು ಹೇಳುತ್ತಿದೆ. ಅದು ದೇಶಪ್ರೇಮಿ ಸಂಘಟನೆ ಎಂಬುದು ನಿಜವೇ ಆಗಿದ್ದರೆ ಸ್ವಾತಂತ್ರ್ಯ ಚಳವಳಿಗೆ ತನ್ನ ಕೊಡುಗೆ ಏನು ಎಂದು ಹೇಳಲಿ’. ಈ ರಾಜ್ಯದ ಮುಖ್ಯಮಂತ್ರಿಯಾಗಿ, ಈಗ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿರುವ ವ್ಯಕ್ತಿ ಇಂತಹ ಕೀಳು ಮಟ್ಟದ ಹೇಳಿಕೆ ಯನ್ನು ನೀಡುವಾಗ ತುಸು ಯೋಚಿಸಬೇಕಾಗಿತ್ತು.
ಇಂತಹ ಸಣ್ಣತನದ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನೂ ಒಪ್ಪಲು ಸಾಧ್ಯವಿಲ್ಲ. ಒಬ್ಬ ಕಾನೂನು ಪದವಿಯ ಹಿನ್ನೆಲೆಯುಳ್ಳ ವರು ಸರ್ವೋಚ್ಛ ನ್ಯಾಯಾಲಯದ ತೀರ್ಪಿಗೆ ಗೌರವ ಕೊಡದೇ ಇರುವುದು ವಿಪರ್ಯಾಸ. ರಾಮ ಜನ್ಮಭೂಮಿ ವಿವಾದಿತ ಸ್ಥಳವಾಗಿದ್ದರೂ ನ್ಯಾಯಾಲಯ ಆ ವಿವಾದವನ್ನು ಬಗೆಹರಿಸಿದ ಮೇಲೆ ಅದು ವಿವಾದಿತ ಸ್ಥಳವಾಗಿರಲು ಹೇಗೆ ಸಾಧ್ಯ? ಇದು ನ್ಯಾಯಾಂಗದ ಮೇಲೆ ನಂಬಿಕೆಯಿಲ್ಲದೇ ಇರುವ ಮನಸ್ಥಿತಿಯನ್ನು ಸೂಚಿಸುತ್ತದೆ.ಮಾತು ಮಾತಿಗೂ ಸಂವಿಧಾನದ ಬಗ್ಗೆ ಉಲ್ಲೇಖಿಸುವವರಿಗೆ ರಾಮ ಜನ್ಮಭೂಮಿ ವಿವಾದದ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಸಂವಿಧಾನ ಪೀಠದ ತೀರ್ಪು ಯಾಕೆ ಸಂವಿಧಾನಬದ್ಧ ಎನಿಸುವುದಿಲ್ಲ.
ರಾಮ ಜನ್ಮಭೂಮಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸುತ್ತಿದೆ ಎಂದು ಈಗ ಪಶ್ಚಾತ್ತಾಪ ಪಡುವು ದಕ್ಕಿಂತ ದೀರ್ಘಾವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವೇ ರಾಮ ಜನ್ಮಭೂಮಿ ವಿವಾದವನ್ನು ಇತ್ಯರ್ಥಪಡಿಸಿ ರಾಜಕೀಯ ಲಾಭ ಪಡೆದುಕೊಳ್ಳ ಬಹುದಿತ್ತು. ಮುಸ್ಲಿಂ ಸಮುದಾಯದವರು ಎಲ್ಲಿ ತಮ್ಮ ಮತ ಬುಟ್ಟಿಯಿಂದ ಜಾರಿ ಹೋಗುತ್ತಾರೋ ಎಂಬ ಭಯದಿಂದ ಆ ಸಮುದಾಯದ ಮತ ಕ್ರೋಡೀಕರಣ ಕ್ಕಾಗಿ ಈ ರೀತಿಯ ಹೇಳಿಕೆಗಳು ಪುನರಾವರ್ತನೆ ಆಗುತ್ತಿದೆಯಷ್ಟೇ.
