ಹೊಸ ಜಿಲ್ಲೆಗಳ ರಚನೆ: ಶಿರಸಿ ಜಿಲ್ಲೆಗೆ ಆದ್ಯತೆ ದೊರೆಯಲಿ
ಅಭಿಮತ
ರಮಾನಂದ ಶರ್ಮಾ
ಬಹುದಿನಗಳ ಬೇಡಿಕೆಯಾದ ವಿಜಯನಗರ ಜಿಲ್ಲೆ ಫೆಬ್ರವರಿ 5ರಂದು ಉದ್ಘಾಟನೆಯಾಗಿದ್ದು, ಇದರೊಂದಿಗೆ ಅಡಳಿತದ ಅನು ಕೂಲಕ್ಕಾಗಿ ಮತ್ತು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಹೊಸಪೇಟೆ ಕೇಂದ್ರ ಸ್ಥಾನದ ಜಿಲ್ಲೆಯನ್ನು ರಚಿಸಬೇಕೆನ್ನುವ ದಶಕಗಳ ಹೋರಾಟ ತಾರ್ಕಿಕ ಅಂತ್ಯ ಕಂಡಿದೆ.
ಇದು ರಾಜ್ಯದ 31ನೇ ಜಿಯಾಗಿದ್ದು, ಈ ಜಿಲ್ಲೆಯ ರಚನೆಯಿಂದಾಗಿ   ನಲ್ಲಿ ಇದ್ದ ಹೊಸ ಜಿಲ್ಲೆಗಳ ರಚನೆಯ ಬೇಡಿಕೆ ಪ್ರವಾಹ ರೂಪದಲ್ಲಿ ಮುನ್ನೆಲೆಗೆ ಬಂದಿದೆ. ಮಾಧ್ಯಮಗಳ ವರದಿ ಪ್ರಕಾರ ಶಿರಸಿ, ಕುಂದಾಪುರ, ಪುತ್ತೂರು, ಶಿಕಾರಿಪುರ, ಹುಣಸೂರು, ಗೋಕಾಕ, ಚಿಕ್ಕೋಡಿ, ಜಮಖಂಡಿ, ತಿಪಟೂರು, ಮಧುಗಿರಿ ಮತ್ತು ಇಂಡಿಗಳು ಪ್ರತ್ಯೇಕ ಜಿಯನ್ನು ಕೇಳುತ್ತಿವೆ.ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಬೇಡಿಕೆಗಳು ಈ ಪಟ್ಟಿಗೆ ಸೇರಿದರೆ ಆಶ್ಚರ್ಯವಿಲ್ಲ. ಈ ಪ್ರಸ್ತಾವಿತ ಜಿಲ್ಲೆಗಳವರು ಈಗಾಗಲೇ ಹಲವು ಸುತ್ತಿನ ಹೋರಾಟ ನಡೆಸಿದ್ದು, ಹೊಸ ಜಿಗಳ ರಚನೆಯನ್ನು ಸಾಮಾನ್ಯವಾಗಿ ರಾಜ್ಯ ಬಜೆಟ್ ಸಮಯದಲ್ಲಿಪ್ರಕಟಿಸುತ್ತಿದ್ದು, ಹೊಸ ಜಿಲ್ಲೆಗಾಗಿನ ಹೋರಾಟ ಗಂಭೀರ ರೂಪ ತಳೆಯುವುದನ್ನು ಅಲ್ಲಗೆಳೆಯಲಾಗದು.
ಮೀಸಲಾತಿಯಷ್ಟೇ ಈ ಸಮಸ್ಯೆಯೂ ಮುಖ್ಯಮಂತ್ರಿಗಳ ತಲೆ ನೋವನ್ನು ಹೆಚ್ಚಿಸಬಹುದು. ಆ ಮಾತು ಬೇರೆ. ಕರ್ನಾಟಕದಲ್ಲಿ ಕೆಲವು ಜಿಗಳು ಬೌಗೋಳಿಕ ವಾಗಿ ತುಂಬಾ ವಿಸ್ತಾರವಾಗಿದ್ದು, ಸಾಮಾನ್ಯವಾಗಿ ಒಂದು ಮೂಲೆಯಲ್ಲಿರುವ ಜಿಲ್ಲೆ ಕೇಂದ್ರದಿಂದಆಡಳಿತ ನಡೆಸುವುದು ಮತ್ತು ನಿಯಂತ್ರಿಸುವುದು ಕಷ್ಟಸಾಧ್ಯ. ಅಂತೆಯೇ 1987ರಲ್ಲಿ ಬಾಗಲಕೋಟ, ದಾವಣಗೆರೆ, ಕೊಪ್ಪಳ, ಉಡುಪಿ, ಹಾವೇರಿ, ಚಾಮರಾಜನಗರ ಮತ್ತು ಗದಗ ಜಿಲ್ಲೆಗಳನ್ನು ಮತ್ತು1989ರಲ್ಲಿ ಬೆಂಗಳೂರು ಜಿಯನ್ನು ವಿಭಜಿಸಿಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಗಳನ್ನು ರಚಿಸಲಾಯಿತು.
ಹಲವು ಜಿಲ್ಲೆಗಳನ್ನು ವಿಭಜಿಸುವ ಬೇಡಿಕೆಗಳು ಇದ್ದರೂ ಉತ್ತರಕನ್ನಡ ಜಿಲ್ಲೆಯನ್ನು ವಿಭಜಿಸಿ ಶಿರಸಿ ಜಿಲ್ಲೆ ಮಾಡುವ ಹೋರಾಟಉತ್ತುಂಗದಲ್ಲಿದ್ದರೆ, ಮೈಸೂರು ಜಿಲ್ಲೆಯನ್ನು ಒಡೆದು ಹುಣಸೂರು ಜಿಲ್ಲೆ ಮಾಡಲು ಅಲ್ಲಿಯ ಪ್ರಭಾವಿ ನಾಯಕ ಎ. ವಿಶ್ವನಾಥ್ ಕಾರ್ಯತಂತ್ರ ಹೆಣೆಯುತ್ತಿದ್ದಾರೆ ಮತ್ತು ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಜಿಗೆ ದೇವರಾಜ್ ಅರಸು ಹೆಸರು ಇಡಬೇಕೆಂದು ಬೇಡಿಕೆ ಕೂಡಾ ಇಟ್ಟಿದ್ದಾರೆ. ಆದರೆ, ಪ್ರಸ್ತಾವಿತ ಶಿರಸಿ ಜಿಗೆ ರಾಮಕೃಷ್ಣ ಹೆಗಡೆ ಹೆಸರನ್ನು ಶಿರಸಿ ಜಿಲ್ಲೆ ಹೋರಾಟಗಾರರು ಸೂಚಿಸಿಲ್ಲ.
ಸುಮಾರು 10291 ಚದರ ಕಿ.ಮೀ ವಿಸ್ತೀರ್ಣ ಇರುವ ಉತ್ತರಕನ್ನಡ (ಕಾರವಾರ) ಬೌಗೋಳಿಕವಾಗಿ ರಾಜ್ಯದಲ್ಲಿ ಐದನೇ ಅತಿ ದೊಡ್ಡ ಜಿಲ್ಲೆ. ಜಿಲ್ಲೆಯ ಒಂದು ತುದಿಯಿಂದ ಇನ್ನೊಂದು ತುದಿಯ ಉದ್ದ 353 ಕಿ.ಮೀ ಆಗಿದ್ದು, ಜಿಲ್ಲೆಯ ಕೇಂದ್ರ ಸ್ಥಳವಾದಕರಾವಳಿಯ ಕಾರವಾರದಿಂದ ಜಿಲ್ಲೆಯ ಆಡಳಿತ ನಿರ್ವಹಣೆ ಮತ್ತು ನಿಯಂತ್ರಣ ಕಷ್ಟ ಸಾಧ್ಯ ಎನ್ನುವುದು ಎಲ್ಲರೂ ಒಪ್ಪುವ ಮಾತು. ಈವರೆಗೆ ಈ ಜಿಲ್ಲೆಗೆ ಬಂದ ಯಾವ ಉನ್ನತ ಅಧಿಕಾರಿಯೂ ತಮ್ಮ ಅಧಿಕಾರದ ಅವಧಿಯಲ್ಲಿ ಒಂದು ಬಾರಿಯೂ ಈಜಿಯನ್ನು ಪೂರ್ಣವಾಗಿ ಸುತ್ತಲಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಜಿಲ್ಲೆಯಲ್ಲಿ ಉತ್ತರದಿಂದ ದಕ್ಷಿಣದ ತುದಿಯವರೆಗೆ ನಡುವೆ ಹಬ್ಬಿರುವ ಮುಗಿಲೆತ್ತರದ ಸಹ್ಯಾದ್ರಿ ಘಟ್ಟ ಜಿಲ್ಲೆಯನ್ನು ಬೌಗೋಳಿಕವಾಗಿ ವಿಭಜಿಸಿದೆ.