ನವೆಂಬರ್ 9, 2019ರ ಸರ್ವೋಚ್ಛ ನ್ಯಾಯಾಲಯದ ಪಂಚ ಸದಸ್ಯರ ಸಂವಿಧಾನ ಪೀಠದ ಸರ್ವಾನುಮತದ ತೀರ್ಪು ರಾಮ ಮತ್ತು ರಹೀಮನಿಗೆ ಸಂಬಂಧಪಟ್ಟಂತೆ ಸಮತೋಲಿತ ತೀರ್ಪು ಎಂದೇ ವಿಶ್ಲೇಷಿಸಲಾಗಿತ್ತು. ದೇಗುಲದ ಜತೆ ಮಸೀದಿ ನಿರ್ಮಾಣಕ್ಕೂ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮುಸ್ಲಿಮರ ಭಾವನೆಗಳನ್ನು ಗೌರವಿಸಿ ಶತಮಾನದ ರಾಮ ಜನ್ಮಭೂಮಿ – ಬಾಬ್ರಿ ಮಸೀದಿ’ ವಿವಾದಕ್ಕೆ ಅಂತಿಮ ತೆರೆ ಎಳೆದ ತೀರ್ಪಾಗಿದೆ. ಈ ತೀರ್ಪನ್ನು ದೇಶದ ಜನತೆ ಧರ್ಮ ಬೇಧವಿಲ್ಲದೇ ಸ್ವಾಗತಿಸಿದ ರೀತಿ ಐತಿಹಾಸಿಕ. ಅಯೋಧ್ಯೆ ವಿವಾದದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಲ್ಲಿ ದೇಶದ ಜನತೆ ತೋರಿದ ಪ್ರಬುದ್ಧತೆ ಪ್ರಶಂಸನೀಯ.
ಈ ವಿವಾದದಲ್ಲಿ ಪ್ರಮುಖ ಪ್ರತಿವಾದಿಯಾದ ಸುನ್ನಿ ವಕ್ಫ್ ಬೋರ್ಡ್ ಈ ತೀರ್ಪನ್ನು ಒಪ್ಪಿಕೊಂಡು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ ಮೇಲ್ಮನವಿ ಸಲ್ಲಿಸದೇ ಇರಲು ತೀರ್ಮಾನಿಸಿ ವಿವಾದಕ್ಕೆ ತೆರೆ ಎಳೆಯಲು ಮುಂದಾ ಗಿದ್ದು ಶ್ಲಾಘನೀಯ. ದೇವಾಲಯ ನಿರ್ಮಾಣದ ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ ಟ್ರಸ್ಟ್ ಸ್ಥಾಪಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ಅನ್ವಯ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ರಚನೆಯಾಗಿದ್ದು, ಫೆಬ್ರವರಿ5, 2020ರಂದು ಟ್ರಸ್ಟ್ ರಚನೆ ಬಗ್ಗೆ ಲೋಕಸಭೆಯಲ್ಲಿ ಘೋಷಣೆಯಾಗಿರುತ್ತದೆ.
ಅಲ್ಲದೇ ಸಾಂಕೇತಿಕ ದೇಣಿಗೆಯಾಗಿ 1ರು. ಅನ್ನು ಕೇಂದ್ರ ಸರಕಾರ ಟ್ರಸ್ಟ್ ಖಾತೆಗೆ ಜಮೆ ಮಾಡಿರುತ್ತದೆ. ಹಾಗೆಯೇ ಆಗಸ್ಟ್5, 2020ರಂದು ಭೂಮಿ ಪೂಜನ್ ಕಾರ್ಯಕ್ರಮವೂ ನಡೆಯಿತು. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲೇ ಬೇಕೆಂಬ ಅವಶ್ಯಕತೆಯೇನೂ ಇಲ್ಲ. ಉಳ್ಳವರಿಂದ ದೇಣಿಗೆ ಪಡೆದು ಮಂದಿರ ನಿರ್ಮಾಣ ಮಾಡುವುದು ಕಷ್ಟದ ಕೆಲಸ ವೇನಲ್ಲ. ಆದರೆ ಈ ಪವಿತ್ರ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಗಳಾಗಬೇಕು ಎಂಬ ಆಶಯ ದಿಂದ ದೇಶಾದ್ಯಂತ ಬಡವ ಬಲ್ಲಿದ ಎನ್ನದೇ ಸ್ವ ಇಚ್ಛೆಯಿಂದ ಸಾತ್ವಿಕ ದೇಣಿಗೆ ನೀಡುವವರಿಂದ ದೇಣಿಗೆ ಸ್ವೀಕರಿಸ ಲಾಗುತ್ತಿದೆಯಷ್ಟೇ.