ಲೋಕಸಭಾ ಚುನಾವಣೆ ಸಮಯದಲ್ಲಿ ಗುಡ್ಡ, ಬೆಟ್ಟ, ಹಳ್ಳ, ಹೊಳೆ, ಕಂದಕ, ದಟ್ಟಾರಣ್ಯ, ಗಿರಿ ಶಿಖರಗಳಿಂದ ತುಂಬಿರುವ ಈ ಜಿಲ್ಲೆಯನ್ನು ಪೂರ್ಣವಾಗಿ ಸುತ್ತಲು ಬೇಕಾಗುವ ಸಮಯ ಮತ್ತು ವೆಚ್ಚವನ್ನು ಗಮನಿಸಿ, ಈ ನಿಟ್ಟಿನಲ್ಲಿ ಈ ಜಿಲ್ಲೆಗೆ ಚುನಾವಣಾ ಪ್ರಚಾರಕ್ಕಾಗಿ ಸ್ವಲ್ಪ ಹೆಚ್ಚು ಸಮಯವನ್ನು ನಿಗದಿಪಡಿಸಬೇಕು ಮತ್ತು ಚುನಾವಣಾ ಖರ್ಚು ಮಿತಿಯನ್ನು ಹೆಚ್ಚಿಸಬೇಕು ಎಂದು ಕೆಲವು ಅಭ್ಯರ್ಥಿಗಳು ಮತ್ತು ಪಕ್ಷದ ಕಾರ್ಯಕರ್ತರು ಒತ್ತಾಯಿಸಿಸುತ್ತಾರೆ.
ಘಟ್ಟದ ಮೇಲಿನ ಸಿದ್ದಾಪುರ, ಶಿರಸಿ ಯಲ್ಲಾಪುರ, ಮುಂಟಗೋಡ, ದಾಂಡೇಲಿ, ಹಳಿಯಾಳ ಮತ್ತು ಜೋಯಿಡಾ (ಮೊದಲಿನ ಸುಪಾ) ತಾಲೂಕಿನ ಜನರು ತಮ್ಮ ಜಿಲ್ಲೆ ಕೇಂದ್ರದ ಕೆಲಸ ಕಾರ್ಯ ಗಳಿಗಾಗಿ ಕಾರವಾರಕ್ಕೆ ಹೋಗಿಬರಲು ದಿನಗಳನ್ನೇ ವ್ಯಯಿಸ ವೇಕಾಗುತ್ತದೆ. ರೈಲು ಸಂಪರ್ಕ ಇಲ್ಲದಿರುವುದು, ರಸ್ತೆ ಸಂಪರ್ಕ ಸರಿಯಾಗಿ ಇರದಿರುವುದು ಮತ್ತು ಕಾರವಾರ ತಲುಪಲು ಪಶ್ಚಿಮ ಘಟ್ಟ ಇಳಿದು ಹತ್ತುವುದು ಇನ್ನೊಂದು ಅಡೆತಡೆ.
ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ವ್ಯವಹಾರಿಕವಾಗಿ ವ್ಯವಸಾಯವಾಗಿ, ಶೈಕ್ಷಣಿಕವಾಗಿ ಮತ್ತು ಭಾಷೆ ನಿಟ್ಟಿನಲ್ಲಿ ಉತ್ತರ ಕನ್ನಡದಲ್ಲಿರುವ ಮಲೆನಾಡು, ಕರಾವಳಿ ಮತ್ತು ಬಯಲುಸೀಮೆಯ ಈ ಏಳು ತಾಲೂಕುಗಳು ಕರಾವಳಿ ಪ್ರದೇಶದಲ್ಲಿರುವ ಉತ್ತರಕನ್ನಡದ ಐದು ತಾಲೂಕುಗಳಿಂದ ಭಿನ್ನವಾಗಿವೆ. ಘಟ್ಟದ ಮೇಲಿನ ತಾಲೂಕಿನವರು ತಮ್ಮ ವೈದ್ಯಕೀಯ ಶಿಕ್ಷಣ ಮತ್ತು ವ್ಯವಹಾರದ ಅಗತ್ಯಗಳಿಗಾಗಿ ಹುಬ್ಬಳ್ಳಿ ಮತ್ತು ಶಿವಮೊಗ್ಗ ಕಡೆಗೆ ನೋಡಿದರೆ, ಘಟ್ಟದ ಕೆಳಗಿನ ಐದು ತಾಲೂಕಿನವರು ಗೋವಾ, ಮಣಿಪಾಲ ಮತ್ತು ಮಂಗಳೂರು ಕಡೆಗೆ ಹೋಗುತ್ತಾರೆ.
ಜಿಲ್ಲಾಡಳಿತ ಘಟ್ಟದ ಮೇಲಿನ ತಾಲೂಕುಗಳಿಗೆ ತಲುಪುವುದಿಲ್ಲ ಮತ್ತು ಆವರ ಆಸೆ, ಆಕಾಂಕ್ಷೆಗಳಿಗೆ ಸರಿಯಾಗಿ ಸ್ಪಂದನೆ ದೊರಕುವುದಿಲ್ಲ ಎನ್ನುವ ದೂರು ಲಾಗಾಯ್ತಿನಿಂದ ಕೇಳುತ್ತಿದೆ. ಇದರಲ್ಲಿ ಅರ್ಥವೂ ಇದೆ. ಅಭಿವೃದ್ಧಿ ಯಾವಾಗಲೂ ಕೇಂದ್ರ ಸ್ಥಳದ ಸುತ್ತ ಗಿರಕಿಹೊಡೆಯುವುದು ತೀರಾ ಸಾಮಾನ್ಯ ಎನ್ನುವಂತೆ, ಮೆಡಿಕಲ್ ಕಾಲೇಜ್, ಎಂಜಿನಿಯರಿಂಗ್ ಕಾಲೇಜು, ಕೇಂದ್ರೀಯ ವಿಶ್ವವಿದ್ಯಾಲಯಗಳು ಕಾರವಾರದಲ್ಲಿ ಸ್ಥಾಪಿಸಲ್ಪಟ್ಟಿವೆ. ಕೇಂದ್ರ ಮಂತ್ರಿಗಳು ಯಾರೇ ಬಂದರೂ ಜಿಲ್ಲೆ ಕೇಂದ್ರ ಕಾರವಾರಕ್ಕೆ ಭೇಟಿ ನೀಡಿ ಹೋಗುತ್ತಾರೆ. ಜಿಯ ಬಹುದಿನಗಳ ಬೇಡಿಕೆಯಾದ ಮಲ್ಟಿಸ್ಪೇಷಲಿಟಿ ಆಸ್ಪತ್ರೆ ಕಾರವಾರದಲ್ಲಿ ಆಗಲಿದೆ. ಮುಂದಿನ ದಿನಗಳಲ್ಲಿ ವಿಮಾನಗಳು ಅಂಕೋಲಾ – ಕಾರವಾರದಿಂದಲೇ ಹಾರಲಿವೆ.