ಈ ಟ್ರಸ್ಟ್‌ಗೆ ಹಿಂದೂಗಳ ಹೊರತಾಗಿ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮದ ಹಲವರು ಹಾಗೆಯೇ ಬಿಜೆಪಿಯೇತರರಾಜಕೀಯ ಪಕ್ಷಗಳ ನಾಯಕರೂ, ಅನಿವಾಸಿ ಭಾರತೀಯರು ದೇಣಿಗೆ ನೀಡಿರುವಾಗ ಈ ಗೊಂದಲ ಸೃಷ್ಟಿಯ ಹೇಳಿಕೆಗಳ ಮರ್ಮವೇನು? ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ನೋಂದಾಯಿತ ಮತ್ತು ಅದರದ್ದೇ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವಂತಾ ಗಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ಕಂಡು ಬಂದಲ್ಲಿ ಅದರ ವಿರುದ್ಧ ನ್ಯಾಯಾಲಯದ ಪ್ರಶ್ನಿಸಲುಪ್ರತಿಯೊಬ್ಬ ನಾಗರಿಕನಿಗೂ ಅಧಿಕಾರವಿದೆ.
ಅಂತಹ ಒಂದು ಸಾಮಾನ್ಯ ತಿಳಿವಳಿಕೆಯೂ ಇಲ್ಲದಂತೆ ರಾಜಕಾರಣಿಗಳು ವರ್ತಿಸುವುದು ನಾಚಿಕೆಗೇಡು. ಒಂದು ಸಮುದಾ ಯದ ಮತವನ್ನು ಹಿಡಿದಿಟ್ಟುಕೊಳ್ಳು ವುದಕ್ಕಾಗಿ ಇಂತಹ ಓಲೈಕೆ ರಾಜಕಾರಣ ಹೊಸತೇನಲ್ಲ. ದೇಶಾದ್ಯಂತದ ಅಯೋಧ್ಯೆ ಶ್ರೀರಾಮ ಮಂದಿರನಿಽಸಮರ್ಪಣಾ ಅಭಿಯಾನ ಮತ್ತು ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಚಾರದಲ್ಲಿ ಕಾಳಜಿ ವಹಿಸಿದಂತೆ ಮುಸ್ಲಿಂ ಧರ್ಮದ ಮಸೀದಿಗಳಿಗೆ ಸಂಬಂಧಪಟ್ಟ ವಕ್ಫ್ ಬೋರ್ಡ್‌ ನ ಹಣ ದುರುಪಯೋಗದ ವಿಚಾರದಲ್ಲೂ ಇದೇ ರೀತಿಯ ಕಾಳಜಿ ವಹಿಸಿದರೆ ಆ ಸಮುದಾಯದ ನಾಗರಿಕರಿಗೂ ನ್ಯಾಯ ಒದಗಿಸಿದಂತಾಗುತ್ತದೆ.
ದೇವಾಲಯ ನಿರ್ಮಾಣದ ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ ಟ್ರಸ್ಟ್ ಸ್ಥಾಪಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಈ ಅನ್ವಯ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್’ ರಚನೆ ಯಾಗಿದ್ದು, ಫೆಬ್ರವರಿ  ೫, ೨೦೨೦ರಂದು ಟ್ರಸ್ಟ್ ರಚನೆ ಬಗ್ಗೆ  ಲೋಕಸಭೆಯಲ್ಲಿ ಘೋಷಣೆಯಾಗಿರುತ್ತದೆ. ಅಲ್ಲದೇ ಸಾಂಕೇತಿಕ ದೇಣಿಗೆಯಾಗಿ ೧ರು. ಅನ್ನು ಕೇಂದ್ರ ಸರಕಾರ ಟ್ರಸ್ಟ್ ಖಾತೆಗೆ ಜಮೆ ಮಾಡಿರುತ್ತದೆ. ಹಾಗೆಯೇ ಆಗಸ್ಟ್ ೫, ೨೦೨೦ರಂದು ಭೂಮಿ ಪೂಜನ್ ಕಾರ್ಯಕ್ರಮವೂನಡೆಯಿತು. ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲೇಬೇಕೆಂಬ ಅವಶ್ಯಕತೆ ಯೇನೂ ಇಲ್ಲ.