ಘಟ್ಟದ ಮೇಲಿನ ಪ್ರದೇಶಗಳಿಗೆ (ಯಲ್ಲಾಪುರ) ಅನುಕೂಲವಾಗುವ ಏಳು ದಶಕಗಳ ಬೇಡಿಕೆಯಾದ ಹುಬ್ಬಳ್ಳಿ – ಅಂಕೋಲ ರೈಲು ಹಳಿ ಏರಲೇ ಇಲ್ಲ. ತಾಳಗುಪ್ಪಾ – ಸಿದ್ದಾಪುರ – ಸಿರಸಿ – ಹುಬ್ಬಳ್ಳಿ ರೈಲು ಮಾರ್ಗಕ್ಕೆ ಸರ್ವೆಗೆ ಈಗಷ್ಟೇ ಅನುಮತಿ ದೊರಕಿದೆ.ಘಟ್ಟದ ಮೇಲಿನ 3 ತಾಲೂಕುಗಳಲ್ಲಿ ಮಲ್ಟಿ ಸ್ಪೇಷಲಿಟಿ ಆಸ್ಪತ್ರೆ ಇಲ್ಲ, ವೈದ್ಯಕೀಯ – ಎಂಜಿನಿಯರಿಂಗ್ ಕಾಲೇಜುಗಳೂ ಇಲ್ಲ, ಇಲ್ಲಿಯ ಮುಖ್ಯ ಬೆಳೆಯಾದ ಅಡಿಕೆಗೆಗೆ ಮಾನ ಹೋಗಿ ದಶಕಗಳೇ ಆಗಿವೆ. ಈಗ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ.
ಆದರೆ, ನೈಸರ್ಗಿಕ ವಿಪತ್ತಿನಿಂದ ಸಾಕಷ್ಟು ಬೆಳೆ ಇಲ್ಲ. ಅಂತೆಯೇ, ಕಳೆದ ಕೆಲವು ವರ್ಷಗಳಿಂದ ಆಡಳಿತಾತ್ಮಕ ಅನುಕೂಲಕ್ಕಾಗಿ. ಅಭಿವೃದ್ಧಿಗಾಗಿ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಶಿರಸಿ ಜಿಯನ್ನು ರಚಿಸಬೇಕೆನ್ನುವ ಬೇಡಿಕೆ ಕೇಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ಚಿಂತನೆ ಜೋರಾಗಿ ಕೇಳುತ್ತಿದೆ ಮತ್ತು ಜನತೆ ಪಕ್ಷೇತರರಾಗಿ ಹೆಜ್ಜೆ ಇಡುತ್ತಿದ್ದಾರೆ. ಜಿಲ್ಲೆಯ ಮೇಲಿನ ತಮ್ಮ ರಾಜಕೀಯ ಹಿಡಿತವನ್ನು ಕಳೆದುಕೊಳ್ಳುವ ಭಯವೋ ಏನೋ, ಮುಂದಿನ ಸಾಲಿನ ರಾಜಕಾರಣಿಗಳು, ಧುರೀಣರು ಮತ್ತು ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸ್ಪಷ್ಟ ನಿಲುವು ಹೊರಹಾಕುತ್ತಿಲ್ಲ.
ಕೆಲವರು ಅಡ್ಡ ಗೋಡೆಯ ಮೇಲಿನ ದೀಪದಂತೆ ವರ್ತಿಸುತ್ತಾರೆ. ಈ ಭಾಗದ ಕೆಲವು ಅಭಿವೃದ್ಧಿಯ ಹರಿಕಾರರು, ಈ ಬೇಡಿಕೆ ಗಳನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ಆರಂಭಿಸಿದ್ದಾರೆ. ಮತ್ತು ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆಯುವ ಲಕ್ಷಣ ಕೇಳಿಬರುತ್ತಿದೆ. ಈ ಜಿಲ್ಲೆಯ ಪ್ರವಾಸೋದ್ಯಮ ಮತ್ತು ವ್ಯವಸಾಯದ ಕೇಂದ್ರವಾದ ಬನವಾಸಿ ಮತ್ತು ಗೋಕರ್ಣಗಳನ್ನು ತಾಲೂಕುಗಳನ್ನಾಗಿ ಮಾಡಬೇಕು ಎನ್ನುವ ಕೂಗು ಇನ್ನೂ ಇರುವಾಗಲೇ, ಸಿದ್ದಾಪುರ ತಾಲೂಕಿನ ಕೆಲವು ಭಾಗಗಳನ್ನು ಮತ್ತು ಬನವಾಸಿಯನ್ನು ಆನವಟ್ಟಿಗೆ ಸೇರಿಸಿ ಹೊಸ ತಾಲೂಕನ್ನು ಮಾಡುವುದು ಮತ್ತು ಆ ತಾಲೂಕನ್ನು ಪ್ರಸ್ತಾವಿತ ಶಿಕಾರಿಪುರ ಜಿಗೆಸೇರಿಸುವ ವದಂತಿಗಳೂ ಕೇಳಿ ಬರುತ್ತಿದ್ದು, ಶಿರಸಿ ಜಿಲ್ಲೆಯ ಹರಿಕಾರರರು ರೊಚ್ಚಿಗೆದ್ದಿದ್ದಾರೆ.
ಶಿರಸಿ ಜಿಲ್ಲೆಗೆ ಸಿದ್ದಾಪುರ, ಶಿರಸಿ, ಯಪುರ, ಹಳಿಯಾಳ, ದಾಂಡೇಲಿ, ಮುಂಡಗೋಡ, ಮತ್ತು ಜೊಯಿಡಾ (ಮೊದಲಿನ ಸುಪಾ) ಈ ಏಳು ತಾಲೂಕುಗಳು ಒಳಪಡಲ್ಪಡುತ್ತಿದ್ದು, ನಿಗದಿತ ಜನಸಂಖ್ಯೆಯ ಮಾನದಂಡವೂ ಇದೆ. ಮೂರೇ ತಾಲೂಕುಗಳು ಇದ್ದರೂ, ಉಡುಪಿ ಜಿಲ್ಲೆಯನ್ನು ಮಾಡಿದಾಗ ಶಿರಸಿ ಜಿಗೆ ತಾಲೂಕುಗಳ ಮಾನದಂಡ ಅಡ್ಡಿ ಬಾರದು. ಉತ್ತರ ಕನ್ನಡದಲ್ಲಿ ಶಿರಸಿ ಅತಿ ದೊಡ್ಡ ನಗರವಾಗಿದ್ದು, ಜನಸಂಖ್ಯೆ ಲಕ್ಷವನ್ನು ದಾಟಿದೆ. ಜಿಲ್ಲೆ ಕೇಂದ್ರವಾಗುವ ಎಲ್ಲಾ ಅರ್ಹತೆಗಳೂ ಇವೆ.
ಮುಂದಿನ ದಿನಗಳಲ್ಲಿ ಹಾವೇರಿ -ಶಿರಸಿ ಮತ್ತು ತಾಳಗುಪ್ಪಾ – ಶಿರಸಿ – ಮುಂಡಗೋಡ್ – ಹುಬ್ಬಳ್ಳಿ ರೈಲು ಮಾರ್ಗವು ಶಿರಸಿ ಮೂಲಕ ಹಾದು ಹೋಗುತ್ತಿದ್ದು, ಶಿರಸಿ ರೈಲು ಜಂಕ್ಷನ್ ಆಗುವುದನ್ನು ತಳ್ಳಿಹಾಕುವಂತಿಲ್ಲ. ಹಾಗೆಯೇ ಕಾರಣಾಂತರಗಳಿಂದತಡೆ ಹಿಡಿಯಲ್ಪಟ್ಟ ಖಾನಾಪೂರ್ – ತಾಳಗುಪ್ಪಾ ಮತ್ತು ಕುಮಟಾ ತಡಸ್ ರಾಷ್ಟ್ರೀಯ ಹೆದ್ದಾರಿಗಳು ಮುಂದಿನ ದಿನಗಳಲ್ಲಿ ಆಗುತ್ತಿದ್ದು, ಅವು ಶಿರಸಿ ಮೂಲಕವೆ ಹಾದು ಹೋಗುತ್ತಿದೆ. ಶಿರಸಿ ನಗರದ ಬೆಳವಣಿಗೆಗೆ ಇನ್ನೂ ಹೆಚ್ಚಿನ ಇಂಬು ಸಿಗುತ್ತಿದೆ.ಒಂದು ಕಡೆ ಸಮುದ್ರ ಮತ್ತು ಇನ್ನೊಂದು ಕಡೆ ಕಡಿದಾದ ಘಟ್ಟ ಮತ್ತು ಸೀಬರ್ಡ್ ನೌಕಾನೆಲೆಯಿಂದಾಗಿ ಕಾರವಾರದಲ್ಲಿ ನಗರ ಬೆಳವಣಿಗೆಗೆ ಅಡೆತಡೆಯಾಗಿದೆ.
ಭಾರಿ ರಕ್ಷಣಾ ಸೂಕ್ಷ್ಮತೆ ಇರುವ ನೌಕಾ ನೆಲೆಯ ಅಕ್ಕಪಕ್ಕದಲ್ಲಿ ಮನಬಂದಂತೆ ನಗರ ಬೆಳವಣಿಗೆಗೆ ಆಸ್ಪದ ನೀಡಲಾಗದು ಮತ್ತು ಕಚೇರಿಗಳನ್ನು ಸ್ಥಾಪಿಸಿ ಸಮೂಹ ಕೇಂದ್ರ ಸಾಗರ ಥಿಯೇಟರ್ ಕೂಡ ಕಾರವಾರದಲ್ಲಿ ಸ್ಥಾಪನೆಯಾಗಲಿದೆ. ರಕ್ಷಣಾ ದಳಗಳ ಚಲನವಲನದಿಂದ ಜನಸಾಮಾನ್ಯರ ಜೀವನಕ್ಕೆ ಸ್ವಲ್ಪ ಅಡೆತಡೆಯಾಗುವುದನ್ನು ತಳ್ಳಿಹಾಕಲಾಗದು. ನೈಸರ್ಗಿಕವಾಗಿ ಸಹ್ಯಾದ್ರಿ ಘಟ್ಟದಿಂದಾಗಿ ಜಿಲ್ಲೆ ವಿಭಜನೆಯಾಗಿದ್ದು ಒಂದಾದರೆ, ಶೈಕ್ಷಣಿಕವಾಗಿ ಶಿರಸಿ ಜಿಲ್ಲೆ ಈಗಾಗಲೇ ರಚನೆಗೆ ಸಮರ್ಪಕ ವಾಗಿದೆ.
ರಾಜಕೀಯವಾಗಿ ರಚನೆಯಾಗುವುದೊಂದೆ ಬಾಕಿ ಇದೆ. ಎಂದೋ ಆಗಬೇಕಿದ್ದ ಕಾರ್ಯವು ರಾಜಕೀಯ ಇಚ್ಛಾಶಕ್ತಿಯಕೊರತೆಯಿಂದ ಕೈಗೂಡಲಿಲ್ಲ. ಮುಂದಿನ ರಾಜ್ಯ ಬಜೆಟ್‌ನಲ್ಲಿ ಇದು ನನಸಾಗಬಹುದು ಎನ್ನುವ ದೃಢ ನಂಬಿಕೆಯಲ್ಲಿ ಶಿರಸಿ ಜಿಲ್ಲೆಯ ಹರಿಕಾರರು ಶಬರಿಯಂತೆ ಕಾಯುತ್ತಿದ್ದಾರೆ.